Tag: Vignesh Sivan

  • ನಯನತಾರಾ ಪತಿಗೆ ‘ಹುಷಾರ್’ ಎಂದ ಶಾರುಖ್ ಖಾನ್

    ನಯನತಾರಾ ಪತಿಗೆ ‘ಹುಷಾರ್’ ಎಂದ ಶಾರುಖ್ ಖಾನ್

    ಕ್ಷಿಣದ ಖ್ಯಾತ ನಟಿ ನಯನತಾರಾ ಪತಿ, ನಿರ್ದೇಶಕರೂ ಆಗಿರುವ ವಿಘ್ನೇಶ್ ಶಿವನ್ ಗೆ ಶಾರುಖ್ ಖಾನ್ (Shah Rukh Khan) ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ನಯನತಾರಾ ಬಾಕ್ಸಿಂಗ್ ಮತ್ತು ಫೈಟಿಂಗ್ ಕಲಿತಿರುವುದರಿಂದ ಹುಷಾರಾಗಿ ಎಂದು ಬಹಿರಂಗವಾಗಿಯೇ ಸೋಷಿಯಲ್ ಮೀಡಿಯಾ ಮೂಲಕ ಎಚ್ಚರಿಸಿದ್ದಾರೆ. ಶಾರುಖ್ ಈ ರೀತಿ ಹೇಳುವುದಕ್ಕೂ ಒಂದು ಕಾರಣವಿದೆ. ಆ ಕಾರಣ ಕೇಳಿದರೆ ನಿಜಕ್ಕೂ ನಗು ತರಿಸುತ್ತದೆ.

    ಮೊನ್ನೆಯಷ್ಟೇ ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಪ್ರಿವ್ಯೂ ರಿಲೀಸ್ ಆಗಿದೆ. ಅದಕ್ಕೆ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಈ ಸಿನಿಮಾದಲ್ಲಿ ನಯನತಾರಾ (Nayantara) ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿವ್ಯೂ ಕುರಿತು ವಿಘ್ನೇಶ್ ಶಿವನ್ (Vignesh Sivan) ಮೆಚ್ಚಿ ಟ್ವೀಟ್ ಮಾಡಿದ್ದರು. ನಯನತಾರಾ ಪಾತ್ರವನ್ನೂ ಅವರು ಹೊಗಳಿದ್ದರು. ಇದಕ್ಕೆ ಉತ್ತರ ಎಂಬಂತೆ ಶಾರುಖ್, ‘ಧನ್ಯವಾದಗಳು ಸರ್, ನಿಮ್ಮ ಪತ್ನಿ ಬಾಕ್ಸಿಂಗ್, ಫೈಟಿಂಗ್ ಕಲಿತಿದ್ದಾರೆ. ಯಾವುದಕ್ಕೂ ಹುಷಾರಾಗಿ’ ಎಂದು ತಮಾಷೆ ಮಾಡಿದ್ದಾರೆ.

    ಈಗಾಗಲೇ ಬಿಡುಗಡೆಯಾಗಿರುವ ಬಹುನಿರೀಕ್ಷಿತ ‘ಜವಾನ್’ (Jawan) ಚಿತ್ರದ ಪ್ರಿವ್ಯೂ (Preview) ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸಮಾಜದಲ್ಲಾಗುತ್ತಿರುವ ತಪ್ಪುಗಳನ್ನು ತಿದ್ದುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಯ ಕಥೆಯಾಗಿದೆ.

    ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆರಂಭದಿಂದಲೂ ಬಹಳ ಕುತೂಹಲವಿತ್ತು. ಇಂದು ಬಿಡುಗಡೆಯಾದ ಟೀಸರ್, ಆ ನಿರೀಕ್ಷೆ ಮತ್ತು ಕುತೂಹಲಗಳನ್ನು ಇನ್ನೊಂದು ಹಂತಕ್ಕೆ ತಲುಪಿಸಿದೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಚಿತ್ರವು ಆಕ್ಷನ್ ಮತ್ತು ಎಮೋಷನ್ ಗಳನ್ನು ಹದವಾಗಿ ಹಿಡಿದಿಟ್ಟಿದೆ. ಚಿತ್ರದ ಕೆಲವು ಅದ್ಭುತ ಕ್ಷಣಗಳನ್ನು ಹಿಡಿದಿಡುವುದರ ಜೊತೆಗೆ, ‘ಜವಾನ್ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.

    ‘ಕಿಂಗ್ ಖಾನ್’ ಅವರ ಧ್ವನಿಯಲ್ಲಿ ಪ್ರಾರಂಭವಾಗುವ ಈ ಪ್ರಿವ್ಯೂ, ನಂತರ ಚಿತ್ರ ಏನಿರಬಹುದು ಎಂದು ಪರಿಚಯಿಸಿಕೊಡುತ್ತದೆ. ಈ ಪ್ರಿವ್ಯೂನ ಒಂದು ವಿಶೇಷತೆಯೆಂದರೆ, ಇದುವರೆಗೂ ನೀವು ನೋಡದೆ ಇರುವ ಶಾರುಖ್ ಅವರನ್ನು ಇಲ್ಲಿ ಹಲವು ಅವತಾರಗಳಲ್ಲಿ ನೋಡಬಹುದು. ಈ ಸಿನಿಮಾದಲ್ಲಿ ಅವರು ವಿಲನ್? ಅಥವಾ ಹೀರೋ ಎಂಬ ಗೊಂದಲ ಮೂಡಿಸುತ್ತದೆ ಪ್ರಿವ್ಯೂ.  ಶಾರುಖ್ ಖಾನ್ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಭಾವಂತರ ತುಣುಕುಗಳು ಸಹ ಈ ಪ್ರಿವ್ಯೂನಲ್ಲಿ ಪರಿಚಯಿಸಲಾಗಿದೆ. ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು, ಅದ್ದೂರಿ ಹಾಡುಗಳು, ‘ಬೇಕರಾರ್ ಕರಕೇ ಹಮೇ’ ಹಾಡಿಗೆ ಶಾರುಖ್ ಖಾನ್ ಅಭಿನಯ ಇವೆಲ್ಲವೂ ಈ ಪ್ರಿವ್ಯೂ ಚಿತ್ರದ ಹೈಲೈಟ್ ಗಳಾಗಿದ್ದು, ಚಿತ್ರ ಬಿಡುಗಡೆಗೆ ಕಾಯುವಂತಾಗಿದೆ.

    ದಕ್ಷಿಣ ಭಾರತದ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರಾದ ಅಟ್ಲಿ (Atlee) ಈ ಚಿತ್ರವನ್ನು ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಈ ಪ್ರಿವ್ಯೂನ ಇನ್ನೊಂದು ಹೈಲೈಟ್. ಈ ಪ್ರಿವ್ಯೂನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅದು ಗ್ರಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರಾಜಕುಮಾರಿ ಅವರು ಹಾಡಿರುವ ‘ದಿ ಕಿಂಗ್ ಖಾನ್ ರಾಪ್’ ಎಂಬ ಹಾಡು.

    ‘ಜವಾನ್’, ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು, ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಶಾರುಖ್ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ವಿವಿಧ ಭಾಷೆಯ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನಯನತಾರಾ, ವಿಜಯ ಸೇತುಪತಿ (Vijay Sethupathi), ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಗೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ದೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಿಯಾ ನಟಿಸಿರುವ ಈ ಚಿತ್ರವು ಎಲ್ಲ ಭಾಷೆಗಳ ಜನರಿಗೂ ತಲುಪವಂತೆ ಚಿತ್ರಿಸಲಾಗಿದೆ.

     

    ಇದಕ್ಕೂ ಮುನ್ನ ಪೋಸ್ಟರ್ ಮತ್ತು ಸಣ್ಣ ಟೀಸರ್ ಮೂಲಕ ಜನರ ಗಮನ ಸೆಳೆದ ಟೀಸರ್, ಈಗ ಪ್ರಿವ್ಯೂ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ನಡಿ ಗೌರಿ ಖಾನ್ ನಿರ್ಮಾಣ ಮಾಡಿದರೆ, ಗೌರವ್ ವರ್ಮ ಸಹ-ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ‘ಜವಾನ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಯನತಾರಾ-ವಿಘ್ನೇಶ್ ಶಿವನ್ ವಿರುದ್ಧ ದಾಖಲಾಯ್ತು ದೂರು

    ನಯನತಾರಾ-ವಿಘ್ನೇಶ್ ಶಿವನ್ ವಿರುದ್ಧ ದಾಖಲಾಯ್ತು ದೂರು

    ಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ವಿರುದ್ಧ ಅವರ ಸಂಬಂಧಿಕರೇ ದೂರು ನೀಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವಿಘ್ನೇಶ್ ಶಿವನ್ ಮೂಲತಃ ತಮಿಳುನಾಡು ತಿರು (Trichy)ಚ್ಚಿ ಜಿಲ್ಲೆ, ಲಾಕ್ ಕುಡಿ ಹಳ್ಳಿಗೆ ಸೇರಿದವರು. ಅಲ್ಲಿಯೇ ಅವರ ತಂದೆ ಮತ್ತು ಪೂರ್ವಜರು ಬಾಳಿ ಬದುಕಿದ್ದಾರೆ. ವಿಘ್ನೇಶ್ ಶಿವನ್ ತಂದೆ ಶಿವಕೋಲುಂದು ಅವರಿಗೆ ಒಟ್ಟು ಒಂಬತ್ತು ಜನ ಸಹೋದರರು. ಆ ಸಹೋದರರಿಗೆ ಗೊತ್ತಾಗದಂತೆ ಪೂರ್ವಜರ ಜಮೀನು ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಸಹೋದರರದ್ದು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ ಶಿವಕೋಲುಂದು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರು ಬದುಕಿದ್ದಾಗಲೇ ಸಹೋದರರಿಗೆ ಗೊತ್ತಾಗದಂತೆ ಆಸ್ತಿ ಮಾರಿದ್ದಾರೆ ಎನ್ನುವುದು ಸಂಬಂಧಿಗಳ ಆರೋಪ. ತಿರುಚ್ಚಿ ಡಿ.ಎಸ್.ಪಿ ಕಚೇರಿಯಲ್ಲಿ ದೂರು ದಾಖಲಾಗಿದ್ದು, ಆ ದೂರಿನಲ್ಲಿ ಸ್ಟಾರ್ ಜೋಡಿಯ ಹೆಸರು ಸೇರ್ಪಡೆಯಾಗಿದೆ. ಶಿವಕೋಲುಂದು ಸಹೋದರ ಮಾಣಿಕ್ಯಂ ಎನ್ನುವವರು ದೂರು ನೀಡಿದ್ದಾರೆ.

     

    ಮಾಣಿಕ್ಯಂ  (Manikyam)ಕೊಟ್ಟ ದೂರಿನಲ್ಲಿ ವಿಘ್ನೇಶ್ ತಾಯಿ ಮೀನಾ ಕುಮಾರಿ, ಮಗಳು ಐಶ್ವರ್ಯ ಹಾಗೂ ವಿಘ್ನೇಶ್ ಮತ್ತು ನಯನತಾರಾ ಹೆಸರು ಕೂಡ ಇದೆ. ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಡಿಜಿಪಿ ಪೊಲೀಸ್ ಸಿಬ್ಬಂದಿಗೆ ಆದೇಶ ನೀಡಿದ್ದಾರೆ. ಹೀಗಾಗಿ ಸ್ಟಾರ್ ದಂಪತಿಗೆ ಮತ್ತೊಂದು ತಲೆ ನೋವು ಎದುರಾಗಿದೆ.

  • ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

    ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

    ಲವು ವರ್ಷಗಳಿಂದ ಖ್ಯಾತನಟಿ ಐಶ್ವರ್ಯ ರೈ (Aishwarya Rai) ಯಾವುದೇ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇದ್ದರೂ, ದಕ್ಷಿಣದ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಈಗ ಮತ್ತೆ ತಮಿಳಿನ (Tamil) ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ದಕ್ಷಿಣದ ಸಿನಿಮಾಗಳತ್ತ ಅವರು ಚಿತ್ತ ನೆಟ್ಟಿದ್ದಾರೆ.

    ಸಿನಿಮಾಗಳ ಆಯ್ಕೆಯ ವಿಷಯದಲ್ಲಿ ನಾನು ತುಂಬಾ ಚ್ಯೂಸಿಯಾಗಿದ್ದೇನೆ. ಹಾಗಾಗಿ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಐಶ್ವರ್ಯ ಹಲವಾರು ಬಾರಿ ಹೇಳಿದ್ದಿದೆ. ಅವರು ಹೇಳಿದಂತೆ ನಡೆದುಕೊಂಡೂ ಇದ್ದಾರೆ. ಈ ಕಾರಣದಿಂದಾಗಿ ಅವರು ಹೆಚ್ಚೆಚ್ಚು ದಕ್ಷಿಣ ಭಾರತದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಸಿನಿಮಾಗಳ ಘನತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಐಶ್ವರ್ಯ ರೈ ಇದೀಗ ಮತ್ತೊಂದು ತಮಿಳು ಚಿತ್ರಕ್ಕೆ ಸಹಿ ಮಾಡಿದ್ದು, ಅಜಿತ್ ಕುಮಾರ್ (Ajith) ಈ ಸಿನಿಮಾದ ನಾಯಕ ಎಂದು ಹೇಳಲಾಗುತ್ತಿದೆ. ಅಜಿತ್ ನಟನೆಯ ವಾರಿಸು ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಬೆನ್ನಲ್ಲೇ ಅವರ ಹೊಸ ಸಿನಿಮಾ ಕೂಡ ಘೋಷಣೆಯಾಗಿದ್ದು, ಈ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Sivan) ನಿರ್ದೇಶಕರು.

    ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು ಲೈಕಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಈ ಚಿತ್ರದಲ್ಲಿ ಅಜಿತ್ ಹೊಸ ಬಗೆಯ ಹಾಗೂ ರಗಡ್ ಲುಕ್ ಇರುವಂಥ ಪಾತ್ರವನ್ನು ಮಾಡಲಿದ್ದಾರಂತೆ. ಇದು ಅಜಿತ್ ಅವರ 62ನೇ ಸಿನಿಮಾವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಅತೀ ಶೀಘ್ರದಲ್ಲೇ ಸಿನಿಮಾದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಿದೆ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲೇಡಿ ಸೂಪರ್ ಸ್ಟಾರ್ ನಯನತಾರಾ ಮೇಲೆ ಮುನಿಸಿಕೊಂಡ ತಮಿಳು ನಿರ್ಮಾಪಕರು

    ಲೇಡಿ ಸೂಪರ್ ಸ್ಟಾರ್ ನಯನತಾರಾ ಮೇಲೆ ಮುನಿಸಿಕೊಂಡ ತಮಿಳು ನಿರ್ಮಾಪಕರು

    ಮಿಳು ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ (Nayantara) ಮೇಲೆ ಅಲ್ಲಿನ ನಿರ್ಮಾಪಕರು ಕೋಪಗೊಂಡಿದ್ದಾರೆ. ತಮಗೊಂದು ಬೇರೆಯವರಿಗೊಂದು ರೂಲ್ಸ್ ಮಾಡಿಕೊಳ್ಳುವ ನಯನತಾರಾ ಅವರ ಇಬ್ಬಂದಿತನವನ್ನು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೋಪ ಎಲ್ಲಿಗೆ ತಿರುಗುತ್ತದೆಯೋ ಕಾದು ನೋಡಬೇಕಿದೆ. ಅಷ್ಟಕ್ಕೂ ನಯನತಾರಾ ಮೇಲೆ ನಿರ್ಮಾಪಕರು ಮುನಿಸಿಕೊಳ್ಳುವುದಕ್ಕೆ ಕಾರಣವಿದೆ.  ಆ ಕಾರಣವನ್ನು ಕೆಲವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.

    ನಯನತಾರಾ ತಮ್ಮ ಬದುಕಿನಲ್ಲಿ ಒಂದು ಬದ್ಧತೆಯನ್ನು ಮಾಡಿಕೊಂಡಿದ್ದರು. ಅದನ್ನು ಈಗ ಅವರು ತಮ್ಮ ಗಂಡನಿಗಾಗಿ ಮುರಿದಿದ್ದಾರೆ. ಇದೇ ನಿರ್ಮಾಪಕರ ಕೋಪಕ್ಕೆ ಕಾರಣವಾಗಿದೆ. ನಯನತಾರಾ ಸಿನಿಮಾಗಳನ್ನು ಒಪ್ಪಿಕೊಂಡರೆ, ಅಲ್ಲೊಂದು ನಿಬಂಧನೆ ಹಾಕುತ್ತಿದ್ದರು. ತಮ್ಮ ಕೆಲಸ ಕೇವಲ ನಟಿಸುವುದು ಮಾತ್ರ. ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಅಗ್ರಿಮೆಂಟ್ ಹಾಕಿಕೊಳ್ಳುತ್ತಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರು ಅದನ್ನು ಮುರಿದಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

    ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Sivan) ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಕನೆಕ್ಟ್’ (Connect) ಸಿನಿಮಾ ಇದೇ ತಿಂಗಳು 23ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ. ಈ ಕೆಲಸವೇ ನಿರ್ಮಾಪಕರನ್ನು ಕೆಣಕಿದೆ. ತಮಗೊಂದು ರೂಲ್ಸ್ ಬೇರೆಯವರಿಗೊಂದು ರೂಲ್ಸ್ ನಯನತಾರಾ ಮಾಡುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ತಮಿಳು ಸಿನಿಮಾ ರಂಗದಲ್ಲಿ ಈ ರೀತಿ ರೂಲ್ಸ್ (Rules) ಮಾಡಿಕೊಳ್ಳುವುದು ಹೊಸದೇನೂ ಅಲ್ಲ. ಅಜಿತ್ ಅವರು ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಜಿತ್ ಯಾವುದೇ ಸಿನಿಮಾದ ಪ್ರಮೋಷನ್ ಮಾಡುವುದಿಲ್ಲ. ನಟಿಸಿ ಹಿಂದಕ್ಕೆ ಸರಿದು ಬಿಡುತ್ತಾರೆ. ನಯನತಾರಾ ಇದನ್ನೇ ಪಾಲಿಸಿಕೊಂಡು ಬಂದಿದ್ದರು. ಆದರೆ, ಇದೀಗ ಗಂಡನ ಸಿನಿಮಾಗಾಗಿ ಆ ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ. ಈ ನಡೆಯೇ ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೊಸೆ ನಯನತಾರಾ ಸೀಕ್ರೆಟ್ ಬಿಚ್ಚಿಟ್ಟ ಅತ್ತೆ ಮೀನಾ ಕುಮಾರಿ

    ಸೊಸೆ ನಯನತಾರಾ ಸೀಕ್ರೆಟ್ ಬಿಚ್ಚಿಟ್ಟ ಅತ್ತೆ ಮೀನಾ ಕುಮಾರಿ

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಟನೆಗೆ ಬ್ರೇಕ್ ಹಾಕಿ, ಕೂಲ್ ಅಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸರೋಗಸಿ ಮೂಲಕ ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡಿರುವ ನಯನತಾರ ಬಗ್ಗೆ ವಿಘ್ನೇಶ್ ತಾಯಿ ಮೀನಾ ಕುಮಾರಿ (Meena Kumari) ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೊಸೆ ನಯನತಾರಾ ಬಗ್ಗೆ ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ.

    ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ವಿಘ್ನೇಶ್ ತಾಯಿ ಮೀನಾ ಕುಮಾರಿ, ನನ್ನ ಈ ಪ್ರಪಂಚದಲ್ಲಿ ನಾನು ಕಂಡಿರುವ ಅತಿ ಹೆಚ್ಚು ಕಾಳಜಿ ಮತ್ತು ಪ್ರೀತಿ ಕೊಡುವ ವ್ಯಕ್ತಿ ಅಂದ್ರೆ ನಯನತಾರ ಯಾರು ಏನೇ ಕಷ್ಟ ಅಂದರು ಸಹಾಯ ಮಾಡಲು ಯಾವಾಗಲೂ ಮುಂದಿರುತ್ತಾರೆ ಎಂದು ಸೊಸೆಯನ್ನ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಯಶ್ ಮುಂದಿನ ಚಿತ್ರಕ್ಕೆ ಅವರ ಮಗಳೇ ನಿರ್ಮಾಪಕಿ: ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್

    ನನ್ನ ಮಗ ವಿಘ್ನೇಶ್ ನಿರ್ದೇಶಕ, ಸೊಸೆ ದೊಡ್ಡ ಸ್ಟಾರ್ ನಟಿ. ಇಬ್ಬರು ತುಂಬಾ ಕಷ್ಟ ಪಟ್ಟು ಶ್ರಮಪಟ್ಟು ಜೀವನ ನಡೆಸುತ್ತಾರೆ. ಮನೆಯಲ್ಲಿ ಒಟ್ಟು 8 ಸಹಾಯಕರು ಇದ್ದಾರೆ 4 ಗಂಡಸರು 4 ಹೆಂಗಸರು ಇದ್ದಾರೆ. ಒಂದು ಸಲ ಮನೆ ಕೆಲಸ ಮಾಡುವ ಮಹಿಳೆ 4 ಲಕ್ಷ ರೂಪಾಯಿ ಸಾಲ ಇದೆ ತೀರಿಸಲು ಆಗುತ್ತಿಲ್ಲ ಎಂದು ದುಃಖ ಹೇಳಿಕೊಂಡಾಗ ಯೋಚಿಸದೇ ಕೆಲವೇ ನಿಮಿಷಗಳಲ್ಲಿ 4 ಲಕ್ಷ ತಂದು ಕೈಗೆ ಕೊಟ್ಟು ಸಾಲ ತೀರಿಸಿಕೋ ಎಂದು ಹೇಳುತ್ತಾಳೆ. ಇದು ನಯನತಾರಾ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಎಂದು ಸೊಸೆಯ ಬಗ್ಗೆ ಹೆಮ್ಮೆಯಿಂದ ವಿಘ್ನೇಶ್ ತಾಯಿ ಮಾತನಾಡಿದ್ದಾರೆ.

    ತುಂಬಾ ನಂಬಿಕೆ ಇಟ್ಟು ಆ ಮನೆಯಲ್ಲಿ ಕೆಲಸ ಮಾಡಿದ್ದರೆ, ಮಾಲೀಕರು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೇ ರೀತಿ ಅವರು ನಮ್ಮ ಮನೆಯನ್ನು ಕಾಪಾಡುತ್ತಾರೆ ಎಂದಿದ್ದಾರೆ ಮೀನಾ ಕುಮಾರಿ.

    Live Tv
    [brid partner=56869869 player=32851 video=960834 autoplay=true]

  • ನಯನತಾರ ಬಾಡಿಗೆ ತಾಯಿ ವಿವಾದ ಸುಖಾಂತ್ಯ: ಸರಕಾರ ಸಲ್ಲಿಸಿದ ವರದಿಯಲ್ಲೇನಿದೆ?

    ನಯನತಾರ ಬಾಡಿಗೆ ತಾಯಿ ವಿವಾದ ಸುಖಾಂತ್ಯ: ಸರಕಾರ ಸಲ್ಲಿಸಿದ ವರದಿಯಲ್ಲೇನಿದೆ?

    ಮಿಳಿನ ಸೂಪರ್ ಸ್ಟಾರ್ ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ದಂಪತಿ ಬಾಡಿಗೆ ತಾಯಿ ಪ್ರಕರಣ ಸಖತ್ ಸದ್ದು ಮಾಡಿತ್ತು. ಸರಕಾರ ರೂಪಿಸಿರುವ ನಿಯಮಗಳಂತೆ ಅವರು ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆದಿಲ್ಲ ಎಂದು ಆರೋಪಿಸಿ, ಸರಕಾರವು ತನಿಖೆಗೆ ಆದೇಶಿಸಿತ್ತು. ಇದೀಗ ತನಿಖಾ ತಂಡ ವರದಿ ನೀಡಿದ್ದು, ವರದಿ ನೋಡಿದ ಸ್ಟಾರ್ ದಂಪತಿಯು ನಿಟ್ಟುಸಿರಿಟ್ಟಿದ್ದಾರೆ.

    ಬಾಡಿಗೆ ತಾಯಿಯಿಂದ (surrogate mother) ಮಗುವನ್ನು ಪಡೆಯಲು ತಮಿಳು ನಾಡು ಸರಕಾರವು ನಿಯಮಗಳನ್ನು ರೂಪಿಸಿದೆ. ಅದನ್ನು ನಯನತಾರ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿಯೇ ಸರಕಾರವು ತನಿಖೆಗೆ ಆದೇಶಿಸಿತ್ತು. ಮದುವೆಯಾದ ನಾಲ್ಕೇ ತಿಂಗಳಿಗೆ ಮಗುವನ್ನು ಪಡೆದ ಕಾರಣಕ್ಕಾಗಿ ಅನುಮಾನ ಕೂಡ ಮೂಡಿತ್ತು. ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಕುತೂಹಲ ಮೂಡಿಸುವಂತ ವರದಿಯನ್ನೇ ಕೊಟ್ಟಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಚೆನ್ನೈನ ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವರನ್ನು ತನಿಖಾ ತಂಡ ವಿಚಾರಣೆ ನಡೆಸಿದೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಒಂದಷ್ಟು ಅಚ್ಚರಿಯ ಮಾಹಿತಿಯನ್ನೂ ಸರಕಾರಕ್ಕೆ ನೀಡಿದ್ದಾರೆ. ಬಾಡಿಗೆ ತಾಯಿಗೂ ಕೂಡ ಮದುವೆ ಆಗಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ. ಅಲ್ಲದೇ, 2021ರ ಆಗಸ್ಟ್ ನಲ್ಲಿ ಸರೋಗಸಿ ಪ್ರಕ್ರಿಯೆ ಒಪ್ಪಂದ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ನಯನತಾರಾ ಅವರ ಫ್ಯಾಮಿಲಿ ಡಾಕ್ಟರ್ ವಿದೇಶದಲ್ಲಿ ಇರುವುದರಿಂದ ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.

    ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ 2016 ಮಾರ್ಚ್ 11 ರಂದು ಮದುವೆ ಆಗಿರುವುದಾಗಿ ಅಫಿಡವಿಟ್ ನಲ್ಲಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. 2022 ಜೂನ್ 9 ರಂದು ಸಾರ್ವಜನಿಕವಾಗಿ ಈ ಜೋಡಿ ಮದುವೆ ಆಗಿತ್ತು. ಮದುವೆ ವಿಚಾರ ಕೂಡ ಇದೀಗ ಭಾರೀ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅವಳಿ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಯನತಾರಾ ದಂಪತಿ

    ಅವಳಿ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಯನತಾರಾ ದಂಪತಿ

    ಮೊನ್ನೆಯಷ್ಟೇ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದಿದ್ದ ತಮಿಳಿನ ಖ್ಯಾತ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan), ಇದೀಗ ದೀಪಾವಳಿ ದಿನದಂದು ಮಕ್ಕಳನ್ನು (children) ಮನೆಗೆ ಬರಮಾಡಿಕೊಂಡಿದ್ದಾರೆ. ತಮ್ಮ ಮನೆಯ ನೂತನ ಸದಸ್ಯರ ಜೊತೆ ದೀಪಾವಳಿಯನ್ನು ಸಡಗರದಿಂದ ಆಚರಿಸಿದ್ದಾರೆ.

    ಅವಳಿ ಮಕ್ಕಳನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ದಂಪತಿ, ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಈ ದೀಪಾವಳಿ ಎಂದೆಂದಿಗೂ ಮರೆಯದ ದೀಪಾವಳಿ ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಈ ಸ್ಟಾರ್ ದಂಪತಿಗೆ ಶುಭಾಶಯ ಹೇಳಿದ್ದು, ಮಕ್ಕಳ ಮುಖವನ್ನು ಯಾವಾಗ ತೋರಿಸುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಇತ್ತೀಚೆಗಷ್ಟೇ ತಾವು ಬಾಡಿಗೆ ತಾಯಿ (surrogate mother) ಮೂಲಕ ಮಗುವನ್ನು ಪಡೆದಿರುವ ವಿಚಾರವನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ನಂತರ ತಮಗೆ ಅವಳಿ ಮಕ್ಕಳಾದ ವಿಚಾರವನ್ನೂ ಶೇರ್ ಮಾಡಿದ್ದರು. ಬಾಡಿಗೆ ತಾವು ವಿಚಾರವು ಸಖತ್ ಸದ್ದು ಮಾಡಿತ್ತು. ಅಲ್ಲದೇ, ಬಾಡಿಗೆ ತಾಯಿ ವಿಚಾರವಾಗಿ ಸ್ಟಾರ್ ದಂಪತಿ ವಿಚಾರಣೆ ಮಾಡಬೇಕು ಎಂದು ತಮಿಳು ನಾಡು ಸರಕಾರ ಸೂಚಿಸಿತ್ತು. ಕ್ರಮಬದ್ಧವಾಗಿ ಮಕ್ಕಳನ್ನು ಪಡೆದಿದ್ದಾರಾ ಎನ್ನುವ ಪ್ರಶ್ನೆಯನ್ನೂ ಮಾಡಿತ್ತು.

    ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಸ್ಟಾರ್ ದಂಪತಿ, ಕಳೆದ ಐದಾರು ವರ್ಷಗಳಿಂದ ಸಹಜ ಜೀವನ ನಡೆಸುತ್ತಿದ್ದರು. ಆರೇಳು ತಿಂಗಳ ಹಿಂದೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲೇ ತಾವು ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆದರು. ಇದೀಗ ಖುಷಿಯಾಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾಗೆ ಬಾಡಿಗೆ ತಾಯಿ ಸಂಕಷ್ಟ: ಕೊನೆಗೂ ಮೌನ ಮುರಿದ ವಿಘ್ನೇಶ್ ಶಿವನ್

    ನಯನತಾರಾಗೆ ಬಾಡಿಗೆ ತಾಯಿ ಸಂಕಷ್ಟ: ಕೊನೆಗೂ ಮೌನ ಮುರಿದ ವಿಘ್ನೇಶ್ ಶಿವನ್

    ಬಾಡಿಗೆ ತಾಯಿ (Surrogate Mother) ಮೂಲಕ ಅವಳಿ ಮಕ್ಕಳ ಪೋಷಕರಾಗಿರುವ  ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್, ಮಕ್ಕಳೊಂದಿಗೆ ನೆಮ್ಮದಿಯಾಗಿ ಇರಬೇಕು ಎನ್ನುವ ಹೊತ್ತಿನಲ್ಲಿ ಸಂಕಟವೊಂದು ಎದುರಾಗಿದೆ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದುಕೊಳ್ಳಲು ಕೆಲ ನಿಯಮಗಳಿಗೆ. ಅವುಗಳನ್ನು ಪಾಲಿಸದೇ ಮಕ್ಕಳನ್ನು ಪಡೆದಿದ್ದಾರೆ ಎನ್ನುವ ಆರೋಪ (Allegation) ಇವರ ಮೇಲಿದೆ.

    ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Sivan) ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವಾಗ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಕಾರಣದಿಂದಾಗಿ ತಮಿಳು ನಾಡು ಸರಕಾರ ನೋಟಿಸ್ ನೀಡಿದೆ ಮತ್ತು ವಿಚಾರಣೆ ನಡೆಸುತ್ತಿದೆ. ಈ ಹೊತ್ತಿನಲ್ಲಿ ನಯನತಾರಾ ಅಥವಾ ವಿಘ್ನೇಶ್ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪ್ರಥಮ ಬಾರಿಗೆ ಮೌನ ಮುರಿದಿರುವ ವಿಘ್ನೇಶ್ ತಮ್ಮ ಇನ್ಸ್ಟಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಇನ್ಸ್ಟಾದ ಸ್ಟೋರಿಯಲ್ಲಿ ಕೆಲವು ಸಾಲುಗಳನ್ನು ಬರೆದಿರುವ ವಿಘ್ನೇಶ್ ಶಿವನ್, ‘ನಿನ್ನ ಸುತ್ತಮುತ್ತಲಿನವರನ್ನು ಗಮನಿಸು. ನಿನಗೆ ಒಳ್ಳೆಯದನ್ನು ಬಯಸುವವರು ಮಾತ್ರ ನಿನ್ನವರು. ನಿನ್ನ ಜೊತೆಗಿದ್ದು, ನಿನ್ನ ಕ್ಷೇಮ ಬಯಸುವವರನ್ನು ನಂಬು. ಇದೇ ವಾಸ್ತವ’ ಎಂದು ಬರೆದುಕೊಂಡಿದ್ದಾರೆ. ಹಾಗಾದರೆ, ಇವರ ಜೊತೆಗಿದ್ದು ಇವರ ಕ್ಷೇಮ ಬಯಸದಂತಹ ವ್ಯಕ್ತಿಗಳು ಇದ್ದಾರಾ ಎನ್ನುವ ಅನುಮಾನವನ್ನು ಇದು ಹುಟ್ಟು ಹಾಕಿದೆ.

    ಮತ್ತೊಂದು ಸ್ಟೋರಿಯಲ್ಲಿ ‘ಸಮಯವು ಎಲ್ಲವನ್ನೂ ಹೇಳುತ್ತದೆ. ಅಲ್ಲಿವರೆಗೂ ಸಹನೆಯಿಂದ ಕಾಯಬೇಕು’ ಎಂದು ಬರೆದಿದ್ದಾರೆ. ಅಂದರೆ, ಈ ಘಟನೆಯು ಪರೋಕ್ಷವಾಗಿ  ತಮ್ಮನ್ನು ಬಾಧಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿಯೇ ಹೇಳಿಕೊಂಡಿದ್ದಾರೆ. ತಾವು ನಿಯಮದಂತೆಯೇ ಮಕ್ಕಳನ್ನು ಪಡೆದಿರುವ ಕುರಿತಾಗಿಯೂ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ನಯನತಾರ ಬಾಡಿಗೆ ತಾಯ್ತನದ ಮಗು: ತನಿಖೆಗೆ ಆದೇಶಿಸಿದ ತಮಿಳು ನಾಡು ಸರಕಾರ

    ನಟಿ ನಯನತಾರ ಬಾಡಿಗೆ ತಾಯ್ತನದ ಮಗು: ತನಿಖೆಗೆ ಆದೇಶಿಸಿದ ತಮಿಳು ನಾಡು ಸರಕಾರ

    ನಿನ್ನೆಯಷ್ಟೇ ತಾವು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವುದಾಗಿ ನಟಿ ನಯನತಾರಾ (Nayantara) ಮತ್ತು ವಿಘ್ನೇಶ್ ಶಿವನ್ ಘೋಷಿಸಿದ್ದರು. ಅದು ಅವಳಿ ಜವಳಿ ಮಕ್ಕಳಾಗಿರುವ ಮತ್ತು ಆ ಮಗುವಿಗೆ ಹೆಸರೂ ಇಟ್ಟಿರುವ ಕುರಿತು ಖುಷಿಯನ್ನು ಹಂಚಿಕೊಂಡಿದ್ದರು. ಮನೆಗೆ ಮಕ್ಕಳು ಬಂದು ಖುಷಿಯಲ್ಲಿರುವ ದಂಪತಿಗೆ ತಮಿಳುನಾಡು (Tamil Nadu) ಸರಕಾರ ಶಾಕ್ ಮೂಡಿಸಿದೆ. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದದ್ದು ನಿಯಮಗಳ ಪ್ರಕಾರವೇ ಇದೆಯಾ ಎಂದು ಕೇಳಿದೆ.

    ಬಾಡಿಗೆ ತಾಯ್ತನದ ಕುರಿತು ಸರಕಾರವು ಹಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Sivan) ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ತಮಿಳು ನಾಡು ಸರಕಾರ (Government) ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-35ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ.

    ಬಾಡಿಗೆ ತಾಯಿಯಿಂದ (Surrogate Mother) ಮಗು ಪಡೆಯಲು ಇವೆಲ್ಲ ನಿಯಮಗಳನ್ನು ಪಾಲಿಸಲೇಬೇಕಿದೆ. ಆದರೆ, ನಯನ ದಂಪತಿ ಇವುಗಳನ್ನು ಪಾಲಿಸಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ನಾಡು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ತನಿಖೆಗೆ (Investigation) ಆದೇಶಿಸಿದೆ. ಈ ತನಿಖೆಯು ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಳಗಂ ಜೊತೆ ಆಟವಾಡುತ್ತಿದ್ದ ದಂಪತಿಗೆ ಶಾಕ್ ಮೂಡಿಸಿದೆ. ಇದನ್ನೂ ಓದಿ:ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಗೆ ಸಂಜಯ್ ದತ್

    ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕಳೆದ ಜೂನ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದ್ದರು. ತಾವಿಷ್ಟಪಟ್ಟ ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ಧರು.

    ಮಾರ್ಚ್ ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದರೂ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬ ಸುದ್ದಿಯೂ ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಸುದ್ದಿ ಆಯಿತು. ಅದು ಕೂಡ ಇದೀಗ ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಅದನ್ನೂ ನಿಜ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗಿ 4 ತಿಂಗ್ಳು: ಅವಳಿ ಮಕ್ಕಳ ತಾಯಿಯಾದ ನಯನತಾರಾ ಟ್ರೋಲ್

    ಮದುವೆಯಾಗಿ 4 ತಿಂಗ್ಳು: ಅವಳಿ ಮಕ್ಕಳ ತಾಯಿಯಾದ ನಯನತಾರಾ ಟ್ರೋಲ್

    ಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಖ್ಯಾತ ನಟಿ ನಯನತಾರಾ (Nayantara) ಮೂರ್ನಾಲ್ಕು ತಿಂಗಳ ಹಿದೆಯಷ್ಟೇ ಮದುವೆ ಆಗಿದ್ದಾರೆ. ಮದುವೆ ಆಗಿ ನಾಲ್ಕೇ ತಿಂಗಳಿಗೆ ತಾವು ಜವಳಿ ಮಕ್ಕಳ ಪಾಲಕರಾಗುತ್ತಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ ಮಕ್ಕಳ ಕಾಲುಗಳ ಫೋಟೋವನ್ನು ಅಪ್ ಲೋಡ್ ಮಾಡಿ, ಟ್ರೋಲ್ ಗೆ ಗುರಿಯಾಗಿದ್ದಾರೆ.

    ಬಾಡಿಗೆ ತಾಯಿ (Surrogate mother) ಮೂಲಕ ಜವಳಿ (twins) ಮಕ್ಕಳಿಗೆ ತಾವು ತಾಯಿ ಆಗಿದ್ದೇನೆ ಎಂದು ನಯನತಾರಾ ಘೋಷಿಸುತ್ತಿದ್ದಂತೆಯೇ ಶುಭ ಹಾರೈಸಿದ್ದವರಿಗಿಂತ ನೆಗೆಟಿವ್ ಕಾಮೆಂಟ್ ಮಾಡಿದವರೇ ಹೆಚ್ಚಾಗಿದ್ದಾರೆ. ಕೆಲವರು ತಾಯ್ತನದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಅನೇಕರು ಮನೆಗೆ ಬರುತ್ತಿರುವ ಹೊಸ ಅತಿಥಿಗೆ ಶುಭ ಹಾರೈಸಿದ್ದಾರೆ. ಎರಡೂ ಮಕ್ಕಳು ನಿಮ್ಮಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆಯಲಿ ಎಂದು ಕಾಮೆಂಟ್ ಮಾಡಿದ್ದಾರೆ.

    ಮದುವೆಯಾದ 4 ತಿಂಗಳಿಗೆ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan), ನಟಿ ನಯನತಾರಾ ದಂಪತಿ ಅಭಿಮಾನಿಗಳಿಗಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಯನತಾರ ಅವಳಿ ಮಕ್ಕಳ ತಾಯಿ ಎಂದು ಇನ್ಸ್ಟಾದಲ್ಲಿ ದಂಪತಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅರೇ, ಮದುವೆಯಾದ 4 ತಿಂಗಳಿಗೆ ಇದು ಹೇಗೆ ಸಾಧ್ಯ ಎನ್ನುವವರಿಗೆ ಉತ್ತರವನ್ನೂ ಕೊಟ್ಟಿರುವ ದಂಪತಿ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಾಲಕರಾಗಿದ್ದಾರೆ ಈ ಜೋಡಿ.

    ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕಳೆದ ಜೂನ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದ್ದರು. ತಾವಿಷ್ಟಪಟ್ಟ ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ಧರು. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಮಾರ್ಚ್ ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದರೂ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬ ಸುದ್ದಿಯೂ ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಸುದ್ದಿ ಆಯಿತು. ಅದು ಕೂಡ ಇದೀಗ ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಅದನ್ನೂ ನಿಜ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಈ ದಂಪತಿ ಹನಿಮೂನ್ ಗೆ ಹೋದಾಗಲೂ ಮಗುವಿನ ಪಾದಗಳಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆಗಲೂ ಕೂಡ ಅಷ್ಟೇ ಕುತೂಹಲಕ್ಕೆ ಕಾರಣವಾಗಿತ್ತು ಆ ಪೋಸ್ಟ್. ಇದೀಗ ಅದು ಕೂಡ ನಿಜವಾಗಿದೆ. ಅಭಿಮಾನಿಗಳು ಮತ್ತು ಆಪ್ತರು ಈ ಜೋಡಿಗೆ ಶುಭಾಶಯ ಹೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]