Tag: Viewers

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ನವದೆಹಲಿ: ಸೆಪ್ಟೆಂಬರ್ 19ರಿಂದ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದೆ.

    ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಐಪಿಎಲ್, ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈ ನಡುವೆ ಐಪಿಎಲ್ ಅನ್ನು ಈ ಬಾರೀ ರದ್ದು ಮಾಡಲಾಗುತ್ತದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಬಿಸಿಸಿಐ ಈ ಬಾರಿಯ ಐಪಿಎಲ್ ಅನ್ನು ನಡೆಸಲೇಬೇಕು ಎಂದು ಪಣತೊಟ್ಟು ಯುಎಇಯಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ಆರಂಭ ಮಾಡಿತ್ತು. ಅದರ ಪ್ರತಿಫಲ ಎಂಬಂತೆ ಐಪಿಎಲ್ ತನ್ನ ಆರಂಭಿಕ ಪಂದ್ಯದಲ್ಲೇ ಬಹು ದೊಡ್ಡ ದಾಖಲೆ ಬರೆದಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು, ಡ್ರೀಮ್ 11 ಐಪಿಎಲ್ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ, ಐಪಿಎಲ್ ಆರಂಭಿಕ ಪಂದ್ಯವನ್ನು ಸುಮಾರು 20 ಕೋಟಿ ಜನರು ಆನ್‍ಲೈನ್ ಮತ್ತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಕ್ರೀಡಾ ಟೂರ್ನಿಯ ಮೊದಲ ಪಂದ್ಯವನ್ನು ಇಷ್ಟೊಂದು ಜನರು ವೀಕ್ಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಟ್ವೀಟ್ ಮಾಡಿದ್ದು, ಧನ್ಯವಾದಗಳು ಇಂಡಿಯಾ ಇದು ಡ್ರೀಮ್ 11 ಐಪಿಎಲ್‍ನಲ್ಲಿ ಡ್ರೀಮ್ ಆರಂಭವಾಗಿದೆ. ಇಡೀ ಐಪಿಎಲ್ ಇತಿಹಾಸದಲ್ಲೇ ಟಿವಿ ಮತ್ತು ಡಿಜಿಟೆಲ್ ಮಾಧ್ಯಮದಲ್ಲಿ ಅತೀ ಹೆಚ್ಚು ಜನರು ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಮುಂಬೈ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯವನ್ನು 200 ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.

    ಐಪಿಎಲ್ ಆರಂಭಿಕ ಪಂದ್ಯದಲ್ಲಿ ಐಪಿಎಲ್‍ನ ಜನಪ್ರಿಯ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕೊರೊನಾ ಸಮಯದಲ್ಲಿ ಯಾವುದೇ ಮನರಂಜನೆ ಇಲ್ಲದೇ ಬೇಸತ್ತಿದ್ದ ಜನರು, ಆರಂಭಿಕ ಪಂದ್ಯವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಐಪಿಎಲ್ ಹೊಸ ದಾಖಲೆ ಬರೆಯಲು ದಾರಿ ಮಾಡಿಕೊಟ್ಟಿದ್ದಾರೆ.

    ಸೆಪ್ಟಂಬರ್ 19ರಂದು ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಜಯಭೇರಿ ಭಾರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಮುಂಬೈ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಅದರಂತೆ ನಿಗದಿತ 20 ಓವರ್ ಗಳಲ್ಲಿ ಮುಂಬೈ ಕೇವಲ 162 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಅವರ ಅಮೋಘ ಅರ್ಧ ಶತಕದಿಂದ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು.

  • ರಾಯಚೂರಿನ ಮೋಡದ ಮರೆಯಲ್ಲೂ ಗೋಚರಿಸಿದ ಕಂಕಣ ಸೂರ್ಯ ಗ್ರಹಣ

    ರಾಯಚೂರಿನ ಮೋಡದ ಮರೆಯಲ್ಲೂ ಗೋಚರಿಸಿದ ಕಂಕಣ ಸೂರ್ಯ ಗ್ರಹಣ

    ರಾಯಚೂರು: ಜಿಲ್ಲೆಯಲ್ಲಿ ಹಲವೆಡೆ ಮೋಡ ಕವಿದ ವಾತಾವರಣದ ಮಧ್ಯೆಯೂ ಸೂರ್ಯ ಗ್ರಹಣ ಗೋಚರಿಸಿದೆ. ನಗರದ ಅಂಬೇಡ್ಕರ್ ವೃತ್ತ, ವಿಜ್ಞಾನ ಕೇಂದ್ರ, ಮಾವಿನಕೆರೆ ಸೇರಿ ಹಲವೆಡೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

    ಅಂಬೇಡ್ಕರ್ ವೃತ್ತದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸೇರಿ ವಿವಿಧ ಸಂಸ್ಥೆಗಳು ಗ್ರಹಣ ವೀಕ್ಷಣೆಗೆ ಸೌರ ಕನ್ನಡಕ, ಟೆಲಿಸ್ಕೋಪ್ ವ್ಯವಸ್ಥೆ ಮಾಡಿದ್ದವು. ಜೊತೆಗೆ ಗ್ರಹಣ ವೇಳೆ ಮೂಢನಂಬಿಕೆ ಆಚರಣೆ ಬೇಡ ಅಂತ ಸಾರ್ವಜನಿಕರಿಗೆ ಫಲಾಹಾರ ನೀಡಿದರು.

    ಗ್ರಹಣದ ಬಗ್ಗೆ ಸಂಪೂರ್ಣ ಮಾಹಿತಿಯಿರುವ ಫ್ಲೆಕ್ಸ್ ಗಳನ್ನ ಹಾಕಿ ಜನರಿಗೆ ಮಾಹಿತಿ ನೀಡಲಾಯಿತು. ನೇರವಾಗಿ ಸೂರ್ಯಗ್ರಹಣ ವೀಕ್ಷಿಸಬಾರದು ಅಂತ ಟಿವಿ ಪರದೆ ಮೇಲೆ ಗ್ರಹಣದ ದೃಶ್ಯಗಳನ್ನು ತೋರಿಸಲಾಯಿತು.

    ಮೋಡಕವಿದ ವಾತಾವರಣವಿದ್ದರಿಂದ 10 ಗಂಟೆಯ ವೇಳೆಗೆ ಗ್ರಹಣ ಗೋಚರವಾಯಿತು. ಗ್ರಹಣ ವೀಕ್ಷಣೆ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ಉಡುಪಿಯಲ್ಲಿ ಕಂಕಣ ಸೂರ್ಯಗ್ರಹಣ ಕಂಡು ಜನರಲ್ಲಿ ಹರ್ಷ- 93.2 ಗ್ರಹಣ ದಾಖಲು

    ಉಡುಪಿಯಲ್ಲಿ ಕಂಕಣ ಸೂರ್ಯಗ್ರಹಣ ಕಂಡು ಜನರಲ್ಲಿ ಹರ್ಷ- 93.2 ಗ್ರಹಣ ದಾಖಲು

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಶೇ. 93.2ರಷ್ಟು ಸೂರ್ಯ ಗ್ರಹಣ ಗೋಚರವಾಗಿದೆ. ರಾಜ್ಯದ ಅತೀ ಹೆಚ್ವು ಗ್ರಹಣಗೋಚರ ಸ್ಥಳಗಳಲ್ಲಿ ಉಡುಪಿಯೂ ಒಂದಾಗಿದೆ.

    ಜಿಲ್ಲೆಯಲ್ಲಿ 9.24 ನಿಮಿಷಕ್ಕೆ ಗ್ರಹಣ ಪೀಕ್ ಲೆವೆಲ್ ತಲುಪಿತ್ತು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಅಮೆಚೂರ್ ಆಸ್ಡ್ರೋನಾಮರ್ಸ್ ಕ್ಲಬ್ ಆಯೋಜಿಸಿದ್ದ ಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾದರು. ಮಕ್ಕಳು, ಮಹಿಳೆಯರು, ಯುವಕ ಯುವತಿಯರು ಅತೀ ಹೆಚ್ಚು ಸಂಖ್ಯೆಯಲ್ಲಿ ಗ್ರಹಣ ವೀಕ್ಷಣೆ ಮಾಡಿದರು.

    ಗ್ರಹಣ ತನ್ನ ಅಂತಿಮ ಘಟ್ಟ ತಲುಪಿದಾಗ ಜನರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಬಂದ ಎಲ್ಲರಿಗೂ ಗ್ರಹಣವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಪಬ್ಲಿಕ್ ಹೀರೋ ಎಪಿ ಭಟ್ ಮಾಡಿದ್ದರು. ಗ್ರಹಣ ಕಂಕಣದತ್ತ ಬರುತ್ತಿದ್ದ ಸಂದರ್ಭ ಮಾತನಾಡಿದ ಅವರು, ಉಡುಪಿಯಲ್ಲಿ ಬೆಳಗ್ಗೆಯೇ ಕತ್ತಲಾಗುತ್ತಿದೆ. ಇದೊಂದು ಖಗೋಳ ಕೌತುಕ ಎಂದರು. 64 ವರ್ಷದ ಬಳಿಕ ಬರುವ ಈ ವಿದ್ಯಮಾನ ಮಿಸ್ ಮಾಡಿಕೊಳ್ಳಬಾರದು ಎಂದು ರಾಜ್ಯದ ಲಕ್ಷ ಜನ ಗ್ರಹಣ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು.

    ಗ್ರಹಣ ವೀಕ್ಷಿಸಿದ ಧಾತ್ರಿ ಮತ್ತು ನಿಧಿ ಮಾತನಾಡಿ, ಗ್ರಹಣ ಅಂದಾಗ ಕುತೂಹಲವಿತ್ತು, ಭಯ ಆಗಿಲ್ಲ. ಪಿಪಿಸಿಯಲ್ಲಿ ಗ್ರಹಣ ವೀಕ್ಷಣೆ ವ್ಯವಸ್ಥೆ ಬಹಳ ಚೆನ್ನಾಗಿದೆ. ನಾವು ವಿಜ್ಞಾನ ನಂಬುವವರು. ಜ್ಯೋತಿಷಿಗಳು ಹೇಳುವುದನ್ನು ನಂಬಲ್ಲ ಅಂತ ಹೇಳಿದರು. ಇಡೀ ಪ್ರಕ್ರಿಯೆಯ ಫೋಟೋ ತೆಗೆದುಕೊಂಡಿದ್ದೇವೆ. ಇದೊಂದು ಮರೆಯಲಾಗದ ದಿನ ಅಂತ ಸಂತೋಷ ಹಂಚಿಕೊಂಡರು.

  • ಪುಟ್ಟಗೌರಿ ಧಾರಾವಾಹಿ ಮುಗಿಯ್ತಿದೆ ಎಂದು ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್

    ಪುಟ್ಟಗೌರಿ ಧಾರಾವಾಹಿ ಮುಗಿಯ್ತಿದೆ ಎಂದು ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಗೌರಿ ಮದುವೆ’ ಮುಗಿಯುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ ಧಾರಾವಾಹಿ ಮುಗಿಯುತ್ತಿದೆ ಎಂದು ಖುಷಿಯಲ್ಲಿದ್ದವರಿಗೆ ಈಗ ಶಾಕಿಂಗ್ ನ್ಯೂಸ್ ಸಿಕ್ಕಿದೆ.

    ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ನಟಿ ಗೌರಿ ಪಾತ್ರಧಾರಿಯ ರಂಜಿನಿ ರಾಘವನ್ ಸೀರಿಯಲ್‍ನಿಂದ ಹೊರಬಂದಿದ್ದಾರೆ. ರಂಜಿನಿ ಧಾರಾವಾಹಿಯಿಂದ ಹೊರಬಂದಿದ್ದಕ್ಕೆ ಪುಟ್ಟಗೌರಿ ಮದುವೆ ಮುಗಿಸುತ್ತಿದ್ದಾರೆ ಎನ್ನುವ ವದಂತಿಗೆ ಈಗ ಫುಲ್‍ಸ್ಟಾಪ್ ಬಿದ್ದಿದೆ. ಧಾರಾವಾಹಿ ಈಗಲೇ ಮುಗಿಯುವುದಿಲ್ಲ ಎಂದು ನಿರ್ದೇಶಕ ರಾಮ್. ಜಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡ ಪ್ರೇಕ್ಷಕರಿಗೆ ಪುಟ್ಟಗೌರಿ ಕಡೆಯಿಂದ ಗುಡ್ ನ್ಯೂಸ್

    ಪುಟ್ಟಗೌರಿ ಧಾರಾವಾಹಿ ಸದ್ಯಕ್ಕೆ ಮುಗಿಯಲ್ಲ. ಈ ಧಾರಾವಾಹಿ ಇನ್ನೂ ಮುಂದುವರಿಯಲಿದೆ. ಪುಟ್ಟಗೌರಿ ಮದುವೆ ಮುಗಿಯುತ್ತದೆ ಎನ್ನುವುದು ಕೇವಲ ಗಾಸಿಪ್ ಮಾತ್ರವಾಗಿದೆ. ರಂಜಿನಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಅವರು ಈ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ಅವರು ಧಾರಾವಾಹಿಯಿಂದ ಹೊರಹೋಗಿದ್ದಾರೆ ಎನ್ನುವ ಮಾತ್ರಕ್ಕೆ ನಾವು ಈ ಸೀರಿಯಲ್ ನನ್ನು ಮುಗಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಿರುತೆರೆ ವೀಕ್ಷಕರಿಗೆ ಬಿಗ್ ಶಾಕಿಂಗ್ ನ್ಯೂಸ್

    ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಒಂದು ಹೊಸ ಪಾತ್ರದ ಪರಿಚಯವಾಗಲಿದೆ. ಪುಟ್ಟಗೌರಿಯಲ್ಲಿ ಮಂಗಳ ಗೌರಿಯನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ಪುಟ್ಟಗೌರಿ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯನ್ನು ಮಂಗಳಗೌರಿಗೂ ನೀಡಲಿದ್ದೇವೆ. ಮಂಗಳಗೌರಿ ಪಾತ್ರದಿಂದ ಈ ಧಾರಾವಾಹಿಗೆ ಒಂದು ಟ್ವಿಸ್ಟ್ ಸಿಗಲಿದೆ ಎಂದು ರಾಮ್. ಜಿ ತಿಳಿಸಿದ್ದಾರೆ.

    ಪುಟ್ಟಗೌರಿ ಮದುವೆಯಿಂದ ಹೊರಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಂಜಿನಿ, ಸಿನಿಮಾದತ್ತ ಗಮನ ಹರಿಸುವ ಸಲುವಾಗಿ ಧಾರಾವಾಹಿಯಿಂದ ಹೊರಬಂದಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ನಟನೆಯ `ಟಕ್ಕರ್’ ಚಿತ್ರದಲ್ಲಿ ರಂಜಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv