Tag: vidyaranyapura

  • ಟ್ರ್ಯಾಕ್ಟರ್ ಕದ್ದು ಜೈಲು ಸೇರಿದ್ರು, ರಿಲೀಸ್ ಆಗಿ ಕಾರು ಕಳ್ಳತನಕ್ಕಿಳಿದ್ರು – ಮತ್ತೆ ಪೊಲೀಸರ ಅತಿಥಿಗಳಾದ ಕಳ್ರು!

    ಟ್ರ್ಯಾಕ್ಟರ್ ಕದ್ದು ಜೈಲು ಸೇರಿದ್ರು, ರಿಲೀಸ್ ಆಗಿ ಕಾರು ಕಳ್ಳತನಕ್ಕಿಳಿದ್ರು – ಮತ್ತೆ ಪೊಲೀಸರ ಅತಿಥಿಗಳಾದ ಕಳ್ರು!

    ಬೆಂಗಳೂರು: ಓಮ್ನಿ ಕಾರುಗಳನ್ನೇ (Car) ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ವಿದ್ಯಾರಣ್ಯಪುರ (Vidyaranyapura) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಉಮೇಶ್, ತಬ್ರೇಜ್ ಮತ್ತು ಜಬೀರ್ ಖಾನ್ ಎಂದು ಗರುತಿಸಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ಆರೋಪಿಗಳು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಓಮ್ನಿ ಕಾರನ್ನು ಕಳ್ಳತನ ಮಾಡಿದ್ದರು. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಬಂಧಿತರಿಂದ ಪೊಲೀಸರು 12 ಲಕ್ಷ ರೂ. ಮೌಲ್ಯದ 6 ಓಮ್ನಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ.

    ಟ್ರ್ಯಾಕ್ಟರ್ ಕದ್ದು ಜೈಲು ಸೇರಿದ್ದ ಗ್ಯಾಂಗ್
    ಈ ಮೂವರನ್ನು 2020ರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಕಳ್ಳತನ ಕೇಸ್‍ನಲ್ಲಿ ಬಂಧಿಸಲಾಗಿತ್ತು. ಜೈಲಿಂದ ಹೊರಬಂದ ಮೇಲೆ ಟ್ರ್ಯಾಕ್ಟರ್ ಬಿಟ್ಟು ಕಾರು ಕಳ್ಳತನಕ್ಕಿಳಿದಿದ್ದರು. ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಸಾವು

  • ನಾಯಿ ಮೇಲೆ ಯುವಕನಿಂದ ಮನಸೋ ಇಚ್ಛೆ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ನಾಯಿ ಮೇಲೆ ಯುವಕನಿಂದ ಮನಸೋ ಇಚ್ಛೆ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಬೆಂಗಳೂರು: ನಾಯಿಯ (Dog) ಮೇಲೆ ಯುವಕನೋರ್ವ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ವಿದ್ಯಾರಣ್ಯಪುರದಲ್ಲಿ (Vidyaranyapura) ನಡೆದಿದೆ.

    ನೆರೆಮನೆಯ ಯುವಕ ಮನೋಜ್ ಕುಮಾರ್ ಕೃತ್ಯವೆಸಗಿರುವುದಾಗಿ ಆರೋಪಿಸಲಾಗಿದೆ. ಮನೆಯೊಂದರ ಶೆಡ್‌ನಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಮನೋಜ್ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡು ನಿತ್ರಾಣವಾಗಿದ್ದ ನಾಯಿ 2-3 ದಿನಗಳಲ್ಲಿ ಸಾವನ್ನಪ್ಪಿದೆ. ಸಿಸಿಟಿವಿ ಪರಿಶೀಲನೆ ವೇಳೆ ಯುವಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯ ಎಕ್ಸ್ ಖಾತೆ ಹ್ಯಾಕ್

    ಘಟನೆಯ ಬಗ್ಗೆ ವಿಚಾರಿಸಿದಾಗ ನಾಯಿ ಕೋಳಿ ಹಿಡಿದ ವಿಚಾರ ಬಯಲಾಗಿದೆ. ತನ್ನ ಕೋಳಿಯನ್ನು ನಾಯಿ ಹಿಡಿದಿದೆ ಎಂದು ಯುವಕ ಹೇಳಿದ್ದಾನೆ. ಅದೇ ವಿಚಾರಕ್ಕೆ ನಾಯಿಯ ತಲೆಗೆ ಹೊಡೆದು ಯುವಕ ಗಾಯಗೊಳಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ಇದನ್ನೂ ಓದಿ: ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ

  • ನಿಮ್ಮ ರೂಮ್‍ನಲ್ಲಿ ಡ್ರಗ್ಸ್ ಇದೆ – ಪೊಲೀಸರಂತೆ ನುಗ್ಗಿ ಯುವಕರ ರೂಮ್ ದರೋಡೆ!

    ನಿಮ್ಮ ರೂಮ್‍ನಲ್ಲಿ ಡ್ರಗ್ಸ್ ಇದೆ – ಪೊಲೀಸರಂತೆ ನುಗ್ಗಿ ಯುವಕರ ರೂಮ್ ದರೋಡೆ!

    ಬೆಂಗಳೂರು: ಪೊಲೀಸರ ಸೋಗಿನಲ್ಲಿ ಯುವಕರ ರೂಮ್‍ಗೆ ನುಗ್ಗಿ ದರೋಡೆ ಮಾಡಿದ ಪ್ರಕರಣ ನಗರದ ರಾಮಚಂದ್ರಪುರದಲ್ಲಿ (Ramachandrapura) ನಡೆದಿದೆ.

    ಮುಂಜಾನೆ ಮನೆಯ ಬಾಗಿಲು ತಟ್ಟಿದ್ದ ದರೋಡೆಕೋರರು. ನಿಮ್ಮ ರೂಮ್‍ನಲ್ಲಿ ಡ್ರಗ್ಸ್ ಸೇವಿಸುವ ಬಗ್ಗೆ ಮಾಹಿತಿ ಬಂದಿದೆ. ಪರಿಶೀಲನೆ ಮಾಡಬೇಕು ಎಂದು ಪೊಲೀಸರಂತೆ ಹೇಳಿಕೊಂಡಿದ್ದಾರೆ. ಬಳಿಕ ಮನೆಯನ್ನೆಲ್ಲಾ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಆಷಾಢ ಮಾಸದ ಕೊನೆ ಶುಕ್ರವಾರ – ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ

    ಆದರೆ ದರೋಡೆಕೋರರಿಗೆ ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗಲಿಲ್ಲ. ಬಳಿಕ ಚಾಕು ತೋರಿಸಿ ಬೆದರಿಸಿ ಆನ್‍ಲೈನ್ ಮೂಲಕ 13,000 ರೂ.ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಅಲ್ಲದೇ ಯುವಕರ ಬಳಿ ಇದ್ದ ಉಂಗುರ ಹಾಗೂ ಕಿವಿಯ ರಿಂಗ್ ಕಸಿದುಕೊಂಡಿದ್ದಾರೆ.

    ನಾಲ್ವರು ಯುವಕರು ರೂಮ್‍ನಲ್ಲಿ ವಾಸವಾಗಿದ್ದು, 3 ಜನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೋರ್ವ ವಿದ್ಯಾರ್ಥಿಯಾಗಿದ್ದಾನೆ. ಯುವಕರು ವಿದ್ಯಾರಣ್ಯಪುರಂ (Vidyaranyapura) ಪೊಲೀಸ್ (Police) ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

    ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

    ಬೆಂಗಳೂರು: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಯವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಲೇಔಟ್‍ನಲ್ಲಿ ನಡೆದಿದೆ.

    ಬೆಂಗಳೂರಿನ ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಲೇಔಟ್‍ನಲ್ಲಿ ಚರಣ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಐದು ವರ್ಷಗಳಿಂದ ಯುವತಿಯೊಬ್ಬಳ್ಳನ್ನು ಚರಣ್ ಪ್ರೀತಿಸುತ್ತಿದ್ದ. ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಈ ಜೋಡಿ ಧರ್ಮಸ್ಥಳಕ್ಕೆ ಹೋಗಿದ್ದರು. ಇದನ್ನೂ ಓದಿ: ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್

    POLICE JEEP

    ಆದರೆ ಕೊನೆ ಕ್ಷಣದಲ್ಲಿ ಯುವತಿ ಮದುವೆ ಆಗೋಕೆ ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಚರಣ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

  • ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ- ರೌಡಿಶೀಟರ್ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು

    ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ- ರೌಡಿಶೀಟರ್ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಗರದ ವಿದ್ಯಾರಣ್ಯಪುರದ ರೈನ್ ಬೋ ಲೇಔಟ್‍ನಲ್ಲಿ ರೌಡಿ ಶೀಟರ್ ನಕುಲ್ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ನಕುಲ್‍ನನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ. ಆಗ ಆತ್ಮರಕ್ಷಣೆಗೆ ಎಸ್‍ಐ ಪುನೀತ್ ನಕುಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಆರೋಪಿ ನಕುಲ್ 2016ರ ಫೆಬ್ರವರಿಯಲ್ಲಿ ನಡೆದಿದ್ದ ಗ್ರಾಮಪಂಚಾಯ್ತಿ ಸದಸ್ಯೆ ಗಂಡನ ಕೊಲೆಯ ಪ್ರಮುಖ ಆರೋಪಿ ಆಗಿದ್ದಾನೆ. ಶುಕ್ರವಾರದಂದು ಜೋಸೆಫ್ ಎಂಬಾತನನ್ನು ಹತ್ಯೆ ಮಾಡಲು ಯತ್ನಿಸಿ, ಸಂಜೆ 6 ಗಂಟೆ ಸಮಯದಲ್ಲಿ ಜೋಸೆಫ್ ಮನೆಗೆ ನುಗ್ಗಿ ಗಲಾಟೆ ಕೂಡ ಮಾಡಿದ್ದ.

    ದೂರಿನ ಮೇರೆಗೆ ನಕುಲ್‍ನನ್ನ ಬಂಧಿಸಲು ಹೋದಾಗ ಪೇದೆ ಸಿದ್ದು ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ನಕುಲ್ ಕಾಲಿಗೆ ಗುಂಡು ಹಾರಿಸಿ ಆತನನ್ನ ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಆರೋಪಿ ನಕುಲ್ ಹಾಗು ಪೇದೆ ಸಿದ್ದು ಅವ್ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.