Tag: vijay

  • ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ

    ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ

    ನವದೆಹಲಿ: ನಟ, ರಾಜಕಾರಣಿ ವಿಜಯ್ (Vijay) ಅವರ ಚುನಾವಣಾ ರ‍್ಯಾಲಿಯ ವೇಳೆ ಸಂಭವಿಸಿದ ಕರೂರು ಕಾಲ್ತುಳಿತ (Karur Stampede) ದುರಂತದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ವಹಿಸಿಕೊಂಡಿದ್ದು, ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಸಿಬಿಐ ತಂಡ ಈಗಾಗಲೇ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ನೇತೃತ್ವದಲ್ಲಿ ನಡೆದ ರಾಜಕೀಯ ರ‍್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಇದನ್ನೂ ಓದಿ: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

    ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ವತಂತ್ರ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿತ್ತು. ಎಸ್‌ಐಟಿಯಲ್ಲಿ (SIT) ತಮಿಳುನಾಡಿನ ಪೊಲೀಸರೇ ಇರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿ ವಿಚಾರಣೆ ಬಳಿಕ ಕರೂರು ಕಾಲ್ತುಳಿತ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದನ್ನೂ ಓದಿ: ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ – ಸಚಿವನಾಗುವ ಇಂಗಿತ ವ್ಯಕ್ತಪಡಿಸಿದ ಲಕ್ಷ್ಮಣ ಸವದಿ

    ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನ ಕೂಡ ಸುಪ್ರೀಂ ಕೋರ್ಟ್ ರಚಿಸಿತ್ತು. ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

  • ಕಾಲ್ತುಳಿತಕ್ಕೆ 41 ಜನ ಸಾವು ಕೇಸ್‌ – ಅ.27ಕ್ಕೆ ಮೃತರ ಕುಟುಂಬಸ್ಥರ ಭೇಟಿಯಾಗಲಿರೋ ವಿಜಯ್‌

    ಕಾಲ್ತುಳಿತಕ್ಕೆ 41 ಜನ ಸಾವು ಕೇಸ್‌ – ಅ.27ಕ್ಕೆ ಮೃತರ ಕುಟುಂಬಸ್ಥರ ಭೇಟಿಯಾಗಲಿರೋ ವಿಜಯ್‌

    ಚೆನ್ನೈ: ಕರೂರ್‌ನಲ್ಲಿ (Karur Stampede) ರ‍್ಯಾಲಿ ವೇಳೆ ರ‍್ಯಾಲಿಯಲ್ಲಿ 41 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರನ್ನು ನಟ, ಟಿಎಂಕೆ ಮುಖ್ಯಸ್ಥ ವಿಜಯ್‌ (Vijay) ಭೇಟಿಯಾಗಲಿದ್ದಾರೆ.

    ಅಕ್ಟೋಬರ್‌ 27 ರಂದು ಚೆನ್ನೈ ಸಮೀಪದ ಮಹಾಬಲಿಂಪುರದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಮೃತರ ಕುಟುಂಬಸ್ಥರನ್ನು ನಟ ಭೇಟಿ ಮಾಡಲಿದ್ದಾರೆ. ಈ ಹಿನ್ನೆಲೆ ಖಾಸಗಿ ರೆಸಾರ್ಟ್‌ನಲ್ಲಿ 50 ರೂಮ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಟಿಎಂಕೆ ತಿಳಿಸಿದೆ.

    ಪ್ರತಿಯೊಂದು ಕುಟುಂಬವನ್ನು ಖಾಸಗಿಯಾಗಿ ಭೇಟಿಯಾಗಿ ನಟ ಸಾಂತ್ವನ ಹೇಳಲಿದ್ದಾರೆ. ಸ್ಥಳಕ್ಕೆ ಬರಲು ಮೃತರ ಕುಟುಂಬಸ್ಥರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

    ಸೆ.27 ರಂದು ಕರೂರ್‌ನಲ್ಲಿ ನಟ ವಿಜಯ್‌ ಚುನಾವಣಾ ರ‍್ಯಾಲಿ ನಡೆಸಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು.

  • ಕರೂರಿನಲ್ಲಿ ಕಾಲ್ತುಳಿತ ಕೇಸ್; ಮೃತರ ಕುಟುಂಬಗಳಿಗೆ ನಟ ವಿಜಯ್ ವಿಡಿಯೋ ಕರೆ – ಸಹಾಯದ ಭರವಸೆ

    ಕರೂರಿನಲ್ಲಿ ಕಾಲ್ತುಳಿತ ಕೇಸ್; ಮೃತರ ಕುಟುಂಬಗಳಿಗೆ ನಟ ವಿಜಯ್ ವಿಡಿಯೋ ಕರೆ – ಸಹಾಯದ ಭರವಸೆ

    – ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

    ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ (Karur Stampede Case) ನಡೆದ ರ‍್ಯಾಲಿಯಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಟ-ರಾಜಕಾರಣಿ ವಿಜಯ್ ಅವರು ವೀಡಿಯೊ ಕರೆಗಳ ಮೂಲಕ ವೈಯಕ್ತಿಕವಾಗಿ ಮಾತನಾಡಿ ಸಹಾಯ ಮಾಡಲು ಪ್ರಾರಂಭಿಸಿದ್ದಾರೆ.

    ವಿಡಿಯೋ ಕರೆ ಮಾಡಿದ ವೇಳೆ ನಾನು ನಿಮ್ಮೊಂದಿಗಿದ್ದೇನೆ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ವಿಜಯ್ ದುಃಖಿತ ಕುಟುಂಬಗಳಿಗೆ ಹೇಳಿದರು. ವೀಡಿಯೊ ಕರೆಯ ಸಮಯದಲ್ಲಿ ರೆಕಾರ್ಡ್ ಮಾಡಬೇಡಿ ಅಥವಾ ಫೋಟೋ ತೆಗೆದುಕೊಳ್ಳಬೇಡಿ ಎಂದು ನಟರ ತಂಡ ಕುಟುಂಬಗಳನ್ನು ವಿನಂತಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್

    ಪ್ರತಿಯೊಂದು ಕರೆಯೂ ಸುಮಾರು 20 ನಿಮಿಷಗಳ ಕಾಲ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಈ ಸಮಯದಲ್ಲಿ ವಿಜಯ್ ತೀವ್ರ ಸಂತಾಪ ವ್ಯಕ್ತಪಡಿಸಿ ಸಹಾಯದ ಭರವಸೆ ನೀಡಿದರು. ಮೂಲಗಳು ಹೇಳುವಂತೆ ವಿಜಯ್ ಅವರು ಶೀಘ್ರದಲ್ಲೇ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಹಲವಾರು ಟಿವಿಕೆ ಕಾರ್ಯಕರ್ತರನ್ನು ಬಂಧಿಸಲಾಗಿದ್ದರೂ, ಯಾವುದೇ ಎಫ್‌ಐಆರ್‌ನಲ್ಲಿ ವಿಜಯ್ ಅವರ ಹೆಸರಿಲ್ಲ. ಈ ನಡುವೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆ ಬಿಜೆಪಿ ನಾಯಕಿ ಉಮಾ ಆನಂದನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕರೂರ್ ಕಾಲುಳ್ತಿತ ದುರಂತ; 2 ವಾರ ತಮಿಳುನಾಡು ಪ್ರವಾಸ ರದ್ದಗೊಳಿಸಿದ ವಿಜಯ್

  • ಕಾಲ್ತುಳಿತಕ್ಕೆ ಪೊಲೀಸರು ಹೊಣೆ – ಪತ್ರ ಬರೆದು ವಿಜಯ್‌ ಅಭಿಮಾನಿ, ಟಿವಿಕೆ ಕಾರ್ಯಕರ್ತ ಆತ್ಮಹತ್ಯೆ

    ಕಾಲ್ತುಳಿತಕ್ಕೆ ಪೊಲೀಸರು ಹೊಣೆ – ಪತ್ರ ಬರೆದು ವಿಜಯ್‌ ಅಭಿಮಾನಿ, ಟಿವಿಕೆ ಕಾರ್ಯಕರ್ತ ಆತ್ಮಹತ್ಯೆ

    ಚೆನ್ನೈ: ವಿಜಯ್ (Vijay) ಅವರ ಕರೂರ್‌ ರಾಜಕೀಯ ರ‍್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ (Karur Stampede) ದುರಂತ ಸಂಭವಿಸಿದ ಎರಡು ದಿನಗಳ ನಂತರ ಪಕ್ಷದ ಕಾರ್ಯಕರ್ತ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ.

    ತಮಿಳಗ ವೆಟ್ರಿ ಕಳಗಂ (TVK) ವಿರ್ಪಟ್ಟು ಗ್ರಾಮ ಶಾಖೆಯ ಕಾರ್ಯದರ್ಶಿ ಅಯ್ಯಪ್ಪನ್ (52) ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: TVK Vijay Rally Stampede | ಮದ್ರಾಸ್‌ ಹೈಕೋರ್ಟ್‌ನಲ್ಲಿಂದು ವಿಚಾರಣೆ – ಸಾವಿನ ಸಂಖ್ಯೆ 41ಕ್ಕೆ ಏರಿಕೆ

     

    ಈ ಭೀಕರ ಘಟನೆಯಿಂದ ತನಗೆ ನೋವಾಗಿದೆ ಎಂದು ಭಾವನಾತ್ಮಕವಾಗಿ ಪತ್ರ ಬರೆದಿರುವ ಅವರು, ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರುವುದರ ಜೊತೆಗೆ ಪೊಲೀಸರು ಸೂಕ್ತ ವ್ಯವಸ್ಥೆಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:  TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪತ್ರವನ್ನು ವಶಪಡಿಸಿಕೊಂಡು, ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಲ್ಲುಪುರಂನ ಮುಂಡಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

  • ವಿಜಯ್‌ ಅವರದ್ದು ಏನೂ ತಪ್ಪಿಲ್ಲ, ಪೊಲೀಸ್‌ ಇಂಟೆಲಿಜೆನ್ಸ್‌ ವಿಫಲವಾಗಿದೆ: ಅಣ್ಣಾಮಲೈ ಆರೋಪ

    ವಿಜಯ್‌ ಅವರದ್ದು ಏನೂ ತಪ್ಪಿಲ್ಲ, ಪೊಲೀಸ್‌ ಇಂಟೆಲಿಜೆನ್ಸ್‌ ವಿಫಲವಾಗಿದೆ: ಅಣ್ಣಾಮಲೈ ಆರೋಪ

    – ಕರೂರು ಕಾಲ್ತುಳಿತದಲ್ಲಿ ಮೃತರ ಕುಟುಂಬಸ್ಥರಿಗೆ ತಲಾ 1 ಲಕ್ಷ ಪರಿಹಾರ ಘೋಷಿಸಿದ ಬಿಜೆಪಿ ನಾಯಕ

    ಚೆನ್ನೈ: ನಟ, ರಾಜಕಾರಣಿ ವಿಜಯ್‌ (Vijay Thalapathy) ಚುನಾವಣಾ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ (Annamalai) ಘೋಷಿಸಿದ್ದಾರೆ.

    ಕಾರೂರು (Karur Stampede) ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅಣ್ಣಾಮಲೈ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿದ್ದ ಜನರಿಗೆ ಸಾಂತ್ವನ ಹೇಳಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆ ಬಗ್ಗೆ ತೀವ್ರ ನೋವಾಗಿದೆ. ಈವರೆಗೆ ತಮಿಳುನಾಡಿನಲ್ಲಿ ಈ ರೀತಿ ಘಟನೆ ನಡೆದಿರಲಿಲ್ಲ. ಈ ದುರಂತಕ್ಕೆ ನೇರ ಹೊಣೆ ಸ್ಥಳೀಯ ಪೊಲೀಸರು ಮತ್ತು ರಾಜ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಇದರಲ್ಲಿ ನಟ, ರಾಜಕಾರಣಿ ವಿಜಯ್ ಅವರದ್ದು ಏನು ತಪ್ಪು ಇಲ್ಲ. ಸಮಾರಂಭಕ್ಕೆ ಅನುಮತಿ ನೀಡಿದ್ದು ಸ್ಥಳೀಯ ಆಡಳಿತ ಮಂಡಳಿ. 10 ಸಾವಿರ ಜನ ಸೇರುತ್ತಾರೆ, ಅನುಮತಿ ಕೊಡಿ ಅಂತ ಕೇಳಿದ್ರು ಕೊಟ್ಟಿದ್ದೇವೆ ಅಂತ ಈಗ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಪೊಲೀಸರ ಇಂಟಲಿಜೆನ್ಸ್ ವಿಫಲ ಆಗಿದೆಯಾ? ಪೊಲೀಸರಿಗೆ ಗೊತ್ತಿಲ್ಲವಾ ಅವರು ಒಬ್ಬ ಐಕಾನ್ ಸ್ಟಾರ್ ಅಂತ? ಇಲ್ಲಿನ ಡಿಸಿ ಮತ್ತು ಎಸ್‌ಪಿಯನ್ನು ಅಮಾನತು ಮಾಡಬೇಕು. ಅದರೆ, ಅದನ್ನು ರಾಜ್ಯ ಸರ್ಕಾರ ಮಾಡಿಲ್ಲ ಎಂದು ಕಿಡಿಕಾರಿದರು.

    ಕರ್ನಾಟಕದಲ್ಲಿ ಆರ್‌ಸಿಬಿ ವಿಚಾರವಾಗಿ ಒಂದು ಘಟನೆ ನಡೆದಿತ್ತು. ಅಲ್ಲಿಯೂ ಕೂಡ ರಾಜ್ಯ ಸರ್ಕಾರದ ವಿಫಲತೆ ಇತ್ತು. ಅಲ್ಲಿ ಒನ್‌ ಮ್ಯಾನ್ ತನಿಖೆಗೆ ಆದೇಶ ನೀಡಲಾಗಿತ್ತು. ಅವರು ರಾಜ್ಯ ಸರ್ಕಾರದ ವಿರುದ್ಧ ರಿಪೋರ್ಟ್ ನೀಡಲು ಸಾಧ್ಯವಿಲ್ಲ. ಅದೇ ರೀತಿ ಇಲ್ಲಿ ಕೂಡ ಆಗುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಸಿಬಿಐ ತನಿಖೆಯಲ್ಲಿ ಗೊತ್ತಾಗುತ್ತೆ, ಇದು ಯಾರಾದ್ರು ಹೇಳಿ ಮಾಡಿಸಿದ್ದ ಅಂತ. ಜನಸಂದಣಿಯಲ್ಲಿ ಯಾರದ್ರು ಕುಮ್ಮಕ್ಕು ಕೊಟ್ರ ಎಂಬ ಎಲ್ಲಾ ಮಾಹಿತಿ ಹೊರ ಬರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಕರೂರು ಕಾಲ್ತುಳಿತ – 39 ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

    ನಮ್ಮ ಪಕ್ಷದಿಂದ ಗ್ರೌಂಡ್ ಲೆವೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಮೃತ 40 ಜನರಿಗೂ ತಲಾ ಒಂದು ಲಕ್ಷ ಪರಿಹಾರ ನೀಡಲು ಬಿಜೆಪಿಯಿಂದ ತೀರ್ಮಾನ ಮಾಡಲಾಗಿದೆ. ಒಂದು ವಾರದಲ್ಲಿ ಮೃತರ ಎಲ್ಲರ ಮನೆಗೆ ತೆರಳಿ ನಾವು ಚೆಕ್‌ ತಲುಪಿಸುತ್ತೇವೆ ಎಂದರು.

  • ಕಾಲ್ತುಳಿತಕ್ಕೆ ಪೊಲೀಸರ ಲಾಠಿಚಾರ್ಜ್‌ ಕಾರಣ: ಟಿವಿಕೆ ಆರೋಪ

    ಕಾಲ್ತುಳಿತಕ್ಕೆ ಪೊಲೀಸರ ಲಾಠಿಚಾರ್ಜ್‌ ಕಾರಣ: ಟಿವಿಕೆ ಆರೋಪ

    ಕರೂರ್‌: ಪೊಲೀಸರು ಲಾಠಿಚಾರ್ಜ್‌ ಮಾಡಿದ್ದರಿಂದ 39 ಮಂದಿ ಮೃತಪಟ್ಟಿದ್ದಾರೆ ಎಂದು ವಿಜಯ್‌ (Vijay) ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಆರೋಪಿಸಿದೆ.

    ಪಕ್ಷ ಮೊದಲು ಕರೂರ್‌ನ ಲೈಟ್‌ಹೌಸ್ ಕಾರ್ನರ್ ಮತ್ತು ಉಜಾವರ್ ಮಾರುಕಟ್ಟೆಯ ಬಳಿ ರ‍್ಯಾಲಿ ನಡೆಸಲು ಟಿವಿಕೆ ಅನುಮತಿ ಕೋರಿತ್ತು. ಆದರೆ ಡಿಎಂಕೆ ಸರ್ಕಾರ ಸುರಕ್ಷತಾ ಕಾರಣಗಳಿಂದಾಗಿ ಈ ಜಾಗದಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡಿರಲಿಲ್ಲ. ಬದಲಾಗಿ ಕರೂರ್-ಈರೋಡ್ ರಸ್ತೆಯಲ್ಲಿ ರ‍್ಯಾಲಿಗೆ ಅವಕಾಶ ನೀಡಲಾಯಿತು. ಆದರೆ ಈ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸದ ಕಾರಣ ದುರಂತ (TVK Rally Stampede) ಸಂಭವಿಸಿದೆ ಎಂದು ದೂರಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್

     

    ಪ್ರತ್ಯಕ್ಷದರ್ಶಿಗಳು ಹೇಳೋದು ಏನು?
    ವಿಜಯ್‌ ಅವರು ವಾಹನ ಹತ್ತಿದ ಬಳಿಕ ಸೆಂಥಿಲ್‌ ಬಾಲಾಜಿ ಅವರನ್ನು ʼ10 ರೂ. ಮಂತ್ರಿʼ ಎಂದು ಟೀಕಿಸುವ ಹಾಡನ್ನು ಹಾಡಲಾಯಿತು. ಈ ವೇಳೆಗೆ ಜನ ಆಕ್ರೋಶ ಹೊರಹಾಕಿದಾಗ ಪೊಲೀಸರು ಲಾಠಿ ಬೀಸತೊಡಗಿದರು. ಇದರಿಂದ ಜನ ಭಯಗೊಂಡು ಓಡಲು ಆರಂಭಿಸಿದರು. ಶಿಶುಗಳನ್ನು ಹಿಡಿದಿರುವ ಪೋಷಕರು ಸೇರಿದಂತೆ ಎಲ್ಲರೂ ಮುಂದಕ್ಕೆ ತಳ್ಳಿಕೊಂಡು ಓಡಿದಾಗ ನೂಕುನುಗ್ಗಲು ನಡೆದು ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ

    ಇನ್ನೊಬ್ಬರು ಹೇಳಿದ ಪ್ರಕಾರ, ವಿಜಯ್ ಪ್ರಚಾರ ಸ್ಥಳಕ್ಕೆ ಬರುವವರೆಗೂ ಎಲ್ಲವೂ ಸರಿಯಾಗಿತ್ತು. ಇದ್ದಕ್ಕಿದ್ದಂತೆ ಜನರೇಟರ್‌ಗೆ ಸಂಪರ್ಕಗೊಂಡಿದ್ದ ಫ್ಲಡ್‌ಲೈಟ್‌ಗಳು ಆಫ್ ಆದವು. ಈ ವೇಳೆ ಮಹಿಳೆಯೊಬ್ಬಳು ಕಾಣೆಯಾದ ಮಗುವನ್ನು ಹುಡುಕಲು ಪ್ರಾರಂಭಿಸಿದಳು. ಈ ವೇಳೆ ಜನ ಆ ಮಗುವನ್ನು ಹುಡುಕಲು ಆರಂಭಿಸಿದಾಗ ತಳ್ಳಾಟ, ನೂಕಾಟ ನಡೆದು ಕಾಲ್ತುಳಿತ ಸಂಭವಿಸಿರಬಹುದು ಎಂದು ತಿಳಿಸಿದ್ದಾರೆ.

  • ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

    ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

    ಚೆನ್ನೈ: ಕರೂರಿನಲ್ಲಿ ರ‍್ಯಾಲಿ ವೇಳೆ ಭೀಕರ ಕಾಲ್ತುಳಿತ (Karur Stampede) ದುರಂತಕ್ಕೆ ಸಂಬಂಧಿಸಿದಂತೆ ನಟ, ರಾಜಕಾರಣಿ ದಳಪತಿ ವಿಜಯ್‌ (Vijay) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಿಜಯ್‌, ನನ್ನ ಹೃದಯ ಚೂರಾಗಿದೆ. ನಾನು ಅಸಹನೀಯ ನೋವು ಮತ್ತು ದುಃಖದಲ್ಲಿದ್ದೇನೆ. ಹೇಳಿಕೊಳ್ಳಲಾಗದಷ್ಟು ನೋವು ಎಂದು ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮಾಯಕರ ಜೀವಹಾನಿ ಹೃದಯವನ್ನು ಕಲಕಿದೆ: ಕಾಲ್ತುಳಿತ ದುರಂತಕ್ಕೆ ರಜನಿಕಾಂತ್‌ ಕಂಬನಿ

    ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ, ಸಹೋದರಿಯರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವೇ ಗುಣಮುಖರಾಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ವಿಜಯ್‌ ತಿಳಿಸಿದ್ದಾರೆ.

    ತಮಿಳುನಾಡು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್‌ ಬೃಹತ್‌ ರ‍್ಯಾಲಿ ನಡೆಸಿದ್ದರು. ವಿಜಯ್‌ ನೋಡಲೆಂದು ಲಕ್ಷಾಂತರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಈ ವೇಳೆ ಭೀಕರ ಕಾಲ್ತುಳಿತ ಸಂಭವಿಸಿದೆ. 35ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯ್‌ಗಾಗಿ ಸತತ 7 ಗಂಟೆ ಕಾದಿದ್ದ ಜನ; ಬರೋಬ್ಬರಿ 1 ಲಕ್ಷ ಮಂದಿ ಜಮಾವಣೆ – ಭೀಕರ ಕಾಲ್ತುಳಿತ ಹೇಗಾಯ್ತು?

  • ʼ9 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ.. ಪೋಷಕರಿಗೆ ಹುಡುಕಿಕೊಡಿ ಪ್ಲೀಸ್‌ʼ: ರ‍್ಯಾಲಿ ವೇಳೆ ಮೈಕ್‌ನಲ್ಲಿ ಹೇಳಿದ್ದ ವಿಜಯ್‌

    ʼ9 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ.. ಪೋಷಕರಿಗೆ ಹುಡುಕಿಕೊಡಿ ಪ್ಲೀಸ್‌ʼ: ರ‍್ಯಾಲಿ ವೇಳೆ ಮೈಕ್‌ನಲ್ಲಿ ಹೇಳಿದ್ದ ವಿಜಯ್‌

    ಚೆನ್ನೈ: ತಮಿಳು ನಟ, ರಾಜಕಾರಣಿ ವಿಜಯ್‌ (Vijay) ರ‍್ಯಾಲಿ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 34 ಮಂದಿ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ವಿಜಯ್‌ ರ‍್ಯಾಲಿ ಸಂದರ್ಭದಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದೆ. ಅಪಾರ ಜನಸಂದಣಿಯಲ್ಲಿ 9 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ.

    ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರನ್ನು ಉದ್ದೇಶಿಸಿ ವಿಜಯ್‌ ಮಾತನಾಡುವ ವೇಳೆ, ವ್ಯಕ್ತಿಯೊಬ್ಬ ಬಸ್ ಮೇಲೆ ಬಂದು ಬಾಲಕಿ ಕಾಣೆಯಾಗಿರುವ ಬಗ್ಗೆ ವಿಜಯ್‌ಗೆ ತಿಳಿಸುತ್ತಾನೆ. ಆಗ ನಟ ತಕ್ಷಣ ಮೈಕ್‌ನಲ್ಲಿ ಅನೌನ್ಸ್‌ ಮಾಡುತ್ತಾರೆ. ‘9 ವರ್ಷದ ಅಶ್ಮಿಕಾ ಹೆಸರಿನ ಬಾಲಕಿ ಕಾಣೆಯಾಗಿದ್ದಾಳೆ. ದಯವಿಟ್ಟು ಯಾರಿಗಾದರು ಕಂಡರೆ ಗಮನಕ್ಕೆ ತನ್ನಿ. ಪೊಲೀಸರೇ ಸಹಕರಿಸಿ’ ಎಂದು ವಿಜಯ್‌ ಮನವಿ ಮಾಡಿದ್ದರು. ಇದನ್ನೂ ಓದಿ: ವಿಜಯ್‌ಗಾಗಿ ಸತತ 7 ಗಂಟೆ ಕಾದಿದ್ದ ಜನ; ಬರೋಬ್ಬರಿ 1 ಲಕ್ಷ ಮಂದಿ ಜಮಾವಣೆ – ಭೀಕರ ಕಾಲ್ತುಳಿತ ಹೇಗಾಯ್ತು?

    ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್‌ ಕರೂರಿನಲ್ಲಿ ಬೃಹತ್‌ ರ‍್ಯಾಲಿ ನಡೆಸಿದ್ದರು. ವಿಜಯ್‌ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

    ಮಕ್ಕಳು, ಮಹಿಳೆಯರೆನ್ನದೇ 1 ಲಕ್ಷಕ್ಕೂ ಹೆಚ್ಚು ಮಂದಿ ರ‍್ಯಾಲಿಯಲ್ಲಿ ಜಮಾಯಿಸಿದ್ದರು. ಈ ವೇಳೆ ತಳ್ಳಾಟ-ನೂಕಾಟವಾಗಿ ಕಾಲ್ತುಳಿತ ಸಂಭವಿಸಿದೆ. 30ಕ್ಕೂ ಹೆಚ್ಚು ಮಂದಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಹಲವರು ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

  • ಟ್ವಿಸ್ಟ್ ಕೊಟ್ಟ ದಳಪತಿ ವಿಜಯ್ – ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ?

    ಟ್ವಿಸ್ಟ್ ಕೊಟ್ಟ ದಳಪತಿ ವಿಜಯ್ – ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ?

    ವಿಜಯ್ (Vijay) ಈಗ ರಾಜಕೀಯ ಭಾಷಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನವಾಣೆಯನ್ನು (Tamil Nadu Election) ಗುರಿಯಾಗಿಸಿಕೊಂಡಿರುವ ವಿಜಯ್ ರಾಜ್ಯದ ಪ್ರಚಾರವನ್ನೂ ಮಾಡುತ್ತಿದ್ದಾರೆ. ಜನ ಸಂಘಟನೆ ಗುರಿಯಾಗಿಸಿಕೊಂಡಿರುವ ವಿಜಯ್‌ಗೆ ಈಗ ಸಿನಿಮಾ ಬಗ್ಗೆ ಯೋಚನೆ ಇಲ್ಲ. ಆದರೆ ದೀಪಾವಳಿಗೆ (Deepavali) ಅಭಿಮಾನಿಗಳಿಗೆ ʼಗಿಫ್ಟ್‌ʼ ನೀಡಲಿದ್ದಾರೆ.

    ಮುಂದಿನ ವರ್ಷಾರಂಭದಲ್ಲೇ ವಿಜಯ್ ಜನನಾಯಕನ್ (Jana Nayagan) ಚಿತ್ರದ ಮೂಲಕ ಚಿತ್ರಮಂದಿರಗಳನ್ನು ಅಲಂಕರಿಸಲಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಡಿಸೆಂಬರ್ 27 ರಂದು ಮಲೇಶಿಯಾದಲ್ಲಿ ಏರ್ಪಡಿಸೋದಕ್ಕೆ ಯೋಜನೆಯೂ ಆಗಿದೆ. ಅದಕ್ಕೂ ಮುನ್ನ ವಿಜಯ್ ಕಡೆಯಿಂದ ಅಭಿಮಾನಿಗಳಿಗೆ ಬಂಪರ್ ಗಿಫ್ಟ್, ಸರ್ಪ್ರೈಸ್‌ ಆಗಿ ಪ್ಲ್ಯಾನ್‌ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ. ಇದನ್ನೂ ಓದಿ:  ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಾಣಿ ಮುಖರ್ಜಿ ಕತ್ತಲ್ಲಿ ಮಗಳ ಹೆಸರಿನ ಚೈನ್‌

     

    ಟಿವಿಕೆ ಹೆಸರಲ್ಲಿ ಹೊಸ ಪಕ್ಷ ಕಟ್ಟಿರುವ ವಿಜಯ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ವೇಳೆಯೇ ಸಿನಿಮಾ ಅಭಿಮಾನಿಗಳನ್ನು ಬ್ಯಾಲೆನ್ಸ್ ಮಾಡಲು ವಿಜಯ್ ಇದೇ ದೀಪಾವಳಿಗೆ ಮುಂಬರುವ `ಜನನಾಯಕನ್’ ಚಿತ್ರದ ಮೊದಲ ಹಾಡನ್ನ ರಿಲೀಸ್ ಮಾಡಲಿದ್ದಾರೆ. ವಿಶೇಷ ಅಂದ್ರೆ ಇದು ವಿಜಯ್ ಧ್ವನಿಯಲ್ಲೇ ಮೂಡಿ ಬಂದಿದೆ. ಇದನ್ನೂ ಓದಿ:  ಭೈರಪ್ಪ 3 ತಿಂಗಳಿನ ಹಿಂದೆ ಡಿಸ್ಟಾರ್ಜ್‌ ಆಗಿ 3 ದಿನದ ಹಿಂದೆ ಅಡ್ಮಿಟ್ ಆಗಿದ್ರು: ಡಾ. ಶೈಲಾ

    ಮಾಸ್ ಪ್ರೇಕ್ಷಕರ ಮಹಾನಟ ವಿಜಯ್ ಫ್ಯಾನ್ಸ್‌ಗಾಗಿ ಈ ಟ್ರೀಟ್ ಕೊಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಈ ವಿಚಾರವಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಮಾಣ ಸಂಸ್ಥೆ ಕಡೆಯಿಂದ ಅಧಿಕೃತವಾಗಿ ಪ್ರಕಟವಾಗಲಿದೆ.

  • ಸುಜಾತಾ ಭಟ್‌ರನ್ನು ಮೊದಲು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು: ವಾಸಂತಿ ಸಹೋದರ ಒತ್ತಾಯ

    ಸುಜಾತಾ ಭಟ್‌ರನ್ನು ಮೊದಲು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು: ವಾಸಂತಿ ಸಹೋದರ ಒತ್ತಾಯ

    ಮಡಿಕೇರಿ: ಸುಜಾತಾ ಭಟ್ (Sujatha Bhat) ಅವರು ಕ್ಷಣಕ್ಷಣಕ್ಕೂ ಒಂದೊಂದು ಹೇಳಿಕೆ ನೀಡುತ್ತಿರುವುದರಿಂದ ಆಕೆಯ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ನನ್ನ ಸಹೋದರಿ ವಸಂತಿ ಎಷ್ಟು ತಾಯಿಂದಿರಿಗೆ ಮಗಳು ಆಗಲು ಸಾಧ್ಯ. ಮೊದಲು ಸುಜಾತಾ ಭಟ್ ಅವರನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ವಾಸಂತಿ ಸಹೋದರ ಎಂ.ವಿಜಯ್ ಅಕ್ರೋಶ ಹೊರಹಾಕಿದ್ದಾರೆ.

    ಕೊಡಗಿನ ವಿರಾಜಪೇಟೆಯಲ್ಲಿ ‘ಪಬ್ಲಿಕ್ ಟಿವಿ’ಯೊಂದಿಗೆ ಮಾತಾನಾಡಿದ ಅವರು, ಈ ಧರ್ಮಸ್ಥಳ ಪ್ರಕರಣದ ಬಗ್ಗೆ ಹಾಗೂ ಸುಜಾತಾ ಭಟ್ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಎಳೆಎಳೆಯಾಗಿ ಅವರ ಮುಖವಾಡ ಬಿಚ್ಚುಡುತ್ತಿದೆ. ಹೀಗಾಗಿ, ಮೊದಲು ಪಬ್ಲಿಕ್ ಟಿವಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.‌ ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ

    ಸುಜಾತಾ ಭಟ್ ದಿನಕ್ಕೊಂದು ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ಮಗಳು ಅಲ್ಲ ಅನ್ನುತ್ತಾರೆ, ಬೆಳಿಗ್ಗೆ ಮಗಳು ಎನ್ನುತ್ತಾರೆ. ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ನನ್ನ ಸಹೋದರಿ ವಾಸಂತಿ ಎಷ್ಟು ಜನರಿಗೆ ಮಗಳು ಆಗಬೇಕು? ಎಲ್ಲರಿಗೂ ಮಗಳ ಇವಳು? ಎಲ್ಲಾ ಸುಳ್ಳು ಹೇಳುತ್ತ ಇದ್ದಾರೆ. ಈ ಹಿಂದೆ ಸುಜಾತಾ ಭಟ್ ಅವರು ವಿರಾಜಪೇಟೆಗೆ ಬಂದು ಡೆತ್‌ಸರ್ಟಿಫಿಕೇಟ್ ತೆಗೆದುಕೊಂಡು ಹೋಗಿದ್ದಾರೆ. ಯಾವಾಗ ಬಂದು ತೆಗೆದುಕೊಂಡು ಹೋಗಿದ್ದಾರೆ ಎಂದು ನನಗೆ ಮಾಹಿತಿ ಇಲ್ಲ. ಸುಜಾತಾ ಭಟ್ ಅವರ ಬಾಯಿಯಿಂದಲೇ ಮಾಧ್ಯಮಗಳ ಮುಖಾಂತರ ಕೇಳಿದ್ದೇನೆ. ವಾಸಂತಿ ಅವರ ಪಾಸ್‌ಪೋರ್ಟ್ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅವರ ಪೋಟೊ ಆಲ್ಬಮ್, ಬಟ್ಟೆಗಳು ಸೇರಿದಂತೆ ಸುಮಾರು 15 ಲಕ್ಷದಷ್ಟು ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.

    2004 ರಿಂದ ರಂಗಪ್ರಸಾದ್ ಹಾಗೂ ಸುಜಾತಾ ಭಟ್ ಅವರೊಂದಿಗೆ ಸಂಬಂಧ ಇದೆ. ಸುಜಾತಾ ಭಟ್ ಅವರ ಮೇಲೆ ಸಾಕಷ್ಟು ಅನುಮಾನ ಇದೆ. ವಾಸಂತಿ ಸತ್ತ ಸಂದರ್ಭದಲ್ಲೇ ಅದು ಅನುಮಾನದ ಸಾವು‌ ಎಂದು ದೂರು ನೀಡಿದ್ದೆವು. ಸಿಬಿಐ ತನಿಖೆ ಆಗಿತ್ತು‌. ಅದರಲ್ಲಿ ಆತ್ಮಹತ್ಯೆ ಎಂದು ವರದಿ ಬಂದಿದೆ. ನನ್ನ ಬಳಿ ವಾಸಂತಿ ಭಟ್ ಅವರ ಹಲವಾರು ದಾಖಲೆಗಳು ಇವೆ. ಎಸ್‌ಐಟಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಅಣ್ಣ ಪೊಲೀಸರ ವಶಕ್ಕೆ

    ಸುಜಾತಾ ಭಟ್ ಅವರು ಒಂದಲ್ಲ ಒಂದು ಸುಳ್ಳು ಹೇಳಿಕೊಂಡು ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಪೊಲೀಸರು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ವಿಜಯ್ ಒತ್ತಾಯಿಸಿದ್ದಾರೆ.