Tag: Vidya Bharan

  • ನೋವಿಂದ ಹೊರ ಬಂದು ‘ಟ್ಯಾಟೋ’ ಹಾಕಿಸಿಕೊಂಡ ವೈಷ್ಣವಿ ಗೌಡ: ಸಖತ್ತಾದ ವಿಡಿಯೋ

    ನೋವಿಂದ ಹೊರ ಬಂದು ‘ಟ್ಯಾಟೋ’ ಹಾಕಿಸಿಕೊಂಡ ವೈಷ್ಣವಿ ಗೌಡ: ಸಖತ್ತಾದ ವಿಡಿಯೋ

    ತಾನು ಮದುವೆ ಆಗಬೇಕಿದ್ದ ಹುಡುಗನ ಕುರಿತಾದ ಆಡಿಯೋವೊಂದು ನಟಿ ವೈಷ್ಣವಿ  ಮತ್ತು ನಟ ವಿದ್ಯಾಭರಣ್ ನಡುವಿನ ಬಾಂಧವ್ಯವನ್ನೇ ಹೊಸಕಿ ಹಾಕಿತ್ತು. ಆಡಿಯೋ ಬಂದಾಗಿನಿಂದ ವೈಷ್ಣವಿ ಗೌಡ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಮಗಳು ತುಂಬಾ ನೊಂದುಕೊಂಡಿದ್ದಾಳೆ. ಅವಳು ಅದರಿಂದ ಆಚೆ ಬರಲು ಸಾಕಷ್ಟು ಸಮಯ ಬೇಕು. ನಡೆದಿರುವ ಘಟನೆಯನ್ನು ಇಷ್ಟು ಬೇಗ ಅವಳು ಮರೆಯಲು ಸಾಧ್ಯವಿಲ್ಲ ಎಂದು ವೈಷ್ಣವಿ ತಾಯಿ ಮೊನ್ನೆಯಷ್ಟೇ ಹೇಳಿದ್ದರು.

    ಆದರೆ, ವೈಷ್ಣವಿ ತುಂಬಾ ಗಟ್ಟಿಗಿತ್ತಿ. ಆಗಿರುವ ಎಲ್ಲ ಘಟನೆಗೆ ಕೇವಲ ಮೂರೇ ಮೂರು ದಿನಕ್ಕೆ ಗೋಲಿ ಹೊಡೆದು, ಟ್ಯಾಟೋ ಅಂಗಡಿಗೆ ಬಂದಿದ್ದಾರೆ. ಚಂದಾದ ಟ್ಯಾಟೋ ಹಾಕಿಸಿಕೊಂಡು ‘ದಿ ರೇಸಿಂಗ್ ವುಮನ್ ಸಿಂಬಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ತಾಯಿ ಅಂದುಕೊಂಡಷ್ಟು ತಾವು ಅಧೈರ್ಯಳಲ್ಲ ಎನ್ನುವುದನ್ನು ತೋರಿಸಿದ್ದಾರೆ.

    https://youtube.com/shorts/XqPQz4zSXzk?feature=share

    ಅಷ್ಟಕ್ಕೂ ವೈಷ್ಣವಿ ಮತ್ತು ವಿದ್ಯಾಭರಣ್ ಇತ್ತೀಚೆಗಷ್ಟೇ ಪರಿಚಯವಾದವರು ಅಲ್ಲ. ಅವರು 2017ರಿಂದಲೂ ಪರಿಚಯಸ್ಥರು ಎನ್ನುತ್ತಾರೆ ವೈಷ್ಣವಿ ಗೌಡ ತಾಯಿ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಲವಾರು ವಿಷಯಗಳನ್ನು ಹಂಚಿಕೊಂಡರು. ವಿದ್ಯಾಭರಣ್ ಫ್ಯಾಮಿಲಿ ಆರೇಳು ವರ್ಷಗಳಿಂದಲೂ ಗೊತ್ತು. ಆದರೆ, ಸಂಪರ್ಕದಲ್ಲಿ ಇರಲಿಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ವೈಷ್ಣವಿ ಕುಟುಂಬಕ್ಕೆ ವಿದ್ಯಾಭರಣ್ ಪರಿಚಯವಾಗಿದ್ದು ಒಬ್ಬ ನಟನಾಗಿದೆ. 2017ರಲ್ಲಿ ಶುರುವಾದ ಚಾಕೋಲೇಟ್ ಬಾಯ್ ಸಿನಿಮಾದಲ್ಲಿ ವಿದ್ಯಾಭರಣ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ವೈಷ್ಣವಿ ಆ ಸಿನಿಮಾದ ನಾಯಕಿ. ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಸವನ ಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆದಿತ್ತು. ಅಲ್ಲಿಯೇ ವಿದ್ಯಾಭರಣ್ ಮತ್ತ ವೈಷ್ಣವಿ ಕುಟುಂಬ ಪರಸ್ಪರ ಪರಿಚಯ ಮಾಡಿಕೊಂಡಿದೆ. ಅಲ್ಲಿಂದ ಒಂಬತ್ತು ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ನಡೆದಿದೆ.

    ವಿದ್ಯಾಭರಣ್ ತಂದೆಯವರೇ ನಿರ್ಮಿಸಿದ್ದ ಬಾಬಾ ದೇವಸ್ಥಾನದಲ್ಲಿ ಎರಡ್ಮೂರು ದಿನಗಳ ಕಾಲ ಚಾಕೋಲೇಟ್ ಬಾಯ್ ಚಿತ್ರದ ಶೂಟಿಂಗ್ ನಡೆದಿತ್ತು. ಇದೇ ಸಂದರ್ಭದಲ್ಲಿ ವಿದ್ಯಾಭರಣ್ ಅವರ ಮನೆಗೂ ವೈಷ್ಣವಿ ತಾಯಿ ಹೋಗಿ ಬಂದಿದ್ದರಂತೆ. ಈ ಸಿನಿಮಾ ಅರ್ಧಕ್ಕೆ ನಿಂತ ಮೇಲೂ ಕೆಲ ತಿಂಗಳ ಕಾಲ ಪರಸ್ಪರ ಮಾತನಾಡಿದ್ದಾರೆ. ಆನಂತರ ಸಂಪರ್ಕ ಕಳೆದುಕೊಂಡಿದ್ದು. ಇತ್ತೀಚೆಗಷ್ಟೇ ಮತ್ತೆ ಬಾಂಧವ್ಯ ಬೆಳೆದು ಬೀಗರು ಆಗುವ ಮಟ್ಟಕ್ಕೆ ತಲುಪಿತ್ತು. ಆದರೆ, ಅಷ್ಟರಲ್ಲಿ ಆಡಿಯೋ ಹುಡುಗಿಯೊಬ್ಬಳು ಎಡವಟ್ಟು ಮಾಡಿಬಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೈಷ್ಣವಿ ಹಾಗೂ ವಿದ್ಯಾಭರಣ್ ಪರಿಚಯವಾಗಿದ್ದು 2017ರಲ್ಲಿ:  ಚಾಕೋಲೇಟ್ ಬಾಯ್ ಸ್ಟೋರಿ

    ವೈಷ್ಣವಿ ಹಾಗೂ ವಿದ್ಯಾಭರಣ್ ಪರಿಚಯವಾಗಿದ್ದು 2017ರಲ್ಲಿ: ಚಾಕೋಲೇಟ್ ಬಾಯ್ ಸ್ಟೋರಿ

    ಟಿ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಇತ್ತೀಚೆಗಷ್ಟೇ ಪರಸ್ಪರ ಪರಿಚಯವಾಗಿದ್ದರು ಎನ್ನುವುದು ಸುಳ್ಳು. ಅವರು 2017ರಿಂದಲೂ ಪರಿಚಯಸ್ಥರು ಎನ್ನುತ್ತಾರೆ ವೈಷ್ಣವಿ ಗೌಡ ತಾಯಿ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಲವಾರು ವಿಷಯಗಳನ್ನು ಹಂಚಿಕೊಂಡರು. ವಿದ್ಯಾಭರಣ್ ಫ್ಯಾಮಿಲಿ ಆರೇಳು ವರ್ಷಗಳಿಂದಲೂ ಗೊತ್ತು. ಆದರೆ, ಸಂಪರ್ಕದಲ್ಲಿ ಇರಲಿಲ್ಲವೆಂದು ಹೇಳಿದ್ದಾರೆ.

    ವೈಷ್ಣವಿ ಕುಟುಂಬಕ್ಕೆ ವಿದ್ಯಾಭರಣ್ ಪರಿಚಯವಾಗಿದ್ದು ಒಬ್ಬ ನಟನಾಗಿದೆ. 2017ರಲ್ಲಿ ಶುರುವಾದ ಚಾಕೋಲೇಟ್ ಬಾಯ್ ಸಿನಿಮಾದಲ್ಲಿ ವಿದ್ಯಾಭರಣ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ವೈಷ್ಣವಿ ಆ ಸಿನಿಮಾದ ನಾಯಕಿ. ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಸವನ ಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆದಿತ್ತು. ಅಲ್ಲಿಯೇ ವಿದ್ಯಾಭರಣ್ ಮತ್ತ ವೈಷ್ಣವಿ ಕುಟುಂಬ ಪರಸ್ಪರ ಪರಿಚಯ ಮಾಡಿಕೊಂಡಿದೆ. ಅಲ್ಲಿಂದ ಒಂಬತ್ತು ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ನಡೆದಿದೆ. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ವಿದ್ಯಾಭರಣ್ ತಂದೆಯವರೇ ನಿರ್ಮಿಸಿದ್ದ ಬಾಬಾ ದೇವಸ್ಥಾನದಲ್ಲಿ ಎರಡ್ಮೂರು ದಿನಗಳ ಕಾಲ ಚಾಕೋಲೇಟ್ ಬಾಯ್ ಚಿತ್ರದ ಶೂಟಿಂಗ್ ನಡೆದಿತ್ತು. ಇದೇ ಸಂದರ್ಭದಲ್ಲಿ ವಿದ್ಯಾಭರಣ್ ಅವರ ಮನೆಗೂ ವೈಷ್ಣವಿ ತಾಯಿ ಹೋಗಿ ಬಂದಿದ್ದರಂತೆ. ಈ ಸಿನಿಮಾ ಅರ್ಧಕ್ಕೆ ನಿಂತ ಮೇಲೂ ಕೆಲ ತಿಂಗಳ ಕಾಲ ಪರಸ್ಪರ ಮಾತನಾಡಿದ್ದಾರೆ. ಆನಂತರ ಸಂಪರ್ಕ ಕಳೆದುಕೊಂಡಿದ್ದು. ಇತ್ತೀಚೆಗಷ್ಟೇ ಮತ್ತೆ ಬಾಂಧವ್ಯ ಬೆಳೆದು ಬೀಗರು ಆಗುವ ಮಟ್ಟಕ್ಕೆ ತಲುಪಿತ್ತು. ಆದರೆ, ಅಷ್ಟರಲ್ಲಿ ಆಡಿಯೋ ಹುಡುಗಿಯೊಬ್ಬಳು ಎಡವಟ್ಟು ಮಾಡಿಬಿಟ್ಟಿದ್ದಾರೆ.

    ನಟಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದ್ಯಾಭರಣ್ ನಡತೆ ಸರಿ ಇಲ್ಲ ಎಂದು ಹುಡುಗಿಯೊಬ್ಬಳು ಆಡಿಯೋ ಮೂಲಕ ಹೇಳಿದ ವಿಷಯ ಮೊದಲು ಗೊತ್ತಾಗಿದ್ದು ವೈಷ್ಣವಿ ಅವರ ತಾಯಿಗೆ. ಈ ವಿಡಿಯೋ ಇಟ್ಟುಕೊಂಡು ವಿದ್ಯಾಭರಣ್ ತಾಯಿಯನ್ನು ವೈಷ್ಣವಿ ತಾಯಿ ವಿಚಾರಿಸಿದಾಗ, ವಿದ್ಯಾಭರಣ್ ತಾಯಿ ವಾಯ್ಸ್ ನೋಟ್ಸ್ ವೊಂದನ್ನು ಕಳುಹಿಸಿದ್ದಾರೆ.

    ವೈಷ್ಣವಿ ಅವರ ತಾಯಿಗೆ ಕಳುಹಿಸಿದ ವಾಯ್ಸ್ ನೋಟ್ಸ್ ಅನ್ನು ಮಾಧ್ಯಮಗಳ ಮುಂದೆ ಕೇಳಿಸಿದ್ದು, ‘ನೀವು ಸಮಾಧಾನವಾಗಿರಿ. ನಮ್ಮ  ಕಡೆಯಿಂದ ತಪ್ಪಾಗಿದೆ. ಆ ಹುಡುಗಿ ಹೇಳುವಷ್ಟು ನನ್ನ ಮಗ ಕೆಟ್ಟವನಲ್ಲ. ಯಾರು ಹೀಗೆ ಮಾಡಿದ್ದಾರೆ ಅನ್ನೊದನ್ನ ಪತ್ತೆ ಹಚ್ಚುವವರೆಗೆ ಸ್ವಲ್ಪ ಸಮಾಧಾನವಾಗಿರಿ’ ಎಂದು ವಿದ್ಯಾಭರಣ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.

    ವಿದ್ಯಾಭರಣ್ ಕೂಡ ಮಾಧ್ಯಮಗಳ ಮುಂದೆ ಈ ವಿಷಯವನ್ನು ಪದೇ ಪದೇ ಹೇಳುತ್ತಲೇ ಇದ್ದಾರೆ. ನನಗೆ ಗರ್ಲ್ ಫ್ರೆಂಡ್ ಇದ್ದದ್ದು ನಿಜ. ಆದರೆ, ನಾನು ಯಾರೊಂದಿಗೂ ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ರಿಲೇಶನ್ಶಿಪ್ ಅಲ್ಲಿ ಇದ್ದದ್ದು ಹಳೆಯ ಕಥೆ. ಅದನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತಾಡುತ್ತಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಮತ್ತು ನನ್ನ ಕುಟುಂಬದ ಮಾನವನ್ನು ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಆಡಿಯೋ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ: ವಿದ್ಯಾಭರಣ್ ತಾಯಿ

    ಆಡಿಯೋ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ: ವಿದ್ಯಾಭರಣ್ ತಾಯಿ

    ಟಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದ್ಯಾಭರಣ್ ನಡತೆ ಸರಿ ಇಲ್ಲ ಎಂದು ಹುಡುಗಿಯೊಬ್ಬಳು ಆಡಿಯೋ ಮೂಲಕ ಹೇಳಿದ ವಿಷಯ ಮೊದಲು ಗೊತ್ತಾಗಿದ್ದು ವೈಷ್ಣವಿ ಅವರ ತಾಯಿಗೆ. ಈ ವಿಡಿಯೋ ಇಟ್ಟುಕೊಂಡು ವಿದ್ಯಾಭರಣ್ ತಾಯಿಯನ್ನು ವೈಷ್ಣವಿ ತಾಯಿ ವಿಚಾರಿಸಿದಾಗ, ವಿದ್ಯಾಭರಣ್ ತಾಯಿ ವಾಯ್ಸ್ ನೋಟ್ಸ್ ವೊಂದನ್ನು ಕಳುಹಿಸಿದ್ದಾರೆ.

    ವೈಷ್ಣವಿ ಅವರ ತಾಯಿಗೆ ಕಳುಹಿಸಿದ ವಾಯ್ಸ್ ನೋಟ್ಸ್ ಅನ್ನು ಮಾಧ್ಯಮಗಳ ಮುಂದೆ ಕೇಳಿಸಿದ್ದು, ‘ನೀವು ಸಮಾಧಾನವಾಗಿರಿ. ನಮ್ಮ  ಕಡೆಯಿಂದ ತಪ್ಪಾಗಿದೆ. ಆ ಹುಡುಗಿ ಹೇಳುವಷ್ಟು ನನ್ನ ಮಗ ಕೆಟ್ಟವನಲ್ಲ. ಯಾರು ಹೀಗೆ ಮಾಡಿದ್ದಾರೆ ಅನ್ನೊದನ್ನ ಪತ್ತೆ ಹಚ್ಚುವವರೆಗೆ ಸ್ವಲ್ಪ ಸಮಾಧಾನವಾಗಿರಿ’ ಎಂದು ವಿದ್ಯಾಭರಣ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ. ಇದನ್ನೂ ಓದಿ: ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ವಿದ್ಯಾಭರಣ್ ಕೂಡ ಮಾಧ್ಯಮಗಳ ಮುಂದೆ ಈ ವಿಷಯವನ್ನು ಪದೇ ಪದೇ ಹೇಳುತ್ತಲೇ ಇದ್ದಾರೆ. ನನಗೆ ಗರ್ಲ್ ಫ್ರೆಂಡ್ ಇದ್ದದ್ದು ನಿಜ. ಆದರೆ, ನಾನು ಯಾರೊಂದಿಗೂ ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ರಿಲೇಶನ್ಶಿಪ್ ಅಲ್ಲಿ ಇದ್ದದ್ದು ಹಳೆಯ ಕಥೆ. ಅದನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತಾಡುತ್ತಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಮತ್ತು ನನ್ನ ಕುಟುಂಬದ ಮಾನವನ್ನು ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    ವಿದ್ಯಾಭರಣ್ ಬಗ್ಗೆ ಮಾತನಾಡಿದ ಆಡಿಯೋ ಹುಡುಗಿ, ನಟಿ ಎಂದು ಹೇಳಲಾಗಿದ್ದು, ಆ ಹುಡುಗಿ ಮಾಧ್ಯಮವೊಂದರ ಜೊತೆ ಮಾತನಾಡಿ ಆಡಿಯೋ ಹರಿಬಿಟ್ಟಿದ್ದಾರೆ. ಈಗ ಅದೇ ಆಡಿಯೋ ವೈಷ್ಣವಿ ಮತ್ತು ವಿದ್ಯಾಭರಣ್ ಬದುಕಿಗೆ ಮುಳ್ಳಾಗಿ ಕಾಡುತ್ತಿದೆ. ಈ ಸಂಬಂಧ ಇನ್ನು ಮುಂದುವರೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವೈಷ್ಣವಿ ಅವರ ತಾಯಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ: ವಿದ್ಯಾಭರಣ್

    ನನ್ನ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ: ವಿದ್ಯಾಭರಣ್

    ನ್ನಡ ಕಿರುತೆರೆ ಮೂಲಕ ಜನಪ್ರಿಯ ಗಳಿಸಿದ್ದ ನಟಿ ವೈಷ್ಣವಿ ಗೌಡ (Vaishnavi Gowda) ಅವರ ನಿಶ್ಚಿತಾರ್ಥ (Engagement) ವಿದ್ಯಾಭರಣ್ ಅವರ ಜೊತೆಗೆ ಇತ್ತೀಚೆಗಷ್ಟೇ ನಡೆದಿತ್ತು. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ, ನಟಿಯೊಬ್ಬರು ವಿದ್ಯಾಭರಣ್ (Vidya Bharan) ತಮಗೆ ಮೋಸ ಮಾಡಿರುವುದಾಗಿ ಆರೋಪಿಸಿದ್ದಾರೆ.

    ಈ ಕುರಿತಂತೆ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ವಿದ್ಯಾಭರಣ್ ಅವರು, ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ನಾಳೆ ಕಮೀಷನರ್‍ಗೆ ದೂರು ನೀಡುತ್ತೇನೆ. ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್‍ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್‍ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ನನ್ನ ರೀತಿ ಬೇರೆ ಯಾವ ಹುಡುಗನಿಗೂ ಹೀಗೆ ಆಗಬಾರದು. ಇವತ್ತು ಬುದ್ಧಿ ಕಲಿಸಿಲ್ಲ ಅಂದರೆ, ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಆಗುತ್ತದೆ. ನಾನು ಮೂರು ತಿಂಗಳು ಯಾವ ಹುಡುಗಿಯನ್ನು ಕೂಡ ಕರೆದುಕೊಂಡು ಬಂದಿಲ್ಲ. ನೇರವಾಗಿ ಬಂದು ದೂರು ಕೊಡದೇ ಈ ರೀತಿ ಮಾಡಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ನಟಿ ವೈಷ್ಣವಿ ಗೌಡ (Vaishnavi Gowda)  ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಸದ್ದು ಮಾಡುತ್ತಿದ್ದು, ವಿದ್ಯಾಭರಣ್ (Vidya Bharan )ಮೇಲೆ ಅನೇಕ ಆರೋಪಗಳನ್ನ ಮಾಡಿದ್ದಾರೆ.

    ಇನ್ ಸ್ಟಾಗ್ರಾಂ ಖಾತೆಯಿಂದ ಅನೇಕ ಹುಡುಗಿಯರೊಂದಿಗೆ ಮೆಸೇಜ್ ಮಾಡಿ ಅನುಚಿತ ವರ್ತನೆ ತೋರಿದ್ದಾನೆ. ಏನೇ ಆಗಲಿ ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಆಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ಆಡಿಯೋನಲ್ಲಿ ಏನಿದೆ?: ವ್ಯಕ್ತಿಯೊಬ್ಬರಿಗೆ ಕರೆ ಮಾಡಿರುವ ನಟಿ, ಅವನು ಒಂದೇ ಒಂದು ಡಬ್ಬಾ ಸಿನಿಮಾದಲ್ಲಿ ನಟಿಸಿದ್ದಾನೆ. ಅದು ಒಂದು ವಾರ ಸಹ ಹೆಸರು ಮಾಡಲಿಲ್ಲ. ಅವನ ನಿಜವಾದ ಹೆಸರು ವಿದ್ಯಾಭರಣ್ ಅಂತಾ ಹಳ್ಳಿಯಿಂದ ಬಂದು ಇಲ್ಲೇ ಮನೆ ಕಟ್ಟಿಕೊಂಡಿದ್ದಾನೆ, ಒಂದು ಸಾಯಿಬಾಬಾ ಟೆಂಪಲ್ ಇದೆ. ತನ್ನ ಇನ್ಸ್‌ ಸ್ಟಾಗ್ರಾಮ್ ಖಾತೆಯಿಂದ ಅನೇಕ ಹುಡುಗಿಯರಿಗೆ ಮೆಸೇಜ್ ಮಾಡಿದ್ದಾನೆ. ಈಗ 3-4 ಸಾವಿರ ಫಾಲೋವರ್ಸ್ ಇದ್ದ ಆ ಖಾತೆಯೇ ಇಲ್ಲ. ಹುಡ್ಗಿಯರಿಗೆ ಮೆಸೇಜ್ ಮಾಡ್ತಾ ನಾನು ನಿಮ್ಮನ್ನ ಮದುವೆ ಆಗ್ತಿನಿ, ಡೇಟ್ ಮಾಡೋಣ? ಅಂತಾ ಕರೆದಿದ್ದಾನೆ.

    ಫ್ಯಾಶನ್ ಡಿಸೈನರ್ ಒಬ್ಬರನ್ನ ಮನೆಗೆ ಕರೆದುಕೊಂಡು ಹೋಗಿ ನನ್ನ ಹೆಂಡತಿ ಆಗೋಳು ಅಂತಾ ಪರಿಚಯ ಮಾಡಿಸಿದ್ದಾನೆ. ನಂತರ ಬ್ರೇಕಪ್ ಮಾಡಿಕೊಂಡಿದ್ದಾನೆ. ಹಾಗೆಯೇ ನನಗೂ ಮೆಸೇಜ್ ಮಾಡಿ, ತುಂಬ ಇಷ್ಟ ಆಗಿದ್ದೀರಾ, 150 ಕೋಟಿ ಆಸ್ತಿಯಿದೆ, ಆಡಿ ಕಾರ್‌ ಇದೆ. ಟೆಂಪಲ್ ಇದೆ ಎಂದು ಹೇಳಿಕೊಂಡಿದ್ದ. ಡೇಟ್ ಮಾಡಲು ಕರೆದಿದ್ದ. ನಾನು ಆಗಲ್ಲ ಎಂದು ಹೇಳಿದೆ. ಇದಲ್ಲದೇ ರಾಜಕಾರಣಿಗಳ ಹೆಸರು ಬಳಸಿಕೊಂಡು ಹೆದರಿಸುವ ಕೆಲಸವನ್ನು ಆತ ಮಾಡಿದ್ದಾನೆ ಅನ್ನೋ ಅನೇಕ ಆರೋಪಗಳನ್ನ ಮಾಡಿದ್ದಾರೆ. ಇದನ್ನೂ ಓದಿ:‘ಡವ್ ಮಾಸ್ಟರ್’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಬಿಗ್ ಬಾಸ್ ನಂತರ ಕಿರುತೆರೆಯಿಂದ ದೂರ ಉಳಿದಿದ್ದ ನಟಿ ಮತ್ತೆ ಹೊಸ ಧಾರಾವಾಹಿ ಮೂಲಕ ವೈಷ್ಣವಿ ಕಂಬ್ಯಾಕ್ ಆಗಿದ್ದಾರೆ. ಈ ಮಧ್ಯೆ ನಟಿಯ ಎಂಗೇಜ್‌ಮೆಂಟ್ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವೈಷ್ಣವಿ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜಾ ಆದರೆ ಇದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]