Tag: vidyapati film

  • ವಿದ್ಯಾಪತಿಗೆ ನಡುಕ ಹುಟ್ಟಿಸಿದ ‘ಕೆಜಿಎಫ್’ ಗರುಡ!

    ವಿದ್ಯಾಪತಿಗೆ ನಡುಕ ಹುಟ್ಟಿಸಿದ ‘ಕೆಜಿಎಫ್’ ಗರುಡ!

    ನಂಜಯ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಚಿತ್ರ ಇಂದು (ಏ.10) ಬಿಡುಗಡೆಯಾಗಿದೆ. ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸುತ್ತಾ, ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿ ಚಾಲ್ತಿಯಲ್ಲಿರುವ ನಾಗಭೂಷಣ್ (Nagabhushan) ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ನಾಗಭೂಷಣ್ ಈ ಸಿನಿಮಾ ನಾಯಕ ಎಂಬ ಸುದ್ದಿ ಹೊರ ಬಿದ್ದಾಕ್ಷಣವೇ ಬಹುತೇಕರ ಕಲ್ಪನೆ ಹಾಸ್ಯದ ಚೌಕಟ್ಟಿನಲ್ಲಿಯೇ ಗಿರಕಿ ಹೊಡೆದಿತ್ತು. ಆದರೆ ಟ್ರೈಲರ್ ಬಿಡುಗಡೆಗೊಳ್ಳುತ್ತಲೇ ಒಂದಿಡೀ ಚಿತ್ರಣವೇ ಬದಲಾಗಿ ಹೋಗಿತ್ತು. ಯಾಕೆಂದರೆ, ಅಲ್ಲಿ ಸುಳಿದಿದ್ದು ಭಿನ್ನ ಕಥನ, ಅದಕ್ಕೆ ತಕ್ಕುದಾದ ಪಾತ್ರಗಳ ಸುಳಿವು. ಹಾಸ್ಯವೆಂಬುದು ಈ ಸಿನಿಮಾದ ಕಥೆಯ ಆತ್ಮವೆಂಬುದು ನಿಜ. ಆದರೆ, ಅದರಾಚೆಗೂ ಹಬ್ಬಿಕೊಂಡಿರುವ ಬೆರಗಿನ ದೃಶ್ಯಗಳನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

    ಇಶಾಂ ಹಾಗೂ ಹಸೀಮ್ ಸಿದ್ಧಪಡಿಸಿದ್ದ ಕಥೆ ಕೇಳಿಯೇ ಡಾಲಿ ಧನಂಜಯ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ತನ್ನ ಗೆಳೆಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿರೋದರಿಂದ ನಿರ್ಮಾಣದಾಚೆಗಿನ ಕಾಳಜಿಯೂ ಡಾಲಿಗಿತ್ತು. ಕಡೆಗೂ ನಿರ್ದೇಶಕರು ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರ ಬಗೆಗಿನ ಹೆಮ್ಮೆಯ ಭಾವ ಧನಂಜಯ ಮಾತುಗಳಲ್ಲಿ ಧ್ವನಿಸುತ್ತಿತ್ತು. ಅಂಥಾದ್ದೊಂದು ಮೆಚ್ಚುಗೆಯೀಗ ಸಿನಿಮಾ ನೋಡಿದವರೆಲ್ಲರಲ್ಲೂ ಮೂಡಿಕೊಂಡಿದೆ. ಅದುವೇ ‘ವಿದ್ಯಾಪತಿ’ಯ ಯಶಸ್ಸಿನ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ. ಇದನ್ನೂ ಓದಿ:ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?


    ಈ ಸಿನಿಮಾದಲ್ಲಿ ಹಲವಾರು ಆಕರ್ಷಣೆಗಳಿದ್ದಾವೆ. ಅದರಲ್ಲಿ ಪ್ರಧಾನವಾಗಿ ಹಾಸ್ಯದೊಂದಿಗೆ ಮಾಸ್ ಸನ್ನಿವೇಶಗಳೂ ಕೂಡ ಸ್ಥಾನ ಪಡೆದುಕೊಳ್ಳುತ್ತವೆ. ಅದರಲ್ಲಿಯೂ ವಿಶೇಷವಾಗಿ ಕೆಜಿಎಫ್ ಚಿತ್ರದ ಗರುಡ ಪಾತ್ರಧಾರಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಗರುಡ ರಾಮ್ (Garuda Ram) ಈ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಆ ಪಾತ್ರದ ಮೂಲಕವೇ ವಿದ್ಯಾಪತಿಯ ಕಥನ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ. ಅದನ್ನು ಪ್ರೇಕ್ಷಕರೆಲ್ಲ ಸಂಭ್ರಮಿಸಿದ್ದಾರೆ. ಈ ಪಾತ್ರದ ಬಗ್ಗೆ, ಅದರ ಇರುವಿಕೆಯ ದೃಶ್ಯಾವಳಿಗಳನ್ನು ಸಿನಿಮಾ ಮಂದಿರಗಳಲ್ಲಿಯೇ ಹೋಗಿ ನೋಡಿದರೆ ನೈಜ ಅನುಭೂತಿ ದಕ್ಕಲು ಸಾಧ್ಯ. ಇದನ್ನೂ ಓದಿ: ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!

     

    View this post on Instagram

     

    A post shared by Garuda Ram (@garuda_ram_official)

    ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಹಾಗಾಗಿ ಅವರು ‘ವಿದ್ಯಾಪತಿ’ (Vidyapati) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ದಿನವೇ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಮೆಚ್ಚುಗೆ ಕಂಡು ಚಿತ್ರತಂಡ ಖುಷಿಗೊಂಡಿದೆ. ಬೇಸಿಗೆ ರಜೆಯ ಮಜಕ್ಕೆ ಮತ್ತಷ್ಟು ಮೆರುಗು ತುಂಬಬಲ್ಲ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡಿಸಿಕೊಳ್ಳುವ ಗುಣಗಳೊಂದಿಗೆ ಗಮನ ಸೆಳೆಯುತ್ತಿದೆ.

  • ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಟ ನಾಗಭೂಷಣ್‌ (Nagabhushan) ನಟನೆಯ ‘ವಿದ್ಯಾಪತಿ’ (Vidyapati) ಸಿನಿಮಾ ಇಂದು (ಏ.10) ಬಿಡುಗಡೆಯಾಗಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾದ ಟ್ರೈಲರ್ ಈಗಾಗಲೇ ಸಂಚಲನ ಸೃಷ್ಟಿಸಿದೆ. ಬಹುತೇಕ ಎಲ್ಲಾ ಅಭಿರುಚಿಯ ಪ್ರೇಕ್ಷಕರು ಕೂಡ ‘ವಿದ್ಯಾಪತಿ’ಯನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ‘ವಿದ್ಯಾಪತಿ’ ಭಿನ್ನ ಕಥಾನಕವನ್ನೊಳಗೊಂಡಿರೋ ಚಿತ್ರ. ಇದನ್ನೂ ಓದಿ:‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು ಡಾಲಿ!

    ಇಶಾಂ ಹಾಗೂ ಹಸೀಂ ನಿರ್ದೇಶನ ಮಾಡಿರುವ ಈ ಸಿನಿಮಾದ ಅಸಲಿ ಸ್ವಾದದ ಸುಳಿವು ಟ್ರೈಲರ್ ಮೂಲಕವೇ ಜಾಹೀರಾಗಿತ್ತು. ಒಟ್ಟಾರೆ ಕಥನದ ಕೊಂಬೆ ಕೋವೆಗಳ ಸೂಕ್ಷ್ಮಗಳೂ ಕೂಡ ಇದರೊಂದಿಗೆ ಜಾಹೀರಾದಂತಾಗಿತ್ತು. ಈ ಬಗ್ಗೆ ನಾಯಕ ನಟ ನಾಗಭೂಷಣ್ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ನಾಗಭೂಷಣ್ ಅವರಿಗೆ ಈ ಸಿನಿಮಾದಲ್ಲಿ ಅತ್ಯಪರೂಪದ ಪಾತ್ರ ಸಿಕ್ಕಿದೆ. ಸೂಪರ್ ಸ್ಟಾರ್ ವಿದ್ಯಾಳ ಪತಿ ಎಂಬುದನ್ನೇ ಬಲವಾಗಿಸಿಕೊಂಡು, ಅತೀವ ಹಣದ ವ್ಯಾಮೋಹದ ಪಾತ್ರದಲ್ಲಿ ಅವರು ನಟಿಸಿದ್ದಾರಂತೆ. ಅದರಾಚೆಗೆ ಪಕ್ಕಾ ಮಾಸ್ ಅವತಾರದಲ್ಲಿಯೂ ಕೂಡ ನಾಗಭೂಷಣ್ ಕಾಣಿಸಿಕೊಂಡಿದ್ದಾರಾ? ಇಂಥಾದ್ದೊಂದು ಪ್ರಶ್ನೆ ಟ್ರೈಲರ್ ನೋಡಿದ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಇಂದು ಮಜವಾದ ಉತ್ತರ ಸಿಗಲಿದೆ. ಇದನ್ನೂ ಓದಿ:ಕೊಲೆ ಕೇಸ್ ಸಾಕ್ಷ್ಯಿಧಾರನ ಜೊತೆ ಪ್ರಭಾವ ಬೀರುತ್ತಿದ್ದಾರಾ ದರ್ಶನ್?

    ಸೂಪರ್ ಸ್ಟಾರ್ ವಿದ್ಯಾಳ ಪತಿಯಾಗಿ, ಆ ಪ್ರಭೆಯಲ್ಲಿ ಶೋಕಿ ಮಾಡೋ ನಾಯಕನ ಪಾತ್ರಕ್ಕಿಲ್ಲ ಒಂದಷ್ಟು ಚಹರೆಗಳಿದ್ದಾವೆ. ಈ ಹಾದಿಯಲ್ಲಿ ಎಂತೆಂಥಾ ವಿಚಾರಗಳು ಘಟಿಸುತ್ತವೆಂಬುದೇ ಸಿನಿಮಾದ ಜೀವಾಳ. ಅನೇಕ ಟ್ವಿಸ್ಟುಗಳೊಂದಿಗೆ, ಭರಪೂರ ಮನೋರಂಜನಾತ್ಮಕವಾಗಿ ಈ ಸಿನಿಮಾವನ್ನು ರೂಪಿಸಲಾಗಿದೆ. ಆರಂಭ ಕಾಲದಲ್ಲಿ ಸಣ್ಣಪುಟ್ಟ ಪಪಾತ್ರಗಳನ್ನು ಮಾಡುತ್ತಾ ಬಂದಿದ್ದ ನಾಗಭೂಷಣ್ ಅವರ ಪಾಲಿಗೆ ನಾಯಕ ನಟನಾಗಬೇಕೆಂಬ ಯಾವ ಇರಾದೆಯೂ ಇರಲಿಲ್ಲ. ಸಿಕ್ಕ ಪಾತ್ರಗಳನ್ನು ಚೆಂದಗೆ ಬಳಸಿಕೊಂಡು ಉತ್ತಮ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬುದಷ್ಟೇ ಅವರ ಗುರಿಯಾಗಿತ್ತು. ಆದರೆ, ಅಚಾನಕ್ಕಾಗಿ ನಾಯಕನಾಗೋ ಅವಕಾಶ ಒಲಿದು ಬಂದು, ಆ ಹಾದಿಯಲ್ಲಿ ಮುಂದುವರೆಯುತ್ತಾ ಬಂದಿರುವ ನಾಗಭೂಷಣ್ ಪಾಲಿಗೆ ‘ವಿದ್ಯಾಪತಿ’ ರೋಮಾಂಚಕ ತಿರುವು ಕೊಡುವ ಲಕ್ಷಣಗಳು ಕಾಣಿಸುತ್ತಿವೆ.


    ಡಾಲಿ ಧನಂಜಯ (Daali Dhananjay) ಅತ್ಯಂತ ಮಹತ್ವಾಕಾಂಕ್ಷೆಯಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಮ್ಮ ಗೆಳೆಯ ನಾಗಭೂಷಣ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಒಂದು ಪ್ರತಿಭಾನ್ವಿತ ತಂಡದೊಂದಿಗೆ ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್‌ ಆಗಿದೆ.

  • ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ಡಾಲಿ ಧನಂಜಯ (Daali Dhananjay) ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಚಿತ್ರ ‘ವಿದ್ಯಾಪತಿ’ ನಾಳೆ ಅಂದರೆ, ಏಪ್ರಿಲ್ 10ರಂದು ರಾಜ್ಯಾದ್ಯಂತ ರಿಲೀಸ್‌ ಆಗಲಿದೆ. ನಾನಾ ಪಾತ್ರಗಳನ್ನು ಮಾಡುತ್ತಾ, ಇತ್ತೀಚಿನ ದಿನಗಳಲ್ಲಿ ನಟನಾಗಿ ನೆಲೆ ಕಂಡುಕೊಳ್ಳುತ್ತಿರುವ ನಾಗಭೂಷಣ್ (Nagabhushana) ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ಕಥೆ ಯಾವ ಥರದ್ದಿರಬಹುದೆಂಬ ಕುತೂಹಲ ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಮೂಲಕ ತಣಿದಿದೆ. ಆ ಮೂಲಕ ಜಾಹೀರಾಗಿದ್ದ ದೃಶ್ಯಗಳಲ್ಲಿನ ಕ್ವಾಲಿಟಿ, ವಿಭಿನ್ನ ಕಥಾನಕದ ಸುಳಿವುಗಳೇ ‘ವಿದ್ಯಾಪತಿ’ಯ ಸುತ್ತ ಗಾಢ ಕೌತುಕ ಮೂಡಿಕೊಳ್ಳುವಂತೆ ಮಾಡಿದೆ. ಹೇಳಿ ಕೇಳಿ ಇದು ಬೇಸಿಗೆ ರಜೆಯ ಕಾಲಮಾನ. ಈ ಘಳಿಗೆಯಲ್ಲಿ ಕುಟುಂಬ ಸಮೇತರಾಗಿ ಕೂತು ನೋಡುವಂಥ ಚಿತ್ರವಾಗಿಯೂ ‘ವಿದ್ಯಾಪತಿ’ ಗಮನ ಸೆಳೆದಿದೆ. ಇದನ್ನೂ ಓದಿ:ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!

    ವಿದ್ಯಾಪತಿ ಚಿತ್ರವನ್ನು ಇಶಾಂ ಹಾಗೂ ಹಸೀನ್ ಸೇರಿ ನಿರ್ದೇಶನ ಮಾಡಿದ್ದಾರೆ. ನಾಗಭೂಷಣ್ ನಾಯಕರಾಗಿದ್ದಾರೆ ಅಂದಮೇಲೆ ಅಲ್ಲಿ ಹಾಸ್ಯದ ಇರುವಿಕೆ ಇರುತ್ತದೆಂದೇ ಅರ್ಥ. ‘ವಿದ್ಯಾಪತಿ’ ಚಿತ್ರದಲ್ಲಿ ಎಲ್ಲಿಯೂ ಮುಜುಗರ ತಂದೊಡ್ಡದ ಎಚ್ಚರಿಕೆಯಿಂದಲೇ ಭರಪೂರ ಮನರಂಜನೆ ನೀಡುವ ಫಾರ್ಮುಲಾವನ್ನು ಪ್ರಯೋಗಿಸಲಾಗಿದೆ. ಅದರ ಸ್ಪಷ್ಟ ಸೂಚನೆ ಟ್ರೈಲರ್‌ನಲ್ಲಿ ಕಾಣಿಸಿದೆ. ‘ಹಿಟ್ಲರ್ ಸೀರಿಯಲ್’ ಮೂಲಕ ಪ್ರಸಿದ್ಧಿ ಪಡೆದುಕೊಂಡು, ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮಲೈಕಾ ವಸುಪಾಲ್ (Malaika Vasupal) ಈ ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ, ನಾನಾ ಚಹರೆಗಳನ್ನು ಒಳಗೊಂಡಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಗಭೂಷಣ್‌ಗೂ ಕೂಡ ಅವರೇ ಹೇಳಿಕೊಂಡಂತೆ ಬೋನಸ್ ನಂಥಾ ಚೆಂದದ ಪಾತ್ರವೇ ಸಿಕ್ಕಿದೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!

    ಸಾಮಾನ್ಯವಾಗಿ, ಬೇಸಿಗೆ ರಜೆ ಬರುತ್ತಲೇ ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ತೆರಳುವ ಕ್ರೇಜ್ ಮೂಡಿಕೊಳ್ಳುತ್ತದೆ. ಈ ಬಾರಿ ಆ ಕ್ರೇಜ್ ಅನ್ನು ‘ವಿದ್ಯಾಪತಿ’ ಚಿತ್ರ ನೂರ್ಮಡಿಗೊಳಿಸಲಿದೆ. ಇಶಾಂ ಹಾಗೂ ಹಸೀಮ್ ನಿರ್ದೇಶನದೊಂದಿಗೆ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ (Daali Dhananjay) ಆಸೆಯಿಂದ ನಿರ್ಮಾಣ ಮಾಡಿರುವ ಈ ಸಿನಿಮಾ ಏ.10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ.

  • ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ- ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್

    ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ- ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್

    ಡಾಲಿ ಪಿಕ್ಚರ್ಸ್ ನಿರ್ಮಾಣದಡಿ ಮೂಡಿ ಬರುತ್ತಿರುವ ‘ವಿದ್ಯಾಪತಿ’ (Vidyapati) ಸಿನಿಮಾಗೀಗ ಬಹುಬೇಡಿಕೆಯ ಖಳನಾಯಕ ಗರುಡ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಕೆಜಿಎಫ್, ಸಲಾರ್, ಬಘೀರ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಖಡಕ್ ವಿಲನ್ ಗರುಡ ರಾಮ್ (Garuda Ram) ಅವರು ನಾಗಭೂಷಣ್ ಎದುರು ತೊಡೆ ತಟ್ಟಿದ್ದಾರೆ.

    ರಾಮಚಂದ್ರ ರಾಜು ಹೆಸರಿಗಿಂತ ಗರುಡ ಎಂದೇ ಖ್ಯಾತಿಗಳಿಸಿರುವ ಅವರು ‘ವಿದ್ಯಾಪತಿ’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಗರುಡ ರಾಮ್ ಎಂಟ್ರಿಯ ಮೇಕಿಂಗ್ ವಿಡಿಯೋ ಮೂಲಕ ಚಿತ್ರತಂಡ ಅವರನ್ನು ಸ್ವಾಗತಿಸಿದ್ದು, ಸಿಕ್ಸ್ ಪ್ಯಾಕ್‌ನಲ್ಲಿ ರಾಮಚಂದ್ರ ರಾಜು ಕಾಣಿಸಿಕೊಂಡಿದ್ದಾರೆ. ಗರುಡ ರಾಮ್ (Garudaram) ಹಾಗೂ ನಾಗಭೂಷಣ್ ಇವರಿಬ್ಬರ ಜುಗಲ್‌ಬಂಧಿ ಹೇಗಿರಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಇದನ್ನೂ ಓದಿ:ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಚೈತ್ರಾ ವಾಸುದೇವನ್

     

    View this post on Instagram

     

    A post shared by Daali Pictures (@daalipictures)

    ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್‌ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ. ಕರಾಟೆ ಮಾಸ್ಟರ್ ಅವತಾರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ.

    ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ‘ಟಗರು ಪಲ್ಯ’ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.