ಚೆನ್ನೈ: ತಮಿಳುನಟ ವಿಜಯ್ ಅವರು ತಮ್ಮ ‘ಬಿಗಿಲ್’ ಚಿತ್ರತಂಡಕ್ಕೆ ಒಟ್ಟು 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ.
ವಿಜಯ್ ತಮ್ಮ ಬಹುನಿರೀಕ್ಷಿತ ಬಿಗಿಲ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಚಿತ್ರತಂಡಕ್ಕೆ 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ವಿಶೇಷ ಅಂದರೆ ಚಿನ್ನದ ಉಂಗುರದ ಮೇಲೆ ಬಿಗಿಲ್ ಎಂದು ಬರೆಯಲಾಗಿದೆ.

ಚಿತ್ರತಂಡಕ್ಕೆ ವಿಜಯ್ ಚಿನ್ನದ ಉಂಗುರವನ್ನು ಹಂಚುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಜಯ್ ಅವರ ಈ ಕೆಲಸ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಗಿಲ್ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಉಂಗುರವನ್ನು ನೀಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
When #thalapathy Vijay gives you the best gift EVER!!!!!!! #Bigil #Thalapathy63 pic.twitter.com/73WeS6Wdge
— Varsha Bollamma (@VarshaBollamma) August 13, 2019
ಮಂಗಳವಾರ ಬಿಗಿಲ್ ಚಿತ್ರದ ಚಿತ್ರೀಕರಣ ಮುಗಿದಿದೆ. ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಈಗ ಎರಡು ದಿನದಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದ್ದು, ಇದೇ ವರ್ಷ ಅಕ್ಟೋಬರ್ 27ರಂದು ಚಿತ್ರ ಬಿಡುಗಡೆ ಆಗಲಿದೆ.
ಈ ಚಿತ್ರದಲ್ಲಿ ವಿಜಯ್ ಸೇರಿದಂತೆ ನಟಿ ನಯನತಾರಾ, ಜಾಕಿ ಶ್ರಾಫ್, ವಿವೇಕ್ ಡೇನಿಯಲ್ ಬಾಲಾಜಿ, ಆನಂದ್‍ರಾಜ್, ಇಂದುಜಾ ರವಿಚಂದ್ರನ್, ವರ್ಷ ಬೋಲಮ್ಮ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.
https://twitter.com/ActorAATHMA/status/1161279624904663043?ref_src=twsrc%5Etfw%7Ctwcamp%5Etweetembed%7Ctwterm%5E1161279624904663043&ref_url=https%3A%2F%2Fwww.timesnownews.com%2Fentertainment%2Fsouth-gossip%2Farticle%2Fviral-video-thalapathy-vijay-is-winning-the-internet-as-he-surprises-team-bigil-by-gifting-400-gold-rings%2F468727






































