Tag: Vidyapeeta Expo

  • ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿಗೆ ವರ್ಣರಂಜಿತ ತೆರೆ

    ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿಗೆ ವರ್ಣರಂಜಿತ ತೆರೆ

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಿಯ ವಿದ್ಯಾಪೀಠ ಎಜುಕೇಷನ್ ಎಕ್ಸ್‌ಪೋ  ಇಂದು ವರ್ಣರಂಜಿತ ತೆರೆ ಕಂಡಿದೆ. ಕೊನೆ ದಿನವೂ ನಾನಾ ಕಡೆಗಳಿಂದ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಆಮಿಸಿದ್ದರು.

    ಕಳೆದ ಮೂರು ದಿನಗಳಿಂದ ಆಯೋಜನೆಗೊಂಡಿದ್ದ ಎಕ್ಸ್‌ಪೋದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ವಿವಿಧ ಕ್ರೀಡೆಗಳಲ್ಲೂ ಉತ್ಸಾಹದಿಂದಲೇ ಪಾಲ್ಗೊಂಡು ಎಲೆಕ್ಟ್ರಿಕ್‌ ಬೈಕ್, ಬೈಸಿಕಲ್ ಬಂಪರ್ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮೂರು ದಿನಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರೊಂದಿಗೆ ಪೋಷಕರು ಎಕ್ಸ್ಪೋ ನಲ್ಲಿ ಭಾಗವಹಿಸಿ ಮಕ್ಕಳ ಶೈಕ್ಷಣಿಕ ಬದುಕಿಗೆ ಅಡಿಪಾಯ ಹಾಕಿಕೊಟ್ಟರು.

    ಕೊನೆಯ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು, ಹಲವಾರು ಸವಾಲುಗಳ ನಡುವೆ ಈ ಶೈಕ್ಷಣಿಕ ಉತ್ಸವ ಯಶಸ್ವಿಯಾಗಿ ನಡೆದಿದೆ. 80ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದು, ಸಂಸ್ಥೆಯ ಪ್ರತಿನಿಧಿಗಳು ಪ್ರತಿಬಾರಿಯಂತೆ ಕೌಟುಂಬಿಕ ವಾತಾವರಣದೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

    ಕೊರೊನಾಕ್ಕೂ ಮುಂಚೆ ಪಬ್ಲಿಕ್ ಟಿವಿ ಆಯೋಜಿಸಿದ್ದ ಶೈಕ್ಷಣಿಕ ಉತ್ಸವದಲ್ಲಿ 72 ಸಂಸ್ಥೆಗಳು ಭಾಗವಹಿಸಿದ್ದವು. ಈ ಬಾರಿ 80ಕ್ಕೂ ಹೆಚ್ಚು ಸಂಸ್ಥೆಗಳು ಶೈಕ್ಷಣಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಈ `ವಿದ್ಯಾಪೀಠ’ ಶೈಕ್ಷಣಿಕ ಉತ್ಸವವು, ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಶೈಕ್ಷಣಿಕ ಉತ್ಸವವಾಗಿದೆ. ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಉತ್ಸವವು ಮಕ್ಕಳು ಭಿನ್ನವಾದ ಶೈಕ್ಷಣಿಕ ಮಾಹಿತಿಯನ್ನು ತುಲನೆ ಮಾಡುವುದಕ್ಕೆ ಮಾರ್ಗದರ್ಶನ ನೀಡಿದೆ. ಇದೇ ತೀರ್ಮಾನ ಅಂದುಕೊಳ್ಳಬೇಕಿಲ್ಲ. ಇದು ಮಾರ್ಗದರ್ಶನದ ವೇದಿಕೆ. ಅದು ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲ ತಜ್ಞರು, ಪೋಷಕರು ಮತ್ತು ಮಕ್ಕಳ ಸಂಬಂಧದ ಬಗ್ಗೆಯೂ ಅದ್ಭುತ ಉಪನ್ಯಾಸಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

    ಈ ಕಾಲದಲ್ಲಿ ಪೋಷಕರು ಉತ್ತಮ ಕಾಲೇಜು, ವಿಶ್ವವಿದ್ಯಾಯಲವನ್ನು ಆಯ್ಕೆ ಮಾಡಿ ಸೇರಿಸಿದರೆ ಸಾಲದು. ಮಕ್ಕಳನ್ನು ಮಾನಸಿಕವಾಗಿ ತಯಾರು ಮಾಡಿ ಕಳುಹಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಪ್ರಸ್ತುತ ಶಿಕ್ಷಣ ಪರಿಸ್ಥಿತಿಯೂ ಹಾಗೆಯೇ ಇದೆ. ಬಹಳ ಮಂದಿ ಪೋಷಕರು ನನಗೆ ಕರೆ ಮಾಡುತ್ತಾರೆ. ನನ್ನ ಮಗು ಅದ್ಭುತ ಶಿಕ್ಷಣ ಸಂಸ್ಥೆಯಲ್ಲಿದೆ. ಆದರೆ ಇತ್ತೀಚೆಗೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ, ಬಹಳ ಕಷ್ಟ ಪಡುತ್ತಿದ್ದಾನೆ, ಏನು ಕೇಳಿದರೂ ಉತ್ತರ ಕೊಡುವುದಿಲ್ಲ, ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ, ನಿನಗೆ ಅರ್ಥವಾಗಲ್ಲ ಬಿಡು ಎಂದುಬಿಡುತ್ತಾನೆ. ಯಾವಾಗಲೂ ಅವನು ಯಾರನ್ನೋ ಲವ್ ಮಾಡುತ್ತಿದ್ದಾನೆ ಎಂಬುದೇ ನನಗೆ ಅನುಮಾನ, ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ನನಗೆ ಅನ್ನಿಸುವುದು ಮಕ್ಕಳಿಗೆ ಕಾಲೇಜನ್ನು ಆಯ್ಕೆ ಮಾಡುವುದು ಸುಲಭ. ಆದರೆ ಪೋಷಕರು ಮಾನಸಿಕವಾಗಿ ತಯಾರು ಮಾಡಿಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಮನೆಯಲ್ಲಿ ನಿರ್ಮಾಣ ಮಾಡಿಕೊಡಬೇಕು. ಆ ರೀತಿಯ ಮಾರ್ಗದರ್ಶನ ವಿದ್ಯಾಪೀಠದಲ್ಲಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿದ್ಯಾಪೀಠದಲ್ಲಿ ನಡೆದ ಎಲ್ಲ ಮಾಹಿತಿಗಳು ಪಬ್ಲಿಕ್ ಟಿವಿ ಯುಟ್ಯೂಬ್, ಫೇಸ್‌ಬುಕ್ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಅದರಿಂದಲೂ ಮಾಹಿತಿ ತಿಳಿದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನಾನೂ ಸೈನಿಕನಂತೆ ಹೋರಾಡಿದ್ದೆ – ಮನ್ ಕಿ ಬಾತ್‌ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಮೋದಿ

    ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ವೇಲು ಮಾತನಾಡಿ, ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿ. ನಾವಿದ್ದಾಗ ಆಯ್ಕೆಗಳು ಇರಲಿಲ್ಲ. ಇಲ್ಲಿನ ಬಹು ಆಯ್ಕೆಗಳನ್ನು ನೋಡಿ ನಾನೂ ಒಂದು ಕಾಲೇಜಿಗೆ ಸೇರಬೇಕು ಅನ್ನಿಸಿತು. ಅದ್ಭುತ ಆಯ್ಕೆಗಳನ್ನು `ಪಬ್ಲಿಕ್ ಟಿವಿ’ ವೇದಿಕೆ ಮೂಲಕ ಅನಾವರಣ ಮಾಡಿತು. ಮಕ್ಕಳಿಗೆ ಓದಲು ಸಾವಿರಾರು ದಾರಿಗಳಿವೆ. ಉತ್ತಮ ದಾರಿಗಳಲ್ಲಿ ಸಾಗಲು ಅವಕಾಶಗಳಿವೆ. ಇದಕ್ಕೆ ಪಬ್ಲಿಕ್ ಟಿವಿ ವೇದಿಕೆ ಮಾಡಿಕೊಟ್ಟಿದ್ದಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಏನೇನು ವಿಶೇಷತೆ?
    ವಿದ್ಯಾಪೀಠ ಎಜುಕೇಶನ್ ಎಕ್ಸ್ಪೋ ಕೊನೆಯ ದಿನದಂದು ಬೆಳಗ್ಗೆ ಹ್ಯಾಂಡ್‌ರೈಟಿಂಗ್ ಅಂಡ್ ಮೆಮೊರಿ ಎಕ್ಸ್‌ಪರ್ಟ್‌ಡಾ.ರಫೀವುಲ್ಲಾ ಬೇಗ್ ಅವರಿಂದ Accelerate Your Career With Super Power Memory ಉಪನ್ಯಾಸ ನಡೆಯಿತು. ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದಲೇ ಭಾಗವಹಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಬಳಿಕ ನೀಟ್ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತ ರಾಥೋಡ್ ಮಾಹಿತಿ ನೀಡಿದರು. ಮಧ್ಯಾಹ್ನ ಊಟದ ಬಳಿಕ Global Education Forum- Insights From NEX GEN Educationalist ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಅತಿಥಿಗಳಾದ ಕ್ರಿಸ್ಟಿಯೋ ಜೋಸೆಫ್, ಅದ್ವಿತೀಯ, ಡಾ.ವಿದ್ಯಾಶೆಟ್ಟಿ, ವಿಜೇತ ಕೆಳಮನೆ, ಡಾ.ಶಂಕಪಾಲ್, ಡಾ.ಬಿ.ವಿ.ರವಿಶಂಕರ್ ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ಇದನ್ನೂ ಓದಿ: ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

    ಮಕ್ಕಳಿಗೆ ಫನ್‌ಗೇಮ್ ಅಚ್ಚುಮೆಚ್ಚು:
    ವಿದ್ಯಾಪೀಠ ಕೊನೆ ದಿನವೂ ಹಲವು ಫನ್ ಗೇಮ್ಸ್ ನಡೆದವು. ಸ್ಲೋ ಸೈಕ್ಲಿಂಗ್ ರೇಸ್, ಕಾಲೇಜು ಲೋಗೋ ಹುಡುಕುವ ಸ್ಪರ್ಧೆ, ಬೈಕ್ ಕೀ ಚಾಲೆಂಜ್ ಸೇರಿದಂತೆ ಹಲವು ವಿಶೇಷ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದಲೇ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಹಾಗೂ ಗಾರ್ಡನ್ ಸಿಟಿ ವಿಶ್ವವಿದ್ಯಾನಿಲಯದ ಮುಖ್ಯಸ್ಥ ಜೋಸೆಫ್ ಅವರು ಎಲೆಕ್ಟ್ರಿಕ್‌ ಬೈಕ್ ಅನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದರು. ಜೊತೆಗೆ ಲಕ್ಕಿ ಡಿಪ್ ಮೂಲಕ ವಿದ್ಯಾರ್ಥಿಗಳಿಗೆ ಬೈಸಿಕಲ್ ಬಹುಮಾನವಾಗಿ ನೀಡಲಾಯ್ತು. ಅಲ್ಲದೆ ಅರ್ಧ ಗಂಟೆಗೊಮ್ಮೆ ಆಕರ್ಷಕ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

    Live Tv

  • ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿ – 2ನೇ ದಿನವೂ ಸಕ್ಸಸ್

    ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿ – 2ನೇ ದಿನವೂ ಸಕ್ಸಸ್

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋಗೆ 2ನೇ ದಿನವಾದ ಶನಿವಾರವೂ ಉತ್ತಮ ಸ್ಪಂದನೆ ದೊರೆಯಿತು.

    2ನೇ ದಿನವೂ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. 500-600 ಕಿ.ಮೀ. ದೂರದಲ್ಲಿರುವ ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದಲೂ ಬಂದು ವಿದ್ಯಾರ್ಥಿಗಳು, ಪೋಷಕರು ಮಾಹಿತಿ ಪಡೆದುಕೊಂಡಿದ್ದು ವಿಶೇಷ.  ಇದನ್ನೂ ಓದಿ: ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

    ಏನೇನು ವಿಶೇಷತೆ?
    ಎಕ್ಸೋನಲ್ಲಿ ಮೊದಲ ದಿನದಂತೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಇದಾದ ಬಳಿಕ ಸಿಇಟಿ ಹಾಗೂ ಕಾಮೆಡ್-ಕೆ ಕುರಿತು ಕುಮಾರ್ ಹಾಗೂ ರವಿ ಮಾಹಿತಿ ತಿಳಿಸಿಕೊಟ್ಟರು. ಮಧ್ಯಾಹ್ನ ಚಿಂತಕ ಹಾಗೂ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ಯಾನಲ್ ಚರ್ಚೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಇದೇ ವೇಳೆ ಭಾರತದ ಸ್ಟಾರ್ಟ್ಅಪ್ ಉದ್ಯಮದ ಬಗ್ಗೆ ತಿಳಿಸಿಕೊಟ್ಟರು. ಬಳಿಕ ಯುವ ಸಾಧಕರನ್ನ ಪರಿಚಯಿಸಿದರು. ಸಂಗೀತ ನಿರ್ದೇಶಕ ಮತ್ತು ಎರಡು ಬಾರಿ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್ ಕೂಡ ವಿದ್ಯಾಪೀಠದ ಹೈಲೈಟ್ ಆಗಿದ್ದರು.

    ಲಕ್ಕಿ ಡಿಪ್ ವಿದ್ಯಾರ್ಥಿಗಳ ಆಕರ್ಷಣೆ: ವಿದ್ಯಾರ್ಥಿಗಳ ಕಲರವದಿಂದ ಕೂಡಿದ್ದ ಎಕ್ಸ್‌ಪೋನಲ್ಲಿ ಸ್ಲೋ ಸೈಕ್ಲಿಂಗ್, ರಸಪ್ರಶ್ನೆ ಕಾರ್ಯಕ್ರಮಗಳನ್ನೂ ನಡೆಸಿಕೊಡಲಾಯಿತು. ಫನ್ ಗೇಮ್ಸ್ನಲ್ಲಿ ಉತ್ಸಾಹದಿಂದಲೇ ಭಾಗವಹಿಸಿದ್ದ ವಿದ್ಯಾರ್ಥಿಗಳು ಬಹುಮಾನ ಗೆದ್ದು ಬೀಗಿದರು. ಮುಖ್ಯವಾಗಿ ಪ್ರತಿ ಅರ್ಧ ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬಹುಮಾನ ನೀಡುತ್ತಿದ್ದ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಮುಖ ಆಕರ್ಷಣೆಯಾಗಿತ್ತು.

    ಕೊನೆ ದಿನವಾದ ಭಾನುವಾರ 10:30ರಿಂದ 12 ಗಂಟೆ ವರೆಗೆ ಡಾ.ರಫೀವುಲ್ಲಾ ಬೇಗ್ ಹ್ಯಾಂಡ್ ರೈಟಿಂಗ್ ಅಂಡ್ ಮೆಮೊರಿ ಮಾಹಿತಿ, ಡಾ. ಸುಜಾತ ರಾಥೋಡ್ ರಿಂದ ನೀಟ್ ಕುರಿತು ಸೆಮಿನಾರ್ ಇರಲಿದೆ.

    Live Tv

  • ವಿದ್ಯಾಪೀಠ 5ನೇ ಆವೃತ್ತಿಗೆ ಅದ್ಧೂರಿ ಚಾಲನೆ- ಮೊದಲ ದಿನವೇ ವಿದ್ಯಾರ್ಥಿಗಳು, ಪೋಷಕರ ಸಾಗರ

    ವಿದ್ಯಾಪೀಠ 5ನೇ ಆವೃತ್ತಿಗೆ ಅದ್ಧೂರಿ ಚಾಲನೆ- ಮೊದಲ ದಿನವೇ ವಿದ್ಯಾರ್ಥಿಗಳು, ಪೋಷಕರ ಸಾಗರ

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋ ಗೆ ಶುಕ್ರವಾರ ಅದ್ಧೂರಿ ಚಾಲನೆ ದೊರೆತಿದ್ದು, ಮೊದಲ ದಿನವೇ ಯಶಸ್ವಿಯಾಗಿದೆ.

    ವಿದ್ಯಾಪೀಠ ಎಕ್ಸ್ಪೋ 5ನೇ ಆವೃತ್ತಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಮತ್ತು ಮುಖ್ಯ ಅತಿಥಿಗಳು ಚಾಲನೆ ನೀಡಿದರು. ಗಾರ್ಡನ್ ಸಿಟಿ ವಿವಿಯ ಚಾನ್ಸಲರ್ ಡಾ.ವಿ.ಜೆ.ಜೋಸೆಫ್, ರಾಮಯ್ಯ ಕಾಲೇಜ್ ವಿವಿ ಕುಲಪತಿ ಡಾ.ಕುಲದೀಪ್ ರೈನಾ, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ರಾಜೀವ್ ಗೌಡ, ನಿತಿನ್ ಮೋಹನ್, ಅದ್ವಿತೀಯ ಉದಯ್ ಭಾಗವಹಿಸಿ, ಮೊದಲ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

    ಸಾವಿರಾರು ವಿದ್ಯಾರ್ಥಿಗಳು ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಸಾಗರೋಪಾದಿಯಲ್ಲಿ ಹರಿದುಬಂದರು. ಇದನ್ನೂ ಓದಿ: ವಿದ್ಯಾಪೀಠಕ್ಕೆ ಇಂದು ಚಾಲನೆ – 3 ದಿನಗಳ ಶೈಕ್ಷಣಿಕ ಮೇಳಕ್ಕೆ ಬನ್ನಿ

    ಎಕ್ಸ್‌ಪೋ 5ನೇ ಆವೃತ್ತಿಯಲ್ಲಿ 80ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗವಹಿಸಿವೆ. ವಿವಿಧ ಕೋರ್ಸ್‌ಗಳ ಮಾಹಿತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ತಜ್ಞರು, ಸಾಧಕರಿಂದ ಆತ್ಮಸ್ಥೈಯ ಮೂಡಿಸುವ ಉಪನ್ಯಾಸಗಳನ್ನು ನೀಡಲಾಗಿದೆ.

    ಮೊದಲ ದಿನ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ Build Confidence Through Value Based Education ಕುರಿತು ಉಪನ್ಯಾಸ ನೀಡಿದರು. ನಂತರ ಐಎಎಸ್ ಟಾಪರ್‌ಗಳಾದ ರಾಜೇಶ್ ಪೊನ್ನಪ್ಪ ಹಾಗೂ ಅರುಣ ಅವರು ತಮ್ಮ ಸಾಧನೆಯೊಂದಿಗೆ ವಿದ್ಯಾರ್ಥಿಗಳಿಗೆ ಸಲಹೆಗಳನ್ನೂ ನೀಡಿದರು. ಇದೇ ವೇಳೆ ಎಕ್ಸ್‌ಪೋ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾರ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 816 ಮಂದಿಗೆ ಕೊರೊನಾ- ಸಾವಿನ ಪ್ರಕರಣ ಶೂನ್ಯ

    ಸಿನಿ ತಾರೆಯರಿಂದಲೂ ಶುಭಹಾರೈಕೆ: ಎಕ್ಸ್‌ಪೋ ದಲ್ಲಿ ಭಾಗವಹಿಸಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ, ನಟ ರಾಜು ಬಿ.ಶೆಟ್ಟಿ, ನಟಿ ಸುಧಾರಾಣಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

    ಒಟ್ಟಾರೆ ಮೊದಲ ದಿನದ ಎಕ್ಸ್‌ಪೋ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನೂ ಎರಡು ದಿನಗಳ ಕಾಲ ಎಕ್ಸ್‌ಪೋ ನಡೆಯಲಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

    Live Tv