Tag: Vijay Goel

  • ಗಡಿಯಲ್ಲಿ ಶಾಂತಿ ನೆಲೆಸುವರೆಗೂ ಭಾರತ-ಪಾಕ್ ನಡುವೆ  ಪಂದ್ಯಗಳಿಲ್ಲ : ವಿಜಯ್ ಗೋಯಲ್

    ಗಡಿಯಲ್ಲಿ ಶಾಂತಿ ನೆಲೆಸುವರೆಗೂ ಭಾರತ-ಪಾಕ್ ನಡುವೆ ಪಂದ್ಯಗಳಿಲ್ಲ : ವಿಜಯ್ ಗೋಯಲ್

    ನವದೆಹಲಿ: ಮುಂದಿನ ತಿಂಗಳು ನಡೆಯುವ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮ್ಯಾಚ್‍ಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯಾವಳಿಗಳು ನಡೆಯಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದಾರೆ.

    ಗಡಿಯಲ್ಲಿಯ ಭಯೋತ್ಪಾದನೆಯವ ಚಟುವಟಿಕೆಗಳು ನಿಲ್ಲೋವರೆಗೂ ಯಾವುದೇ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮ್ಯಾಚ್ ನಡೆಯುವ ಹಾಗಿಲ್ಲ. ಅಷ್ಟೇ ಅಲ್ಲ ಒಂದು ವೇಳೆ ಪಾಕಿಸ್ತಾನ ಜೊತೆ ಕ್ರಿಕೆಟ್ ಸರಣಿ ನಡೆಸುವ ಪ್ರಸ್ತಾಪವಿದ್ದರೆ ಬಿಸಿಸಿಐ ಕೇಂದ್ರ ಸರ್ಕಾರದ ಜೊತೆ ಮೊದಲು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ವಿಜಯ್ ಗೋಯಲ್ ಬಿಸಿಸಿಐ ಗೆ ಸಂದೇಶವನ್ನು ರವಾನಿಸಿದ್ದಾರೆ.

    2007 ರಿಂದ ಭಾರತ ತಂಡ ಯಾವುದೇ ಪಾಕ್ ಜೊತೆ ಯಾವುದೇ ಪಂದ್ಯದಲಿ ಭಾಗಿಯಾಗಿಲ್ಲ. 2012/13 ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡು ಮೂರು ಅಂತರರಾಷ್ಟ್ರೀಯ ಏಕದಿನ ಹಾಗೂ ಎರಡು ಟಿ-20 ಪಂದ್ಯಗಳನ್ನಾಡಿತ್ತು.