Tag: vijay seethupathi

  • ಪುರಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ಸಂಯುಕ್ತ ಮೆನನ್ ಎಂಟ್ರಿ

    ಪುರಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ಸಂಯುಕ್ತ ಮೆನನ್ ಎಂಟ್ರಿ

    ಡ್ಯಾಶಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಅವರ ಬಹುನಿರೀಕ್ಷಿತ ಸಿನಿಮಾದಿಂದ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಈಗಾಗಲೇ ತಾರಾ ಬಳಗದ ಮೂಲಕ ಸುದ್ದಿಯಾಗಿರುವ ಚಿತ್ರಕ್ಕೀಗ ಪ್ರತಿಭಾನ್ವಿತ ನಟಿ ಸಂಯುಕ್ತ ಮೆನನ್ (Samyuktha Menon) ಎಂಟ್ರಿ ಕೊಟ್ಟಿದ್ದಾರೆ.

    ಪುರಿ ಕನೆಕ್ಟ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ (Puri Jagannadh) ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಟಬು, ದುನಿಯಾ ವಿಜಯ್ (Duniya Vijay) ನಟಿಸುವುದು ಖಚಿತವಾಗಿದೆ. ಇದೀಗ ನಟಿ ಸಂಯುಕ್ತ ಮೆನನ್ ಅವರನ್ನು ಚಿತ್ರತಂಡ ಸ್ವಾಗತಿಸಿದೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

    ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಸಂಯುಕ್ತ ನಾಯಕಿ ಪಾತ್ರವನ್ನು ಪೋಷಣೆ ಮಾಡುತ್ತಿಲ್ಲ. ಬದಲಾಗಿ ಪ್ರಮುಖ ಪಾತ್ರವೊಂದಲ್ಲಿ ಅಭಿನಯಿಸಲಿದ್ದಾರೆ. ಕಥೆ ಮತ್ತು ಅವರ ಪಾತ್ರದಿಂದ ರೋಮಾಂಚನಗೊಂಡಿರುವ ಸಂಯುಕ್ತ ಚಿತ್ರೀಕರಣವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಮಾಡಲು ಸಿದ್ಧವಾಗಿದ್ದು, ಜೂನ್ ಕೊನೆಯ ವಾರದಲ್ಲಿ ರೆಗ್ಯೂಲರ್ ಚಿತ್ರೀಕರಣ ಪ್ರಾರಂಭವಾಗಲಿದೆ. ಇದನ್ನೂ ಓದಿ: KRS ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣಕ್ಕೆ ಮಾಜಿ ಸಂಸದೆ ಸುಮಲತಾ ವಿರೋಧ

    ಈ ಪ್ಯಾನ್ ಇಂಡಿಯಾ ಸಿನಿಮಾವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಘಟಾನುಘಟಿ ಕಲಾವಿದರ ಎಂಟ್ರಿಯಿಂದಾಗಿ ಪಾತ್ರವರ್ಗದ ತೂಕ ಹೆಚ್ಚುತ್ತಿದೆ.

  • Exclusive: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಪೋಸ್ಟರ್ ಔಟ್

    Exclusive: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಪೋಸ್ಟರ್ ಔಟ್

    ಚಿತ್ರರಂಗದಲ್ಲಿ ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಈ ಹಿಂದೆಯೇ ಸಿದ್ದರಾಮಯ್ಯ (Siddaramaiah)  ಅವರ ಜೀವನಾಧರಿತ (Biopic) ಸಿನಿಮಾ ಬರುವ ಬಗ್ಗೆ ಅಪ್‌ಡೇಟ್ ಸಿಕ್ಕಿತ್ತು. ಇದೀಗ ರಾಮನವಮಿ (Ramanavami) ಹಬ್ಬದ ಶುಭ ಸಂದರ್ಭದಲ್ಲಿ ಸಿದ್ದರಾಮಯ್ಯ ಬಯೋಪಿಕ್‌ನ ಪೋಸ್ಟರ್ ರಿಲೀಸ್ ಆಗಿದೆ.

    ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ಸತ್ಯ ರತ್ನಂ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸಿದ್ದರಾಮಯ್ಯ ಬಯೋಪಿಕ್‌ಗೆ `ಲೀಡರ್ ರಾಮಯ್ಯ’ (Leader Ramaiah) ಎಂದು ಹೆಸರಿಡಲಾಗಿದೆ. ಗುರುವಾರ (ಮಾ.30) ರಾಮನವಮಿಯಂದು ಸಿದ್ದರಾಮಯ್ಯ ಮನೆಯ ಮುಂದೆಯೇ ಚಿತ್ರದ ಪೋಸ್ಟರ್ ಲಾಂಚ್ ಮಾಡಲಾಗಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾರೆಕ್ಟರ್‌ಗೆ ತಮಿಳು ನಟ ವಿಜಯ್ ಸೇತುಪತಿ (Vijay Seethupathi) ಅವರೇ ಸೂಕ್ತ ಎಂದೇನಿಸಿ ಈಗಾಗಲೇ ಅಪ್ರೋಚ್ ಮಾಡಲಾಗಿದೆ. ವಿಜಯ್ ಕೂಡ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮುಂದಿನ ತಿಂಗಳಿಂದ ಸಿನಿಮಾ ಶೂಟಿಂಗ್ ನಡೆಯಲಿದೆ. ಮಾ.30ರಂದು ಸಂಜೆ ಮತ್ತೆ ಅಧಿಕೃತವಾಗಿ ಸಿದ್ದರಾಮಯ್ಯ ಅವರ ಕಡೆಯಿಂದಲೇ `ಲೀಡರ್ ರಾಮಯ್ಯ’ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ.

    ಸಿನಿಮಾದಲ್ಲಿ ರಾಜಕೀಯ ಜರ್ನಿ ಜೊತೆಗೆ ಲವ್ ಸ್ಟೋರಿ ಎಳೆಯೂ ಇರಲಿದೆ. ಸಿದ್ದರಾಮಯ್ಯ ಅವರು ಹೇಳಿದ ಕಥೆಗಳ ಜೊತೆಗೆ ಸಿನಿಮಾವನ್ನು ಕಮರ್ಷಿಯಲ್ ಆಗಿ ಮಾಡಲಾಗುತ್ತಿದೆ. 50 ಕೋಟಿ ಬಜೆಟ್‌ನಲ್ಲಿ ಚಿತ್ರ ಮೂಡಿ ಬರಲಿದೆ. ಅವರ ಕಾಲೇಜ್ ದಿನಗಳು, ಬಾಲ್ಯ ಜೀವನ, ರಾಜಕೀಯ ಎಂಟ್ರಿ ಇವೆಲ್ಲಾ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಹಯಾತ್ ಫೀರ್ ನಿರ್ಮಾಣದ ಈ ಸಿನಿಮಾಗೆ ವಿಜಯ್ ಸೇತುಪತಿ ನಟಿಸೋದು ಫಿಕ್ಸ್ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್ ನೋಡಲು ಫ್ಯಾನ್ಸ್ ಎದರು ನೋಡ್ತಿದ್ದಾರೆ.