ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಹಾಗೂ ತಮನ್ನಾ ಭಾಟಿಯಾ (Tamannaah Bhatia) ನಡುವೆ ಬ್ರೇಕಪ್ ಆಗಿರೋದ್ಯಾಕೆ ಎಂಬುದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬೆನ್ನಲ್ಲೇ ಸಂಬಂಧವನ್ನು ಐಸ್‌ಕ್ರೀಮ್‌ನಂತೆ ಆಸ್ವಾದಿಸಬೇಕು ಎಂದು ವಿಜಯ್ ವರ್ಮಾ ಹೇಳಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕಿಶೋರ್‌ಗೆ ‘ಆಚಾರ್ & ಕೋ’ ನಿರ್ದೇಶಕಿ ಆ್ಯಕ್ಷನ್ ಕಟ್
ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್ ವರ್ಮಾ ಅವರು ಸಂಬಂಧವನ್ನು ಐಸ್‌ಕ್ರೀಮ್‌ಗೆ ಹೋಲಿಸಿದ್ದಾರೆ. ನೀವು ಐಸ್‌ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿದರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಮ್‌ನ ತಿಂದು ಮುಂದುವರಿಯಬೇಕು ಎಂದಿದ್ದಾರೆ. ತಮನ್ನಾಗೆ ಪರೋಕ್ಷವಾಗಿ ವಿಜಯ್ ಹೇಳಿದ್ರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದನ್ನೂ ಓದಿ: ಶ್ರೀಲೀಲಾಗೆ ಗೇಟ್ ಪಾಸ್- ರವೀನಾ ಟಂಡನ್ ಪುತ್ರಿಗೆ ಚಾನ್ಸ್
ಇತ್ತೀಚೆಗೆ ವಿಜಯ್ ಹಾಗೂ ತಮನ್ನಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಇದುವರೆಗೂ ಇಬ್ಬರೂ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಬ್ರೇಕಪ್‌ಗೆ ಕಾರಣವೇನು ಎಂಬುದನ್ನು ತಿಳಿಸಿಲ್ಲ. ಮುಂದಿನ ದಿನಗಳಲ್ಲಿ ಬ್ರೇಕಪ್ ಬಗ್ಗೆ ಅಸಲಿ ಕಾರಣ ಬಿಚ್ಚಿಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
ಅಂದಹಾಗೆ, ವಿಜಯ್ ವರ್ಮಾ ಹಾಗೂ ತಮನ್ನಾ ಪ್ರಸ್ತುತ ಬೇರೆ ಬೇರೇ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮನ್ನಾ ನಟನೆಯ ‘ಒಡೆಲಾ 2’ ಚಿತ್ರವು ಇದೇ ಏ.17ರಂದು ರಿಲೀಸ್ ಆಗಲಿದೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma) ನಡುವೆ ಬ್ರೇಕಪ್ ಆಗಿದೆ ಎನ್ನಲಾದ ವಿಚಾರ ಸಾಕಷ್ಟು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದುವರೆಗೂ ಇಬ್ಬರೂ ಇದರ ಬಗ್ಗೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಕಾರ್ಯಕ್ರಮವೊಂದರಲ್ಲಿ ನಟಿ ಬ್ರೇಕಪ್ (Break Up) ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಮಗಳ ಆರೈಕೆಯ ನಡುವೆ ಮತ್ತೆ ಸಿನಿಮಾಗೆ ಮರಳುವ ಬಗ್ಗೆ ದೀಪಿಕಾ ಪಡುಕೋಣೆ ಓಪನ್ ಟಾಕ್
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಬ್ರೇಕಪ್ ಸುದ್ದಿ ಬಗ್ಗೆ ಮಾತನಾಡಿದ ತಮನ್ನಾ, ಇಲ್ಲಿ ನಾನು ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತೇನೆ. ನನಗೆ ಅದು ಸರಿ ಎಂದು ಅನಿಸಿದರೆ ಮಾತ್ರ ಹಂಚಿಕೊಳ್ಳುತ್ತೇನೆ. ಎಲ್ಲಿ ಯಾವ ವಿಷಯವನ್ನು ಹೇಳಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ನನ್ನ ಕಡೆಯಿಂದ ಯಾರ ಬಗ್ಗೆಯೂ ಹಾಗೂ ಯಾವುದರ ಬಗ್ಗೆಯೂ ದೂರುಗಳಿಲ್ಲ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬ್ರೇಕಪ್ ಸುದ್ದಿ ನನ್ನ ವೈಯಕ್ತಿಕ ವಿಚಾರ ಎಂದಿದ್ದಾರೆ.
ಅಂದಹಾಗೆ, ಇತ್ತೀಚೆಗೆ ರವೀನಾ ಟಂಡನ್ ಮನೆಯಲ್ಲಿ ಹೋಳಿ ಹಬ್ಬ ಆಯೋಜಿಸಿದ್ದರು. ಈ ವೇಳೆ, ವಿಜಯ್ ಮತ್ತು ತಮನ್ನಾ ಪ್ರತ್ಯೇಕವಾಗಿ ಭಾಗಿಯಾಗಿದ್ದರು. ಇದು ಇಬ್ಬರ ಬ್ರೇಕಪ್ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.
ಇನ್ನೂ ಇತ್ತೀಚೆಗೆ ವಿಜಯ್ ಮತ್ತು ತಮನ್ನಾ 2 ವರ್ಷಗಳ ಡೇಟಿಂಗ್‌ಗೆ ಬ್ರೇಕ್ ಬಿದ್ದಿದೆ ಎಂದು ವರದಿಯಾಗಿದೆ. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ. ಆದರೆ ಮುಂದಿನ ದಿನಗಳಲ್ಲಿ ಈ ಜೋಡಿ ಬ್ರೇಕಪ್ ಬಗ್ಗೆ ಮಾತನಾಡ್ತಾರಾ? ಎಂದು ಕಾದುನೋಡಬೇಕಿದೆ.
ನಟಿ ತಮನ್ನಾ ಭಾಟಿಯಾ (Tamannaah Bhatia) ಇತ್ತೀಚೆಗೆ ವಿಜಯ್ ವರ್ಮಾ (Vijay Varma) ಜೊತೆ ಬ್ರೇಕಪ್ ಆದ ಬೆನ್ನಲ್ಲೇ ಸಿನಿಮಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾದತ್ತ ನಟಿ ಫೋಕಸ್ ಮಾಡ್ತಿದ್ದಾರೆ. ಬಾಲಿವುಡ್‌ನಲ್ಲಿ ಬಿಗ್ ಪ್ರಾಜೆಕ್ಟ್‌ವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು
ಸದಾ ಹೊಸ ಬಗೆಯ ಪಾತ್ರದಲ್ಲಿ ಮಿಂಚೋ ತಮನ್ನಾಗೆ ಈಗ ಬಂಪರ್ ಆಫರ್‌ವೊಂದು ಸಿಕ್ಕಿದೆ. ಬಾಲಿವುಡ್ ನಟರಾದ ಅಜಯ್ ದೇವಗನ್ (Ajay Devgn) ಹಾಗೂ ಸಂಜಯ್ ದತ್ (Sanjay Dutt) ಜೊತೆ ನಟಿಸುವ ಅವಕಾಶ ತಮನ್ನಾಗೆ ಅರಸಿ ಬಂದಿದೆ. ‘ಮಿಷನ್ ಮಂಗಲ್’ ಡೈರೆಕ್ಟರ್ ಜಗನ್ ಶಕ್ತಿ ನಿರ್ದೇಶನದ ‘ರೇಂಜರ್’ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದಾರೆ.
ಇನ್ನೂ ಅಜಯ್ ದೇವಗನ್‌ಗೆ (Ajay Devgn) ವಿಲನ್ ಆಗಿ ‘ಕೆಜಿಎಫ್ 2’ ಖ್ಯಾತಿಯ ಸಂಜಯ್ ದತ್ (Sanjay Dutt) ಅಬ್ಬರಿಸಲಿದ್ದಾರೆ. ತಮನ್ನಾ ನಾಯಕಿಯಾಗಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ. ಚಿತ್ರೀಕರಣಕ್ಕೆ ಸ್ಟಾರ್ ನಟರೊಂದಿಗೆ ತಮನ್ನಾ ಕೂಡ ಭಾಗಿಯಾಗ್ತಿದ್ದಾರೆ. ಇನ್ನೂ 2026ರಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.
ಇನ್ನೂ ಒಡೆಲಾ 2, ವೇದ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ. ತೆಲುಗು ಹಾಗೂ ಬಾಲಿವುಡ್ ನಟಿ ಸಕ್ರಿಯರಾಗಿದ್ದಾರೆ.
ಡೇಟಿಂಗ್ ಮಾಡುತ್ತಿದ್ದ ನಟಿ ತಮನ್ನಾ ಭಾಟಿಯಾ (Tamannaah Bhatia) ಮತ್ತು ನಟ ವಿಜಯ್ ವರ್ಮಾ (Vijay Varma) ಸಂಬಂಧದಲ್ಲಿ ಈಗ ಬಿರುಕು ಮೂಡಿದೆ. ಇಬ್ಬರು ಈಗ ಬ್ರೇಕಪ್ (Love Breakup) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರೀತಿಯಲ್ಲಿರುವ ಇವರು ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಬರುತ್ತಿತ್ತು. ಆದರೆ ಈಗ ಇಬ್ಬರು ಸಂಬಂಧವನ್ನು ಕಡಿತಗೊಳಿಸಿದ್ದಾರೆ.
ಕೆಲ ವಾರದ ಹಿಂದೆ ಇಬ್ಬರು ಬೇರ್ಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಡಿದೆ. ಇಬ್ಬರ ಸಂಬಧವನ್ನು ಕೊನೆಗೊಳಿಸಿದ್ದರೂ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪರಸ್ಪರ ಗೌರವ ಹೊಂದಿದ್ದಾರೆ. ಇಬ್ಬರೂ ಸ್ನೇಹಿತರಾಗಿ ಉಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.
ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ತಮನ್ನಾ ಭಿನ್ನ ಪ್ರತಿಕ್ರಿಯೆ ನೀಡಿದ್ದರು. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು.
ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ವಿಜಯ್ ವರ್ಮಾ ಅವರ ಭೇಟಿಯಾಯಿತು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Batia) ಸೌತ್ ಮತ್ತು ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಇದೀಗ ನನಗೆ ಮಕ್ಕಳನ್ನು (Children) ಮಾಡಿಕೊಳ್ಳೋಕೆ ಭಯ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಫಸ್ಟ್ ನೈಟ್ CD ಕಳೆದುಕೊಂಡ ತೃಪ್ತಿ ದಿಮ್ರಿ- ಸಖತ್ ಆಗಿದೆ ಹೊಸ ಚಿತ್ರದ ಟ್ರೈಲರ್
ಇತ್ತೀಚೆಗೆ ತಮನ್ನಾ ನೀಡಿದ ಸಂದರ್ಶನವೊಂದರಲ್ಲಿ, ಮದುವೆ ಮತ್ತು ಮಕ್ಕಳು ಮಾಡಿಕೊಳ್ಳುವ ಬಗ್ಗೆ ಓಪನ್ ಆಗಿ ನಟಿ ಮಾತನಾಡಿದ್ದಾರೆ. ತಾಯಂದಿರು, ತಮ್ಮ ಮಕ್ಕಳಿಗೆ ತಮ್ಮ ಸರ್ವಸ್ವವನ್ನೇ ನೀಡ್ತಾರೆ. ಮಕ್ಕಳಿಗೆ ಅಷ್ಟೊಂದು ಪ್ರೀತಿ, ಕಾಳಜಿ, ಆರೈಕೆ ಮಾಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಪಾಲಕರು ನನಗೆ ಸಿಕ್ಕಾಪಟ್ಟೆ ಪ್ರೀತಿ ನೀಡಿದ್ದಾರೆ. ಅವರು ಕೇರ್ ಮಾಡೋದನ್ನು ನೋಡಿದ್ದರೆ, ಪೇರೆಂಟಿಂಗ್ ಡಿಗ್ರಿ ಪಡೆದಿದ್ದಾರೆ ಅನ್ನಿಸುತ್ತದೆ. ಆದರೆ ಇದೆಲ್ಲಾ ನನ್ನಿಂದ ಇದೆಲ್ಲ ಸಾಧ್ಯವಿಲ್ಲ ಅನ್ನಿಸುತ್ತದೆ ಎಂದಿದ್ದಾರೆ.
ಮಕ್ಕಳಿಗೆ ಜನ್ಮ ನೀಡಿದ ನಂತರ ಏನಾಗಬಹುದು ಎಂಬುದನ್ನು ಊಹಿಸಿಕೊಂಡರೆ ನನಗೆ ಭಯವಾಗುತ್ತದೆ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ. ಮಿಲ್ಕಿ ಬ್ಯೂಟಿ ಮುಂದೆ ಮದುವೆ ಆದ್ರೂ ಮಕ್ಕಳನ್ನು ಮಾಡ್ಕೊಳ್ಳೋದಿಲ್ವಾ ಎನ್ನುವ ಪ್ರಶ್ನೆ ಇದೀಗ ಫ್ಯಾನ್ಸ್ ತಲೆಯಲ್ಲಿ ಕೊರೆಯೋಕೆ ಶುರುವಾಗಿದೆ. ಇದನ್ನೂ ಓದಿ:ಆತ್ಮಹತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಮಲೈಕಾ ತಂದೆ ಹೇಳಿದ್ದೇನು?
ಅಂದಹಾಗೆ, ತಮನ್ನಾ ಸದ್ಯ ವಿಜಯ್ ವರ್ಮಾ (Vijay Varma) ಡೇಟಿಂಗ್ ಮಾಡುತ್ತಿದ್ದಾರೆ. ಮದುವೆ ಅದ್ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.
ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು (Samantha) ಸದ್ಯ ವರುಣ್ ಧವನ್ ಜೊತೆಗಿನ ‘ಹನಿ ಬನಿ’ (Honey Bunny) ವೆಬ್ ಸರಣಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ತಮನ್ನಾ ಭಾಟಿಯಾ ಬಾಯ್‌ಫ್ರೆಂಡ್ ಜೊತೆ ಸಮಂತಾ ಕಾಣಿಸಿಕೊಂಡಿದ್ದಾರೆ. ಸ್ಯಾಮ್- ವಿಜಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಒಟಿಟಿ ಕಾರ್ಯಕ್ರಮವೊಂದರಲ್ಲಿ ತಮನ್ನಾ ಬಾಯ್‌ಫ್ರೆಂಡ್ ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಜೊತೆ ಸಮಂತಾ (Samantha) ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಿಜಯ್ ಜೊತೆ ಮಾತನಾಡುತ್ತಾ ನಗು ನಗುತ್ತಾ ಸಮಂತಾ ಬರುತ್ತಿದ್ದಾರೆ. ಇದನ್ನು ನೋಡ್ತಿದ್ದಂತೆ ತಮನ್ನಾ (Tamannaah Bhatia) ಎಲ್ಲಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಕಾಲಿಗೆ ಬಿದ್ದ ಅಭಿಮಾನಿ ವರ್ತನೆ ಕಂಡು ಶಾಕ್ ಆದ ಲಕ್ಷ್ಮಿ ಮಂಚು
ಚಿತ್ರರಂಗದಲ್ಲಿ ಒಬ್ಬ ನಟಿಯನ್ನು ಕಂಡರೆ ಮತ್ತೊಬ್ಬ ನಟಿಗೆ ಆಗೋದೇ ಇಲ್ಲ ಎಂಬ ಮಾತಿದೆ. ಆದರೆ ಅದನ್ನು ಸಮಂತಾ-ತಮನ್ನಾ ಹುಸಿ ಮಾಡಿದ್ದಾರೆ. ಇದೇ ಒಟಿಟಿ ಕಾರ್ಯಕ್ರಮದಲ್ಲಿ ಹಲವು ತಿಂಗಳುಗಳ ಬಳಿಕ ವಿಜಯ್ ಜೊತೆಯೇ ತಮನ್ನಾ ಅವರು ಸಮಂತಾರನ್ನು ಭೇಟಿಯಾಗಿದ್ದಾರೆ. ಇಬ್ಬರು ಖುಷಿಯಿಂದ ತಬ್ಬಿಕೊಂಡು ಫೋಟೋ ತೆಗೆದುಕೊಂಡಿದ್ದಾರೆ. ಅಸಲಿಗೆ ಆ ಫೋಟೋವನ್ನು ಕ್ಲಿಕ್ ಮಾಡಿದ್ದೇ ವಿಜಯ್ ವರ್ಮಾ. ಇಬ್ಬರ ಸ್ನೇಹಕ್ಕೆ ವಿಜಯ್ ಸಾಕ್ಷಿಯಾಗಿದ್ದಾರೆ.
ತಮನ್ನಾರನ್ನು ಭೇಟಿಯಾದ ಖುಷಿಗೆ ಸಮಂತಾ ‘ಓ ಮೈ ಲವ್’ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ, ವಿಜಯ್‌ರನ್ನು ಸಮಂತಾಗೆ ತಮನ್ನಾ ಪರಿಚಯ ಮಾಡಿಸಿಕೊಟ್ಟಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ವಾರಣಾಸಿಯ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಶಿವರಾತ್ರಿಗೂ ಮುನ್ನ ಶಿವನ ದರ್ಶನ ಪಡೆದು ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಶಿಗೆ ಭೇಟಿ ಕೊಟ್ಟಿರುವ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ತಮನ್ನಾ ಟೆಂಪಲ್ ರನ್ ಮಾಡಿದ್ದಾರೆ. ಜ್ಯೋತಿರ್ಲಿಂಗಕ್ಕೆ ನಟಿ ಪೂಜೆ ಸಲ್ಲಿಸಿದ್ದಾರೆ. ಸದ್ಯದಲ್ಲೇ ವಿಜಯ್ ವರ್ಮಾ (Vijay Varma) ಜೊತೆ ತಮನ್ನಾ ಮದುವೆಯಾಗಲು ನಿರ್ಧರಿಸಿದ್ದಾರೆ. ಶುಭಕಾರ್ಯಕ್ಕೆ ಚಾಲನೆ ನೀಡುವ ಮುನ್ನ ದೇವರ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ.
ಕಳೆದ 2 ವರ್ಷಗಳಿಂದ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಮನ್ನಾ ಭಾಟಿಯಾ ಎಂಗೇಜ್ ಆಗಿದ್ದಾರೆ. ಇತ್ತೀಚಿನ ಸಂದರ್ಶನಗಳಲ್ಲಿ ಡೇಟಿಂಗ್ ಬಗ್ಗೆ ತಮನ್ನಾ ರಿವೀಲ್ ಮಾಡಿದ್ದರು. ಮದುವೆ ಪ್ಲ್ಯಾನಿಂಗ್ ಬಗ್ಗೆ ಇಬ್ಬರು ಮುಕ್ತವಾಗಿ ಸಂದರ್ಶನಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.
‘ಲಸ್ಟ್ ಸ್ಟೋರಿಸ್ 2’ನಲ್ಲಿ ತಮನ್ನಾ- ವಿಜಯ್ ವರ್ಮಾ ಬೋಲ್ಡ್ ಆಗಿ ನಟಿಸಿದ್ದರು. ವೆಬ್ ಸಿರೀಸ್‌ನಲ್ಲಿ ವಿಜಯ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರೀಕರಣದ ವೇಳೆ ಪರಿಚಯವಾದ ಸ್ನೇಹ, ಪ್ರೀತಿಗೆ ತಿರುಗಿತ್ತು. ಇನ್ನೂ ಮದುವೆ ಯಾವಾಗ ಎಂದು ಈ ಜೋಡಿ ಅಧಿಕೃತ ಡೇಟ್ ಅನೌನ್ಸ್ ಮಾಡುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಕಿರುತೆರೆಗೆ ಕಾಲಿಟ್ಟ ಹಾಸ್ಯ ನಟ ಟೆನ್ನಿಸ್ ಕೃಷ್ಣ
‘ಜೈಲರ್’ (Jailer) ಚಿತ್ರದ ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ ಮೇಲೆ ಅವರಿಗೆ ಬೇಡಿಕೆ ಹೆಚ್ಚಾಗಿದೆ. ತೆಲುಗಿನ ಜೊತೆಗೆ ಹೆಚ್ಚೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಉತ್ತಮ ಕಥೆಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.
ಸದ್ಯ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ಸ್ತ್ರೀ ಚಿತ್ರದ ಪಾರ್ಟ್ 2ನಲ್ಲಿ ತಮನ್ನಾ ಭಾಟಿಯಾ ಅವರು ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕ್ತಿದ್ದಾರೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್- ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟಿ ತಮನ್ನಾ- ವಿಜಯ್ ವರ್ಮಾ (Vijay Varma) ಡೇಟಿಂಗ್ ಸುದ್ದಿಯೇನು ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಕೂಡ ಇತ್ತೀಚಿಗೆ ಎಂಗೇಜ್ ಆಗಿರೋದಾಗಿ ರಿವೀಲ್ ಮಾಡಿದ್ದರು. ಹೀಗಿರುವಾಗ ಈ ಜೋಡಿ ಇತ್ತೀಚಿಗೆ ಮಾಲ್ಡೀವ್ಸ್‌ಗೆ ಹೋಗಿದ್ದರು. ಈಗ ತಮ್ಮ ಊರಿಗೆ ವಾಪಸ್ ಆಗಿದ್ದಾರೆ. ಮಾಲ್ಡೀವ್ಸ್ನಲ್ಲಿ ತಮನ್ನಾ (Tamannaah Bhatia) ಮೋಜು- ಮಸ್ತಿ (Enjoy) ಮಾಡಿದ್ರಾ? ಎಂದು ಕೇಳಿದ್ದಕ್ಕೆ ನಟ ವಿಜಯ್ ಕಿಡಿಕಾರಿದ್ದಾರೆ. ಇದನ್ನೂ ಓದಿ:‘ಅನಾವರಣ’ ಚಿತ್ರದ ಮೊದಲ ಹಾಡು ರಿಲೀಸ್: ಅರ್ಜುನ್ ಯೋಗಿ ಸಿನಿಮಾ
ಬಾಲಿವುಡ್‌ನಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಜೋಡಿ ಅಂದರೆ ವಿಜಯ್- ತಮನ್ನಾ ಭಾಟಿಯಾ. ಸದಾ ಒಂದಲ್ಲಾ ಒಂದು ವಿಚಾರವಾಗಿ ಈ ಜೋಡಿ ಸುದ್ದಿಯಲ್ಲಿರುತ್ತಾರೆ. ಇಬ್ಬರು ಜೊತೆಯಾಗಿ ಮಾಲ್ಡೀವ್ಸ್‌ಗೆ (Maldives) ಹಾರಿದ್ದರು. ಮಾಲ್ಡೀವ್ಸ್‌ನ ಸುಂದರ ಫೋಟೋಗಳನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಟ್ರಿಪ್ ಮುಗಿಸಿ ಮುಂಬೈಗೆ ಬಂದಿಳಿದಿದ್ದಾರೆ.
ಆಗ ವಿಜಯ್ ವರ್ಮಾಗೆ, ಪಾಪರಾಜಿಗಳು ಟ್ರಿಪ್ ಹೇಗಿತ್ತು ಸರ್ ಎಂದು ಕೇಳಿದ್ದಾರೆ. ಚೆನ್ನಾಗಿತ್ತು ಎಂದು ಕೂಲ್ ಆಗಿ ಉತ್ತರಿದ್ದಾರೆ. ಬಳಿಕ ಮಾಲ್ಡೀವ್ಸ್‌ನಲ್ಲಿ ತಮನ್ನಾ ಜೊತೆ ಎಂಜಾಯ್ ಮಾಡಿದ್ರಾ? ಎಂದು ಕೇಳಿದ್ದಾರೆ. ಈ ಪ್ರಶ್ನೆ ಕೇಳ್ತಿದ್ದಂತೆ ನಟ ಸಿಟ್ಟಾಗಿದ್ದಾರೆ. ಈ ರೀತಿ ನೀವು ಮಾತನಾಡುವಂತಿಲ್ಲ ಎಂದು ಹೇಳಿದ್ದಾರೆ. ವಿಜಯ್ ವರ್ಮಾ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ.
ನಟಿ ತಮನ್ನಾ, ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಆದರೆ ಅವರು ಯಾರ ಜೊತೆನೂ ಮಾತನಾಡದೇ ಕಾರು ಹತ್ತಿ ತೆರಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಬಾಲಿವುಡ್‌ನ ಸದ್ಯದ ಲೇಟೆಸ್ಟ್ ಜೋಡಿ ಅಂದರೆ ವಿಜಯ್ ವರ್ಮಾ- ತಮನ್ನಾ ಭಾಟಿಯಾ (Tamannah Bhatia) ಇಬ್ಬರ ಲವ್ವಿ-ಡವ್ವಿ ಸದ್ಯ ಬಿಟೌನ್ ಅಡ್ಡಾದಲ್ಲಿ ಸೌಂಡ್ ಮಾಡುತ್ತಿದೆ. ಅಭಿಮಾನಿಗಳು, ಮದುವೆ ಯಾವಾಗ ಅಂತಾ ಕೇಳುತ್ತಾ ಇದ್ರೆ, ಇತ್ತ ಮನೆ ಕಡೆಯಿಂದಲೂ ಇಬ್ಬರ ಮದುವೆಗೆ ಒತ್ತಡ ಜಾಸ್ತಿಯಾಗುತ್ತಿದೆಯಂತೆ.
‘ಲಸ್ಟ್ ಸ್ಟೋರಿಸ್ 2’ (Lust Stories 2) ಚಿತ್ರೀಕರಣದಲ್ಲಿ ಸಂದರ್ಭದಲ್ಲಿ ವಿಜಯ್-ತಮನ್ನಾಗೆ ಪ್ಯಾರ್ ಶುರುವಾಗಿದೆ. ಕಳೆದ 2 ವರ್ಷದಿಂದ ಇಬ್ಬರು ಡೇಟ್ ಮಾಡ್ತಿದ್ದಾರೆ. ಇಬ್ಬರ ಲವ್ ಕಥೆ ಜಗತ್ತಿಗೆ ಗೊತ್ತಾಗಿದೆ. ಇಬ್ಬರೂ ಲವ್ ಮಾಡುತ್ತಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ
ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಅವರನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಒತ್ತಡ ಹೇರುತ್ತಾರೆಯೇ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ವಿಜಯ್ ಹೀಗೊಂದು ಉತ್ತರ ನೀಡಿದ್ದು, ಇದನ್ನು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ನಾನು ಮಾರ್ವಾಡಿ ಕುಟುಂಬದವ.. ನಮ್ಮ ಸಮುದಾಯದಲ್ಲಿ, ಗಂಡು ಮಕ್ಕಳ ಮದುವೆಯ ವಯಸ್ಸು 16 ವರ್ಷ. ಹಾಗಾಗಿ ನನ್ನೊಂದಿಗೆ ಎಲ್ಲವೂ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ನಾನು ಮದುವೆಯ ವಯಸ್ಸನ್ನು ಮೀರಿತ್ತು. ಬಳಿಕ ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟೆ.
ನಾನು ಈ ಪ್ರಶ್ನೆಗಳ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ವೃತ್ತಿಜೀವನದ ಬಗ್ಗೆ ಮಾತ್ರ ಗಮನಹರಿಸಿದೆ. ಆದರೆ ಈಗಲೂ ನನ್ನ ತಾಯಿ ನನ್ನ ಮದುವೆಗೆ ಒತ್ತಾಯಿಸುತ್ತಾರೆ. ಅವರು ಇನ್ನೂ ಪ್ರತಿ ಫೋನ್ ಕರೆಯಲ್ಲಿ ಮದುವೆಯ ಬಗ್ಗೆ ಕೇಳುತ್ತಾರೆ, ಆದರೆ ನಾನು ಅದಕ್ಕೆ ಉತ್ತರ ಕೊಡದೇ ತಪ್ಪಿಸಿಕೊಳ್ಳುತ್ತಿದ್ದೇನೆ. ನಾನು ನನ್ನ ಜೀವನದಲ್ಲಿನ್ನೂ ಬೆಳೆಯುತ್ತಿದ್ದೇನೆ, ಸದ್ಯ ನಾನು ನನ್ನ ಕೆರಿಯರ್ ಕಡೆ ಗಮನ ಕೊಡುತ್ತೇನೆ ಎಂದು ವಿಜಯ್ ವರ್ಮಾ ಹೇಳಿದ್ದಾರೆ.
ದಕ್ಷಿಣದ ಖ್ಯಾತ ನಟಿ ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಆದರೂ, ಈ ವಿಚಾರವಾಗಿ ಆಗಾಗ್ಗೆ ಇಬ್ಬರೂ ಸುದ್ದಿ ಆಗುತ್ತಾರೆ. ನಿನ್ನೆಯಷ್ಟೇ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.
ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.
ಆದರೆ, ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು ತಮನ್ನಾ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ
ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು. ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.
ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ನಂತರ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದು ಸಲ ಒಪ್ಪಿಕೊಂಡು ಮತ್ತೊಂದು ಸಲ ಗಾಸಿಪ್ ಎಂದು ಹೇಳುತ್ತಾ ಡೇಟಿಂಗ್ ವಿಚಾರದಲ್ಲಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ ಈ ಸ್ಟಾರ್ ಜೋಡಿ.