Tag: Vijay Devokonda

  • ಲೈಗರ್ ಸಿನಿಮಾದ ಡೇಟ್ ಫಿಕ್ಸ್ – ಹೊಸ ಪೋಸ್ಟರ್ ಔಟ್

    ಲೈಗರ್ ಸಿನಿಮಾದ ಡೇಟ್ ಫಿಕ್ಸ್ – ಹೊಸ ಪೋಸ್ಟರ್ ಔಟ್

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ತಮಿಳು, ತೆಲಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

    ವಿಶೇಷವೆಂದರೆ ಸಿನಿಮಾ ತಯಾರಕರು ಲೈಗರ್ ಸಿನಿಮಾದ ಹೊಸ ಪೋಸ್ಟರ್‍ನನ್ನು ಬಿಡುಗಡೆಗೊಳಿಸುವ ಮೂಲಕ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಈ ಪೋಸ್ಟರ್‍ನಲ್ಲಿ ವಿಜಯ್ ಕೈನಲ್ಲಿ ಕೋಲು ಹಿಡಿದು ಜೋರಾಗಿ ಕಿರುಚುತ್ತಿರುವುದನ್ನು ಕಾಣಬಹುದು.

    ಸಿನಿಮಾ ಆಪ್‍ಡೇಟ್ಸ್ ಕುರಿತಂತೆ ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 9ಕ್ಕೆ ನಾವು ಬರುತ್ತಿದ್ದೇವೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಲೈಗರ್ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್, ಜಗತ್ತಿನಾದ್ಯಂತ ಪಂಚ್ ಪ್ಯಾಕ್ ನೀಡಲು ಸಿನಿಮಾ ಸಿದ್ಧವಾಗಿದೆ. ಲೈಗರ್ ಸೆಪ್ಟೆಂಬರ್ 9 ರಂದು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ, ತೆಲಗು, ತಮಿಳ್, ಕನ್ನಡ ಮತ್ತು ಮಲೆಯಾಳಂ ಎಂದು ಕ್ಯಾಪ್ಷನ್ ಹಾಕಿಕೊಳ್ಳುವುದರ ಮೂಲಕ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    https://twitter.com/karanjohar/status/1359694753198088192

    ಕೊರೊನಾ ಸಾಂಕ್ರಮಿಕ ರೋಗದಿಂದ ಮಾರ್ಚ್ 2020ರಲ್ಲಿ ಸ್ಥಗಿತಗೊಂಡಿದ್ದ ಲೈಗರ್ ಸಿನಿಮಾದ ಚಿತ್ರೀಕರಣ 11 ತಿಂಗಳ ಬಳಿಕ ಇಂದಿನಿಂದ ಮುಂಬೈನಲ್ಲಿ ಚಿತ್ರೀಕರಣ ಆರಂಭಗೊಂಡಿದೆ.

    ನಿನ್ನೆ ಮುಂಬೈನಲ್ಲಿ ಅನನ್ಯಾ ಪಾಂಡೆ ಮತ್ತು ಅವರ ಕುಟುಂಬವನ್ನು ಪೂರಿಜಗನ್ನಾಥ್ ಹಾಗೂ ಚಾರ್ಮ್ ಎಂದು ಚಾರ್ಮ್ ಭೇಟಿಯಾಗಿದ್ದರು. ಈ ವೇಳೆ ಕ್ಲಿಕ್ಕಿಸಿದ ಕೆಲವು ಫೋಟೋವನ್ನು ಚಾರ್ಮಿ ಕೌರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಲೈಗರ್ ಸಿನಿಮಾದ ಲೀಡಿಂಗ್ ರೋಲ್‍ನಲ್ಲಿ ನಟ ವಿಜಯ್ ದೇವರಕೊಂಡ ಅಭಿನಯಿಸಿದ್ದು, ವಿಜಯ್ ಜೊತೆ ಅನನ್ಯಪಾಂಡೆ ಡ್ಯೂಯೆಟ್ ಹಾಡಲಿದ್ದಾರೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್, ಅಲಿ, ಮಕರಂದ್ ದೇಶಪಾಂಡೆ ಮತ್ತು ಗೆಟಪ್ ಶ್ರೀನು ಅಭಿನಯಿಸಿದ್ದಾರೆ. ಲೈಗರ್ ಸಿನಿಮಾ ಬಾಕ್ಸಿಂಗ್ ಕಥೆ ಆಧಾರಿತ ಸಿನಿಮಾವಾಗಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಪೂರಿ ಜಗನ್ನಾಥ್, ಚಾರ್ಮ್ ಕೌರ್, ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ.

  • ‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’- ರಶ್ಮಿಕಾಗೆ ವಿಜಯ್ ಸಂದೇಶ

    ‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’- ರಶ್ಮಿಕಾಗೆ ವಿಜಯ್ ಸಂದೇಶ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’ ಎಂದು ನಟ ವಿಜಯ್ ದೇವರಕೊಂಡ  ಫನ್ನಿಯಾಗಿ ಸಂದೇಶ ರವಾನಿಸಿದ್ದಾರೆ.

    ಲಾಕ್‍ಡೌನ್‍ನಿಂದ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ನಿಂತಿವೆ. ಹೀಗಾಗಿ ರಶ್ಮಿಕಾ ಹೈದರಾಬಾದ್ ಬಿಟ್ಟು ಕೊಡಗಿನ ತಮ್ಮ ಮನೆಯಲ್ಲಿದ್ದಾರೆ. ವಿಜಯ್ ದೇವರಕೊಂಡ ಹೈದರಾಬಾದ್‍ನಲ್ಲಿ ಲಾಕ್ ಆಗಿದ್ದಾರೆ. ಈ ಸಮಯದಲ್ಲಿ ಒಬ್ಬರನೊಬ್ಬರು ಮಿಸ್ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮತ್ತು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ.

    ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬ ಇತ್ತು. ಅಂದು ರಶ್ಮಿಕಾ “ನನ್ನ ಕಾಮ್ರೇಡ್ ವಿಜಯ್ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದರು. ಇದೀಗ ಆ ಟ್ವೀಟ್‍ಗೆ ವಿಜಯ್ ದೇವರಕೊಂಡ ರಿಪ್ಲೈ ಮಾಡಿದ್ದು, “ಮಂದಣ್ಣ ಬೇಗ ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ. ನಮ್ಮ ಗ್ಯಾಂಗ್ ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದೆ” ಎಂದು ಹಾರ್ಟ್ ಮತ್ತು ನಗುವ ಎಮೋಜಿ ಹಾಕಿ  ಟ್ವೀಟ್ ಮಾಡಿದ್ದಾರೆ.

    ವಿಜಯ್ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ಅದಕ್ಕೆ ರಶ್ಮಿಕಾ ಕೂಡ ಸಖತ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ಬಿಟ್ಟು ನೀವು ಯಾವುದೇ ಫನ್ ಮಾಡದಿರುವುದೇ ಉತ್ತಮ’ ಎಂದಿದ್ದಾರೆ. ಸದ್ಯ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. ಆದರೂ ಇಬ್ಬರ ನಡುವೆ ಉತ್ತಮ ಸ್ನೇಹವಿದೆ.

    ರಶ್ಮಿಕಾ ಕನ್ನಡಲ್ಲಿ ಧ್ರುವ ಸರ್ಜಾ ಜೊತೆ ‘ಪೊಗರು’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ‘ಸುಲ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ‘ಪುಷ್ಪ’ ಸಿನಿಮಾ ಮಾಡಬೇಕಿದೆ. ವಿಜಯ್ ದೇವರಕೊಂಡ ‘ಫೈಟರ್’ ಸಿನಿಮಾ ಮಾಡುತ್ತಿದ್ದರೆ.