Tag: Vijay Kulkarni

  • ಅಪಘಾತವಾದ ಕಾರು ಚಾಲನೆ ಮಾಡಿದ್ದು ನಾನೇ. ಮದ್ಯ ಸೇವಿಸಿರಲಿಲ್ಲ: ವಿಜಯ್ ಕುಲಕರ್ಣಿ

    ಅಪಘಾತವಾದ ಕಾರು ಚಾಲನೆ ಮಾಡಿದ್ದು ನಾನೇ. ಮದ್ಯ ಸೇವಿಸಿರಲಿಲ್ಲ: ವಿಜಯ್ ಕುಲಕರ್ಣಿ

    ಧಾರವಾಡ: ಅಪಘಾತಕ್ಕೊಳಗಾದ ಕಾರ್ ನಾನೇ ಚಲಾಯಿಸುತ್ತಿದ್ದೆ. ಆದ್ರೆ ಚಾಲನೆ ವೇಳೆ ಮದ್ಯ ಸೇವಿಸಿರಲಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ವಿಜಯ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.

    ಸೋಮವಾರ ಸಂಜೆ ಧಾರವಾಡದ ಕೆವಿಜಿ ಬ್ಯಾಂಕ್ ಎದುರಿಗೆ ಬೆಳಗಾವಿ ಕಡೆಯಿಂದ ಬಂದಿದ್ದ ವಿಜಯ್ ಕುಲಕರ್ಣಿ ಕಾರ್ ರಸ್ತೆ ಪಕ್ಕ ನಿಂತಿದ್ದವರ ಮೇಲೆ ಹಾಗೂ ಬೈಕ್ ಮೇಲೆ ಮೇಲೆ ಹರಿದಿತ್ತು. ಈ ಅವಘಡದಲ್ಲಿ ಶೇಖರ್ ಹುದ್ದಾರ ಮತ್ತು ಚರಣ್ ನಾಯ್ಕರ್ ಇಬ್ಬರು ಮೃತಪಟ್ಟಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತವಾದ ಬಳಿಕ ವಿಜಯ್ ಕುಲಕರ್ಣಿ ಅಲ್ಲಿಂದ ಪರಾರಿಯಾಗಿದ್ದಾರೆ. ಅವರೇ ಕುಡಿದು ಕಾರ ಚಾಲನೆ ಮಾಡುತ್ತಿದ್ದರು ಅನ್ನೋ ಆರೋಪಗಳು ಸಹ ಕೇಳಿ ಬಂದಿದ್ದವು.

    ರಾತ್ರಿ ಧಾರವಾಡದ ಸಂಚಾರ ಪೊಲೀಸ್ ಠಾಣೆಗೆ ಆಗಮಿಸಿದ ವಿಜಯ್ ಕುಲಕರ್ಣಿಯನ್ನು ವೈದ್ಯಕೀಯ ತಪಾಸಣೆಗೂ ಒಳಪಡಿಸಲಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರು ನಾನೇ ಚಲಾಯಿಸುತ್ತಿದ್ದೆ. ಮುಂದೆ ಬೈಕ್ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋಗಿ ಅಪಘಾತವಾಗಿದೆ. ಅಪಘಾತ ನಡೆದ ತಕ್ಷಣ ನಾನೇ ಪೊಲೀಸರಿಗೆ ಮಾಹಿತಿ ನೀಡಿ, ಅಂಬ್ಯುಲೆನ್ಸ್ ನಲ್ಲಿ ಗಾಯಾಳುಗಳು ಆಸ್ಪತ್ರೆಗೆ ಹೋದ ಬಳಿಕವೇ ಅಲ್ಲಿಂದ ತೆರಳಿದ್ದೇನೆ. ಯಾವುದೇ ಡ್ರಿಂಕ್ ಡ್ರೈವ್ ಮಾಡಿಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ. ಈಗಾಗಲೇ ನನಗೆ ಆ ಸಂಬಂಧ ಟೆಸ್ಟ್ ಸಹ ಮಾಡಿದ್ದಾರೆ ಎಂದು ಹೇಳಿದರು.

  • ವಿನಯ್ ಕುಲಕರ್ಣಿ ಸಹೋದರನ ಕಾರು ಡಿಕ್ಕಿ – ಇಬ್ಬರು ಸಾವು

    ವಿನಯ್ ಕುಲಕರ್ಣಿ ಸಹೋದರನ ಕಾರು ಡಿಕ್ಕಿ – ಇಬ್ಬರು ಸಾವು

    ಧಾರವಾಡ: ಮಾಜಿ ಸಚಿವನೋರ್ವನ ಸಹೋದರನ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಕೆವಿಜಿ ಬ್ಯಾಂಕ್ ಎದುರಿಗೆ ಈ ಅಪಘಾತ ಸಂಭವಿಸಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರ ಕಿಯಾ ಕಾರ್ನಿವಲ್ ಅಪಘಾತಕ್ಕೀಡಾಗಿದೆ. ಪರಿಣಾಮ ಇಬ್ಬರು ಪಾದಚಾರಿಗಳು ಸಾವನ್ನಪ್ಪಿದ್ದಾರೆ.

    ಅಪಘಾತ ಸಂಭವಿಸಿದ ಸಮಯದಲ್ಲಿ ವಿಜಯ್ ಕುಲಕರ್ಣಿ ಕೂಡಾ ವಾಹನದಲ್ಲಿದ್ದರು. ಅಪಘಾತದ ನಂತರ ಅವರು ಚಾಲಕನನ್ನ ಸ್ಥಳದಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ. ಸಾವನ್ನಪ್ಪಿದ ದುರ್ದೈವಿಗಳನ್ನು ಶೇಖರ್ ಹಾಗೂ ಚರಣ್ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ಇಬ್ಬರು ಮಾವ-ಅಳಿಯ ಎಂದು ತಿಳಿದುಬಂದಿದೆ.

    ಅಪಘಾತದಲ್ಲಿ ಇನ್ನೋರ್ವ ವ್ಯಕ್ತಿಗೆ ಕೂಡಾ ಗಾಯವಾಗಿದ್ದು, ಆತನನ್ನ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯ್ ಕುಲಕರ್ಣಿ ವಾಹನ ಬೆಳಗಾವಿ ಕಡೆಯಿಂದ ಧಾರವಾಡ ನಗರದ ಕಡೆ ಬರುತಿತ್ತು. ಮೃತರ ಶವಗಳನ್ನ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ವಿಜಯ್ ಕುಲಕರ್ಣಿ ವಾಹನವನ್ನ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ವಿಜಯ್ ಕುಲಕರ್ಣಿಗೆ 8 ಗಂಟೆ ಸಿಬಿಐ ಡ್ರಿಲ್

    ವಿಜಯ್ ಕುಲಕರ್ಣಿಗೆ 8 ಗಂಟೆ ಸಿಬಿಐ ಡ್ರಿಲ್

    ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಗಳು ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿಗೆ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

    ಧಾರವಾಡ ಉಪನಗರ ಠಾಣೆಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ್ದ ವಿಜಯ್ ಕುಲಕರ್ಣಿ, ಸಂಜೆ 7 ಗಂಟೆಗೆ ವಿಚಾರಣೆ ಎದುರಿಸಿ ಠಾಣೆಯಿಂದ ಹೊರ ಬಂದರು. ಈ ವೇಳೆ ಮಾಧ್ಯಮದವರು ಪ್ರಶ್ನೆ ಕೇಳಲು ಮುಂದಾದಾಗ ಕೊಲೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿ ನಡೆದರು.

    ಇಂದು ಕೇವಲ ವಿಜಯ್ ಕುಲಕರ್ಣಿಗೆ ಮಾತ್ರವಲ್ಲ ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡ, ಕಾಂಗ್ರೆಸ್ ಮುಖಂಡ ಹನುಂಮತ ಕೊರವರ, ವಿಜಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಹಾಗೂ ಯೋಗಿಶಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿಯನ್ನು ಸಹ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು. ಸಂಜೆವರೆಗೆ ಎಲ್ಲರನ್ನು ವಿಚಾರಣೆ ನಡೆಸಿ ಮರಳಿ ಕಳುಹಿಸಿದ್ದಾರೆ. ನಾಳೆ ಮತ್ತೆ ಕೆಲವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆಸುವ ಸಾದ್ಯತೆ ಇದೆ.

  • ನಮ್ಮನ್ನ ರಾಜಕೀಯವಾಗಿ ಮುಗಿಸಲು ಕುತಂತ್ರ ಮಾಡ್ತಿದ್ದಾರೆ: ವಿಜಯ್ ಕುಲಕರ್ಣಿ

    ನಮ್ಮನ್ನ ರಾಜಕೀಯವಾಗಿ ಮುಗಿಸಲು ಕುತಂತ್ರ ಮಾಡ್ತಿದ್ದಾರೆ: ವಿಜಯ್ ಕುಲಕರ್ಣಿ

    ಹುಬ್ಬಳ್ಳಿ: ನಮ್ಮನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ. ಬಿಜೆಪಿ ಅವರದ್ದೇ ಕೈವಾಡವಿದೆ ಎಂದು ನೇರವಾಗಿ ಬಿಜೆಪಿ ಮೇಲೆ ಆರೋಪ ಮಾಡಿದರು.

    ನಮ್ಮನ್ನ ರಾಜಕೀಯವಾಗಿ ಮುಗಿಸೋದಿಕ್ಕೆ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಕಾನೂನು ರೀತಿಯಾಗಿ ನಾವು ಹೋರಾಟ ಮಾಡಲಿದ್ದೇವೆ. ಏನೇ ಬಂದರೂ ನಾವು ಎದುರಿಸಲು ಸಿದ್ಧರಿದ್ದೇವೆ. ರಾಜಕೀಯವಾಗಿ ನಮ್ಮನ್ನ ಮುಕ್ತಾಯಗೊಳಿಸಲು ಈ ಪ್ರಕರಣ ನಮ್ಮ ಮೇಲೆ ತಳುಕು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಏನೇ ಕುತಂತ್ರ ಮಾಡಿದರೂ ನಾವು ಕಾನೂನು ರೀತಿ ಹೋರಾಟ ನಡೆಸಲಿದ್ದೇವೆ. ನಾವಿಬ್ಬರೂ ರಾಜಕೀಯವಾಗಿ ಬಲಿಷ್ಟರಾಗಿರೋ ಕಾರಣ ಈ ರೀತಿ ಮಾಡುತ್ತಿದ್ದಾರೆ. ಲಿಂಗಾಯತ ಮುಖಂಡರು ಬೆಳೆಯಬಾರದು ಅನ್ನೋ ಕಾರಣಕ್ಕೆ ಈ ರೀತಿ ಕುತಂತ್ರ ನಡೆಸಿದ್ದಾರೆ ಎಂದು ಕಿಡಿಕಾರಿದರು.

  • ಯೋಗೇಶ್‌ ಗೌಡ ಕೇಸ್‌ – ಮಾಜಿ ಸಚಿವ ವಿನಯ್‌ ಕುಲಕರ್ಣಿ ಸಹೋದರನಿಗೆ ಸಿಬಿಐ ಡ್ರಿಲ್‌

    ಯೋಗೇಶ್‌ ಗೌಡ ಕೇಸ್‌ – ಮಾಜಿ ಸಚಿವ ವಿನಯ್‌ ಕುಲಕರ್ಣಿ ಸಹೋದರನಿಗೆ ಸಿಬಿಐ ಡ್ರಿಲ್‌

    ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಕೊಲೆ ಪ್ರಕರಣದ ಸಿಬಿಐ ತನಿಖೆ ಮತ್ತೆ ಚುರುಕು ಪಡೆದಿದೆ. ಇಂದು ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಸಿಬಿಐ ವಿಚಾರಣೆ ಎದುರಿಸಿದ್ದಾರೆ.

    ನೋಟಿಸ್‌ ಜಾರಿ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಸಿಬಿಐ ಕಚೇರಿಗೆ ಬೆಳಗ್ಗೆ 10.30ಕ್ಕೆ ಹಾಜರಾದ ವಿಜಯ್ ಕುಲಕರ್ಣಿಗೆ 7 ಗಂಟೆಗಳ ಕಾಲ ಸಿಬಿಐ ಫುಲ್ ಡ್ರಿಲ್ ಮಾಡಿದೆ.

    ಯೋಗೇಶ್‌ ಗೌಡ
    ಯೋಗೇಶ್‌ ಗೌಡ

    ವಿಚಾರಣೆ ಬಳಿಕ ಮಾತನಾಡಿದ ಅವರು, ಈ ಪ್ರಕರಣದಲ್ಲಿ 537 ಮಂದಿ ವಿಚಾರಣೆ ನಡೆಸಲಾಗಿದೆ. ಇದ್ರಲ್ಲಿ ನಾನು ಒಬ್ಬ ಅಷ್ಟೇ ಎಂದಿದ್ದಾರೆ. ವಿಚಾರಣೆಗೆ ಮತ್ತೆ ಕರೆದರೆ ಬರುತ್ತೇನೆ. ಈ ಹಂತದಲ್ಲಿ ಹೆಚ್ಚು ಮಾತನಾಡುವುದಿಲ್ಲ.

    ಈಗಾಗಲೇ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಆರು ಆರೋಪಿಗಳ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಹೆಚ್ಚಿನ ವಿಚಾರಣೆಗಾಗಿ ಶೀಘ್ರವೇ ಮಾಜಿ ಸಚಿವ ವಿನಯ್ ಕುಲಕರ್ಣಿಗೂ ಸಹ ಸಿಬಿಐ ನೋಟಿಸ್ ಕೊಡುವ ಸಾಧ್ಯತೆ ಇದೆ.

    ಸಿಬಿಐ ತನಿಖೆ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ. ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಸಚಿವ ಶೆಟ್ಟರ್, ತಪ್ಪು ಮಾಡಿಲ್ಲ ಅಂದ್ರೆ ಸಿಬಿಐ ತನಿಖೆಗೆ ಹೆದರೋದ್ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

  • 30 ಜಮುನಾಪೂರಿ ಮೇಕೆ, ಕುದುರೆ ಖರೀದಿ ಮಾಡಿದ ನಟ ದರ್ಶನ್

    30 ಜಮುನಾಪೂರಿ ಮೇಕೆ, ಕುದುರೆ ಖರೀದಿ ಮಾಡಿದ ನಟ ದರ್ಶನ್

    – ಧಾರವಾಡಕ್ಕೆ ಬಂದ ಕಾರಣ ತಿಳಿಸಿದ ದಾಸ

    ಧಾರವಾಡ: ನಟ ದರ್ಶನ್ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಇಂದು ಧಾರವಾಡಕ್ಕೆ ಆಗಮಿಸಿರುವ ದರ್ಶನ್, ಮಾಜಿ ಸಚಿವ ವಿನಯ್ ಕುಲಕರ್ಣಿ ಡೈರಿಗೆ ಭೇಟಿ ನೀಡಿದ್ದಾರೆ.

    ವಿನಯ ಕುಲಕರ್ಣಿ ಅವರ ಬಳಿ 30 ಜಮುನಾಪೂರಿ ಮೇಕೆಯನ್ನು ಖರೀದಿ ಮಾಡಿರುವ ನಟ ದರ್ಶನ್, ನಾನು ಮೇಕೆ ಸಾಕಾಣಿಕೆ ಮಾಡುತ್ತಿರುವ ಹಿನ್ನೆಲೆ ಧಾರವಾಡಕ್ಕೆ ಮೇಕೆ ಖರೀದಿಗೆ ಬಂದಿದ್ದೇನೆ ಎಂದು ಹೇಳಿದರು. ಇವತ್ತು ಬೆಳಿಗ್ಗೆಯಿಂದ ಡೇರಿಯಲ್ಲೇ ಚಕ್ಕಡಿ ಓಡಿಸಿದ್ದ ದರ್ಶನ್, ನಾನು ಲ್ಯಾಂಬೊರ್ಗಿನಿ ಓಡಿಸೋಕು ರೇಡಿ, ಚಕ್ಕಡಿ ಓಡಿಸೋಕೂ ರೆಡಿ ಎಂದು ಹೇಳಿದರು.

    ಈ ಮೊದಲು ಹಸುಗಳನ್ನು ಕೂಡಾ ಇಲ್ಲೇ ಖರೀದಿ ಮಾಡಿದ್ದೇನೆ ಎಂದ ದರ್ಶನ್, ವಿನಯ ಕುಲಕರ್ಣಿ ಬಳಿ ಎತ್ತುಗಳು ಚನ್ನಾಗಿವೆ ಎಂದು ಹೇಳಿದರು. ಇದೇ ವೇಳೆ ದರ್ಶನ್ ಬಗ್ಗೆ ಮಾತನಾಡಿದ ವಿನಯ್ ಕುಲಕರ್ಣಿ, ದರ್ಶನ್ ಮೊದಲಿನಿಂದಲೂ ಪ್ರಾಣಿ ಪ್ರಿಯ. ಮೊದಲು ಹಸುಗಳ ಹಾಲನ್ನು ಕೂಡಾ ಅವರು ಮನೆಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೇನೆ ಎಂದು ದರ್ಶನ್ ಬಗ್ಗೆ ಹೊಗಳಿದ ವಿನಯ್ ಕುಲಕರ್ಣಿ, ಇವತ್ತು ನಾನು ದರ್ಶನ್ ಅವರಿಗೆ ಜೀವಂತ ಮೇಕೆಯನ್ನು ಪ್ರತಿ ಕೆಜಿಗೆ 400ರಂತೆ ಕೊಟ್ಟಿದ್ದೇನೆ ಎಂದು ಹೇಳಿದರು.

    ದರ್ಶನ್ ಇದೇ ಡೈರಿಯಲ್ಲಿ ಒಂದು ಕುದುರೆಯನ್ನು ಕೂಡಾ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಟ ದರ್ಶನ್ ವಿನಯ್ ಡೈರಿಗೆ ಬಂದಿದ್ದಾರೆ ಎಂದು ತಿಳಿದ ಅಭಿಮಾನಿಗಳು ಸಾಲು ಸಾಲಾಗಿ ಬಂದು ಕಾದರು. ನಂತರ ದರ್ಶನ್ ಅವರನ್ನು ಭೇಟಿ ಮಾಡಿ ಸಂತಸಪಟ್ಟರು.