Tag: vijay

  • ತಮಿಳುನಾಡಲ್ಲಿ ವಿಜಯ್ ದಳಪತಿ ರಣಕಹಳೆ

    ತಮಿಳುನಾಡಲ್ಲಿ ವಿಜಯ್ ದಳಪತಿ ರಣಕಹಳೆ

    ಳಪತಿ ವಿಜಯ್ ತಮಿಳುನಾಡಿನಲ್ಲಿ (Tamil Nadu) ರಣಕಹಳೆ ಊದಿದ್ದಾರೆ. 2026ರ ಚುನಾವಣೆಗಾಗಿ (Election) ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದು, ಮಧುರೈನಲ್ಲಿ ಟಿವಿಕೆ ಪಕ್ಷದ ಸಮಾವೇಶಕ್ಕೆ ಹರಿದು ಬಂದ ಜನಸಾಗರ ನೋಡಿ ನಟ ವಿಜಯ್ (Vijay) ಭಾವುಕರಾಗಿದ್ದಾರೆ.

    ಜನ ನಾಯಗನ್ (Jana Nayagan) ಸಿನಿಮಾ ಮುಗಿಸಿ ರಾಜಕೀಯ ರಣರಂಗದಲ್ಲಿ ಸೆಣಸಾಡಲು ಪಣ ತೊಟ್ಟು ನಿಂತಿದ್ದಾರೆ. ವಿಜಯ್ ದಳಪತಿ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಪೂರ್ತಿಯಾಗಿ ರಾಜಕೀಯ ರಂಗದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ. ವಿಜಯ್ ತಮ್ಮ ಕೊನೆಯ ಸಿನಿಮಾ ಜನ ನಾಯಗನ್ ಮುಗಿಸಿ ಕಂಪ್ಲೀಟ್ ಆಗಿ ರಾಜಕೀಯದಲ್ಲೇ ತೊಡಗಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಸದ್ಯ ತಮ್ಮ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ವಿಜಯ್ ದಳಪತಿ ಸದ್ಯದಲ್ಲಿಯೇ ಸಿನಿಮಾದ ಶೂಟಿಂಗ್ ಮುಗಿಸಿಕೊಡಲಿದ್ದಾರೆ. ಅಂದಹಾಗೆ ಜನ ನಾಯಗನ್ ಚಿತ್ರ 2026ರ ಸಂಕ್ರಾಂತಿಗೆ ಅಭಿಮಾನಿಗಳ ಮುಂದೆ ದರ್ಶನ ನೀಡಲಿದೆ. ಈ ನಿಟ್ಟಿನಲ್ಲಿ ಒಂದು ಕಡೆ ಸಿನಿಮಾ ತಂಡ ತಯಾರಿಯನ್ನ ಮಾಡಿಕೊಂಡಿದೆ. ಇದರ ಜೊತೆ ಜೊತೆಗೆ ತಮ್ಮ ಪಕ್ಷ ಕಟ್ಟುವ ಕಾರ್ಯದಲ್ಲಿ ವಿಜಯ್ ಸದಾ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಮಧುರೈನ ಸಮಾವೇಶದಲ್ಲಿ ವಿಜಯ್ ಗುಡುಗಿಗೆ ತಮಿಳುನಾಡು ರಾಜಕೀಯ ಕ್ಷೇತ್ರದಲ್ಲಿ ಕಂಪನ ಶುರುವಾಗಿದೆ.

    ಮಧುರೈನಲ್ಲಿ ನಡೆದ ಸಮಾವೇಶಕ್ಕೆ ಜನ ಸಾಗರವೇ ಹರಿದು ಬಂದಿದೆ. ವಿಜಯ್ ವೇದಿಕೆ ಮೇಲೆ ಆಡಿದ ಒಂದೊಂದು ಮಾತಿಗೆ ವಿಜಯ್ ಅಭಿಮಾನಿ ಬಳಗ ಹಾಗೂ ತಮಿಳು ನಾಡಿನ ಜನ ರಣಕೇಕೆ ಹಾಕಿ ಕುಣಿದಿದೆ. 234 ಕ್ಷೇತ್ರದಲ್ಲೂ ನಾನೇ ಸ್ಪರ್ಧಿಸಿದ ಹಾಗೆ ಎನ್ನುವ ಮಾತಿಗೆ ಸಮ್ಮತ ನೀಡಿದ್ದಾರೆ ತಮಿಳುನಾಡಿನ ಜನ. ವಿಜಯ್ ದಳಪತಿ ಸಿನಿಮಾರಂಗದಿಂದ ರಾಜಕೀಯ ರಂಗಕ್ಕೆ ಪ್ರವೇಶ ಮಾಡಲು ಸಖತ್ ರೆಸ್ಪಾನ್ಸ್ ಸಿಕ್ತಿದೆ. ಅಲ್ಲದೇ ತಮ್ಮ ನಾಯಕನ ಮೂಲಕ ಮತ್ತಷ್ಟು ಅಭಿವೃದ್ದಿ ಹಾಗೂ ಬದಲಾವಣೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಜನ.

    ವಿಜಯ್ ದಳಪತಿ ತಮ್ಮ ಸಿನಿಮಾ ಮೂಲಕ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅವರ ಅಭಿಮಾನಿ ಬಳಗ ಹಾಗೂ ಅವರ ಮೇಲಿನ ಅಭಿಮಾನ ಮತ್ತೊಮ್ಮೆ ಪ್ರೂವ್ ಆಗಿದೆ. ಮಧುರೈನ ಸಮಾವೇಶಕ್ಕೆ ಲಕ್ಷಾಂತರ ಜನ ಸೇರಿದ್ದಾರೆ. ಈ ಅಪಾರ ಜನಸಂಖ್ಯೆಯನ್ನ ನೋಡಿ ವೇದಿಕೆ ಮೇಲೆ ವಿಜಯ್ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಈ ವೇಳೆ ತಮಿಳುನಾಡಿನ ಜನರಿಗೆ ಕೆಲವೊಂದಿಷ್ಟು ಮಾತುಗಳನ್ನ ಕೊಟ್ಟಿದ್ದಾರೆ. ತಮ್ಮ ಪಕ್ಷ ಸ್ವತಂತ್ರವಾಗಿರಲಿದೆ ಯಾವುದೇ ಪಕ್ಷದೊಂದಿದೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

  • ವಿಜಯ್‌ TVK ಕಾರ್ಯಕ್ರಮ| #GetOutModi, #GetOutStalin ಫಲಕಕ್ಕೆ ಸಹಿ ಹಾಕದ ಪ್ರಶಾಂತ್‌ ಕಿಶೋರ್‌

    ವಿಜಯ್‌ TVK ಕಾರ್ಯಕ್ರಮ| #GetOutModi, #GetOutStalin ಫಲಕಕ್ಕೆ ಸಹಿ ಹಾಕದ ಪ್ರಶಾಂತ್‌ ಕಿಶೋರ್‌

    ಚೆನ್ನೈ: ನಟ ವಿಜಯ್‌ (Vijay) ಹುಟ್ಟು ಹಾಕಿರುವ ತಮಿಳಗ ವೆಟ್ರಿ ಕಳಗಂ (TVK) ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ (Prashanth Kishore) ಕಾಣಿಸಿಕೊಂಡಿದ್ದಾರೆ.

    ಇಂದು ಮಹಾಬಲಿಪುರಂನಲ್ಲಿ ಟಿವಿಕೆ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. 2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಎಂದೇ ಕರೆಯಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಜನ ಸೂರಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

    ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Narendra Modi) ಮತ್ತು ತಮಿಳುನಾಡು ಸಿಎಂ ಸ್ಟಾಲಿನ್‌ (CM Stalin) ಗುರಿಯಾಗಿಸಿ #GetOut, #GetOutModi ಹಾಗೂ #GetOutStalin ಹೆಸರಿನ ಫಲಕಗಳಿಗೆ ವಿಜಯ್‌ ಸಹಿ ಹಾಕಿದರು. ಆದರೆ ಪ್ರಶಾಂತ್‌ ಕಿಶೋರ್‌ ಈ ಫಲಕಗಳಿಗೆ ಸಹಿ ಹಾಕಿಲ್ಲ. ಸಹಿ ಹಾಕಲು ನಿರಾಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಕೇಂದ್ರ ಮತ್ತು ತಮಿಳುನಾಡು ನಡುವೆ ಹಿಂದಿ ಹೇರಿಕೆ ಸಂಘರ್ಷ ಸಂಘರ್ಷವನ್ನು ಎಲ್‌ಕೆಜಿ ಮಕ್ಕಳ ಗಲಾಟೆಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

    ಎನ್‌ಇಪಿ, ತ್ರಿಭಾಷಾ ಸೂತ್ರ ಜಾರಿ ವಿಚಾರದಲ್ಲಿ ಎರಡು ಪಕ್ಷಗಳ ಮಧ್ಯೆ ಯುದ್ಧ ನಡೀತಿದೆ. ತಮಿಳುನಾಡನ್ನು (Tamil Nadu) ರಣರಂಗ ಮಾಡುತ್ತಿದ್ದಾರೆ. ಎರಡೂ ಪಕ್ಷಗಳು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಷ್‌ಟ್ಯಾಗ್ ಗೇಮ್ ಆಡುತ್ತಿವೆ. ಜನರನ್ನು ಹಾದಿತಪ್ಪಿಸುವ ಪ್ರಯತ್ನ ನಡೆಸಿವೆ. ಅವರ ನಡುವಿನ ಸಂಘರ್ಷ ಚಿಕ್ಕಮಕ್ಕಳ ಗಲಾಟೆಯಂತಿದೆ ಎಂದಿದ್ದಾರೆ.

    ಡಿಎಂಕೆ ಮಾದರಿಯಲ್ಲೇ ತ್ರಿಭಾಷಾ ವಿಧಾನವನ್ನು ಖಂಡಿಸಿದ ಅವರು, 2400 ಕೋಟಿ ರೂ. ನೀಡುವುದಿಲ್ಲ ಎಂದು ಹೇಳಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಾತನ್ನು ಟೀಕಿಸಿದ್ದಾರೆ. ಇದು ಒಕ್ಕೂಟ ಸ್ಪೂರ್ತಿಗೆ ವಿರುದ್ಧ ಎಂದು ವ್ಯಾಖ್ಯಾನಿಸಿದ್ದಾರೆ.

  • ವಿಜಯ್ ನಿರ್ದೇಶನದ ಚಿತ್ರದ ಮೂಲಕ ಹೊಸ ಹೀರೋ ಎಂಟ್ರಿ

    ವಿಜಯ್ ನಿರ್ದೇಶನದ ಚಿತ್ರದ ಮೂಲಕ ಹೊಸ ಹೀರೋ ಎಂಟ್ರಿ

    ಲ್ಫಾ ಮೆನ್ ಲವ್ ವೈಲೆನ್ಸ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ಹೀರೋ ಹೇಮಂತ್ ಕಮಾರ್  (Hemanth Kumar)ಎಂಟ್ರಿಕೊಟ್ಟಿದ್ದಾರೆ. ಪಕ್ಕಾ ಮಾಸ್ ಸನಿಮಾ ಮೂಲಕ ಹೇಮಂತ್ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಇಂದು ಶಿವರಾತ್ರಿ ಪ್ರಯುಕ್ತ ಆಲ್ಫಾ ಮೆನ್ ಲವ್ ವೈಲೆನ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾತಂಡ. ‘ಆಲ್ಫಾ ಮೆನ್ ಲವ್ ವೈಲೆನ್ಸ್’ ಆಕ್ಷನ್ ಸಿನಿಮಾ ಜೊತೆಗೆ ಅಪ್ಪ ಮತ್ತು ಮಗನ ಸ್ಟ್ರಾಂಗ್ ಎಮೋಷನ್ ಕೂಡ ಹೈಲೆಟ್.

    ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೊಸ ಹೀರೋನಾ ಪರಿಚಯ ಮಾಡುತ್ತಿದ್ದಾರೆ ನಿರ್ದೇಶಕ ವಿಜಯ್. ಈ ಮೊದಲು  ಗೀತ ಮತ್ತು ಹೊಯ್ಸಳ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ನಿರ್ದೇಶಕ ವಿಜಯ್  (Vijay) ನಿರ್ದೇಶನದ 3ನೇ ಸಿನಿಮಾವಿದು.

    ಸದ್ಯ ಸಿನಿಮಾದ ಮೊದಲ ಲುಕ್ ರಿಲೀಸ್ ಆಗಿದ್ದು ನಾಯಕ ಹೇಮಂತ್ ರಗಡ್ ಗೆಟಪ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಆಕ್ಷನ್ ಮತ್ತು ಕ್ರೈಮ್ ನ ನಭಯಾನಕಥೆ ಎಷ್ಟಿರುತ್ತೆ ಎನ್ನುವುದು ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತಿದೆ.  ಇನ್ನು ಈ ಸಿನಿಮಾದಲ್ಲಿ ಮೂರು ಪಾತ್ರಗಳು ಡೋಮಿನೇಟ್ ಮಾಡುವುದರಿಂದ ಸಿನಿಮಾಗೆ ಆಲ್ಫಾ ಎಂದು ಟೈಟಲ್ ಇಡಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿಜಯ್. ಆಲ್ಫಾ ಟೈಟಲ್ ಜೊತೆಗೆ ಮೆನ್ ಲವ್ ವೈಲನ್ಸ್ ಸಬ್ ಟೈಟಲ್ ಕೂಡ ಗಮನ ಸೆಳೆಯುತ್ತಿದೆ..

    ಈ ಸಿನಿಮಾ ಮೂಲಕ ಆನಂದ್ ಕುಮಾರ್ (Anand Kumar) ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ‘ಎಲ್ ಎ’ ಬ್ಯಾನರ್ ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ. ಇನ್ನು ಹೀರೋ ಆಗಿ ಎಂಟ್ರಿ ಕೊಡುತ್ತಿರುವ ನಾಯಕ ಹೇಮಂತ್ ಕುಮಾರ್ ಈ ಸಿನಿಮಾಗಾಗಿ ಭರ್ಜರಿ ತಯಾರಿಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ಆಕ್ಟಿಂಗ್ ತಯಾರಿ ನಡೆಸಿದ್ದಾರೆ. ಅರ್ಜುನ್ ಅವರ ಜೊತೆ ಫೈಟ್ ಅಭ್ಯಾಸ ಮಾಡಿದ್ರೆ, ಭೂಷಣ್ ಅವರ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜೊತೆಗೆ ಮಾರ್ಶಲ್ ಆರ್ಟ್ ಕಲಿತಿದ್ದಾರೆ ನಾಯಕ ಹೇಮಂತ್.

    ಈ ಸಿನಿಮಾದಲ್ಲಿ ಕಾರ್ತಿಕ್ ಅವರ ಡಿಒಪಿ, ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಾಸ್ತಿ ಅವರ ಡೈಲಾಗ್ ಇರಲಿದೆ. ಹೇಮಂತ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಉಳಿದಂತೆ ಪಾತ್ರವರ್ಗ ಏನೆಲ್ಲ ಇರಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

  • ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದ ಪೂಜಾ ಗಾಂಧಿ

    ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದ ಪೂಜಾ ಗಾಂಧಿ

    ‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ (Pooja Gandhi) ಅವರು ಪತಿ ವಿಜಯ್ (Vijay) ಜೊತೆ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಯ ಆಶೀರ್ವಾದವನ್ನು ಪಡೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬಸವೇಶ್ವರ ಪುತ್ಥಳಿಗೆ ಪೂಜಾ ಗಾಂಧಿ ದಂಪತಿ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

    ಮದುವೆಯಾದ ಬಳಿಕ ಪತಿ ಜೊತೆ ಪೂಜಾ ಗಾಂಧಿ ಲಂಡನ್‌ಗೆ ಹಾರಿದ್ದಾರೆ. ಅಲ್ಲಿ ಲಂಡನ್‌ನಲ್ಲಿರುವ 2 ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಈ ಸಂದರ್ಭದಲ್ಲಿ, ಪೂಜಾ ಗಾಂಧಿ ಅವರು ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸಿದರು. 12ನೇ ಶತಮಾನದಲ್ಲಿ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ತನಗೆ ಬಸವಣ್ಣನ ಬಗ್ಗೆ ಅಪಾರ ಅಭಿಮಾನವಿದೆ ಮತ್ತು ಅವರ ಬೋಧನೆಗಳ ಸಮರ್ಪಿತ ಅನುಯಾಯಿ ಎಂದು ಅವರು ಹೇಳಿದರು.

  • Thalapathy 69: ವಿಜಯ್‌ ಜೊತೆ ಕನ್ನಡದ ನಟಿ ಪ್ರಿಯಾಮಣಿ ಹೊಸ ಸಿನಿಮಾ

    Thalapathy 69: ವಿಜಯ್‌ ಜೊತೆ ಕನ್ನಡದ ನಟಿ ಪ್ರಿಯಾಮಣಿ ಹೊಸ ಸಿನಿಮಾ

    ಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ (Priyamani) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಜವಾನ್’ (Jawan) ಸಿನಿಮಾದ ಸಕ್ಸಸ್ ನಂತರ ನಟಿಯ ಬೇಡಿಕೆ ಹೆಚ್ಚಾಗಿದೆ. ಇದೀಗ ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ಪ್ರಿಯಾಮಣಿ ಕೂಡ ನಟಿಸುತ್ತಿದ್ದಾರೆ. ನಟಿ ಕೂಡ ಚಿತ್ರತಂಡ ಸೇರ್ಪಡೆಯಾಗಿರುವ ಬಗ್ಗೆ ತಂಡ ಅಧಿಕೃತ ಘೋಷಣೆ ಮಾಡಿದೆ.

    ಇದೇ ಮೊದಲ ಬಾರಿಗೆ ನಟಿ ಪ್ರಿಯಾಮಣಿ ಅವರು ವಿಜಯ್ ದಳಪತಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ರಿವೀಲ್ ಮಾಡಿಲ್ಲ. ಆದರೆ ಪವರ್‌ಫುಲ್ ಪಾತ್ರದಲ್ಲಿ‌ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೂಜಾ ಹೆಗ್ಡೆ (Pooja Hegde), ಮಮಿತಾ ಬೈಜು (Mamitha Baiju), ಪ್ರಕಾಶ್ ರಾಜ್ ಚಿತ್ರತಂಡ ಸೇರಿಕೊಂಡ ಬೆನ್ನಲ್ಲೇ ಪ್ರಿಯಾಮಣಿ ಕೂಡ ‘ದಳಪತಿ 69’ ತಂಡ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ‘ಮಧ್ಯಂತರ’ ಕಿರುಚಿತ್ರಕ್ಕೆ ಜಯಮಾಲಾ ಮೆಚ್ಚುಗೆ

     

    View this post on Instagram

     

    A post shared by KVN Productions (@kvn.productions)

    ಇನ್ನೂ ಇತ್ತೀಚಿನ ದಿನಗಳಲ್ಲಿ ಅವರಿಗೆ ಬಾಲಿವುಡ್‌ನಿಂದ ಉತ್ತಮ ಅವಕಾಶಗಳು ಸಿಗುತ್ತಿವೆ. ಪ್ರಿಯಾಮಣಿ ನಟಿಸಿರುವ ಜವಾನ್, ಆರ್ಟಿಕಲ್ 370, ಮೈದಾನ್ ಚಿತ್ರಗಳು ಸಕ್ಸಸ್ ಕಂಡಿವೆ. ತೆಲುಗು, ತಮಿಳು, ಹಿಂದಿಯಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

    ಅಂದಹಾಗೆ, ಸ್ಯಾಂಡಲ್‌ವುಡ್‌ನಲ್ಲಿ ರಾಮ್, ಅಣ್ಣಾಬಾಂಡ್, ಚಾರುಲತಾ, ಅಂಬರೀಶ, ಕಲ್ಪನಾ 2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  • Thalapathy 69: ವಿಜಯ್ ಕೊನೆಯ ಚಿತ್ರಕ್ಕೆ ಪೂಜಾ ಹೆಗ್ಡೆ ಹೀರೋಯಿನ್

    Thalapathy 69: ವಿಜಯ್ ಕೊನೆಯ ಚಿತ್ರಕ್ಕೆ ಪೂಜಾ ಹೆಗ್ಡೆ ಹೀರೋಯಿನ್

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸಕ್ಸಸ್ ಸಿಗದೆ ಇದ್ದರೂ ಅವಕಾಶಗಳ ಕೊರತೆಯಿಲ್ಲ. ಕಾಲಿವುಡ್‌ನಲ್ಲಿ ಮತ್ತೊಂದು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಮ್ಮೆ ಸ್ಟಾರ್ ನಟ ವಿಜಯ್ ದಳಪತಿಗೆ (Vijay Thalapathy) ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಕೆವಿಎನ್ ನಿರ್ಮಾಣ ಸಂಸ್ಥೆ ಅಫಿಷಿಯಲ್ ಆಗಿ ತಿಳಿಸಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ‘ಮಧ್ಯಂತರ’ ಕಿರುಚಿತ್ರಕ್ಕೆ ಜಯಮಾಲಾ ಮೆಚ್ಚುಗೆ

    ವಿಜಯ್ ನಟನೆಯ ಕೊನೆಯ ಸಿನಿಮಾ ‘ದಳಪತಿ 69ನೇ’ (Thalapathy 69) ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮತ್ತೊಮ್ಮೆ ವಿಜಯ್ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಪೂಜಾ ಹೆಗ್ಡೆ ಗಿಟ್ಟಿಸಿಕೊಂಡಿದ್ದಾರೆ.

     

    View this post on Instagram

     

    A post shared by KVN Productions (@kvn.productions)

    ಈ ಹಿಂದೆ ಕೂಡ 2022ರಲ್ಲಿ ತೆರೆಕಂಡ ‘ಬೀಸ್ಟ್’ ಚಿತ್ರದಲ್ಲಿ ವಿಜಯ್‌ಗೆ ಪೂಜಾ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಈಗ ಮತ್ತೆ ವಿಜಯ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ಇನ್ನೂ ಬಾಬಿ ಡಿಯೋಲ್ (Bobby Deol) ಕೂಡ ನಟಿಸುವ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ ಚಿತ್ರತಂಡ.

    ಅಂದಹಾಗೆ, ಶಾಹಿದ್ ಕಪೂರ್ ಜೊತೆ ‘ದೇವ’, ಸೂರ್ಯ 44, ಅಹಾನ್ ಶೆಟ್ಟಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ‘ದಳಪತಿ 69’ ಅಸಲಿ ಸ್ಟೋರಿ ರಿವೀಲ್- ಕಮಲ್ ಹಾಸನ್‌ಗೆ ಹೇಳಿದ್ದ ಕಥೆಯಲ್ಲಿ ವಿಜಯ್?

    ‘ದಳಪತಿ 69’ ಅಸಲಿ ಸ್ಟೋರಿ ರಿವೀಲ್- ಕಮಲ್ ಹಾಸನ್‌ಗೆ ಹೇಳಿದ್ದ ಕಥೆಯಲ್ಲಿ ವಿಜಯ್?

    ಮಿಳಿನ ನಟ ವಿಜಯ್ ‘ದಳಪತಿ 69’ (Thalapathy 69) ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಕ್ಕಿದೆ. ಕಮಲ್ ಹಾಸನ್ (Kamal Haasan) ಹೇಳಿದ್ದ ಕಥೆಯಲ್ಲಿ ವಿಜಯ್ ನಟಿಸಲು ರೆಡಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಅದಷ್ಟೇ ಅಲ್ಲ, ಈ ಸಿನಿಮಾ ಕಥೆ ಹೇಗಿರಲಿದೆ ಎಂಬ ಸುಳಿವು ಕೂಡ ಸಿಕ್ಕಿದೆ. ಇದನ್ನೂ ಓದಿ:ಮಾದಕ ಫೋಟೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕದ್ದ ಪೂನಂ; ನಮ್ಮ ಎದೆಗೆ ಇನ್ನೆಷ್ಟು ಬೆಂಕಿ ಹಚ್ತೀರಿ ಅಂದ್ರು ಫ್ಯಾನ್ಸ್‌

    ‘ದಳಪತಿ 69’ ಸಿನಿಮಾಗೆ ವಿಜಯ್ ಫೈನಲ್ ಆಗುವ ಮುನ್ನ ಈ ಕಥೆಯನ್ನು ಕಮಲ್ ಹಾಸನ್ ಸೇರಿದಂತೆ ಅನೇಕ ನಟರಿಗೆ ಹೇಳಿದ್ದರು ಎನ್ನಲಾಗ್ತಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಮಾಡಲು ಆಗಲಿಲ್ಲ. ಆ ನಂತರ ಈ ಚಿತ್ರದ ಕಥೆ ಕೇಳಿ, ಸಿನಿಮಾ ಕೆರಿಯರ್‌ನ ಕೊನೆಯ ಚಿತ್ರ ಇದಾದರೆ ಸೂಕ್ತ ಎಂದೆನಿಸಿ ವಿಜಯ್ (Vijay Thalapathy) ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ವಿನೋದ್ ನಿರ್ದೇಶನದಲ್ಲಿ ‘ದಳಪತಿ 69’ ಸಿನಿಮಾ ಮೂಡಿ ಬರಲಿದೆ. ಇನ್ನೂ ಹೆಸರಿಡದ ಈ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದ್ದಾರೆ. ಇನ್ನು ವಿಜಯ್ ಪೊಲಿಟಿಕಲ್ ಜರ್ನಿಗೆ ಈ ಚಿತ್ರವನ್ನು ವೇದಿಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಅಂಶಗಳನ್ನು ಸೇರಿಸಿ ಚಿತ್ರವನ್ನು ತೆರೆಗೆ ತರಲಾಗುತ್ತದೆ. ‘ದಳಪತಿ 69’ ಅನೌನ್ಸ್‌ಮೆಂಟ್ ಪೋಸ್ಟರ್ ಗಮನ ಸೆಳೆದಿದೆ. ‘ಪ್ರಜಾಪ್ರಭುತ್ವದ ಜ್ಯೋತಿ ಹಿಡಿಯುವವನು ಶೀಘ್ರದಲ್ಲೇ ಬರುತ್ತಿದ್ದಾರೆ’ ಎನ್ನುವ ಪೋಸ್ಟರ್‌ನಲ್ಲಿ ಇರುವ ಸಾಲು ಕುತೂಹಲ ಮೂಡಿಸಿದೆ.

    2026ರ ಚುನಾವಣೆಗೆ ಈಗಿಂದಲೇ ವಿಜಯ್ ತಯಾರಿ ನಡೆಸಿದ್ದಾರೆ. ಆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ‘ದಳಪತಿ 69’ ಸಿನಿಮಾ ರಿಲೀಸ್ ಮಾಡಿ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಆಲೋಚನೆಯಲ್ಲಿದ್ದಾರೆ.

  • ‘ಟಾಕ್ಸಿಕ್’ ಶೂಟಿಂಗ್ ನಡುವೆ ಬೆಂಗಳೂರಿನಲ್ಲಿ ‘ದಿ ಗೋಟ್’ ಸಿನಿಮಾ ವೀಕ್ಷಿಸಿದ ನಯನತಾರಾ

    ‘ಟಾಕ್ಸಿಕ್’ ಶೂಟಿಂಗ್ ನಡುವೆ ಬೆಂಗಳೂರಿನಲ್ಲಿ ‘ದಿ ಗೋಟ್’ ಸಿನಿಮಾ ವೀಕ್ಷಿಸಿದ ನಯನತಾರಾ

    ಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ‘ದಿ ಗೋಟ್’ ಚಿತ್ರವನ್ನು ಬೆಂಗಳೂರಿನಲ್ಲಿ ನಯನತಾರಾ (Nayanthara) ವೀಕ್ಷಿಸಿದ್ದಾರೆ. ಪತಿ ವಿಘ್ನೇಶ್ ಶಿವನ್ ಜೊತೆ ನಟಿ ಸಿನಿಮಾ ನೋಡ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್ 2ನೇ ಪುತ್ರಿ ಮೋನಿಷಾ

    ಯಶ್‌ ಜೊತೆಗಿನ ಸಿನಿಮಾಗಾಗಿ ನಯನತಾರಾ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಕಳೆದ 4 ದಿನಗಳ ಕಾಲ ‘ಟಾಕ್ಸಿಕ್’ ಶೂಟಿಂಗ್ ಕೂಡ ನಡೆದಿದೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ನಿನ್ನೆ (ಸೆ.5) ಮಾಲ್‌ವೊಂದರಲ್ಲಿ ವಿಜಯ್ ನಟನೆಯ ‘ದಿ ಗೋಟ್’ (The Goat) ಚಿತ್ರ ನೋಡಿ ಎಂಜಾಯ್ ಮಾಡಿದ್ದಾರೆ. ಪತಿ ಜೊತೆ ಕೈಹಿಡಿದು ನಟಿ ಮಾಲ್‌ಗೆ ಎಂಟ್ರಿ ಕೊಟ್ಟಿರುವ ವಿಡಿಯೋ ಈಗ ಪ್ರೇಕ್ಷಕರ ಗಮನ ಸೆಳೆದಿದೆ.

    ಅಂದಹಾಗೆ, ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಹಾಕಲಾದ ಬೃಹತ್ ಸೆಟ್‌ನಲ್ಲಿ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಾಹಸ ಸನ್ನಿವೇಶ ಚಿತ್ರೀಕರಣ ಮಾಡಲಾಗುತ್ತಿದೆ. ಮೊದಲ ಹಂತವಾಗಿ ಒಂದು ಬಿಗ್ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಸಾಗುತ್ತಿದೆ. ಇದು ಬೆಂಗಳೂರಲ್ಲೇ ಬಹುತೇಕ ನಡೆಯುವ ಶೂಟಿಂಗ್ ಆಗಿರೋದ್ರಿಂದ ಚಿತ್ರದಲ್ಲಿರುವ ನಟ ನಟಿಯರನ್ನ ಯಶ್ ಇಲ್ಲಿಗೇ ಕರೆಸಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಆಲ್ ಯು ನೀಡ್ ಕಾನ್ಫಿಡೆನ್ಸ್ & ಬೂಟ್ಸ್’ ಎಂಬ ಸಂದೇಶ ಬರೆದು ಶೂಟಿಂಗ್‌ನಲ್ಲಿ ಕುಳಿತಿರುವಂತೆ ಕಾಲಿನ ಫೋಟೋ ಪೋಸ್ಟ್ ಮಾಡಿದ್ದರು. ‘ಟಾಕ್ಸಿಕ್’ ಚಿತ್ರತಂಡ ನಟಿಯ ಇರುವಿಕೆಯನ್ನ ಇದುವರೆಗೂ ಚಿತ್ರತಂಡ ಅಧಿಕೃತವಾಗಿ ಘೊಷಿಸಿಲ್ಲವಾದರೂ ನಯನತಾರ ನಟಿಸುತ್ತಿರುವ ಸಂಗತಿಯಂತೂ ನಿಜ.

  • ವಿಜಯ್ ಗೆ ‘ದಿ ಗೋಟ್’ ಕೊಟ್ಟ ಸಂಭಾವನೆ 200 ಕೋಟಿ ರೂ.!

    ವಿಜಯ್ ಗೆ ‘ದಿ ಗೋಟ್’ ಕೊಟ್ಟ ಸಂಭಾವನೆ 200 ಕೋಟಿ ರೂ.!

    ಳಪತಿ ವಿಜಯ್ (Vijay) ಸಿನಿಮಾ ಕರಿಯರ್‌ಗೆ ಗುಡ್‌ಬೈ ಹೇಳ್ತಾರೆ ಅಂತಾ ಭಾರೀ ಸುದ್ದಿಯಾಗಿತ್ತು ಅದು ನಿಜವಾಗಿದೆ ಕೂಡಾ. ಸಿನಿಮಾ ರಂಗಕ್ಕೆ ಟಾಟಾ ಬಾಯ್ ಬಾಯ್ ಮಾಡಿ ರಾಜಕೀಯದಲ್ಲೇ ತೊಡಗಿಸಿಕೊಳ್ಳೋಕೆ ಭಾರೀ ಸಿದ್ಧತೆ ನಡೆದಿದೆ. ಈಗಾಗಲೇ ಪಕ್ಷದ ಚಿಹ್ನೆ ಹಾಗೂ ಗೀತೆಯನ್ನ ಬಿಡುಗಡೆ ಮಾಡಿದ್ದಾರೆ ವಿಜಯ್. ಇನ್ನು ವಿಜಯ್ ನಟನೆಯ `ದಿ ಗೋಟ್’ (The Goat)  ಸಿನಿಮಾ ಇದೇ ಸೆಪ್ಟಂಬರ್ 5ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಆದ್ರೆ ಅಸಲಿ ಮ್ಯಾಟರ್ ಇದಲ್ಲ.

    ಹೌದು, ದಳಪತಿ ವಿಜಯ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ `ದಿ ಗೋಟ್’ಗೆ ಚಿತ್ರಕ್ಕಾಗಿ ದಳಪತಿ ಭರ್ತಿ 200 ಕೋಟಿ ಸಂಭಾವನೆ (Remuneration) ಪಡೆದಿದ್ದಾರಂತೆ. ಹೀಗಂತಾ  `ದಿ ಗೋಟ್’ ಚಿತ್ರದ ನಿರ್ಮಾಪಕಿ ಅರ್ಚನಾ ಕಲ್ಪತಿ ಹೇಳಿದ್ದಾರೆ. ಅಂದಹಾಗೆ ಪ್ರಭಾಸ್ ಒಂದು ಸಿನಿಮಾಗೆ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಕೂಡಾ 125 ಕೋಟಿ ಸಂಭಾವನೆಯನ್ನ ಪಡೆಯವ ಸ್ಟಾರ್ ನಟರಾಗಿದ್ದರು. ಸದ್ಯ 200 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಸಲ್ಮಾನ್ ಖಾನ್, ಶಾರುಖ್ ಹಾಗೂ ಪ್ರಭಾಸ್‌ರ ಸಂಭಾವನೆಯನ್ನ ಮೀರಿಸಿದ್ದಾರೆ.

    `ದಿ ಗೋಟ್’ ಚಿತ್ರದ ರಿಲೀಸ್ ನಂತರ ಇದೇ ತಿಂಗಳು ಕೊನೆಯಲ್ಲಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಇನ್ನು ಹೆಸರಿಡದ `ದಳಪತಿ 69′ ವರ್ಕಿಂಗ್ ಟೈಟಲ್‌ನ ಸಿನಿಮಾದ ನಂತರ ಚಿತ್ರರಂಗದಿಂದ ಕಂಪ್ಲೀಟ್ ಆಗಿ ದಳಪತಿ ಅಂತರ ಕಾಯ್ದುಕೊಳ್ಳಲಿದ್ದಾರೆ. ಸದ್ಯ ಅವ್ರು `ದಿ ಗೋಟ್’ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮುಂದಿನ ಸಿನಿಮಾಗೆ ಅದೆಷ್ಟು ಸಂಭಾವನೆ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

  • ವಿಜಯ್ ದಳಪತಿ ಸಿನಿಮಾದಲ್ಲಿ ಶ್ರೀಲೀಲಾ

    ವಿಜಯ್ ದಳಪತಿ ಸಿನಿಮಾದಲ್ಲಿ ಶ್ರೀಲೀಲಾ

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸತತ ತೆಲುಗು ಸಿನಿಮಾಗಳ ಸೋಲಿನ ಬೆನ್ನಲ್ಲೇ ಕಾಲಿವುಡ್‌ನತ್ತ ‘ಕಿಸ್’ (Kiss Film) ನಟಿ ಮುಖ ಮಾಡಿದ್ದಾರೆ. ಮತ್ತೊಂದು ತಮಿಳು ಸಿನಿಮಾದಲ್ಲಿ ಸ್ಟಾರ್ ನಟ ವಿಜಯ್ ದಳಪತಿ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

    ವಿಜಯ್ ಸದ್ಯ ‘ಗೋಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟನೆಯ ಬದಲು ಸ್ಪೆಷಲ್ ಹಾಡಿಗೆ ಕುಣಿಯಲು ಚಾನ್ಸ್ ಸಿಕ್ಕಿದೆ. ಮೊದಲೇ ಶ್ರೀಲೀಲಾ ಡ್ಯಾನ್ಸ್‌ನಲ್ಲಿ ಎತ್ತಿದ ಕೈ. ಹಾಗಾಗಿ ವಿಜಯ್ (Vijay Thalapathy) ಜೊತೆ ಸೊಂಟ ಬಳುಕಿಸಲು ಶ್ರೀಲೀಲಾ ಚಿತ್ರತಂಡ ಆಫರ್ ಕೊಟ್ಟಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ. ಇದನ್ನೂ ಓದಿ:ಆಗಸ್ಟ್ 2ರಂದು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ರಿಲೀಸ್

    ವಿಜಯ್ ಜೊತೆಗಿನ ಸಿನಿಮಾ ಮಾತ್ರವಲ್ಲ. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್‌ಗೆ ನಾಯಕಿಯಾಗಿ ಶ್ರೀಲೀಲಾಗೆ ನಟಿಸುವ ಚಾನ್ಸ್ ಸಿಕ್ಕಿದೆ. ತೆಲುಗಿನ ಸಿನಿಮಾಗಳಿಂದ ಔಟ್ ಆದ್ಮೇಲೆ ಸದ್ಯ ತಮಿಳಿನ 2 ಪ್ರಾಜೆಕ್ಟ್‌ಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

    ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ ಚಿತ್ರತಂಡ. ನಟಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ. ಮೇ 1ರಂದು ಅಜಿತ್ ಹುಟ್ಟುಹಬ್ಬದಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ‘ವಿದಾ ಮುಯಾರ್ಚಿ’ ಚಿತ್ರೀಕರಣದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.


    ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ಶ್ರೀಲೀಲಾ ವ್ಯಕ್ತಪಡಿಸಿದ್ದರು. ಇದೀಗ ವಿಜಯ್ ಮತ್ತು ಅಜಿತ್ ಕುಮಾರ್ ಜೊತೆಗಿನ ಸಿನಿಮಾ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.