Tag: vijaya mallya

  • ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ನವದೆಹಲಿ: 2015-16ರ ಅವಧಿಯಲ್ಲಿ ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್ ನಗದು ಕೊರತೆ ಎದುರಿಸುತ್ತಿದ್ದ ಸಮಯದಲ್ಲೇ ಉದ್ಯಮಿ ವಿಜಯ ಮಲ್ಯ (Vijaya Mallya) ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ 330 ಕೋಟಿ ರೂ. (ಬ್ರಿಟನ್ ನಲ್ಲಿ 80 ಕೋಟಿ ರೂ., ಫ್ರಾನ್ಸ್‌ನಲ್ಲಿ 250 ಕೋಟಿ ರೂ. ಮೌಲ್ಯದ ಆಸ್ತಿ) ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (CBI) ಮುಂಬೈ ಸಿಬಿಐ ವಿಶೇಷ ನ್ಯಾಯಾಲಯಕ್ಕೆ (CBI Speical Court) ಸಲ್ಲಿಸಿರುವ 3ನೇ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

    ಅಷ್ಟೇ ಅಲ್ಲದೇ 2017ರಲ್ಲಿ ವಿಜಯ ಮಲ್ಯ ಅವರ ಆಸ್ತಿ ಮೌಲ್ಯ 7,500 ಕೋಟಿ ರೂ. ಎಂದು ಸ್ವಿಸ್ ಬ್ಯಾಂಕ್ (Swiss Bank) ಅಂದಾಜಿಸಿದ್ದು, ಬ್ಯಾಂಕ್‌ಗಳ ಸಾಲ ತೀರಿಸಲು ಬೇಕಾದಷ್ಟು ಹಣ ಅವರ ಬಳಿ ಇದೆ. ಯುಕೆನಲ್ಲಿ ಸುಮಾರು 44 ಮದ್ಯ ಘಟಕಗಳನ್ನ ಅವರು ಸ್ಥಾಪಿಸಿದ್ದರು. ಆ ಮೂಲಕ ಅವರು ಯುರೋಪಿನಾದ್ಯಂತ ಹಲವಾರು ಕಡೆ ಹೂಡಿಕೆ ಮತ್ತು ಆಸ್ತಿ ಖರೀದಿಸಿದ್ದಾರೆ ಎಂದು ಹೇಳಿದೆ.

    900 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಐಡಿಬಿಐ ಬ್ಯಾಂಕ್ (ADBI Bank) -ಕಿಂಗ್‌ಫಿಷರ್ ಏರ್‌ಲೈನ್ಸ್ (Kingfisher Airlines) ಸಾಲ ವಂಚನೆ ಪ್ರಕರಣದಲ್ಲಿ ವಿಜಯ ಮಲ್ಯ ಆರೋಪಿಯಾಗಿದ್ದು, ಈ ಸಂಬಂಧ ಸಿಬಿಐ ಇತ್ತೀಚೆಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಸಿಬಿಐ ಹಿಂದಿನ ಚಾರ್ಜ್‌ಶೀಟ್‌ಗಳಲ್ಲಿ ಹೆಸರಿಸಲಾದ ಎಲ್ಲಾ 11 ಆರೋಪಿಗಳ ಜೊತೆಗೆ, ತನಿಖಾ ಸಂಸ್ಥೆ ತನ್ನ ಇತ್ತೀಚಿನ ಪೂರಕ ಆರೋಪ ಪಟ್ಟಿಯಲ್ಲಿ ಐಡಿಬಿಐ ಬ್ಯಾಂಕ್‌ನ ಮಾಜಿ ಜನರಲ್ ಮ್ಯಾನೇಜರ್ ಬುದ್ಧದೇವ್ ದಾಸ್‌ಗುಪ್ತಾ ಅವರ ಹೆಸರನ್ನು ಸೇರಿಸಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ

    2009ರ ಅಕ್ಟೋಬರ್‌ನಲ್ಲಿ 150 ಕೋಟಿ ರೂ. ಅಲ್ಪಾವಧಿ ಸಾಲ ಮಂಜೂರಾತಿ ಮತ್ತು ವಿತರಣೆಗಾಗಿ ದಾಸ್‌ಗುಪ್ತಾ ಅವರು ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ. ವಿಜಯ ಮಲ್ಯ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಏರ್‌ಲೈನ್ಸ್‌ಗೆ ಸಾಲ ನೀಡುವ ವಿಚಾರದಲ್ಲಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

  • ಕೋರ್ಟ್‍ಗೆ ಹಾಜರಾಗಲು ಮಲ್ಯಗೆ ಸುಪ್ರೀಂ ಕೊನೆಯ ಅವಕಾಶ

    ಕೋರ್ಟ್‍ಗೆ ಹಾಜರಾಗಲು ಮಲ್ಯಗೆ ಸುಪ್ರೀಂ ಕೊನೆಯ ಅವಕಾಶ

    ನವದೆಹಲಿ: ಉದ್ಯಮಿ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಫೆ.24ಕ್ಕೆ ಮುಂದೂಡಿದ್ದು, ಸುಪ್ರೀಂ ಕೋರ್ಟ್, ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಕೊನೆಯ ಅವಕಾಶವಾಗಿ 2 ವಾರಗಳ ಕಾಲಾವಕಾಶ ನೀಡಿದೆ.

    ಒಂದು ವೇಳೆ ವಿಜಯ್ ಮಲ್ಯ ಕೋರ್ಟ್‍ಗೆ ಹಾಜರಾಗದೆ ಇದ್ದರೆ ನ್ಯಾಯಾಲಯವು ಪ್ರಕರಣವನ್ನು ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದೆ. ಮೇ ತಿಂಗಳಲ್ಲಿ ಯುಕೆ ಕೋರ್ಟ್ ಎಸ್‍ಬಿಐ ನೇತೃತ್ವದ ಸಾಲದಾತ ಒಕ್ಕೂಟದ ದಿವಾಳಿತನದ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿತ್ತು. ಭಾರತದಲ್ಲಿ ಮಲ್ಯ ಅವರ ಆಸ್ತಿಗಳ ಮೇಲಿನ ಭದ್ರತೆಯನ್ನು ಮನ್ನಾ ಮಾಡುವ ಪರವಾಗಿ ಅರ್ಜಿಯನ್ನು ಎತ್ತಿಹಿಡಿದಿತ್ತು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬುರ್ಕಾ ಧರಿಸದೇ ಧೈರ್ಯ ಪ್ರದರ್ಶಿಸಿ: ಕಂಗನಾ ರಣಾವತ್

    ಭದ್ರತಾ ಹಕ್ಕುಗಳನ್ನು ಮನ್ನಾ ಮಾಡುವುದನ್ನು ತಡೆಯುವಂತೆ ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಈ ಮನವಿಯಲ್ಲಿ ಯಾವುದೇ ಸಾರ್ವಜನಿಕ ನೀತಿ ಇಲ್ಲ ಎಂದು ಘೋಷಿಸಿ ಬ್ಯಾಂಕುಗಳ ಪರವಾಗಿ ಚೀಫ್ ಇನ್ಸೋಲ್ವೆನ್ಸೀಸ್ ಆಂಡ್ ಕಂಪನೀಸ್ ಕೋರ್ಟ್ (ಐಸಿಸಿ) ಜಡ್ಜ್ ಮೈಕೆಲ್ ಬ್ರಿಗ್ಸ್ ಆದೇಶ ನಿಡಿದ್ದರು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಭಾರತದಲ್ಲಿನ ವಕೀಲರಿಗೆ ಸೂಚನೆ ನೀಡಲು ಅವಕಾಶ ನೀಡದಿರುವುದು ಆಕ್ರಮಣಕಾರಿ. ಅಲ್ಲದೆ ಭಾರತದಲ್ಲಿ ಈ ಪ್ರಕರಣಗಳು ಪ್ರಗತಿ ಸಾಧಿಸುತ್ತಿಲ್ಲ. ವಿಚಾರಣೆಗಳು ಪ್ರಗತಿ ಸಾಧಿಸದಿರಲು ಹಣದ ಕೊರತೆ ಹಾಗೂ ಕೊರೊನಾ ಪರಿಸ್ಥಿತಿ ಕಾರಣ ಎಂದು ಮಲ್ಯ ಪರ ವಕೀಲ ಮಾರ್ಷಲ್ ಅವರು ಈ ಹಿಂದೆ ಕೋರ್ಟ್‍ಗೆ ತಿಳಿಸಿದ್ದರು.

    SUPREME COURT

    ಮಲ್ಯ ಈಗಾಗಲೇ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳಿಗೆ ಭಾರತಕ್ಕೆ ಬೇಕಾಗಿದ್ದಾರೆ. ಗೌಪ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡಾಗ ಕೋರ್ಟ್‍ನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಫೆಬ್ರವರಿ 2019 ರಲ್ಲಿ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಯುಕೆ ಸರ್ಕಾರವು ಆದೇಶಿಸಿತ್ತು.

  • ಮುಂಬೈ ಜೈಲಿನಲ್ಲಿ ವಿಜಯ್ ಮಲ್ಯಗೆ ಹೈಟೆಕ್ ವ್ಯವಸ್ಥೆ!

    ಮುಂಬೈ ಜೈಲಿನಲ್ಲಿ ವಿಜಯ್ ಮಲ್ಯಗೆ ಹೈಟೆಕ್ ವ್ಯವಸ್ಥೆ!

    ನವದೆಹಲಿ: ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ಅವರನ್ನು ಬಂಧಿಸಿಡಲು ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿ ಹೈಟೆಕ್ ವ್ಯವಸ್ಥೆ ರೆಡಿಯಾಗಿದೆ.

    ಮಲ್ಯರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿರುವ ಸಮಯಕ್ಕೆ ಭಾರತದ ಜೈಲುಗಳ ಪರಿಸ್ಥಿತಿ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಮಲ್ಯಗೆ ಪ್ರತ್ಯುತ್ತರವಾಗಿ ಭಾರತೀಯ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಜೈಲಿನ ಸೌಲಭ್ಯಗಳ ವಿವರವಾದ ವೀಡಿಯೋ ದೃಶ್ಯವನ್ನು ಸಲ್ಲಿಸಿದ್ದಾರೆ. ಮುಂಬೈನ ಅರ್ಥರ್ ರೋಡ್‍ನಲ್ಲಿರುವ ಜೈಲಿನ ಬ್ಯಾರಕ್ ನಂಬರ್ 12 ನಲ್ಲಿರುವ ಸೌಲಭ್ಯಗಳ ವಿವರವನ್ನೊಳಗೊಂಡ ವೀಡಿಯೋ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.

    ಹಾಗಾದ್ರೆ ಜೈಲಿನಲ್ಲಿ ಏನಿರತ್ತೆ?
    * ಸೂರ್ಯನ ಬೆಳಕು ಬೀಳುವಂತೆ ಒಂದು ವರಾಂಡಾ
    * ಒಂದು ಟಿವಿ ಸೆಟ್
    * ವೈಯಕ್ತಿಕ ಶೌಚಾಲಯ
    * ಹಾಸಿಗೆ
    * ಸುಸಜ್ಜಿತ ಬಾತ್ ರೂಂ ಏರಿಯಾ
    * ವಾಷಿಂಗ್ ಜಾಗ
    * ಪೂರ್ವ ದಿಕ್ಕಿಗೆ ತೆರೆದುಕೊಂಡಿರುವ ಕೊಠಡಿ

    ಜೈಲಿನ ಭದ್ರತೆಯು ಅಂತಾರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತಿದೆ ಎನ್ನುವುದನ್ನು ನಾವು ಈ ಹಿಂದಿನ ಕೆಲ ವಿಚಾರಣೆಗಳಲ್ಲಿಯೇ ನ್ಯಾಯಾಲಯಕ್ಕೆ ಮನದಟ್ಟು ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ. ಕೈದಿಗಳ ಚಲನವಲನ ಪರಿಶೀಲನೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಫಿಕ್ಸ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಹೆಚ್ಚುವರಿ ಸಿಬ್ಬಂದಿ ಕೂಡ ಭದ್ರತೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಡಿಯೋದಲ್ಲಿ ಅವರು ವಿವರಿಸಿದ್ದಾರೆ.

    ಭಾರತದ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಕೋಟ್ಯಂತರ ರೂ. ವಂಚಿಸಿದ್ದ ವಿಜಯ್ ಮಲ್ಯ ಮಾರ್ಚ್ 2016 ರಲ್ಲಿ ಭಾರತವನ್ನು ಬಿಟ್ಟು ಬ್ರಿಟನ್ ನಲ್ಲಿ ನೆಲೆಸಿದ್ದಾರೆ. ಸುಮಾರು 9,000 ಕೋಟಿ ರೂ.ಗಳನ್ನು ಬ್ಯಾಂಕ್ ಗಳಿಗೆ ಪಾವತಿಸಬೇಕಾಗಿದ್ದು, ಇವರ ವಿರುದ್ಧ ಕಳೆದ ವರ್ಷ ಡಿಸೆಂಬರ್ 4 ರಂದು ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿದೆ. ಈ ವೇಳೆ ಅವರನ್ನು ಭಾರತಕ್ಕೆ ಕರೆತರಯವ ಪ್ರಯತ್ನ ಮಾಡಲಾಗಿತ್ತು. ಆದ್ರೆ ಮಲ್ಯ ಅವರು, ತಾನು ಭಾರತಕ್ಕೆ ಮರಳಿದರೆ ನನ್ನನ್ನು ಜೈಲಿಗೆ ಹಾಕಲಾಗುತ್ತದೆ. ಹೀಗಾಗಿ ತಾನು ತನ್ನ ಆಸ್ತಿಯನ್ನು ಮಾರಿ ಸಾಲ ತೀರಿಸುತ್ತೇನೆ. ಆದ್ರೆ ಭಾರತಕ್ಕೆ ಮಾತ್ರ ಮರಳಲ್ಲ ಅಂತ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=mMCuM0zNwiI