Tag: Vijay Rally Stampede

  • TVK Vijay Rally Stampede | ಮದ್ರಾಸ್‌ ಹೈಕೋರ್ಟ್‌ನಲ್ಲಿಂದು ವಿಚಾರಣೆ – ಸಾವಿನ ಸಂಖ್ಯೆ 41ಕ್ಕೆ ಏರಿಕೆ

    TVK Vijay Rally Stampede | ಮದ್ರಾಸ್‌ ಹೈಕೋರ್ಟ್‌ನಲ್ಲಿಂದು ವಿಚಾರಣೆ – ಸಾವಿನ ಸಂಖ್ಯೆ 41ಕ್ಕೆ ಏರಿಕೆ

    – ಸಿಬಿಐ ತನಿಖೆಗೆ ಆಗ್ರಹಿಸಿ ಕೋರ್ಟ್‌ ಮೆಟ್ಟಿಲೇರಿದ್ದ ನಟ ವಿಜಯ್‌ & ಟೀಂ

    ಚೆನ್ನೈ: ಕರೂರು ರಾಜಕೀಯ ರ‍್ಯಾಲಿವೇಳೆ ಸಂಭವಿಸಿದ ಕಾಲ್ತುಳಿತ ದುರಂತದ (TVK Vijay Rally Stampede) ಬಗ್ಗೆ ಸ್ವತಂತ್ರ ತನಿಖೆ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ ದಳಪತಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ನಡೆಯಲಿದೆ.

    ವಿಜಯ್ ಅವರ ಪರವಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಕಾನೂನು ತಂಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆಯಲಿದೆ. ಈ ನಡುವೆ ರ‍್ಯಾಲಿಗಳಿಗೆ ಇನ್ಮುಂದೆ ಪ್ರೋಟೋಕಾಲ್‌ ತಯಾರಿಸುವವರೆಗೆ ನಟ ವಿಜಯ್‌ ರ‍್ಯಾಲಿಗೂ ಅನುಮತಿ ನೀಡದಂತೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯೂ ಇಂದೇ ವಿಚಾರಣೆಗೆ ಬರುವ ಸಾಧ್ಯತೆ. ಇದನ್ನೂ ಓದಿ: Vijay Rally Stampede | ದುರಂತದ ಬೆನ್ನಲ್ಲೇ ನಟ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ – ಬಿಗಿ ಭದ್ರತೆ

    ಈ ಕುರಿತು ಮಾತನಾಡಿರುವ ಟಿವಿಕೆ ಪಕ್ಷದ ವಕೀಲ ಅರಿವಳಗನ್‌, ಕರೂರಿನಲಿ ನಡೆದ ಘಟನೆ ಹಿಂದೆ ಕ್ರಿಮಿನಲ್‌ ಪಿತೂರಿ ಇದೆ. ಆದ್ದರಿಂದ ನಾವು ರಾಜಕೀಯ ಸಂಸ್ಥೆಯ ಮೂಲಕ ತನಿಖೆ ಮಾಡೋದು ಬೇಡ. ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯವೇ ವಿಶೇಷ ತನಿಖಾ ತಂಡವನ್ನ ರಚಿಸಬೇಕು. ಇಲ್ಲದಿದ್ದರೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಅಂತ ಆಗ್ರಹಿಸಿದ್ದಾರೆ,

    ಸಾವಿನ ಸಂಖ್ಯೆ ಏರಿಕೆ
    ಇನ್ನೂ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕರೂರು ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಶಾರದಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಸಿಸಿಟಿವಿ, ಡ್ರೋನ್‌ ವಿಡಿಯೋ ಪರಿಶೀಲನೆ
    ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿರುವ ಪೊಲೀಸರು ಕಾಲ್ತುಳಿತದ ಸ್ಥಳದಲ್ಲಿರುವ ಎಲ್ಲಾ ಸಿಸಿಕ್ಯಾಮರಾ, ಡ್ರೋನ್ ವಿಡಿಯೋ ಹಾಗೂ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋಗಳನ್ನ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

  • Vijay Rally Stampede | ದುರಂತದ ಬೆನ್ನಲ್ಲೇ ನಟ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ – ಬಿಗಿ ಭದ್ರತೆ

    Vijay Rally Stampede | ದುರಂತದ ಬೆನ್ನಲ್ಲೇ ನಟ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ – ಬಿಗಿ ಭದ್ರತೆ

    ಚೆನ್ನೈ: ಕರೂರಿನ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ (TVK Vijay Rally Stampede) ಬೆನ್ನಲ್ಲೇ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ ಬಂದಿದೆ.

    ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲೇ ಸ್ಥಳೀಯ ಚೆನ್ನೈ ನಗರ ಮತ್ತು ಸಿಆರ್‌ಪಿಎಫ್ (CRPF) ಸಿಬ್ಬಂದಿಯನ್ನ ಮನೆಯ ಸುತ್ತಲೂ ನಿಯೋಜಿಸಲಾಗಿದೆ. ಕಾಲ್ತುಳಿತದಲ್ಲಿ ಸಾವು ನೋವು ಸಂಭವಿಸಿದ ಹಿನ್ನೆಲೆ ಶನಿವಾರ ಮಧ್ಯರಾತ್ರಿಯಿಂದಲೇ ವಿಜಯ್‌ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಬೆದರಿಕೆ ಬಂದ ಹಿನ್ನೆಲೆ ಶ್ವಾನದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳಿಂದ ಮನೆಯ ಸುತ್ತಲೂ ಹಾಗೂ ಮನೆಯ ಒಳಾಂಗಣವನ್ನ ಪರಿಶೀಲನೆ ಮಾಡಲಾಗಿದೆ.

    ದುರಂತದ ಹೇಗಾಯ್ತು? ಆಮೇಲೆ ಏನಾಯ್ತು?
    ತಮಿಳುನಾಡು (Tamil Nadu) ರಾಜಕೀಯ ಪ್ರವೇಶಿಸಿರುವ ನಟ ದಳಪತಿ ವಿಜಯ್ ಕರೂರು ಜಿಲ್ಲಾ ಕೇಂದ್ರದ 2 ಕಿ.ಮೀ. ದೂರದ ವೇಲುಸ್ವಾಮಿಪುರಂನ ಹೆದ್ದಾರಿಯಲ್ಲಿ ಚುನಾವಣಾ ರ‍್ಯಾಲಿ ಹಮ್ಮಿಕೊಂಡಿದ್ದರು. ಶನಿವಾರ ರಾತ್ರಿ 7:15 ಸುಮಾರಿಗೆ ಏಕಾಏಕಿ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಪೈಕಿ 2 ವರ್ಷದ ಮಗು ಸೇರಿ 10 ಮಕ್ಕಳು, 17 ಮಹಿಳೆಯರೂ ಸೇರಿದ್ದಾರೆ. ಮೃತ 28 ಜನ ಕರೂರು ಜಿಲ್ಲೆಯವರಾಗಿದ್ದರೆ ಉಳಿದವರು ಈರೋಡ್, ತಿರುಪುರ, ಧಾರಾಪುರಂ, ಸೇಲಂ ಜಿಲ್ಲೆಯವರಾಗಿದ್ದಾರೆ.

    ಎಲ್ಲಾ 40 ಜನರ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಯೇ ಸಾವನ್ನಪ್ಪಿರೋದು ಅಂತ ದೃಢವಾಗಿದೆ. ಶವಗಳ ರಾಶಿ ನೋಡಿದ ಸಚಿವ ಅನ್ಬಿಲ್ ಮಹೇಶ್ ಕಣ್ಣೀರು ಹಾಕಿದರು. ಮೃತರಿಗೆ ವಿಜಯ್ 20 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಿಸಿದರೆ.. ಸಿಎಂ ಸ್ಟಾಲಿನ್ ಅವರು ಮೃತರಿಗೆ 10 ಲಕ್ಷ ಹಾಗೂ ಗಾಯಾಳುಗಳಿಗೆ 1 ಲಕ್ಷ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಮೃತರಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಪ್ರಕಟಿಸಿದ್ದಾರೆ. ತಮಿಳುನಾಡು ಬಿಜೆಪಿ ಕೂಡ 1 ಲಕ್ಷ ಪರಿಹಾರ ಪ್ರಕಟಿಸಿದೆ.

    ಕರೂರು ಕಾಲ್ತುಳಿದಲ್ಲಿ ಗಾಯಾಗಳುಗಳ ಸಂಖ್ಯೆ 150ಕ್ಕೆ ಏರಿದೆ. ಕರೂರು, ತಿರುಚ್ಚಿ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ದುರ್ಘಟನೆ ಹಿನ್ನೆಲೆಯಲ್ಲಿ ಇಡೀ ಕರೂರು ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟುಗಳನ್ನು ವರ್ತಕರೇ ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಕಾಲ್ತುಳಿತ ಘಟನಾ ಸ್ಥಳವಾದ ಹೆದ್ದಾರಿಯಲ್ಲಿ ಚಪ್ಪಲಿ-ಶೂಗಳ ರಾಶಿ, ಹರಿದ ಬಟ್ಟೆಗಳು, ಮುರಿದು ಹೋಗಿರುವ ಮರದ ಕಂಬಗಳು, ನಜ್ಜುಗುಜ್ಜಾಗಿರುವ ನೀರಿನ ಬಾಟೆಲ್‌ಗಳ ರಾಶಿಯೇ ಕಂಡು ಬಂದಿತ್ತು.

    ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆ
    ಕರೂರು ವಿಜಯ್ ರ‍್ಯಾಲಿಯಲ್ಲಿ ಸಾವನ್ನಪ್ಪಿದ್ದವರದ್ದು ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕಥೆ. ನೆಚ್ಚಿನ ನಟನ ನೋಡಲು ಪತ್ನಿ ಕಣ್ಮರೆಯಾಗಿದೆ ಅಂತ ಇಡೀ ಕುಟುಂಬ ರಾತ್ರಿಯೆಲ್ಲಾ ಹುಡುಕಾಡಿದೆ. ಆದರೆ, ಬೆಳಗ್ಗೆ ಜಿಲ್ಲಾಡಳಿತದಿಂದ ಕರೆ ಬಂದಿತ್ತು. ಆತಂಕದಲ್ಲಿ ಹೋಗಿ ನೋಡಿದಾಗ ನನ್ನ ಹೆಂಡತಿ ಹೆಣವಾಗಿದ್ದಳು ಅಂತ ಕೈಮೇಲಿನ ಅಚ್ಚೆ ನೋಡಿ ಪತಿ ಗುರುತಿಸಿದ್ದಾರೆ. ಅಂದಹಾಗೆ, ದಂಪತಿಗೆ ಒಂದು ವರ್ಷದ ಮಗು ಇದ್ದು ತಾಯಿಯನ್ನು ಕಳೆದುಕೊಂಡಿದೆ. ಆಸ್ಪತ್ರೆ ಮುಂದೆ ತಮ್ಮವರ ಕಳೆದುಕೊಂಡ ಕುಟುಂಬಸ್ಥರು ಎದೆ ಬಡಿದುಕೊಂಡು ಗೋಳಾಡ್ತಿರೋದನ್ನು ನೋಡಿದ್ರೆ ಕರುಳು ಚುರ್ ಅನ್ನಿಸುತ್ತೆ. ಈ ಮಧ್ಯೆ, ಆಪ್ತರನ್ನು ಕಳೆದುಕೊಂಡ ಕುಟುಂಬವೊಂದು ವಿಜಯ್ ನಾಶವಾಗಿ ಹೋಗ್ತಾನೆ ಅಂತ ಹಿಡಿಶಾಪ ಹಾಕಿದೆ.

  • TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    – ನಿತ್ರಾಣಗೊಂಡಿದ್ದ ಮಗುವನ್ನ ಆಸ್ಪತ್ರೆಗೆ ಹೊತ್ತು ತಂದಿದ್ದ ತಂದೆ; ಮಗು ಶವ ಹಿಡಿದು ಗೋಳಾಡಿದ ತಾಯಿ
    – ಸಾವಿನ ಸಂಖ್ಯೆ 40ಕ್ಕೆ ಏರಿಕೆ

    ಚೆನ್ನೈ: ಕಾಲ್ತುಳಿತದಲ್ಲಿ (Vijay Rally Stampede) ನಿತ್ರಾಣಗೊಂಡಿದ್ದ ಮಗುವನ್ನು ತಂದೆಯೊಬ್ಬರು ಬಿಗಿದಪ್ಪಿಕೊಂಡು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ. ತನ್ನ ಉಸಿರು ಕೊಟ್ಟಾದ್ರೂ ಮಗುವನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಲ್ಲಿದ್ದ ಮಗುವಿನ ಉಸಿರು ನಿಂತುಹೋಗಿದ್ದನ್ನು ಕಂಡು ಗೋಳಾಡಿದ್ದಾರೆ. ಇತ್ತ ಮಗುವಿನ ಸಾವು ಅರಗಿಸಿಕೊಳ್ಳಲಾದ ತಾಯಿ ಮಗುವಿನ ಮೃತದೇಹ ಅಪ್ಪಿ ಗೋಳಾಡಿದ್ದಾರೆ… ಈ ದೃಶ್ಯ ಕಂಡುಬಂದದ್ದು ತಮಿಳುನಾಡಿನ (TamilNadu) ಕರೂರಿನಲ್ಲಿ.

    ಹೌದು. ತಮಿಳುನಾಡಿನ ಕರೂರಿನಲ್ಲಿ (Karur) ನಡೆದ ಕಾಲ್ತುಳಿತ ಘೋರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಆದ್ರೆ ಈ ದುರಂತದಲ್ಲಿ 2 ವರ್ಷದ ಪುಟ್ಟ ಕಂದಮ್ಮ ಬಲಿಯಾಗಿರುವುದು ಕಟುಕರ ಕರುಳು ಸಹ ಹಿಂಡುವಂತಿತ್ತು. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್

    ದುರಂತರದಲ್ಲಿ ಮೃತಪಟ್ಟ 40 ಜನರಲ್ಲಿ 10 ಮಂದಿ ಅಪ್ರಾಪ್ತರಿದ್ದಾರೆ. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇನ್ನೂ ಕೆಲವರು 20-30 ವಯಸ್ಸಿನವರಿದ್ದಾರೆ ಎಂದು ತಿಳಿದುಬಂದಿದೆ. ಕಾಲ್ತುಳಿದ ದೃಶ್ಯಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಂದೆಡೆ ತಮ್ಮವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಮೃತದೇಹ ಪಡೆಯಲು ಶವಾಗಾರದ ಬಳಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳೂ ಕಂಡುಬಂದಿದೆ. ಇದನ್ನೂ ಓದಿ: Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ

    ಮೃತಪಟ್ಟವರು ಯಾರು? ಯಾವ ವಯಸ್ಸಿನವರು?
    ಹೇಮಲತಾ (8), ಸೈಲೆತ್ಸನಾ (8), ಸಾಯಿ ಜೀವ (4), ಧುರು ವಿಷ್ಣು (2), ಸನೂಜ್ (13), ಧರಣಿಕಾ (14), ಪಝನಿಯಮ್ಮಾಳ್ (11), ಕೋಕಿಲಾ (14), ಕೃತಿಕ್ (7) ಮತ್ತು ಕಿಶೋರ್ (17), ತಾಮರೈಕಣ್ಣನ್ (25), ಸುಕನ್ಯಾ (33), ಆಕಾಶ್ (23), ಧನುಷ್‌ಕುಮಾರ್ (24), ವಡಿವಳಗನ್ (54), ರೇವತಿ (52), ಚಂದ್ರ (40), ರಮೇಶ್ (32), ರವಿಕೃಷ್ಣನ್ (32), ಪ್ರಿಯದರ್ಶಿನಿ (35), ಮಹೇಶ್ವರಿ (45), ಮಾಲತಿ (36), ಸುಮತಿ (53), ಸಮತಿಕುಮಾರ್ (53), ಸಮತಿಕುಮಾರ್ (53) (26), ಶಂಕರ ಗಣೇಶ್ (45), ವಿಜಯರಾಣಿ (42), ಗೋಕುಲಪ್ರಿಯ (28), ಫಾತಿಮಾ ಬಾನು (29), ಜಯ (55), ಅರುಕ್ಕಣಿ (60) ಮತ್ತು ಜಯಂತಿ (43).

    ಕಾಲ್ತುಳಿತ ಸಂಭವಿಸಿದ್ದು ಏಕೆ?
    ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು 7 ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು.

    ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿಜಯ್ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸುಸ್ತಿನಿಂದ ಬಳಲುತ್ತಿದ್ದರು. ಇನ್ನು ಇದೇ ವೇಳೆ 9 ವರ್ಷದ ಬಾಲಕಿ ಕಳೆದು ಹೋಗಿರ್ತಾಳೆ. ಆಗ ವಿಜಯ್ ಮೈಕ್ ಮೂಲಕ ಪೊಲೀಸರಿಗೆ ಮನವಿ ಮಾಡ್ತಾರೆ. ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಲೇ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಉಸಿರಾಟದ ತೊಂದ್ರೆ ಅನುಭವಿಸಿದ ಜನರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಂದ್ಹಾಗೆ ರ‍್ಯಾಲಿ ತಡವಾಗಿ ಸಂಜೆ ಆರಂಭವಾಗಿತ್ತು. ಹೀಗಾಗಿ ವಿಜಯ್ ನೋಡಲು ಫ್ಯಾನ್ಸ್ ಮುಗಿ ಬಿದ್ದಿದ್ರು. ಅಲ್ದೆ ರ‍್ಯಾಲಿ ವೇಳೆ ಕರೆಂಟ್ ತೆಗೆದಿದ್ದರಿಂದ ದುರಂತ ಸಂಭವಿಸಿದೆ. ಇದನ್ನೂ ಓದಿ: Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ

    ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ವಿಜಯ್
    ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದಂತೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಕೂಡಲೇ ಸ್ಥಳದಿಂದ ಕಾಲ್ತಿತ್ತರು. ಮೊದಲೇ ತಡವಾಗಿ ಆಗಮಿಸಿದ್ದ ವಿಜಯ್, ಸ್ಥಳಕ್ಕೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಗಿದೆ. ದುರಂತ ಬಳಿಕ ಬ್ಲಾಕ್ ಕಾರ್‌ನಲ್ಲಿ ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಜಯ್ ಅಲ್ಲಿಂದ ಚೆನ್ನೈಗೆ ಎಸ್ಕೇಪ್ ಆಗಿದ್ರು.

    ಘಟನೆ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಟಿವಿಕೆ ಕರೂರು ಜಿಲ್ಲಾ ಕಾರ್ಯದರ್ಶಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಈ ನಟುವೆ ನಟ ವಿಜಯ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Vijay Rally Stampede | ಮೃತಪಟ್ಟ 39 ಜನರಲ್ಲಿ 35 ಮಂದಿ ಮೃತದೇಹಗಳ ಗುರುತು ಪತ್ತೆ

  • ಕರೂರು ಕಾಲ್ತುಳಿದ ದುರಂತ | ಜನರ ಸಾವಿಗೆ ಡಿಎಂಕೆ ಸರ್ಕಾರ ನೇರ ಕಾರಣ: ಆರ್.ಅಶೋಕ್

    ಕರೂರು ಕಾಲ್ತುಳಿದ ದುರಂತ | ಜನರ ಸಾವಿಗೆ ಡಿಎಂಕೆ ಸರ್ಕಾರ ನೇರ ಕಾರಣ: ಆರ್.ಅಶೋಕ್

    ಬೆಂಗಳೂರು: ನಗರದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದರು. ಅದೇ ದೊಡ್ಡ ಆಘಾತವಾಗಿತ್ತು. ಈಗ ಕರೂರಿನಲ್ಲಿ (Karuru Stampede) ಅದಕ್ಕಿಂತಲೂ ದೊಡ್ಡ ದುರಂತವಾಗಿದೆ. ಕರೂರು ಕಾಲ್ತುಳಿದ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಆತಂಕ ಹೊರಹಾಕಿದ್ದಾರೆ.

    ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನಟ ವಿಜಯ್ (Thalapathy Vijay) ಕಾರ್ಯಕ್ರಮದಲ್ಲಿ ಕಾಲ್ತುಳಿತ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಇಂಥ ಘಟನೆ ದೇಶದ ಬೇರೆ ಕಡೆ ಎಲ್ಲೂ ಆಗಿಲ್ಲ. ದುರ್ಘಟನೆಯಲ್ಲಿ ಚಿಕ್ಕ ಮಕ್ಕಳೂ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ ಎಂದಿದ್ದಾರೆ. ಇದನ್ನೂ ಓದಿ: Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ

    ಕರೂರು ದುರಂತ ಸಾರ್ವಜನಿಕರಿಗೆ ದೊಡ್ಡ ದಿಗ್ಭ್ರಾಂತಿ ತಂದಿದೆ. ಡಿಎಂಕೆ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡು ವಿಜಯ್ ತಲೆಗೆ ಪ್ರಕರಣ ಕಟ್ಟುತ್ತಿದೆ. ಅವರು ಸ್ಥಳ ಕೇಳಿದ್ದೆಲ್ಲಿ? ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿದ್ದೆಲ್ಲಿ? ವಿಜಯ್ ಬಂದು ರ‍್ಯಾಲಿ ಮಾಡಿದ್ರು ಹೋದ್ರು, ಅವರದ್ದೂ ತಪ್ಪಿದೆ. ವಿಜಯ್ ಕ್ಷಮೆ ಕೇಳಿಲ್ಲ, ಆಸ್ಪತ್ರೆಗೆ ಹೋಗಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪಾತ್ರವೇ ದೊಡ್ಡದು, ದುರಂತಕ್ಕೆ ರಾಜ್ಯ ಸರ್ಕಾರ ಕಾರಣ. ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಲ್ಲ. ಜನರ ಸಾವಿಗೆ ನೇರ ಕಾರಣ ಡಿಎಂಕೆ ಸರ್ಕಾರ. ಈ ದುರಂತ ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ

  • Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ

    Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ

    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಉಸಿರು ಚೆಲ್ಲಿದ್ದರು. ಸಂಭ್ರಮದಲ್ಲಿ ಸೂತಕದ ಕರಿಛಾಯೆ ಆವರಿಸಿತ್ತು. ಕಾಲ್ತುಳಿತ ದುರಂತದಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ದುರಂತ ಮಾಸುವೇ ಮುನ್ನವೇ ನೆರೆಯ ತಮಿಳುನಾಡಿನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ತಮಿಳುನಾಡು ಕರೂರಿನಲ್ಲಿ (TamilNadu Karur) ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ (Thalapathy Vijay) ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ಕಾಲ್ತುಳಿತ ದುರಂತ ಆಗಿದ್ದು, 39 ಮಂದಿ ಉಸಿರು ಚೆಲ್ಲಿದ್ದಾರೆ, ಇನ್ನೂ ಹಲವಾರು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದೇಶದಲ್ಲಿ ಕಾಲ್ತುಳಿತಗಳು ಇದೇ ಮೊದಲೇನಲ್ಲ. 1954ರ ಕುಂಭಮೇಳದಲ್ಲಿ ಜರುಗಿದ್ದ ಅತಿದೊಡ್ಡ ಕಾಲ್ತುಳಿತ ಪ್ರಕರಣ (Stampede Cases) ಅತಿಹೆಚ್ಚು ಸದ್ದು ಮಾಡಿತ್ತು. ಆ ಬಳಿಕ ಉತ್ತರ ಭಾರತದಲ್ಲಿ ಕಾಲ್ತುಳಿತ ಪ್ರಕರಣಗಳು ನಡೆದೇ ಇವೆ. ಇನ್ನೂ ದಕ್ಷಿಣ ಭಾರತದಲ್ಲಿ 14 ವರ್ಷಗಳ ಬಳಿಕ ಭೀಕರ ದುರಂತ ಇದಾಗಿದೆ. 2011ರಲ್ಲಿ ಶಬರಿಮಲೆಯಲ್ಲಿ ಸಂಭವಿಸಿದ್ದ ಕಾಲ್ತುಳಿತ 104 ಭಕ್ತರನ್ನ ಬಲಿ ಪಡೆದಿತ್ತು. ಇದೀಗ ತಮಿಳುನಾಡಿನ ದುರಂತದಲ್ಲಿ 39 ಸಾವನ್ನಪ್ಪಿದ್ದು, ಇಡೀ ದೇಶವೇ ಕಂಬನಿ ಮಿಡಿದಿದೆ. ಹಾಗಿದ್ರೆ ಈ ಮೊದಲು ನಡೆದಿರುವ ಕಾಲ್ತುಳಿತ ದುರಂತಗಳು ಯಾವುವು? ಯಾವ ದುರಂತದಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಕುರಿತು ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    Hathras Stampede

    ಬೆಂಗಳೂರು ಚಿನ್ನಸ್ವಾಮಿ ಕಾಲ್ತುಳಿತ ದುರಂತ (2025):
    2025ರ 18ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಪ್ರಸಕ್ತ ವರ್ಷದ ಜೂನ್‌ 3ರಂದು ಐಪಿಎಲ್‌ನಲ್ಲಿ ಟ್ರೋಫಿ ಗೆದ್ದು 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿತು. ಆದ್ರೆ ಆ ಸಂಭ್ರಮ ಒಂದು ದಿನವೂ ಪೂರೈಸಲಿಲ್ಲ. ಮರುದಿನವೇ ವಿಜಯೋತ್ಸವ ಮೆರವಣಿಗೆ ಸಂರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡರು. ಇದೀ ದೇಶವೇ ಇದಕ್ಕೆ ಕಂಬನಿ ಮಿಡಿದಿತ್ತು.

    ಹತ್ರಾಸ್‌ ಸತ್ಸಂಗ ಕಾರ್ಯಕ್ರಮ (2024):
    ಉತ್ತರ ಪ್ರದೇಶ ರಾಜ್ಯದ ಹತ್ರಾಸ್‌ನಲ್ಲಿ ಮಹಿಳೆಯರೂ, ಮಕ್ಕಳೂ ಸೇರಿದಂತೆ ಸಾವಿರಾರು ಜನರು ಸೇರಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದ ವೇಳೆ ನೂರಾರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ಧಾರ್ಮಿಕ ದುರಂತ ಎಂದೇ ಬಿಂಬಿತವಾಗಿದೆ. 80 ಸಾವಿರ ಮಂದಿಗೆ ಅನುಮತಿ ಪಡೆದು 2.5 ಲಕ್ಷ ಜನರನ್ನು ಸಂಘಟಕರು ಸೇರಿಸಿದ ಪರಿಣಾಮ ಉತ್ತರ ಪ್ರದೇಶದ ಹತ್ರಾಸ್‌ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 121 ಮಂದಿ ಮೃತಪಟ್ಟಿದ್ದರು.

    ಸತ್ಸಂಗ ಕಾರ್ಯಕ್ರಮ ಮುಗಿದ ಬಳಿಕ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ ಕಾರು ಹತ್ತಿದ್ದಾರೆ. ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಧೂಳನ್ನು ಸಂಗ್ರಹಿಸಲು ಅನುಯಾಯಿಗಳು ಮುಗಿಬಿದ್ದಿದ್ದರು. ಭಾರೀ ಸಂಖ್ಯೆಯಲ್ಲಿದ್ದ ಅನುಯಾಯಿಗಳು ಧೂಳು ಸಂಗ್ರಹಿಸಲು ಓಡಿದ ಪರಿಣಾಮ ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಬ್ಬರ ಮೇಲೊಬ್ಬರು ಬಿದ್ದಿದ್ದರು. ಬಿದ್ದವರ ಮೇಲೆಯೇ ಜನರು ಓಡಿದ್ದರಿಂದ ಸಾವು, ನೋವಿನ ಸಂಖ್ಯೆ ಹೆಚ್ಚಾಗಿತ್ತು.

    Vaishnodevi Stampede

    ರಾಮನವಮಿ ವೇಳೆ ಇಂದೋರ್‌ನಲ್ಲಿ ದುರಂತ (2023):
    ಮಧ್ಯ ಪ್ರದೇಶದ ಇಂಧೋರ್ ನಗರದಲ್ಲಿ ರಾಮನವಮಿ ವೇಳೆ ಪವಿತ್ರ ಬಾವಿಯೊಂದರ ಮೇಲ್ಛಾವಣಿ ಕುಸಿದ ಪರಿಣಾಮ 36 ಮಂದಿ ಸಾವನ್ನಪ್ಪಿದ್ದರು. ಇಂದೋರ್‌ನ ಬೇಲೇಶ್ವರ ದೇವಸ್ಥಾನದಲ್ಲಿ ರಾಮನವಮಿ ವೇಳೆ ಹೋಮ-ಹವನ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಭಾರೀ ಜನಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಯಿತು. ಇದರಿಂದ ದೇವಸ್ಥಾನದ ಆವರಣದಲ್ಲಿದ್ದ ಬಾವಿಯ ಬಳಿ ಭೂಕುಸಿತ ಉಂಟಾಗಿ 36 ಮಂದಿ ಮೃತಪಟ್ಟರು.

    ವೈಷ್ಣೋದೇವಿಯಲ್ಲಿ ಕಾಲ್ತುಳಿತಕ್ಕೊಳಗಾಗಿ 12 ಮಂದಿ ಸಾವು (2022):
    ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿಯಲ್ಲಿ ಭಕ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಹಿನ್ನೆಲೆಯಲ್ಲಿ ಕಾಲ್ತುಳಿತ ಉಂಟಾಗಿ 12 ಮಂದಿ ಸಾವನ್ನಪ್ಪಿದ್ದರು. ವರ್ಷದ ಮೊದಲ ದಿನವೇ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ದೇವಸ್ಥಾನದ ಗೇಟ್‌ ನಂ.3ರ ಸಮೀಪ ಜನಸಂದಣಿಯಿಂದ ಕಾಲ್ತುಳಿತ ಉಂಟಾಗಿ 12 ಮಂದಿ ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

    Pushkar Stampede

    ಪುಷ್ಕರ ಉತ್ಸವದಲ್ಲಿ 27 ಭಕ್ತರು ದುರ್ಮರಣ (2015):
    ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಪುಷ್ಕರ ಉತ್ಸವದ ವೇಳೆ ಗೋಧಾವರಿ ನದಿಯಲ್ಲಿ ಭಕ್ತಾದಿಗಳು ಸ್ನಾನ ಮಾಡುವಾಗ ಕಾಲ್ತುಳಿತ ಉಂಟಾಗಿ 27 ಮಂದಿ ಸಾವನ್ನಪ್ಪಿದ್ದರು. ದಕ್ಷಿಣದ ಕುಂಭಮೇಳ ಎಂದೇ ಹೆಸರುವಾಸಿಯಾಗಿರುವ ಆಂಧ್ರದ ಪುಷ್ಕರ ಮೇಳ 2015ರಲ್ಲಿ ನಡೆದಿತ್ತು. ಈ ಮೇಳದಲ್ಲಿ ಲಕ್ಷಾಂತರ ಭಕ್ತರು ಪುಷ್ಕರ ಘಾಟ್‌ನ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ. 2022ರ ಜು.14ರಂದು ಕೂಡ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕೆಂದು ಬಂದಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ, ಉಸಿರಾಡಲು ಕಷ್ಟವಾಗಿ 27 ಮಂದಿ ಭಕ್ತರು ಕೊನೆಯುಸಿರೆಳೆದಿದ್ದರು..

    ದಸರಾ ಸಂಭ್ರಮಾಚರಣೆ ವೇಳೆ ಕಾಲ್ತುಳಿತ (2014):
    ಬಿಹಾರದ ಪಾಟ್ನಾದಲ್ಲಿ ದಸರಾ ಆಚರಣೆ ಮುಗಿದ ಬಳಿಕ ಗಾಂಧಿ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 32 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದರು.

    ನವರಾತ್ರಿಯಲ್ಲೂ ನಡೆದಿತ್ತು ಕಾಲ್ತುಳಿತ (2013):
    ಮಧ್ಯ ಪ್ರದೇಶದ ರತ್ನಘರ್ ದೇಗುಲದಲ್ಲಿ ನವರಾತ್ರಿ ಸಂಭ್ರಮಾಚರಣೆ ವೇಳೆ ನದಿ ಮೇಲಿನ ಸೇತುವೆ ಕುಸಿಯುತ್ತದೆ ಎಂಬ ವದಂತಿ ಹರಡಿದ ವೇಳೆ ಉಂಟಾದ ಕಾಲ್ತುಳಿತದಲ್ಲಿ 115 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

    Indore Stampede

    ಅದಾಲತ್‌ ಘಾಟ್‌ನಲ್ಲಿ ಕಾಲ್ತುಳಿತಕ್ಕೆ 20 ಸಾವು (2012):
    ಪಾಟ್ನಾದ ಗಂಗಾ ನದಿ ತಟದಲ್ಲಿ ಇರುವ ಅದಾಲತ್ ಘಾಟ್‌ನಲ್ಲಿ ಛತ್‌ ಪೂಜೆ ನೆರವೇರುವಾಗ ಸೇತುವೆ ಕುಸಿತವಾಗಿ 20 ಮಂದಿ ಸಾವನ್ನಪ್ಪಿದ್ದರು.

    ಹರಿದ್ವಾರದಲ್ಲಿ ಕಾಲ್ತುಳಿತ (2012):
    ಹರಿದ್ವಾರದ ಗಂಗಾ ನದಿ ತೀರದಲ್ಲಿ ಹರ್ – ಕಿ – ಪೌರಿ ಘಾಟ್‌ನಲ್ಲಿ ಕಾಲ್ತುಳಿತ ಉಂಟಾಗಿ 20 ಮಂದಿ ಸಾವನ್ನಪ್ಪಿದ್ದರು.

    ಜೀಪ್‌ ಪತನವಾಗಿ ಶಬರಿಮಲೆ ಭಕ್ತರ ದುರ್ಮರಣ (2011):
    ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಜೀಪ್ ಪತನವಾದ ಕಾರಣ ಉಂಟಾದ ಕಾಲ್ತುಳಿತದ ವೇಳೆ 104 ಶಬರಿಮಲೆ ಯಾತ್ರಿಕರು ಸಾವನ್ನಪ್ಪಿದ್ದರು. ಘಟನೆಯಿಂದ ನೂರಾರು ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆ ಕಾಲ್ತುಳಿತ ಉಂಟಾಗಿ ಕನಿಷ್ಟ 104 ಮಂದಿ ಭಕ್ತರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

    ದೇವಮಾನವನ ಕಾರ್ಯಕ್ರಮದಲ್ಲಿ ಕಾಲ್ತುಳಿತ (2010):
    ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಕೃಪಾಲು ಮಹಾರಾಜನ ರಾಮ್ ಜಾಂಕಿ ದೇವಸ್ಥಾನದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾರೊಬ್ಬರು ಉಚಿತ ಬಟ್ಟೆ ಮತ್ತು ಆಹಾರವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾಗ ಉಂಟಾದ ಕಾಲ್ತುಳಿತದಲ್ಲಿ ಸುಮಾರು 63 ಜನರು ಸಾವನ್ನಪ್ಪಿದ್ದರು.

    ಬಾಂಬ್‌ ಸ್ಫೋಟದ ವದಂತಿಯಿಂದ ಕಾಲ್ತುಳಿತ (2008):
    ರಾಜಸ್ಥಾನದ ಜೋಧಪುರ ನಗರದಲ್ಲಿ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಭಕ್ತರು ನೆರದಿದ್ದ ವೇಳೆ ಬಾಂಬ್‌ ಸ್ಫೋಟಗೊಳ್ಳಲಿದೆ ಎನ್ನುವ ವದಂತಿಯ ಮಾತಿನಿಂದ ನೂರಾರು ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದ 250 ಮಂದಿ ಪ್ರಾಣ ಕಳೆದುಕೊಂಡಿದ್ದರು. 60ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು.

    ಬಂಡೆ ಕುಸಿತ ವದಂತಿ, ನೂರಾರು ಭಕ್ತರು ಸಾವು (2008):
    ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾ ದೇವಿ ದೇವಸ್ಥಾನದಲ್ಲಿ ಅಂದು ಸಾವಿರಾರು ಭಕ್ತರು ನೆರೆದಿದ್ದರು. ಭಕ್ತರ ನಡುವೆ ಯಾರೋ ಬಂಡೆ ಕುಸಿತಗೊಳ್ಳಲಿದೆ ಎನ್ನುವ ಮಾತನ್ನು ಹೇಳಿದ್ದರು. ಬಂಡೆ ಕುಸಿತದ ಭೀತಿಯಿಂದ ಭಕ್ತರ ನಡುವೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಈ ಘಟನೆಯಲ್ಲಿ 162 ಜನರು ಸಾವನ್ನಪ್ಪಿ, 47 ಮಂದಿ ಗಾಯಗೊಂಡಿದ್ದರು.

    Patna Stampede

    ಮಹಾರಾಷ್ಟ್ರ ಮಂಧರದೇವಿ ದೇವಸ್ಥಾನದಲ್ಲಿ ಕಾಲ್ತುಳಿತ (2005):
    ಮಂಧರದೇವಿ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥಯಾತ್ರೆಯಲ್ಲಿ ಸಂಭವಿಸಿದ ಈ ಕಾಲ್ತುಳಿತ ದೇಶದಲ್ಲಿ ನಡೆದ ಕಾಲ್ತುಳಿತ ಘಟನೆಗಳಲ್ಲಿ ಅತ್ಯಂತ ಘನಘೋರ ಘಟನೆಗಳಲ್ಲಿ ಒಂದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಭಕ್ತಾದಿಗಳು ತೆಂಗಿನಕಾಯಿ ಒಡೆಯುತ್ತಿದ್ದರಿಂದ ಜಾರುತ್ತಿದ್ದ ಮೆಟ್ಟಿಲುಗಳ ಮೇಲೆ ಕೆಲವರು ಬಿದ್ದು ಅವಘಡ ಸಂಭವಿಸಿತು.

    ನಾಸಿಕ್ ಕುಂಭಮೇಳದಲ್ಲಿ ಕಾಲ್ತುಳಿತ (2003):
    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕುಂಭಮೇಳದಲ್ಲಿ ಪವಿತ್ರ ಸ್ನಾನದ ವೇಳೆ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದರು ಮತ್ತು ಸುಮಾರು 140 ಜನರು ಗಾಯಗೊಂಡಿದ್ದರು.

    ಪ್ರಯಾಗ ಕುಂಭಮೇಳ ಕಾಲ್ತುಳಿತ (1954)
    ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 1954ರಲ್ಲಿ ಜರುಗಿದ ಕುಂಭ ಮೇಳದಲ್ಲಿ, ಮೌನಿ ಅಮಾವಾಸ್ಯೆಯ (ಅಮಾವಾಸ್ಯೆ) ಮುಖ್ಯ ಸ್ನಾನದ ದಿನದಂದು ಈ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿದ್ದರೆ, ಕೆಲವು ವರದಿಗಳಲ್ಲಿ ಮೃತರ ಸಂಖ್ಯೆ 500 ಎಂದು ಹೇಳಲಾಗಿತ್ತು. ಭಾರೀ ಜನಸಂದಣಿಯಿಂದಾಗಿ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.

  • Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ

    Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ

    ಚೆನ್ನೈ: ನಟ ವಿಜಯ್ ದಳಪತಿ ರ‍್ಯಾಲಿ ದುರಂತ (Vijay Rally Stampede) ಕಣ್ಣಾರೆ ಕಂಡ ಬೆಂಗಳೂರಿನ ಬನಶಂಕರಿ ನಿವಾಸಿ ಮಾಂಗೀಲಾಲ್, 10 ವರ್ಷದ ಬಾಲಕಿ ಸಾವನ್ನಪ್ಪಿದ್ದನ್ನು ನೆನೆದು ಭಾವುಕರಾಗಿದ್ದಾರೆ.

    ಎರಡು ದಿನಗಳ ಹಿಂದೆ ಮಾಂಗೀಲಾಲ್ ಅವರು ಕರೂರಿಗೆ ತೆರಳಿದ್ದರು. ಶನಿವಾರ ನಡೆದ ಟಿವಿಕೆ (TVK) ಪಕ್ಷದ ರ‍್ಯಾಲಿಯ ದುರಂತಕ್ಕೆ ಸಾಕ್ಷಿಯಾದರು. ಈ ಬಗ್ಗೆ ಮಾತನಾಡಿ, ಕಾಲ್ತುಳಿತದಲ್ಲಿ ಬಾಲಕಿ ಸಾವನ್ನ ಕಣ್ಣಾರೆ ಕಂಡೆ. ಬಾಲಕಿ ಮುಖ ಪೂರ್ತಿ ಊದಿತ್ತು. ಯಾವುದೇ ವ್ಯವಸ್ಥೆ ಸರಿ ಇರಲಿಲ್ಲ. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

    ವಿಜಯ್ ಬಂದಾಗ ಅವರು ಮಾತಾಡಿದ್ದು ಜನಕ್ಕೆ ಕೇಳುತ್ತಿರಲಿಲ್ಲ. ಜನ ಕೇಳುತ್ತಿಲ್ಲ ಕೇಳುತ್ತಿಲ್ಲ ಎಂದು ಜನ ಕೂಗುತ್ತಿದ್ದರು. ವಿಜಯ್‌ಗೂ ಜನ ಕೂಗುತ್ತಿರೋದು ಏನು ಎಂದು ಗೊತ್ತಾಗಿಲ್ಲ. ಕ್ಷಣಾರ್ಧದಲ್ಲಿ ಎಲ್ಲವೂ ನಡೆದು ಹೋಯ್ತು ಎಂದಿದ್ದಾರೆ.

    39 ಮಂದಿ ಸಾವು, 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
    ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. 48 ಮಂದಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್‌ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ. ಇದನ್ನೂ ಓದಿ: Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

  • Vijay Rally Stampede | ಮೃತಪಟ್ಟ 39 ಜನರಲ್ಲಿ 35 ಮಂದಿ ಮೃತದೇಹಗಳ ಗುರುತು ಪತ್ತೆ ‌

    Vijay Rally Stampede | ಮೃತಪಟ್ಟ 39 ಜನರಲ್ಲಿ 35 ಮಂದಿ ಮೃತದೇಹಗಳ ಗುರುತು ಪತ್ತೆ ‌

    – ಕಾಲ್ತುಳಿತ ದುರಂತ ಸಂಬಂಧ ಕೇಸ್‌ ದಾಖಲು; ಪ್ರಾಥಮಿಕ ತನಿಖೆ ಶುರು

    ಚೆನ್ನೈ: ತಮಿಳುನಾಡು ಕರೂರಿನಲ್ಲಿ (Karur) ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ಕಾಲ್ತುಳಿತ (TVK Vijay Rally Stampede) ಸಂಭವಿಸಿ ಘೋರ ದುರಂತವೇ ನಡೆದುಹೋಗಿದೆ. ಘಟನೆಯಲ್ಲಿ ಮೃತಪಟ್ಟ 39 ಜನರ ಪೈಕಿ 35 ಮಂದಿ ಮೃತದೇಹಗಳ ಗುರುತು ಪತ್ತೆಯಾಗಿದೆ.

    ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುರುತು ಪತ್ತೆಯಾದವರಲ್ಲಿ ಕರೂರು ಜಿಲ್ಲೆಯವರು 28 ಜನ, ಈರೋಡ್, ತಿರುಪುರ, ಧಾರಾಪುರಂ ಜಿಲ್ಲೆಗಳ ತಲಾ ಇಬ್ಬರು, ಸೇಲಂ ಜಿಲ್ಲೆಯ ಒಬ್ಬರ ಗುರುತು ಪತ್ತೆಯಾಗಿದೆ. ಉಳಿದ 4 ಶವಗಳನ್ನು ಗುರುತಿಸುವ ಕಾರ್ಯವನ್ನು ಸ್ಥಳೀಯ ಪೊಲೀಸರು ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಜಯ್‌ ನೋಡೋದಕ್ಕೆ ಮಕ್ಕಳೂ ಊಟ, ತಿಂಡಿ ಬಿಟ್ಟು ನಿಂತಿದ್ರು, ಕೆಲವರು ನೀರಿಗಾಗಿ ಚೀರಾಡ್ತಿದ್ರು: ಪ್ರತ್ಯಕ್ಷದರ್ಶಿ ಹೇಳಿಕೆ

    ಪ್ರಸ್ತುತ ಕರೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ (Karur Hospital) ಕಾಲ್ತುಳಿತದಲ್ಲಿ ಗಾಯಗೊಂಡ 50 ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೂರಿನ ಖಾಸಗಿ ಆಸ್ಪತ್ರೆಗಳಲ್ಲಿ 61 ಜನರೂ ಸೇರಿ ಒಟ್ಟು 111 ಜನರು ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

    39 ಮಂದಿ ಸಾವು ಚಿಕಿತ್ಸೆ
    ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್‌ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ.

    ಪ್ರಕರಣ ದಾಖಲು
    ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಳಿಸಿಕೊಂಡಿದ್ದು, ಪ್ರಾಥಮಿಕ ತನಿಖೆ ಶುರು ಮಾಡಲಾಗಿದೆ ಎಂದು ಕೂಡ ಎಡಿಜಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

  • ವಿಜಯ್‌ ನೋಡೋದಕ್ಕೆ ಮಕ್ಕಳೂ ಊಟ, ತಿಂಡಿ ಬಿಟ್ಟು ನಿಂತಿದ್ರು, ಕೆಲವರು ನೀರಿಗಾಗಿ ಚೀರಾಡ್ತಿದ್ರು: ಪ್ರತ್ಯಕ್ಷದರ್ಶಿ ಹೇಳಿಕೆ

    ವಿಜಯ್‌ ನೋಡೋದಕ್ಕೆ ಮಕ್ಕಳೂ ಊಟ, ತಿಂಡಿ ಬಿಟ್ಟು ನಿಂತಿದ್ರು, ಕೆಲವರು ನೀರಿಗಾಗಿ ಚೀರಾಡ್ತಿದ್ರು: ಪ್ರತ್ಯಕ್ಷದರ್ಶಿ ಹೇಳಿಕೆ

    – ವಿದ್ಯುತ್ ಕಂಬಗಳ ಮೇಲೂ ಹತ್ತಿ ಕುಳಿತಿದ್ರು

    ಚೆನ್ನೈ: ನಟ ವಿಜಯ್‌ (Thalapathy Vijay) ನೋಡೋದಕ್ಕಾಗಿಯೇ ಜನ 6 ಗಂಟೆಗೂ ಹೆಚ್ಚು ಸಮಯದಿಂದ ನಿಂತಿದ್ದರು. ಮಕ್ಕಳು ಕೂಡ ಊಟ, ತಿಂಡಿ ಬಿಟ್ಟು ನಿಂತಿದ್ರು. ಕೆಲವರು ಮರ, ಅಂಗಡಿಗಳ ಮೇಲೆ ಏರಿದ್ರು, ಇನ್ನೂ ಕೆಲವರು ವಿದ್ಯುತ್‌ ಕಂಬಗಳ ಮೇಲೂ ಹತ್ತಿದ್ರು. ವಿಜಯ್‌ ಬರೋದಕ್ಕೂ ಮುನ್ನವೇ ಬಿಸಿಲಿನಲ್ಲಿ ಬಸವಳಿದಿದ್ರು… ಪ್ರತ್ಯಕ್ಷದರ್ಶಿಯೊಬ್ಬರು ತಮಿಳುನಾಡು ಕಾಲ್ತುಳಿತ ದುರಂತದ ಬಗ್ಗೆ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಆಡಿದ ಮಾತುಗಳಿವು.

    ಕಣ್ಣ ಮುಂದೆ ಇಬ್ಬರು ಸ್ಪಾಟ್‌ ಡೆತ್‌ ಆಗಿದ್ರು, ಸ್ಪೀಕರ್‌ ಬಾಕ್ಸ್‌ ಇಡಲು ಹಾಕಿದ್ದ ಸ್ಟೂಲ್‌ ಬಿದ್ದು ಅಲ್ಲೇ ಇಬ್ಬರು ಸಿಲುಕಿ ಸತ್ರು. ಪುಟ್ಟ ಪುಟ್ಟ ಮಕ್ಕಳು ವಿಜಯ್‌ ನೋಡಬೇಕು ಅಂತಾ ಕಾಯ್ತಿದ್ರು. ವಿಜಯ್‌ ಬರೋದಕ್ಕೂ ಮುನ್ನವೇ ಬಿಸಿಲಿನಲ್ಲಿ ಬಸವಳಿದಿದ್ದರು, ಊಟ, ತಿಂಡಿ ನೀರೂ ಇಲ್ಲದೇ ಬಳಲಿದ್ರು. ಕೆಲವರು ನೀರು ನೀರಿಗಾಗಿ ಚೀರಾಡ್ತಿದ್ರು, ನೋಡ ನೋಡ್ತಿದ್ದಂತೆ ಮಹಿಳೆಯರು, ಮಕ್ಕಳು ಕುಸಿದು ಬಿದ್ರು. ನಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದ್ರು. ಈ ಹಿಂದಿನ ರ‍್ಯಾಲಿಗಳಲ್ಲಿ ಹೀಗೆ ಆಗಿರಲಿಲ್ಲ. ನಟ ವಿಜಯ್‌ ನೋಡಲು ಜನರಲ್ಲಿದ್ದ ಉನ್ಮಾದವೇ ಇದಕ್ಕೆ ಕಾರಣ ಅಂತ ಹೇಳ್ತಿದ್ದಾರೆ ಪ್ರತ್ಯಕ್ಷದರ್ಶಿಗಳು. ಇದನ್ನೂ ಓದಿ: Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

    6 ಗಂಟೆಗೂ ಹೆಚ್ಚು ಕಾಲ ಕಾದು ಕುಳಿತಿದ್ದ ಬೆಂಬಲಿಗರು
    ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್‌ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು. ಇದು ದುರಂತಕ್ಕೆ ಮೊದಲ ಕಾರಣ ಅನ್ನೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

    ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ವಿಜಯ್
    ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದಂತೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಕೂಡಲೇ ಸ್ಥಳದಿಂದ ಕಾಲ್ಕಿತ್ತರು. ಮೊದಲೇ ತಡವಾಗಿ ಆಗಮಿಸಿದ್ದ ವಿಜಯ್, ಸ್ಥಳಕ್ಕೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಗಿದೆ. ದುರಂತ ಬಳಿಕ ಬ್ಲಾಕ್ ಕಾರ್‌ನಲ್ಲಿ ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಜಯ್ ಅಲ್ಲಿಂದ ಚೆನ್ನೈಗೆ ಎಸ್ಕೇಪ್ ಆಗಿದ್ರು. ಇತ್ತ ಕಾಲ್ತುಳಿತದಲ್ಲಿ ಸಾವು ಹೆಚ್ಚಾಗ ತೊಡಗಿದೆ. 8 ಮಕ್ಕಳು, 16 ಮಹಿಳೆಯರು ಸೇರಿ 39 ಜನ ಮೃತಪಟ್ಟಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆ ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗಳಿಗೆ ರವಾನಿಸಲಾಯ್ತು. ರ‍್ಯಾಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಅಮಾಯಕರ ಜೀವಹಾನಿ ಹೃದಯವನ್ನು ಕಲಕಿದೆ: ಕಾಲ್ತುಳಿತ ದುರಂತಕ್ಕೆ ರಜನಿಕಾಂತ್‌ ಕಂಬನಿ

    39 ಮಂದಿ ಸಾವು, 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
    ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. 48 ಮಂದಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್‌ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ.

  • Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

    Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

    – 10,000 ಜನಕ್ಕೆ ಅನುಮತಿ ಪಡೆದಿದ್ದರು, ಆದ್ರೆ ಸೇರಿದ್ದು 2 ಲಕ್ಷಕ್ಕೂ ಅಧಿಕ ಜನ
    – ಭದ್ರತೆಗೆ 600ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿತ್ತು; ಎಡಿಜಿಪಿ ಡೇವಿಡ್ ಸನ್

    ಚೆನ್ನೈ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ (TVK Vijay Rally Stampede) ಸಂಭವಿಸಿ 11 ಜನ ಉಸಿರು ಚೆಲ್ಲಿದ್ದರು. ಸಂಭ್ರಮದಲ್ಲಿ ಸೂತಕದ ಕರಿಛಾಯೆ ಆವರಿಸಿತ್ತು. ಕಾಲ್ತುಳಿತ ದುರಂತದಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ದುರಂತ ಮಾಸುವೇ ಮುನ್ನವೇ ನೆರೆಯ ತಮಿಳುನಾಡಿನಲ್ಲಿ (Tamil Nadu) ಭೀಕರ ಕಾಲ್ತುಳಿತ ಸಂಭವಿಸಿದ್ದು, ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಅಲ್ಲದೇ ಇನ್ನೂ ಒಬ್ಬರ ಸ್ಥಿತಿ ಗಂಭೀರವಾಗಿದ್ದು, 48 ಮಂಸಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಮಿಳುನಾಡು ಕರೂರಿನಲ್ಲಿ (Karur) ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ (Thalapathy Vijay) ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ಕಾಲ್ತುಳಿತ ದುರಂತ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಲ್ತುಳಿತಕ್ಕೆ 36 ಮಂದಿ ಬಲಿ- ಆಸ್ಪತ್ರೆಯಲ್ಲಿ ಕುಟುಂಬಸ್ಥರ ಗೋಳಾಟ ಕಂಡು ಕಣ್ಣೀರಿಟ್ಟ ಸಚಿವ ಅಂಬಿಲ್‌ ಮಹೇಶ್

    6 ಗಂಟೆಗೂ ಹೆಚ್ಚು ಕಾಲ ಕಾದು ಕುಳಿತಿದ್ದ ಬೆಂಬಲಿಗರು
    ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್‌ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

    ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿಜಯ್ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸುಸ್ತಿನಿಂದ ಬಳಲುತ್ತಿದ್ದರು. ಇನ್ನು ಇದೇ ವೇಳೆ 9 ವರ್ಷದ ಬಾಲಕಿ ಕಳೆದು ಹೋಗಿರ್ತಾಳೆ. ಆಗ ವಿಜಯ್ ಮೈಕ್ ಮೂಲಕ ಪೊಲೀಸರಿಗೆ ಮನವಿ ಮಾಡ್ತಾರೆ. ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಲೇ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಉಸಿರಾಟದ ತೊಂದರೆ ಅನುಭವಿಸಿದ ಜನರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಂದ್ಹಾಗೆ ರ‍್ಯಾಲಿ ತಡವಾಗಿ ಸಂಜೆ ಆರಂಭವಾಗಿತ್ತು. ಹೀಗಾಗಿ ವಿಜಯ್ ನೋಡಲು ಫ್ಯಾನ್ಸ್ ಮುಗಿ ಬಿದ್ದಿದ್ರು. ಅಲ್ದೆ ರ‍್ಯಾಲಿ ವೇಳೆ ಕರೆಂಟ್ ತೆಗೆದಿದ್ದರಿಂದ ದುರಂತ ಸಂಭವಿಸಿದೆ. ಇದನ್ನೂ ಓದಿ: ಅಮಾಯಕರ ಜೀವಹಾನಿ ಹೃದಯವನ್ನು ಕಲಕಿದೆ: ಕಾಲ್ತುಳಿತ ದುರಂತಕ್ಕೆ ರಜನಿಕಾಂತ್‌ ಕಂಬನಿ

    ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ವಿಜಯ್
    ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದಂತೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಕೂಡಲೇ ಸ್ಥಳದಿಂದ ಕಾಲ್ತಿತ್ತರು. ಮೊದಲೇ ತಡವಾಗಿ ಆಗಮಿಸಿದ್ದ ವಿಜಯ್, ಸ್ಥಳಕ್ಕೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಗಿದೆ. ದುರಂತ ಬಳಿಕ ಬ್ಲಾಕ್ ಕಾರ್‌ನಲ್ಲಿ ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಜಯ್ ಅಲ್ಲಿಂದ ಚೆನ್ನೈಗೆ ಎಸ್ಕೇಪ್ ಆಗಿದ್ರು.

    ಇತ್ತ ಕಾಲ್ತುಳಿತದಲ್ಲಿ ಸಾವು ಹೆಚ್ಚಾಗ ತೊಡಗಿದೆ. 8 ಮಕ್ಕಳು, 16 ಮಹಿಳೆಯರು ಸೇರಿ 39 ಜನ ಮೃತಪಟ್ಟಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆ ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗಳಿಗೆ ರವಾನಿಸಲಾಯ್ತು. ರ‍್ಯಾಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಕರೂರು ಕಾಲ್ತುಳಿತ – ಮೃತರ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸ್ಟಾಲಿನ್‌

    39 ಮಂದಿ ಸಾವು, 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
    ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. 48 ಮಂದಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್‌ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ.

    ಇನ್ನೂ ಘಟನೆ ಸಂಬಂಧ ಟಿವಿಕೆ ಸ್ಥಳೀಯ ಕಾರ್ಯದರ್ಶಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರೂರು ಕಾಲ್ತುಳಿತ ತೀವ್ರ ದು:ಖವನ್ನುಂಟು ಮಾಡಿದೆ – ಪ್ರಧಾನಿ ಮೋದಿ ಸಂತಾಪ