Tag: vidyamandira

  • ಎರಡು ದಿನಗಳ ಪಬ್ಲಿಕ್ ಟಿವಿ ವಿದ್ಯಾಮಂದಿರ ಮೆಗಾ ಎಕ್ಸ್‌ಪೋಗೆ ಅದ್ಧೂರಿ ತೆರೆ

    ಎರಡು ದಿನಗಳ ಪಬ್ಲಿಕ್ ಟಿವಿ ವಿದ್ಯಾಮಂದಿರ ಮೆಗಾ ಎಕ್ಸ್‌ಪೋಗೆ ಅದ್ಧೂರಿ ತೆರೆ

    – ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್
    – ಎಕ್ಸ್‌ಪೋ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಭಾಗಿ
    – ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

    ಬೆಂಗಳೂರು: ಪದವಿ ಮುಗಿತು, ಮುಂದೆ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು, ಮಾಸ್ಟರ್ಸ್ ಅನ್ನು ಯಾವ ಕಾಲೇಜಿನಲ್ಲಿ ಮಾಡಿದರೆ ಕೆಲಸಕ್ಕೆ ಒಳ್ಳೆಯದು, ಯಾವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೆ ಉತ್ತಮ.. ಹೀಗೆ ಅನೇಕ ಪ್ರಶ್ನೆಗಳು ಈಗ ಪದವಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮೂಡುವುದು ಸಹಜ. ಅತಂಹ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಉತ್ತರ ಕೊಡಿಸುವುದಕ್ಕಾಗಿಯೇ ‘ಪಬ್ಲಿಕ್ ಟಿವಿ’ ಸ್ನಾತಕೋತರ ಪದವಿ ಶೈಕ್ಷಣಿಕ ಮೇಳವನ್ನ ಆಯೋಜನೆ ಮಾಡಿತ್ತು. ಎರಡು ದಿನಗಳ ಈ ಎಕ್ಸ್‌ಪೋಗೆ ಇಂದು (ಭಾನುವಾರ) ತೆರೆಬಿದ್ದಿದೆ.

    ಪದವಿ ಮುಗಿಸಿ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗಾಗಿಯೇ ನಿಮ್ಮ ಪಬ್ಲಿಕ್ ಟಿವಿ, Ad6 ಸಹಯೋಗದೊಂದಿಗೆ ಎರಡು ದಿನಗಳ ಕಾಲ ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಶಾಲಾ ಮೈದಾನದಲ್ಲಿ ಮೆಗಾ ಎಜುಕೇಷನ್ ಎಕ್ಸ್‌ಪೋ (Education Expo) ಆಯೋಜನೆ ಮಾಡಿತ್ತು. ಒಂದೇ ಸೂರಿನಡಿ ರಾಜ್ಯದ ಪ್ರಸಿದ್ಧ 40 ಕ್ಕೂ ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಭಾಗಿಯಾಗಿದ್ದವು.

    ನಿನ್ನೆ (ಶನಿವಾರ) ಬೆಳಗ್ಗೆ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ ವಿದ್ಯಾಮಂದಿರಕ್ಕೆ ಚಾಲನೆ ನೀಡಿದ್ದರು. ನಿನ್ನೆ ಸಂಜೆ 6 ರ ವರೆಗೆ ವಿದ್ಯಾರ್ಥಿಗಳು, ಪೋಷಕರು ವಿದ್ಯಾಮಂದಿರಕ್ಕೆ ಆಗಮಿಸಿ ತಮಲ್ಲಿದ್ದ ಅನೇಕ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಉತ್ತರ ಕಂಡೊಕೊಂಡಿದ್ದರು.

    ಇಂದು ಭಾನುವಾರವಾಗಿದ್ದರಿಂದ ಬೆಳಗ್ಗೆ 9 ಗಂಟೆಯಿಂದಲೇ ಎಕ್ಸ್‌ಪೋ ಆರಂಭವಾಗಿತ್ತು. ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿ ತಮಗೆ ಬೇಕಾದ ಕಾಲೇಜಿನ ಮತ್ತು ಪಿಜಿ ಕೋರ್ಸ್‌ಗಳ ಮಾಹಿತಿಯನ್ನ ಪಡೆದುಕೊಂಡಿದ್ದರು. ಒಂದೇ ಜಾಗದಲ್ಲಿ ಇಷ್ಟೊಂದು ಕಾಲೇಜುಗಳು ಬಂದಿರೋದು ಬಹಳ ಉಪಯುಕ್ತವಾಗಿದೆ. ಯಾವ ಕೋರ್ಸ್ ಯಾವ ಕಾಲೇಜಿನಲ್ಲಿ ಮಾಡಬೇಕು ಎನ್ನುವುದನ್ನ ತಿಳಿದುಕೊಂಡೆವು. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಪಬ್ಲಿಕ್ ಟಿವಿ ಉತ್ತಮವಾದ ವೇದಿಕೆಯನ್ನ ಕಲ್ಪಸಿಕೊಟ್ಟಿದೆ ಎಂದು ವಿದ್ಯಾರ್ಥಿಗಳು ಖುಷಿ ಹಂಚಿಕೊಂಡರು.

    ಸಂಜೆ ವಿದ್ಯಾಮಂದಿರದ ಸಮಾರೋಪ ಕಾರ್ಯಕ್ರಮಕ್ಕೆ ಮಲ್ಲೇಶ್ವರಂನ ಶಾಸಕ ಹಾಗೂ ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ್ ಆಗಮಿಸಿದ್ದರು. ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ ಭಾಗಿಯಾಗಿದ್ದ ವಿದ್ಯಾಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ವೇಳೆ ಮಾತನಾಡಿದ ಅವರು, ಪಬ್ಲಿಕ್ ಟಿವಿ ಉತ್ತಮವಾದ ಕಾರ್ಯಕ್ರಮವನ್ನ ಆಯೋಜನೆ ಮಾಡಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಬೇಕು. ಭಾರತದಲ್ಲೇ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಮಲ್ಲೇಶ್ವರಂ ಕ್ಷೇತ್ರ ಹೆಸರುವಾಸಿಯಾಗಿದೆ. ಈ ವಿದ್ಯಾಮಂದಿರ ಕಾರ್ಯಕ್ರಮ ಅರ್ಥಪೂರ್ಣವಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

    ಎರಡು ದಿನ ನಡೆದ ಪಬ್ಲಿಕ್ ಟಿವಿಯ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಆಗಮಿಸಿದ್ದರು. ಪಬ್ಲಿಕ್ ಟಿವಿಯ ವಿದ್ಯಾಮಂದಿರಕ್ಕೆ ಆಗಮಿಸದ್ದ ವಿದ್ಯಾರ್ಥಿಗಳಿಗೆ ಪಿಕ್ ಅಂಡ್ ಸ್ಪೀಕ್, ಚರ್ಚಾ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕ ಅಶ್ವಥ್ ನಾರಾಯಣ್ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ವಿದ್ಯಾಮಂದಿರದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದ Ad6 ಏಜೆನ್ಸಿಯನ್ನೂ ಗೌರವಿಸಿದರು.

    ಎರಡು ದಿನ ನಡೆದ ಪಬ್ಲಿಕ್ ಟಿವಿಯ ವಿದ್ಯಾಮಂದಿರಕ್ಕೆ ಇಂದು ತೆರೆ ಬಿದ್ದಿದೆ. ಸಾವಿರಾರು ಮಕ್ಕಳು, ಪೋಷಕರು ವಿದ್ಯಾಮಂದಿರಕ್ಕೆ ಆಗಮಿಸಿ ತಮಗೆ ಬೇಕಾದ ಮಾಹಿತಿ ಪಡೆದುಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

    ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

    – ಇಂದು, ನಾಳೆ ಶೈಕ್ಷಣಿಕ ಮೇಳ
    – ಪಿಜಿ ಕಾಲೇಜ್‌, ಕೋರ್ಸ್‌ಗಳ ಬಗ್ಗೆ ಮಾಹಿತಿ
    – ವಿದ್ಯಾರ್ಥಿಗಳು, ಪೋಷಕರಿಗೆ ಉಚಿತ ಪ್ರವೇಶ

    ಬೆಂಗಳೂರು: ಡಿಗ್ರಿ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಮೂಡುತ್ತೆ. ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡ್ಕೋಬೇಕು ಎಂಬ ಗೊಂದಲವೂ ಕಾಡುತ್ತೆ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ, ಗೊಂದಲಗಳಿಗೆ ನಿಮ್ಮ ಪಬ್ಲಿಕ್ ಟಿವಿಯ ವಿದ್ಯಾಮಂದಿರದಲ್ಲಿ ಉತ್ತರ ಸಿಗಲಿದೆ. ಇಂದು & ನಾಳೆ (ಅ.7 ಮತ್ತು 8) ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ Ad6 ಸಂಸ್ಥೆ ಸಹಯೋಗದಲ್ಲಿ ನಿಮ್ಮ ಪಬ್ಲಿಕ್ ಟಿವಿಯ ವಿದ್ಯಾಮಂದಿರ ಶೈಕ್ಷಣಿಕ ಮೇಳ ನಡೆಯಲಿದೆ.

    Ad6 ಸಹಯೋಗದಲ್ಲಿ ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ ಎರಡನೇ ಅವೃತ್ತಿಯ ʼವಿದ್ಯಾಮಂದಿರʼಶೈಕ್ಷಣಿಕ ಮೇಳ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಇಂದು ಬೆಳಗ್ಗೆ 9:30 ಕ್ಕೆ ಶೈಕ್ಷಣಿಕ ಮೇಳಕ್ಕೆ ಚಾಲನೆ ಸಿಗಲಿದೆ. ಮೇಳವು ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    35ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳು, ದಾಖಲಾತಿ, ವಿದ್ಯಾರ್ಥಿವೇತನದ ಬಗ್ಗೆ ನಿಮಗೆ ಸಮಗ್ರ ಮಾಹಿತಿ ಒದಗಿಸಲಿವೆ. ಸಂವಾದ ಕಾರ್ಯಕ್ರಮಗಳು ಇರಲಿವೆ. ಪೋಷಕರು, ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಇರಲಿದೆ.

    ಲ್ಯಾಪ್‌ಟಾಪ್‌, ಮೊಬೈಲ್‌ ಬಹುಮಾನ ಗೆಲ್ಲಿ:
    ಈ ಮೇಳದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಸರ್‌ಪ್ರೈಸ್‌ ಗಿಫ್ಟ್‌ ಸಹ ಸಿಗಲಿದೆ.

    ವಿದ್ಯಾಮಂದಿರದ ಪ್ಲಾಟಿನಂ ಪ್ರಾಯೋಜಕರು
    ರೇವಾ ಯುನಿವರ್ಸಿಟಿ, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ರಾಮಯ್ಯ ಯುನಿವರ್ಸಿಟಿ, ನಾಗಾರ್ಜುನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಬನ್ನಿ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್ ಗ್ರೂಪ್ ಆಫ್ ಪಾಯಿಂಟ್ ಇನ್‌ಸ್ಟಿಟ್ಯೂಷನ್ಸ್‌, ಸಿಎಂಆರ್‌ ಯುನಿವರ್ಸಿಟಿ, ಆರ್‌ವಿ ಯುನಿವರ್ಸಿಟಿ, ಏಮ್ಸ್ ಇನ್‌ಸ್ಟಿಟ್ಯೂಷನ್ಸ್‌, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ಯುನಿವರ್ಸಿಟಿ, SEA ಸಮೂಹ ಸಂಸ್ಥೆಗಳು.

    ಸಿಲ್ವರ್ ಪ್ರಾಯೋಜಕರು
    ರಾಮಯ್ಯ ಆಫೀಸರ್ಸ್‌ ಐಎಎಸ್‌ ಅಕಾಡೆಮಿ, ಆಕ್ಸ್‌ಫರ್ಡ್‌ ಎಜುಕೇಶನ್‌ ಇನ್‌ಸ್ಟಿಟ್ಯೂಷನ್ಸ್‌, ಪಿಇಎಸ್‌ ವಿಶ್ವವಿದ್ಯಾಲಯ, ರಾಜರಾಜೇಶ್ವರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌, ಶ್ರೀನಿವಾಸ ವಿಶ್ವವಿದ್ಯಾನಿಲಯ, ಯೂನಿವರ್ಸಿಟಿ ಹಬ್, ಹರ್ಷಾ ಇನ್‌ಸ್ಟಿಟ್ಯೂಷನ್ಸ್‌, ಸೌಂದರ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌, ಪ್ರೆಸಿಡೆನ್ಸಿ ಯೂನಿವರ್ಸಿಟಿ

    ವಿಶೇಷ ಪೆವಿಲಿಯನ್: ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್,
    ಕ್ರಿಯೇಟಿವ್‌ ಸ್ಟಾಲ್‌ : ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌,
    ಗಿಫ್ಟ್‌ ಪ್ರಾಯೋಜಕರು : ಜೀನಿ ಮಿಲ್ಲೆಟ್‌
    ಪಾನೀಯ ಪ್ರಾಯೋಜಕರು: ನಂದಿನಿ, ಬಾಯರ್ಸ್‌ ಕಾಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್

    ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್

    ಬೆಂಗಳೂರು: ನಾನು ಸ್ನಾತಕೋತ್ತರ ಪದವಿ ಪಡೆದಿಲ್ಲ. ಅಂದಿನ ಸ್ಥಿತಿಯಲ್ಲಿ ನನಗೆ ಪಿಜಿ ಮಾಡಲು ಆಗಲೇ ಇಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್. ಆರ್ ರಂಗನಾಥ್ ಹೇಳಿದರು.

    ಇಂದು ಪಬ್ಲಿಕ್ ಟಿವಿ ಪ್ರಸ್ತುತ ಪಡೆಸುತ್ತಿರುವ ವಿದ್ಯಾಮಂದಿರ ಎಜುಕೇಶನ್ ಎಕ್ಸ್ ಪೋ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕಾಲದ ಶಿಕ್ಷಣಕ್ಕೂ ಈಗನ ಶಿಕ್ಷಣಕ್ಕೂ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ನಾನು ಡಿಗ್ರಿಯಲ್ಲಿ ಫೈನಲ್ ಇಯರ್ ಪರೀಕ್ಷೆ ಬರೆಯುವ ಮೊದಲೇ ನನಗೆ ಕೆಲಸ ಕೊಟ್ಟರು. ಬಮದು ಕೆಲಸ ಮಾಡಿ ಪರೀಕ್ಷೆಗೆ ರಜೆ ತೆಗೆದುಕೊಂಡು ಹೋಗಿ ಡಿಗ್ರಿ ಪರೀಕ್ಷೆ ಬರೆದು ಬಂದೆ. ಹೀಗಾಗಿ ಆಗ ನಾನು ಸ್ನಾತಕೋತ್ತರ ಪದವಿ ಪಡೆದಿದ್ದರೆ ಚೆನ್ನಾಗಿತ್ತು ಅಂತ ಅನಿಸಿತ್ತು. ಆದರೆ ಈಗ ಕಾಲ ಮುಗಿದಿದೆ. ಈವಾಗಲೂ ನಾನು ಅದನ್ನು ಮಾಡಬಲ್ಲೆ. ಪತ್ರಿಕೋದ್ಯಮದಲ್ಲಿಯೇ ಯಾವುದಾದರೂ ಒಂದು ಒಳ್ಳೆಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಅನಿಸ್ತಿದೆ. ಆದರೆ ಅಲ್ಲಿ ನಾನು ಅಲ್ಲಿ ತುಂಬಾ ತಂದರೆ ಕೊಡುವ ವಿದ್ಯಾರ್ಥಿ ಆಗಬಹುದು. ಇದು ತುಂಬಾ ಕಷ್ಟವಾಗಬಹುದೆಂದು ನಕ್ಕರು.

    ಬಹಳ ಹಿಂದೆ ಪೊಲೀಸ್ ಆಗೋಕೆ 8ನೇ ಕ್ಲಾಸ್ ಆದವರು ಸಾಕು ಎಂಬ ಜಾಹೀರಾತು ಬರುತ್ತಿತ್ತು. ಆದರೆ ಇಂದು ಪೊಲೀಸ್ ಕಾನ್ಸ್ ಟೇಬಲ್‍ಗೆ 60 ಪರ್ಸೆಂಟ್ ಪದವಿ ಪಡೆದವರು, 20-21 ಪರ್ಸೆಂಟ್ ಪಿಜಿ ಮಾಡಿವರು ಅಪ್ಲೈ ಮಾಡುತ್ತಿದ್ದಾರೆ. ಈ ಮೂಲಕ ಉದ್ಯೋಗಕ್ಕೆ ಬೇಕಾದ ತಯಾರಿ ಇಲ್ಲದ ಶಿಕ್ಷಣ ಸಿಗುತ್ತಿದೆ ಅಂತ ಉದ್ಯೋಗ ಬೇಕು ಅಂದ್ರೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕೆಲವೊಂದು ಉದ್ಯೋಗಗಳಿಗೆ ಪಿಜಿ ಮುಗಿಸಿರಲೇಬೇಕು ಎಂಬಂತಾಗಿದೆ. ಹೀಗಾಗಿ ಡಿಗ್ರಿ ಮಾಡದವರಿಗೆ ಮುಂದೊಂದು ದಿನ ಕೆಲಸ ಸಿಗುವುದು ಕೂಡ ಕಷ್ಟವಾಗಬಹುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

     ಪಿಜಿ ಹಾಗೂ ರಿಸರ್ಚ್ ಶಿಕ್ಷಣದಲ್ಲಿ ಕರ್ನಾಟಕ ಈಗ ಒಂದು ಹೆಜ್ಜೆ ಮುಂದೆಯೇ ಇದೆ ಎಂದನಿಸುತ್ತದೆ. ನಮ್ಮ ಶಿಕ್ಷಣ ಸಂಸ್ಥೆಗಳು ಕೂಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿವೆ. ಹೀಗಾಗಿ ಮುಂದೆ ಈ ಶಿಕ್ಷಣಕ್ಕೆ ಸಹಾಯ ಆಗಬಹುದೆಂಬ ನಿಟ್ಟಿನಲ್ಲಿ ಎರಡು ದಿನಗಳ ಈ ಎಕ್ಸ್ ಪೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶಿಕ್ಷಣ ಸಚಿವರಾಗಿರುವ ಅಶ್ವಥ್ ನಾರಾಯಣ್ ಕೂಡ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಮೂಲಕ ಹೆಚ್ಚಿನ ಕೊಡುಗೆಗಳನ್ನು ಕೊಡುತ್ತಿದ್ದಾರೆ.

    ಎರಡು ದಿನವಿರಲಿದೆ ವಿದ್ಯಮಂದಿರ: ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು.. ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ. ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೇ, ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.. ಬಹುಮಾನ ಗೆಲ್ಲಿ.. ವಿದ್ಯಾಮಂದಿರವನ್ನ ಸದುಪಯೋಗಪಡಿಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]