Tag: Vignesh Sivan

  • ನಯನತಾರಾ ಧರಿಸಿದ ಆಭರಣದ ಮೊತ್ತವೆಷ್ಟು ಗೊತ್ತಾ.?

    ನಯನತಾರಾ ಧರಿಸಿದ ಆಭರಣದ ಮೊತ್ತವೆಷ್ಟು ಗೊತ್ತಾ.?

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇಂದು ಬೆಳಿಗ್ಗೆ 8.10ಕ್ಕೆ ಹಸೆಮಣೆ ಏರಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಶುಭ ಹಾರೈಸಲು ಸ್ಟಾರ್ ತಾರೆಯರು ಮದುವೆಗೆ ಸಾಕ್ಷಿಯಾಗಿದ್ದಾರೆ. ಇನ್ನು ಅವರ ಮದುವೆಯಲ್ಲಿ ದುಬಾರಿ ಕಾಸ್ಟ್ಯೂಮ್ ಮತ್ತು ಆಭರಣ ಧರಿಸಿದ್ದು, ಅದರ ಬೆಲೆಯ ಕುರಿತು ಇನ್ನಷ್ಟು ಡಿಟೈಲ್ಸ್ ಇಲ್ಲಿದೆ ನೋಡಿ.

    ಬಹುಭಾಷಾ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮ 7 ವರ್ಷಗಳ ಸುಧೀರ್ಘ ಪ್ರೀತಿಗೆ ಇಂದು ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಖುಷಿ ಖುಷಿಯಾಗಿ ಮದುವೆಯಲ್ಲಿ ಮಿಂಚ್ತಿರೋ ಜೋಡಿಯ ಕಾಸ್ಟ್ಯೂಮ್ ಕೂಡ ಸಖತ್ ಅಟ್ರಾಕ್ಟೀವ್ ಆಗಿದ್ದು, ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಮದುವೆಯಲ್ಲಿ ಸಿಂಪಲ್ ಆಗಿ ನಿರ್ದೇಶಕ ವಿಘ್ನೇಶ್ ಶಿವನ್ ಶರ್ಟ್ ಪಂಚೆಯ ಜತೆ ಶಲ್ಯದಲ್ಲಿ ಮಿಂಚಿದ್ರೆ, ನಯನತಾರಾ ರೆಡ್ ಕಲರ್ ನೆಟೆಡ್ ಸ್ಯಾರಿಯಲ್ಲಿ ಮಿಂಚಿದ್ದಾರೆ. ಇನ್ನು ನಯನತಾರಾ ಧರಿಸಿದ ಗ್ರ್ಯಾಂಡ್ ಆಭರಣಕ್ಕೆ 5 ಕೋಟಿ ಮೌಲ್ಯ ಎಂದು ತಿಳಿದು ಬಂದಿದೆ. ಇನ್ನು ನಯನತಾರಾ ಲುಕ್ಕಿಗೆ ಮತ್ತು ಆಭರಣಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಅದ್ದೂರಿ ಮದುವೆಗೆ ಶಾರುಖ್ ಖಾನ್, ನಿರ್ದೇಶಕ ಅಟ್ಲಿ ದಂಪತಿ, ರಜನಿಕಾಂತ್ ಕೂಡ ಸಾಕ್ಷಿಯಾಗಿದ್ದಾರೆ. ನೆಚ್ಚಿನ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  • ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?

    ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?

    ಕಾಲಿವುಡ್‌ನ ಸದ್ಯದ ಗುಡ್ ನ್ಯೂಸ್ ಅಂದ್ರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಸಂಭ್ರಮ. ಆ ಸಂಭ್ರಮಕ್ಕೆ ಚಿತ್ರರಂಗದ ಸಾಕಷ್ಟು ಮಂದಿ ಸಾಕ್ಷಿಯಾಗಲಿದ್ದಾರೆ. ಅದರಲ್ಲಿ ನಿರೀಕ್ಷಿಸುವ ಸ್ಟಾರ್ ಅಂದ್ರೆ `ಪುಷ್ಪ’ ಬ್ಯೂಟಿ ಸಮಂತಾ, ಆದರೆ ಕಾರಣಾಂತರದಿಂದ ಸಮಂತಾ ಮದುವೆಗೆ ಬರಲು ಸಾಧ್ಯವಾಗುತ್ತಿಲ್ಲ.

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ನಾಳೆಯೇ ಹಸೆಮಣೆ ಏರಲು ಈ ಜೋಡಿ ಸಜ್ಜಾಗಿದೆ. ಇನ್ನು ಸಾಕಷ್ಟು ವರ್ಷಗಳಿಂದ ನಯನತಾರಾ ಮತ್ತು ಸಮಂತಾ ಸ್ನೇಹಿತರು. ಅದಲ್ಲದೇ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ `ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ವಿಜಯ್ ಸೇತುಪತಿಗೆ ಜೋಡಿಯಾಗಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು. ಆದರೆ ಈಗ ಈ ಮದುವೆಗೆ ಶೂಟಿಂಗ್ ನಿಮಿತ್ತ ಮದುವೆಗೆ ಬರಲಾಗುತ್ತಿಲ್ಲ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣಗಣನೆ

    ನಯನತಾರಾ ಮತ್ತು ಸಮಂತಾ ನಡುವೆ ಒಳ್ಳೆಯ ಬಾಂಧವ್ಯವಿದೆ. ಸಾಕಷ್ಟು ವರ್ಷಗಳಿಂದ ಒಳ್ಳೆಯ ಗೆಳೆತನವಿದೆ.  ಸದ್ಯ `ಖುಷಿ’ ಚಿತ್ರದಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡಗೆ ನಾಯಕಿಯಾಗಿ ಸಮಂತಾ ನಟಿಸುತ್ತಿದ್ದಾರೆ. ಈ ಚಿತ್ರದ ಎರಡನೇ ಹಂತದ ಶೂಟಿಂಗ್ ನಡೆಯಲಿದೆ. ಹಾಗಾಗಿ ನಯನತಾರಾ ಮದುವೆಗೆ ಬರಲಾಗುತ್ತಿಲ್ಲ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಯಾರೆಲ್ಲಾ ತಾರೆಯರು ಸಾಕ್ಷಿಯಾಗಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

  • ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣಗಣನೆ

    ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣಗಣನೆ

    ಕಾಲಿವುಡ್‌ನಲ್ಲಿ ಸದ್ಯ ಸೌಂಡ್ ಮಾಡುತ್ತಿರೋ ಸುದ್ದಿ ಅಂದ್ರೆ ನಯನತಾರಾ ಮತ್ತು ವಿಘ್ನೇಶ್ ಮದುವೆ ವಿಚಾರ. ನಯನತಾರಾ ಮದುವೆ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಮದುವೆಯ ಆಮಂತ್ರಣ ಮತ್ತು ಸ್ಟಾರ್ ಜೋಡಿಯ ಮದುವೆ ಯಾರೆಲ್ಲಾ ಬರುತ್ತಾರೆ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.

    ಸೌತ್ ಸಿನಿರಂಗದಲ್ಲಿ ಸದ್ಯ ಹಸೆಮಣೆ ಏರುತ್ತಿರೋ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ಇದೀಗ ಒಂದೇ ದಿನ ಬಾಕಿ ಇದೆ. `ರೌಡಿ ಧಾನ್’ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿ, ಅಲ್ಲಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇದೀಗ 7 ವರ್ಷಗಳ ನಂತರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮ್ಮ ಮತ್ತು ನಯನತಾರಾ ಮದುವೆಯ ವಿಚಾರದ ಜತೆ ನಟ ಅಜಿತ್‌ಗೆ ನಿರ್ದೇಶನ ಮಾಡುತ್ತಿರುವುದಾಗಿ ಅಧಿಕೃತವಾಗಿ ವಿಘ್ನೇಶ್ ತಿಳಿಸಿದ್ದರು.

    ಇದೇ ಜೂನ್ 9ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ಜೂನ್ 7ರಂದು ಹಳದಿ ಶಾಸ್ತ್ರ ನೆರವೇರಿದ್ದು, ಜೂನ್ 8ರಂದು ಮೆಹೆಂದಿ ಶಾಸ್ತ್ರ ನಡೆಯುತ್ತಿದೆ. ಜೂನ್ 9ರಂದು ಮಹಾಬಲಿಪುರಂನ ಶೆರಾಟನ್ ಗ್ರ್ಯಾಂಡ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯ ಬಳಿಕ ಚೆನ್ನೈನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಮತ್ತು ಮಾಧ್ಯಮ ಮಿತ್ರರಿಗೆ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಇದನ್ನೂ ಓದಿ:ಉಪೇಂದ್ರ- ಸುದೀಪ್ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್

    ನಯನತಾರಾ ಮದುವೆಗೆ ಸಿಎಂ ಸ್ಟಾಲಿನ್, ರಜನಿಕಾಂತ್, ಅಬಿರುದ್ಧ, ಸಮಂತಾ, ಕಮಲ್ ಹಾಸನ್, ಚಿರಂಜೀವಿ, ಸೂರ್ಯ, ಜ್ಯೋತಿ, ಕಾತೀ, ವಿಜಯ್ ಸೇತುಪತಿ, ಹೀಗೆ ಸಾಕಷ್ಟು ಸೆಲೆಬ್ರಿಟಿ ಸ್ನೇಹಿತರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಇನ್ನು ನಯನತಾರಾ ಮದುವೆ ಆಮಂತ್ರಣ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇನ್ನು ನೆಚ್ಚಿನ ಜೋಡಿಯ ಮದುವೆಯನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

  • ನಯನತಾರಾ ಮದುವೆಗೆ ಬರಲಿದ್ದಾರೆ ಸಿಎಂ ಸ್ಟಾಲಿನ್

    ನಯನತಾರಾ ಮದುವೆಗೆ ಬರಲಿದ್ದಾರೆ ಸಿಎಂ ಸ್ಟಾಲಿನ್

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ದಿನಗಣನೆ ಶುರುವಾಗಿದ್ದು, ಯಾರಿಗೆಲ್ಲ ನಯನಾತಾರಾ ಮದುವೆಗೆ ಆಮಂತ್ರಣವಿದೆ ಯಾರೆಲ್ಲ ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎಂಬುದೇ ವಿಶೇಷ.

    ಕಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾಗಿರೋ ನಯನತಾರಾ ಮತ್ತು ವಿಘ್ನೇಶ್ ಶಿವನ್ ೭ ವರ್ಷಗಳ ಡೇಟಿಂಗ್ ನಂತರ ಈಗ ಗುರು ಹಿರಿಯರ ಸಮ್ಮುಖದಲ್ಲಿ ಜೂನ್ 9ರಂದು ತಿರುಪತಿ ಸನ್ನಿಧಿಯಲ್ಲಿ ಹಸೆಮನೆ ಏರಲು ಸಜ್ಜಾಗಿದ್ದಾರೆ. ಆಪ್ತರಿಗೆ ಈಗಾಗಲೇ ಆಹ್ವಾನಿಸುವುದರಲ್ಲಿ ಬ್ಯುಸಿಯಿರೋ ಈ ಜೋಡಿ ಈಗ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರಿಗೂ ಮದುವೆಗೆ ಆಮಂತ್ರಣ ನೀಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

     

    View this post on Instagram

     

    A post shared by Nayanthara Team (@nayantharateam)

    ಇನ್ನು ನಯನತಾರಾ ಅದ್ದೂರಿ ಮದುವೆಯಲ್ಲಿ ಕಮಲ್ ಹಾಸನ್, ರಜನೀಕಾಂತ್ ಸಮಂತಾ, ವಿಜಯ್ ಸೇತುಪತಿ, ಅನುಷ್ಕಾ ಶೆಟ್ಟಿ, ದಳಪತಿ ವಿಜಯ್ ಸೇರಿದಂತೆ ಸಾಕಷ್ಟು ಗಣ್ಯರಿಗೆ ಆಮಂತ್ರಣ ನೀಡಿಲಾಗಿದೆ. ಇನ್ನು ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿದೆ. ಮದುವೆ ಪ್ರಸಾರದ ಹಕ್ಕನ್ನು ಓಟಿಟಿ ನೀಡಲಾಗಿದೆ ಎಂನ ಮಾಹಿತಿ ಹೊರಬಿದ್ದಿದೆ. ಇನ್ನು ಮದುವೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ನೆಚ್ಚಿನ ಜೋಡಿಯ ಮದುವೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  • ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್

    ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್

    ಪ್ರಸ್ತುತ ಟಾಲಿವುಡ್‌ನಲ್ಲಿ ವಿಘ್ನೇಶ್ ಶಿವನ್ ಮತ್ತು ನಯನತಾರಾ ಹಾಟ್ ಟಾಪಿಕ್ ಆಗಿದ್ದು, ಈ ಜೋಡಿ ತಮ್ಮದೇ ಲೋಕದಲ್ಲಿ ಖುಷ್ ಆಗಿ ಇದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಈ ಜೋಡಿ ತಮ್ಮ ಅಪ್ಡೇಟ್ ಬಗ್ಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈಗ ವಿಘ್ನೇಶ್ ವಿಶೇಷ ವೀಡಿಯೋ ಶೇರ್ ಮಾಡಿದ್ದು, ಅಭಿಮಾನಿಗಳು ನೋಡಿ ಖುಷ್ ಆಗಿದ್ದಾರೆ. ವೀಡಿಯೋ ಮೂಲಕ ನಯನತಾರಾಗೆ ಏನು ಮಾಡಿದರೆ ನನಗೆ ಖುಷಿ ಸಿಗುತ್ತೆ ಎಂದು ಬರೆದುಕೊಂಡಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ ವಿಘ್ನೇಶ್, ಇದು ಚೆನ್ನಾಗಿ ತಿನ್ನುವ ಸಮಯವಾಗಿದೆ. ನನಗೆ ನಯನತಾರಾಗೆ ಲೋಕಲ್ ಫುಡ್ ತಿನ್ನಿಸುವುದು ಎಂದರೆ ನನಗೆ ತುಂಬಾ ಇಷ್ಟ. ಅದರಲ್ಲಿಯೂ ನನ್ನ ನೆಚ್ಚಿನ ರೆಸ್ಟೋರೆಂಟ್‌ನಿಂದ ಸೀ ಫುಡ್ ತಿನ್ನಿಸುವುದು ಎಂದರೆ ನನಗೆ ಇಷ್ಟ. ನಾವು ತಿನ್ನುವುದನ್ನು ಆನಂದಿಸುವ ಏಕೈಕ ಸ್ಥಳ, ರುಚಿಕರವಾದ ಆಹಾರ ಮತ್ತು ಅದ್ಭುತ ಜನರೊಂದಿಗೆ ಈ ಉತ್ತಮ ಮನೆಯಲ್ಲಿ ನಾನು ಸಮಯ ಕಳೆಯುತ್ತಿದ್ದೇನೆ ಎಂದು ಬರೆದು ವಿಶೇಷ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಪವರ್ ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಉಡುಪಿಯ ಅಕ್ಷತಾ 

     

    View this post on Instagram

     

    A post shared by Vignesh Shivan (@wikkiofficial)

    ಈ ವೀಡಿಯೋದಲ್ಲಿ ನಯನತಾರಾಗೆ ವಿಘ್ನೇಶ್ ಊಟ ತಿನ್ನಿಸುವ ವೇಳೆ ಆಕೆ ನಗುತ್ತ ನಾಚಿಕೊಳ್ಳುವುದು ಉತ್ತಮವಾದ ಭಾಗವಾಗಿದೆ. ವೀಡಿಯೋ ನೋಡಿದ ಅಭಿಮಾನಿಗಳು ಸೂಪರ್ ಜೋಡಿ, ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ನಯನತಾರಾ ನಟನೆಯ ವಿಘ್ನೇಶ್ ನಿರ್ದೇಶನದ ‘ಕಾತುವಕುಲಾ ರೆಂಡು ಕಾದಲ್’ ಸಿನಿಮಾ ರಿಲೀಸ್ ಆಗಿದ್ದು, ಇವರ ಪ್ರಯತ್ನಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನಂತರ ಈ ಜೋಡಿ ಜೂನ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

  • ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ತಿಂಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಖ್ಯಾತ ನಟಿ ನಯನತಾರಾ ಕೊನೆಗೂ ಮದುವೆ ಆಗುತ್ತಿದ್ದಾರೆ. ಅನೇಕ ದಿನಗಳಿಂದ ಈ ಜೋಡಿಯ ವಿವಾಹದ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದ್ದವು. ಮೂರ್ನಾಲ್ಕು ಬಾರಿ ಮದುವೆ ದಿನಾಂಕ ಕೂಡ ಬಹಿರಂಗವಾಗಿತ್ತು. ಆದರೆ, ಅದೆಲ್ಲವೂ ಸುಳ್ಳಾಗಿತ್ತು. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಇದೀಗ ಮತ್ತೊಂದು ದಿನಾಂಕ ನಿಗದಿಯಾಗಿದ್ದು, ಜೂನ್ 9 ಕ್ಕೆ ಈ ಜೋಡಿ ಹಸೆಮಣೆ ಏರಲಿದೆ ಎನ್ನುವುದು ಅವರ ಆಪ್ತರು ಖಚಿತ ಪಡಿಸಿರುವ ಮಾಹಿತಿ. ವಿಘ್ನೇಶ್ ಶಿವನ್ ಕುಟುಂಬ ಕೂಡ ತಿರುಪತಿಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಖಚಿತ ಪಡಿಸಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ವಿಘ್ನೇಶ್ ಶಿವನ್ ಮತ್ತು ನಯನತಾರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿತ್ತು. ದೇಶ ವಿದೇಶಗಳ ಸುತ್ತಾಟ, ದೇವಸ್ಥಾನಗಳಿಗೆ ಭೇಟಿ. ಖಾಸಗಿ ಸಮಾರಂಭದಲ್ಲಿ ಭಾಗಿಯಾಗಲು ಇಬ್ಬರೂ ಒಟ್ಟಾಗಿಯೇ ಹೋಗುತ್ತಿದ್ದರು. ಹಾಗಾಗಿ ಈ ಜೋಡಿ ಮುಂದೊಂದು ದಿನ ಮದುವೆಯಾಗಲಿದೆ ಎನ್ನುವ ಸುದ್ದಿಯೂ ಇತ್ತು. ಇದೀಗ ಅದನ್ನು ನಿಜವಾಗಿಸಿದ್ದಾರೆ ನಯನತಾರಾ. ಇದನ್ನೂ ಓದಿ : ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ನಯನಾ ತಾರಾ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ನ ಹೊಸ ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿದೆ.  ಈ ಸಿನಿಮಾದ ನಿರ್ದೇಶನವನ್ನು ವಿಘ್ನೇಶ್ ಶಿವನ್ ಅವರೇ ಮಾಡಿದ್ದರು. ನಿರ್ಮಾಪಕರು ಕೂಡ  ಇವರೇ ಆಗಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ. ಇದೇ ಖುಷಿಯಲ್ಲೇ ಮೊನ್ನೆಯಷ್ಟೇ ತಿರುಪತಿಗೆ ನಯನಾ ತಾರಾ ಮತ್ತು ವಿಘ್ನೇಶ್ ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಮದುವೆ ದಿನಾಂಕವನ್ನು ನಿಗದಿ ಮಾಡಿಸಿದ್ದಾರಂತೆ.

  • ಮತ್ತೆ ತುಂಡುಡುಗೆ ತೊಟ್ಟು ಟ್ರೋಲ್ ಆದ ಸಮಂತಾ

    ಮತ್ತೆ ತುಂಡುಡುಗೆ ತೊಟ್ಟು ಟ್ರೋಲ್ ಆದ ಸಮಂತಾ

    ಪುಷ್ಪಾ ಸಿನಿಮಾದ ‘ಹೂಂ ಅಂತೀಮಾ ಮಾವ’ ಹಾಡಿನ ನಂತರ ಸಮಂತಾ ಮೇಲೆ ಕೆಲ ಅಭಿಮಾನಿಗಳು ನಿರಂತರ ಕೆಂಡಕಾರುತ್ತಿದ್ದಾರೆ. ಅವರು ಹಾಗೆ ಮಾಡುವುದಕ್ಕೆ ಕಾರಣವೂ ಇದೆ. ನಟ ನಾಗಚೈತನ್ಯ ಅವರಿಂದ ಸಮಂತಾ ದೂರಾದ ಮೇಲೆ ನಾನಾ ರೀತಿಯ ಅವಮಾನಕ್ಕೆ ತುತ್ತಾಗುತ್ತಿದ್ದಾರೆ. ಅವೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ ಸಮಂತಾ. ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಹೂಂ ಅಂತೀಯಾ ಮಾವ ಹಾಡು ಬಂದ ನಂತರ ಇಂಥದ್ದೊಂದು ಹಾಡಿನಲ್ಲಿ ಕಾಣಿಸಿಕೊಳ್ಳಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದರು. ದುಡ್ಡಿಗಾಗಿ ಸಮಂತಾ ಏನು ಬೇಕಾದರೂ ಮಾಡಲು ರೆಡಿ ಎನ್ನುವಲ್ಲಿಗೆ ಕಾಮೆಂಟ್ ಗಳು ಹರಿದಾಡಿದವು. ಅವೆಲ್ಲವಕ್ಕೂ ಡೋಂಟ್ ಕೇರ್ ಅಂದ ಸಮಂತಾ ಇದೀಗ ಮತ್ತೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ಹಾಡಿನ ಗ್ಲಿಂಪ್ಸ್ ಇದೀಗ ರಿಲೀಸ್ ಆಗಿದೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ಸದ್ಯ ನಯನತಾರಾ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ನಲ್ಲಿ ‘ಕಾದು ವಾಕುಲ ರೆಂಡು ಕಾದಲ್’ ಹೆಸರಿನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ. ಬಹುತೇಕ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಈ ಸಿನಿಮಾಗೆ ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ‘ಟು ಟು ಟು..’ ಹಾಡಿಗೆ ಸಮಂತಾ ನೃತ್ಯ ಮಾಡಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಈ ಹಾಡಿನಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿರುವುದಕ್ಕೆ ಬಲವಾದ ಕಾರಣವಿದೆ. ಸಮಂತಾ ಮತ್ತು ನಯನತಾರಾ ಕ್ಲೋಸ್ ಫ್ರೆಂಡ್ಸ್. ಕಷ್ಟದ ಪ್ರತಿಕ್ಷಣದಲ್ಲೂ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡಿದ್ದಾರೆ. ನೈತಿಕವಾಗಿ ಬೆಂಬಲ  ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ ನಯನತಾರಾ ನಟನೆಯ ಈ ಸಿನಿಮಾದ ಹಾಡಿಗೆ ಸಮಂತಾ ಕುಣಿದಿದ್ದಾರೆ.

    ಕಾಡು ವಾಕುಲ ರೆಂಡು ಕಾದಲ್ ಸಿನಿಮಾದ ಪ್ರಮುಖ ಘಟ್ಟದಲ್ಲಿ ಬರುವ ‘ಟು ಟು ಟು’ ಗೀತೆಯಲ್ಲಿ ಸಮಂತಾ ಗುಲಾಬಿ ಬಣ್ಣದ ಶಾರ್ಟ್ ಡ್ರೆಸ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದ್ದು, ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಹಾಡಿನಲ್ಲಿದ್ದಾರೆ.

  • ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ

    ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ

    ಕೆಲ ದಿನಗಳಿಂದ ತಮಿಳಿನ ಖ್ಯಾತ ನಟಿ ನಯನತಾರಾ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯಿತ್ತು. ಅಲ್ಲದೇ, ಅವರು ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗಾಗಲೇ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ನಯನತಾರಾ ಸಹಜೀವನ ನಡೆಸುತ್ತಿದ್ದು, ಅವರಿಬ್ಬರೂ ಸದ್ಯದಲ್ಲೇ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲಿದ್ದಾರೆ ಎಂದು ಬಹುತೇಕ ಮಾಧ್ಯಮಗಳು ಸುದ್ದಿ ಮಾಡಿದ್ದವು. ಕೊನೆಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ವರ್ಷಗಳ ನಂತರ ನಯನತಾರಾ ಮೌನ ಮುರಿದಿದ್ದಾರೆ.

    ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಯನತಾರಾ ಒಟ್ಟಿಗೆ ಇರುವ ಹಲವು ಫೋಟೋಗಳು  ಲೀಕ್ ಆದರೂ, ಅವರಿಬ್ಬರೂ ಒಂದೇ ಮನೆಯಲ್ಲೇ ವಾಸ ಮಾಡುತ್ತಿದ್ದಾರೆಂಬ ವಿಷಯ ಹೊರ ಬಿದ್ದರೂ ಈ ಕುರಿತು ಇಬ್ಬರೂ ಒಂದೇ ಒಂದು ಮಾತನ್ನೂ ಹೇಳಿರಲಿಲ್ಲ. ಮೊದಲ ಬಾರಿಗೆ ನಯನತಾರಾ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:  ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

    “ನಾನು ಕದ್ದುಮುಚ್ಚಿ ಮದುವೆ ಆಗಿಲ್ಲ. ಅಸಲಿಯಾಗಿ ನನಗೆ ಮದುವೆಯೇ ಆಗಿಲ್ಲ. ಮದುವೆ ಆಗದೇ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಹಾಗಾಗಿ ಕೇಳಿ ಬರುತ್ತಿರುವ ಎಲ್ಲ ಸುದ್ದಿಗಳು ಸುಳ್ಳು’ ಎಂದು ಅವರು ಹೇಳಿದ್ದಾರೆ. ಜತೆಗೆ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ನಯನತಾರಾ ಏನೇ ಹೇಳಿದರೂ ಅವರ ಆಪ್ತರು ಮಾತ್ರ ಅವರ ಮಾತನ್ನು ಒಪ್ಪುತ್ತಿಲ್ಲ. ಹಲವು ತಿಂಗಳಿಂದ ನಿರ್ದೇಶಕ ವಿಘ್ನೇಶ್ ಜತೆ ಒಂದೇ ಮನೆಯಲ್ಲೇ ನಯನತಾರಾ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ದೇವಸ್ಥಾನಗಳಿಗೆ ಒಟ್ಟಿಗೆ ಹೋಗಿದ್ದಾರೆ. ಖಾಸಗಿತನ ಕಳೆಯುವುದಕ್ಕಾಗಿ ಹಲವು ರೆಸಾರ್ಟ್ ಗಳಲ್ಲೂ ಈ ಜೋಡಿ ಕಾಣಿಸಿಕೊಂಡಿದೆ. ಹೀಗಾಗಿ ಸಹಜವಾಗಿಯೇ ಮದುವೆ ವಿಷಯ ಪ್ರಸ್ತಾಪವಾಗಿದೆ ಎನ್ನುತ್ತಾರೆ.

  • ರೌಡಿಗಳಿಗೆ ಉತ್ತೇಜನ ಕಾರಣಕ್ಕೆ ನಯನತಾರಾ ಮೇಲೆ ದೂರು ದಾಖಲು

    ರೌಡಿಗಳಿಗೆ ಉತ್ತೇಜನ ಕಾರಣಕ್ಕೆ ನಯನತಾರಾ ಮೇಲೆ ದೂರು ದಾಖಲು

    ಮಿಳಿನ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಪ್ರಣಯದ ಹಕ್ಕಿಗಳಂತೆ ಎಲ್ಲಿಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಯ ಮೇಲೆ ದೂರು ದಾಖಲಾಗಿದ್ದು, ದೂರಿನಲ್ಲಿ ಇವರು ರೌಡಿಗಳಿಗೆ ಉತ್ತೇಜಿಸುತ್ತಾರೆ ಎಂದು ಬರೆಯಲಾಗಿದೆ.

    ನಯನತಾರಾ ಮತ್ತು ವಿಘ್ವೇಶ್ ಶಿವನ್ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯಿದೆ. ಇಬ್ಬರೂ ಈಗಾಗಲೇ ಎರಡು ವರ್ಷದಿಂದ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಪ್ರೀತಿಯ ನೆನಪಾಗಾಗಿ ಅವರು ‘ರೌಡಿ ಪಿಕ್ಚರ್ಸ್’ ಸಂಸ್ಥೆಯನ್ನು ಶುರು ಮಾಡಿದ್ದರು. ಈ ಸಂಸ್ಥೆಯಿಂದ ಭೂಗತ ಜಗತ್ತಿನ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ದೂರು ದಾರರು ಆರೋಪ ಮಾಡಿದ್ದಾರೆ. ಇವರ ಚಿತ್ರಗಳಿಂದಾಗಿ ರೌಡಿಗಳಿಗೆ ಮತ್ತಷ್ಟು ಉತ್ತೇಜನ ಸಿಗುತ್ತಿದೆ ಎಂದೂ ದೂರಲಾಗಿದೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ರೌಡಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಂತಹ ಬಹುತೇಕ ಸಿನಿಮಾಗಳು ರೌಡಿಸಂ ಹಿನ್ನೆಲೆಯ ಕಥೆಯನ್ನೇ ಒಳಗೊಂಡಿವೆ. ಅಲ್ಲದೇ ವಿಘ್ನೇಶ್ ಶಿವನ್ ನಿರ್ದೇಶನದ, ವಿಜಯ್ ಸೇತುಪತಿ ನಟನೆಯ ‘ರೌಡಿಧಂ’ ಸಿನಿಮಾ ಕೂಡ ಅಂಥದ್ದೇ ಕಥೆಯನ್ನು ಹೊಂದಿತ್ತು. ಈ ಸಿನಿಮಾದಲ್ಲಿ ನಯನತಾರಾ ಕೂಡ ನಟಿಸಿದ್ದರು. ಇಲ್ಲಿಯೇ ನಯನತಾರಾಗೂ ಮತ್ತು ವಿಘ್ನೇಶ್ ಗೂ ಪ್ರೇಮಾಂಕುರವಾಗಿತ್ತು.

  • ತಾವು ನಟಿಸುತ್ತಿರುವ ನಿರ್ದೇಶಕನನ್ನೇ ಮದುವೆ ಆಗಲಿದ್ದಾರಂತೆ ನಯನತಾರಾ

    ತಾವು ನಟಿಸುತ್ತಿರುವ ನಿರ್ದೇಶಕನನ್ನೇ ಮದುವೆ ಆಗಲಿದ್ದಾರಂತೆ ನಯನತಾರಾ

    ದುವೆ ವಿಷಯದಲ್ಲಿ ಅತೀ ಹೆಚ್ಚು ಸುದ್ದಿಗೆ ಸಿಕ್ಕ ನಟಿ ತಮಿಳಿನ ಸ್ಟಾರ್ ನಾಯಕಿ ನಯನತಾರಾ. ಪ್ರೀತಿಯ ವಿಷಯದಲ್ಲಿ ನಯನಾ ನತದೃಷ್ಟೆ. ಲವ್ ಫೆಲ್ಯುವರ್ ಅನ್ನುವುದು ಇವರ ಬಾಳಿನಲ್ಲಿ ಸಿನಿಮಾದಂತೆಯೇ ಬದಲಾಗುತ್ತಾ ಹೋದವು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮತ್ತೆ ನಯನತಾರಾ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ವಿಷಯ ಗಾಸಿಪ್ ರೀತಿಯಲ್ಲಿ ಹರಿದಾಡುತ್ತಲೇ ಇರುತ್ತದೆ. ಈ ಬಾರಿ ಅದು ಸುಳ್ಳಾಗಲಿದೆ ಎನ್ನುವ ಮಾಹಿತಿ ಇದೆ.

    ನಯನತಾರಾ ಮತ್ತು ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರೂ ಸಹಜೀವನ ನಡೆಸುತ್ತಿದ್ದಾರೆ ಎನ್ನುತ್ತಿದೆ ಟಾಲಿವುಡ್. ಮೂರ್ನಾಲ್ಕು ವರ್ಷಗಳಿಂದ ಅವರು ಒಟ್ಟಿಗೆ ಇದ್ದು, ಇದೀಗ ಮದುವೆ ಮಾಡಿಕೊಳ್ಳಲು ಸಿದ್ಧತೆ ಕೂಡ ನಡೆಸಿದ್ದಾರಂತೆ. ಸದ್ಯ ವಿಘ್ನೇಶ್ ಶಿವನ್ ನಿರ್ದೇಶನದ ‘ಕಾತು ವಾಕ್ಲೆ ರಾಂಡು’ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ನಂತರ ಇಬ್ಬರೂ ಹಸೆಮಣೆ ಏರಲಿದ್ದಾರಂತೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಇಬ್ಬರೂ ಅನೇಕ ಬಾರಿ ಹೋಟೆಲ್, ದೇವಸ್ಥಾನ ಮುಂತಾದ ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ಅಲ್ಲದೇ, ತಾವು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎನ್ನುವ ಮಾಹಿತಿಯನ್ನೂ ಹಲವರಿಗೆ ನಯನತಾರಾ ಹೇಳಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಆಗಿತ್ತು. ಮದುವೆ ವಿಷಯಕ್ಕೆ ಆ ಮಾತುಗಳೇ ಪುಷ್ಠಿ ನೀಡುತ್ತಿವೆ.

    ನಯನತಾರಾ ಪ್ರತಿಭಾವಂತ ನಟಿ. ಕನ್ನಡದಲ್ಲಿ ಅವರು ಉಪೇಂದ್ರ ಜತೆ ನಟಿಸಿದ್ದಾರೆ. ನಾಯಕರಷ್ಟೇ ನಯನತಾರಾ ಅವರಿಗೆ ಸಿನಿಮಾ ರಂಗದಲ್ಲಿ ವರ್ಚಸ್ ಇದೆ. ಹೀಗಾಗಿ ಆಗಾಗ್ಗೆ ಇವರ ಮದುವೆಯ ವಿಚಾರ ಮುನ್ನೆಲೆಗೆ ಬರುತ್ತದೆ. ಅಂದುಕೊಂಡಂತೆ ನಡೆದರೆ, ಇದೇ ವರ್ಷವೇ ಈ ಜೋಡಿ ಸಪ್ತಪದಿ ತುಳಿಯಲಿದೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಸದ್ಯ ನಯನತಾರಾ ‘ ಕಾತು ವಾಕ್ಲೆ ರಾಂಡು ಕಾತಲ್’ ಚಿತ್ರ ಬಿಡುಗಡೆ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ಸ್ವತಃ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ. ವಿಜಯ್ ಸೇತುಪತಿ ಹಾಗೂ ಸಮಂತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.