Tag: vidya balan

  • ಸೆಟ್ಟೇರಲಿದೆ ಶ್ರೀದೇವಿ ಜೀವನಾಧರಿತ ಸಿನಿಮಾ

    ಸೆಟ್ಟೇರಲಿದೆ ಶ್ರೀದೇವಿ ಜೀವನಾಧರಿತ ಸಿನಿಮಾ

    ಮುಂಬೈ: ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಅವರ ಜೀವನಾಧರಿತ ಸಿನಿಮಾವೊಂದು ಸೆಟ್ಟೇರಲು ಸಜ್ಜಾಗಿದೆ. ಶ್ರೀದೇವಿ ಫೆಬ್ರವರಿ 24ರಂದು ದುಬೈನಲ್ಲಿ ಸಾವನ್ನಪ್ಪಿದ್ದರು. ಈಗ ಬಾಲಿವುಡ್ ನ ನಿರ್ದೇಶಕ ಹಂಸಲ ಮೆಹ್ತಾ ಅವರು ಶ್ರೀದೇವಿ ಅವರ ಜೀವನಾಧರಿತ ಸಿನಿಮಾ ಮಾಡಲು ಅಣಿಯಾಗಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮೆಹ್ತಾ, ಶ್ರೀದೇವಿ ಇರುವಾಗ ನಾನು ಅವರೊಂದಿಗೆ ನನ್ನ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿಲ್ಲ. ಆದ್ರೆ ಇಂದು ಶ್ರೀದೇವಿ ಜೀವನದ ಕಥೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ನಿರ್ಧರಿಸಿದ್ದೇನೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಅಮಿತಾಬ್ ಬಚ್ಚನ್‍ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?- ಬಿಗ್ ಬಿ ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಸಾವು

    ಸಿನಿಮಾದಲ್ಲಿ ಶ್ರೀದೇವಿ ಅವರ ಪಾತ್ರಕ್ಕೆ ನಟಿ ವಿದ್ಯಾಬಾಲನ್ ಜೀವ ತುಂಬಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಈಗಾಗಲೇ ನಿರ್ದೇಶಕರು ವಿದ್ಯಾ ಬಾಲನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಶ್ರೀದೇವಿ ಪಾತ್ರದಲ್ಲಿ ನಟಿಸಲು ವಿದ್ಯಾ ಬಾಲನ್ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಚಿತ್ರತಂಡ ನಟಿಯ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡ್ರೆ ಫಿಲಂನಲ್ಲಿ ವಿದ್ಯಾ ನಟಿಸುವುದು ಪಕ್ಕಾ ಆಗಲಿದೆ. ಸಿನಿಮಾದಲ್ಲಿ ಶ್ರೀದೇವಿ ಪತಿ ಬೋನಿ ಕಪೂರ್ ಮತ್ತು ಮಕ್ಕಳಾದ ಖುಷಿ ಹಾಗು ಜಾಹ್ನವಿ ಪಾತ್ರದಲ್ಲಿ ಯಾರು ಮಿಂಚಲಿದ್ದಾರೆ ಅಂತ ಚಿತ್ರತಂಡ ರಿವೀಲ್ ಮಾಡಿಲ್ಲ. ಇದನ್ನೂ ಓದಿ: ಕೊನೆಗೂ ಶ್ರೀದೇವಿ ನಟನೆಯ ಐದು ಸಿನಿಮಾಗಳು ರಿಲೀಸ್ ಆಗಲೇ ಇಲ್ಲ

    1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ `ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು. 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು. ಇದನ್ನೂ ಓದಿ: ಶ್ರೀದೇವಿ ಥರನೇ ಇದ್ದ, ಅಕಾಲಿಕ ಮರಣ ಹೊಂದಿದ ನಟಿ ದಿವ್ಯ ಭಾರತಿ ಬಗ್ಗೆ ನಿಮಗೆ ಗೊತ್ತಾ?

    1995ರಲ್ಲಿ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 2012ರಲ್ಲಿ `ಇಂಗ್ಲಿಷ್ ವಿಂಗ್ಲೀಷ್’ ನಲ್ಲಿ ಅಭಿನಯಿಸುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಹಾಸ್ಯ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಶ್ರೀದೇವಿಯರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.

    ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಅಂದರೆ ಫೆಬ್ರವರಿ 24ರಂದು ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಫೆಬ್ರವರಿ 27ರ ರಾತ್ರಿ ಮುಂಬೈಗೆ ತರಲಾಗಿತ್ತು. ಆಕಸ್ಮಿಕವಾಗಿ ಬಾತ್ ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಫೆಬ್ರವರಿ 28ರಂದು ಅಯ್ಯಪ್ಪನ್ ಸಂಪ್ರದಾಯದಂತೆ ಬಾಲಿವುಡ್ ನಟಿ ಶ್ರೀದೇವಿಯ ಅಂತ್ಯಕ್ರಿಯೆ ನೇರವೇರಿದೆ. ಇದನ್ನೂ ಓದಿ: ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ

  • ರೇಡಿಯೋ ಜಾಕಿ ವೃತ್ತಿ ಆರಂಭಿಸಿದ ವಿದ್ಯಾಬಾಲನ್!

    ರೇಡಿಯೋ ಜಾಕಿ ವೃತ್ತಿ ಆರಂಭಿಸಿದ ವಿದ್ಯಾಬಾಲನ್!

    ಮುಂಬೈ: ಬಾಲಿವುಡ್ ನಲ್ಲಿ ಈಗ ವಿದ್ಯಾ ಬಾಲನ್ ನಟನೆಯ `ತುಮಾರಿ ಸುಲು’ ಸಿನಿಮಾದ ಮಾತುಗಳು ಕೇಳಿ ಬರುತ್ತಿವೆ. ಇಂದು ತುಮಾರಿ ಸುಲು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರನ್ನು ನಗೆ ಕಡಲಿನಲ್ಲಿ ತೇಲಿಸುತ್ತಿದೆ.

    ಒಬ್ಬ ಮಧ್ಯ ವಯಸ್ಕ ಗೃಹಿಣಿಯ ಪಾತ್ರದಲ್ಲಿ ವಿದ್ಯಾ ಈ ಬಾರಿ ಬಣ್ಣ ಹಚ್ಚಿದ್ದಾರೆ. ಸಂಸಾರದ ಜವಾಬ್ದಾರಿಯ ನಡುವೆ ತನ್ನ ಆಸೆಗಳನ್ನು ಪೂರ್ಣಗೊಳಿಸಿಕೊಳ್ಳುವ ಸುಂದರವಾದ ಕಥೆಯನ್ನು ಸಿನಿಮಾ ಹೊಂದಿದೆ. ಆರ್‍ಜೆ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾ ಪ್ರೆಶರ್ ಕುಕ್ಕರ್ ಗೆಲ್ಲುತ್ತಾರೆ. ರೇಡಿಯೋ ಚಾನೆಲ್ ಮುಖ್ಯಸ್ಥೆಯಾಗಿ ನಟಿ ನೇಹಾ ದೂಪಿಯಾ ಕಾಣಿಸಿಕೊಂಡಿದ್ದಾರೆ.

    ಪ್ರಶಸ್ತಿ ಪಡೆಯಲು ತೆರಳುವ ವಿದ್ಯಾ ತಾನು ಆರ್‍ಜೆ ಕೆಲಸ ಖಾಲಿ ಎಂಬ ಬೋರ್ಡ್ ನೋಡುತ್ತಾರೆ. ವಿದ್ಯಾ ತಾವು ಆರ್‍ಜೆ ಆಗುವ ಇಂಗಿತವನ್ನು ನೇಹಾ ದೂಪಿಯಾ ಮುಂದೆ ಹೇಳಿಕೊಂಡಾಗ `ಸಾರಿ ವಾಲಿ ಬಾಬಿ’ ಎಂಬ ವಿಶೇಷ ಕಾರ್ಯಕ್ರಮವನ್ನೇ ಆಯೋಜನೆ ಮಾಡುತ್ತಾರೆ.

    ಮಧುರ, ಸಿಹಿಯಾದ ಧ್ವನಿ ಮೂಲಕ ವಿದ್ಯಾ ಕೇಳುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ನಡುವೆ ಕೆಲಸ ಮಧ್ಯೆ ಬ್ಯುಸಿಯಾಗುವ ವಿದ್ಯಾರ ಪತಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಹೇಗೆ ವಿದ್ಯಾ ಎದುರಿಸುತ್ತಾರೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಈ ನಡುವೆ ಪತಿ-ಪತ್ನಿ ನಡುವಿನ ಹಾಸ್ಯ ಸನ್ನಿವೇಶಗಳು ಮತ್ತು ಆರ್‍ಜೆ ಕೆಲಸ ಮಾಡುವಾಗ ಹಾಸ್ಯ ದೃಶ್ಯಗಳು ನೋಡುಗರನ್ನು ನಗೆಯಲ್ಲಿ ತೇಲಿಸುತ್ತದೆ.

    ಟ್ರೇಲರ್ ನಲ್ಲಿ ಎಂದಿನಂತೆ ವಿದ್ಯಾ ತಮ್ಮ ನಟನೆಯಿಂದ ಭರವಸೆಯನ್ನು ಮೂಡಿಸಿದ್ದಾರೆ. ಟ್ರೇಲರ್ ಸಹ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಸಿನಿಮಾಗೆ ಸುರೇಶ್ ತ್ರಿವೇಣಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ತುಮಾರಿ ಸುಲು ನಿಮ್ಮನ್ನು ನಗಿಸಲು ನವೆಂಬರ್ 17ರಂದು ಬರಲಿದ್ದಾಳೆ.

  • ಅಪಘಾತಕ್ಕೀಡಾದ ಬಾಲಿವುಡ್ ನಟಿ ವಿದ್ಯಾ ಬಾಲನ್ ಕಾರು

    ಅಪಘಾತಕ್ಕೀಡಾದ ಬಾಲಿವುಡ್ ನಟಿ ವಿದ್ಯಾ ಬಾಲನ್ ಕಾರು

    ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಕಾರು ಅಪಘಾತಕ್ಕೀಡಾಗಿ ನಜ್ಜುಗುಜ್ಜಾದ ಘಟನೆ ಮುಂಬೈನಲ್ಲಿ ನಡೆದಿದೆ.

    ಘಟನೆಯಲ್ಲಿ ವಿದ್ಯಾ ಬಾಲನ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯಾ ಮೀಟಿಂಗ್‍ವೊಂದರ ಸಲುವಾಗಿ ಬಾಂದ್ರಾಗೆ ತೆರಳುತ್ತಿದ್ದ ವೇಳೆ ಮತ್ತೊಂದು ಕಾರು ಅವರ ಕಾರಿಗೆ ಗುದ್ದಿದೆ. ಪರಿಣಾಮ ವಿದ್ಯಾ ಬಾಲನ್ ಕಾರಿಗೆ ಹಾನಿಯಾಗಿದೆ.

    ಇದೊಂದು ಚಿಕ್ಕ ಅಪಘಾತ ವಿದ್ಯಾ ಬಾಲನ್ ಚೆನ್ನಾಗಿದ್ದಾರೆ. ಕಾರಿಗೆ ಹಾನಿಯಾಗಿದ್ದು ಅದೃಷ್ಟಶಾತ್ ಯರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ವಿದ್ಯಾ ಬಾಲನ್ ಅವರ ಮುಂದಿನ ಚಿತ್ರ ತುಮ್ಹಾರಿ ಸುಲು. ಈ ಚಿತ್ರದಲ್ಲಿ ವಿದ್ಯಾ ರೇಡಿಯೋ ಜಾಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿತ್ತು. ಆದ್ರೆ ದೀಪಿಕಾ ಪಡುಕೋಣೆಯ ಐತಿಹಾಸಿಕ ಚಿತ್ರ ಪದ್ಮಾವತಿ ಕೂಡ ಡಿಸೆಂಬರ್ 1 ರಂದು ಬಿಡುಗಡೆಯಾಗುತ್ತಿರುವುದರಿಂದ, ತುಮ್ಹಾರಿ ಸುಲು ಚಿತ್ರ ನವೆಂಬರ್ 24ಕ್ಕೆ ಬಿಡುಗಡೆ ಆಗಲಿದೆ ಅಂತ ಹೇಳಲಾಗಿದೆ.