Tag: Vijay Devokonda

  • ಸಮಂತಾ, ವಿಜಯ್ ದೇವರಕೊಂಡ ಪ್ರೀತಿಗಿಟ್ಟ ಹೆಸರು ‘ಖುಷಿ’

    ಸಮಂತಾ, ವಿಜಯ್ ದೇವರಕೊಂಡ ಪ್ರೀತಿಗಿಟ್ಟ ಹೆಸರು ‘ಖುಷಿ’

    ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬಕ್ಕೆ ವಿಭಿನ್ನವಾಗಿ ವಿಶ್ ಮಾಡಿ ಸುದ್ದಿಯಾಗಿದ್ದ ಸಮಂತಾ, ಇದೀಗ ಮತ್ತೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ಹೊಸ ಸಿನಿಮಾಗೆ ವಿಭಿನ್ನವಾಗಿ ಶೀರ್ಷಿಕೆ ಇಡಲಾಗಿದ್ದು, ಅದು ಈಗ ರಿವೀಲ್ ಆಗಿದೆ. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಮತ್ತು ಸಮಂತಾ ಒಟ್ಟಾಗಿ ನಟಿಸುತ್ತಿದ್ದರಿಂದ ಈ ಚಿತ್ರಕ್ಕೆ ಯಾವ ರೀತಿಯ ಟೈಟಲ್ ಇಡಬಹುದು ಎಂದು ಚರ್ಚೆ ಶುರುವಾಗಿತ್ತು. ಈಗ ಅದಕ್ಕೆ ಫುಲ್ ಸ್ಟಾಪ್ ಬಿದ್ದಿದ್ದು ಚಿತ್ರಕ್ಕೆ ‘ಖುಷಿ’ ಎಂದು ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕರು. ಸಮಂತಾ ಮತ್ತು ವಿಜಯ್ ದೇವರಕೊಂಡ ಅವರ ತೆರೆಯ ಮೇಲಿನ ಪ್ರೀತಿಗೆ ‘ಖುಷಿ’ಯೇ ಸಾಕ್ಷಿಯಾಗಿದೆ ಎಂದಿದ್ದಾರೆ ನಿರ್ದೇಶಕರು. ಇನದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    ಟೈಟಲ್ ರಿವೀಲ್ ಗಾಗಿಯೇ ತಯಾರಾದ ಪೋಸ್ಟರ್ ನಲ್ಲಿ ಸಮಂತಾ ಕಲರ್ ಫುಲ್ ಸೀರೆ ಧರಿಸಿ, ಫಳಫಳ ಹೊಳೆಯುತ್ತಿದ್ದಾರೆ. ಥೇಟ್ ಮದುವಣಗಿತ್ತಿಯಂತೆಯೇ ಕಾಣುತ್ತಾರೆ. ದೇವರಕೊಂಡ ಅವರದ್ದು ಕಾಶ್ಮೀರಿ ಶೈಲಿಯ ಡ್ರೆಸ್. ಹೀಗಾಗಿ ಸಿನಿಮಾದಲ್ಲಿ ಕತೆಯು ಹೇಗಿರಬಹುದು ಎಂಬ ಕುತೂಹಲ ಮೂಡಿಸಿದೆ ಪೋಸ್ಟರ್. ಇದನ್ನೂ ಓದಿ: ಟಗರು-2ನಲ್ಲಿ ಶಿವಣ್ಣನ ಜತೆ ನಟಿಸಬೇಕಿತ್ತು ಅಪ್ಪು!

    ಸಿನಿಮಾದ ಶೂಟಿಂಗ್ ಇನ್ನೂ ನಡೆದಿದ್ದರೂ, ಟೈಟಲ್ ಜೊತೆ ಫಸ್ಟ್ ಲುಕ್ ಮತ್ತು ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಚಿತ್ರತಂಡ ಬಹಿರಂಗಗೊಳಿಸಿದೆ. ಡಿಸೆಂಬರ್ 23 ರಂದು ಖುಷಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಶಿವ ನಿರರ್ವಾನ ನಿರ್ದೇಶನ ಮಾಡಿದ್ದು, ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮತ್ತು ನಿರೀಕ್ಷೆ ಹೆಚ್ಚು ಮಾಡಿದೆ.

  • ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಲಿಲ್ಲ ಎನ್ನುವುದು ನಾನಾ ರೂಪ ಪಡೆದುಕೊಳ್ಳುತ್ತಿದೆ. ವಿಜಯ್ ದೇವರಕೊಂಡ ಜತೆಗೆ ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ನಿಜವೂ ಆಗಿದ್ದರೂ, ಅವರ ಲವ್ ಬ್ರೇಕ್ ಅಪ್ ಆಯಿತಾ ಎನ್ನುವ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಅವರಿಬ್ಬರೂ ಪ್ರೀತಿಸುತ್ತಿರುವ ವಿಚಾರ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ, ಅವರ ನಡೆಗಳು ಹಾಗೆಯೇ ಇದ್ದವು ಅನ್ನುವ ಕಾರಣಕ್ಕಾಗಿ ಇಂಥದ್ದೊಂದು ಸುದ್ದಿ ಹುಟ್ಟುಕೊಂಡಿದ್ದು ಸುಳ್ಳಲ್ಲ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ವಿಜಯ್ ದೇವರಕೊಂಡ ವೃತ್ತಿ ಬದುಕಿನಲ್ಲಿ ಅಚ್ಚರಿಗಳು ಆದಾಗೊಮ್ಮೆ ರಶ್ಮಿಕಾ ಅದಕ್ಕೆ ಸಾಕ್ಷಿಯಾಗಿರುತ್ತಿದ್ದರು. ಹೊಸ ವರ್ಷವನ್ನು ಈ ಜೋಡಿ ಗೋವಾದಲ್ಲಿ ಕಳೆದಿತ್ತು. ಪ್ರತಿ ವರ್ಷವೂ ಹುಟ್ಟು ಹಬ್ಬಕ್ಕೆ ‘ರನ್ನ ಚಿನ್ನ’ ಎಂದೆಲ್ಲ ಹಾಡಿಹೊಗಳುತ್ತಿದ್ದರು. ಒಬ್ಬರಿಗೊಬ್ಬರು ಕಾಲೆಳೆದುಕೊಂಡು, ತಮಾಷೆ ಮಾಡಿಕೊಂಡೇ ಇರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಗಪ್ ಚುಪ್. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ತೆಲುಗು ಸಿನಿಮಾ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಸಾಲೆ ಸುದ್ದಿ ಎಂದರೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿದೆಯಂತೆ. ಅದಕ್ಕೆ ಕಾರಣ ಬಾಲಿವುಡ್ ನಟಿ ಅನನ್ಯ ಪಾಂಡೆ ಎನ್ನುವುದು ಹೊಸ ಸುದ್ದಿ. ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಇದೀಗ ಲೈಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಈ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ವಿಜಯ್ ದೇವರಕೊಂಡ ಜತೆ ಹೆಚ್ಚೆಚ್ಚು ಅನನ್ಯ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರವೇ ರಶ್ಮಿಕಾ ದೂರ ಆಗುವುದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ವಿಜಯ್ ದೇವರಕೊಂಡ ಅವರಿಂದ ಈ ಕಡೆ ರಶ್ಮಿಕಾ ದೂರವಾಗಿದ್ದರೆ, ಆ ಕಡೆ ಅನನ್ಯ ಪಾಂಡೆ ತಾವು ಪ್ರೀತಿಸುತ್ತಿದ್ದ ಇಶಾನ್ ಕಟ್ಟರ್ ಗೆ ಕೈ ಕೊಟ್ಟಿದ್ದು ಕಾಕತಾಳೀಯ ಅಲ್ಲವೆಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡಗಾಗಿಯೇ ಅನನ್ಯ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದಾರೆ ಎನ್ನುವ ಗುಟ್ಟು ರಟ್ಟಾಗಿದೆ. ಇವೆಲ್ಲವನ್ನೂ ಅರಿತ ರಶ್ಮಿಕಾ ಅವರು ವಿಜಯ್ ಅವರಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ ಎನ್ನುವುದು ಒಂದು ಹಂತದ ಲೆಕ್ಕಾಚಾರ.

    ಅಷ್ಟಕ್ಕೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡು ಪ್ರೀತಿಸುತ್ತಿದ್ದರಾ ಎನ್ನುವುದಕ್ಕೆ ಅಧಿಕೃತವಾಗಿ ಯಾವುದೇ ದಾಖಲೆಗಳು ಇಲ್ಲ. ಇಂಥದ್ದೊಂದು ಪ್ರಶ್ನೆ ಇಬ್ಬರಿಗೂ ಎದುರಾದಾಗಲೂ ಅದನ್ನು ನಿರಾಕರಿಸುತ್ತಲೇ ಬಂದಿದೆ ಈ ಜೋಡಿ. ಇದೀಗ  ಈ ಜೋಡಿಯ ಸ್ನೇಹಕ್ಕೆ ಮತ್ತಷ್ಟು ರಂಗು ತುಂಬಲು ಅನನ್ಯ ಪಾಂಡೆ ಹೊಸ ಸೇರ್ಪಡೆ ಆಗಿದ್ದಾರವಷ್ಟೆ.

  • ವಿಜಯ್ ದೇವರಕೊಂಡ ಜತೆ ಅಂತರ ಕಾಯ್ದುಕೊಂಡ ರಶ್ಮಿಕಾ: ಇದು ಜ್ಯೋತಿಷಿ ಮಾತಿನ ಎಫೆಕ್ಟ್?

    ವಿಜಯ್ ದೇವರಕೊಂಡ ಜತೆ ಅಂತರ ಕಾಯ್ದುಕೊಂಡ ರಶ್ಮಿಕಾ: ಇದು ಜ್ಯೋತಿಷಿ ಮಾತಿನ ಎಫೆಕ್ಟ್?

    ಕ್ಷಿಣದ ಸಾಕಷ್ಟು ಸಿಲೆಬ್ರಿಟಿಗಳಿಗೆ ಭವಿಷ್ಯ ಹೇಳುವ ವೇಣು ಸ್ವಾಮಿ, ಈ ಹಿಂದೆ ರಶ್ಮಿಕಾ ಮಂದಣ್ಣ ಅವರ ಭವಿಷ್ಯ ನುಡಿದಿದ್ದರು ಅನ್ನುವ ವಿಷಯ ತೆಲುಗು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ವೇಣು ಸ್ವಾಮಿ ಹತ್ತಿರ ರಶ್ಮಿಕಾ ಮತ್ತು ಅವರ ತಾಯಿ ಭವಿಷ್ಯ ಕೇಳಲು ಹೋಗುತ್ತಿದ್ದರು ಎಂಬ ವಿಷಯವನ್ನು ಸ್ವತಃ ಜ್ಯೋತಿಷಿ ವೇಣು ಸ್ವಾಮಿ ಅವರೇ ಬಹಿರಂಗ ಪಡಿಸಿದ್ದರು. ಇವರು ಹೇಳಿದ್ದ ಭವಿಷ್ಯ ರಶ್ಮಿಕಾ ಜೀವನದಲ್ಲಿ ನಿಜವಾಗಿದ್ದರಿಂದ ಪದೇ ಪದೇ ರಶ್ಮಿಕಾ ಕುಟುಂಬ ಇವರನ್ನು ಸಂಪರ್ಕಿಸುತ್ತಿತ್ತು ಎನ್ನುವುದು ಬಹಿರಂಗ.  ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಹಾಗಾಗಿಯೇ ಕೆಲ ತಿಂಗಳ ಹಿಂದೆ, ವೇಣು ಸ್ವಾಮಿ ಬಳಿ ರಶ್ಮಿಕಾ ಅವರು ಭವಿಷ್ಯ ಕೇಳಲು ಹೋದಾಗ ಆತಂಕಕಾರಿ ಸಂಗತಿಯೊಂದನ್ನು ತಿಳಿಸಿದ್ದರಂತೆ. ತಾವು ಹೇಳಿದಂತೆ ಮಾಡದೇ ಹೋದರೆ, ಮುಂದಿನ ಭವಿಷ್ಯ ಕರಾಳವಾಗಿ ಇರಲಿದೆ ಎಂಬ ಎಚ್ಚರಿಕೆ ಕೂಡ ಕೊಟ್ಟಿದ್ದರಂತೆ. ಆದರೆ, ಆ ವೇಳೆಯಲ್ಲಿ ಜ್ಯೋತಿಷಿಯ ಮೇಲೆಯೇ ಗರಂ ಆಗಿದ್ದರಂತೆ ರಶ್ಮಿಕಾ. ಇದೀಗ ಜ್ಯೋತಿಷಿ ಹೇಳಿದ್ದು ನಿಜವಾಗುತ್ತಿದೆ ಅನಿಸಿದ್ದರಿಂದ ಜ್ಯೋತಿಷಿ ಹೇಳಿದಂತೆ ಕೇಳಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ಈ ಹಿಂದೆ ವೇಣು ಸ್ವಾಮಿ ಅವರು ರಶ್ಮಿಕಾ ಅವರಿಗೆ ‘ನಿನಗೆ ಲವ್ ಅಫೇರ್ ಆಗುವುದಿಲ್ಲ. ಹಾಗಾಗಿ ವಿಜಯ್ ದೇವರಕೊಂಡ ಜೊತೆಗೆ ಕಾಣಿಸಿಕೊಳ್ಳದೇ ಇರುವುದು ಒಳ್ಳೆಯದು ಎಂದು ಭಯಂಕರ ಜ್ಯೋತಿಷ್ಯ ಹೇಳಿದ್ದರಂತೆ. ನಿಮ್ಮ ಬಳಿ ಬರುವ ಅನೇಕರಿಂದ ಪ್ರೀತಿಯಲ್ಲಿ ಮೋಸ ಹೋಗುತ್ತೀರಿ. ಲವ್ ಅಫೇರ್ ನಿಮಗೆ ಸಮಸ್ಯೆಯಾಗಿ ಕಾಡಲಿದೆ ಎಂದಿದ್ದರಂತೆ. ಈ ಮಾತಿಗೆ ರಶ್ಮಿಕಾ ಗರಂ ಆಗಿ ವೇಣು ಸ್ವಾಮಿ ಅವರಿಂದಲೇ ದೂರವಾಗಿದ್ದರಂತೆ. ಈಗ ವೇಣು ಸ್ವಾಮಿ ಅವರ ಮಾತು ಕೇಳುವುದಕ್ಕಾಗಿಯೇ ವಿಜಯ್ ದೇವರಕೊಂಡ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬವಿದ್ದು, ಅಂದು ರಶ್ಮಿಕಾ ಮಂದಣ್ಣ ವಿಶ್ ಮಾಡುವುದಾಗಲೇ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಾಗಲಿ ಮಾಡಿಲ್ಲ. ವಾರಕ್ಕೆರಡು ಬಾರಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇತ್ತೀಚೆಗೆ ಒಂಟಿಯಾಗಿ ಓಡಾಡುತ್ತಿದೆ. ಹೀಗಾಗಿ ರಶ್ಮಿಕಾ ಅವರು ವಿಜಯ್ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನುವುದು ತೆಲುಗು ಸಿನಿಮಾ ರಂಗದಲ್ಲಿ ಹರಡಿದ ಗಾಸಿಪ್.

  • ಏನಾಯ್ತು, ಏನೇನಾಯ್ತು? ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಏನಾಯ್ತು, ಏನೇನಾಯ್ತು? ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಹೆಸರಾಂತ ನಟ ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ಅನೇಕ ತಾರೆಯರು ವಿಶ್ ಮಾಡಿದ್ದಾರೆ. ಅದರಲ್ಲೂ ಸಮಂತಾ ಬರ್ತಡೇ ಪಾರ್ಟಿಯಲ್ಲೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೀರ್ತಿ ಸುರೇಶ್, ಸಾಯಿ ಪಲ್ಲವಿ ಸೇರಿದಂತೆ ಸಾಲು ಸಾಲು ನಟ ನಟಿಯರು ವಿಜಯ್ ಗೆ ನಾನಾ ರೀತಿಯಲ್ಲಿ ಶುಭಾಶಯ ಹೇಳಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಈವರೆಗೂ ವಿಶ್ ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಹೊಸ ವರ್ಷವನ್ನು ಗೋವಾದಲ್ಲಿ ಒಟ್ಟಿಗೆ ಆಚರಿಸಿದವರು, ಅನೇಕ ಬಾರಿ ತಡರಾತ್ರಿ ಹೊಟೆಲ್ ನಲ್ಲಿ ಕಾಣಿಸಿಕೊಂಡವರು ಏಕಾಏಕಿ ಹುಟ್ಟು ಹಬ್ಬದ ದಿನದಂದು ರಶ್ಮಿಕಾ ಮೌನವಹಿಸಿದ್ದು ಯಾಕೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಎತ್ತಿದ್ದಾರೆ. ತಮ್ಮೊಂದಿಗೆ ನಟಿಸಿದ ನಟ ನಟಿಯರಿಗೆ ವಿಶ್ ಮಾಡುವ ರಶ್ಮಿಕಾ ಮಂದಣ್ಣ, ತಮ್ಮ ಕನಸಿನ ಹುಡುಗನಿಗೆ ಶುಭಾಶಯ ಹೇಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ತಮ್ಮ ಮಧ್ಯೆ ಅಂಥದ್ದು ಏನೂ ಇಲ್ಲ ಎಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಹೇಳುತ್ತಾ ಬಂದರೂ, ಅವರ ನಡೆ ಮಾತ್ರ ಯಾವಾಗಲೂ ಅನುಮಾನ ಮೂಡಿಸುತ್ತಿತ್ತು. ಹಾಗಾಗಿ ಇಬ್ಬರೂ ಡೇಟ್ ಮಾಡುತ್ತಿದ್ದಾರೆ, ಇನ್ನೇನು ಮದುವೆನೂ ಆಗುತ್ತಾರೆ ಎನ್ನುವಲ್ಲಿಗೆ ಗಾಸಿಪ್ ಗಳು ಸಿನಿಮಾ ರಂಗದಲ್ಲಿ ತೇಲಿ ಬಂದವು. ಈ ಕುರಿತಾಗಿ ಜೋಡಿಯು ಗರಂ ಆಗಿಯೂ, ತಮ್ಮದೇ ಆದ ರೀತಿಯಲ್ಲೂ ಉತ್ತರಿಸುತ್ತಾ ಬಂತು. ಪುಷ್ಪಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ ಎನ್ನುವ ಮಾತೂ ಇದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದರೆ ಮಾತ್ರ ಶುಭಾಶಯ ಹೇಳಿದಂತೆಯೇ? ಇಬ್ಬರೂ ಒಟ್ಟಾಗಿಯೇ ಹುಟ್ಟು ಹಬ್ಬ ಆಚರಿಸಿರಬಹುದು ಎಂದೂ ಕೆಲ ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಅವರಿಬ್ಬರ ಮಧ್ಯೆ ಅಂಥದ್ದೇನೂ ಆಗಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ ಎಂದು ಆಪ್ತ ವಲಯಗಳು ಖಚಿತ ಪಡಿಸಿವೆ.

  • ರಶ್ಮಿಕಾ ಮಂದಣ್ಣಗೆ ತಮಿಳು ಹುಡುಗ ಬೇಕಂತೆ: ಮತ್ತೆ ಟ್ರೋಲ್ ಆದ ಕನ್ನಡತಿ

    ರಶ್ಮಿಕಾ ಮಂದಣ್ಣಗೆ ತಮಿಳು ಹುಡುಗ ಬೇಕಂತೆ: ಮತ್ತೆ ಟ್ರೋಲ್ ಆದ ಕನ್ನಡತಿ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನೆನ್ನೆಯಷ್ಟೇ ತಮಿಳು ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು. ದಳಪತಿ ವಿಜಯ್ ಅವರ ಹೊಸ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾದ ಮುಹೂರ್ತ ನಿನ್ನೆಯಷ್ಟೇ ನಡೆದಿದೆ. ಈ ಸಂದರ್ಭದಲ್ಲಿ ದಳಪತಿ ವಿಜಯ್ ಅವರಿಗೆ ದೃಷ್ಟಿ ತಗೆದು ಶಹಭಾಷ್ ಅನಿಸಿಕೊಂಡಿದ್ದ ರಶ್ಮಿಕಾ, ಅದೇ ಸಂದರ್ಭದಲ್ಲೇ ತಮ್ಮ ಮನದಾಳದ ಮಾತುಗಳನ್ನು ಆಚೆ ಹಾಕಿ ಟ್ರೋಲ್ ಆಗುತ್ತಿದ್ದಾರೆ. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಮದುವೆಯ ವಿಷಯದಲ್ಲಿ ಹೆಚ್ಚು ಸುದ್ದಿ ಆಗುವ ರಶ್ಮಿಕಾ, ಈ ಹಿಂದೆ ತಾವು ಯಾವ ರಾಜ್ಯದ ಸೊಸೆಯಾಗಿರಬೇಕು ಎಂದು ಹೇಳಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಯಾವ ಹುಡುಗನನ್ನು ಲಗ್ನ ಮಾಡಿಕೊಳ್ಳಬೇಕು ಎಂದು ಹೇಳಿ ಮತ್ತೆ ಸುದ್ದಿಯಾಗಿದ್ದಾರೆ. ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ತಾವು ತಮಿಳು ಹುಡುಗನನ್ನು ಮದುವೆ ಆಗಬೇಕೆಂದು ಬಯಸಿರುವೆ ಎಂದು ಹೇಳಿಕೆಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈಗದು ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಈ ಹಿಂದೆ ತಮಗೆ ತಮಿಳು ಕಲ್ಚರ್ ತುಂಬಾ ಇಷ್ಟ. ಹಾಗಾಗಿ ತಮಿಳು ನಾಡಿನ ಸೊಸೆಯಾಗುತ್ತೇನೆ ಎಂದು ಹೇಳಿದ್ದರು. ಆಗಲೂ ಕೂಡ ಅವರ ಮಾತು ಇಷ್ಟೇ ಸದ್ದು ಮಾಡಿತ್ತು. ಕನ್ನಡ ಸಿನಿಮಾ ರಂಗದಿಂದ ಬೆಳೆದು, ಕರ್ನಾಟಕದಲ್ಲೇ ಹುಟ್ಟಿ ಈ ರೀತಿಯ ಮಾತುಗಳನ್ನು ನಾವು ಕೇಳುವುದಿಲ್ಲ ಎಂದು ಕನ್ನಡದ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರೆ, ತಮಿಳು ಅಭಿಮಾನಿಗಳು ಅವರ ಮಾತುಗಳನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ಈ ನಡುವೆ ತೆಲುಗಿನ ಹುಡುಗನ ಜತೆ ರಶ್ಮಿಕಾ ಓಡಾಡುತ್ತಿರುವುದು ಕೂಡ ಚರ್ಚೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದುಕೊಂಡ ನಂತರ ಹೆಚ್ಚು ಸುದ್ದಿಯಾಗಿದ್ದು ವಿಜಯ್ ದೇವರಕೊಂಡ ಜತೆ ರಶ್ಮಿಕಾ ತುಂಬಾ ಆತ್ಮೀಯರಾಗಿದ್ದಾರೆ ಎನ್ನುವುದು. ಹಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕೂಡ ಈ ಸುದ್ದಿಗೆ ಹೆಚ್ಚು ಪುಷ್ಠಿ ಕೊಟ್ಟಿತ್ತು. ಹಾಗಾದರೆ, ತೆಲುಗಿನ ಹುಡುಗನನ್ನು ಬಿಟ್ಟು, ತಮಿಳು ಹುಡುಗನ ಕೈ ಹಿಡಿಯುತ್ತಾರಾ ರಶ್ಮಿಕಾ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

  • ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಕಾಂಬೋದ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ JGM ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇವತ್ತು ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.

    JGM ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡ್ತಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ನಮ್ಮ ಮುಂದಿನ ಸಿನಿಮಾ JGM  ಬಗ್ಗೆ  ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ವಿಜಯ್ ದೇವರಕೊಂಡ, ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ವಂಶಿ ಪಡಿಪೆಲ್ಲಿ, JGM ಅದ್ಭುತ ಕಥೆಯಾಗಿದ್ದು, ಇದು ಭಾರತೀಯರ ಮನತಟ್ಟುತ್ತದೆ. ವಿಜಯ್, ಪುರಿ, ಚಾರ್ಮಿ ಜೊತೆ ಪ್ರಾಜೆಕ್ಟ್ ಕೆಲಸ‌ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ವಿದೇಶದ ನಾನಾ ಭಾಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ JGM ಸಿನಿಮಾ ಆಗಸ್ಟ್ 3 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

  • ಸ್ಸಾರಿ, ಈ ಫೋಟೋ ನಿಮಗೆ ಇಷ್ಟವಾಗದೇ ಇರಬಹುದು: ರಶ್ಮಿಕಾ ಮಂದಣ್ಣ

    ಸ್ಸಾರಿ, ಈ ಫೋಟೋ ನಿಮಗೆ ಇಷ್ಟವಾಗದೇ ಇರಬಹುದು: ರಶ್ಮಿಕಾ ಮಂದಣ್ಣ

    ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ರಶ್ಮಿಕಾ ಮಂದಣ್ಣ ಯಾವತ್ತೂ ಮುಂದು. ದಿನವೂ ಅವರು ಹಲವು ಗಂಟೆಗಳ ಕಾಲ ಜಿಮ್ ನಲ್ಲಿ ಕಾಲಕಳೆಯುತ್ತಾರೆ. ಅದರಲ್ಲೂ ಡಾನ್ಸ್ ಮತ್ತು ಯೋಗದ ಮೂಲಕವೂ ದೇಹದಂಡಿಸುತ್ತಾರೆ. ಅನೇಕ ಬಾರಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡು ಆರೋಗ್ಯದ ಬಗ್ಗೆ ಟಿಪ್ಸ್ ಕೊಡುತ್ತಾರೆ. ಆದರೆ, ಈ ಬಾರಿ ಅವರು ಕೊಂಚ ಭಯದಿಂದಲೇ ವರ್ಕೌಟ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಈ ಫೋಟೋ ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಎಂದೂ ಕೇಳಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ರಶ್ಮಿಕಾ ಮಂದಣ್ಣ ಹಾಟ್ ಹಾಟ್ ಆಗಿ ಮತ್ತು ತುಂಡುಡುಗೆ ತೊಟ್ಟಾಗೆಲ್ಲ ಟ್ರೋಲ್ ಆಗಿದ್ದಾರೆ. ಅನೇಕ ಬಾರಿ ಅವರು ಧರಿಸುವ ಕಾಸ್ಟ್ಯೂಮ್ ನಿಂದಾಗಿಯೇ ಸುದ್ದಿ ಆಗಿದ್ದಾರೆ. ಹಾಗಾಗಿ ಫೋಟೋ ಹಾಕುವಾಗ ಇದೀಗ ಯೋಚಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಹೀಗಾಗಿಯೇ ಈ ಫೋಟೋವನ್ನು ಹಾಕುವುದೋ ಬೇಡವೋ ಗೊತ್ತಿಲ್ಲ ಎನ್ನುತ್ತಾ ಆ ಫೋಟೋ ಹಾಕಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಜಿಮ್ ನಲ್ಲಿರುವ ಫೋಟೋ ಹಾಕಿಕೊಂಡು, ‘ನಿಮ್ಮಲ್ಲಿಯ ತುಂಬಾ ಜನರಿಗೆ ಈ ಫೋಟೋ ಇಷ್ಟವಾಗುವುದಿಲ್ಲ. ಆದರೆ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಿರಂತರವಾಗಿ ವ್ಯಾಯಾಮ ಇರಲಿ. ಡಯಟ್, ವರ್ಕೌಟ್ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ಉತ್ತಮ ಜೀವನ ನಡೆಸಬುದು’ ಎಂದು ಆರೋಗ್ಯದ ಕುರಿತಾಗಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ತಮಿಳು ಸಿನಿಮಾ ರಂಗದಲ್ಲಿ ಮತ್ತಷ್ಟು ಬೇಡಿಕೆ ಪಡೆದಿದ್ದಾರೆ. ಪುಷ್ಪಾ 2 ಸಿನಿಮಾದಲ್ಲೂ ಅವರಿಗೆ ಪ್ರಮುಖ ಪಾತ್ರವಿದ್ದು, ಸದ್ಯ ಆ ಸಿನಿಮಾದ ತಯಾರಿಯಲ್ಲಿ ಅವರು ತೊಡಗಿದ್ದಾರೆ ಎನ್ನಲಾಗುತ್ತಿದೆ.

  • ಬಾಕ್ಸಿಂಗ್ ಲೆಜೆಂಡ್ ಟೈಸನ್ ಫಸ್ಟ್ ಲುಕ್‍ಗೆ ಅಭಿಮಾನಿಗಳು ಫಿದಾ

    ಬಾಕ್ಸಿಂಗ್ ಲೆಜೆಂಡ್ ಟೈಸನ್ ಫಸ್ಟ್ ಲುಕ್‍ಗೆ ಅಭಿಮಾನಿಗಳು ಫಿದಾ

    ಚೆನ್ನೈ: ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ನಟನೆಯ ‘ಲೈಗರ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೋಸ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

    ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ದೀಪಾವಳಿ ಪ್ರಯುಕ್ತ ಐರನ್ ಮೈಕ್ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ವಾವ್ಹ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಯೇ ಭಾರತೀಯ ಸಿನಿಮಾದಲ್ಲಿ ನಟಿಸುತ್ತಿರುವ ಇವರ ಪಾತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

    ಬಾಕ್ಸಿಂಗ್ ನಲ್ಲಿ ಇಡೀ ಜಗತ್ತಿಗೆ ದೊಡ್ಡ ಹೆಸರು ಮೈಕ್ ಟೈಸನ್. ಇವರನ್ನು ಐರನ್ ಮ್ಯಾನ್ ಎಂದು ಸಹ ಕರೆಯುತ್ತಾರೆ. ಬಾಕ್ಸಿಂಗ್ ರಿಂಗ್ ಗೆ ಬಂದರೆ ಇವರನ್ನು ಸೋಲಿಸಲು ಯಾರಿಂದಲೂ ಆಗುವುದಿಲ್ಲ. ಇವರನ್ನು ಕರೆತರುತ್ತೇವೆ ಎಂದು ಚಿತ್ರತಂಡ ಇತ್ತೀಚೆಗೆ ಫೋಷಣೆ ಮಾಡಿತ್ತು. ಇಂದು ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

    ಈ ವೇಳೆ ಮೈಕ್ ಅವರು ಚಿತ್ರತಂಡಕ್ಕೆ ಕೆಲವು ಷರತ್ತುಗಳನ್ನು ಹಾಕಿದ್ದು, ನನ್ನ ಭಾಗದ ಶೂಟಿಂಗ್ ಅನ್ನು ಅಮೆರಿಕಾದಲ್ಲಿಯೇ ಮಾಡಬೇಕು. ಆಗ ಮಾತ್ರ ನಾನು ನಿಮ್ಮ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಚಿತ್ರತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿ ಶೂಟಿಂಗ್ ಪೂರ್ಣಗೊಳಿಸಿಕೊಂಡು ಬಂದಿದೆ.

    ಮೈಕ್ ಅವರ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಈ ಪೋಸ್ಟ್ ಅಲ್ಲಿ ಮೈಕ್ ಅವರ ಮುಖದಲ್ಲಿ ಕೋಪ ಮತ್ತು ಅವರ ಕೈಯ ಬೆಂಕಿಯ ಚಂಡಿದ್ದು, ಥ್ರಿಲಿಂಗ್ ಮೂವೀ ಎಂಬುದು ಈ ಪೋಸ್ಟ್ ಮೂಲಕ ತಿಳಿದುಬರುತ್ತೆ. ಪೋಸ್ಟ್ ನೋಡಿ ಇನ್ನೂ ಈ ಸಿನಿಮಾದಲ್ಲಿ ಇವರ ಪಾತ್ರ ಯಾವುದು? ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

    ಮೈಕ್ ಅವರು ಅತಿಥಿ ಪಾತ್ರ ಮಾಡುತ್ತಿದ್ದರೂ, ಅವರನ್ನು ಹೇಗೆ ತೋರಿಸಲಾಗಿದೆ? ಚಿತ್ರಕಥೆ ಹೇಗೆ ಮೂಡಿಬರುತ್ತೆ ಕಾದು ನೋಡಬೇಕು. ಇನ್ನೂ ಇವರು ಕ್ಲೈಮ್ಯಾಕ್ಸ್ ಗಿಂತಲೂ ಮುನ್ನ ಬರುತ್ತಾರೆ ಎಂದು ಚಿತ್ರತಂಡ ತಿಳಿಸಿದೆ. ಮೈಕ್ ಅವರ ಅತಿಥಿ ಪಾತ್ರಕ್ಕೆ ವಿಜಯ್ ಗಿಂತಲೂ ಹೆಚ್ಚು ಸಂಭವಾನೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

  • ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

    ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

    ಚೆನ್ನೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ಕನಸನ್ನು ನನಸು ಮಾಡಿಕೊಂಡಿರುವ ವಿಷಯವನ್ನು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

    ಏನಿದು ಕನಸು?
    ವಿಜಯ್ ಟ್ವಿಟ್ಟರ್‍ನಲ್ಲಿ, ನಟನಾಗುವ ಕನಸು ಕಂಡು ಬಂದಿದ್ದ ನಾನು ಈಗ ‘ಮಲ್ಟಿಪ್ಲೆಕ್ಸ್’ಗೆ ಬಡೆಯನಾಗಿದ್ದೇನೆ. ‘ಏಷ್ಯನ್ ವಿಜಯ್ ದೇವರಕೊಂಡ ಚಿತ್ರಮಂದಿರವನ್ನು(ಎವಿಡಿ) ಇಂದು ನಾನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ಮಹಬೂಬ್ ನಗರದಲ್ಲಿ ಇದು ಮೊದಲ ಎವಿಡಿ ಯಾಗಿದ್ದು, ಸೆ.24ರಿಂದ ಪ್ರಾರಂಭವಾಗುತ್ತೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?

    ಸೆಪ್ಟೆಂಬರ್ 24 ರಂದು ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾವನ್ನು ಎವಿಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಆ ಸಿನಿಮಾಗೆ ವಿಜಯ್ ಶುಭಕೋರಿದ್ದಾರೆ. ಇದನ್ನೂ ಓದಿ:  ಪೂಜಾ ಮೇಲೆ ಮುನಿಸಿಕೊಂಡ್ರಾ ಬಾಹುಬಲಿ?

  • ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ಮುಂಬೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಶೂಟಿಂಗ್‍ನನ್ನು ಮುಂಬೈನಲ್ಲಿ ಮತ್ತೆ ಆರಂಭವಾಗಿದೆ. ಸದ್ಯ ಲೈಗರ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಚಾರ್ಮಿ ಕೌರ್ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಗುರುವಾರ ಲೈಗರ್ ಸಿನಿಮಾದ ಶೂಟಿಂಗ್‍ಗಾಗಿ ವಿಜಯ್ ದೇವರಕೊಂಡ ಮುಂಬೈಗೆ ಹಾರಿದ್ದು, ಚಾರ್ಮಿ ಕೌರ್ ವಿಜಯ್ ದೇವರಕೊಂಡಗೆ ಸ್ವಾಗತ ಕೋರಿದ್ದಾರೆ ಹಾಗೂ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮ ಲೈಗರ್ ಮತ್ತೆ ಮರಳಿದೆ ಎಂದು ಚಾರ್ಮಿ ಕೌರ್ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಸಿನಿಮಾ ಕುರಿತ ಪ್ರಮೋಷನ್ ಇಲ್ಲದಿದ್ದರೆ ವಿಜಯ್ ದೇವರಕೊಂಡ ಅಷ್ಟಾಗಿ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿರುವುದಿಲ್ಲ. ಈಗ ಒಂದು ತಿಂಗಳ ಬಳಿಕ ವಿಜಯ್ ದೇವರಕೊಂಡ ಅವರು ಸೋಫಾದ ಮೇಲೆ ಕುಳಿತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Vijay Deverakonda (@thedeverakonda)

    11 ತಿಂಗಳ ಬಳಿಕ ಲೈಗರ್ ಸಿನಿಮಾದ ಚಿತ್ರೀಕರಣ ಪುನಾರಂಭಗೊಂಡಿದ್ದು, ವಿಜಯ್ ದೇವರಕೊಂಡ ಹೈದರಾಬಾದ್‍ನಿಂದ ಮುಂಬೈಗೆ ಫ್ಲೈಟ್ ಮೂಲಕ ಓಡಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ವಿಜಯ್ ಜೊತೆ ಅನನ್ಯ ಪಾಂಡೇ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಾರ್ಮಿ ಕೌರ್ ಮತ್ತು ಕರಣ್ ಜೋಹರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಲೈಗರ್ ಸಿನಿಮಾ ಸೆಪ್ಟೆಂಬರ್ 9 ರಂದು ಅನೇಕ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.