Tag: vijay mallya

  • ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

    ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

    ಮುಂಬೈ: ಈಗ ನಾನು ಏನಾದರೂ ಆರ್‌ಸಿಬಿ (RCB) ಫ್ರಾಂಚೈಸಿನಲ್ಲಿ ಇದ್ದಿದ್ದರೆ ಕನ್ನಡಿಗ ಕೆ.ಎಲ್‌.ರಾಹುಲ್‌ನನ್ನು (K.L.Rahul) ಬಿಡ್‌ ಮಾಡುತ್ತಿದ್ದೆ ಎಂದು ವಿಜಯ್‌ ಮಲ್ಯ (Vijay Mallya) ತಿಳಿಸಿದ್ದಾರೆ.

    18 ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮಾಜಿ ಮಾಲೀಕ ವಿಜಯ್‌ ಮಲ್ಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. 2008ರಲ್ಲಿ ಆರ್‌ಸಿಬಿ ತಂಡವನ್ನು ಸ್ಥಾಪಿಸಿದ ಕುರಿತು ಕುರಿತು ಹಲವು ಸ್ವಾರಸ್ಯಕರ ವಿಚಾರಗಳನ್ನು ಮಲ್ಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    ಆರ್‌ಸಿಬಿ ಫ್ರಾಂಚೈಸಿಯಲ್ಲಿ ಈಗ ಇದ್ದಿದ್ದರೆ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸುತ್ತಿದ್ದಿರಿ ಎಂಬ ಪ್ರಶ್ನೆಗೂ ಮಲ್ಯ ಉತ್ತರ ನೀಡಿದ್ದಾರೆ. ನಾಲ್ವರು ಆಟಗಾರರನ್ನು ಹೆಸರಿಸಿದ್ದಾರೆ. ಅವರು ದೇಶದ ಅತ್ಯುತ್ತಮ ಕ್ರಿಕೆಟಿಗರು ಎಂದು ಹೇಳಿಕೊಂಡಿದ್ದಾರೆ.

    ಕೆ.ಎಲ್‌.ರಾಹುಲ್‌, ಜಸ್ಪ್ರಿತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ ಈ ನಾಲ್ವರನ್ನು ನಾನು ಆಯ್ಕೆ ಆರ್‌ಸಿಬಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಈ ನಾಲ್ವರು ನನ್ನಲ್ಲಿದ್ದರೆ ನನಗೆ ಬೇರೆ ಯಾರೂ ಬೇಕಾಗಿಲ್ಲ. ಆಗ ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತಿದ್ದೆ ಎಂದು ಮಲ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಕೇಸ್‌ – ಕೊಹ್ಲಿ ವಿರುದ್ಧ ದೂರು ದಾಖಲು

    ಆರ್‌ಸಿಬಿ ಒಂದು ಕಾಲದಲ್ಲಿ ಸ್ಥಳೀಯ ಹುಡುಗ ಕೆಎಲ್ ರಾಹುಲ್ ಅವರನ್ನು ತಮ್ಮ ಆಟಗಾರ ಎಂದು ಕರೆದರೆ, ಉಳಿದ ಮೂವರು ಆಟಗಾರರನ್ನು ತಮ್ಮ ಆಟಗಾರ ಎಂದು ಕರೆಯಲು ಅವರಿಗೆ ಎಂದಿಗೂ ಸಾಧ್ಯವಾಗಿಲ್ಲ. ಪಂತ್, ಯಾದವ್‌ ಮತ್ತು ಬುಮ್ರಾ ಎಲ್ಲರೂ 2024 ರಲ್ಲಿ ಭಾರತದ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಬೆನ್ನೆಲುಬಾಗಿ ಕಾಣುತ್ತಾರೆ.

  • ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    – ಅಂಡರ್‌-19ನಲ್ಲಿ ಆಡುತ್ತಿದ್ದ ಹುಡುಗ ಕೊಹ್ಲಿ ಬಿಡ್‌ ಮಾಡಿದ್ದನ್ನು ನೆನಪಿಸಿಕೊಂಡ ಮಲ್ಯ

    ಮುಂಬೈ: 18 ವರ್ಷಗಳ ಹೋರಾಟ, ಛಲ ಮತ್ತು ಪರಿಶ್ರಮದ ನಂತರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಅಂತಿಮವಾಗಿ ಐಪಿಎಲ್‌ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಹೊತ್ತಿನಲ್ಲೇ ಆರ್‌ಸಿಬಿ ಫ್ರಾಂಚೈಸಿ ಮೊದಲ ಮಾಲೀಕರಾಗಿದ್ದ ವಿಜಯ್‌ ಮಲ್ಯ ಸುದ್ದಿಯಲ್ಲಿದ್ದಾರೆ.

    ಐಪಿಎಲ್‌ ಆರಂಭವಾದ ಬಳಿಕ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದ ಬಗ್ಗೆ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ ಪಾಡ್‌ಕಾಸ್ಟ್‌ನಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾನು ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡಿದ್ದೆ. ಮುಂಬೈ ತಂಡವನ್ನು ಮುಖೇಶ್ ಅಂಬಾನಿ ಖರೀದಿಸಿದರು. ಮುಂಬೈನಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತ ನಂತರ ಅಂತಿಮವಾಗಿ ಆರ್‌ಸಿಬಿಯನ್ನು 112 ಮಿಲಿಯನ್‌ ಯುಎಸ್‌ ಡಾಲರ್‌ಗೆ (ಇದು 2008 ರಲ್ಲಿ 600-700 ಕೋಟಿ ರೂ. ಮೌಲ್ಯ) ಖರೀದಿಸಿದೆ ಎಂದು ಮಲ್ಯ ತಿಳಿಸಿದ್ದಾರೆ.

    ಈ ಲೀಗ್‌ ಬಗ್ಗೆ ಲಲಿತ್‌ ಮೋದಿ ಹೇಳಿದಾಗ ನಾನು ತುಂಬಾ ಪ್ರಭಾವಿತನಾಗಿದ್ದೆ. ಅವರು ಒಂದು ದಿನ ನನಗೆ ಕರೆ ಮಾಡಿ, ತಂಡಗಳನ್ನು ಹರಾಜು ಮಾಡಲಾಗುವುದು ಎಂದು ಹೇಳಿದರು. ನೀವು ಯಾವುದನ್ನು ಖರೀದಿಸುತ್ತೀರಾ? ಎಂದರು. ಹಾಗಾಗಿ, ನಾನು ಮೂರು ಫ್ರಾಂಚೈಸಿಗಳಿಂದ ಬಿಡ್ ಮಾಡಿದೆ. ಮುಂಬೈಯನ್ನು ಬಹಳ ಕಡಿಮೆ ಮೊತ್ತದಿಂದ ಕಳೆದುಕೊಂಡೆ ಎಂದು ಹೇಳಿಕೊಂಡಿದ್ದಾರೆ.

    2008 ರಲ್ಲಿ ನಾನು ಆರ್‌ಸಿಬಿ ಫ್ರಾಂಚೈಸಿಯನ್ನು ಬಿಡ್ ಮಾಡಿದಾಗ, ಐಪಿಎಲ್ ಅನ್ನು ಭಾರತೀಯ ಕ್ರಿಕೆಟ್‌ಗೆ ಒಂದು ದಿಕ್ಕನ್ನೇ ಬದಲಾಯಿಸುವ ತಂಡವೆಂದು ನಾನು ನೋಡಿದೆ. ಬೆಂಗಳೂರಿನ ಉತ್ಸಾಹಭರಿತ, ಕ್ರಿಯಾತ್ಮಕ, ಆಕರ್ಷಕ ಮನೋಭಾವವನ್ನು ಸಾಕಾರಗೊಳಿಸುವ ತಂಡವನ್ನು ರಚಿಸುವುದು ನನ್ನ ಗುರಿಯಾಗಿತ್ತು. ಆರ್‌ಸಿಬಿ ಮೈದಾನದಲ್ಲಿ ಮಾತ್ರವಲ್ಲ, ಹೊರಗೂ ಶ್ರೇಷ್ಠತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ಆಗಬೇಕೆಂದು ನಾನು ಬಯಸಿದ್ದೆ. ಅದಕ್ಕಾಗಿಯೇ ನಾನು ನಮ್ಮ ಮದ್ಯದ ಬ್ರಾಂಡ್‌ಗಳಲ್ಲಿ ಒಂದಾದ ರಾಯಲ್‌ ಚಾಲೆಂಜ್‌ ಹೆಸರನ್ನೇ ಫ್ರಾಂಚೈಸಿಗೆ ಇಟ್ಟೆ ಎಂದು ಆರ್‌ಸಿಬಿ ಹೆಸರು ಹೇಗೆ ಬಂತು ಎಂಬುದನ್ನು ಮಲ್ಯ ವಿವರಿಸಿದ್ದಾರೆ.

    ಹರಾಜಿನಲ್ಲಿ ವಿರಾಟ್ ಕೊಹ್ಲಿಯನ್ನು ಖರೀದಿಸಿದ್ದನ್ನು ಕೂಡ ಮಲ್ಯ ನೆನಪಿಸಿಕೊಂಡಿದ್ದಾರೆ. ಕೊಹ್ಲಿಯನ್ನು ಅವರ ರಾಜ್ಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ (ಆಗ ಡೆಲ್ಲಿ ಡೇರ್‌ಡೆವಿಲ್ಸ್) ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಫ್ರಾಂಚೈಸಿ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತು. ಇದರಿಂದಾಗಿ ಆರ್‌ಸಿಬಿಗೆ ಹದಿಹರೆಯದ ಪ್ರತಿಭೆಯನ್ನು ಸೇರಿಸಿಕೊಳ್ಳಲು ಸಾಧ್ಯವಾಯಿತು. ನಾನು ಆರ್‌ಸಿಬಿಯನ್ನು ಒಂದು ಶಕ್ತಿಶಾಲಿ ತಂಡವನ್ನಾಗಿ ಮಾಡಬಲ್ಲ ಆಟಗಾರರನ್ನು ಆಯ್ಕೆ ಮಾಡಿದೆ. ಅಂಡರ್-19 ವಿಶ್ವಕಪ್ ತಂಡದ ಯುವ ಆಟಗಾರ ವಿರಾಟ್ ಕೊಹ್ಲಿಯನ್ನು ಗುರುತಿಸಿದ್ದು ದೊಡ್ಡ ಹೆಮ್ಮೆ. ಕೊಹ್ಲಿ ವಿಶೇಷ ಎಂದು ನನ್ನ ಮನಸ್ಸು ಆಗಲೇ ಹೇಳಿತ್ತು. ನಾನು ಅವರನ್ನು ಆಯ್ಕೆ ಮಾಡಿದೆ. ರಾಹುಲ್ ದ್ರಾವಿಡ್ ಅವರನ್ನು ನಮ್ಮ ಐಕಾನ್ ಆಟಗಾರನನ್ನಾಗಿ ಪಡೆಯುವುದು ಯಾವುದೇ ತೊಂದರೆಯಾಗಲಿಲ್ಲ. ಅವರು ಬೆಂಗಳೂರಿನ ಹೆಮ್ಮೆ. ನಾವು ಜಾಕ್ವೆಸ್ ಕಾಲಿಸ್, ಅನಿಲ್ ಕುಂಬ್ಳೆ ಮತ್ತು ಜಹೀರ್ ಖಾನ್‌ರಂತಹ ಜಾಗತಿಕ ತಾರೆಗಳನ್ನು ಸಹ ಕರೆತಂದೆವು. ನನಗೆ ಸ್ಥಳೀಯ ನಾಯಕರು ಮತ್ತು ಅಂತರರಾಷ್ಟ್ರೀಯ ಪ್ರತಿಭೆಯ ಮಿಶ್ರಣ ಬೇಕಿತ್ತು. ಐಪಿಎಲ್ ಟ್ರೋಫಿಯನ್ನು ಬೆಂಗಳೂರಿಗೆ ತರುವುದು ನನ್ನ ಕನಸಾಗಿತ್ತು. ಆ ಗುರಿಯೊಂದಿಗೆ ನಾನು ತಂಡವನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.

    ಆಯ್ಕೆ ಪ್ರಕ್ರಿಯೆಗೆ ಸ್ವಲ್ಪ ಮೊದಲು, ಅವರು U-19 ವಿಶ್ವಕಪ್ ಆಡುತ್ತಿದ್ದರು. ನಾನು ಅವರ ಬಗ್ಗೆ ತುಂಬಾ ಪ್ರಭಾವಿತನಾಗಿದ್ದೆ. ಹಾಗಾಗಿ, ನಾನು ಅವರನ್ನು ಆಯ್ಕೆ ಮಾಡಿದೆ. 18 ವರ್ಷಗಳ ನಂತರವೂ ಕೊಹ್ಲಿ ಅದೇ ಟೀಂನಲ್ಲಿದ್ದಾರೆ. ನಾನು ಅವರನ್ನು ಖರೀದಿಸುವಾಗ ಸಣ್ಣ ವಯಸ್ಸಿನ ಹುಡುಗ ಕೊಹ್ಲಿ. ಆದರೆ, ಅವರೊಬ್ಬ ಪ್ರತಿಭಾವಂತ ಎಂಬುದು ನಿಮಗೆ ಗೊತ್ತಾಗಿದೆ. ಇದುವರೆಗಿನ ಶ್ರೇಷ್ಠ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಎಂದು ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.

  • ಆರ್‌ಸಿಬಿ ಅಭಿಮಾನಿಗಳ ಸಾವಿಗೆ ಸಂತಾಪ ಸೂಚಿಸಿದ ವಿಜಯ್‌ ಮಲ್ಯ

    ಆರ್‌ಸಿಬಿ ಅಭಿಮಾನಿಗಳ ಸಾವಿಗೆ ಸಂತಾಪ ಸೂಚಿಸಿದ ವಿಜಯ್‌ ಮಲ್ಯ

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ  (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತದಿಂದ ಆದ ಜೀವಹಾನಿ ಮತ್ತು ಗಾಯಗೊಂಡವರ ಬಗ್ಗೆ ಕೇಳಿ ತೀವ್ರ ದುಃಖವಾಗಿದೆ ಎಂದು ಉದ್ಯಮಿ ವಿಜಯ್‌ ಮಲ್ಯ (Vijay Mallya) ಹೇಳಿಕೊಂಡಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಐಪಿಎಲ್ ಚಾಂಪಿಯನ್‌ ವಿಜಯೋತ್ಸವ ಆಚರಿಸಲು ಬಂದಿದ್ದ ಆರ್‌ಸಿಬಿ ಅಭಿಮಾನಿಗಳು ಸಾವಿಗೀಡಾಗಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪಗಳು, ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

    ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 11 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ಗಾಯಾಳುಗಳಿಗೆ ಬೌರಿಂಗ್‌ ಆಸ್ಪತ್ರೆ, ವೈದೇಹಿ ಆಸ್ಪತ್ರೆ ಹಾಗೂ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ

  • ಈ ಸಲ ಕಪ್ ನಮ್ದೆ – ಆರ್‌ಸಿಬಿಗೆ ವಿಜಯ್‌ ಮಲ್ಯ ವಿಶ್‌

    ಈ ಸಲ ಕಪ್ ನಮ್ದೆ – ಆರ್‌ಸಿಬಿಗೆ ವಿಜಯ್‌ ಮಲ್ಯ ವಿಶ್‌

    ಪ್‌ ಗೆದ್ದ ಆರ್‌ಸಿಬಿ (RCB) ತಂಡಕ್ಕೆ ಉದ್ಯಮಿ ವಿಜಯ್‌ ಮಲ್ಯ  (Vijay Mallya) ಅಭಿನಂದನೆ ಸಲ್ಲಿಸಿದ್ದಾರೆ.

    18 ವರ್ಷಗಳ ನಂತರ ಆರ್‌ಸಿಬಿ ಅಂತಿಮವಾಗಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಪಂದ್ಯಾವಳಿ ಅದ್ಭುತ ಅಭಿಯಾನ ಆಗಿತ್ತು. ಈ ಸಲಾ ಕಪ್ ನಮ್ದೆ !! ಅಭಿನಂದನೆಗಳು ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: 18 ವರ್ಷಗಳ ವನವಾಸ ಅಂತ್ಯ – ಕೊನೆಗೂ ʻಈ ಸಲ ಕಪ್‌ ನಮ್ದುʼ, ಅಭಿಮಾನಿ ದೇವ್ರುಗಳಿಗೆ ಆರ್‌ಸಿಬಿ ಗಿಫ್ಟ್‌

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ.

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ.

    2009, 2011, 2016ರ ಫೈನಲ್‌ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದ್ದ ಆರ್‌ಸಿಬಿ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. 4ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾದ ಆರ್‌ಸಿಬಿ ರಜತ್‌ ಪಾಟಿದಾರ್‌ ನಾಯಕತ್ವದಲ್ಲಿ ಐಪಿಎಲ್‌ ಇತಿಹಾಸ ಪುಟ ಸೇರಿದೆ. ಇದನ್ನೂ ಓದಿ: ಕೊನೆಗೂ ಆರ್‌ಸಿಬಿಗೆ ಸಿಕ್ತು ಕಪ್‌ – ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕೊಹ್ಲಿ

  • ಪಂಜಾಬ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ ಆರ್‌ಸಿಬಿಗೆ ವಿಜಯ್‌ ಮಲ್ಯ ವಿಶ್

    ಪಂಜಾಬ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ ಆರ್‌ಸಿಬಿಗೆ ವಿಜಯ್‌ ಮಲ್ಯ ವಿಶ್

    ಪಂಜಾಬ್‌ ವಿರುದ್ಧ ಭರ್ಜರಿ ಗೆಲವು ಸಾಧಿಸಿ ಫೈನಲ್‌ ಪ್ರವೇಶಿಸಿದ ಆರ್‌ಸಿಬಿ ತಂಡಕ್ಕೆ ಉದ್ಯಮಿ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಆರ್‌ಸಿಬಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ ನೀಡಿದೆ. ಧೈರ್ಯದಿಂದ ಆಟವಾಡಿ, ಕಪ್‌ ಗೆಲ್ಲಿ ಎಂದು ಶುಭ ಹಾರೈಸಿದ್ದಾರೆ.

    ಐಪಿಎಲ್‌ (IPL 2025) ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ (RCB) ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿತು.

    ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಫಿಲ್‌ ಸಾಲ್ಟ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. 27 ಬಾಲ್‌ಗಳಿಗೆ 6 ಫೋರ್‌, 3 ಸಿಕ್ಸರ್‌ನೊಂದಿಗೆ 56 ರನ್‌ (ಔಟಾಗದೇ) ಗಳಿಸಿ ಮಿಂಚಿದರು. ವಿರಾಟ್‌ ಕೊಹ್ಲಿ 12, ಮಯಂಕ್‌ ಅಗರ್ವಾಲ್‌ 19, ರಜತ್‌ ಪಾಟೀದಾರ್‌ 15 ರನ್‌ (ಔಟಾಗದೇ) ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 10 ಓವರ್‌ಗೆ 2 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಜಯ ಸಾಧಿಸಿತು.

    ಪ್ರಿಯಾಂಶ್ ಆರ್ಯ 7, ಜೋಶ್‌ ಇಂಗ್ಲಿಸ್‌ 4, ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ 2, ನೆಹಾಲ್ ವಧೇರಾ 8 ರನ್‌ನ ಒಂದಂಕಿ ಆಟದಿಂದ ನಿರಾಸೆ ಮೂಡಿಸಿದರು. ಪ್ರಭಸಿಮ್ರನ್ ಸಿಂಗ್ 18, ಮಾರ್ಕಸ್ ಸ್ಟೊಯಿನಿಸ್ 26, ಅಜ್ಮತುಲ್ಲಾ ಒಮರ್ಜೈ 18 ರನ್‌ಗಳಿಸಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಕೊನೆಗೆ ಪಂಜಾಬ್‌ 14.1 ಓವರ್‌ಗೆ 101 ರನ್‌ ಗಳಿಸಿ ಆಲೌಟ್‌ ಆಯಿತು.

    2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್‌ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • ವಿಜಯ್ ಮಲ್ಯ, ನೀರವ್ ಮೋದಿ ಅವರ 15,000 ಕೋಟಿ ಆಸ್ತಿ ಬ್ಯಾಂಕ್‌ಗಳಿಗೆ ವಾಪಸ್‌: ಕೇಂದ್ರ ಸರ್ಕಾರ

    ವಿಜಯ್ ಮಲ್ಯ, ನೀರವ್ ಮೋದಿ ಅವರ 15,000 ಕೋಟಿ ಆಸ್ತಿ ಬ್ಯಾಂಕ್‌ಗಳಿಗೆ ವಾಪಸ್‌: ಕೇಂದ್ರ ಸರ್ಕಾರ

    ನವದೆಹಲಿ: ಉದ್ಯಮಿಗಳಾದ ವಿಜಯ್‌ ಮಲ್ಯ (Vijay Malya) ಮತ್ತು ನೀರವ್‌ ಮೋದಿ (Nirav Modi) ಅವರ 15,000 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದು ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಿಳಿಸಿದ್ದಾರೆ.

    ಪರಾರಿಯಾಗಿರುವ ಉದ್ಯಮಿಯ ಸಾಲದ ಒಂದು ಭಾಗವನ್ನು ಪಾವತಿಸಲು 14,131 ಕೋಟಿ ಮೌಲ್ಯದ ಆಸ್ತಿ (ವಿಜಯ್ ಮಲ್ಯಗೆ ಸೇರಿದ ಆಸ್ತಿ) ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮೊದಲಾದ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು 22,280 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಆರ್ಥಿಕ ಅಪರಾಧಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

    ವಶಕ್ಕೆ ಪಡೆದ ಒಟ್ಟು ಮೊತ್ತದಲ್ಲಿ ನೀರವ್‌ ಮೋದಿಗೆ ಸೇರಿದ 1,052 ಕೋಟಿ ಮತ್ತು ಚೋಕ್ಸಿ ಅವರ 2,565 ಕೋಟಿ ಹಣವನ್ನು ಒಳಗೊಂಡಿದೆ. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ ಅಥವಾ ಎನ್‌ಎಸ್‌ಇಎಲ್‌ನಲ್ಲಿನ 17.5 ಕೋಟಿ ಮೊತ್ತವನ್ನು ಸೀಜ್‌ ಮಾಡಿದೆ.

    ಅಕ್ರಮ ಹಣ ಪ್ರಕರಣಗಳಲ್ಲಿ 22,280 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಯಶಸ್ವಿಯಾಗಿ ಜಪ್ತಿ ಮಾಡಿದೆ. ನಾವು ಯಾರನ್ನೂ ಬಿಟ್ಟಿಲ್ಲ. ಅವರು ದೇಶ ಬಿಟ್ಟು ಓಡಿ ಹೋದರೂ ನಾವು ಅವರ ಹಿಂದೆ ಹೋಗಿದ್ದೇವೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

    ನಾವು ಯಾರನ್ನೂ ಬಿಟ್ಟಿಲ್ಲ ಎಂದು ಗುರುತಿಸುವುದು ಮುಖ್ಯ. ಬ್ಯಾಂಕ್‌ಗಳಿಗೆ ಹಿಂತಿರುಗಬೇಕಾದ ಹಣವನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಎಲ್ಲವನ್ನು ವಾಪಸ್‌ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

    ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

    ನವದೆಹಲಿ: ಉದ್ಯಮಿ ವಿಜಯ್ ಮಲ್ಯ (Vijay Mallya) ವಿರುದ್ಧ ಮುಂಬೈ (Mumbai) ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ (Non Bailable Warrant)  ಜಾರಿ ಮಾಡಿದೆ.

    ಬ್ಯಾಂಕ್‌ಗೆ ಸಾಲ ಮರು ಪಾವತಿಸದ ಹಿನ್ನೆಲೆ ವಾರೆಂಟ್ ಜಾರಿ ಮಾಡಲಾಗಿದೆ. ವಿಜಯ್ ಮಲ್ಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ ಲೋನ್ ಪಡೆದಿದ್ದು, ಸಾಲ ಮರುಪಾವತಿ ಮಾಡಿಲ್ಲ. ಮಲ್ಯ 2007-2012ರ ಅವಧಿಯಲ್ಲಿ 180 ಕೋಟಿ ರೂ. ಸಾಲ ಪಡೆದಿದ್ದರು. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ಕರಾವಳಿ, ಮಧ್ಯ ಕರ್ನಾಟಕದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

    ಪ್ರಕರಣದಲ್ಲಿ ಮಲ್ಯ ಸೇರಿ ಹತ್ತು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೀಗ ವಿಜಯ್ ಮಲ್ಯಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು, ಬಾಕಿ ಉಳಿದ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

  • ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

    ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

    ಲಂಡನ್: ಭಾರತದಿಂದ ಪಲಾಯನಗೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಕೊಂಡುಕೊಂಡಿದ್ದ ಟಿಪ್ಪು ಸುಲ್ತಾನ್‌ನ ಖಡ್ಗ (Tipu Sultan’s sword) 145 ಕೋಟಿ ರೂ.ಗೆ ಹರಾಜಾಗಿದೆ.

    ಖಡ್ಗವನ್ನು ಲಂಡನ್‍ನಲ್ಲಿ ಬೋನ್‍ಹ್ಯಾಮ್ ಹರಾಜು ಸಂಸ್ಥೆ ಹರಾಜು ಹಾಕಿದ್ದು 145 ಕೋಟಿ ರೂ.ಗೆ ಬಿಡ್ ಆಗಿದೆ. ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಡ್ಗವನ್ನು ಖರೀದಿ ಮಾಡಿದ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಬೋನ್‍ಹ್ಯಾಮ್ ಹೌಸ್ ಸಂಯೋಜಕ ಎನ್ರಿಕಾ ಮೆಡುಗ್ನೊ ಹೇಳಿದ್ದಾರೆ. ಇದನ್ನೂ ಓದಿ: ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ – 24 ಸಂಭವನೀಯ ಸಚಿವರು ಯಾರು?

    2004ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕಟ್ಟಿಕೊಂಡು ಸ್ಪರ್ಧೆಗೆ ಇಳಿದಿದ್ದ ಮಲ್ಯ, ಪ್ರಚಾರದ ತಂತ್ರವಾಗಿ ಖಡ್ಗವನ್ನು ಬಳಸಿಕೊಂಡಿದ್ದರು. ಆದರೆ ಅವರ ಸಮೇತ ಜನತಾ ಪಕ್ಷದ ಎಲ್ಲಾ ಅಭ್ಯರ್ಥಿಗಳು ಸೋಲು ಕಂಡಿದ್ದರು. ವಿಜಯ್ ಮಲ್ಯ ದಿವಾಳಿಯಾಗಿ ಭಾರತದಿಂದ ಪಲಾಯಾನಗೊಳ್ಳಲು ಈ ಖಡ್ಗ ಕಾರಣ ಎಂಬ ಮಾತು ಕೇಳಿ ಬಂದಿತ್ತು.

    2016ರಲ್ಲಿ ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್‍ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿಬರ್ಂಧ ವಿಧಿಸಲು ಮನವಿ ಮಾಡಿದ್ದವು. ಈ ವೇಳೆ ಉತ್ತರ ನೀಡಿದ್ದ ಮಲ್ಯ, ನಮ್ಮ ಕುಟುಂಬಕ್ಕೆ ಕೇಡು ತಂದ ಖಡ್ಗವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದರು.

    1799ರಲ್ಲಿ ನಡೆದ 4ನೇ ಆಂಗ್ಲೊ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಮರಣ ಹೊಂದಿದಾಗ ಅವರ ಅರಮನೆಯಲ್ಲಿ ಪತ್ತೆಯಾಗಿದ್ದ ಖಡ್ಗವನ್ನು ತೆಗೆದುಕೊಂಡು ಹೋಗಿದ್ದ ಬ್ರಿಟಿಷ್ ಸೇನೆ ಮೆಜರ್ ಜನರಲ್ ಬೇರ್ಡೆಗೆ ಒಪ್ಪಿಸಿತ್ತು. ಬ್ರಿಟಿಷ್ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004 ರಲ್ಲಿ ವಿಜಯ್ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿ ಮಾಡಿದ್ದರು. ಇದನ್ನೂ ಓದಿ: ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು – ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ

  • ಸಿನಿಮಾವಾಗಲಿದೆ ವಿಜಯ್ ಮಲ್ಯ ವಂಚನೆ ಕಥೆ: ಮಲ್ಯ ಪಾತ್ರದಲ್ಲಿ ಅನುರಾಗ್

    ಸಿನಿಮಾವಾಗಲಿದೆ ವಿಜಯ್ ಮಲ್ಯ ವಂಚನೆ ಕಥೆ: ಮಲ್ಯ ಪಾತ್ರದಲ್ಲಿ ಅನುರಾಗ್

    ಹುಕೋಟಿ ವಂಚನೆ ಪ್ರಕರಣದಲ್ಲಿ ದೇಶವನ್ನೇ ಬಿಟ್ಟಿರುವ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಅವರ ವಂಚನೆಯ ಪ್ರಕರಣವನ್ನು ಆಧರಿಸಿದ ಬಾಲಿವುಡ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದ್ದು, ಈ ಸಿನಿಮಾಗೆ ಫೈಲ್ ನಂ 323 (File No 323) ಎಂದು ಹೆಸರಿಡಲಾಗಿದೆ. ಈ ಸಿನಿಮಾಗೆ ಕಾರ್ತಿಕ್ ಎನ್ನುವವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಕಾರ್ತಿಕ್, ಇದೀಗ ಇಂಥದ್ದೊಂದು ಕಥೆಯನ್ನು ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

    ಮಲ್ಯ ಅವರ ಐಷಾರಾಮಿ ಬದುಕು, ಅವರ ಬಿಸ್ನೆಸ್, ವಂಚನೆ ಹಾಗೂ ದೇಶ ಬಿಟ್ಟು ಪರಾರಿಯಾದ ಸಂಗತಿಗಳನ್ನು ಈ ಸಿನಿಮಾ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಕೇವಲ ವಿಜಯ್ ಮಲ್ಯ ಮಾತ್ರವಲ್ಲ, ನೀರವ್ ಮೋದಿ (Nirav Modi), ಮೆಹುಲ್ ಚೋಕ್ಸಿ ಸೇರಿದಂತೆ ಇನ್ನೂ ಹಲವರ ಕಥೆಯೂ ಇರಲಿದೆಯಂತೆ. ಅಂದಹಾಗೆ ವಿಜಯ್ ಮಲ್ಯ ಅವರ ಪಾತ್ರವನ್ನು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ವಹಿಸಲಿದ್ದಾರೆ ಎನ್ನುವುದು ಅಸಲಿ ವಿಷ್ಯ. ಇದನ್ನೂ ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

    ಬ್ಲಾಕ್ ಫ್ರೈಡೇ ಸೇರಿದಂತೆ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮತ್ತು ತಮ್ಮದೇ ಆದ ಸಿದ್ಧಾಂತಗಳ ಮೂಲಕ ಸದಾ ಸುದ್ದಿಯಲ್ಲಿರುವ ಅನುರಾಗ್  ಕಶ್ಯಪ್ (Anurag Kashyap) ನಿರ್ದೇಶನವನ್ನು ಸ್ವಲ್ಪ ದಿನ ಮರೆತು, ವಿಜಯ್ ಮಲ್ಯನಾಗಿ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರಂತೆ. ಅಂದುಕೊಂಡಂತೆ ಆದರೆ, ಇದೇ ತಿಂಗಳು ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆಯಂತೆ. ಸದ್ಯಕ್ಕೆ ಮಲ್ಯ ಪಾತ್ರಕ್ಕೆ ಮಾತ್ರ ಕಲಾವಿದರ ಆಯ್ಕೆಯಾಗಿದೆ. ಉಳಿದ ಕಲಾವಿದರಿಗಾಗಿ ಹುಡುಕಾಟ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯದ ದೊರೆ ವಿಜಯ್‌ ಮಲ್ಯಗೆ 4 ತಿಂಗಳು ಜೈಲು: ಸುಪ್ರೀಂ ಕೋರ್ಟ್ ತೀರ್ಪು

    ಮದ್ಯದ ದೊರೆ ವಿಜಯ್‌ ಮಲ್ಯಗೆ 4 ತಿಂಗಳು ಜೈಲು: ಸುಪ್ರೀಂ ಕೋರ್ಟ್ ತೀರ್ಪು

    ನವದೆಹಲಿ: ಮದ್ಯದ ದೊರೆ ವಿಜಯ್‌ ಮಲ್ಯಗೆ ಸುಪ್ರೀಂ ಕೋರ್ಟ್ 4 ತಿಂಗಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿದೆ.

    2017ರಲ್ಲಿ ನ್ಯಾಯಾಲಯದಿಂದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಬಳಿಕ ಪರಾರಿಯಾಗಿರುವ ಮಲ್ಯಗೆ ಸುಪ್ರೀಂ ಕೋರ್ಟ್ 4 ತಿಂಗಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿದೆ. ಇದರೊಂದಿಗೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾದ 40 ಮಿಲಿಯನ್ ಡಾಲರ್‌ಗಳನ್ನು ಹಿಂದಿರುಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

    ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮಾರ್ಚ್ 10 ರಂದು ಮದ್ಯದ ದೊರೆ ವಿರುದ್ಧದ ವಿಚಾರಣೆಯು `ಡೆಡ್ ವಾಲ್’ ಪ್ರಕರಣದಲ್ಲಿ ತೀರ್ಪನ್ನು ಕಾಯ್ದಿರಿತ್ತು.

    ಈ ಕುರಿತು ನಡೆದ ವಿಚಾರಣೆ ಈ ವೇಳೆ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರ ವಾದವನ್ನು ಆಲಿಸಿದ ಬಳಿಕ ಮಾರ್ಚ್ 15 ರೊಳಗೆ ಲಿಖಿತ ದಾಖಲೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಸೂಚನೆ ನೀಡಿತ್ತು.

    court order law

    ಹಿಂದೆ 9 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳನ್ನು ಮಲ್ಯ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅವರು ಆಸ್ತಿಯನ್ನು ಬಹಿರಂಗಪಡಿಸುತ್ತಿಲ್ಲ ಮತ್ತು ನಿರ್ಬಂಧದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರಿಂದಾಗಿ 2017ರಲ್ಲಿ ಮಲ್ಯರನ್ನು ಅಪರಾಧಿ ಎಂದು ಪರಿಗಣಿಸಲಾಯಿತು. ನಂತರ ಅವರಿಗೆ ನೀಡಬೇಕಾದ ಉದ್ದೇಶಿತ ಶಿಕ್ಷೆಯ ಕುರಿತು ಪಟ್ಟಿ ಮಾಡಲಾಯಿತು.

    ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ 40 ಮಿಲಿಯನ್ ಡಾಲರ್ ವರ್ಗಾವಣೆ ಮಾಡಿದ್ದಕ್ಕಾಗಿ 2017ರ ತೀರ್ಪನ್ನು ಅವಹೇಳನ ಮಾಡಿದ ಮಲ್ಯ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿತ್ತು. ನಂತರದಲ್ಲಿ 2016ರ ಮಾರ್ಚ್‌ನಿಂದ ಯುಕೆಗೆ ತೆಳಿದರು, 2017 ಏಪ್ರಿಲ್‌ 18ರಂದು ಸ್ಕಾಟ್ಲೆಂಡ್ ಯಾರ್ಡ್ ಜಾರಿಗೊಳಿಸಿದ ಹಸ್ತಾಂತರ ವಾರಂಟ್ ಮೇಲೆ ಜಾಮೀನಿನ ಮೇಲೆ ಹೊರಬಂದರು.

    Live Tv
    [brid partner=56869869 player=32851 video=960834 autoplay=true]