Tag: Vignesh Sivan

  • ಮದುವೆಯಾದ ಎರಡೇ ತಿಂಗಳಿಗೆ ನಯನತಾರಾ ಬದುಕಿನಲ್ಲಿ ಎರಡನೇ ಯಡವಟ್ಟು

    ಮದುವೆಯಾದ ಎರಡೇ ತಿಂಗಳಿಗೆ ನಯನತಾರಾ ಬದುಕಿನಲ್ಲಿ ಎರಡನೇ ಯಡವಟ್ಟು

    ಮಿಳಿನ ಸ್ಟಾರ್ ದಂಪತಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾದ ಮರುದಿನವೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಭಕ್ತರ ಕಂಗೆಣ್ಣಿಗೆ ಗುರಿಯಾಗಿದ್ದರು. ದೇವಸ್ಥಾನದ ಆವರಣದ ಒಳಗೆ ನಯನತಾರಾ ಚಪ್ಪಲಿ ಹಾಕಿಕೊಂಡು ಹೋದರು ಎನ್ನುವ ಕಾರಣಕ್ಕಾಗಿ ವಿವಾದ ಮಾಡಿಕೊಂಡಿದ್ದರು. ತಿರುಪತಿ ಟ್ರಸ್ಟ್ ಮತ್ತು ತಿಮ್ಮಪ್ಪನ ಭಕ್ತರಿಗೆ ವಿಘ್ನೇಶ್ ಕ್ಷಮೆ ಕೇಳಿದರೂ, ದಂಪತಿಗೆ ನೋಟಿಸ್ ನೀಡುವ ಮೂಲಕ ತಿರುಪತಿ ಆಡಳಿತ ಮಂಡಳಿ ಬಿಸಿ ಮುಟ್ಟಿಸಿತು.

    ಇದೀಗ ಮತ್ತೊಂದು ಇಕ್ಕಟ್ಟಿಗೆ ಸಿಲುಕಿದ್ದಾರೆ ನಯನತಾರಾ ಮತ್ತು ವಿಘ್ನೇಶ್ ಶಿವನ್. ಈ ಯಡವಟ್ಟು ಕ್ಷಮೆ ಕೇಳುವ ಮೂಲಕ ಬಗೆಹರಿಯುವಂಥದ್ದು ಅಲ್ಲ ಎನ್ನುವುದು ಸ್ವತಃ ಅವರಿಗೂ ಗೊತ್ತಿರುವ ಸಂಗತಿಯಾಗಿದೆ. ನಯನತಾರಾ ತಮ್ಮ ಮದುವೆಯ ಫೋಟೋ ಮತ್ತು ವಿಡಿಯೋ ಹಕ್ಕುಗಳನ್ನು ಓಟಿಟಿಗೆ ಸೇಲ್ ಮಾಡಿದ್ದರು. ಅದರ ಒಪ್ಪಂದದ ಪ್ರಕಾರ ಮದುವೆಯ ಒಂದೇ ಒಂದು ಫೋಟೋ ಶೇರ್ ಮಾಡಲು ಓಟಿಟಿ ಸಂಸ್ಥೆಗೆ ಅನುಮತಿ ಕೇಳಬೇಕಿತ್ತು. ಆದರೆ, ನಯನತಾರಾ ದಂಪತಿ ಹಾಗೇ ಮಾಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್

    ಮದುವೆಯನ್ನು ಅದ್ಧೂರಿಯಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಿಕೊಟ್ಟಿತ್ತಂತೆ ಓಟಿಟಿ ಸಂಸ್ಥೆ. ಅದಕ್ಕಾಗಿ ಒಬ್ಬ ನಿರ್ದೇಶಕನನ್ನೂ ಅದು ಅಪಾಯಿಂಟ್ ಮಾಡಿತ್ತು. ಸುಸೂತ್ರವಾಗಿ ಮದುವೆಯ ಚಿತ್ರೀಕರಣ ಕೂಡ ಮುಗಿದಿತ್ತು. ಆದರೆ, ನಯನತಾರಾ ಒಂದಷ್ಟು ಫೋಟೋಗಳನ್ನು ಮದುವೆಯ ದಿನ ಮತ್ತು ಇನ್ನೂ ಕೆಲವು ಫೋಟೋಗಳನ್ನು ಮದುವೆಯಾಗಿ ಒಂದು ತಿಂಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಹಾಗಾಗಿ ಅನುಮತಿಯ ತಿಕ್ಕಾಟ ಶುರುವಾಗಿದೆ.

    ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕರಾರು ಪತ್ರಕ್ಕೆ ಸಹಿ ಮಾಡಿದ್ದರೂ ಇಂಥದ್ದೊಂದು ಪ್ರಮಾದ ಮಾಡಿದ್ದಕ್ಕಾಗಿ ಮದುವೆಯ ವಿಡಿಯೋ ಮತ್ತು ಫೋಟೋಗಳನ್ನು ತಾನು ಪ್ರಸಾರ ಮಾಡುವುದಿಲ್ಲ ಎಂದು ಓಟಿಟಿ ಸಂಸ್ಥೆ ಹೇಳಿದೆ ಎನ್ನಲಾಗುತ್ತಿದೆ. ಅಲ್ಲದೇ, ಅದಕ್ಕೆ ಖರ್ಚಾದ ಮೊತ್ತ ಮತ್ತು ನಯನತಾರಾ ಅವರಿಗೆ ನೀಡಿರುವ ಹಣವನ್ನು ವಾಪಸ್ಸು ಮಾಡುವಂತೆ ಸಂಸ್ಥೆಯು ತಾಕೀತು ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಸಂಸ್ಥೆಯಾಗಲಿ ಅಥವಾ ನಯನತಾರಾ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮೊದಲ ತಿಂಗಳ ವಿವಾಹ ಸಂಭ್ರಮ ಆಚರಿಸಿಕೊಂಡ ನಯನತಾರಾ ಮತ್ತು ವಿಘ್ನೇಶ್ ಶಿವನ್

    ಮೊದಲ ತಿಂಗಳ ವಿವಾಹ ಸಂಭ್ರಮ ಆಚರಿಸಿಕೊಂಡ ನಯನತಾರಾ ಮತ್ತು ವಿಘ್ನೇಶ್ ಶಿವನ್

    ಮಿಳು ಸಿನಿಮಾ ರಂಗ ಖ್ಯಾತ ಜೋಡಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾಗಿ ಇಂದಿಗೆ ಒಂದು ತಿಂಗಳ ಕಳೆಯಿತು. ಹಾಗಾಗಿ ನಯನತಾರಾ ಆ ದಿನವನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ರಜನಿಕಾಂತ್ ಮತ್ತು ಶಾರುಖ್ ಖಾನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ನಯನತಾರಾ ಮೊದಲ ತಿಂಗಳ ವಿವಾಹ ಸಂಭ್ರಮವನ್ನು ನೆನಪಿಸಿಕೊಂಡಿದ್ದಾರೆ.

    ನಯನತಾರಾ ಮತ್ತು ವಿಘೇಶ್ ಶಿವನ್ ಮದುವೆಗೆ ದಕ್ಷಿಣದ ಹಲವು ತಾರೆಯರು ಮತ್ತು ಬಾಲಿವುಡ್ ನ ಶಾರುಖ್ ಖಾನ್ ಹಲವು ಗಣ್ಯರು ಆಗಮಿಸಿದ್ದರು. ಅದರಲ್ಲೂ ನಯನತಾರಾ ತುಂಬಾ ಇಷ್ಟ ಪಡುವಂತಹ ರಜನಿಕಾಂತ್ ಮದುವೆಗೆ ಬಂದಿದ್ದು, ಅವರಿಗೆ ಎಲ್ಲಿಲ್ಲದ ಸಂಭ್ರಮಕ್ಕೆ ಕಾರಣವಾಗಿತ್ತು. ಹಾಗಾಗಿ ಈ ಫೋಟೋವನ್ನೇ ಪ್ರಮುಖವಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ನಯನತಾರಾ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆಗೂ ಮುನ್ನ ಜೊತೆಯಲ್ಲೇ ವಾಸವಿದ್ದರು ಎನ್ನಲಾಗುತ್ತಿದೆ. ಹಾಗಾಗಿ ಈ ಜೋಡಿಯ ಮದುವೆ ಯಾವಾಗ ನಡೆಯಲಿದೆ ಎನ್ನುವ ಪ್ರಶ್ನೆ ಸದಾ ಕೇಳಿ ಬರುತ್ತಿತ್ತು. ಅದಕ್ಕೆ ಉತ್ತರ ಎನ್ನುವಂತೆ ಜೂನ್ 09ರಂದು ಈ ಜೋಡಿ ಚೆನ್ನೈನಲ್ಲಿ ಸಪ್ತಪದಿ ತುಳಿದಿದ್ದರು. ಈಗ  ಆ ದಿನವನ್ನು ನೆನಪಿಸಿಕೊಂಡಿದೆ ಜೋಡಿ.

    Live Tv
    [brid partner=56869869 player=32851 video=960834 autoplay=true]

  • ಸೂಪರ್ ಸ್ಟಾರ್ ರಜನಿಕಾಂತ್ ಮನೆ ಪಕ್ಕದಲ್ಲೇ ನಯನತಾರಾ ಮನೆ ಖರೀದಿ

    ಸೂಪರ್ ಸ್ಟಾರ್ ರಜನಿಕಾಂತ್ ಮನೆ ಪಕ್ಕದಲ್ಲೇ ನಯನತಾರಾ ಮನೆ ಖರೀದಿ

    ಯನತಾರಾ ಮದುವೆ ಆಗುತ್ತಿದ್ದಂತೆಯೇ ಅವರ ಬದುಕಿನಲ್ಲಿ ನಾನಾ ಸಂಭ್ರಮಗಳು ಒಂದುಗೂಡುತ್ತಿವೆ. ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಇದೀಗ ಮತ್ತೊಂದು ಮನೆಯನ್ನು ಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಆ ಮನೆಯ ಕಾರಣದಿಂದಾಗಿಯೇ ನಯನತಾರಾ ಸುದ್ದಿ ಆಗಿದ್ದಾರೆ. ಅಲ್ಲದೇ, ತಮ್ಮ ನೆಚ್ಚಿನ ನಟನ ಮನೆಯ ಪಕ್ಕದಲ್ಲೇ ಆ ಮನೆ ಇರುವುದರು ಅವರ ಸಂಭ್ರಮಕ್ಕೆ ಮತ್ತಷ್ಟು ಕಾರಣವಾಗಿದೆ.

    ರಜನಿಕಾಂತ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ನಯನತಾರಾ, ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಾಗ ಜೀವಮಾನ ಸಾಧನೆ ಅಂದುಕೊಂಡಿದ್ದರು. ರಜನಿಕಾಂತ್ ಅವರನ್ನು ದಿನವೂ ನೋಡಬೇಕು ಎಂದು ಇಷ್ಟಪಟ್ಟರು. ಇದೀಗ ಆ ಆಸೆಯನ್ನು ಅವರ ಮನೆಯ ಪಕ್ಕದಲ್ಲೇ ಮನೆಯನ್ನು ಖರೀದಿಸುವ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರಂತೆ ನಯನತಾರ. ಮದುವೆಯ ನಂತರ ಪತಿಯು ಅವರಿಗೆ ಕೊಡುತ್ತಿರುವ ದುಬಾರಿ ಗಿಫ್ಟ್ ಇದಾಗಿದೆಯಂತೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ರಜನಿಕಾಂತ್ ಮನೆಯ ಪಕ್ಕದಲ್ಲೇ ನಯನತಾರಾ ಮನೆಯನ್ನು ಖರೀದಿಸುತ್ತಿದ್ದಾರೆ ಎನ್ನುವುದು ತಮಿಳು ಸಿನಿಮಾ ರಂಗದಲ್ಲಿ ಸಖತ್ ಸುದ್ದಿ ಆಗಿದೆ. ಆ ಮನೆ ಯಾವುದು ಎನ್ನುವುದು ಇನ್ನೂ ನಿಕ್ಕಿ ಆಗದೇ ಹೋದರೂ, ಯಾವ ಮನೆಯನ್ನು ಅವರು ಖರೀದಿಸಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ಹಾಗಂತ ರಜನಿಕಾಂತ್ ಅವರ ಪಕ್ಕದ ಮನೆಯವರು ಮನೆ ಮಾರಾಟಕ್ಕೆ ಇಟ್ಟಿದ್ದಾರಾ ಎನ್ನುವ ಪ್ರಶ್ನೆ ಕೂಡ ಇದೀಗ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

    ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

    ಸಿಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇತ್ತೀಚೆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿರುವ ಲೇಡಿ ಸೂಪರ್ ಸ್ಟಾರ್ ನಯನತಾರಾ ಇದೀಗ ಪತಿ ವಿಘ್ನೇಶ್ ಶಿವನ್ ಮನೆಯಲ್ಲಿದ್ದಾರೆ. ಪತಿಯ ಮನೆಗೆ ಬಂದಿದ್ದೇನೆ ಎಂದು ಅವರು ಫೋಟೋವೊಂದನ್ನು ಶೇರ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮದುವೆಯಾದ ನಂತರ ಪತಿ ಮನೆಗೆ ಹೋಗುವುದು ಕಾಮನ್ ಆಗಿದ್ದರೂ, ಮದುವೆ ನಂತರದ ಸಂಪ್ರದಾಯವನ್ನು ಅವರು ಪಾಲಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಮದುವೆಯ ಮರುದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಈ ಜೋಡಿ, ಆನಂತರ ಮಾಧ್ಯಮಗಳ ಮುಂದೆ ಬಂದು, ಮದುವೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ, ತಿರುಪತಿಯಲ್ಲಿ ನಡೆದ ಘಟನೆಗೆ ಈಗಾಗಲೇ ಅವರು ಕ್ಷಮೆ ಕೂಡ ಕೇಳಿದ್ದಾರೆ. ತಿರುಪತಿ ಆಡಳಿತ ಮಂಡಳಿ ನೋಟಿಸ್ ಕಳುಹಿಸುವ ವಿಚಾರದ ಕುರಿತು ಮಾತನಾಡಿರುವ ವಿಘ್ನೇಶ್ ಶಿವನ್. ಆಗಲೇ ಕ್ಷಮೆ ಕೇಳಿದ್ದೇವೆ. ಇನ್ನೂ ನೋಟಿಸ್ ಬಂದಿಲ್ಲ. ಬಂದರೆ, ಆಡಳಿತ ಮಂಡಳಿ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

    ಸತತ ಆರೇಳು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್, ಒಟ್ಟೊಟ್ಟಿಗೆ ಓಡಾಡುತ್ತಿದ್ದರು. ಅಷ್ಟೂ ವರ್ಷಗಳ ಕಾಲ ಪ್ರೀತಿಯನ್ನು ಕಾಪಿಟ್ಟುಕೊಂಡು ಇದೀಗ ಸತಿಪತಿಗಳಾಗಿದ್ದಾರೆ. ಅದ್ಧೂರಿಯಾಗಿಯೇ ಮದುವೆ ಆಗಿದ್ದಾರೆ. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕ ತಾರೆಯರು ಈ ಜೋಡಿಯ ಮದುವೆಗೆ ಹಾಜರಿದ್ದು ಶುಭ ಹಾರೈಸಿದ್ದಾರೆ.

  • ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲ್ಲ: ಮದುವೆ ನಂತರ ನಯನತಾರಾ ನಿರ್ಧಾರ

    ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲ್ಲ: ಮದುವೆ ನಂತರ ನಯನತಾರಾ ನಿರ್ಧಾರ

    ಯನತಾರಾ ಮದುವೆಯಾಗಿ ಇನ್ನೂ ಒಂದು ವಾರ ಕೂಡ ಕಳೆದಿಲ್ಲ. ಮದುವೆಯ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ ಲೇಡಿ ಸೂಪರ್ ಸ್ಟಾರ್. ಮದುವೆಯ ನಂತರ ನಟನೆಗೆ ಸಂಬಂಧಿಸಿದಂತೆ ಅವರು ಕೆಲವು ನಿರ್ಧಾರಗಳನ್ನು ತಗೆದುಕೊಂಡಿದ್ದು, ಅದರಿಂದಾಗಿ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಆಗದೇ ಇರದು. ಅಲ್ಲದೇ, ಈ ನಿರ್ಧಾರ ತಗೆದುಕೊಂಡಿದ್ದು ಯಾಕೆ ಎಂದು ತಮಿಳು ಸಿನಿಮಾ ರಂಗ ತಲೆ ಕೆಡಿಸಿಕೊಂಡು ಕೂತಿದೆ.

    ಮದುವೆಯ ಮಾರನೇ ದಿನವೇ ಅವರು ತಿರುಪತಿ ದರ್ಶನಕ್ಕೆ ಹೋಗಿ ಎಡವಟ್ಟು ಮಾಡಿಕೊಂಡರು. ಚಪ್ಪಲಿ ಧರಿಸಿ ದೇವಸ್ಥಾನದ ಆವರಣದಲ್ಲಿ ಓಡಾಡಿದ್ದಕ್ಕಾಗಿ ತಿಮ್ಮಪ್ಪನ ಭಕ್ತರ ಕೋಪಕ್ಕೆ ಕಾರಣವಾದರು. ಅಲ್ಲದೇ, ದೇವಸ್ಥಾನದ ಅಧಿಕಾರಿಗಳಿ ನೋಟಿಸ್ ಗೆ ಅವರು ಉತ್ತರ ಕೊಡಬೇಕಾಗಿ ಬಂತು. ಇದರ ಬೆನ್ನಲ್ಲೇ ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಅದರಿಂದಾಗಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗದೇ ಇರದು. ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ನಯನತಾರಾ ಲೇಡಿ ಸೂಪರ್ ಸ್ಟಾರ್. ಪವರ್ ಫುಲ್ ಪಾತ್ರಗಳಿಗೂ ಸೈ, ರೊಮ್ಯಾಂಟಿಕ್ ದೃಶ್ಯಗಳಿಗೂ ಜೈ ಎನ್ನುತ್ತಿದ್ದರು. ಅದರಲ್ಲೂ ಇಂಟಿಮೇಟ್ ದೃಶ್ಯಗಳು ಇದ್ದಾಗ, ಆ ಪಾತ್ರದೊಳಗೆ ತಲ್ಲೀಣರಾಗುತ್ತಿದ್ದರು. ಇನ್ಮುಂದೆ ಅವರು ಈ ರೀತಿಯ ಪಾತ್ರಗಳಲ್ಲಿ ಮತ್ತು ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ. ಹಾಗಂತ ಅಲ್ಲಿನ ನಿರ್ಮಾಪಕರಿಗೆ ಸಂದೇಶ ಕಳುಹಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ಸುದ್ದಿ ಮಾಡಿವೆ. ಇದನ್ನು ಕೇಳಿದ ನಯನತಾರಾ ಅಭಿಮಾನಿಗಳಿಗೆ ಕೊಂಚ ನಿರಾಸೆಯೂ ಆಗಿದೆ ಎಂದೂ ಸುದ್ದಿಯಾಗಿದೆ.

  • ನಯನತಾರಾ ಒಂದಲ್ಲ, ಎರಡೆರಡು ಎಡವಟ್ಟು ತಿರುಪತಿ ದೇವಸ್ಥಾನದಿಂದ ಲೀಗಲ್ ನೋಟಿಸ್

    ನಯನತಾರಾ ಒಂದಲ್ಲ, ಎರಡೆರಡು ಎಡವಟ್ಟು ತಿರುಪತಿ ದೇವಸ್ಥಾನದಿಂದ ಲೀಗಲ್ ನೋಟಿಸ್

    ದುವೆಯಾಗಿ ಖುಷಿಯಿಂದ ಇರಬೇಕಾಗಿದ್ದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್, ತಾವು ಮಾಡಿದ ತಪ್ಪಿಂದಾಗಿ ಕಿರಿಕಿರಿ ಅನುಭವಿಸಬೇಕಾಗಿದೆ. ಮದುವೆಯಾದ ಮರುದಿನವೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಈ ಜೋಡಿ ಹೋಗಿತ್ತು. ಈ ವೇಳೆಯಲ್ಲಿ ಎರಡು ತಪ್ಪುಗಳನ್ನು ನಯನತಾರಾ ಮಾಡಿದ್ದಾರೆ. ಹಾಗಾಗಿ ನಯನತಾರಾ ಸಂಕಷ್ಟ ಎದುರಿಸಬೇಕಾಗಿದೆ. ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಆವರಣದಲ್ಲಿ ಓಡಾಡಿದಕ್ಕೆ ಈಗಾಗಲೇ ವಿಘ್ನೇಶ್ ಶಿವನ್ ಕ್ಷಮೆ ಕೇಳಿದ್ದರೂ, ಮತ್ತೊಂದು ತಪ್ಪಿಗಾಗಿ ಅವರು ಲೀಗಲ್ ನೋಟಿಸ್ ಗೆ ಉತ್ತರಿಸಬೇಕಾಗಿದೆ.

    ತಿರುಪತಿ ದೇವಸ್ಥಾನದಲ್ಲಿ ಆವರಣದಲ್ಲಿ ಖಾಸಗಿ ಕ್ಯಾಮೆರಾಗಳಿಗೆ ಅವಕಾಶವಿಲ್ಲವಂತೆ. ಆದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮೊಂದಿಗೆ ಖಾಸಗಿ ಕ್ಯಾಮೆರಾಮೆನ್ ಗಳನ್ನು ಕರೆದುಕೊಂಡು ಬಂದಿದ್ದರಂತೆ. ಅಲ್ಲದೇ, ಮಾತಾ ಬೀದಿಯಲ್ಲಿ ನಯನತಾರಾ ಚಪ್ಪಲಿ ಧರಿಸಿಕೊಂಡು ಓಡಾಡಿದ್ದಾರೆ. ಈ ಕಾರಣದಿಂದಾಗಿ ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ನ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್, ಈ ಕುರಿತು ಮಾತನಾಡಿದ್ದಾರೆ. ಎರಡು ಪ್ರಮುಖ ನಿಯಮಗಳನ್ನು ಅವರು ಉಲ್ಲಂಘಿಸಿದ್ದಕ್ಕಾಗಿ ಲೀಗ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಮೇಲೆ ಹಲ್ಲೆ ಆರೋಪ: ಜೈ ಜಗದೀಶ್ ಪ್ರಕರಣಕ್ಕೆ ಟ್ವಿಸ್ಟ್

    ವಿಘ್ನೇಶ್ ಶಿವನ್ ಮತ್ತು ನಯನತಾರಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣಕ್ಕೆ ಪ್ರವೇಶ ಮಾಡಿದರು. ಹಳದಿ ಬಣ್ಣದ ಸೀರೆಯಲ್ಲಿ ನಯನತಾರಾ ಕಂಗೊಳಿಸುತ್ತಿದ್ದರೆ, ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟಿದ್ದರು ವಿಘ್ನೇಶ್. ಆದರೆ, ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿತ್ತು.

    ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಚಪ್ಪಲಿ ಧರಿಸಿದ್ದರಂತೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಯನತಾರಾ ವಿರುದ್ಧ ಭಕ್ತರು ಮುಗಿಬಿದ್ದಿದ್ದರು. ವಿವಾದ ಸೃಷ್ಟಿ ಆಗುತ್ತಿದ್ದಂತೆಯೇ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ. ಆದರೆ ,ಇದೀಗ ನೋಟಿಸ್ ನೀಡಲು ಮುಂದಾಗಿದ್ದಾರೆ.

  • ಪತ್ನಿ ನಯನತಾರಾ ತಪ್ಪಿಗೆ ಪತಿ ವಿಘ್ನೇಶ್ ಶಿವನ್ ಕ್ಷಮೆಯಾಚನೆ

    ಪತ್ನಿ ನಯನತಾರಾ ತಪ್ಪಿಗೆ ಪತಿ ವಿಘ್ನೇಶ್ ಶಿವನ್ ಕ್ಷಮೆಯಾಚನೆ

    ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರ ಮದುವೆಯ ನಂತರ ತಾವು ಆರಾಧಿಸುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರೆಳಿದ್ದರು. ಆ ಸಮಯದಲ್ಲಿ ನಯನತಾರಾ ಎಡವಟ್ಟು ಮಾಡಿಕೊಂಡಿದ್ದರು. ಚಪ್ಪಲಿ ಧರಿಸಿಕೊಂಡು ನಯನತಾರಾ ದರ್ಶನಕ್ಕೆ ಆಗಮಿಸಿದ್ದರು ಎನ್ನುವುದಕ್ಕಾಗಿ ವಿವಾದವಾಗಿತ್ತು. ಅದಕ್ಕೀಗ ವಿಘ್ನೇಶ್ ಶಿವನ್ ಕ್ಷಮೆ ಕೇಳಿದ್ದಾರೆ. ಅರಿವಿಗೆ ಬಾರದೇ ಇರುವ ತಪ್ಪು ಅದಾಗಿದೆ ಎಂದು ಮಾತನಾಡಿದ್ದಾರೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ನಿನ್ನೆ ಪತಿ ವಿಘ್ನೇಶ್ ಶಿವನ್ ಜೊತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ನಯನತಾರಾ. ಈ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣಕ್ಕೆ ಪ್ರವೇಶ ಮಾಡಿದರು. ಹಳದಿ ಬಣ್ಣದ ಸೀರೆಯಲ್ಲಿ ನಯನತಾರಾ ಕಂಗೊಳಿಸುತ್ತಿದ್ದರೆ, ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟಿದ್ದರು ವಿಘ್ನೇಶ್. ಆದರೆ, ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿತ್ತು.

     

    ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಚಪ್ಪಲಿ ಧರಿಸಿದ್ದರಂತೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಯನತಾರಾ ವಿರುದ್ಧ ಭಕ್ತರು ಮುಗಿಬಿದ್ದಿದ್ದರು. ವಿವಾದ ಸೃಷ್ಟಿ ಆಗುತ್ತಿದ್ದಂತೆಯೇ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ.

  • ಹಿಂದೂ ಭಾವನೆಗಳಿಗೆ ಧಕ್ಕೆ ತಂದ್ರಾ ಲೇಡಿ ಸೂಪರ್ ಸ್ಟಾರ್ ನಯನತಾರಾ? ಮದುವೆ ಮರುದಿನ ಎಡವಟ್ಟು

    ಹಿಂದೂ ಭಾವನೆಗಳಿಗೆ ಧಕ್ಕೆ ತಂದ್ರಾ ಲೇಡಿ ಸೂಪರ್ ಸ್ಟಾರ್ ನಯನತಾರಾ? ಮದುವೆ ಮರುದಿನ ಎಡವಟ್ಟು

    ಗುರುವಾರವಷ್ಟೇ ಅದ್ಧೂರಿಯಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಸಪ್ತಪದಿ ತುಳಿದಿದ್ದಾರೆ ಲೇಡಿ ಸೂಪರ್ ಸ್ಟಾರ್ ನಯನತಾರ. ಮದುವೆಯ ನಂತರ ತಾವು ಆರಾಧಿಸುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಈ ಜೋಡಿ ಹೋಗಿತ್ತು. ಅಲ್ಲಿ ನಯನತಾರಾ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನಯನತಾರಾ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ತಿರುಪತಿ ತಿರುಮಲ ಅಧಿಕಾರಿಗಳ ಮಧ್ಯಪ್ರವೇಶ ಕೂಡ ಆಗಿದೆ.

    ನಿನ್ನೆ ಪತಿ ವಿಘ್ನೇಶ್ ಶಿವನ್ ಜೊತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ನಯನತಾರಾ. ಈ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣಕ್ಕೆ ಪ್ರವೇಶ ಮಾಡಿದರು. ಹಳದಿ ಬಣ್ಣದ ಸೀರೆಯಲ್ಲಿ ನಯನತಾರಾ ಕಂಗೊಳಿಸುತ್ತಿದ್ದರೆ, ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟಿದ್ದರು ವಿಘ್ನೇಶ್. ಆದರೆ, ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಿಂದಿ ವೆಬ್ ಸಿರೀಸ್‌ನಲ್ಲಿ `ರಂಗಿತರಂಗ’ ನಟಿ ರಾಧಿಕಾ ನಾರಾಯಣ್

    ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಚಪ್ಪಲಿ ಧರಿಸಿದ್ದರಂತೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಯನತಾರಾ ವಿರುದ್ಧ ಭಕ್ತರು ಮುಗಿಬಿದ್ದಿದ್ದರು. ವಿವಾದ ಸೃಷ್ಟಿ ಆಗುತ್ತಿದ್ದಂತೆಯೇ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ.

  • ಪತಿ ವಿಘ್ನೇಶ್‌ಗೆ ದುಬಾರಿ ಬಂಗ್ಲೆ ಗಿಫ್ಟ್ ಮಾಡಿದ ನಯನತಾರಾ: ಬಂಗ್ಲೆಯ ಮೊತ್ತವೆಷ್ಟು ಗೊತ್ತಾ?

    ಪತಿ ವಿಘ್ನೇಶ್‌ಗೆ ದುಬಾರಿ ಬಂಗ್ಲೆ ಗಿಫ್ಟ್ ಮಾಡಿದ ನಯನತಾರಾ: ಬಂಗ್ಲೆಯ ಮೊತ್ತವೆಷ್ಟು ಗೊತ್ತಾ?

    ಸೌತ್ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ 7 ವರ್ಷಗಳ ಪ್ರೀತಿಯ ನಂತರ ಆಪ್ತರ ಸಮ್ಮುಖದಲ್ಲಿ  ಅದ್ದೂರಿಯಾಗಿ ಮದುವೆ ನೆರವೇರಿತು. ಜೂನ್ 9ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ವಿಘ್ನೇಶ್ ಶಿವನ್, ನಯನತಾರಾಗೆ ಮಾಂಗಲ್ಯ ಧಾರಣೆ ಮಾಡಿದರು. ಗ್ರ್ಯಾಂಡ್ ಆಗಿ ನಡೆದ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಸ್ಟಾರ್ ಜೋಡಿಯ ಮದುವೆಯಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರಾದ ರಜನಿಕಾಂತ್, ದಳಪತಿ ವಿಜಯ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ಬೋನಿ ಕಪೂರ್ ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಬಂದು ನಯನತಾರಾ ಮತ್ತು ವಿಘ್ನೇಶ್ ಜೋಡಿಗೆ ಶುಭಹಾರೈಸಿದರು. ನಯನತಾರಾ ಕೆಂಪು ಸೀರೆ ಮತ್ತು ರಾಯಲ್ ಆಭರಣದಲ್ಲಿ ಮಿಂಚಿದ್ದರು. ವಿಘ್ನೇಶ್ ಶಿವನ್ ಬಿಳಿ ಮತ್ತು ಗೋಲ್ಡ್ ಬಣ್ಣದ ಪಂಚೆ, ಕುರ್ತಾ ಮತ್ತು ಶಾಲ್ ಧರಿಸಿದ್ದರು. ಇಬ್ಬರ ಮದುವೆ ಲುಕ್‌ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. 7 ಎಳೆಯ ಈ ಜ್ಯುವೆಲ್ಲರಿಯನ್ನು ಮುತ್ತು, ವಜ್ರ ಮತ್ತು ವಿವಿಧ ದುಬಾರಿ ಸ್ಟೋನ್‌ಗಳನ್ನು ಬಳಸಿ ಮಾಡಲಾಗಿದೆ.

    ದುಬಾರಿ ಮದುವೆ ವೆಚ್ಚದಲ್ಲಿ ಮದುವೆಯಾಗಿರುವ ಈ ಜೋಡಿ ಒಬ್ಬರಿಗೊಬ್ಬರು ನೀಡಿರುವ ಗಿಫ್ಟ್ ಕೂಡ ಅಷ್ಟೆ ದುಬಾರಿಯಾಗಿದೆ. ನಯನತಾರಾ ಮದುವೆಗೆ ಧರಿಸಿದ್ದ ಅಭರಣವನ್ನು ವಿಘ್ನೇಶ್ ಶಿವನ್ ಗಿಫ್ಟ್ ಮಾಡಿದ್ದಾರೆ. ಒಟ್ಟು 5 ಕೋಟಿ ಬೆಲೆಬಾಳುವ ಒಡವೆಯನ್ನು ಧರಿಸಿದ್ದರು. ಇನ್ನು 5 ಕೋಟಿ ಮೌಲ್ಯದ ರಿಂಗ್ ಅನ್ನು ವಿಘ್ನೇಶ್ ಶಿವನ್ ಉಡುಗೊರೆಯಾಗಿ ನೀಡಿದ್ದಾರೆ. ನಯನತಾರಾ ಕೂಡ ಪತಿ ವಿಘ್ನೇಶ್ ಶಿವನ್‌ಗೆ 20 ಕೋಟಿ ಬೆಲೆಬಾಳುವ ಬಂಗ್ಲೆಯನ್ನು ಗಿಫ್ಟ್ ನೀಡಿದ್ದಾರೆ. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ಸದ್ಯ ನಟಿ ನಯನತಾರಾ ಶಾರುಖ್ ಖಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಟ್ಲೀ ನಿರ್ದೇಶನದ `ಜವಾನ್’ ಸಿನಿಮಾದಲ್ಲಿ ನಯನತಾರಾ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಕನ್ನಡ ಸಿನಿರಸಿಕರಿಗೆ ಹತ್ತಿರವಾಗುತ್ತಿದ್ದಾರೆ. ಇನ್ನು ಮದುವೆ ಬಳಿಕವೂ ನಯನತಾರಾ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುತ್ತಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಮೋಡಿ ಮಾಡಲಿದ್ದಾರೆ.

  • ತಿರುಪತಿಗೆ ಭೇಟಿ ನೀಡಿದ ನಯನತಾರಾ ಮತ್ತು ವಿಘ್ನೇಶ್ ಶಿವನ್

    ತಿರುಪತಿಗೆ ಭೇಟಿ ನೀಡಿದ ನಯನತಾರಾ ಮತ್ತು ವಿಘ್ನೇಶ್ ಶಿವನ್

    ನಿನ್ನೆಯಷ್ಟೇ ಚೆನ್ನೈನಲ್ಲಿ ಮದುವೆ ಆಗಿದ್ದ ಸ್ಟಾರ್ ಜೋಡಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇಂದು ತಿರುಪತಿಗೆ ಭೇಟಿ ನೀಡಿದರು. ಶುಕ್ರವಾರ ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದ ಜೋಡಿಯು, ಕೆಲ ಹೊತ್ತು ತಿಮ್ಮಪ್ಪನ ಸನ್ನಿಧಾನದಲ್ಲೇ ಉಳಿದುಕೊಂಡರು.

    ಅಂದುಕೊಂಡಂತೆ ಆಗಿದ್ದರೆ ತಿರುಪತಿಯಲ್ಲೇ ಈ ಜೋಡಿ ಮದುವೆ ಆಗಬೇಕಿತ್ತು. ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಈ ಕುರಿತು ಮಾತನಾಡಿದ್ದರು. ಕೊನೆಯ ಕ್ಷಣದ ಬದಲಾವಣೆಯಿಂದಾಗಿಯೇ ತಿರುಪತಿಯಿಂದ ತಮಿಳುನಾಡಿನ ಮಹಾಬಲಿಪುರಂಗೆ ಶಿಫ್ಟ್ ಆಯಿತು. ನಿನ್ನೆ ಈ ಜೋಡಿ ಸಿನಿಮಾ ರಂಗದ ಅನೇಕ ಗಣ್ಯರ ಸಮ್ಮುಖದಲ್ಲಿ ಸತಿಪತಿಗಳಾದರು. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

    ತಿರುಪತಿ ದೇವಸ್ಥಾನಕ್ಕೆ ಬಂದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು ನಯನತಾರಾ. ಹಸಿರು ಬಣ್ಣದ ಅಂಚಿನ ಹಳದಿ ಬಣ್ಣದ ಸೀರೆಯುಟ್ಟಿದ್ದರು. ವಿಘ್ನೇಶ್ ಕೂಡ ಸಾಂಪ್ರದಾಯಿಕ ಉಡುಗೊರೆಯಲ್ಲೇ ಮಿಂಚುತ್ತಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಕುಟುಂಬದ ಒಪ್ಪಿಗೆ ಪಡೆದುಕೊಂಡು ನಿನ್ನೆ ಹೊಸ ಜೀವನಕ್ಕೆ ಕಾಲಿಟ್ಟಿದೆ. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಿದ್ದರು.