Tag: vijay shekar

  • ಉಂಡ ಮನೆಗೆ ಕನ್ನ : ಪೇಟಿಎಂ ಮುಖ್ಯಸ್ಥನಿಗೆ ಬ್ಲಾಕ್‍ಮೇಲ್‍ಗೈದ ಕಾರ್ಯದರ್ಶಿ ಅರೆಸ್ಟ್

    ಉಂಡ ಮನೆಗೆ ಕನ್ನ : ಪೇಟಿಎಂ ಮುಖ್ಯಸ್ಥನಿಗೆ ಬ್ಲಾಕ್‍ಮೇಲ್‍ಗೈದ ಕಾರ್ಯದರ್ಶಿ ಅರೆಸ್ಟ್

    ನವದೆಹಲಿ: ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಅವರಿಗೆ ಬ್ಲ್ಯಾಕ್‍ಮೇಲ್ ಮಾಡಿ 20 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕಾರ್ಯದರ್ಶಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಶರ್ಮ ಅವರ ಕಾರ್ಯದರ್ಶಿ ಸೋನಿಯಾ ಧವನ್ ತನ್ನ ಸಹೋದ್ಯೋಗಿ ದೇವೇಂದರ್ ಕುಮಾರ್ ಮತ್ತು ಪತಿ ರೂಪಕ್ ಜೈನ್ ಜೊತೆಗೊಡಿ ಈ ಕೃತ್ಯ ಎಸಗಿದ್ದಾಳೆ. ಸೋಮವಾರ ಮಧ್ಯಾಹ್ನ ನೋಯ್ಡಾದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದು ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಕೋಲ್ಕತ್ತಾದ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.

    ಕದ್ದಿದ್ದು ಹೇಗೆ?
    2010ರಲ್ಲಿ ಸ್ಥಾಪನೆಯಾದ ಪೇಟಿಎಂ ಕಂಪನಿಯಲ್ಲಿ ಸೋನಿಯಾ ಆರಂಭದಿಂದಲೂ ಶರ್ಮಾ ಅವರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಸೋನಿಯಾ ವಿಜಯ್ ಅವರ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದಳು. ಈ ಸಮಯದಲ್ಲಿ ಆಕೆ ರಹಸ್ಯವಾಗಿ ಗ್ರಾಹಕರ ಮಾಹಿತಿಗಳನ್ನು ಕೋಲ್ಕತ್ತಾದಲ್ಲಿದ್ದ ಸ್ನೇಹಿತ ರೋಹಿತ್ ಚೋಮಲ್ ಕಳುಹಿಸಿದ್ದಳು.

    ಚೋಮಲ್ ಈ ಮಾಹಿತಿಯನ್ನು ಇಟ್ಟು ಕೊಂಡು ಶರ್ಮಾ ಅವರ ಸಹೋದರ ಪೇಟಿಎಂ ಉಪಾಧ್ಯಕ್ಷ ಅಜಯ್ ಶಂಕರ್ ಗೆ ಕರೆ ಮಾಡಿ, ಗ್ರಾಹಕರ ಮಾಹಿತಿ ಸೋರಿಕೆಯಾದರೆ ಕಂಪನಿಗೆ ಭಾರೀ ನಷ್ಟ ಉಂಟಾಗಲಿದೆ. ಹೀಗಾಗಿ 20 ಕೋಟಿ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ.

    ಬ್ಲಾಕ್ ಮೇಲ್ ಮಾಡುತ್ತಿರುವ ವಿಚಾರ ಗೊತ್ತಾಗಿ ಶರ್ಮಾ ಅವರು ಪೊಲೀಸ್ ಠಾಣೆಯಲ್ಲಿ ತನ್ನ ಉದ್ಯೋಗಿಗಳ ವಿರುದ್ಧ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಕಳ್ಳತನ, ಸುಲಿಗೆ, ಮೋಸ, ಅಪರಾಧದ ಅಪರಾಧ ಮತ್ತು ಪಿತೂರಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv