Tag: Vijay Hazare Trophy

  • ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ಬೆಂಗಳೂರು: 5ನೇ ಬಾರಿಗೆ ವಿಜಯ್‌ ಹಜಾರೆ ಟ್ರೋಫಿ (Vijay Hazare Trophy) ಗೆದ್ದ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

    ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್ (karnataka cricket Association) ಹಾಗೂ ಆಟಗಾರರ ಕುಟುಂಬಸ್ಥರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ್ದಾರೆ. ಹೂಗುಚ್ಛ ನೀಡಿ, ಹಾರ ಹಾಕಿ ಬರಮಾಡಿಕೊಂಡಿದ್ದಾರೆ. ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: Champions | ವಿಜಯ್‌ ಹಜಾರೆ ಟ್ರೋಫಿ – 5ನೇ ಬಾರಿ ಕರ್ನಾಟಕ ಚಾಂಪಿಯನ್

    ಇದಕ್ಕೂ ಮುನ್ನ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಕರ್ನಾಟಕ ತಂಡದ ಬ್ಯಾಟರ್‌ ಸ್ಮರಣ್ ರವಿಚಂದ್ರನ್ ಪೋಷಕರು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದರು. ತಾಯಿ ಸುನಂದಾ, ತಂದೆ ರವಿಚಂದ್ರನ್ ಹಾಗೂ ಕೋಚ್ ಸಯ್ಯದ್ ಟ್ರೋಫಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು. ಇದನ್ನೂ ಓದಿ: Champions Trophy 2025 | ಟೀಂ ಇಂಡಿಯಾ ಪ್ರಕಟ – ರೋಹಿತ್‌ ಸಾರಥಿ, 15 ತಿಂಗಳ ಬಳಿಕ ಶಮಿ ಕಂಬ್ಯಾಕ್‌

    ಕರ್ನಾಟಕ ಕಪ್ ಗೆದ್ದಿರೋದು ಖುಷಿ ಇದೆ. ನನ್ನ ಮಗ ಶತಕ ಸಿಡಿಸಿದ್ದು, ಒಂದು ಖುಷಿಯಾದ್ರೆ, ತಂಡ ಕಪ್ ಗೆದ್ದಿರೋದು ಡಬಲ್ ಖುಷಿ ಇದೆ. ತನ್ನ ಮಗ ತುಂಬಾ ಶ್ರಮ ಪಟ್ಟಿದ್ದಾನೆ. ಫೈನಲ್ ಮ್ಯಾಚ್ ಗೆದ್ದ ಮೇಲೆ ಕಪ್ ಗೆದ್ದಿದ್ದೇವೆ ಅಂತಾ ಕಾಲ್ ಮಾಡಿ ಮಾತನಾಡಿದ. ಆ ಕ್ಷಣ ತುಂಬಾ ಖುಷಿ ಕೊಟ್ಟಿತು ಎಂದು ಹೇಳಿಕೊಂಡಿದ್ದಾರೆ.

    ವಡೋದರಾದ ಕೊಟಾಂಬಿ ಸ್ಟೇಡಿಯಂನಲ್ಲಿ ನಡೆದ ವಿಜಯ್‌ ಹಜಾರೆ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 348 ರನ್‌ ಗಳಿಸಿತ್ತು. 349 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಕರುಣ್‌ ನಾಯರ್‌ ನೇತೃತ್ವದ ವಿದರ್ಭ ತಂಡ 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತ್ತು. ಇದನ್ನೂ ಓದಿ: ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಕರ್ನಾಟಕ ತಂಡ (Karnataka Team) 2013-14ರಲ್ಲಿ ಚೊಚ್ಚಲ ವಿಜಯ್‌ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಆ ನಂತರ 2014-15, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇದೀಗ ಮಯಾಂಕ್‌ ಅಗರ್ವಾಲ್‌ ನಾಯಕತ್ವದಲ್ಲಿ ಫೈನಲ್‌ ತಲುಪಿದ್ದ ಕರ್ನಾಟಕ ತಂಡ 5ನೇ ಬಾರಿ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದೆ.

  • Champions | ವಿಜಯ್‌ ಹಜಾರೆ ಟ್ರೋಫಿ – 5ನೇ ಬಾರಿ ಕರ್ನಾಟಕ ಚಾಂಪಿಯನ್

    Champions | ವಿಜಯ್‌ ಹಜಾರೆ ಟ್ರೋಫಿ – 5ನೇ ಬಾರಿ ಕರ್ನಾಟಕ ಚಾಂಪಿಯನ್

    – ಫೈನಲ್‌ನಲ್ಲಿ ವಿದರ್ಭ ವಿರುದ್ಧ 36 ರನ್‌ಗಳ ಭರ್ಜರಿ ಜಯ
    – ಕರ್ನಾಟಕಕ್ಕೆ ಕೈಹಿಡಿದ ಸ್ಮರಣ್‌ ಶತಕ

    ವಡೋದರಾ: 2024-25ನೇ ಸಾಲಿನ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ (Vijay Hazare Trophy) ಫೈನಲ್‌ ಪಂದ್ಯದಲ್ಲಿ ವಿದರ್ಭ ವಿರುದ್ಧ ಗೆದ್ದು ಬೀಗಿದ ಕರ್ನಾಟಕ ತಂಡ 5ನೇ ಬಾರಿಗೆ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

    ಕರ್ನಾಟಕ ತಂಡ (Karnataka Team) 2013-14ರಲ್ಲಿ ಚೊಚ್ಚಲ ವಿಜಯ್‌ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಆ ನಂತರ 2014-15, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇದೀಗ ಮಯಾಂಕ್‌ ಅಗರ್ವಾಲ್‌ ನಾಯಕತ್ವದಲ್ಲಿ ಫೈನಲ್‌ ತಲುಪಿದ್ದ ಕರ್ನಾಟಕ ತಂಡ 5ನೇ ಬಾರಿ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದೆ.

    ವಡೋದರಾದ ಕೊಟಾಂಬಿ ಸ್ಟೇಡಿಯಂನಲ್ಲಿ ನಡೆದ ವಿಜಯ್‌ ಹಜಾರೆ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 348 ರನ್‌ ಗಳಿಸಿತ್ತು. 349 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಕರುಣ್‌ ನಾಯರ್‌ ನೇತೃತ್ವದ ವಿದರ್ಭ ತಂಡ 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತ್ತು. 4ನೇ ಬಾರಿಗೆ ಫೈನಲ್‌ನಲ್ಲಿ ಕರ್ನಾಟಕ ತಂಡದ ಎದುರು ಮುಖಾಮುಖಿಯಾಗಿದ್ದ ವಿದರ್ಭ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿತ್ತು.

    ಕರುಣ್‌ ನಾಯರ್‌ ಬೇಗ ಔಟಾಗಿದ್ದು ಕರ್ನಾಟಕಕ್ಕೆ ಪ್ಲಸ್:
    33ರ ಹರೆಯದ ಕರುಣ್‌ ನಾಯರ್‌ (Karun Nair)​​ ಈ ಬಾರಿ ವಿಜಯ್​ ಹಜಾರೆ ಟೂರ್ನಿಯಲ್ಲಿ 5 ಶತಕ ಸಿಡಿಸಿದ್ದರು. ಜೊತೆಗೆ ಒಂದೇ ಋತುವಿನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ತಮಿಳುನಾಡಿನ ಬ್ಯಾಟರ್ ಎನ್. ಜಗದೀಶನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಜನವರಿ 3 ರಂದು ಯುಪಿ ವಿರುದ್ಧ ಮೊದಲ ಶತಕ, ಡಿಸೆಂಬರ್ 31 ರಂದು ತಮಿಳುನಾಡು ವಿರುದ್ಧ 2ನೇ ಶತಕ, ಡಿ.28 ರಂದು ಚಂಡೀಗಢ ವಿರುದ್ಧ 3ನೇ ಶತಕ, ಡಿ.26 ರಂದು ಛತ್ತೀಸ್​​ಗಢ ವಿರುದ್ಧ ಮತ್ತು ಜಮ್ಮು & ಕಾಶ್ಮೀರ ವಿರುದ್ಧ ಅಜೇಯ ಇನ್ನಿಂಗ್ಸ್​ಗಳನ್ನು ಆಡಿ ಶತಕ ಬಾರಿಸಿದ್ದರು. ಒಟ್ಟು 8 ಇನ್ನಿಂಗ್ಸ್‌ನಲ್ಲಿ 123.55 ಸ್ಟ್ರೈಕ್‌ರೇಟ್‌ ಹಾಗೂ 389.5 ಸರಾಸರಿಯಲ್ಲಿ 779 ರನ್‌ ಚಚ್ಚಿದ್ದಾರೆ. ಫೈನಲ್‌ ಪಂದ್ಯದಲ್ಲೂ ಅಬ್ಬರಿಸುತ್ತಿದ್ದ ನಾಯರ್‌ 31 ಎಸೆತಗಳಲ್ಲಿ 27 ರನ್‌ ಗಳಿಸಿದ್ದಾಗ ಪ್ರಸಿದ್ಧ್‌ ಕೃಷ್ಣ ವೇಗದ ದಾಳಿಗೆ ಕ್ಲೀನ್‌ ಬೌಲ್ಡ್‌ ಆದರು. ಇದು ಕರ್ನಾಟಕ ತಂಡಕ್ಕೆ ಬಹುದೊಡ್ಡ ಲಾಭವಾಯಿತು.

    ರವಿಚಂದ್ರನ್ ಸ್ಮರಣ್‌ ಶತಕ ಸಫಲ:
    ಮೊದಲು ಬ್ಯಾಟಿಂಗ್‌ ಮಾಡಿದ್ದ ಕರ್ನಾಟಕ ತಂಡ 14 ಓವರ್‌ಗಳಲ್ಲೇ 67 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಕ್ರೀಸ್‌ನಲ್ಲಿ ನೆಲೆಯೂರಿದ ರವಿಚಂದ್ರನ್ ಸ್ಮರಣ್‌ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಕೃಷ್ಣನ್ ಶ್ರೀಜಿತ್ ಹಾಗೂ ಅಭಿನವ್‌ ಮನೋಹರ್‌ ಅವರ ಅರ್ಧಶತಕಗಳ ಬ್ಯಾಟಿಂಗ್‌ ತಂಡವನ್ನು ಕೈಹಿಡಿಯಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ಪರ ರವಿಚಂದ್ರನ್‌ 101 ರನ್‌ (92 ಎಸೆತ, 7 ಬೌಂಡರಿ, 3 ಸಿಕ್ಸರ್‌), ಕೃಷ್ಣನ್‌ ಶ್ರೀಜಿತ್‌ 78 ರನ್‌ (74 ಎಸೆತ, 9 ಬೌಂಡರಿ, 1 ಸಿಕ್ಸರ್)‌, ಅಭಿನವ್‌ 79 ರನ್‌ (42 ಎಸೆತ, 10 ಬೌಂಡರಿ, 4 ಸಿಕ್ಸರ್)‌, ಮಯಾಂಕ್‌ ಅಗರ್ವಾಲ್‌ 32 ರನ್‌, ಹಾರ್ದಿಕ್‌ ರಾಜ್‌ 12 ರನ್‌, ಕೆ.ವಿ ಅನೀಶ್‌ 23 ರನ್‌, ದೇವದತ್‌ ಪಡಿಕಲ್‌ ಹಾಗೂ ಶ್ರೇಯಸ್‌ ಗೋಪಾಲ್‌ ಅಜೇಯ 3 ರನ್‌ ಕೊಡುಗೆ ನೀಡಿದರು.

    ಧ್ರುವ ಶೋರೆ ಶತಕ ವ್ಯರ್ಥ:
    ಚೇಸಿಂಗ್‌ ಆರಂಭಿಸಿದ ವಿದರ್ಭ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಆರಂಭಿಕ ಧ್ರುವ ಶೋರೆ ಜವಾಬ್ದಾರಿ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಲೇ ಇದ್ದರು. ಇದರೊಂದಿಗೆ ಕೊನೆಯಲ್ಲಿ ಹರ್ಷ್‌ ದುಬೆ ಅವರ ಸ್ಫೋಟಕ ಅರ್ಧಶತಕ ಒಂದಂತದಲ್ಲಿ ತಂಡಕ್ಕೆ ಗೆಲುವು ತಂದೇಬಿಟ್ಟಿತು ಎನ್ನುವಂತಿತ್ತು. ಆದ್ರೆ ಕರ್ನಾಟಕ ಬೌಲರ್‌ಗಳ ಕೈಚಳಕ ಇವರ ಆಟಕ್ಕೆ ಬ್ರೇಕ್‌ ಹಾಕಿತು.

    ಕೊನೆವರೆಗೂ ಹೋರಾಡಿದ ಧ್ರುವ 111 ಎಸೆತಗಳಲ್ಲಿ 110 ರನ್‌ (8 ಬೌಂಡರಿ, 2 ಸಿಕ್ಸರ್)‌ ಕೊಡುಗೆ ನೀಡಿದರು. ಇದರೊಂದಿಗೆ ಹರ್ಷ್‌ ದುಬೆ ಸ್ಫೋಟಕ 63 ರನ್‌ (30 ಎಸೆತ, 5 ಬೌಂಡರಿ, 5 ಸಿಕ್ಸರ್)‌, ಯಶ್‌ ರಾಥೋಡ್‌ 22 ರನ್‌, ಕರುಣ್‌ ನಾಯರ್‌ 27 ರನ್‌, ಜಿತೇಶ್‌ ಶರ್ಮಾ 34 ರನ್‌, ಅಪೂರ್ವ್‌ ವಾಂಖೆಡೆ 12 ರನ್‌, ದರ್ಶನ್‌ ನಾಲ್ಕಂಡೆ 11 ರನ್‌, ಯಶ್‌ ಕದಮ್‌ 15 ರನ್‌ ಗಳಿಸಿದರು.

    ಕರ್ನಾಟಕಕ್ಕೆ 21ನೇ ದೇಸಿ ಕಪ್‌ ಕಿರೀಟ:
    ಕರ್ನಾಟಕ ದೇಸಿ ಕ್ರಿಕೆಟ್‌ನ ಯಶಸ್ವಿ ತಂಡಗಳಲ್ಲಿ ಒಂದು. ಈವರೆಗೂ 8 ಬಾರಿ ರಣಜಿ, 6 ಬಾರಿ ಇರಾನಿ ಕಪ್‌, 2 ಬಾರಿ ಮುಷ್ತಾಕ್‌ ಅಲಿ ಟ್ರೋಫಿ ಗೆದ್ದಿದ್ದ ಕರ್ನಾಟಕ ಇದೀಗ 5ನೇ ಬಾರಿಗೆ ವಿಜಯ್‌ ಹಜಾರೆ ಟ್ರೋಫಿ ಗೆದ್ದಿದ್ದು, 21ನೇ ದೇಸಿ ಕಪ್‌ ಗೆದ್ದ ತಂಡ ಎನಿಸಿಕೊಂಡಿದೆ.

    ಕರ್ನಾಟಕ ಅಸಾಧಾರಣ ಪ್ರದರ್ಶನ:
    ಈ ಬಾರಿ ರಣಜಿ, ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದ ಕರ್ನಾಟಕ ವಿಜಯ್‌ ಹಜಾರೆ ಟ್ರೋಫಿಯಲ್ಲೂ ಅಬ್ಬರಿಸಿದೆ. ಸ್ವತಃ ನಾಯಕ ಮಯಾಂಕ್‌ ಅಗರ್ವಾಲ್‌ ಮುಂದೆ ನಿಂತು ತಂಡವನ್ನು ಗೆಲುವುನತ್ತ ಕೊಂಡೊಯ್ದರು. ಗುಂಪು ಹಂತದಲ್ಲಿ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಕರ್ನಾಟಕ ತಂಡ, ಅಂತಿಮ 8ರ ಗಟ್ಟದಲ್ಲಿ ಬರೋಡಾ, ಸೆಮಿಸ್‌ನಲ್ಲಿ ಹರಿಯಾಣ ವಿರುದ್ಧ ಗೆದ್ದು ಫೈನಲ್‌ ತಲುಪಿತ್ತು.

  • 4 ರನ್‌ ಗಳಿಸಿ ವೈಭವ್‌ ವಿಶೇಷ ಸಾಧನೆ – 13ರ ಬಾಲಕನಿಗೆ ಹಿರಿಯ ಕ್ರಿಕೆಟಿಗರಿಂದ ಮೆಚ್ಚುಗೆ

    4 ರನ್‌ ಗಳಿಸಿ ವೈಭವ್‌ ವಿಶೇಷ ಸಾಧನೆ – 13ರ ಬಾಲಕನಿಗೆ ಹಿರಿಯ ಕ್ರಿಕೆಟಿಗರಿಂದ ಮೆಚ್ಚುಗೆ

    ಭೋಪಾಲ್‌: ಇತ್ತೀಚೆಗೆ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ 1.10 ಕೋಟಿ ರೂ.ಗೆ ಬಿಕರಿಯಾಗಿ ಇತಿಹಾಸ ಸೃಷ್ಟಿಸಿದ 13 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಇದೀಗ ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ.

    ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಜಯ್‌ ಹಜಾರೆ ಟ್ರೋಫಿ‌ (ದೇಶೀಯ ಏಕದಿನ ಪಂದ್ಯ) ಪಂದ್ಯವನ್ನಾಡಿದ ವಿಶೇಷ ಸಾಧನೆಗೆ ಪಾತ್ರರಾದರು. 1999-2000 ಇಸವಿಯ ಋತುವಿನಲ್ಲಿ ಅಲಿ ಅಕ್ಬರ್‌ 14 ವರ್ಷ, 51 ದಿನಗಳ ವಯಸ್ಸಿನವರಾಗಿದ್ದಾಗ ವಿದರ್ಭ ಪರವಾಗಿ ಪಂದ್ಯವನ್ನಾಡಿದ್ದರು. ಈ ಮೂಲಕ ವಿಜಯ್‌ ಹಜಾರೆ ಟ್ರೋಫಿಗೆ (Vijay Hazare Trophy) ಪದಾರ್ಪಣೆ ಮಾಡಿದ್ದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೀಗ ವೈಭವ್‌ ಸೂರ್ಯವಂಶಿ 13 ವರ್ಷ, 269 ದಿನಗಳಿದ್ದಾಗ ದೇಶಿಯ ಕ್ರಿಕೆಟ್‌ ಟ್ರೋಫಿಯನ್ನಾಡಿ ಗಮನ ಸೆಳೆದಿದ್ದಾರೆ.

    ಶನಿವಾರ ಬಿಹಾರ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ (Madhya Pradesh) ತಂಡದ ಪರ ಆಡಿದ್ದಾರೆ. ವೈಭವ್‌ ಸೂರ್ಯವಂಶಿ ಆರಂಭಿಕನಾಗಿ ಕಣಕ್ಕಿಳಿದು ಕೇವಲ 4 ರನ್‌ ಗಳಿಸಿ ಔಟಾಗಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಬಿಹಾರ ತಂಡ 46.4 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಗುರಿ ಬೆನ್ನಟ್ಟಿದ್ದ ಮಧ್ಯಪ್ರದೇಶ ತಂಡ ಕೇವಲ 25.1 ಓವರ್‌ಗಳಲ್ಲೇ 197 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್, 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬಿಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಆಡಿದ್ದಾರೆ. 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC

    2023 ರಲ್ಲಿ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಸಿಡಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

    ಸೂರ್ಯವಂಶಿ ಈವರೆಗೆ ಒಟ್ಟು 49 ಶತಕಗಳನ್ನು ಸಿಡಿಸಿದ್ದಾರೆ. ಇದರಿಂದಲೇ ವೈಭವ್ ಹೆಸರು ಐಪಿಎಲ್‌ ಮೆಗಾ ಹರಾಜು ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು. ಬಳಿಕ 1.10 ಕೋಟಿ ರೂ.ಗಳಿಗೆ ವೈಭವ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಾಗಿದ್ದಾರೆ. ಇದೀಗ ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಶ್ರೇಯಸ್‌ ಅಯ್ಯರ್‌ ಸೇರಿದಂತೆ ರಾಷ್ಟ್ರೀಯ ತಂಡದ ಆಟಗಾರರು ಇರುವ ವಿಜಯ್‌ ಹಜಾರೆ ಟ್ರೋಫಿಯಲ್ಲಿ ವೈಭವ್‌ ಸಹ ಆಡುತ್ತಿರುವುದು ವಿಶೇಷ.  ಇದನ್ನೂ ಓದಿ: ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

  • ಒಂದೇ ಓವರ್‌ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

    ಒಂದೇ ಓವರ್‌ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

    ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 7 ಸಿಕ್ಸ್ (Six) ಸಿಡಿಸಿ ಮಹಾರಾಷ್ಟ್ರ (Maharashtra) ತಂಡದ ನಾಯಕ ಋತುರಾಜ್ ಗಾಯಕ್ವಾಡ್ (Ruturaj Gaikwad) ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದಿದ್ದಾರೆ.

    ಉತ್ತರ ಪ್ರದೇಶ (Uttar Pradesh)  ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯಕ್ವಾಡ್ 49ನೇ ಓವರ್‌ನಲ್ಲಿ 7 ಸಿಕ್ಸ್ ಸಹಿತ 43 ರನ್ ಚಚ್ಚಿದ್ದಾರೆ. 48ನೇ ಓವರ್‌ನ 4ನೇ ಎಸೆತ ನೋಬಾಲ್ ಎಸೆದ ಕಾರಣ ಫ್ರೀ ಹಿಟ್ ಎಸೆತವನ್ನು ಸಿಕ್ಸ್ ಚಚ್ಚಿದರು. ಬಳಿಕ ಮುಂದಿನ 3 ಎಸೆತಗಳನ್ನು ಸಿಕ್ಸ್ ಸಿಡಿಸಿ ಒಟ್ಟು 43 ರನ್ ಚಚ್ಚಿ ಬಿಸಾಡಿದರು. ಇದನ್ನೂ ಓದಿ: ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ಅಷ್ಟೇ ಅಲ್ಲದೇ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದು ಅಜೇಯ 220 ರನ್ (159 ಎಸೆತ, 10 ಬೌಂಡರಿ, 16 ಸಿಕ್ಸ್) ಚಚ್ಚಿ ದ್ವಿಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಮಹಾರಾಷ್ಟ್ರ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್ ಪೇರಿಸಿತು. ಇದನ್ನೂ ಓದಿ: ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಈ ಹಿಂದೆ ಯುವರಾಜ್ ಸಿಂಗ್ ಟಿ20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಅವರ 6 ಎಸೆತಗಳಿಗೆ 6 ಸಿಕ್ಸ್ ಚಚ್ಚಿ ದಾಖಲೆ ಬರೆದಿದ್ದರು. ಇದೀಗ ಗಾಯಕ್ವಾಡ್ 7 ಸಿಕ್ಸ್ ಸಿಡಿಸಿ ನೂತನ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

    ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

    ಭೋಪಾಲ್: ವಿಜಯ್ ಹಜಾರೆ ಟೂರ್ನಿಯಲ್ಲಿ ಮಧ್ಯಪ್ರದೇಶದ ಆಟಗಾರ ವೆಂಕಟೇಶ್ ಅಯ್ಯರ್ ಭರ್ಜರಿ ಶತಕ ಸಿಡಿಸಿ ತಮಿಳಿನ ಖ್ಯಾತ ನಟರಾದ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ್ದಾರೆ.

    ಉತ್ತರ ಪ್ರದೇಶ ಮತ್ತು ಚಂಢೀಗಢ ನಡುವಿನ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ 151 ರನ್ (113 ಎಸೆತ, 8 ಬೌಂಡರಿ, 10 ಸಿಕ್ಸ್) ಬಾರಿಸಿ ಗೆಲುವಿನ ರೂವಾರಿಯಾದರು. ಅಯ್ಯರ್ ಶತಕ ಸಿಡಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ ಕಡೆ ಕೈ ತೋರಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಕೂಲಿಂಗ್ ಗ್ಲಾಸ್ ಹಾಕುವಂತೆ ಕೈ ಸನ್ನೆ ಮಾಡಿ ರಜನಿಕಾಂತ್‍ಗೆ ಹುಟ್ಟುಹಬ್ಬದ ಗಿಫ್ಟ್ ಎಂಬಂತೆ ಶತಕವನ್ನು ಅವರಿಗೆ ಸಮರ್ಪಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ

    ಇಂದು ರಜನಿಕಾಂತ್ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅಯ್ಯರ್ ಶತಕ ಸಿಡಿಸಿದ ಬಳಿಕ ಅವರ ಆ್ಯಕ್ಷನ್ ಒಂದನ್ನು ಮೈದಾನದಲ್ಲಿ ಮಾಡುವ ಮೂಲಕ ಗಮನಸೆಳೆದರು. ಇದೀಗ ಶ್ರೇಯಸ್ ಅಯ್ಯರ್ ಈ ರೀತಿ ಸಂಭ್ರಮಿಸಿದ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

  • 19 ಬೌಂಡರಿ, 11 ಸಿಕ್ಸ್ ಸಿಡಿಸಿ ಇಶಾನ್ ಕಿಶಾನ್ ಸಿಡಿಲಬ್ಬರದ ಬ್ಯಾಟಿಂಗ್

    19 ಬೌಂಡರಿ, 11 ಸಿಕ್ಸ್ ಸಿಡಿಸಿ ಇಶಾನ್ ಕಿಶಾನ್ ಸಿಡಿಲಬ್ಬರದ ಬ್ಯಾಟಿಂಗ್

    ಭೋಪಾಲ್: ಜಾರ್ಖಾಂಡ್ ತಂಡದ ನಾಯಕ ಇಶಾನ್ ಕಿಶನ್ ಇಂದೋರ್‍ ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ 19 ಬೌಂಡರಿ 11 ಸಿಕ್ಸರ್ ಬಾರಿಸಿ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

    ಮಧ್ಯಪ್ರದೇಶದ ಇಂದೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಗ್ರೂಪ್ ಬಿ ತಂಡಗಳಾದ ಜಾರ್ಖಂಡ್ ಮತ್ತು ಮಧ್ಯಪ್ರದೇಶ ನಡುವಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಟಾಸ್ ಗೆದ್ದ ಮಧ್ಯಪ್ರದೇಶ ತಂಡದ ನಾಯಕ ಅಭಿಷೇಕ್ ಭಂಡಾರಿ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಇದರ ಪೂರ್ಣ ಲಾಭವೆತ್ತಿದ ಜಾರ್ಖಾಂಡ್ ತಂಡದ ನಾಯಕ ಇಶಾನ್ ಕಿಶನ್ 173 ರನ್ (94 ಎಸೆತ, 19 ಬೌಂಡರಿ, 11 ಸಿಕ್ಸರ್) ಸಿಡಿಸಿ ಬ್ಯಾಟಿಂಗ್ ಪರಾಕ್ರಮ ಮೆರೆದರು.

    ಮೊದಲು 50 ರನ್‍ಗಳಿಸಲು 42 ಬಾಲ್‍ಗಳನ್ನು ಎದುರಿಸಿದ ಇಶಾನ್ ಕಿಶನ್ ನಂತರ ಲಯಕ್ಕೆ ಬಂದು ತಮ್ಮ ಬ್ಯಾಟಿಂಗ್ ಗೇರ್ ಬದಲಾಯಿಸಿಕೊಂಡು 74 ಬಾಲ್‍ಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮತ್ತಷ್ಟು ಬಿರುಸಿನ ಬ್ಯಾಟಿಂಗ್ ನಡೆಸಿದ ಕಿಶನ್ 173 ರನ್‍ಗಳಿಸಿ ಗೌರವ್ ಯಾದವ್‍ಗೆ ವಿಕೆಟ್ ಒಪ್ಪಿಸಿದರು.

    ಇಶಾನ್ ಕಿಶನ್ ಬ್ಯಾಟಿಂಗ್ ಪರಾಕ್ರಮದ ಮುಂದೆ ಮಂಡಿಯೂರಿದ ಎದುರಾಳಿ ಮಧ್ಯಪ್ರದೇಶ ತಂಡ ಜಾರ್ಖಂಡ್ ನೀಡಿದ 422 ರನ್‍ಗಳ ಟಾರ್ಗೆಟ್ ಚೇಸ್ ಮಾಡಲಾಗದೆ ಕೇವಲ 98 ರನ್‍ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಜಾರ್ಖಂಡ್ ತಂಡ 324ರನ್ ಗಳ ಭರ್ಜರಿ ಜಯ ಗಳಿಸಿದೆ.

  • ಇಬ್ಬರ ನಡುವೆ ಒಂದೇ ಬ್ಯಾಟ್- ಕಷ್ಟದ ದಿನಗಳನ್ನ ನೆನೆದ ಪಾಂಡ್ಯ ಬ್ರದರ್

    ಇಬ್ಬರ ನಡುವೆ ಒಂದೇ ಬ್ಯಾಟ್- ಕಷ್ಟದ ದಿನಗಳನ್ನ ನೆನೆದ ಪಾಂಡ್ಯ ಬ್ರದರ್

    ಮುಂಬೈ: ಒಂದೇ ಕುಟುಂಬದಿಂದ ಇಬ್ಬರು ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ನಾವು ಹೆಚ್ಚಾಗಿ ನೋಡಿಲ್ಲ. ಇಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಭಾರೀ ಸ್ಪರ್ಧೆ ಇದೆ. ಆದರೆ ಪಾಂಡ್ಯ ಸಹೋದರರಾದ ಕೃನಾಲ್ ಮತ್ತು ಹಾರ್ದಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ರಾಷ್ಟ್ರೀಯ ತಂಡಕ್ಕೆ ಸ್ಥಿರವಾದ ಪ್ರದರ್ಶನ ನೀಡಿ, ಗುರುತಿಸಿಕೊಂಡಿದ್ದಾರೆ.

    ಪಾಂಡ್ಯ ಸಹೋದರರು ಆರಂಭಿಕ ದಿನಗಳಿಂದ ಇಲ್ಲಿಯವರೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ಕೃನಾಲ್ ಮತ್ತು ಹಾರ್ದಿಕ್ ಅವರ ಬಾಲ್ಯ, ಬೆಳವಣಿಗೆ ಕುರಿತು ‘ರಾಗ್ಸ್ ಟು ರಿಚಸ್’ ಕಥೆ ತಿಳಿಸುತ್ತಿದೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕೃನಾಲ್ ಪಾಂಡ್ಯ, ಆರಂಭಿಕ ದಿನಗಳಲ್ಲಿ ಸೋಹದರರಿಬ್ಬರು ಒಂದೇ ಬ್ಯಾಟ್ ಬಳಸುತ್ತಿದ್ದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

    ಇಂದು ನಾವು ಹೀಗೆ ಇರುವುದು ನಿಜವೇ? ನಮ್ಮ ಸದ್ಯದ ಸ್ಥಿತಿಯನ್ನುನಂಬಲು ನಾನು ಆಗಾಗ್ಗೆ ನನ್ನನ್ನು ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ ಎಂದು ಕೃನಾಲ್ ಹೇಳಿದ್ದಾರೆ.

    ”ಗುಜರಾತ್‍ನ ವಡೋದರಾದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ನಮಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುವುದು ಸುಲಭದ ವಿಚಾರವಲ್ಲ. ಆ ಸಮಯದಲ್ಲಿ ಉತ್ತಮ-ಗುಣಮಟ್ಟದ ಇಂಗ್ಲಿಷ್ ವಿಲೋ ಬ್ಯಾಟ್ ಐಎನ್‍ಆರ್ ಬೆಲೆ 7ರಿಂದ 8 ಸಾವಿರ ರೂ. ಆಗಿತ್ತು. ಆಗ ಅದು ದೊಡ್ಡ ಮೊತ್ತ. ನಾನು ಹಾಗೂ ಹಾರ್ದಿಕ್ ಕ್ರಿಕೆಟ್ ಆಡುತ್ತಿದ್ದರಿಂದ ಇಬ್ಬರಿಗೂ ದುಬಾರಿ ಮೌಲ್ಯದ ಬ್ಯಾಟ್, ಕಿಟ್ ಕೊಡಿಸಲು ಅಪ್ಪನಿಗೂ ಕಷ್ಟವಾಗುತ್ತಿತ್ತು. ತಂದೆಯ ಹೆಗಲ ಮೇಲೆ ನಮ್ಮಿಬ್ಬರ ಮೇಲೆ ಜವಾಬ್ದಾರಿ ಇತ್ತು” ಎಂದು ಕೃನಾಲ್ ಬಹಿರಂಗಪಡಿಸಿದ್ದಾರೆ.

    ”ರಣಜಿ ಟ್ರೋಫಿ ಆಡುವವರೆಗೂ ನಮ್ಮ ಬಳಿ ಬ್ಯಾಟ್ ಇರಲಿಲ್ಲ. ವಿಜಯ್ ಹಜಾರೆ ಟೂರ್ನಿಯಲ್ಲಿ ನಾವು ವಡೋದರಾ ಪರ ಆಡುತ್ತಿದ್ದಾಗ ಹಾರ್ದಿಕ್‍ಗೆ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಅವರು ಉಡುಗೊರೆಯಾಗಿ ಬ್ಯಾಟ್ ನೀಡಿದ್ದರು. ಆದರೆ ನಾನು ಇನ್ನೊಂದು ಬ್ಯಾಟ್ ಹೊಂದಿದ್ದೆ. ನಿರ್ಣಾಯಕ ಆಟದ ವೇಳೆ ಹಾರ್ದಿಕ್‍ನ ಬ್ಯಾಟ್ ಮುರಿಯಿತು. ಆಗ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಹೀಗಾಗಿ ಹಾರ್ದಿಕ್ ನನ್ನ ಬ್ಯಾಟ್ ತೆಗೆದುಕೊಂಡು ಆಟ ಮುಂದುವರಿಸಿದ್ದ” ಎಂದು ಕೃನಾಲ್ ನೆನೆದಿದರು.

    ”ನಾನು ನಂತರ ಬ್ಯಾಟಿಂಗ್ ಮಾಡಲು ಹೊರಟಾಗ ಹಾರ್ದಿಕ್ ಇನ್ನೂ ಕ್ರೀಸ್‍ನಲ್ಲಿದ್ದ. ಆಗ ನನಗೆ ಬ್ಯಾಟ್ ಕೂಡ ಇರಲಿಲ್ಲ. ಹೀಗಾಗಿ ಸ್ಪೇರ್ ಬ್ಯಾಟ್ ನೀಡುವಂತೆ ತಂಡದ ಸಹ ಆಟಗಾರನಿಗೆ ವಿನಂತಿಸಿಕೊಂಡಿದ್ದೆ. ಈ ಸನ್ನಿವೇಶ ಬಹಳ ಮುಜುಗರ ತಂದಿತ್ತು. ಹೀಗೆ ಮತ್ತೊಬ್ಬರ ಬ್ಯಾಟ್ ಕೇಳುವುದು ರಣಜಿ ಟ್ರೋಫಿ ಮಟ್ಟದಲ್ಲಿಯೂ ಸರಿಯಾದ ಕ್ರಮವಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಅಂತ ತೀರ್ಮಾನಿಸಿದೆ ಎಂದು ಹೇಳಿದರು.

  • ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಮುಡಿಗೆ – ಹ್ಯಾಟ್ರಿಕ್ ಪಡೆದು ಮಿಥುನ್ ದಾಖಲೆ

    ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಮುಡಿಗೆ – ಹ್ಯಾಟ್ರಿಕ್ ಪಡೆದು ಮಿಥುನ್ ದಾಖಲೆ

    – ಹುಟ್ಟು ಹಬ್ಬದ ದಿನವೇ ದಾಖಲೆ
    – ವಿಜೆಡಿ ನಿಯಮದ ಅನ್ವಯ ಚಾಂಪಿಯನ್

    ಬೆಂಗಳೂರು: ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆಯಿಂದಾಗಿ ಕರ್ನಾಟಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ವಿಜೆಡಿ ನಿಯಮದ ಅನ್ವಯ 60 ರನ್‍ಗಳಿಂದ ತಮಿಳುನಾಡು ತಂಡವನ್ನು ಸೋಲಿಸುವ ಮೂಲಕ ಕರ್ನಾಟಕ 4ನೇ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್‍ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ 23 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 141 ರನ್‍ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭವಾಯಿತು. ಮಳೆ ನಿಲ್ಲದ ಪರಿಣಾಮ ವಿ ಜಯದೇವನ್ ಮಾದರಿ ಅಥವಾ ವಿಜೆಡಿ ನಿಯಮದ ಅನ್ವಯ ಕರ್ನಾಟಕ 60 ರನ್ ಗಳಿಂದ ಗೆದ್ದುಕೊಂಡಿದೆ ಎಂದು ಪ್ರಕಟಿಸಲಾಯಿತು.

    ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ವೇಗಿ ಅಭಿಮನ್ಯು ಮಿಥುನ್ ಮುರುಳಿ ವಿಜಯ್ ವಿಕೆಟ್ ಉರುಳಿಸಿದರು. ಬಳಿಕ ಮೈದಾಕ್ಕಿಳಿದ ಆರ್.ಅಶ್ವಿನ್ ಕೇವಲ 8 ರನ್ ಗಳಿಸಿ ಕೌಶಿಕ್ ವಾಸುಕಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಬ್ಯಾಟ್ಸ್‍ಮನ್ ಅಭಿವನ್ ಮುಕುಂದ್‍ಗೆ ಬಾಬಾ ಅಪರಾಜಿತ್ ಸಾಥ್ ನೀಡಿ, ತಂಡದ ಮೊತ್ತವನ್ನು ಹೆಚ್ಚಿಸಿದರು. ಮುಕುಂದ್ 110 ಎಸೆತಗಳನ್ನು ಎದುರಿಸಿ 9 ಬೌಂಡರಿ ಸೇರಿ 85 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

    ಬಾಬಾ ಅಪರಾಜಿತ್ 84 ಎಸೆತಗಳಲ್ಲಿ 7 ಬೌಂಡರಿ ಸೇರಿ 66 ರನ್, ವಿ.ಶಂಕರ್ 38 ರನ್ ಸಹಾಯದಿಂದ ತಮಿಳುನಾಡು ತಂಡವು ಎಲ್ಲಾ ವಿಕೆಟ್ ಕಳೆದುಕೊಂಡು ಅಭಿಮನ್ಯು ಮಿಥುನ್ ತಮ್ಮ 10ನೇ ಓವರ್ ನಲ್ಲಿ ಮೊಹಮ್ಮದ್ ಸಲೀಂ, ಅಶ್ವಿನ್ ಮುರುಗನ್ ಹಾಗೂ ಶಾರುಕ್ ಖಾನ್ ವಿಕೆಟ್‍ಗಳನ್ನು ಉರುಳಿಸಿ ಹ್ಯಾಟ್ರಿಕ್ ವಿಕೆಟ್ ದಾಖಲೆ ಬರೆದರು.

    ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಡಿ.ಪಡಿಕ್ಕಲ್ ತಂಡದ ಮೊತ್ತ 34 ಆಗುವಷ್ಟರಲ್ಲಿ 14 ಎಸೆತಗಳಲ್ಲಿ 11 ಗಳಿಸಿ ವಿಕೆಟ್ ಒಪ್ಪಿಸಿದರು. ಕೆ.ಎಲ್. ರಾಹುಲ್ ಔಟಾಗದೆ 72 ಎಸೆತಗಳಲ್ಲಿ 5 ಬೌಂಡರಿ ಸೇರಿ 52 ಗಳಿಸಿದರೆ, ಎಂಎ ಅಗರ್ವಾಲ್ ಔಟಾಗದೆ 55 ಎಸೆತಗಳಲ್ಲಿ 3 ಸಿಕ್ಸರ್, 7 ಬೌಂಡರಿ ಸಿಡಿಸಿ 69 ರನ್ ಕಲೆ ಹಾಕಿದರು.

    ಮಿಥುನ್ ದಾಖಲೆ: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ‘ಪಿಣ್ಯ ಎಕ್ಸ್ ಪ್ರೆಸ್’ ಅಭಿಮನ್ಯು ಮಿಥುನ್ ದಾಖಲೆ ಬರೆದಿದ್ದಾರೆ. ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ. ವಿಶೇಷ ಏನೆಂದರೆ ಹುಟ್ಟು ಹಬ್ಬದ ದಿನವೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಜೊತೆಗೆ ಐದು ವಿಕೆಟ್ ಉರುಳಿಸಿ ಅವಿಸ್ಮರಣೀಯ ಕ್ಷಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

    9.5 ಓವರ್ ಎಸೆದ ಅಭಿಮನ್ಯು ಮಿಥುನ್ 34 ರನ್ ನೀಡಿ 5 ವಿಕೆಟ್ ಪಡೆದಿದ್ದಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2013, 2014, 2017 ರಲ್ಲಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿತ್ತು.

  • ವಿಜಯ್ ಹಜಾರೆ ಟ್ರೋಫಿ: 4ನೇ ಬಾರಿ ಫೈನಲ್ ಪ್ರವೇಶಿಸಿದ ಕರ್ನಾಟಕ

    ವಿಜಯ್ ಹಜಾರೆ ಟ್ರೋಫಿ: 4ನೇ ಬಾರಿ ಫೈನಲ್ ಪ್ರವೇಶಿಸಿದ ಕರ್ನಾಟಕ

    ಬೆಂಗಳೂರು: 2019 ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳು ನಾಡು ತಂಡವನ್ನು ಎದುರಿಸಲಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ.

    ಟೂರ್ನಿಯ ಎ ಗ್ರೂಪ್‍ನಲ್ಲಿ ಟಾಪ್ ನಂ.1 ಪಟ್ಟದೊಂದಿಗೆ ಕರ್ನಾಟಕ ಫೈನಲ್ ಪ್ರವೇಶ ಮಾಡಿದ್ದು, ಇಂದು ನಡೆದ ಛತ್ತೀಸ್‍ಗಡ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಅಂತರದೊಂದಿಗೆ ಗೆಲ್ಲುವ ಮೂಲಕ ಫೈನಲ್ ಪ್ರವೇಶ ಮಾಡಿತು. ಗೆಲ್ಲಲು 224 ರನ್ ಗುರಿ ಪಡೆದ ಕರ್ನಾಟಕ 10 ಓವರ್ ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಗೆಲುವು ಪಡೆಯಿತು.

    ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ದೇವ್ ದತ್ತ್ ಭರ್ಜರಿ ಬ್ಯಾಟಿಂಗ್ ನಡೆಸಿ ಗೆಲುವು ನೀಡಿದರು. ದೇವ್ ದತ್ತ್ ಪಡಿಕ್ಕಲ್ 98 ಎಸೆತಗಳಲ್ಲಿ 92 ರನ್ ಗಳಿಸಿದರೆ, ಕೆಎಲ್ ರಾಹುಲ್ 111 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು. ಇತ್ತ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮಯಾಂಕ್ ಅಗರ್ವಾಲ್ 33 ಎಸೆತಗಳಲ್ಲಿ 47 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯ ಅಂತಿಮ ಟೆಸ್ಟ್ ಆಡಿದ್ದ ಮಯಾಂಕ್ ಸರಣಿ ಗೆಲುವಿನ ಬಳಿಕ ಕರ್ನಾಟಕ ತಂಡಕ್ಕೆ ಮರಳಿದ್ದರು.

    ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಛತ್ತೀಸ್‍ಗಡ ತಂಡ ಕರ್ನಾಟಕ ಬೌಲಿಂಗ್ ದಾಳಿಯನ್ನು ಎದುರಿಸಿ 49.4 ಓವರ್ ಗಳಲ್ಲಿ 223 ರನ್ ಗಳಿಸಿತ್ತು. ಕರ್ನಾಟಕದ ಪರ ಅಭಿಮನ್ಯು ಮಿಥುನ್, ಕೆ.ಗೌತಮ್ ಮತ್ತು ಪ್ರವೀನಕುಮಾರ್ ದುಬೆ ತಲಾ 2 ವಿಕೆಟ್ ಪಡೆದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ 4ನೇ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.