Tag: vidya mandira

  • ಇಂದಿನಿಂದ 2 ದಿನ `ಪಬ್ಲಿಕ್ ಎಜುಕೇಷನ್ ಎಕ್ಸ್‌ಪೋ’- ಸ್ನಾತಕೋತ್ತರ ಪದವಿ ಶೈಕ್ಷಣಿಕ ಮೇಳಕ್ಕೆ ಬನ್ನಿ, ಭಾಗವಹಿಸಿ

    ಇಂದಿನಿಂದ 2 ದಿನ `ಪಬ್ಲಿಕ್ ಎಜುಕೇಷನ್ ಎಕ್ಸ್‌ಪೋ’- ಸ್ನಾತಕೋತ್ತರ ಪದವಿ ಶೈಕ್ಷಣಿಕ ಮೇಳಕ್ಕೆ ಬನ್ನಿ, ಭಾಗವಹಿಸಿ

    ಬೆಂಗಳೂರು: ಪದವಿ ಮುಗಿದ ನಂತರ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ ಇದೆ..? ಈ ಕೋರ್ಸ್‍ಗಳಿಗೆ ಎಷ್ಟು ಖರ್ಚಾಗುತ್ತೆ ..? ಈ ಕಾಲೇಜುಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ಯಾ..? ಈ ರೀತಿಯ ಪ್ರಶ್ನೆಗಳು ಪೋಷಕರಿಗೆ, ವಿದ್ಯಾರ್ಥಿಗಳಿಗೆ ಬರುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಪಬ್ಲಿಕ್ ಟಿವಿ ಪ್ರಸ್ತುತಿ ವಿದ್ಯಾಮಂದಿರದಲ್ಲಿ ಉತ್ತರ ಕಂಡುಕೊಳ್ಳಿ.

    ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ (Public Tv) ಪ್ರಸ್ತುತ ಪಡಿಸುತ್ತಿರುವ ವಿದ್ಯಾಮಂದಿರ (VidyaMandira) ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ವಿದ್ಯಾಮಂದಿರ 2022 ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವ ನಡೆಯಲಿದೆ.

    ಈ ಹಿಂದೆ ಎಸ್‍ಎಸ್‍ಎಲ್‍ಸಿ (SSLC), ಪಿಯುಸಿ (PUC) ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಮೇಳ (Education Expo) ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಂದು ಮತ್ತು ನಾಳೆ ವಿದ್ಯಾ ಮಂದಿರ ನಡೆಯುಲಿದೆ.

    ಶನಿವಾರ ಮತ್ತು ಭಾನುವಾರ ನಡೆಯಲಿರುವ ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ.

    ವಿದ್ಯಾಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‍ಆರ್ ರಂಗನಾಥ್, ಸಚಿವ ಅಶ್ವಥ್‍ನಾರಾಯಣ್, ಬಿಜಿಎಸ್ ಸಂಸ್ಥೆ ಎಂಡಿ ಪ್ರಕಾಶನಾಥ ಸ್ವಾಮೀಜಿ, ರೇವಾ ವಿವಿ ಪ್ರೋ-ಚಾನ್ಸಲರ್ ಉಮೇಶ್ ಎಸ್ ರಾಜು, ಪ್ರೋ ವಿಸಿ ವಿದ್ಯಾಶಂಕರ ಶೆಟ್ಟಿ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಿಕೆ ಮೋಹನ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

    ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೆಯೇ ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.. ಬಹುಮಾನ ಗೆಲ್ಲಿ.. ವಿದ್ಯಾಮಂದಿರವನ್ನ ಸದುಪಯೋಗಪಡಿಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

  • ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾ ಮಂದಿರಕ್ಕೆ ಬನ್ನಿ

    ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾ ಮಂದಿರಕ್ಕೆ ಬನ್ನಿ

    ಬೆಂಗಳೂರು: ಪದವಿ ಮುಗಿದ ನಂತರ ಯಾವ ಕಾಲೇಜಿನಲ್ಲಿ (College) ಯಾವ ಕೋರ್ಸ್ ಇದೆ? ಈ ಕೋರ್ಸ್‍ಗಳಿಗೆ ಎಷ್ಟು ಶುಲ್ಕ ಇರುತ್ತದೆ? ಈ ಕಾಲೇಜುಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ಯಾ? ಈ ರೀತಿಯ ಪ್ರಶ್ನೆಗಳು ಪೋಷಕರಿಗೆ, ವಿದ್ಯಾರ್ಥಿಗಳಿಗೆ (Student) ಬರುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಪಬ್ಲಿಕ್ ಟಿವಿಯ (Public TV) ‘ವಿದ್ಯಾ ಮಂದಿರ 2022’ದಲ್ಲಿ (Vidya Mandira) ಸುಲಭವಾಗಿ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿ ಎರಡು ದಿನ `ವಿದ್ಯಾಮಂದಿರ 2022’ದ ಹೆಸರಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವವನ್ನು ಆಯೋಜಿಸಿದೆ. ಈ ಹಿಂದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಪದವಿ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ (Bengaluru) ಮಲ್ಲೇಶ್ವರಂನ (Malleshwaram) ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನ.12, 13 ರಂದು ವಿದ್ಯಾ ಮಂದಿರ ನಡೆಯುಲಿದೆ.

    ಒಂದೇ ಸೂರಿನಡಿ ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‍ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಈ ಬಾರಿಯ ವಿದ್ಯಾಮಂದಿರ 2022 ಕಾರ್ಯಕ್ರಮದಲ್ಲಿ 36ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸುತ್ತಿವೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯಮಿಕ ಕೋರ್ಸ್‍ಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ‘ವಿದ್ಯಾ ಮಂದಿರ’ಕ್ಕೆ ಬನ್ನಿ ಮಾಹಿತಿ ಪಡೆಯಿರಿ

    ದಿನಾಂಕ: ನವೆಂಬರ್ 12 ಮತ್ತು 13
    ಸ್ಥಳ: ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ, ಮಲ್ಲೇಶ್ವರಂ, ಬೆಂಗಳೂರು
    ಸಮಯ: ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ

    ಯಾರೆಲ್ಲ ಆಗಮಿಸಬಹುದು?:
    ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.

    ಪ್ಲಾಟಿನಂ ಪ್ರಾಯೋಜಕರು:
    ರೇವಾ ಯುನಿವರ್ಸಿಟಿ, ಬಿಜಿಎಸ್ & ಎಸ್‍ಜೆಬಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಗಾರ್ಡನ್ ಸಿಟಿ ಯುನಿವರ್ಸಿಟಿ, ರಾಮಯ್ಯ ಯುನಿವರ್ಸಿಟಿ

    ಗೋಲ್ಡ್ ಪ್ರಾಯೋಜಕರು:
    ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಈಸ್ಟ್‌ ವೆಸ್ಟ್‌ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌, ಎಮ್ಸ್ ಇನ್‍ಸ್ಟಿಟ್ಯೂಷನ್, ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ಸಿ ಗ್ರೂಪ್ ಇನ್‍ಸ್ಟಿಟ್ಯೂಷನ್

    ಸಿಲ್ವರ್ ಪ್ರಾಯೋಜಕರು:
    ಕೆಎಲ್‍ಇ ಟೆಕ್ನಾಲಜಿಕಲ್ ಯುನಿವರ್ಸಿಟಿ, ಆರ್ ಆರ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ರಾಮಯ್ಯ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಇಂಡಿಯನ್ ಅಕಾಡಮಿ ಆಫ್ ಇನ್‍ಸ್ಟಿಟ್ಯೂಷನ್, ರಾಮಯ್ಯ ಇನ್‍ಸ್ಟಿಟ್ಯೂಷನ್ ಆಫ್ ಮೆನೆಜ್‍ಮೆಂಟ್, ಸಿಎಂಆರ್ ಯುನಿವರ್ಸಿಟಿ, ಆಚಾರ್ಯ ಬೆಂಗಳೂರು ಬ್ಯುಸಿನೆಸ್ ಯುನಿವರ್ಸಿಟಿ

    ಸ್ಪೆಷಲ್‌ ಪೆವಿಲಿಯನ್‌:
    ರಾಮಯ್ಯ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌

    ಕ್ರಿಯೇಟಿವ್‌ ಸ್ಟಾಲ್‌:
    ಆರ್‌ ಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ

    Live Tv
    [brid partner=56869869 player=32851 video=960834 autoplay=true]