Tag: vidyapeeta

  • ‘ವಿದ್ಯಾಪೀಠ’ಕ್ಕೆ ಬನ್ನಿ, ಉಚಿತವಾಗಿ ಕಾಲೇಜುಗಳ ಮಾಹಿತಿ ಪಡೆಯಿರಿ

    ‘ವಿದ್ಯಾಪೀಠ’ಕ್ಕೆ ಬನ್ನಿ, ಉಚಿತವಾಗಿ ಕಾಲೇಜುಗಳ ಮಾಹಿತಿ ಪಡೆಯಿರಿ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ಮುಂದೇನು? ಯಾವ ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್ ಗಳಿವೆ? ಈಗಿನ ಎಜುಕೇಶನ್ ಟ್ರೆಂಡ್ ಏನು? ಇತ್ಯಾದಿ ಪ್ರಶ್ನೆ, ಗೊಂದಲ ನಿಮ್ಮಲ್ಲಿದ್ಯಾ? ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಎಲ್ಲ ಗೊಂದಲ, ಪ್ರಶ್ನೆಗಳಿಗೆ ಪಬ್ಲಿಕ್ ಟಿವಿಯ ವಿದ್ಯಾಪೀಠದಲ್ಲಿ ಪರಿಹಾರ ಸಿಗಲಿದೆ.

    ಪಬ್ಲಿಕ್ ಟಿವಿ ಮೂರು ದಿನಗಳ ಕಾಲ `ವಿದ್ಯಾಪೀಠ’ದ ಹೆಸರಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮನ್ನು ಆಯೋಜಿಸಿದೆ. ಬೆಂಗಳೂರು ನಗರದಲ್ಲಿರುವ ಅರಮನೆ ಮೈದಾನದಲ್ಲಿ ಮೇ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

    ಎರಡು ಬಾರಿ ಯಶಸ್ವಿಯಾಗಿ ಆಯೋಜನೆಗೊಂಡಿದ್ದ ವಿದ್ಯಾಪೀಠ ಈ ಬಾರಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿಂದಿನ ಎರಡು ಕಾರ್ಯಕ್ರಮ 2 ದಿನಗಳ ಕಾಲ ನಡೆದಿತ್ತು. ಎರಡು ದಿನಕ್ಕೆ ಭಾರೀ ಸ್ಪಂದನೆ ಸಿಕ್ಕಿದ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಕಾಲ ವಿದ್ಯಾಪೀಠ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳು ಆಯೋಜನೆಗೊಂಡಿದೆ.

    ಯಾರೆಲ್ಲ ಭಾಗವಹಿಸುತ್ತಾರೆ?
    – ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್
    – ಆರ್ಕಿಟೆಕ್ಚರ್
    – ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು
    – ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು
    – ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್
    – ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
    – ಸಮೂಹ ಸಂವಹನ
    – ಎಂಬಿಎ ಇನ್‍ಸ್ಟಿಟ್ಯೂಷನ್
    – ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು

    ಯಾರೆಲ್ಲ ಆಗಮಿಸಬಹುದು?
    – ಕೌನ್ಸೆಲರ್ ಗಳು
    – ಶಿಕ್ಷಣ ತಜ್ಞರು
    – ಹಣಕಾಸು ಸಲಹೆಗಾರರು
    – ಪೋಷಕರು
    – ಪಿಯುಸಿ ವಿದ್ಯಾರ್ಥಿಗಳು
    – ಪದವಿ ಓದುತ್ತಿರುವ ವಿದ್ಯರ್ಥಿಗಳು
    – ಉದ್ಯೋಗದಲ್ಲಿರುವ ಉದ್ಯೋಗಿಗಳು

    ಏನೆಲ್ಲ ಸ್ಪರ್ಧೆ ಇರಲಿದೆ?
    ಚರ್ಚಾ ಸ್ಪರ್ಧೆ, ರಸಪ್ರಶ್ನೆ (ಕ್ವಿಜ್), ಗಾಯನ ಸ್ಪರ್ಧೆ, ಪ್ರೊಜೆಕ್ಟ್ ಅನಾವರಣ, ಪೇಂಟಿಂಗ್ ಸ್ಪರ್ಧೆ ನಡೆಯಲಿದೆ. ಈ ಎಲ್ಲ ಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದ್ದು, 17 ರಿಂದ 22 ವರ್ಷ ವಯಸ್ಸಿನ ಒಳಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. 95389 77753 (ಅಕ್ಷಯ್), 99000 30944 (ನಿತಿನ್) ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಮತ್ತು ಹೆಸರನ್ನು ನೊಂದಾಯಿಸಿಕೊಳ್ಳಬಹುದು.

    ದಿನಾಂಕ : ಮೇ 10, 11, 12
    ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
    ಸಮಯ : ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ

    ಯಾವೆಲ್ಲ ಸ್ಟಾಲ್‍ಗಳು ಇರಲಿವೆ?
    ಆಚಾರ್ಯ ಐಟಿ, ಆರಾರ್ ಇನ್‍ಸ್ಟಿಟ್ಯೂಷನ್, ವಿಷನ್ ಪಿಯು ಕಾಲೇಜ್, ಸಿಂಧಿ ಕಾಲೇಜ್, ಕಮ್ಯೂನಿಟಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಕೆಎಸ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಇಂಡಿಯನ್ ಅಕಾಡೆಮಿ, ಬೃಂದಾವನ್ ಕಾಲೇಜ್, ವಿಬಿಆರ್ ಅಕಾಡೆಮಿ, ವೇಮನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಐಎಸ್‍ಬಿಆರ್ ಕಾಲೇಜ್, ನಿಟ್ಟೆ ಮೀನಾಕ್ಷಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ ಕಾಲೇಜ್ ಗ್ರೂಪ್ ಇನ್‍ಸ್ಟಿಟ್ಯೂಷನ್ಸ್, ಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಎಂಎಸ್ ರಾಮಯ್ಯ ಫೌಂಡೇಶನ್, ಸಪ್ತಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಐಡಿಪಿ ಎಜುಕೇಷನ್, ಏಟ್ರಿಯಾ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ಅರಿಹಂತ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಸ್ಕೂಲಾಸ್ಟಿಕ್ ಓವರ್ಸೀಸ್ ಎಜುಕೇಶನ್, ಶೇಷಾದ್ರಿಪುರಂ ಕಾಲೇಜ್, ಯುನಿವರ್ಸಲ್ ಕೋಚಿಂಗ್ ಸೆಂಟರ್ ಇನ್ನಿತರ ಕಾಲೇಜುಗಳು ಭಾಗವಹಿಸಲಿವೆ.

    ಪ್ಲಾಟಿನಂ ಪ್ರಯೋಜಕರು:
    ರೇವಾ ವಿಶ್ವವಿದ್ಯಾಲಯ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ಗೀತಂ ವಿಶ್ವವಿದ್ಯಾಲಯ, ಶ್ರೀ ವೆಂಕಟೇಶ್ವರ ಕಾಲೇಜ್ ಆಫ್ ಎಂಜಿನಿಯರಿಂಗ್

    ಗೋಲ್ಡ್ ಪ್ರಾಯೋಜಕರು:
    ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ರಾಮಯ್ಯ ಇನ್‍ಸ್ಟಿಟ್ಯೂಷನ್, ಏಮ್ಸ್ ಇನ್‍ಸ್ಟಿಟ್ಯೂಷನ್, ಸಿಎಂಆರ್ ವಿಶ್ವವಿದ್ಯಾಲಯ, ಎಕ್ಸೆಲ್ ಅಕಾಡೆಮಿಕ್ಸ್

    ಸಿಲ್ವರ್ ಪ್ರಾಯೋಜಕರು:
    ರಾಜರಾಜೇಶ್ವರಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಸೌಂದರ್ಯ ಕಾಲೇಜ್, ಪಿಇಎಸ್ ವಿಶ್ವವಿದ್ಯಾಲಯ, ಆಚಾರ್ಯ ಬೆಂಗಳೂರು ಬಿ ಸ್ಕೂಲ್, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಆಕ್ಸ್‍ಫರ್ಡ್ ಕಾಲೇಜ್, ಕೃಪಾನಿಧಿ ಕಾಲೇಜ್, ದಯಾನಂದ ಸಾಗರ್ ವಿಶ್ವವಿದ್ಯಾಲಯ, ಲೋಹಿತ್ ಅಕಾಡೆಮಿ ಕಾಲೇಜ್ ಆಫ್ ಕಾಮರ್ಸ್.

    ಕ್ರಿಯೇಟಿವ್ ಸ್ಟಾಲ್:
    ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್

  • ಬೆಂಗ್ಳೂರಲ್ಲಿ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಚಾಲನೆ

    ಬೆಂಗ್ಳೂರಲ್ಲಿ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಚಾಲನೆ

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜಿಸಿರುವ ವಿದ್ಯಾಪೀಠ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಉದ್ಘಾಟಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ಮುಂದೇನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗಲಿದೆ. ಯಾವ ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್ ಗಳಿವೆ? ಈಗಿನ ಎಜ್ಯುಕೇಶನ್ ಟ್ರೆಂಡ್ ಏನು? ವಿವಿಧ ಕೋರ್ಸ್ ಬಗ್ಗೆ ಅತಿಥಿಗಳ ಉಪನ್ಯಾಸ ಅಲ್ಲದೇ ಶಿಕ್ಷಣ ಸಂಸ್ಥೆಗಳ ಮಾಹಿತಿ ಕೇಂದ್ರಗಳು ಇಲ್ಲಿ ಇರಲಿವೆ. ಹೀಗಾಗಿ ನಿಮಗೆ ಯಾವುದೇ ಕೋರ್ಸ್ ಬಗ್ಗೆ ಸಂದೇಹ ಇದ್ದರೆ ಅಲ್ಲೇ ಪರಿಹಾರ ಮಾಡಿಕೊಳ್ಳಬಹುದು.

    ಅನಿಮೇಶನ್,ಮೀಡಿಯಾ, ಗೇಮಿಂಗ್, ಕೋಚಿಂಗ್ ಇನ್ಸಿಟ್ಯೂಷನ್, ಕಾಮರ್ಸ್ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್, ಮೆಡಿಕಲ್, ಫ್ಯಾಶನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಮಾಸ್ ಕಮ್ಯೂನಿಕೇಶನ್, ಎಂಬಿಎ ಅಷ್ಟೇ ಅಲ್ಲದೆ ವಿದೇಶಿ ಶಿಕ್ಷಣ ಸಂಸ್ಥೆಗಳ ಬಗ್ಗೆಯೂ ಇಲ್ಲಿ ಮಾಹಿತಿ ಸಿಗಲಿದೆ. ಕರ್ನಾಟಕ ಸಿಇಟಿ, ನೀಟ್ ಪರೀಕ್ಷೆ, ಕಾಮೆಡ್ ಕೆ ಕೌನ್ಸಿಲಿಂಗ್ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಇದರಲ್ಲಿ ಭಾಗವವಹಿಸುತ್ತಿದ್ದು, ವಿವಿಧ ಸ್ಕಾಲರ್ ಶಿಪ್ ಬಗ್ಗೆಯೂ ಮಾಹಿತಿ ಸಿಗಲಿದೆ.

    ಗಾರ್ಡನ್ ಸಿಟಿ ಯುನಿವರ್ಸಿಟಿ ಕುಲಪತಿ ಡಾ.ವಿ.ಜಿಜೋಸೆಫ್, ಕೇಂಬ್ರಿಡ್ಜ್ ಇನ್ಸ್‍ಟಿಟ್ಯೂಟ್ ಟೆಕ್ನಾಲಜಿ ಚೇರ್ಮನ್ ಡಿ.ಕೆ.ಮೋಹನ್, ಸಿಎಂಆರ್ ಯೂನಿವರ್ಸಿಟಿ ಶಿವಕುಮಾರ್, ಮನೋಹರ್ ನಾಯ್ಡು, ಡಾ.ರಮೇಶ್, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ, ಪಬ್ಲಿಕ್ ಟಿವಿ ಸಿಒಒ ಸಿ.ಕೆ.ಹರೀಶ್, ಪಬ್ಲಿಕ್ ಟಿವಿ ಸಿಇಒ ಅರುಣ್ ಉಪಸ್ಥಿತರಿದ್ದಾರೆ. ಬೆಳಗ್ಗೆ 9.30ರಿಂದ ಆರಂಭಗೊಂಡು ಸಂಜೆ 6 ಗಂಟೆಯವರೆಗೂ ಈ ಕಾರ್ಯಕ್ರಮ ನಡೆಯಲಿದೆ.

  • ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಬನ್ನಿ- ನಿಮ್ಮ ಗೊಂದಲವನ್ನು ಪರಿಹರಿಸಿಕೊಳ್ಳಿ

    ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಬನ್ನಿ- ನಿಮ್ಮ ಗೊಂದಲವನ್ನು ಪರಿಹರಿಸಿಕೊಳ್ಳಿ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ಮುಂದೇನು? ಯಾವ ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್ ಗಳಿವೆ? ಈಗಿನ ಎಜ್ಯುಕೇಶನ್ ಟ್ರೆಂಡ್ ಏನು? ಇತ್ಯಾದಿ ಪ್ರಶ್ನೆ, ಗೊಂದಲ ನಿಮ್ಮಲ್ಲಿದ್ಯಾ? ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಎಲ್ಲ ಗೊಂದಲ, ಪ್ರಶ್ನೆಗಳಿಗೆ ಪಬ್ಲಿಕ್ ಟಿವಿಯ ವಿದ್ಯಾಪೀಠದಲ್ಲಿ ಪರಿಹಾರ ಸಿಗಲಿದೆ.

    ಹೌದು. ಪಬ್ಲಿಕ್ ಟಿವಿ ಆಯೋಜಿಸುತ್ತಿರುವ ವಿದ್ಯಾಪೀಠ ಕಾರ್ಯಕ್ರಮ ಯಶಸ್ವಿ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಕಳೆದ ಬಾರಿ ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರತಿಷ್ಠಿತ ಕಾಲೇಜುಗಳಿಂದ ಕೋರ್ಸ್‍ಗಳ ಬಗ್ಗೆ ಮಾರ್ಗದರ್ಶನವನ್ನು ಪಡೆದಿದ್ದರು. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯಾಪೀಠ ಕಾರ್ಯಕ್ರಮ ಈ ವರ್ಷವೂ ಎಪ್ರಿಲ್‍ನಲ್ಲಿ ನಡೆಯಲಿದೆ.

    ಏಪ್ರಿಲ್ 14, 15 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರ್‍ನಲ್ಲಿ ವಿದ್ಯಾಪೀಠ ಕಾರ್ಯಕ್ರಮ ಆಯೋಜನೆಯಾಗಿದೆ. ಬೆಳಗ್ಗೆ 9.30ರಿಂದ ಆರಂಭಗೊಂಡು ಸಂಜೆ 6 ಗಂಟೆಯವರೆಗೂ ಈ ಕಾರ್ಯಕ್ರಮ ನಡೆಯಲಿದೆ. ವಿವಿಧ ಕೋರ್ಸ್ ಬಗ್ಗೆ ಅತಿಥಿಗಳ ಉಪನ್ಯಾಸ ಅಲ್ಲದೇ ಶಿಕ್ಷಣ ಸಂಸ್ಥೆಗಳ ಮಾಹಿತಿ ಕೇಂದ್ರಗಳು ಇಲ್ಲಿ ಇರಲಿವೆ. ಹೀಗಾಗಿ ನಿಮಗೆ ಯಾವುದೇ ಕೋರ್ಸ್ ಬಗ್ಗೆ ಸಂದೇಹ ಇದ್ದರೆ ಅಲ್ಲೇ ಪರಿಹಾರ ಮಾಡಿಕೊಳ್ಳಬಹುದು.

    ಅನಿಮೇಶನ್,ಮೀಡಿಯಾ, ಗೇಮಿಂಗ್, ಕೋಚಿಂಗ್ ಇನ್ಸಿಟ್ಯೂಷನ್, ಕಾಮರ್ಸ್ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್,ಮೆಡಿಕಲ್, ಫ್ಯಾಶನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಮಾಸ್ ಕಮ್ಯೂನಿಕೇಶನ್, ಎಂಬಿಎ ಅಷ್ಟೇ ಅಲ್ಲದೆ ವಿದೇಶಿ ಶಿಕ್ಷಣ ಸಂಸ್ಥೆಗಳ ಬಗ್ಗೆಯೂ ಇಲ್ಲಿ ಮಾಹಿತಿ ಸಿಗಲಿದೆ.

    ಕರ್ನಾಟಕ ಸಿಇಟಿ, ನೀಟ್ ಪರೀಕ್ಷೆ, ಕಾಮೆಡ್ ಕೆ ಕೌನ್ಸಿಲಿಂಗ್ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಇದರಲ್ಲಿ ಭಾಗವವಹಿಸುತ್ತಿದ್ದು, ವಿವಿಧ ಸ್ಕಾಲರ್ ಶಿಪ್ ಬಗ್ಗೆಯೂ ಮಾಹಿತಿ ಸಿಗಲಿದೆ.

    ಉಚಿತ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಬಹುದು. ಇನ್ಯಾಕೆ ತಡ ಈಗಲೇ ಏಪ್ರಿಲ್ 14, 15 ಶನಿವಾರ, ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರ್ ನಲ್ಲಿ ನಡೆಯಲಿರುವ ವಿದ್ಯಾಪೀಠ ಕಾರ್ಯಕ್ರಮಕ್ಕೆ ಬನ್ನಿ ಉಜ್ವಲ ಭವಿಷ್ಯದ ಕನಸನ್ನ ನನಸು ಮಾಡಿಕೊಳ್ಳಿ.

  • ಶಿಕ್ಷಣದ ಸಮಗ್ರ ಮಾಹಿತಿ – ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ ಎಜುಫೆಸ್ಟ್ ಗೆ ಕ್ಷಣಗಣನೆ

    ಶಿಕ್ಷಣದ ಸಮಗ್ರ ಮಾಹಿತಿ – ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ ಎಜುಫೆಸ್ಟ್ ಗೆ ಕ್ಷಣಗಣನೆ

    ಬೆಂಗಳೂರು: ನಿಮ್ಮ ಹೆಮ್ಮೆಯ ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ “ವಿದ್ಯಾಪೀಠ” ಎಜುಕೇಶನ್ ಫೆಸ್ಟ್ ಗೆ ಇಂದು ಚಾಲನೆ ದೊರಕಲಿದೆ. ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿರೋ ಈ ಫೇಸ್ಟ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲೂ ಮಾಹಿತಿಗಳ ಭಂಡಾರವನ್ನೇ ನಿಮ್ಮ ಮುಂದೆ ಹೊತ್ತು ತರಲಿದೆ.

    ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು, ವಿದ್ಯಾದೇಗುಲಗಳೆಂದು ಕರೆಯಲ್ಪಡುವ ಶಿಕ್ಷಣ ಸಂಸ್ಥೆಗಳು ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಿರುವ ಕಾರ್ಯಕ್ರಮವೇ ನಿಮ್ಮ ಪಬ್ಲಿಕ್ ಟಿವಿಯ ಹೆಮ್ಮೆಯ ಕಾರ್ಯಕ್ರಮ ವಿದ್ಯಾಪೀಠ. ಪಬ್ಲಿಕ್ ಟಿವಿ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿರೋ ಈ ಮೆಗಾ ಎಜುಕೇಶನ್ ಈವೆಂಟ್‍ಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಉನ್ನತ ವ್ಯಾಸಂಗದ ಆಸೆ ಹೊತ್ತ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಭವಿಷ್ಯದ ಹಾದಿಯನ್ನು ತೋರಿಸುವ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದ ಪಟ್ಟಿ ಇಂತಿದೆ.

    * 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗಿ.
    * 20ಕ್ಕೂ ಹೆಚ್ಚು ಕೋರ್ಸ್‍ಗಳ ಬಗ್ಗೆ ಮಾಹಿತಿ.
    * 10 ಮಂದಿ ನುರಿತ ಶಿಕ್ಷಣ ತಜ್ಞರಿಂದ ವಿಚಾರ ಸಂಕಿರಣ.
    * ಸಿಇಟಿ, ಕಾಮೆಡ್ ಕೆ, ನೀಟ್ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ.
    * ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೂ ಮಾರ್ಗದರ್ಶನ.

    ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸುವ ನುರಿತ ಶಿಕ್ಷಣ ತಜ್ಞರು:

    1. ಶ್ರೀ ಗಂಗಾಧರಯ್ಯ: ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ
    ವಿಷಯ : ಸಿಇಟಿ ಬಗ್ಗೆ ಮಾಹಿತಿ
    ಸಮಯ : ಬೆಳಗ್ಗೆ 11.30 – 12.15 ಗಂಟೆ

    2. ಶ್ರೀ ಡಾ.ಎಸ್.ಕುಮಾರ್: ಕಾರ್ಯನಿರ್ವಾಹಕ ಕಾರ್ಯದರ್ಶಿ, ಕಾಮೆಡ್-ಕೆ
    ವಿಷಯ : ಕಾಮೆಡ್-ಕೆ ಬಗ್ಗೆ ಮಾಹಿತಿ
    ಸಮಯ : ಮಧ್ಯಾಹ್ನ 12.15 – 1.00 ಗಂಟೆ

    3. ಡಾ.ಎಚ್.ಎಸ್ ನಾಗರಾಜ: ಶಿಕ್ಷಣ ತಜ್ಞರು
    ವಿಷಯ : ಕೆರಿಯರ್ ಆಪರ್ಚುನಿಟಿ ಆಫ್ಟರ್ +2
    ಸಮಯ : ಮಧ್ಯಾಹ್ನ 3 – 4 ಗಂಟೆ

    4. ಡಾ.ಗುರುರಾಜ್ ಕರ್ಜಗಿ: ಅಧ್ಯಕ್ಷರು, ಅಕಾಡೆಮಿ ಫಾರ್ ಕ್ರಿಯೇಟೀವ್ ಟೀಚಿಂಗ್
    ವಿಷಯ : ಆಪೊರ್ಚುನಿಟಿಸ್ ಬಿಹೈಂಡ್ ಟ್ರೆಡಿಷನಲ್ ಕೆರಿಯರ್
    ಸಮಯ : ಮಧ್ಯಾಹ್ನ 4 – 5 ಗಂಟೆ

    ಕಾರ್ಯಕ್ರಮ ನಡೆಯುವ ಸ್ಥಳ: ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಕ್ರೀಡಾಂಗಣ, ಮಲ್ಲೇಶ್ವರಂ 6ನೇ ಕ್ರಾಸ್, ಕೆಸಿ ಜನರಲ್ ಆಸ್ಪತ್ರೆ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆ ಎದುರು, ಮಲ್ಲೇಶ್ವರಂ,ಬೆಂಗಳೂರು.

    ಲಕ್ಕಿ ಡಿಪ್: ವಿದ್ಯಾಪೀಠ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮವನ್ನ ಸದುಪಯೋಗಪಡಿಸಿಕೊಳ್ಳಲ್ಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ. ವಿದ್ಯಾಪೀಠಕ್ಕೆ ಬರೋ ವಿದ್ಯಾರ್ಥಿಗಳಿಗೆ ಅಕ್ಷಯ ತೃತೀಯದಂದು ಬಂಪರ್ ಬಹುಮಾನದ ಅವಕಾಶವಿದೆ. ವಿದ್ಯಾಪೀಠದಲ್ಲಿ ಭಾಗವಹಿಸೋ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಇರಲಿದೆ. ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗೋ ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ಸಿಗಲಿದೆ. ಕಾರ್ಯಕ್ರಮಕ್ಕೆ ಆಗಮದ ವೇಳೆ ರಿಜಿಸ್ಟ್ರೇಷನ್ ಬಳಿ ವಿದ್ಯಾರ್ಥಿಗಳು ತಮ್ಮ ಹೆಸರು, ಫೋನ್ ನಂಬರ್ ನಮೂದಿಸಬೇಕು. ಪ್ರತಿ ಗಂಟೆಗೊಮ್ಮೆ ಲಕ್ಕಿಡಿಪ್ ತೆಗದಯಲಿದ್ದು ಆಯ್ಕೆಯಾದವರಿಗೆ ಬಂಪರ್ ಬಹುಮಾನ ಸಿಗಲಿದೆ. ಬನ್ನಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ. ಮಾಹಿತಿ ಜೊತೆ ಬಹುಮಾನ ಗೆಲ್ಲಿ.