Tag: Viewing

  • ರಾಯಚೂರಿನಲ್ಲಿ ಸೂರ್ಯಗ್ರಹಣ ವೀಕ್ಷಣೆ: ಬಿಸ್ಕೆಟ್ ತಿಂದು ಮೌಢ್ಯಕ್ಕೆ ಬ್ರೇಕ್

    ರಾಯಚೂರಿನಲ್ಲಿ ಸೂರ್ಯಗ್ರಹಣ ವೀಕ್ಷಣೆ: ಬಿಸ್ಕೆಟ್ ತಿಂದು ಮೌಢ್ಯಕ್ಕೆ ಬ್ರೇಕ್

    ರಾಯಚೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಚೂಡಾಮಣಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಣ ಕಿರಣ ಸಂಸ್ಥೆ, ಸೂರ್ಯ ಕಿರಣ ಸಂಸ್ಥೆಯಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

    ಜೊತೆಗೆ ಸೂರ್ಯಗ್ರಹಣ ವೇಳೆ ಮೂಢನಂಬಿಕೆ ಹಾಗೂ ಮೂಢ ಆಚರಣೆಗಳ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕರಿಗೆ ಬಿಸ್ಕೆಟ್ ನೀಡಲಾಗಿದೆ. ಗ್ರಹಣ ಕುರಿತ ವೈಜ್ಞಾನಿಕ ವಿಚಾರಗಳ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ನೀಡುವ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

    ಗ್ರಹಣದ ಕ್ಷಣ ಕ್ಷಣದ ದೃಶ್ಯಗಳನ್ನು ನೋಡಿ ಸಾರ್ವಜನಿಕರು ಆನಂದಿಸುತ್ತಿದ್ದಾರೆ. ನಗರದಲ್ಲಿ ಮೋಡಕವಿದ ವಾತಾವರಣವಿದ್ದರೂ ಗ್ರಹಣ ವೀಕ್ಷಣೆಗೆ ಅವಕಾಶ ಸಿಕ್ಕಿದೆ. ಜಿಲ್ಲೆಯಲ್ಲಿ ಗ್ರಹಣ ಭಾಗಶಃ ಗೋಚರವಾಗುತ್ತಿದ್ದು, ಸಾರ್ವಜನಿಕರು ಗ್ರಹಣ ವೀಕ್ಷಣೆ ಮಾಡುತ್ತಿದ್ದಾರೆ.

  • 1 ನಿಮಿಷದಲ್ಲಿ 1,400 ಎಕರೆ ಕೈಗಾರಿಕಾ ಪ್ರದೇಶ ವೀಕ್ಷಿಸಿ ಕಾಲ್ಕಿತ್ತ ಸಚಿವ ಜಾರ್ಜ್!

    1 ನಿಮಿಷದಲ್ಲಿ 1,400 ಎಕರೆ ಕೈಗಾರಿಕಾ ಪ್ರದೇಶ ವೀಕ್ಷಿಸಿ ಕಾಲ್ಕಿತ್ತ ಸಚಿವ ಜಾರ್ಜ್!

    ಚಾಮರಾಜನಗರ: ಭಾರೀ ಮತ್ತು ಮಧ್ಯಮ ಕೈಗಾರಿಕೆ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಕೇವಲ ಒಂದು ನಿಮಿಷದಲ್ಲೇ 1,400 ಎಕರೆ ಕೈಗಾರಿಕಾ ಪ್ರದೇಶವನ್ನು ಪರಿಶೀಲನೆ ಮಾಡಿ ಕಾಲ್ಕಿತ್ತಿದ್ದಾರೆ.

    ಗಡಿ ಜಿಲ್ಲೆ ಚಾಮರಾಜನಗರದ ಕೆಲ್ಲಂಬಳ್ಳಿ ಹಾಗೂ ಬದನಗುಪ್ಪೆ ಕೈಗಾರಿಕಾ ಪ್ರದೇಶವನ್ನು ವೀಕ್ಷಿಸಲು ಜಾರ್ಜ್ ಬರುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು. ಅಧಿಕಾರಿಗಳು ಒಂದು ವಾರದಿಂದ ಇಲ್ಲಿನ ಸಮಸ್ಯೆಗಳನ್ನು ಹಾಗೂ ಪರಿಹಾರವನ್ನು ಪಟ್ಟಿಮಾಡಿಕೊಂಡು ಸ್ಥಳ ವೀಕ್ಷಣೆಗೆ ಸಜ್ಜಾಗಿದ್ದರು. ಇದನ್ನೂ ಓದಿ: ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ

    ನಿಗದಿಯಂತೆ ಆಗಮಿಸಿದ ಜಾರ್ಜ್ 1,400 ಎಕರೆ ಕೈಗಾರಿಕಾ ಪ್ರದೇಶವನ್ನು ಕೇವಲ ಒಂದೇ ನಿಮಿಷದಲ್ಲಿ ವೀಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಂದಿಳಿದ ಜಾರ್ಜ್ ಸಚಿವ ಕೈ ಕುಲುಕಿ ಹಾರ ಹಾಕಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಈಗ ಜಾರ್ಜ್ ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಕಾಟಚಾರಕ್ಕೆ ಕೈಗಾರಿಕಾ ಪ್ರದೇಶದ ಪರಿಶೀಲನೆ ನಡೆಸಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.