Tag: Vijay Prakash

  • ಗಾಯಕ ವಿಜಯ್ ಪ್ರಕಾಶ್‍ಗೆ ಪಿತೃ ವಿಯೋಗ

    ಗಾಯಕ ವಿಜಯ್ ಪ್ರಕಾಶ್‍ಗೆ ಪಿತೃ ವಿಯೋಗ

    ಮೈಸೂರು: ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರ ತಂದೆ ಇಂದು ವಿಧಿವಶರಾಗಿದ್ದಾರೆ.

    ವಿದ್ವಾನ್ ಎಲ್ ರಾಮಶೇಷ ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಇಂದು ಬೆಳಗ್ಗಿನ ಜಾವ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ವಿದ್ವಾನ್ ಅವರು ಮೈಸೂರಿನ ಬೋಗಾದಿ 2ನೇ ಹಂತದಲ್ಲಿ ವಾಸವಿದ್ದರು. ವಿದ್ವಾನ್ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸದ್ಯ ವಿಜಯ್ ಪ್ರಕಾಶ್ ಅವರು ಅಮೆರಿಕ ಪ್ರವಾಸದಲ್ಲಿದ್ದು, ಈ ವಿಷಯ ತಿಳಿದು ಹಿಂತಿರುಗುತ್ತಿದ್ದಾರೆ.

    ಮಂಗಳವಾರ ವಿದ್ವಾನ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

  • ಶೃಂಗಾರದಲ್ಲೂ ತಮಾಷೆ ಹುಡುಕೋ ಪ್ರತಿಭೆ ಜಗ್ಗಣ್ಣ: ಯೋಗರಾಜ ಭಟ್

    ಶೃಂಗಾರದಲ್ಲೂ ತಮಾಷೆ ಹುಡುಕೋ ಪ್ರತಿಭೆ ಜಗ್ಗಣ್ಣ: ಯೋಗರಾಜ ಭಟ್

    ಬೆಂಗಳೂರು: ಎರಡು ದಿನಗಳ ಹಿಂದೆ ಯೋಗರಾಜ ಭಟ್ಟರು ನಿರ್ದೇಶನದ ಪಂಚತಂತ್ರ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದೆ. ಈಗಾಗಲೇ 5 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿಗೆ ನವರಸನಾಯಕ ಡಬ್‍ಮ್ಯಾಶ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಯೋಗರಾಜ ಭಟ್ಟರು ತಮ್ಮ ಹಾಡಿನ ಮೂಲಕ ಚಳಿಗಾಲಕ್ಕೆ ಯುವ ಜೋಡಿಗಳಿಗೆ ಬೆಚ್ಚನೆಯ ಉಡುಗೊರೆ ನೀಡಿದ್ದಾರೆ. ಶೃಂಗಾರದ ಹೊಂಗೆಮರ ಹಾಡಿನಲ್ಲಿ ವಿಹಾನ್ ಗೌಡ ಮತ್ತು ಅಕ್ಷರಾ ಗೌಡ ಫುಲ್ ರೊಮ್ಯಾಂಟಿಕ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ತುಣುಕನ್ನು ತಮ್ಮ ಇನ್ಸಟಾಗ್ರಾಂನಲ್ಲಿ ಹಾಕಿಕೊಂಡಿರುವ ನವರಸನಾಯಕ ಡಬ್ ಮ್ಯಾಶ್ ಮಾಡಿದ್ದಾರೆ. ತಮ್ಮ ಎವರ್ ಗ್ರೀನ್ ಡೈಲಾಗ್ ಟಚಿಂಗ್, ಟಚಿಂಗ್ ಪದಗಳ ಜೊತೆ ಫನ್ನಿಯಾಗಿ ಕೆಲವು ಸಾಲುಗಳು ಸೇರಿಸಿದ್ದಾರೆ.

    ಭಟ್ರು ತಮಾಷೆಗೆ ಕೇಳುದ್ರು ಜಗ್ಗಣ್ಣ ಈ ಹಾಡು ನೀವ್ imagine ಮಾಡುದ್ರೆ ಹೆಂಗೆ ಅಂತ. ನಾನು ತಮಾಷೆಗೆ ಹಿಂಗ್ ಹಾಡ್ದೆ! ಅವರು ಹೆಂಗ್ sync ಮಾಡುದ್ರು. ನಗಬೇಕು ನಗಿಸಬೇಕು ಅದೆ ನನ್ನ ಧರ್ಮ ಎಂದು ಜಗ್ಗೇಶ್ ಇನ್ಸಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಭಟ್ಟರು, ಶೃಂಗಾರದಲ್ಲೂ ತಮಾಷೆ ಹುಡುಕೋಕೆ ಜಗ್ಗಣ್ಣನಂತ ದೈತ್ಯ ಪ್ರತಿಭೆಗೆ ಮಾತ್ರ ಸಾಧ್ಯ. ನಾನಂತೂ ತುಂಬಾ ನಕ್ಬಿಟ್ಟೆ. ಜೈ ಜಗ್ಗಣ್ಣ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ವಿಹಾನ್ ಗೌಡ ಮತ್ತು ಅಕ್ಷರಾ ಗೌಡ ಇಬ್ಬರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಯುವ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಟೀಸರ್ ಮೂಲಕ ಹೊಸ ಪ್ರೇಮ ಕಥೆಯೊಂದನ್ನು ಹೇಳಲು ಹೊರಟ್ಟಿದ್ದೇನೆ ಎಂದು ಭಟ್ಟರು ಹೇಳಿದ್ದರು. ಇದೀಗ ಸುಂದರ, ರೊಮ್ಯಾಂಟಿಕ್ ಪ್ರೇಮ ಕಥೆ ಎಂಬುದನ್ನು ‘ಶೃಂಗಾರದ ಹೊಂಗೆಮರ’ ಹಾಡಿನಲ್ಲಿ ತೋರಿಸಿದ್ದಾರೆ.

    ಶೃಂಗಾರದ ಹೊಂಗೆಮರ ಎಂಬ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ. ಇದೂವರೆಗೂ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    https://www.instagram.com/p/Br3_Yl-j3EJ/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಇಂಟರ್​ನೆಟ್​ ನೋಡಿ ನಾಚಿಕೆ ಬಿಡಿಸೋದನ್ನ ಕಲಿತ ಭಟ್ಟರ ಶಿಷ್ಯ

    ಇಂಟರ್​ನೆಟ್​ ನೋಡಿ ನಾಚಿಕೆ ಬಿಡಿಸೋದನ್ನ ಕಲಿತ ಭಟ್ಟರ ಶಿಷ್ಯ

    -ಹೊಂಗೆ ಮರದ ಕೆಳಗೆ ಟು ಬಿಡ್ತು ನಾಚಿಕೆ

    ಬೆಂಗಳೂರು: ಗಾಂಧಿ ನಗರದ ವಿಕಟಕವಿ ಯೋಗರಾಜ ಭಟ್ಟರ ಸಾಹಿತ್ಯ ಕೇಳಲು ಬಲು ಚೆಂದ. ಸಿನಿಮಾದ ಹಾಡುಗಳು ಸೇರಿದಂತೆ ಚಿತ್ರದ ಸಾಹಿತ್ಯವನ್ನು ತಮ್ಮದೇ ಶೈಲಿಯಲ್ಲಿ ಭಟ್ಟರು ಬರೆಯುತ್ತಾರೆ. ಈಗ ತಮ್ಮ ಬಹುನಿರೀಕ್ಷಿತ ‘ಪಂಚತಂತ್ರ’ ಚಿತ್ರದ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಎರಡು ದಿನಗಳ ಹಿಂದೆ ಚಿತ್ರದ ಹಾಡು ರಿಲೀಸ್ ಆಗಿದ್ದು, ನೋಡುಗರಿಗೆ ವಾವ್ ಫೀಲಿಂಗ್ ಕೊಡುತ್ತಿದೆ.

    ಚಳಿಗಾಲಕ್ಕೆ ಯುವ ಜೋಡಿಗಳಿಗೆ ಬೆಚ್ಚನೆಯ ಉಡುಗೊರೆ ಎಂಬ ಸಾಲುಗಳಿಂದ ಹಾಡು ಪ್ರಾರಂಭವಾಗುತ್ತದೆ. ಇದಕ್ಕೂ ಮೊದಲು ನಾಯಕ ನಟ ವಿಹಾನ್ ಗೌಡ, ಇಂಟರ್ ನೆಟ್‍ನಲ್ಲಿ ನಾಚಿಕೆ ಬಿಡಿಸೋದನ್ನು ನೋಡಿದ್ದೀನಿ. ಇಲ್ಲಿ ಟ್ರೈ ಮಾಡಲಾ ಎಂಬ ತುಂಟತನದ ಡೈಲಾಗ್ ಹೇಳ್ತರೆ. ಇದಾದ ನಂತರ ಸುಂದರ ಲೋಕವೇ ನಿಮ್ಮ ಕಣ್ಮುಂದೆ ಕಾಣಿಸುತ್ತದೆ. ಯುವ ಜೋಡಿ ರೊಮ್ಯಾಂಟಿಕ್ ಡ್ಯಾನ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರಾವಾಗುತ್ತಿದೆ. ಅಂತೆಯೇ ಭಟ್ಟರ್ ಲೇಖನಿಯಲ್ಲಿ ಮೂಡಿ ಬಂದ ಸಾಲುಗಳು ವಿ.ಹರಿಕೃಷ್ಣ ಅವರ ಸಂಗೀತದ ಜೊತೆ ಸೇರಿಕೊಂಡು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಕೇಳಲು ಹಿತವೆನಿಸುತ್ತದೆ.

    ವಿಹಾನ್ ಗೌಡ ಮತ್ತು ಅಕ್ಷರಾ ಗೌಡ ಇಬ್ಬರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಯುವ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಟೀಸರ್ ಮೂಲಕ ಹೊಸ ಪ್ರೇಮ ಕಥೆಯೊಂದನ್ನು ಹೇಳಲು ಹೊರಟ್ಟಿದ್ದೇನೆ ಎಂದು ಭಟ್ಟರು ಹೇಳಿದ್ದರು. ಇದೀಗ ಸುಂದರ, ರೊಮ್ಯಾಂಟಿಕ್ ಪ್ರೇಮ ಕಥೆ ಎಂಬುದನ್ನು ‘ಶೃಂಗಾರದ ಹೊಂಗೆಮರ’ ಹಾಡಿನಲ್ಲಿ ತೋರಿಸಿದ್ದಾರೆ.

    ಶೃಂಗಾರದ ಹೊಂಗೆಮರ ಎಂಬ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ. ಇದೂವರೆಗೂ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಬೆಂಗಳೂರು: ತರಬೇತಿ ಪಡೆಯದೆ, ಓದದೆ ಇಂದು ಸರಿಗಮಪ ಶೋ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಹನುಮಂತ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಆವೃತ್ತಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಆಯ್ಕೆಯಾಗಿದ್ದರು. ಹನುಮಂತ ಸುಮಧುರವಾಗಿ ಹಾಡು ಹಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಹೊತ್ತು ಮಾತನಾಡದೆ ಭಾವುಕರಾಗಿದ್ದರು.

    ಶನಿವಾರ ಪ್ರಸಾರವಾದ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ಹನುಮಂತ ‘ದುಡ್ಡು ಕೊಟ್ಟರೆ ಬೇಕಾದು ಸಿಗುತೈತೇ ಈ ಜಗದಲಿ ತಮ್ಮ’ ಎಂಬ ಹಾಡನ್ನು ಹಾಡಿದ್ದರು. ಈ ಹಾಡನ್ನು ಹಾಡಿದ ನಂತರ ಅನುಶ್ರೀ ಅವರು ವೇದಿಕೆಯ ಮೇಲೆ ಬಂದು ಈ ಹಾಡನ್ನು ಹಾಡುವ ಮೂಲಕ ನಮ್ಮ ತಾಯಿಯನ್ನು ನೆನಪಿಸಿದ್ದೀರಿ ಎಂದು ಹೇಳಿದರು. ಈ ವೇಳೆ ನಿಮಗೆ ನಿಮ್ಮ ತಾಯಿ ನೆನಪಾಗುತ್ತಿದ್ದಾರಾ ಎಂದು ಪ್ರಶ್ನೆ ಕೇಳಿದ್ದಾರೆ.

    ಅನುಶ್ರೀ ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಸೆಕೆಂಡ್ ಮಾತನಾಡದೆ ಭಾವುಕರಾಗಿ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ನಾನು ನಮ್ಮ ಅಮ್ಮ, ಅಪ್ಪ ಮತ್ತು ಕುರಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಅಮ್ಮನಿಂದ ದೂರ ಇದ್ದೀನಿ. ತುಂಬಾ ನೆನಪಾಗುತ್ತಿದ್ದಾರೆ ಎಂದು ಅಮ್ಮನ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

    ಈ ನಡುವೆ ಅನುಶ್ರೀ ಅವರು ಕ್ಯಾಮೆರಾ ಮುಂದೆ ನಿಮ್ಮ ತಾಯಿಗೆ ಒಂದು ಮಾತು ಹೇಳಿ ಅಂತ ಹೇಳಿದ್ದಾರೆ. ಆಗ ಹನುಮಂತ ತಮ್ಮ ಭಾಷೆಯಲ್ಲಿ ‘ಯವ್ವ ನಾನ್ ಆರಾಮಿದ್ದೀನಿ, ನೀನು ಆರಾಮಾಗಿ ಇರು’ ಎಂದು ಹೇಳಿದ್ದಾರೆ. ಹನುಮಂತ ಹಾಡನ್ನು ಕೇಳಿ ವೇದಿಕೆಯ ಮೇಲಿದ್ದ ಎಲ್ಲರು ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

    ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಅವರು ಅವರವರ ತಾಯಿಯನ್ನು ನೆನಪಿಸಿಕೊಂಡು ಹನುಮಂತಗೆ ಚೆನ್ನಾಗಿ ಹಾಡಿದ್ದೀಯಾ ಎಂದು ಗೋಲ್ಡನ್ ಬಜಾರ್ ಒತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಯಕ ವಿಜಯ್‍ಪ್ರಕಾಶ್ ಬಳಿ ಬೇಡಿಕೆಯಿಟ್ಟು ಭಾವುಕರಾದ ಸಿಎಂ

    ಗಾಯಕ ವಿಜಯ್‍ಪ್ರಕಾಶ್ ಬಳಿ ಬೇಡಿಕೆಯಿಟ್ಟು ಭಾವುಕರಾದ ಸಿಎಂ

    ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ‘ಯುವ ದಸರಾ’ದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಗಾಯಕರಾದ ವಿಜಯ್ ಪ್ರಕಾಶ್ ಅವರ ಬಳಿ ವಿಶೇಷ ಬೇಡಿಕೆಯಿಟ್ಟು ಭಾವುಕರಾಗಿದ್ದಾರೆ.

    ಯುವ ದಸರಾದಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರ ರಸಮಂಜರಿ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಅವರು ಸೂಪರ್ ಹಿಟ್ ಹಾಡುಗಳನ್ನು ಹಾಡಿ ಅಭಿಮಾನಿ ಹಾಗೂ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರು ಕೂಡ ಭಾಗಿಯಾಗಿದರು.

    ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ವಿಜಯ್ ಅವರಿಗೆ ‘ಒಳಿತು ಮಾಡು ಮನುಸಾ, ನೀ ಇರೋದು ಮೂರು ದಿವಸ’ ಹಾಡನ್ನು ಹಾಡಲು ಒತ್ತಾಯಿಸಿದರು. ಸಿಎಂ ಒತ್ತಾಯಕ್ಕೆ ಮಣಿದು ವಿಜಯ್ ಸಿ. ಅಶ್ವಥ್ ಅವರ ಈ ಸೂಪರ್ ಹಿಟ್ ಹಾಡನ್ನು ಹಾಡಿ ಅವರನ್ನು ಸಂತೋಷಪಡಿಸಿದರು.

    ಈ ಹಾಡು ಮುಗಿಯುತ್ತಿದ್ದಂತೆ ಕುಮಾರಸ್ವಾಮಿ ಅವರು ಮತ್ತೊಮ್ಮೆ ಈ ಹಾಡನ್ನು ಹಾಡುವಂತೆ ವಿಜಯ್ ಪ್ರಕಾಶ್ ಅವರ ಬಳಿ ಮನವಿ ಮಾಡಿಕೊಂಡರು. ವಿಜಯ್ ಪ್ರಕಾಶ್ ಕೂಡ ಕುಮಾರಸ್ವಾಮಿ ಅವರಿಗಾಗಿ ಈ ಹಾಡನ್ನು ಮತ್ತೊಮ್ಮೆ ಹಾಡಿದರು.

    ವಿಜಯ್ ಪ್ರಕಾಶ್ ಈ ಹಾಡನ್ನು ಹಾಡುತ್ತಿದ್ದಂತೆ ಕುಮಾರಸ್ವಾಮಿ ಅವರು ಭಾವುಕರಾದರು. ಅಲ್ಲದೇ ಅವರ ಕಣ್ಣಿನ ಅಂಚಿನಲ್ಲಿ ಕಣ್ಣೀರು ಕೂಡ ಬಂತು. ಸದ್ಯ ಈ ಹಾಡು ಕುಮಾರಸ್ವಾಮಿ ಅವರ ನೆಚ್ಚಿನ ಹಾಡಾಗಿದ್ದು, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸ್ವತಃ ಅವರೇ ಈ ಹಾಡಿಗೆ ಬೇಡಿಕೆಯಿಟ್ಟು ಹಾಡಿಸುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುರಿಗಾಯಿ ಹನುಮಂತರಿಗೆ ಒಲಿದು ಬಂತು ಅದೃಷ್ಟ

    ಕುರಿಗಾಯಿ ಹನುಮಂತರಿಗೆ ಒಲಿದು ಬಂತು ಅದೃಷ್ಟ

    ಬೆಂಗಳೂರು: ಸಂಗೀತ ತರಬೇತಿಗೆ ಹೋಗದೆ, ಕುರಿಕಾಯುತ್ತಾ ಹಾಡುಗಳನ್ನು ಹಾಡಿಕೊಂಡು ಇಂದು ಸರಿಗಮಪ ವೇದಿಕೆಯನ್ನೇರಿ ಜನರ ಮೆಚ್ಚುಗೆಯನ್ನು ಗಳಿಸಿರುವ ಹಾವೇರಿಯ ಹನುಮಂತ ಅವರಿಗೆ ಅದೃಷ್ಟ ಒಲಿದು ಬಂದಿದೆ.

    ಹನುಮಂತ ಅವರ ಪ್ರತಿಭೆ ನೋಡಿ ಗಾಯಕ ವಿಜಯ್ ಪ್ರಕಾಶ್ ಅವರು, ತಾವೇ ಹನುಮಂತನಿಗೆ ಸಂಗೀತ ಕಲಿಸುವ ಭರವಸೆ ನೀಡಿದ್ದಾರೆ. ಹನುಮಂತ ‘ಸರಿಗಮಪ ಸೀಸನ್ 15’ ಮೆಗಾ ಆಡಿಷನ್ ನಲ್ಲಿ ಆಯ್ಕೆಯಾಗಿದ್ದು, ‘ನಿನ್ನೊಳಗ ನೀನು ತಿಳಿದು ನೋಡಣ್ಣ..’ ಎಂಬ ಜನಪದ ಗೀತೆಯನ್ನ ಹಾಡಿದ್ದರು. ಇವರ ಹಾಡನ್ನು ಕೇಳಿ ತೀರ್ಪುಗಾರರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಮಹಾ ಗುರುಗಳಾದ ಹಂಸಲೇಖ ಅವರು ತಮ್ಮ ಹೆಗಲ ಮೇಲೆ ಇದ್ದ ಕೌದಿಯನ್ನು ಹನುಮಂತರಿಗೆ ಹಾಕಿ, ಅವರು ಹಾಕಿದ್ದ ಟವೆಲ್ ಅನ್ನು ತಮ್ಮ ಹೆಗಲ ಮೇಲೆ ಹಾಕಿಸಿಕೊಂಡಿದ್ದರು. ಇದನ್ನೂ ಓದಿ: ಓದಿಲ್ಲ, ಸಂಗೀತ ತರಬೇತಿ ಪಡೆದಿಲ್ಲ, ಕುರಿ ಮೇಯಿಸುತ್ತಾ ಸರಿಗಮಪ ವೇದಿಕೆಯೇರಿದ ಹನುಮಂತನ ಕಥೆ

    ಇದೇ ವೇಳೆ ನೀನು ಹಾಡನ್ನು ಅದ್ಭುತವಾಗಿ ಹಾಡಿದೆ. ನೀನು ಹಾಡು ಕಲಿಯುತ್ತಿದ್ದೀಯಾ ಎಂದು ಕೇಳುವುದು ಸರೀನಾ.. ಇಲ್ವಾ.. ಗೊತ್ತಿಲ್ಲ. ಆದರೆ, ನಾನು ನನಗೆ ಗೊತ್ತಿರುವಷ್ಟು ಸಂಗೀತವನ್ನು ನಿನ್ನ ಜೊತೆಗೆ ಹಂಚಿಕೊಳ್ಳುತ್ತೇನೆ ಅಂತ ವಿಜಯ್ ಪ್ರಕಾಶ್ ಹೇಳುವ ಮೂಲಕ ಹನುಮಂತನಿಗೆ ತಾವೇ ಸಂಗೀತ ಕಲಿಸುವ ಭರವಸೆಯನ್ನು ನೀಡಿದ್ದಾರೆ.

    ನನ್ನ ಜೀವನದ ಪಯಣದಲ್ಲಿ ನಾನು ಅನೇಕರನ್ನು ಭೇಟಿ ಮಾಡಿದ್ದೇನೆ. ಶಕ್ತಿಶಾಲಿ ಇರುವವರು, ಶ್ರೀಮಂತರು ಮತ್ತು ಚಾಣಾಕ್ಷರು ಹೀಗೆ ಎಲ್ಲರನ್ನು ನೋಡಿದ್ದೇನೆ. ಆದರೆ ಜೀವನವನ್ನ ಜೀವಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಇಂದು ಭೇಟಿ ಮಾಡಿದೆ. ಭಗವಂತನ ಸೃಷ್ಟಿಯಲ್ಲಿ ಬದುಕನ್ನ ಹೇಗೆ ಬದುಕಬೇಕು ಎಂದು ತೋರಿಸುವ ಒಬ್ಬ ವ್ಯಕ್ತಿಯನ್ನ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇನೆ ಎಂದು ವಿಜಯ ಪ್ರಕಾಶ್ ಹನುಮಂತನ ಬಗ್ಗೆ ಮಾತನಾಡಿದ್ದಾರೆ.

    ಈ ವೇದಿಕೆ ಮೇಲೆ ಬಹಳ ಗೌರವ ಬರುತ್ತಿದೆ. ಕುರಿ ಕಾಯಿಸುವ ಒಬ್ಬ ಹುಡುಗ ಈ ವೇದಿಕೆ ಮೇಲೆ ಬಂದಿದ್ದಾನೆ. ಇದು ಎಷ್ಟೋ ಜನಪದರ ಕನಸಾಗಿದೆ. ಜೀವಿಸಲು ಯೋಚನೆ ಮಾಡುವವನು ಬುದ್ಧಿವಂತ, ಯೋಚನೆನೇ ಮಾಡದೆ ಜೀವಿಸುವವನು ಹನುಮಂತ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv