Tag: Vihan Gowda

  • ಶೃಂಗಾರದಲ್ಲೂ ತಮಾಷೆ ಹುಡುಕೋ ಪ್ರತಿಭೆ ಜಗ್ಗಣ್ಣ: ಯೋಗರಾಜ ಭಟ್

    ಶೃಂಗಾರದಲ್ಲೂ ತಮಾಷೆ ಹುಡುಕೋ ಪ್ರತಿಭೆ ಜಗ್ಗಣ್ಣ: ಯೋಗರಾಜ ಭಟ್

    ಬೆಂಗಳೂರು: ಎರಡು ದಿನಗಳ ಹಿಂದೆ ಯೋಗರಾಜ ಭಟ್ಟರು ನಿರ್ದೇಶನದ ಪಂಚತಂತ್ರ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದೆ. ಈಗಾಗಲೇ 5 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿಗೆ ನವರಸನಾಯಕ ಡಬ್‍ಮ್ಯಾಶ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಯೋಗರಾಜ ಭಟ್ಟರು ತಮ್ಮ ಹಾಡಿನ ಮೂಲಕ ಚಳಿಗಾಲಕ್ಕೆ ಯುವ ಜೋಡಿಗಳಿಗೆ ಬೆಚ್ಚನೆಯ ಉಡುಗೊರೆ ನೀಡಿದ್ದಾರೆ. ಶೃಂಗಾರದ ಹೊಂಗೆಮರ ಹಾಡಿನಲ್ಲಿ ವಿಹಾನ್ ಗೌಡ ಮತ್ತು ಅಕ್ಷರಾ ಗೌಡ ಫುಲ್ ರೊಮ್ಯಾಂಟಿಕ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ತುಣುಕನ್ನು ತಮ್ಮ ಇನ್ಸಟಾಗ್ರಾಂನಲ್ಲಿ ಹಾಕಿಕೊಂಡಿರುವ ನವರಸನಾಯಕ ಡಬ್ ಮ್ಯಾಶ್ ಮಾಡಿದ್ದಾರೆ. ತಮ್ಮ ಎವರ್ ಗ್ರೀನ್ ಡೈಲಾಗ್ ಟಚಿಂಗ್, ಟಚಿಂಗ್ ಪದಗಳ ಜೊತೆ ಫನ್ನಿಯಾಗಿ ಕೆಲವು ಸಾಲುಗಳು ಸೇರಿಸಿದ್ದಾರೆ.

    ಭಟ್ರು ತಮಾಷೆಗೆ ಕೇಳುದ್ರು ಜಗ್ಗಣ್ಣ ಈ ಹಾಡು ನೀವ್ imagine ಮಾಡುದ್ರೆ ಹೆಂಗೆ ಅಂತ. ನಾನು ತಮಾಷೆಗೆ ಹಿಂಗ್ ಹಾಡ್ದೆ! ಅವರು ಹೆಂಗ್ sync ಮಾಡುದ್ರು. ನಗಬೇಕು ನಗಿಸಬೇಕು ಅದೆ ನನ್ನ ಧರ್ಮ ಎಂದು ಜಗ್ಗೇಶ್ ಇನ್ಸಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಭಟ್ಟರು, ಶೃಂಗಾರದಲ್ಲೂ ತಮಾಷೆ ಹುಡುಕೋಕೆ ಜಗ್ಗಣ್ಣನಂತ ದೈತ್ಯ ಪ್ರತಿಭೆಗೆ ಮಾತ್ರ ಸಾಧ್ಯ. ನಾನಂತೂ ತುಂಬಾ ನಕ್ಬಿಟ್ಟೆ. ಜೈ ಜಗ್ಗಣ್ಣ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ವಿಹಾನ್ ಗೌಡ ಮತ್ತು ಅಕ್ಷರಾ ಗೌಡ ಇಬ್ಬರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಯುವ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಟೀಸರ್ ಮೂಲಕ ಹೊಸ ಪ್ರೇಮ ಕಥೆಯೊಂದನ್ನು ಹೇಳಲು ಹೊರಟ್ಟಿದ್ದೇನೆ ಎಂದು ಭಟ್ಟರು ಹೇಳಿದ್ದರು. ಇದೀಗ ಸುಂದರ, ರೊಮ್ಯಾಂಟಿಕ್ ಪ್ರೇಮ ಕಥೆ ಎಂಬುದನ್ನು ‘ಶೃಂಗಾರದ ಹೊಂಗೆಮರ’ ಹಾಡಿನಲ್ಲಿ ತೋರಿಸಿದ್ದಾರೆ.

    ಶೃಂಗಾರದ ಹೊಂಗೆಮರ ಎಂಬ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ. ಇದೂವರೆಗೂ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    https://www.instagram.com/p/Br3_Yl-j3EJ/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಇಂಟರ್​ನೆಟ್​ ನೋಡಿ ನಾಚಿಕೆ ಬಿಡಿಸೋದನ್ನ ಕಲಿತ ಭಟ್ಟರ ಶಿಷ್ಯ

    ಇಂಟರ್​ನೆಟ್​ ನೋಡಿ ನಾಚಿಕೆ ಬಿಡಿಸೋದನ್ನ ಕಲಿತ ಭಟ್ಟರ ಶಿಷ್ಯ

    -ಹೊಂಗೆ ಮರದ ಕೆಳಗೆ ಟು ಬಿಡ್ತು ನಾಚಿಕೆ

    ಬೆಂಗಳೂರು: ಗಾಂಧಿ ನಗರದ ವಿಕಟಕವಿ ಯೋಗರಾಜ ಭಟ್ಟರ ಸಾಹಿತ್ಯ ಕೇಳಲು ಬಲು ಚೆಂದ. ಸಿನಿಮಾದ ಹಾಡುಗಳು ಸೇರಿದಂತೆ ಚಿತ್ರದ ಸಾಹಿತ್ಯವನ್ನು ತಮ್ಮದೇ ಶೈಲಿಯಲ್ಲಿ ಭಟ್ಟರು ಬರೆಯುತ್ತಾರೆ. ಈಗ ತಮ್ಮ ಬಹುನಿರೀಕ್ಷಿತ ‘ಪಂಚತಂತ್ರ’ ಚಿತ್ರದ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಎರಡು ದಿನಗಳ ಹಿಂದೆ ಚಿತ್ರದ ಹಾಡು ರಿಲೀಸ್ ಆಗಿದ್ದು, ನೋಡುಗರಿಗೆ ವಾವ್ ಫೀಲಿಂಗ್ ಕೊಡುತ್ತಿದೆ.

    ಚಳಿಗಾಲಕ್ಕೆ ಯುವ ಜೋಡಿಗಳಿಗೆ ಬೆಚ್ಚನೆಯ ಉಡುಗೊರೆ ಎಂಬ ಸಾಲುಗಳಿಂದ ಹಾಡು ಪ್ರಾರಂಭವಾಗುತ್ತದೆ. ಇದಕ್ಕೂ ಮೊದಲು ನಾಯಕ ನಟ ವಿಹಾನ್ ಗೌಡ, ಇಂಟರ್ ನೆಟ್‍ನಲ್ಲಿ ನಾಚಿಕೆ ಬಿಡಿಸೋದನ್ನು ನೋಡಿದ್ದೀನಿ. ಇಲ್ಲಿ ಟ್ರೈ ಮಾಡಲಾ ಎಂಬ ತುಂಟತನದ ಡೈಲಾಗ್ ಹೇಳ್ತರೆ. ಇದಾದ ನಂತರ ಸುಂದರ ಲೋಕವೇ ನಿಮ್ಮ ಕಣ್ಮುಂದೆ ಕಾಣಿಸುತ್ತದೆ. ಯುವ ಜೋಡಿ ರೊಮ್ಯಾಂಟಿಕ್ ಡ್ಯಾನ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರಾವಾಗುತ್ತಿದೆ. ಅಂತೆಯೇ ಭಟ್ಟರ್ ಲೇಖನಿಯಲ್ಲಿ ಮೂಡಿ ಬಂದ ಸಾಲುಗಳು ವಿ.ಹರಿಕೃಷ್ಣ ಅವರ ಸಂಗೀತದ ಜೊತೆ ಸೇರಿಕೊಂಡು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಕೇಳಲು ಹಿತವೆನಿಸುತ್ತದೆ.