Tag: vijay malya

  • ಮದ್ಯದ ದೊರೆ ವಿಜಯ್ ಮಲ್ಯರ ಐಷಾರಾಮಿ ಕಾರುಗಳಿಗೆ ಹುಬ್ಬಳ್ಳಿ ವ್ಯಕ್ತಿ ಒಡೆಯ!

    ಮದ್ಯದ ದೊರೆ ವಿಜಯ್ ಮಲ್ಯರ ಐಷಾರಾಮಿ ಕಾರುಗಳಿಗೆ ಹುಬ್ಬಳ್ಳಿ ವ್ಯಕ್ತಿ ಒಡೆಯ!

    ಹುಬ್ಬಳ್ಳಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ಐಷಾರಾಮಿ ಕಾರುಗಳಿಗೆ ಇದೀಗ ಹುಬ್ಬಳ್ಳಿ ಮೂಲದ ಉದ್ಯಮಿ ಒಡೆಯರಾಗಿದ್ದಾರೆ.

    ಹೌದು. ಸಾಲಮಾಡಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಐಷಾರಾಮಿ ಎರಡು ಕಾರುಗಳನ್ನ ಹುಬ್ಬಳ್ಳಿ ಮೂಲದ ಉದ್ಯಮಿ ಹನುಮಂತರೆಡ್ಡಿ ಆನ್‍ಲೈನ್ ಹರಾಜಿನಲ್ಲಿ ಕೇವಲ 1.40ಲಕ್ಷಕ್ಕೆ ಖರೀದಿಸಿದ್ದಾರೆ.

    ಹುಬ್ಬಳ್ಳಿ ಗೋಕುಲ ರಸ್ತೆ ಮಂಜುನಾಥ್ ನಗರದ ನಿವಾಸಿಯಾಗಿರೋ ಹನುಮಂತರೆಡ್ಡಿ, ಕಳೆದ ಜನವರಿ ತಿಂಗಳಿನಲ್ಲಿ ಮುಂಬೈಯಲ್ಲಿ ನಡೆದ ಆನ್ ಲೈನ್ ಹರಾಜಿನಲ್ಲಿ 13.15ಲಕ್ಷ ಮೌಲ್ಯದ ಹುಂಡೈ ಸೊನಾಟಾ ಗೋಲ್ಡ್ ಕಾರು 40 ಸಾವಿರಕ್ಕೆ ದೊರೆತಿದೆ. ಅಲ್ಲದೆ ಇನ್ನೊಂದು 21 ಲಕ್ಷಕ್ಕೂ ಅಧಿಕ ಮೌಲ್ಯದ ಹೋಂಡಾ ಎಕಾರ್ಡ್ ಕಾರು ಕೇವಲ 1 ಲಕ್ಷಕ್ಕೆ ಖರೀದಿಸಿದ್ದಾರೆ. ಎರಡೂ ಕಾರು ವ್ಯಾಟ್ ಸೇರಿ ಒಟ್ಟು 1 ಲಕ್ಷ 58 ಸಾವಿರದ 900 ರೂ ಪಾವತಿಸಿದ್ದಾರೆ.

    ಹುಂಡೈ ಸೊನಾಟಾ ಗೋಲ್ಡ್ ಕಾರ್ 2002ರ ಮಾಡೆಲ್ ನಾಗಿದ್ದು, ಹೋಂಡಾ ಎಕಾರ್ಡ್ 2003 ನೇ ಮಾಡೆಲ್ ದಾಗಿದೆ. ಎರಡೂ ಕಾರ್ ಗಳು ಕೂಡ ಹೊಸ ಕಾರಿನಂತೆ ಉತ್ತಮವಾಗಿ ಓಡಾಡುತ್ತಿದೆ ಅಂತ ಮಾಲೀಕ ಹನುಮಂತ ರೆಡ್ಡಿ ಹೇಳಿದ್ದಾರೆ.

    ಈ ಕಾರ್ ಹರಾಜಿಗೆ ಪಡೆದುಕೊಂಡ ಬಳಿಕ ಇದರ ಬೆಲೆ ಹೆಚ್ಚಾಗಿದೆ. ಅಲ್ಲದೇ ಹಲವಾರು ಮಂದಿ ಈ ಕಾರನ್ನು ಕೊಡುವುದಾದರೆ ಹೇಳಿ ನಾವು ಹರಾಜಿಗಿಂತ ದುಪ್ಪಟ್ಟು ಹಣ ಕೊಟ್ಟು ಖರೀದಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಹುಂಡೈ ಸೊನಾಟಾ ಗೋಲ್ಡ್ ಸೆಕೆಂಡ್ ಹ್ಯಾಂಡ್ ಕಾರ್ ಬೆಲೆ 2.5 ಲಕ್ಷ ರೂ. ಹಾಗೂ ಹೋಂಡಾ ಎಕಾರ್ಡ್ ಬೆಲೆ 4.5 ಲಕ್ಷ ಇದ್ದು, ಈ ಎರಡೂ ಕಾರ್ ಗಳಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಬಂದಲ್ಲಿ ಮಾರುತ್ತೇನೆ ಅಂತ ಹನುಮಂತರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರೂ. ಸಾಲ ಮಾಡಿ ಮರುಪಾವತಿಸಲು ಸಾಧ್ಯವಾಗದೇ ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಹಾರಿದ್ದಾರೆ. ಅವರನ್ನು ಭಾರತಕ್ಕೆ ಕರೆಸಲು ಹಲವು ಪ್ರಯತ್ನಗಳನ್ನು ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಅವರ ಒಂದೊಂದೇ ಆಸ್ತಿ ಗಳನ್ನು ಹರಾಜು ಹಾಕಲಾಗುತ್ತಿದೆ.

  • ದೇಶದ ಬಡ ಜನರಿಗೆ ಮೋಸ ಮಾಡಿದ ಯಾರನ್ನೂ ಬಿಡಲ್ಲ: ಮೋದಿ

    ದೇಶದ ಬಡ ಜನರಿಗೆ ಮೋಸ ಮಾಡಿದ ಯಾರನ್ನೂ ಬಿಡಲ್ಲ: ಮೋದಿ

    ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯರನ್ನು ಲಂಡನ್ ನ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಮಂಗಳವಾರ ಬಂಧಿಸಿದ್ದು, ಬಂಧನವಾದ 3 ಗಂಟೆಯ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

    `ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮೋಸ ಮಾಡಿದ ಯಾರನ್ನೂ ಬಿಡಲ್ಲ. ದೇಶದ ಜನರ ಹಣವನ್ನು ಲೂಟಿ ಮಾಡಿದವರು ಆ ಹಣವನ್ನು ಮತ್ತೆ ಹಿಂದುರಿಗಿಸಲೇ ಬೇಕು’ ಅಂತಾ ಪ್ರಧಾನಿ ಖಾರವಾಗಿಯೇ ನುಡಿದಿದ್ದಾರೆ.

    ಇದನ್ನೂ ಓದಿ: ಕೊನೆಗೂ ವಿಜಯ್ ಮಲ್ಯ ಬಂಧನ

    ಏನಿದು ಪ್ರಕರಣ?: ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತದ ವಿವಿಧ ಬ್ಯಾಂಕ್‍ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಮಾಡಿ ಬಳಿಕ 2016ರ ಮಾರ್ಚ್ 2ರಂದು ಲಂಡನ್ ಗೆ ಹಾರಿದ್ದರು. ಮಲ್ಯ ಲಂಡನ್ ನಲ್ಲಿ ಇರುವುದು ಗೊತ್ತಾಗುತ್ತಿದ್ದಂತೆಯೇ ಇತ್ತ ಭಾರತ ಸರ್ಕಾರ ಲಂಡನ್ ಸರ್ಕಾರವನ್ನು ಸಂಪರ್ಕಿಸಿ ಮಲ್ಯರನ್ನು ಹಸ್ತಾಂತರಿಸುವಂತೆ ಕೋರಿತ್ತು. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆದು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಲ್ಯ ಬಂಧನಕ್ಕೆ ಆದೇಶ ನೀಡಿತ್ತು. ಅಂತೆಯೇ ಬ್ರಿಟಿಷ್ ಕಾಲಮಾನ ಪ್ರಕಾರ ಮಂಗಳವಾರ 9.30ರ ವೇಳೆ ಮಲ್ಯರನ್ನು ಬಂಧಿಸಲಾಗಿತ್ತು. ನಂತ್ರ ಲಂಡನ್‍ನ ವೆಸ್ಟ್ ಮಿನಿಸ್ಟರ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಬಳಿಕ ಮಲ್ಯಗೆ ಜಾಮೀನು ಸಿಕ್ಕಿದ್ದು, ವಿಚಾರಣೆ ಮೇ 17 ರಂದು ನಡೆಯಲಿದೆ.

    ಇದನ್ನೂ ಓದಿ: ಅರೆಸ್ಟ್ ಆದ ಮೂರೇ ಗಂಟೆಗಳಲ್ಲಿ ಮಲ್ಯಗೆ ಜಾಮೀನು

    https://www.youtube.com/watch?v=NlBz1oBYjvY