Tag: Vijay Devakonda

  • `ಗೀತಾ ಗೋವಿಂದಂ’ ಸಿನಿಮಾದ ರಶ್ಮಿಕಾ ಮಂದಣ್ಣ ಅವರ ಕಿಸ್ಸಿಂಗ್ ವಿಡಿಯೋ ಲೀಕ್

    `ಗೀತಾ ಗೋವಿಂದಂ’ ಸಿನಿಮಾದ ರಶ್ಮಿಕಾ ಮಂದಣ್ಣ ಅವರ ಕಿಸ್ಸಿಂಗ್ ವಿಡಿಯೋ ಲೀಕ್

    ಬೆಂಗಳೂರು: ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ತೆಲುಗಿನ `ಗೀತಾ ಗೋವಿಂದಂ’ ಸಿನಿಮಾದ ಟೀಸರ್ ಬಿಡುಗಡೆಗೊಂಡು ಸಖತ್ ಸದ್ದು ಮಾಡಿತ್ತು. ಇದರ ಬೆನ್ನಲ್ಲೆ ಅದೇ ಸಿನಿಮಾದ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿದೆ.

    ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರಿಬ್ಬರ ಫೋಟೋ ಇವರು ಡಾರ್ಕ್ ಎಂಬ ಹೆಸರಿನ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ರಶ್ಮಿಕಾ ವಿಜಯ್ ಅವರ ತೊಡೆ ಮೇಲೆ ಕುಳಿತು ಅವರಿಗೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಕೇವಲ 26 ಸೆಕೆಂಡ್ ಗಳಿದ್ದು, ಸಖತ್ ವೈರಲ್ ಆಗಿದೆ.

    `ಗೀತಾ ಗೋವಿಂದಂ’ ಸಿನಿಮಾ ಟೀಸರ್ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟೀಸರ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಅವರ ರೊಮ್ಯಾಂಟಿಕ್ ದೃಶ್ಯಗಳು ಅಧಿಕವಾಗಿದ್ದವು. ಇದನ್ನು ನೋಡಿದ ಅಭಿಮಾನಿಗಳು ರಶ್ಮಿಕಾ ಅವರ ವಿರುದ್ಧವಾಗಿ ಕಮೆಂಟ್ ಮಾಡುತ್ತಿದ್ದರು. ಈಗ ಇದೆ ಬೆನ್ನಲ್ಲೆ ಅವರಿಬ್ಬರ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿದೆ.

    ಜುಲೈ 19ರಂದು ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗೀತಾ ಗೋವಿಂದಂ ಚಿತ್ರದ ಪೋಸ್ಟರ್ ಪೋಸ್ಟ್ ಮಾಡಿದ್ದರು. ನಟ ವಿಜಯ್ ದೇವರಕೊಂಡ ರಶ್ಮಿಕಾರನ್ನು ತನ್ನ ಬೆನ್ನ ಮೇಲೆ ಎತ್ತಿಕೊಂಡಿರುವ ಪೋಸ್ಟರ್ ನೋಡಿ ಅಭಿಮಾನಿಗಳು ರಶ್ಮಿಕಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ರಶ್ಮಿಕಾ ನಿಮಗೆ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಆಗಿದೆ. ನೀವು ಈ ರೀತಿಯ ಸಿನಿಮಾ ಮಾಡಿ ರಕ್ಷಿತ್ ಅವರ ಹೆಸರನ್ನು ಹಾಳು ಮಾಡಬಾರದು. ನೀವು ಈ ರೀತಿಯ ಸಿನಿಮಾ ಮಾಡಿದರೆ ರಕ್ಷಿತ್ ಶೆಟ್ಟಿ ಅವರ ಮರ್ಯಾದೆ ಹೋಗುತ್ತದೆ ಎಂದು ನೆಗೆಟೀವ್ ಕಮೆಂಟ್ ಮಾಡಿದ್ದರು.

    `ಗೀತಾ ಗೋವಿಂದಂ’ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿತ್ತು. ನಂ.1 ಟ್ರೆಂಡಿಂಗ್ ನಲ್ಲಿತ್ತು. ಕನ್ನಡದ ವರನಟ ರಾಜ್ ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ ಹಾಡಿನ ತೆಲುಗು ಟ್ಯೂನ್ ನೊಂದಿಗೆ ಟೀಸರ್ ಆರಂಭವಾಗುತ್ತದೆ.

    ಚಿತ್ರ ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಟೀಸರ್ ಮೂಲಕವೇ ಸಿನಿಮಾ ಸೂಪರ್ ಹಿಟ್ ಆಗುವ ಭರವಸೆ ಮೂಡಿಸಿದ್ದು, ಚಿತ್ರದ ಆಡಿಯೋ ಜುಲೈ 29ರಂದು ರಿಲೀಸ್ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://twitter.com/i_dark__/status/1028572397807362050

  • ಸಾನ್ವಿ ಟೀಚರ್ ರಶ್ಮಿಕಾ ಮಂದಣ್ಣ ‘ಗೀತಾ ಗೋವಿಂದಂ’ ಟೀಸರ್ ಸೂಪರ್ ಹಿಟ್!

    ಸಾನ್ವಿ ಟೀಚರ್ ರಶ್ಮಿಕಾ ಮಂದಣ್ಣ ‘ಗೀತಾ ಗೋವಿಂದಂ’ ಟೀಸರ್ ಸೂಪರ್ ಹಿಟ್!

    ಹೈದರಾಬಾದ್: ಕಿರಿಕ್ ಪಾರ್ಟಿಯಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ ನಟನೆಯ ತೆಲುಗು ಸಿನಿಮಾ `ಗೀತಾ ಗೋವಿಂದಂ’ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿದೆ. ಕನ್ನಡದ ವರನಟ ರಾಜ್ ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ… ಹಾಡಿನ ತೆಲುಗು ಟ್ಯೂನ್ ನೊಂದಿಗೆ ಟೀಸರ್ ಆರಂಭವಾಗುತ್ತದೆ.

    ಬ್ಲಾಕ್ ಆಂಡ್ ವೈಟ್ ದೃಶ್ಯಗಳಿಂದ ಆರಂಭವಾಗುವ ದೃಶ್ಯಗಳಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಜೋಡಿಯಾಗಿರುವ ನಟ ವಿಜಯ್ ದೇವರಕೊಂಡ ಜೋಡಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅಪ್ಪಟ ಹಳ್ಳಿ ಯುವತಿಯ ದೃಶ್ಯದಲ್ಲಿ ಪತಿ, ಪತ್ನಿಯ ಪ್ರಣಯದ ದೃಶ್ಯಗಳು ಮೂಡಿ ಬಂದಿದೆ. ಆದರೆ ಮರುಕ್ಷಣದಲ್ಲಿ ಇದು ಹೀರೋ ಕನಸು ಮಾತ್ರ ಎಂಬುದನ್ನು ರಿವೀಲ್ ಮಾಡಲಾಗಿದೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ಹೀರೋಗೆ ನೀಡುವ ಖಡಕ್ ವಾರ್ನಿಂಗ್ ನೋಡುಗರಿಗೆ ಇಷ್ಟವಾದರೆ, ಚಿತ್ರದ ನಾಯಕ ತನ್ನ ಪ್ರೇಯಸಿಯನ್ನು ಗೆಲ್ಲಲು ಪಡುವ ಪ್ರಯತ್ನ ನಗು ಮೂಡಿಸುತ್ತದೆ.

    ರೊಮ್ಯಾಂಟಿಕ್, ಕಾಮಿಡಿ ಎಳೆಯೊಂದಿಗೆ ಯುವ ಮನಸ್ಸುಗಳ ಪ್ರೇಮ ಕಥೆಯನ್ನು ಚಿತ್ರ ಹೊಂದಿದೆ. ಮೇಡಂ ಮೇಡಂ ಎಂದು ರಶ್ಮಿಕಾ ಹಿಂದೆ ಸುತ್ತುವ ಪಾತ್ರದಲ್ಲಿ ವಿಜಯ್ ದೇವರಕೊಂಡ ಗಮನಸೆಳೆದರೆ, ಖಡಕ್ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದಾರೆ. ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶ ಪಡೆದಿರುವ ರಶ್ಮಿಕಾ ಮಂದಣ್ಣ ಅವರಿಗೆ ಇದು ತೆಲುಗಿನ 2ನೇ ಸಿನಿಮಾ ಆಗಿದೆ. ಈ ಹಿಂದೆ ರಶ್ಮಿಕಾ ತೆಲುಗಿನ ಚಲೋ ಸಿನಿಮಾದ ಮೂಲಕ ಟಾಲಿವುಡ್ ನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಗಣೇಶ್ ಜೊತೆ ಚಮಕ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

    ಚಿತ್ರ ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಟೀಸರ್ ಮೂಲಕವೇ ಸಿನಿಮಾ ಸೂಪರ್ ಹಿಟ್ ಆಗುವ ಭರವಸೆ ಮೂಡಿಸಿದ್ದು, ಚಿತ್ರದ ಆಡಿಯೋ ಜುಲೈ 29ರಂದು ರಿಲೀಸ್ ಆಗಲಿದೆ.