Tag: vidya balan

  • ರಾಜಾ ಶಿವಾಜಿಗೆ ವಿದ್ಯಾ ಬಾಲನ್ ಎಂಟ್ರಿ: ದೊಡ್ಡದಾಯ್ತು ಪಟ್ಟಿ!

    ರಾಜಾ ಶಿವಾಜಿಗೆ ವಿದ್ಯಾ ಬಾಲನ್ ಎಂಟ್ರಿ: ದೊಡ್ಡದಾಯ್ತು ಪಟ್ಟಿ!

    ರಿತೇಶ್ ದೇಶ್ಮುಖ್ (Riteish Deshmukh) ದ್ವಿಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ `ರಾಜಾ ಶಿವಾಜಿ’ (Raja Shivaji). ಈ ಸಿನಿಮಾದಲ್ಲಿ ಸಂಜಯ್ ದತ್, ಅಭಿಷೇಕ್ ಬಚ್ಚನ್, ಮಹೇಶ್ ಮಂಜ್ರೇಕರ್, ಸಚಿನ್ ಖೇಡೇಕರ್, ಭಾಗ್ಯಶ್ರೀ, ಫರ್ದೀನ್ ಖಾನ್, ಜಿತೇಂದ್ರ ಜೋಶಿ, ಅಮೋಲ್ ಗುಪ್ತೆ ಮತ್ತು ಜೆನೆಲಿಯಾ ದೇಶ್ಮುಖ್ ಸೇರಿದಂತೆ ಅತಿದೊಡ್ಡ ತಾರಾಗಣವಿದೆ. ಈ ತಂಡಕ್ಕೆ ಈಗ ಹೊಸದಾಗಿ ನಟಿ ವಿದ್ಯಾ ಬಾಲನ್ ಸೇರಿಕೊಂಡಿದ್ದಾರೆ.

    ಅಂದಹಾಗೆ ವಿದ್ಯಾ ಬಾಲನ್ (Vidya Balan) ಈ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಲಿದ್ದು, ಆ ಪಾತ್ರದಲ್ಲಿ ನಟಿಸಲು ವಿದ್ಯಾ ಬಾಲನ್ ಕೂಡಾ ತುಂಬಾ ಕೌತುಕದಿಂದ ಕಾಯುತ್ತಿದ್ದಾರಂತೆ. ಭಾರತೀಯ ಇತಿಹಾಸದಲ್ಲಿ ವೀರಗಾಥೆಯ ಸಿನಿಮಾ ಇದಾಗಲಿದ್ದು, ಈ ಸಿನಿಮಾದ ಪಾತ್ರವರ್ಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದೆ. ಇನ್ನು ಈ ಸಿನಿಮಾದ ಪಾತ್ರಕ್ಕೆ ವಿದ್ಯಾ ಬಾಲನ್ ಲುಕ್‌ಟೆಸ್ಟ್ ಮಾಡಿಸಿದ್ದಾರಂತೆ.

    ಛತ್ರಪತಿ ಶಿವಾಜಿಯವರ ಕುರಿತಾಗಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಈ ಸಿನಿಮಾ ಕೆಲವೊಂದಿಷ್ಟು ವಿಶೇಷ ಎಲಿಮೆಂಟ್ಸ್‌ನಿಂದ ವಿಭಿನ್ನ ಹಾಗೂ ವಿಶಿಷ್ಟವಾಗಿರಲಿದೆಯಂತೆ. ಮರಾಠಿಯಲ್ಲಿ ಶೂಟಿಂಗ್ ಮಾಡಿ ತದನಂತರ ಪ್ಯಾನ್ ಇಂಡಿಯನ್ ಕಾನ್ಸೆಪ್ಟ್‌ನಲ್ಲಿ ಸಿನಿಮಾವನ್ನ ಭಾರತೀಯ ಎಲ್ಲ ಭಾಷೆಯಲ್ಲೂ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

    ರಾಜಾ ಶಿವಾಜಿ ಸಿನಿಮಾ 2026ರ ಮೇ 1ರಂದು ತೆರೆಗೆ ಬರಲಿದ್ದು, ಸಕಲ ಸಿದ್ಧತೆಯಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಈ ಸಿನಿಮಾ ಮುಖ್ಯಪಾತ್ರದಲ್ಲಿ ಬಣ್ಣಹಚ್ಚಲು ವಿದ್ಯಾ ಬಾಲನ್ ಕೂಡಾ ತಯಾರಾಗಿದ್ದಾರೆ.

  • ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು

    ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು

    ಮಾದಕ ನಟಿ ಪೂನಂ ಪಾಂಡೆಯ (Poonam Pandey) ಟಾಪ್‌ಲೆಸ್‌ ಅವತಾರಗಳು ಹೊಸದೇನಲ್ಲ. ಆಗಾಗ್ಗೆ ತನ್ನ ಮೈಮಾಟವನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

    ಕೆಲವು ತಿಂಗಳ ಹಿಂದೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿರುವುದಾಗಿ ಇಡೀ ದೇಶವನ್ನೇ ನಂಬಿಸಿದ್ದ ಚಾಲಕಿ ಈಕೆ. ಇದೀಗ ಅಭಿಮಾನಿಗಳಿಗೆ ಕಚಗುಳಿ ಇಡುವ ಮೂಲಕ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಸುದ್ದಿಯಾಗಿದ್ದಾರೆ. ಮೈಮೇಲೆ ತುಂಡು ಬಟ್ಟೆಯಿಲ್ಲದೇ ಕೇವಲ 2 ತುಂಡು ನ್ಯೂಸ್‌ ಪೇಪರ್‌ (News Paper) ಸುತ್ತಿಕೊಂಡು ಫೋಟೋ ಶೂಟ್‌ ಮಾಡಿಸಿದ್ದಾರೆ. ಈ ಮಾದಕ ಫೋಟೋಗಳನ್ನ ತಮ್ಮ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡು ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಜೊತೆಗೆ ʻನನ್ನನ್ನು ಓದಲು ಬಯಸುವಿರಾʼ ಅಂತ ಇಂಗ್ಲಿಷ್‌ನಲ್ಲಿ ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.

    ಇದಕ್ಕೆ ಕಾಮೆಂಟ್‌ ಮಾಡಿರುವ ನೆಟ್ಟಿಗರು ʻಪೇಪರ್‌ ಕೊಡಿ ಸ್ವಲ್ಪ ಓದಿ ಕೊಡ್ತೀನಿ ಅಂತಾ ಕಾಲೆಳೆದಿದ್ದಾರೆ. ಇನ್ನೂ ಕೆಲವರು, ಸೋ ಹಾಟ್‌, ಸೆಕ್ಸಿ ಅಂತಾ ಕಾಮೆಂಟ್‌ ಮಾಡಿದ್ರೆ, ಉಳಿದವರು ವಾವ್‌ ಎನ್ನುತ್ತಾ ಕಪ್ಪು ಹೃದಯ ಎಮೋಜಿಯನ್ನ ಕಾಮೆಂಟ್‌ ಮಾಡಿದ್ದಾರೆ.

    ಈ ಹಿಂದೆ ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ನ್ಯೂಸ್ ಪೇಪರ್ ನಿಂದ ಖಾಸಗಿ ಅಂಗ ಮುಚ್ಚಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋದಲ್ಲಿ (Photoshoot) ವಿದ್ಯಾ ಬಾಲನ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಾನಾ ರೀತಿಯ ಪ್ರಶ್ನೆಗಳನ್ನು ಮಾಡುತ್ತಿದ್ದರು.

    vidya balan 1

    ಸದಾ ಸೀರೆಯಲ್ಲೇ ಕಂಗೊಳಿಸುತ್ತಿದ್ದ ವಿದ್ಯಾ ಬಾಲನ್, ಯಾಕೆ ಈ ರೀತಿ ಕಾಣಿಸಿಕೊಂಡಿದ್ದಾರೆ ಅಂತೆಲ್ಲ ಕೇಳಿದ್ದರು. ಇದಕ್ಕೂ ಮುನ್ನ ಕಿಯಾರಾ ಅಡ್ವಾಣಿ ನ್ಯೂಸ್‌ಪೇಪರ್‌ ಮುಚ್ಚಿಕೊಂಡು ಫೋಟೋ ತೆಗೆಸಿ ಪೇಚಿಗೆ ಸಿಲುಕಿದ್ದರು.

  • Bhool Bhulaiyaa 3: ಬೆಚ್ಚಿ ಬೀಳಿಸಲು ಬಂದ ವಿದ್ಯಾ ಬಾಲನ್

    Bhool Bhulaiyaa 3: ಬೆಚ್ಚಿ ಬೀಳಿಸಲು ಬಂದ ವಿದ್ಯಾ ಬಾಲನ್

    ಕಾರ್ತಿಕ್ ಆರ್ಯನ್ (Karthik Aryan) ನಟನೆಯ ‘ಭೂಲ್ ಭೂಲಯ್ಯ 3’ (Bhool Bhulaiyaa 3) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ದೆವ್ವದ ರೂಪದಲ್ಲಿ ವಿದ್ಯಾ ಬಾಲನ್ ಬೆಚ್ಚಿ ಬೀಳಿಸಿರುವ ತುಣುಕು ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. ಚಿತ್ರದ ಟೀಸರ್ ಇದೀಗ ಟ್ರೆಂಡಿಂಗ್‌ನಲ್ಲಿದೆ. ಇದನ್ನೂ ಓದಿ:ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

    ‘ಭೂಲ್ ಭೂಲಯ್ಯ 2’ ಚಿತ್ರದ ಸಕ್ಸಸ್ ನಂತರ ಇದರ ಪಾರ್ಟ್ 3ನಲ್ಲಿ ಕಾರ್ತಿಕ್ ಆರ್ಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ತೃಪ್ತಿ ದಿಮ್ರಿ (Tripti Dimri) ಕಾಣಿಸಿಕೊಂಡಿದ್ದಾರೆ. ಮಂಜುಲಿಕಾ ಆಗಿ ಹೆದರಿಸಲು ವಿದ್ಯಾ ಬಾಲನ್ (Vidya Balan) ಟೊಂಕ ಕಟ್ಟಿ ನಿಂತಿದ್ದಾರೆ. ಟೀಸರ್ ಝಲಕ್ ಭಯಾನಕವಾಗಿ ಮೂಡಿ ಬಂದಿದೆ. ಹಾಟ್‌ ಬ್ಯೂಟಿ ವಿದ್ಯಾ ಬಾಲನ್‌ ಈ ಬಾರಿ ದೆವ್ವದ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ.

     

    View this post on Instagram

     

    A post shared by KARTIK AARYAN (@kartikaaryan)

    ವಿದ್ಯಾ ಬಾಲನ್ ಮತ್ತು ಕಾರ್ತಿಕ್ ಆರ್ಯನ್ ಜಟಾಪಟಿ ತೋರಿಸಲಾಗಿದೆ. ಬಿಟ್ಟಿರುವ ಟೀಸರ್‌ನಿಂದ ಚಿತ್ರದ ಕುರಿತು ಕುತೂಹಲ ಕೆರಳಿಸಿದೆ. ಇದೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಸದ್ಯ ‘ಸ್ತ್ರೀ 2’ (Stree 2) ಸಕ್ಸಸ್‌ನಿಂದ ಬಾಲಿವುಡ್‌ಗೆ (Bollywood) ಮರುಜೀವ ಸಿಕ್ಕಂತೆ ಆಗಿದೆ. ‘ಭೂಲ್ ಭೂಲಯ್ಯ 3’ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.

  • ರಾತ್ರಿ ಅಳುತ್ತಿದ್ದೆ, ಬೆಳಗ್ಗೆ ಪ್ರಾರ್ಥಿಸುತ್ತಿದ್ದೆ: ಕರಾಳ ದಿನಗಳ ನೆನೆದ ವಿದ್ಯಾ ಬಾಲನ್

    ರಾತ್ರಿ ಅಳುತ್ತಿದ್ದೆ, ಬೆಳಗ್ಗೆ ಪ್ರಾರ್ಥಿಸುತ್ತಿದ್ದೆ: ಕರಾಳ ದಿನಗಳ ನೆನೆದ ವಿದ್ಯಾ ಬಾಲನ್

    ಬಾಲಿವುಡ್ ನಲ್ಲಿರುವ ನೆಪೋಟಿಸಂ (Nepotism) ಬಗ್ಗೆ ನಟಿ ವಿದ್ಯಾ ಬಾಲನ್ ಮಾತನಾಡಿದ್ದಾರೆ. ನನಗೆ ಯಾರೇ ತೊಂದರೆ ಕೊಟ್ಟರೂ ನಾನು ಇಲ್ಲಿಯೇ ಇರುವೆ ಎಂದಿದ್ದಾರೆ. ಮೂರು ವರ್ಷಗಳಿಂದ ನನಗೆ ಯಾವುದೇ ಅವಕಾಶ ಸಿಗಲಿಲ್ಲ. ಬಂದಿರೋ ಆಫರ್ ಹಾಗೆಯೇ ಹೋಗಿ ಬಿಡುತ್ತಿತ್ತು. ಆ ದಿನಗಳಲ್ಲಿ ರಾತ್ರಿ ಅಳುತ್ತಿದ್ದೆ, ಮತ್ತೆ ಬೆಳಗ್ಗೆ ಎದ್ದಾಗ ಪ್ರಾರ್ಥಿಸುತ್ತಿದ್ದೆ. ಈಗ ನೆಮ್ಮದಿಯಾಗಿ ನಿದ್ದೆ ಮಾಡುತ್ತಿರುವ ಎಂದಿದ್ದಾರೆ ವಿದ್ಯಾ ಬಾಲನ್.

    ಮೊದಲಿನಿಂದಲೂ ತಮ್ಮನ್ನು ಹತ್ತಿಕ್ಕುವಂತಹ ಕೆಲಸವನ್ನು ಹಲವರು ಮಾಡುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ. ಒಂದು ಕಡೆ ಬಾಲಿವುಡ್ ನವರಿಂದ ವಿದ್ಯಾ ತೊಂದರೆಗೆ ಒಳಗಾಗುತ್ತಿದ್ದರೆ, ಇನ್ನೊಂದು ಕಡೆ ಇವರ ಹೆಸರಿನಲ್ಲಿ ಮೋಸ ಮಾಡುವಂತಹ ಕೆಲಸ ಕೂಡ ನಡೆದಿದೆ.

    ನಟ ನಟಿಯರ ಹಾಗೂ ಅವರ ಸಂಸ್ಥೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ದೋಚುವ ಪ್ರಕರಣಗಳು ಒಂದರ ಮೇಲೊಂದು ನಡೆಯುತ್ತಲೇ ಇದೆ. ಈ ಹಿಂದೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಇಂಥದ್ದೊಂದು ದೋಖಾ ನಡೆದಿತ್ತು. ಅದಕ್ಕೆ ಸಲ್ಮಾನ್ (Salman Khan) ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ವಿದ್ಯಾ ಬಾಲನ್ (Vidya Balan) ಹೆಸರಿನಲ್ಲೂ ಇಂಥದ್ದೊಂದು ಕೃತ್ಯ ನಡೆದಿದೆ.

    ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ನಟಿಯ ಹೆಸರಿನಲ್ಲಿ ಹಣ ಮಾಡುತ್ತಿದ್ದಾರಂತೆ.  ಈ ವಿಷಯ ಅವರಿಗೆ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ವಿದ್ಯಾ ಬಾಲನ್. ಇಂತಹ ಕೃತ್ಯ ಮಾಡುತ್ತಿರುವವರನ್ನು ಬಂಧಿಸಿ, ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.

     

    ತಮ್ಮ ಹೆಸರನ್ನು ಬಳಸಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ. ನನ್ನ ಹೆಸರನ್ನು ಅವರು ದುರ್ಬಳಕ್ಕೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಇಂತಹ ಕೆಲಸ ಮಾಡುತ್ತಿರುವವರನ್ನು ಪತ್ತೆ ಮಾಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

  • ವಿದ್ಯಾ ಬಾಲನ್ ಹೆಸರಿನಲ್ಲಿ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟಿ

    ವಿದ್ಯಾ ಬಾಲನ್ ಹೆಸರಿನಲ್ಲಿ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟಿ

    ಟ ನಟಿಯರ ಹಾಗೂ ಅವರ ಸಂಸ್ಥೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ದೋಚುವ ಪ್ರಕರಣಗಳು ಒಂದರ ಮೇಲೊಂದು ನಡೆಯುತ್ತಲೇ ಇದೆ. ಈ ಹಿಂದೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಇಂಥದ್ದೊಂದು ದೋಖಾ ನಡೆದಿತ್ತು. ಅದಕ್ಕೆ ಸಲ್ಮಾನ್ (Salman Khan) ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ವಿದ್ಯಾ ಬಾಲನ್ (Vidya Balan) ಹೆಸರಿನಲ್ಲೂ ಇಂಥದ್ದೊಂದು ಕೃತ್ಯ ನಡೆದಿದೆ.

    ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ನಟಿಯ ಹೆಸರಿನಲ್ಲಿ ಹಣ ಮಾಡುತ್ತಿದ್ದಾರಂತೆ.  ಈ ವಿಷಯ ಅವರಿಗೆ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ವಿದ್ಯಾ ಬಾಲನ್. ಇಂತಹ ಕೃತ್ಯ ಮಾಡುತ್ತಿರುವವರನ್ನು ಬಂಧಿಸಿ, ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.

    ತಮ್ಮ ಹೆಸರನ್ನು ಬಳಸಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ. ನನ್ನ ಹೆಸರನ್ನು ಅವರು ದುರ್ಬಳಕ್ಕೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಇಂತಹ ಕೆಲಸ ಮಾಡುತ್ತಿರುವವರನ್ನು ಪತ್ತೆ ಮಾಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಕಿಡಿಗೇಡಿಗಳು ಇದೇ ಕೆಲಸ ಮಾಡಿದ್ದರು. ಆಡಿಷನ್ ಹಾಗೂ ಸಿನಿಮಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡಿದ್ದರು. ಆಗಲೂ ದೂರು ದಾಖಲಾಗಿತ್ತು.

  • ಅಂದು ಬೇಡವಾಗಿದ್ದ ಸಿನಿಮಾದಲ್ಲೇ ಇಂದು ನಟಿಸುತ್ತಿದ್ದಾರೆ ವಿದ್ಯಾ ಬಾಲನ್

    ಅಂದು ಬೇಡವಾಗಿದ್ದ ಸಿನಿಮಾದಲ್ಲೇ ಇಂದು ನಟಿಸುತ್ತಿದ್ದಾರೆ ವಿದ್ಯಾ ಬಾಲನ್

    ಬಾಲಿವುಡ್ ನ ಭೂಲ್ ಭುಲಯ್ಯ ಸಿನಿಮಾಗೆ ದೊಡ್ಡದೊಂದು ಇತಿಹಾಸವೇ ಇದೆ. ಈಗಾಗಲೇ ಎರಡು ಭಾಗದಲ್ಲಿ ಅದು ಮೂಡಿ ಬಂದಿದೆ. ಮೂರನೇ (Bhool Bhulayya 3) ಭಾಗದ ಚಿತ್ರೀಕರಣಕ್ಕೆ ನಿರ್ದೇಶಕ ಅನೀಸ್ ರೆಡಿ ಆಗುತ್ತಿದ್ದಾರೆ. ಈ ಸಮಯದಲ್ಲಿ ವಿದ್ಯಾ ಬಾಲನ್ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ ನಿರ್ದೇಶಕರು.

    ಭೂಲ್ ಭುಲಯ್ಯ ಸಿನಿಮಾದಲ್ಲಿ ವಿದ್ಯಾ ಬಾಲನ್ (Vidya Balan) ಮತ್ತು ಅಕ್ಷಯ್ ಕುಮಾರ್ (Akshay Kumar) ಜೋಡಿ ಮೋಡಿ ಮಾಡಿತ್ತು. ಅದರಲ್ಲೂ ವಿದ್ಯಾ ಬಾಲನ್ ಮಾಡಿದ್ದ ಮಂಜುಲಿಕಾ ಪಾತ್ರ ಅಭಿಮಾನಿಗಳ ಸೆಳೆದಿತ್ತು. ಬಾಕ್ಸ್ ಆಫೀಸಿನಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್‍ ಸಿಕ್ಕಿತ್ತು. ಎರಡನೇ ಭಾಗ ಮಾಡುವಾಗ ಈ ಜೋಡಿಯೇ ಇರಲಿಲ್ಲ. ಈ ಎರಡೂ ಪಾತ್ರಗಳಿಗೆ ಬೇರೆ ಬೇರೆ ಕಲಾವಿದರೇ ನಟಿಸಬೇಕಾಯಿತು.

    ಕೊರೋನಾ ನಂತರ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದ್ದವು. ಸ್ಟಾರ್ ನಟರ ಸಿನಿಮಾಗಳು ಬಂದರೂ, ಪ್ರೇಕ್ಷಕ ಮಾತ್ರ ಅವುಗಳನ್ನು ಸ್ವೀಕರಿಸಲೇ ಇಲ್ಲ. ಅದರಲ್ಲೂ ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್ ಮಂಡಿಯೂರಿತ್ತು. ಇವೆಲ್ಲ ಅವಮಾನಗಳನ್ನು ನಿವಾರಿಸಲು ಎಂಬಂತೆ ಬಂದಿದ್ದೇ ಕಾರ್ತಿಕ್ ಆರ್ಯನ್ (Karthik Aryan)  ನಟನೆಯ ‘ಭುಲ್ ಭುಲಯ್ಯ 2’ ಸಿನಿಮಾ. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡುವುದರ ಮೂಲಕ ಬಾಲಿವುಡ್ ಮಾನ ಮರ್ಯಾದೆ ಉಳಿಸಿತ್ತು.

    ಐವತ್ತು ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದು ಬರೋಬ್ಬರಿ 185 ಕೋಟಿ ಎನ್ನಲಾಗಿತ್ತು. ನಿರೀಕ್ಷೆಗೂ ಮೀರಿ ಹಣ ಬಂದಿರುವ ಕಾರಣಕ್ಕಾಗಿ ತಮ್ಮ ಸಿನಿಮಾದ ನಾಯಕ ನಟ ಕಾರ್ತಿಕ್ ಆರ್ಯನ್ ಅವರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದರು ನಿರ್ಮಾಪಕ ಭೂಷಣ್ ಕುಮಾರ್.  ಅಂದಾಜು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮೆಕ್ ಲಾರೆನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾದ್ದರು. ಟಬು, ಕಿಯಾರ ಅಡ್ವಾನಿ ಪಾತ್ರ ಮಾಡಿದ್ದರು.

     

    ಇದೀಗ ಮೂರನೇ ಭಾಗ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಮತ್ತೆ ವಿದ್ಯಾ ಬಾಲನ್ ನಟಿಸುತ್ತಿದ್ದಾರೆ. ತಮ್ಮ ಮಂಜುಲಿಕಾ ಪಾತ್ರವನ್ನೇ ಅವರು ಮುಂದುವರೆಸಲಿದ್ದಾರಂತೆ. ಆದರೆ, ಅಕ್ಷಯ್ ಕುಮಾರ್ ನಟಿಸುತ್ತಾರಾ ಅಥವಾ ಕಾರ್ತಿಕ್ ಆರ್ಯನ್ ಇರ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಅದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.

  • ನನ್ನ ದೇಹದ ಬಗ್ಗೆ ಮಾತಾಡಬೇಡಿ, ನನಗಿಷ್ಟವಾಗಲ್ಲ: ನಟಿ ವಿದ್ಯಾ ಬಾಲನ್

    ನನ್ನ ದೇಹದ ಬಗ್ಗೆ ಮಾತಾಡಬೇಡಿ, ನನಗಿಷ್ಟವಾಗಲ್ಲ: ನಟಿ ವಿದ್ಯಾ ಬಾಲನ್

    ಬಾಲಿವುಡ್ (Bollywood) ಖ್ಯಾತ ನಟಿ ವಿದ್ಯಾ ಬಾಲನ್ (Vidya Balan) ಪದೇ ಪದೇ ಬಾಡಿ ಶೇಮಿಂಗ್ ಗೆ (Body shaming) ಒಳಗಾಗುತ್ತಿದ್ದಾರಂತೆ. ಹಾಗಾಗಿ ನನ್ನ ದೇಹದ ಬಗ್ಗೆ ಯಾರಾದರೂ ಮಾತನಾಡಿದರೆ ಬೇಸರವಾಗುತ್ತದೆ ಎಂದಿದ್ದಾರೆ. ಮನುಷ್ಯರು ದಪ್ಪಗಾಗುವುದು ಅಥವಾ ತೆಳ್ಳಗಾಗುವುದು ಒಂದೊಂದು ಸಾರಿ ಅವರ ಆಯ್ಕೆ ಆಗಿರುವುದಿಲ್ಲ. ನಾನಾ ಕಾರಣಗಳಿಂದಾಗಿ ಹಾಗೆ ಆಗುತ್ತದೆ. ಅದನ್ನೇ ಇಟ್ಟುಕೊಂಡು ಯಾರಿಗೂ ನೋವು ಮಾಡಬಾರದು ಎಂದಿದ್ದಾರೆ.

    ಇತ್ತೀಚೆಗಷ್ಟೇ ತಮಗಾದ ನೋವಿನ ಘಟನೆಯನ್ನೂ ಹಂಚಿಕೊಂಡಿರುವ ವಿದ್ಯಾ ಬಾಲನ್, ‘ನಾನು ಮಸಾಜ್ ಪಾರ್ಲರ್ ವೊಂದಕ್ಕೆ ಹೋಗಿದ್ದೆ. ಅಲ್ಲಿದ್ದವರು ನನ್ನನ್ನು ನೋಡಿ, ಏನ್ ಮೇಡಂ ಮತ್ತೆ ದಪ್ಪಾದ್ರಾ ಅಂದ್ರು. ಅವರ ಮಾತು ಕೇಳಿ ನನಗೆ ಸಾಕಷ್ಟು ಬೇಸರವಾಯಿತು. ನಾನು ಹೋಗಿದ್ದು ಮಸಾಜ್ ಪಾರ್ಲರ್ ಗೆ, ಅವರಿಂದ ಈ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಅಲ್ಲ’ ಎಂದಿದ್ದಾರೆ.  ಇದನ್ನೂ ಓದಿ:ಮಲ್ಲಿಕಾ ಸಿಂಗ್ ಪಾತ್ರ ಪರಿಚಯಿಸಿದ ನಿರ್ದೇಶಕ ಸಿಂಪಲ್ ಸುನಿ

    ಬಾಡಿ ಶೇಮಿಂಗ್ ಕುರಿತಾಗಿ ಈ ಹಿಂದೆ ವಿದ್ಯಾ ಬಾಲನ್ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಅದರಿಂದಾಗಿ ಆಗುವ ಮಾನಸಿಕ ಕಿರಿಕಿರಿ ಕುರಿತಾಗಿಯೂ ಹೇಳಿಕೊಂಡಿದ್ದಾರೆ. ಆದರೆ, ಈವರೆಗೂ ಅದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ ಎನ್ನುವ ಬೇಸರ ಅವರದ್ದು. ಹಾಗಾಗಿ ಪದೇ ಪದೇ ತಮಗಾದ ನೋವಿನ ಕ್ಷಣಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.

     

    ಹೊಸ ಹೊಸ ಸಿನಿಮಾ ಮತ್ತು ಪಾತ್ರಗಳ ಮೂಲಕ ವಿದ್ಯಾ ಬಾಲನ್ ವಿಶೇಷ ನಟಿ ಅನಿಸಿಕೊಂಡಿದ್ದಾರೆ. ನಾಯಕಿ ಪ್ರಧಾನ ಪಾತ್ರಗಳಲ್ಲೇ ಸಾಕಷ್ಟು ಅವರು ಮಿಂಚಿದ್ದಾರೆ. ಇಂತಹ ಪಾತ್ರಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿರುವುದಕ್ಕೆ ಅವರಿಗೆ ಹೆಮ್ಮೆ ಇದೆಯಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೀರೆಯೇ ಚಂದ ಎಂದಿದ್ದ ವಿದ್ಯಾ ಬಾಲನ್ ಕೈಯಲ್ಲಿ ನ್ಯೂಸ್ ಪೇಪರ್

    ಸೀರೆಯೇ ಚಂದ ಎಂದಿದ್ದ ವಿದ್ಯಾ ಬಾಲನ್ ಕೈಯಲ್ಲಿ ನ್ಯೂಸ್ ಪೇಪರ್

    ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ನ್ಯೂಸ್ ಪೇಪರ್ ನಿಂದ ಖಾಸಗಿ ಅಂಗ ಮುಚ್ಚಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋದಲ್ಲಿ (Photoshoot) ವಿದ್ಯಾ ಬಾಲನ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಾನಾ ರೀತಿಯ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಸದಾ ಸೀರೆಯಲ್ಲೇ ಕಂಗೊಳಿಸುತ್ತಿದ್ದ ವಿದ್ಯಾ ಬಾಲನ್, ಯಾಕೆ ಈ ರೀತಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳೇ ಕೇಳುತ್ತಿದ್ದಾರೆ.

    ಒಂದು ಕೈಯಿಂದ ನ್ಯೂಸ್ ಪೇಪರ್ (Newspaper) ಹಿಡಿದು ಅಂಗಾಂಗ ಮುಚ್ಚಿಕೊಂಡಿರುವ, ಮತ್ತೊಂದು ಕೈಲಿ ಮಗ್ ಹಿಡಿದಿರುವ ವಿದ್ಯಾ ಬಾಲನ್ ಈ ರೀತಿ ಫೋಟೋ ತೆಗೆಸಿಕೊಂಡಿದ್ದು ಯಾಕೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದರೂ, ಈ ಫೋಟೋ ಸೆರೆ ಹಿಡಿದವರ ಹೆಸರನ್ನು ಹಾಕಿದ್ದಾರೆ. ಹಾಗಾಗಿ ಇದು ಕ್ಯಾಲೆಂಡರ್ ಗಾಗಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ, ನಟಿ ವಿದ್ಯಾ ಬಾಲನ್ ಅವರ ಫೋಟೋಶೂಟ್ ಮಾಡಿದ್ದು, ಅದ್ಭುತವಾಗಿ ವಿದ್ಯಾ ಬಾಲನ್ ಗ್ಲಾಮರ್ ಸೆರೆ ಹಿಡಿದಿದ್ದಾರೆ. ಹೀಗಾಗಿ ವಿದ್ಯಾ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಪೋಟೋ ನೋಡಿದ ಕೆಲವರು ‘ಡರ್ಟಿ ಸಿನಿಮಾ’ದ ಪಾತ್ರಕ್ಕೆ ಹೋಲಿಸಿದ್ದರೆ, ಇನ್ನೂ ಕೆಲವರು ಆ ಸೌಂದರ್ಯವನ್ನು ಹೊಗಳಿದ್ದಾರೆ.

    ಈ ಹಿಂದೆ ರಣಬೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಮಾಡಿಸಿಕೊಂಡಾಗ ವಿದ್ಯಾ ಬಾಲನ್ ಅವರ ಪರವಾಗಿ ಮಾತನಾಡಿದ್ದರು. ಗಂಡಸರು ಹೀಗೆ ಹಾಟ್ ಹಾಟ್ ಕಾಣಿಸಲಿ ಎಂದು ಹೇಳಿದ್ದರು. ಇದೀಗ ಅವರೇ ಅರೆಬೆತ್ತಲೆಯ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ರಣಬೀರ್ ಸಿಂಗ್ ಇವರ ಬೆಂಬಲಕ್ಕೆ ಬರುತ್ತಾರಾ ಕಾದು ನೋಡಬೇಕು.

  • ಪ್ರೆಗ್ನೆನ್ಸಿ ಸುದ್ದಿ ಹಬ್ಬಿಸಿದವರಿಗೆ ಖಡಕ್ ಉತ್ತರ ಕೊಟ್ಟ ವಿದ್ಯಾ ಬಾಲನ್

    ಪ್ರೆಗ್ನೆನ್ಸಿ ಸುದ್ದಿ ಹಬ್ಬಿಸಿದವರಿಗೆ ಖಡಕ್ ಉತ್ತರ ಕೊಟ್ಟ ವಿದ್ಯಾ ಬಾಲನ್

    ಬಾಲಿವುಡ್ (Bollywood) ಬ್ಯೂಟಿ ವಿದ್ಯಾ ಬಾಲನ್ (Vidya Balan) ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲವು ತಿಂಗಳುಗಳಿಂದ ಪ್ರೆಗ್ನೆಂಟ್ ಎಂದು ಹಬ್ಬಿಸಿದವರಿಗೆ `ಡರ್ಟಿ ಪಿಕ್ಚರ್’ (The Dirty Picture) ನಟಿ ಖಡಕ್ ಉತ್ತರ ನೀಡಿದ್ದಾರೆ. ಪ್ರೆಗ್ನೆನ್ಸಿ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ನಟಿ ವಿದ್ಯಾ ಬಾಲನ್ ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸೆಲ್ಫ್ ಲವ್ (Self Love) ಮತ್ತು ಪರ್ಸನಲ್ ಲೈಫ್‌ಗೆ ಸಂಬಂಧಿಸಿದ ಒಂದಿಷ್ಟು ವಿಚಾರಗಳನ್ನ ನಟಿ ವಿದ್ಯಾ ಬಾಲನ್ (Vidya Balan) ಹಂಚಿಕೊಂಡಿದ್ದಾರೆ.

    ದೇವರಿಗೇ ಗೊತ್ತು ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು. ನಾನು ದಪ್ಪಗಿರುವೆ ಇದು ನನ್ನ ದೇಹ, ಪ್ರೆಗ್ನೆಂಟ್ ಆದಾಗ ಹೇಗೆ ಕಾಣಿಸುತ್ತೀನಿ ಎಂದು ಗೊತ್ತಿಲ್ಲ ಆದರೆ ಈಗ ನೋಡಲು ಹೀಗಿರುವೆ. ಇಷ್ಟು ವರ್ಷ ಚಿತ್ರರಂಗದಲ್ಲಿ ಇರುವೆ ಈಗಲೂ ನಿಮಗೆ ಅರ್ಥವಾಗಿಲ್ವಾ ನಾನು ಸೈಜ್ ಝಿರೋ ಇಲ್ಲ ನಾನು ಸಣ್ಣ ಎಂದೂ ಇರಲಿಲ್ಲ ಎಂದು. ನನ್ನ ಬಗ್ಗೆ ನಾನು ನೆಗೆಟಿವ್ ಯೋಚನೆ ಮಾಡುವುದಿಲ್ಲ. ನಾನು ಸಂಬಂಧಗಳಿಗೆ ಹೆಚ್ಚಿಗೆ ಗೌರವ ಕೊಡುವ ವ್ಯಕ್ತಿ ಜೊತೆಗೆ ನನ್ನ ಕೆಲಸವನ್ನು ಹೆಚ್ಚಿಗೆ ಪ್ರೀತಿಸುವ ವ್ಯಕ್ತಿ ಎಂದು ಹೇಳುವ ಮೂಲಕ ಪ್ರೆಗ್ನೆಂಟ್ ಸುದ್ದಿ ಹಬ್ಬಿಸುವವರಿಗೆ ಖಡಕ್ ಉತ್ತರ ನೀಡಿದ್ದಾರೆ.

    ವಿದ್ಯಾ ಬಾಲನ್ ನಟಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಬರಲು ನಟಿ ಸಜ್ಜಾಗಿದ್ದಾರೆ.

  • ಸೆಟ್‌ನಲ್ಲೇ ಸೀರಿಯಲ್ ಖ್ಯಾತ ನಟಿ ಆತ್ಮಹತ್ಯೆ

    ಸೆಟ್‌ನಲ್ಲೇ ಸೀರಿಯಲ್ ಖ್ಯಾತ ನಟಿ ಆತ್ಮಹತ್ಯೆ

    ಮುಂಬೈ: ಅರೇಬಿಯನ್ ನೈಟ್ಸ್ ಆಧಾರಿತ ಟಿವಿ ಸಿರೀಸ್ `ಅಲಿ ಬಾಬಾ ದಸ್ತಾನ್-ಇ-ಕಾಬೂಲ್’ನಲ್ಲಿ ಶಹಜಾದಿ ಮರಿಯಮ್ ಪಾತ್ರದಲ್ಲಿ ನಟಿಸಿರುವ ನಟಿ (TV Actor) ತುನಿಷಾ ಶರ್ಮಾ (20) (Tunisha Sharma) ಇಂದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

    ತಮ್ಮ ಟಿ.ವಿ ಕಾರ್ಯಕ್ರಮದ ಸೆಟ್‌ವೊಂದರ ಮೇಕಪ್ ರೂಮ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಸ್ಪತ್ರೆಗೆ (Hospital) ಸಾಗಿಸುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್

    ಘಟನಾ ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲಿಸಿದಾಗ ತುನಿಷಾ ಸಹನಟ ಶೀಜಾನ್ ಮೊಹಮ್ಮದ್ ಖಾನ್ ಅವರ ಮೇಕಪ್ ರೂಮ್‌ನಲ್ಲಿದ್ದರು ಎಂಬುದಾಗಿ ತಿಳಿದುಬಂದಿದೆ. ತನ್ನ ರೂಮ್ ಬಾಗಿಲು ಹಾಕಿದ್ದನ್ನು ನೋಡಿ ಶೀಜಾನ್ ಕರೆ ಮಾಡಿದ್ದಾರೆ. ಪದೇ ಪದೇ ಕರೆದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದ್ದಾರೆ. ಅಷ್ಟರಲ್ಲಿ ಅನಾಹುತ ನಡೆದಿದೆ. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಿಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    20 ವರ್ಷದ ನಟಿ ತುನಿಷಾ ಶರ್ಮಾ ಬಾಲ್ಯದಿಂದಲೇ ಅಭಿನಯ ಕಲೆ ರೂಢಿಸಿಕೊಂಡಿದ್ದರು. `ಚಕ್ರವರ್ತಿ ಅಶೋಕ ಸಾಮ್ರಾಟ್, ಗಬ್ಬರ್ ಪೂಂಚಾಲಾ, ಶೇರ್-ಎ-ಪಂಜಾಬ್, ಮಹಾರಾಜ ರಂಜಿತ್ ಸಿಂಗ್, ಇಂಟರ್ನೆಟ್ ವಾಲಾ ಲವ್ ಮತ್ತು ಇಷ್ಟೇ ಸುಭಾನ್ ಅಲ್ಲಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ದುರ್ಗಾ ರಾಣಿ ಸಿಂಗ್ ಮತ್ತು `ದಬಾಂಗ್-3′ ನಂತಹ ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ (Salman Khan) ಮತ್ತು ಸೋನಾಕ್ಷಿ ಸಿನ್ಹಾ (Sonakshi Sinha) ಅಭಿನಯದ ದಬಾಂಗ್ 3ನಲ್ಲಿ ಅವರು ಅತಿಥಿ ಪಾತ್ರ ನಿರ್ವಹಿಸಿದ್ದರು.

    ಅಲ್ಲದೇ ಖ್ಯಾತ ಬಾಲಿವುಡ್ (Bollywood) ನಟಿಯರಾದ ಕತ್ರಿನಾ ಕೈಫ್ (Katrina Kaif), ವಿದ್ಯಾ ಬಾಲನ್ (Vidya Balan) ಅವರಂತಹ ತಾರೆಗಳೊಂದಿಗೆ ಪರದೆ ಹಂಚಿಕೊಂಡಿದ್ದಾರೆ. ಫಿತೂರ್ ಸಿನಿಮಾದಲ್ಲಿ ಕತ್ರಿನಾ ಕೈಫ್ ಅವರೊಂದಿಗೆ, ಕಹಾನಿ-2 ಚಿತ್ರದಲ್ಲಿ ವಿದ್ಯಾಬಾಲನ್ ಅವರೊಂದಿಗೂ ಪರದೆ ಹಂಚಿಕೊಂಡಿದ್ದರು. ನಂತರ ಟಿ.ಟಿ ಸೀರಿಸ್ ನಲ್ಲಿ ಜನಪ್ರಿಯರಾಗಿದ್ದರು.

    Live Tv
    [brid partner=56869869 player=32851 video=960834 autoplay=true]