Tag: vijay rajesh

  • ಡಿಜಿಟಲ್‌ ಕರೆನ್ಸಿಯಿಂದ ತೆರಿಗೆ ಸೋರಿಕೆ ನಿಯಂತ್ರಿಸಬಹುದು: ಆರ್ಥಿಕ ತಜ್ಞ ವಿಜಯ್‌ ರಾಜೇಶ್‌

    ಡಿಜಿಟಲ್‌ ಕರೆನ್ಸಿಯಿಂದ ತೆರಿಗೆ ಸೋರಿಕೆ ನಿಯಂತ್ರಿಸಬಹುದು: ಆರ್ಥಿಕ ತಜ್ಞ ವಿಜಯ್‌ ರಾಜೇಶ್‌

    ಬೆಂಗಳೂರು: ದೇಶದಲ್ಲಿ ಆರ್‌ಬಿಐನಿಂದ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಡಿಜಿಟಲ್‌ ಕರೆನ್ಸಿಯ ಅಗತ್ಯತೆ ಹಾಗೂ ಅದರ ಚಲಾವಣೆಯಿಂದಾಗುವ ಪ್ರಯೋಜನಗಳ ಕುರಿತು ಆರ್ಥಿಕ ತಜ್ಞ ವಿಜಯ್‌ ರಾಜೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

    ವಿಜಯ್‌ ರಾಕೇಶ್‌ ಏನು ಹೇಳುತ್ತಾರೆ?
    ಡಿಜಿಟಲ್ ಕರೆನ್ಸಿ ಯೂರೋಪ್‌, ಅಮೆರಿಕಾದಲ್ಲಿ ಚಲಾವಣೆಯಲ್ಲಿದೆ. ಈಗ ನಮ್ಮ ಕೈಯಲ್ಲಿರುವ ಕ್ಯಾಶ್ ಇ-ಫಾರ್ಮ್‌ನಲ್ಲಿದೆ. ಡಿಜಿಟಲ್ ಫಾರ್ಮ್‌ನಲ್ಲಿರೋದನ್ನ ಡಿಜಿಟಲ್ ಕರೆನ್ಸಿ ಎನ್ನಲಾಗುತ್ತದೆ. ಕ್ರಿಪ್ಟೋ ಕರೆನ್ಸಿಯನ್ನು ನಿಯಂತ್ರಿಸುವುದು ಕಷ್ಟ. ಆದರೆ ಡಿಜಿಟಲ್ ಕರೆನ್ಸಿ ಕಾನೂನು ಬದ್ಧವಾಗಿರುತ್ತದೆ. ಡಿಜಿಟಲ್ ಕರೆನ್ಸಿ ಆರ್‌ಬಿಐ ಸಿರಿಸ್ ನಂಬರ್ ರೀತಿ ಅಲಾಟ್ ಮಾಡಬಹುದು‌. ಒಂದು ಕಾರ್ಡ್ ಅಥವಾ ಪಾಸ್‌ವರ್ಡ್ ರೀತಿ ನಿರ್ವಹಿಸಬಹುದು. ಇದನ್ನೂ ಓದಿ: Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

    ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ನಕಲಿ ನೋಟು ಹಾವಳಿ ಕಡಿಮೆಯಾಗಲಿದೆ. ನೋಟುಗಳ ಮುದ್ರಣ ವೆಚ್ಚ ಕಡಿಮಯಾಗಲಿದೆ. ಆರ್ಥಿಕ ಚೇತರಿಕೆ ಶೀಘ್ರವಾಗಿ ಆಗಬಹುದು. ಡಿಜಿಟಲ್ ಕರೆನ್ಸಿ ಕಾನೂನು ಬದ್ಧವಾಗಿರುವುದರಿಂದ ತೆರಿಗೆ ಸೋರಿಕೆಯನ್ನು ಕಡಿಮೆ ಮಾಡಬಹುದು. ಹಣ ಎಲ್ಲಿಂದ, ಎಲ್ಲಿಗೆ, ಯಾರಿಗೆ ಹೋಗುತ್ತಿದೆ ಎನ್ನುವುದರ ವಿವರ ಡಿಜಿಟಲ್ ಕರೆನ್ಸಿ ಮೂಲಕ ಪಡೆಯಬಹುದು. ನಗದು ರಹಿತ ಅಭಿಯಾನಕ್ಕೆ ಹೆಚ್ಚು ಒತ್ತು ಕೊಟ್ಟ ಹಾಗೆ ಆಗುತ್ತದೆ. ವಹಿವಾಟು ಸರಳೀಕರಣವಾಗಲಿದೆ. ತೆರಿಗೆ ಹೆಚ್ಚು ಸಂಗ್ರಹಿಸಲು ಹಾಗೂ ಸರ್ಕಾರದ ಆದಾಯ ಸಂಗ್ರಹಕ್ಕೆ ಸಹಾಯವಾಗಲಿದೆ ಎಂದು ವಿಜಯ್‌ ರಾಜೇಶ್‌ ತಿಳಿಸಿದ್ದಾರೆ.

    ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ 2022-23ನೇ ಸಾಲಿನ ಬಜೆಟ್‌ನಲ್ಲಿ ‘ಡಿಜಿಟಲ್ ರೂಪಾಯಿ’ಯನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಸ್ತಾಪ ಪ್ರಕಟಿಸಿದ್ದಾರೆ. 2022-23ರಿಂದ ಅಂದರೆ ಪ್ರಸಕ್ತ ವರ್ಷದಿಂದಲೇ ಆರಂಭವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್, ಡಿಜಿಟಲ್ ರೂಪಾಯಿ ಅನ್ನು ಹಣಕಾಸು ಮಾರುಕಟ್ಟೆಗೆ ಪರಿಚಯಿಸಲಿದೆ. ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿ(ಸಿಬಿಡಿಸಿ)ಯು ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸಲಿದೆ. ಡಿಜಿಟಲ್ ಕರೆನ್ಸಿ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗೆ ಕಾರಣವಾಗುತ್ತದೆ. ಡಿಜಿಟಲ್ ಕರೆನ್ಸಿ ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿಗೆ ಭಾರತ ಎಂಟ್ರಿ – ಆರ್‌ಬಿಐ ನೀಡಲಿದೆ ಡಿಜಿಟಲ್‌ ರುಪಿ