Tag: Vidwat

  • ರೌಡಿ ನಲಪಾಡ್ ಗೂಂಡಾಗಿರಿ ಪ್ರಕರಣ- ವಿದ್ವತ್ ಅಣ್ಣನ ಹೇಳಿಕೆ ಪಡೆದ ಸಿಸಿಬಿ

    ರೌಡಿ ನಲಪಾಡ್ ಗೂಂಡಾಗಿರಿ ಪ್ರಕರಣ- ವಿದ್ವತ್ ಅಣ್ಣನ ಹೇಳಿಕೆ ಪಡೆದ ಸಿಸಿಬಿ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಯುವಕನ ಮೇಲೆ ನಡೆಸಿದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಗಾಯಾಳು ವಿದ್ವತ್ ಅಣ್ಣ ಸಾತ್ವಿಕ್ ಹೇಳಿಕೆಯನ್ನು ಪಡೆದಿದ್ದಾರೆ.

    ವಿದ್ವತ್ ಅಲ್ಲದೆ ತನ್ನ ಮೇಲೂ ನಲಪಾಡ್ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಗೆ ಬಂದಾಗ ನನ್ನ ಮೇಲೂ ಕೈ ಮಾಡಿದ್ದ ಎಂದು ಸಿಸಿಬಿ ಪೊಲೀಸರ ಮುಂದೆ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಹೀಗಾಗಿ ಇದೀಗ ಸಿಸಿಬಿ ಪೊಲೀಸರು ಸಾತ್ವಿಕ್ ಹೇಳಿಕೆಯನ್ನು ಕೂಡ ಪರಿಗಣಿಸಿದ್ದಾರೆ.

    ವಿದ್ವತ್ ಮೇಲೆ ಹಲ್ಲೆ ನಡೆದ ಬಳಿಕ ಆತನ ಸ್ನೇಹಿತರು ಫೋನ್ ಮಾಡಿ ನನಗೆ ವಿಷಯ ತಿಳಿಸಿದ್ದರು. ನಾನು ಸ್ಥಳಕ್ಕೆ ಬರುವಷ್ಟರಲ್ಲಿ ವಿದ್ವತ್ ನನ್ನು ಮಲ್ಯ ಅಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಬಂದಾಗ ನಲಪಾಡ್ ಹಾಗೂ ಅವನ ಗ್ಯಾಂಗ್ ಇಲ್ಲಿಗೂ ಬಂದಿದ್ದರು. ಈ ವೇಳೆ ಅವರು ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಿದ್ದಾಗ ನನ್ನ ಮೇಲೂ ಕಿರುಚಾಡಿದ್ದರು. ಇದಕ್ಕೆ ನಾನು ಪ್ರತಿರೋಧ ತೋರಿದಾಗ ನನ್ನ ಮೇಲೆ ಕೈ ಮಾಡಿದರು ಎಂದು ಸಾತ್ವಿಕ್ ಹೇಳಿದ್ದಾರೆ. ಇದನ್ನೂ ಓದಿ: ಜಾಮೀನಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಪ್ಪನಿಗೆ ರೌಡಿ ನಲಪಾಡ್ ಸೂಚನೆ!

    ಸಿಸಿಬಿ ಪೊಲೀಸರು ಫೆಬ್ರವರಿ 17ರ ರಾತ್ರಿ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಹೇಳಿಕೆ ಪಡೆದಿದ್ದು, ಆಸ್ಪತ್ರೆಯಲ್ಲಿ ವಿದ್ವತ್ ಮೇಲಿನ ಹಲ್ಲೆಯನ್ನು ಸಾತ್ವಿಕ್ ಪ್ರಶ್ನೆ ಮಾಡಿದ್ದನು. ಪ್ರಶ್ನೆ ಮಾಡಿದ್ದಕ್ಕೆ ವಿದ್ವತ್ ನನ್ನ ಆಸ್ಪತ್ರೆಗೆ ದಾಖಲಿಸಬೇಡ ಎಂದು ಸಾತ್ವಿಕ್ ಮೇಲೆ ನಲಪಾಡ್ ಹಲ್ಲೆ ಮಾಡಿದ್ದನು ಎಂಬುದಾಗಿ ವರದಿಯಾಗಿತ್ತು. ಇದನ್ನೂ ಓದಿ: ಜಾಮೀನು ಅರ್ಜಿ ತಿರಸ್ಕೃತ- ನಲಪಾಡ್ ಗೆ ಜೈಲೇ ಗತಿ

    ಶನಿವಾರ ಸಿಸಿಬಿ ಪೊಲೀಸರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಸಾತ್ವಿಕ್ ಹೇಳಿಕೆಯನ್ನು ಪಡೆದಿದ್ದಾರೆ. ಸಾತ್ವಿಕ್ ನನ್ನು ಈ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್

  • ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್

    ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್

    ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಮಾಡಿ ಸದ್ಯ ಜೈಲು ಸೇರಿರೋ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ತನ್ನ ತಂದೆ ಹ್ಯಾರಿಸ್ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾನೆ ಎಂಬುದಾಗಿ ಪರಪ್ಪನ ಅಗ್ರಹಾರದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಇಂದು ರೌಡಿ ನಲಪಾಡ್ ಭವಿಷ್ಯ- ಜಾಮೀನು ಅರ್ಜಿ ಕುರಿತು ಆದೇಶ

    ಪ್ರಕರಣ ಸಂಬಂಧ ಈಗಾಗಲೇ ಜಾಮೀನು ಅರ್ಜಿ ವಿಚಾರವಾಗಿ ಜೈಲಿನಲ್ಲಿ ಫುಲ್ ಟೆನ್ಷನ್ ಆಗಿರುವ ನಲಪಾಡ್, ಜಾಮಿನು ಕೊಡಿಸಲು ನಿನ್ನಿಂದ ಆಗುತ್ತಾ ಇಲ್ವಾ ಹೇಳು ಎಂದು ತಂದೆಗೆ ಆವಾಜ್ ಹಾಕಿದ್ದಾನೆ. ಒಂದು ವೇಳೆ ಜಾಮೀನು ಕೊಡಿಸಲು ಆಗದಿದ್ದರೆ ಹೊರಗಡೆ ನನ್ನ ಹುಡುಗರಿದ್ದಾರೆ. ಅವರಿಂದ ನಾನು ಜಾಮೀನು ತರಿಸಿಕೊಳ್ಳುತ್ತೇನೆ ಎಂದು ತಂದೆಯನ್ನು ತರಾಟೆಗೆ ತಗೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ಜೈಲಿಗೆ ಬಂದು ಇಷ್ಟು ದಿನ ಆಯ್ತು. ಒಂದು ದಿನವೂ ಕೂಡ ನನ್ನನ್ನು ನೋಡಲು ಬಂದಿಲ್ಲ. ನಾನು ಜೈಲಿನಿಂದ ಹೊರ ಬಂದ ಮೇಲೆ ನಿಂಗೆ ಇದೆ ನೋಡು. ಇವತ್ತು ಜೈಲಿಗೆ ಬಂದು ನನ್ನ ನೋಡ್ಲೆ ಬೇಕು ಎಂದು ತನ್ನ ತಂದೆಯೊಂದಿಗೆ ಉರ್ದು ಭಾಷೆಯಲ್ಲಿ ಹೇಳಿ ಹಠ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    https://www.youtube.com/watch?v=oHsWb25A2VM

     

  • ಇಂದು ರೌಡಿ ನಲಪಾಡ್ ಭವಿಷ್ಯ- ಜಾಮೀನು ಅರ್ಜಿ ಕುರಿತು ಆದೇಶ

    ಇಂದು ರೌಡಿ ನಲಪಾಡ್ ಭವಿಷ್ಯ- ಜಾಮೀನು ಅರ್ಜಿ ಕುರಿತು ಆದೇಶ

    ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲುಪಾಲಾಗಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

    ಅರ್ಜಿ ವಿಚಾರಣೆ ನಡೆಸಲಿರುವ 64ನೇ ಸಿಸಿಎಚ್ ನ್ಯಾಯಾಲಯ ನಲಪಾಡ್ ಭವಿಷ್ಯ ಪ್ರಕಟಿಸಲಿದೆ. ನಾನು ನನ್ನ ಕಕ್ಷಿದಾರ ಅಮಾಯಕ. ಅವರ ಮೇಲೆ ರಾಜಕೀಯ ಒತ್ತಡಕ್ಕೆ ಇಲ್ಲ ಸಲ್ಲದ ಕೇಸ್ ಗಳನ್ನು ಹಾಕಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡಿ ಅಂತ ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು.   ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಇದಕ್ಕೆ ಪ್ರತಿಯಾಗಿ ವಾದಿಸಿದ್ದ ವಿಶೇಷ ಅಭಿಯೋಜಕರಾಗಿ ಶ್ಯಾಮ್ ಸುಂದರ್, ಈ ಪ್ರಕರಣ ದೇಶದ ಗಮನ ಸೆಳೆದಿದೆ. ಆರೋಪಿ ಪ್ರಬಲನಾಗಿರುವುದರಿಂದ ಸಾಕ್ಷಿ ನಾಶವಾಗುವ ಸಂಭವ ಇದೆ. ಹೀಗಾಗಿ ಜಾಮೀನು ನೀಡಬಾರದು ಅಂತ ವಾದ ಮಂಡಿಸಿದ್ದರು. ಇದನ್ನೂ ಓದಿ: ಮಾ.2ಕ್ಕೆ ನಲಪಾಡ್ ಜಾಮೀನು ತೀರ್ಪು: ಕೋರ್ಟ್ ಕಲಾಪದಲ್ಲಿ ಇಂದು ವಾದ ಹೀಗಿತ್ತು

    ಏನಿದು ಪ್ರಕರಣ?: ಘಟನೆ ನಡೆದ ನಗರದ ಫರ್ಜಿ ಕೆಫೆ ಯಲ್ಲಿ ಅಂದು ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ವಿದ್ವತ್ ಹಾಗೂ ನಲ್ಪಾಡ್ ಮತ್ತು ಆತನ ಗ್ಯಾಂಗ್ ಕಾಣಿಸಿಕೊಂಡಿತ್ತು. ಈ ಪಾರ್ಟಿ ಆರಂಭದ ಸಮಯದಿಂದ ನಲಪಾಡ್ ನನ್ನು ಆತನ ಸ್ನೇಹಿತರು “ಪ್ರಿನ್ಸ್ ಪ್ರಿನ್ಸ್” ಎಂದು ಕೂಗಿ ಪಾರ್ಟಿಯಲ್ಲಿ ನೆರೆದಿದ್ದ ಯುವಕ ಯುವತಿಯರ ಮುಂದೇ ಪ್ರತಿಷ್ಠೆ ತೋರಿಸುತ್ತಿದ್ದರು ಎನ್ನಲಾಗಿತ್ತು.  ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!

    ಈ ಸಂದರ್ಭದಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತ್ತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ಅನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಹೊಡೆದಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ಪಾರ್ಟಿಯಲ್ಲಿ ಹಲ್ಲೆ ನಡೆಸುವ ವೇಳೆ ಸಾಕಷ್ಟು ಜನ ಅಲ್ಲಿ ನೆರೆದಿದ್ದರೂ ಯಾರು ಗಲಾಟೆ ತಡೆಯುವ ಪ್ರಯತ್ನ ನಡೆಸಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.

    https://www.youtube.com/watch?v=B-erXK9nl1M

    https://www.youtube.com/watch?v=TIPtfcxi6O4

  • ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ಬೆಂಗಳೂರು: ಬೆಂಗಳೂರಿನ ಯುಬಿ ಸಿಟಿಯ `ಫರ್ಜಿ ಕೆಫೆ’ಯಲ್ಲಿ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಮಾಡಿ ಮಲ್ಯ ಆಸ್ಪತ್ರೆಯಲ್ಲೂ ಧಮ್ಕಿ ಹಾಕಿದ್ದ ಶಾಸಕ ಹ್ಯಾರಿಸ್ ಮಗ ನಲಪಾಡ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.

    ಇಂದು ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭಿಸಿದ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ವಾದ-ಪ್ರತಿವಾದಗಳು ಕಾವೇರಿದ ರೀತಿಯಲ್ಲಿ ನಡೆಯಿತು. ಈ ಕುರಿತು ನಾಳೆಯೂ ವಾದ ಮುಂದುವರಿಯಲಿದೆ. ಆರೋಪಿಗಳ ಪರ ಟಾಮಿ ಸೆಬಾಸ್ಟಿನ್ ಮತ್ತು ಬಾಲನ್ ವಾದ ಮಂಡಿಸಿದರು. ವಿಶೇಷ ಅಭಿಯೋಜಕರಾಗಿ ಶ್ಯಾಮ್ ಸುಂದರ್ ಪ್ರತಿವಾದ ಮಂಡಿಸಿದರು.

    ವಿದ್ವತ್ ಪರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಶ್ಯಾಮ್ ಸುಂದರ್ ಅವರಿಗೆ ವಿದ್ವತ್ ಅವರ ಆರೋಗ್ಯದ ಕುರಿತ ಮತ್ತಷ್ಟು ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿ ವಿಚಾರಣೆಯನ್ನ ನಾಳೆಗೆ ಮುಂದೂಡಿದರು.

    ನಲಪಾಡ್ ಪರ ವಕೀಲರ ವಾದವೇನು?
    ವಿದ್ವತ್ ಕೊಲೆ ಮಾಡುವ ಉದ್ದೇಶ ಯಾರಿಗೂ ಇರಲಿಲ್ಲ. ಕೊಲೆ ಉದ್ದೇಶ ಇದ್ದಿದ್ದರೆ ಆಯುಧ ಇಟ್ಟುಕೊಳ್ಳುತ್ತಿದ್ದರು. ಐಸ್‍ಕ್ಯೂಬ್ ತಲೆ ಮೇಲೆ ಎಸೆದಿದ್ದರಿಂದ ಗಾಯಗಳಾಗಿವೆ. ಬಿಯರ್ ಬಾಟಲ್ ಬಿಸಾಡಿದ್ದಾರೆ. ತಲೆಗೆ ಬೀಸಿರುವ ಮಾಹಿತಿ ಇಲ್ಲ. ಇದು ರಾಜಕೀಯ ದುರುದ್ದೇಶ ಪೂರಿತವಾಗಿರುವ ಘಟನೆಯಾಗಿದ್ದು, ಘಟನೆ ನಡೆದ ಹಲವು ಗಂಟೆಗಳ ನಂತರ ಸೆಕ್ಷನ್ 307 ಸೇರಿಸಲಾಗಿದೆ. ವಿದ್ವತ್ ಈಗಾಗಲೇ ಶೇ. 90 ರಷ್ಟು ಚೇತರಿಸಿಕೊಂಡಿದ್ದಾರೆ ಎಂದು ವಾದಿಸಿದರು.

    ವಿದ್ವತ್ ಹೇಳಿಕೆ ಪಡೆಯಲು ಉದ್ದೇಶ ಪೂರ್ವಕವಾಗಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ. ಕಾಲು ಮುರಿದಿದ್ದರಿಂದ ಎಸ್ಕಲೇಟರ್ ಮೇಲೆ ಬಿದ್ದು ವಿದ್ವತ್ ಒದ್ಡಾಡಿದ್ದಾರೆ. ವಿದ್ವತ್ ನೋಡುವುದಕ್ಕೆ ಮತ್ತೆ ಆಸ್ಪತ್ರೆಗೆ ನಲಪಾಡ್ ಹೋಗಿದ್ದ. ಈ ಕೇಸ್‍ಗೆ ವಿಶೇಷ ಅಭಿಯೋಜಕರ ನೇಮಕ ಮಾಡುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸಿದರು.

    ಪ್ರಕರಣದಲ್ಲಿ ಅನಾವಶ್ಯಕ ಒತ್ತಡ ತರಲು 3ನೇ ವ್ಯಕ್ತಿಯಿಂದಲೂ ಅರ್ಜಿ ಸಲ್ಲಿಸಲಾಗಿದೆ. ಮೊಹಮ್ಮದ್ ನಲಪಾಡ್‍ಗಿಂತ ವಿದ್ವತ್ ಪ್ರಭಾವಿ ವ್ಯಕ್ತಿಯಾಗಿದ್ದು, ಘಟನೆ ನಂತರ ರಾಜಕೀಯ ವ್ಯಕ್ತಿಗಳು ಪ್ರತಿನಿತ್ಯ ಭೇಟಿಯಾಗುತ್ತಿದ್ದಾರೆ. ಹ್ಯಾರಿಸ್‍ರನ್ನು ರಾಜಕೀಯವಾಗಿ ಮುಗಿಸಲು ಮಗನನ್ನು ಬಳಸಿಕೊಳ್ಳಲಾಗಿದೆ ಎಂದು ವಾದಿಸಿದರು.

    ವಿಶೇಷ ಅಭಿಯೋಜಕರ ವಾದವೇನು?
    ವಿದ್ವತ್ ಮೇಲೆ ಉದ್ದೇಶಪೂರ್ವಕವಾಗಿ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಕಾಲು ತಾಕಿದ್ದಕ್ಕೆ ವಿದ್ವತ್‍ಗೆ ಅವಾಜ್ ಹಾಕಿ ಹೊಡೆದಿದ್ದಾರೆ. ಅಲ್ಲದೇ ವಿದ್ವತ್ ರನ್ನು ಮೆಟ್ಟಿಲುಗಳ ಮೇಲೆ ಎಳೆದು ತಂದು ಆರೋಪಿಗಳು ಹೊಡೆದಿದ್ದಾರೆ. ಮೆಟ್ಟಿಲುಗಳ ಮೇಲೆ ಎಳೆದು ತಂದು ಹೊಡೆಯೋದು ದುರುದ್ದೇಶ ಅಲ್ವಾ? ವಿದ್ವತ್ ಮರ್ಮಾಂಗಕ್ಕೂ ಗಾಯವಾಗುವ ರೀತಿ ಹೊಡೆದಿದ್ದಾರೆ. ನಲಪಾಡ್ ಅಂಡ್ ಗ್ಯಾಂಗ್ ಹೊಡೆಯುತ್ತಿದ್ದರೂ ಬೌನ್ಸರ್‍ಗಳು ಸುಮ್ಮನಿದ್ದಾರೆ. `ಲೈಫ್ ಆಫ್ ಪೈ’ ಎಂಬ ಮೂವಿ ಹೀರೋ ತರಹ ವಿದ್ವತ್ ಸ್ಥಿತಿ ಆಗಿದೆ ಎಂದು ಶ್ಯಾಮ್ ಸುಂದರು ವಿವರಿಸಿದರು.

    ವಿದ್ವತ್ ಮೇಲಿನ ದಾಳಿಗೂ ಮುನ್ನ ಆತನ ಇದ್ದ ಆತನ ಮುಖವನ್ನು ಮತ್ತೆ ಅದೇ ರೀತಿ ನೋಡಲು ಸಾಧ್ಯವಿಲ್ಲ. ಕೊಲೆಯ ಉದ್ದೇಶದಿಂದಲೇ ಆಸ್ಪತ್ರೆವರೆಗೂ ಹಿಂಬಾಲಿಸಿದ್ದಾರೆ. ಇದು ಕೇವಲ 326 ಗಾಯದ ಪ್ರಕರಣವಲ್ಲ ಕೊಲೆ ಯತ್ನದ ಕೇಸ್. ನಲಪಾಡ್ ಗೆ ಜಾಮೀನು ನೀಡಿದರೆ ಸಾಕ್ಷಿಗಳನ್ನು ನಾಶ ಪಡಿಸುತ್ತಾನೆ. ಯಾರು ಏನಾದ್ರೂ ಮಾಡಬಹುದು ಅಂದುಕೊಂಡವರಿಗೆ ಪಾಠ ಆಗಬೇಕು. ಇದು ನಿರ್ಭಯಾ ಕೇಸ್‍ಗಿಂತಲೂ ಅತ್ಯಂತ ಕ್ರೂರವಾದ ಪ್ರಕರಣ ಎಂದು ವಾದಿಸಿ ಜಾಮೀನು ನೀಡದಂತೆ ಮನವಿ ಮಾಡಿದರು. ಇದನ್ನೂ ಓದಿ: ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ

    https://www.youtube.com/watch?v=J5bj1Z0hrYI

    https://www.youtube.com/watch?v=QktQtDhVSJ4

    https://www.youtube.com/watch?v=CPdusTXs0QU

    https://www.youtube.com/watch?v=WI5DOng9vAY

  • ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ಬೆಂಬಲ ಸೂಚಿಸಿದ ನಟಿ ಸಂಜನಾ

    ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ಬೆಂಬಲ ಸೂಚಿಸಿದ ನಟಿ ಸಂಜನಾ

    ಬೆಂಗಳೂರು: ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್‍ರಾನಿ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಸಿದ್ದಾರೆ.

    ಕಾಂಗ್ರೆಸ್ ಎಂಎಲ್‍ಎ ಕ್ಷೇತ್ರದಲ್ಲಿರುವ ಯುಬಿ ಸಿಟಿಯಲ್ಲಿ ನಡೆದಿರುವ ಹಲ್ಲೆ ವಿಚಾರ ಕೇಳಿ ನನಗೆ ಶಾಕ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಸಿಗಬೇಕು. ಎಲ್ಲ ಬಡಜನರಿಗೂ ಹಾಗೂ ಶ್ರೀಮಂತರಿಗೂ ನ್ಯಾಯ ಒಂದೇ ಎಂದು ಟ್ವೀಟ್ ಮಾಡಿದ್ದಾರೆ.

    ಮಹಮ್ಮದ್ ಹ್ಯಾರಿಸ್ ಜೀಗೆ ನನ್ನ ಸಹಾನುಭೂತಿ ಇದೆ. ಮಗ ಮಾಡಿರುವ ತಪ್ಪಿಗೆ ಈ ದಕ್ಷ ನಾಯಕ ಬೆಲೆ ಕಟ್ಟುತ್ತಿದ್ದಾರೆ. ನಲಪಾಡ್ ವಿದ್ವತ್ ಮೇಲೆ ಹಲ್ಲೆ ಮಾಡುವ ಮೊದಲು ಎಂದರೆ ಈ ಡ್ರಾಮಾ ನಡೆಯುವ ಮೊದಲು ಶಾಂತಿನಗರದ ಶಾಸಕ ಹ್ಯಾರಿಸ್ ಸುಮಾರು 2 ದಶಕಗಳಿಂದ ಪ್ರಾಮಾಣಿಕ ನಾಯಕರಾಗಿದ್ದಾರೆ ಎಂದು ಸಂಜನಾ ಟ್ವೀಟ್ ಮಾಡಿ ಬೆಂಬಲಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!

    ಸಂಜನಾ ಮಾಡಿದ ಈ ಟ್ವೀಟ್‍ಗೆ ಜನ ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

  • ಇಂದು ನಲಪಾಡ್ ಜಾಮೀನು ಅರ್ಜಿ ವಿಚಾರಣೆ- ವಿಪಕ್ಷಗಳು, ಮಾಧ್ಯಮದ ಮೇಲೆ ಗೂಬೆ ಕೂರಿಸಿದ ರೌಡಿ

    ಇಂದು ನಲಪಾಡ್ ಜಾಮೀನು ಅರ್ಜಿ ವಿಚಾರಣೆ- ವಿಪಕ್ಷಗಳು, ಮಾಧ್ಯಮದ ಮೇಲೆ ಗೂಬೆ ಕೂರಿಸಿದ ರೌಡಿ

    ಬೆಂಗಳೂರು: ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರೌಡಿ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

    ಜಾಮೀನು ಕೋರಿ ನಲಪಾಡ್ ಸಲ್ಲಿಸಿರುವ ಸಂಪೂರ್ಣ ವಿವರ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ನನ್ನ ವಿರುದ್ಧ ದಾಖಲಾಗಿರುವ ಕೇಸ್ ಸುಳ್ಳಾಗಿದ್ದು, ಇದು ವಿರೋಧ ಪಕ್ಷ, ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ನಲಪಾಡ್ ಹೇಳಿದ್ದಾನೆ. ಇದನ್ನೂ ಓದಿ: ರಾಜಿ ಸಂಧಾನಕ್ಕೆ ಮಲ್ಯ ಆಸ್ಪತ್ರೆಗೆ ಬಂದ ಶಾಸಕ ಹ್ಯಾರಿಸ್

    ಜಾಮೀನು ಅರ್ಜಿಯಲ್ಲೇನಿದೆ?: ರಾಜಕೀಯ ಮೈಲೇಜ್‍ಗಾಗಿ ಶತ್ರುಗಳ ಈ ರೀತಿ ಮಾಡಿದ್ದಾರೆ. ಚುನಾವಣಾ ಸಮಯವಾದ್ದರಿಂದ ನನ್ನನ್ನು ಸೋಲಿಸಲು ಈ ರೀತಿಯ ಕುತಂತ್ರ ಮಾಡಲಾಗಿದೆ. ಇದರಿಂದ ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯಲು ಪ್ರತಿಪಕ್ಷಗಳು ಹುನ್ನಾರ ಮಾಡಿವೆ. ಮಾಧ್ಯಮಗಳು ಅನಾವಶ್ಯಕವಾಗಿ ಇದನ್ನು ಹೈಪ್ ಮಾಡಿದೆ ಅಂತ ತಿಳಿಸಿದ್ದಾನೆ. ಇದನ್ನೂ ಓದಿ: ನಲಪಾಡ್ ಗ್ಯಾಂಗಿನಿಂದ ಜೀವಬೆದರಿಕೆ – ವಕೀಲರಿಂದ ಪೊಲೀಸರಿಗೆ ದೂರು

    ನನ್ನ ಮೇಲೆ ದೂರು ದಾಖಲಿಸಿರುವುದು ಸುಳ್ಳು ಕೇಸ್. ಆಧಾರ ರಹಿತವಾದ, ರಾಜಕೀಯ ದುರುದ್ದೇಶದಿಂದ ಕೇಸ್ ದಾಖಲಿಸಲಾಗಿದೆ. ನನ್ನ ಹಾಗೂ ತಂದೆಯ ಏಳಿಗೆ ಸಹಿಸದವರು ಆಧಾರ ರಹಿತ ಕೇಸ್ ದಾಖಲಿಸಿದ್ದಾರೆ. 10 ರಿಂದ 15 ಜನ ಹಲ್ಲೆ ಅಂತಿದೆ. ನಾನೇ ಹಲ್ಲೆ ಮಾಡಿದ್ದೇನೆ ಅಂತಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ನಲಪಾಡ್ ಮನವಿ ಮಾಡಿದ್ದಾನೆ. ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

  • ತೀವ್ರ ನಿಗಾ ಘಟಕದಲ್ಲಿ ವಿದ್ವತ್‍ ಗೆ ಚಿಕಿತ್ಸೆ- ರಾಜ್ ಫ್ಯಾಮಿಲಿಯಿಂದ ಆರೋಗ್ಯ ವಿಚಾರಣೆ

    ತೀವ್ರ ನಿಗಾ ಘಟಕದಲ್ಲಿ ವಿದ್ವತ್‍ ಗೆ ಚಿಕಿತ್ಸೆ- ರಾಜ್ ಫ್ಯಾಮಿಲಿಯಿಂದ ಆರೋಗ್ಯ ವಿಚಾರಣೆ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ನಿಂದ ತೀವ್ರ ಹಲ್ಲೆಗೊಳಗಾಗಿ ಅಸ್ಪತ್ರೆ ಸೇರಿರುವ ವಿದ್ವತ್‍ಗೆ ಮಲ್ಯ ಅಸ್ಪತ್ರೆಯಲ್ಲಿ ನಾಲ್ಕನೇ ದಿನವೂ ಚಿಕಿತ್ಸೆ ಮುಂದುವರೆದಿದೆ.

    ತೀವ್ರ ನಿಗಾ ಘಟಕದಲ್ಲಿ ವಿದ್ವತ್‍ಗೆ ಚಿಕಿತ್ಸೆ ನೀಡುತ್ತಿದ್ದು, ಮುಖದ ಊತ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಅಲ್ಲದೇ ಗಾಯದ ನೋವು ಜಾಸ್ತಿ ಇರುವುದರಿಂದ ವಿದ್ವತ್‍ಗೆ 102 ಡಿಗ್ರಿ ಜ್ವರ ಇತ್ತು. ಇದೀಗ 101 ಡಿಗ್ರಿಗೆ ಜ್ವರ ಇಳಿಮುಖವಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡ್ತಿದ್ದಾರೆ. ಅಲ್ಲದೇ ಇನ್ನೂ ಮೂರ್ನಾಲ್ಕು ದಿನ ವಿದ್ವತ್‍ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ.  ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

    ವಿದ್ವತ್ ಮುಖ, ಕಣ್ಣು, ಮೂಗು, ಹಾಗೂ ಪಕ್ಕೆಲುಬುಗಳ ಮೂಳೆ ಮುರಿದಿದ್ದರಿಂದ ವಿದ್ವತ್ ಮೊದಲಿನಂತಾಗಲು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತೆ ಎನ್ನಲಾಗಿದೆ. ಇನ್ನು ಎದೆಯ ಪಕ್ಕೆಯ ಮೂಲೆಗಳು ಮುರಿದಿರೋ ಹಿನ್ನೆಲೆ ಕೂರಲೂ ಆಗದ ಸ್ಥಿತಿಯಲ್ಲಿರುವ ವಿದ್ವತ್ ಇನ್ನೂ ಚೇತರಿಸಕೊಳ್ಳದ ಹಾಗೂ ಜ್ವರದಿಂದ ಬಳಲುತ್ತಿರೋ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪೂರಕ್ಕೆ ಕರೆದೊಯ್ಯಲು ಕುಟುಂಬ ಚಿಂತನೆ ನೆಡಸಿದೆ ಎಂದು ಸಹೋದರ ಸಾತ್ವಿಕ್ ಲೋಕನಾತ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!


    ವಿದ್ವತ್ ಅರೋಗ್ಯ ವಿಚಾರಿಸಲು ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಗುರುರಾಜ್ ಕುಮಾರ್ ಅಗಮಿಸಿದ್ದರು. ಇದೇ ವೇಳೆ ರಾಘವೇಂದ್ರ ರಾಜ್‍ಕುಮಾರ್ ಮನೆಯಿಂದ ಊಟ ಸಹ ತಂದು ಕೊಟ್ಟಿದ್ದು, ವಿದ್ವತ್ ಶೀಘ್ರ ಗುಣವಾಗಲೀ ಅಂತ ಹಾರೈಸಿದ್ರು.

    https://www.youtube.com/watch?v=p8o_3v5-ZYs

  • ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

    ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

    ಬೆಂಗಳೂರು: ಹಲ್ಲೆ ಮಾಡಿರುವುದು ನಿಜ ಎಂದು ಹ್ಯಾರಿಸ್ ಪುತ್ರ ನಲಪಾಡ್ ತಪ್ಪೊಪ್ಪಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ವಶಪಡಿಸಿಕೊಂಡು ಪರಿಶೀಲನೆ ಮಾಡಿದ್ದೇವೆ ಎಂದು ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ.

    ಶಾಸಕ ಹ್ಯಾರಿಸ್ ಮಗ ನಲಪಾಡ್ ಮತ್ತು ಆತನ ಸ್ನೇಹಿತರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಸಾಕ್ಷ್ಯ ಗಳು ಸಿಕ್ಕಿದ್ದು ಕಾಲು ತಗಲಿದ್ದಕ್ಕೆ ಹಲ್ಲೆ ನಡೆದಿದೆ ಎಂದು  ಹೇಳಿದ್ದಾರೆ.

    ಗಲಾಟೆ ಹೇಗಾಯ್ತು?
    ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡಲು ಹೋಗಿದ್ದರು. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಊಟಕ್ಕೆಂದು ಅದೇ ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಿದ್ವತ್ ನ ಕಾಲು ಮುರಿದಿತ್ತು. ಆದ್ದರಿಂದ ಕಾಲು ಚಾಚಿಕೊಂಡು ಕುಳಿತ್ತಿದ್ದರು. ಆಗ ನಲಪಾಡ್ ನಿಗೆ ಕಾಲು ತಗುಲಿದೆ. ನಂತರ ವಿದ್ವತ್ ಕ್ಷಮೆ ಕೇಳಿರಲಿಲ್ಲ. ಇದರಿಂದ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ಡಿಸಿಪಿ ತಿಳಿಸಿದರು.

    ಲೋಕಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ಪುತ್ರ ಇರುವುದರ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸಿಕ್ಕಿಲ್ಲ. ಮಹದೇವಪ್ಪ ಪುತ್ರನ ಹುಟ್ಟುಹಬ್ಬಕ್ಕೆ ಹೋಗಿದ್ದರು ಎಂಬ ಮಾಹಿತಿ ಇದೆ. ಆದ್ದರಿಂದ ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಮಾಧ್ಯಮದವರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದೆ. ಓರ್ವನ ಬಂಧನ ಕೂಡ ಆಗಿದೆ. ಇನ್ನುಳಿದವರ ಹುಡುಕಾಟ ನಡೆಯುತ್ತಿದೆ ಎಂದು ಚಂದ್ರಗುಪ್ತ ವಿವರಿಸಿದರು.

    ನಲಪಾಡ್‍ನ ವಿರುದ್ಧ ಮತ್ತೊಂದು ಕೇಸ್ ಆಗಿದ್ದು, 3 ವರ್ಷದ ಹಿಂದೆ ನಡೆದಿದ್ದ ಪ್ರಕರಣವಾಗಿದೆ. ಪೂರ್ಣಿಮಾ ದಾಸ್ ವಿಡಿಯೋ ವೈರಲ್ ಆಗಿರುವುದರ ಬಗ್ಗೆ ಗಮನಕ್ಕೆ ಬಂದಿಲ್ಲ. ಪೊಲೀಸರು ಸ್ವಯಂಪ್ರೇರಿತ ದಾಖಲು ಮಾಡಿಕೊಳ್ಳುತ್ತಾರೆ. ಮಲ್ಯ ಆಸ್ಪತ್ರೆ ವೈದ್ಯರಿಂದ ವರದಿ ಬಿಡುಗಡೆಯಾಗಿದೆ. ವಿದ್ವತ್ ಮುಖದಲ್ಲಿ ರಕ್ತ ಹೆಪ್ಪುಗಟ್ಟಿದೆ. ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧನ ಮಾಡಲಾಗಿದೆ. ಹಲ್ಲೆ ಮಾಡಿರುವುದು ಗೊತ್ತಿರುವುದರಿಂದ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ನಲಪಾಡ್ ಮತ್ತು ಆತನ ಸ್ನೇಹಿತರನ್ನ ಈಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಅಂದು ಡ್ರಗ್ಸ್ ಸೇವನೆ ಮಾಡಿದ್ದಾ ಇಲ್ಲವಾ ತಿಳಿದಿಲ್ಲ. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದರೆ ಇನ್ನು ವರದಿ ಬಂದಿಲ್ಲ ಎಂದು ವಿವರಿಸಿದರು.

    ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 141(ಗುಂಪು ಹಲ್ಲೆ), 143(ದಂಡನೆ), 144(ಮಾರಕಾಸ್ತ್ರಗಳಿಂದ ಗುಂಪು ಹಲ್ಲೆ), 146(ದೊಂಬಿ), 149( ಅಕ್ರಮವಾಗಿ ಗುಂಪುಗೂಡುವಿಕೆ), 341(ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 326(ಅಪಾಯಕಾರಿ ಆಯುಧಗಳಿಂದ ಸ್ವ ಇಚ್ಚೆಯಿಂದ ತ್ರೀವ ಗಾಯ ಉಂಟು ಮಾಡುವುದು), 307(ಕೊಲೆ ಮಾಡುವ ಪ್ರಯತ್ನ), 504(ಶಾಂತಿ ಭಂಗ), ಐಪಿಸಿ 506(ಜೀವ ಬೆದರಿಕೆ) ಅಡಿ ಕೇಸ್ ದಾಖಲಾಗಿದೆ.

    ಆರೋಪಿಗಳು ಮತ್ತು ಕೆಲಸ: ಆರೋಪಿ ನಂಬರ್ 1 ಶಾಸಕ ಹ್ಯಾರಿಸ್ ಮಗ ನಲಪಾಡ್ ಒಬ್ಬ ನಿರುದ್ಯೋಗಿಯಾಗಿದ್ದು, ಸ್ನೇಹಿತರಾದ ಅರುಣ್ ಬಾಬು(28)  ಡಿಪ್ಲೋಮಾ ಮಾಡಿದ್ದು, ಕೊಕೋಟೆರಿನೋ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬಾಲಕೃಷ್ಣ (25) ಎಸ್‍ಎಸ್‍ಎಲ್‍ಸಿ ಮಾಡಿದ್ದು, ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಅಭಿಷೇಕ್(23) ಬಿಬಿಎಂ ಮಾಡಿದ್ದು, ಸ್ವಂತ ಉದ್ಯಮ ಮಾಡುತ್ತಿದ್ದಾನೆ. ಶ್ರೀಕೃಷ್ಣ ತಲೆ ಮರೆಸಿಕೊಂಡಿದ್ದಾನೆ. ಮಂಜುನಾಥ್ (31) ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಹಮದ್ ಅಪ್ರಾಸ್ ಆಶ್ರಾಪ್ (23) ಈತ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ನಾಫಿ ಮಹಮದ್ ನಾಸೀರ್(28) ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾನೆ.

  • ಶಾಸಕ ಹ್ಯಾರಿಸ್ ಮಗನಿಂದ ಹಲ್ಲೆ ಪ್ರಕರಣ- ಹಲ್ಲೆಗೊಳಗಾದ ಯುವಕನ ಮೇಲೂ ಎಫ್‍ಐಆರ್

    ಶಾಸಕ ಹ್ಯಾರಿಸ್ ಮಗನಿಂದ ಹಲ್ಲೆ ಪ್ರಕರಣ- ಹಲ್ಲೆಗೊಳಗಾದ ಯುವಕನ ಮೇಲೂ ಎಫ್‍ಐಆರ್

    ಬೆಂಗಳೂರು: ಶಾಂತಿನಗರ ಎಂಎಲ್‍ಎ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ಇದೀಗ ಹಲ್ಲೆಗೊಳಗಾದ ವಿದ್ವತ್ ಮೇಲೆಯೂ ಪೊಲೀಸರು ಎಫ್‍ಐ ಆರ್ ದಾಖಲಿಸಿದ್ದಾರೆ.

    ಯುವಕನ ಮೇಲೆ ಕಬ್ಬನ್‍ಪಾರ್ಕ್ ಪೊಲೀಸರು ಎಫ್‍ಐಆರ್ ದಾಖಲು ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಫೆ.17ರಂದು ವಿದ್ವತ್ ತನ್ನ ಸ್ನೇಹಿತರೊಂದಿಗೆ ಊಟ ಮಾಡಲು ಬಂದಿದ್ದರು. ಈ ವೇಳೆ ವಿದ್ವತ್ ಕಾಲು ನಾಲಪ್ಪಾಡ್ ಸ್ನೇಹಿತನಿಗೆ ತಗುಲಿದ್ದಕ್ಕೆ ಜಗಳವಾಗಿತ್ತು. ಜಗಳದ ಸಮಯದಲ್ಲಿ ನಾನು ಯಾರು ಗೊತ್ತಾ..? ನನ್ನನ್ನು ಕೇಳಲು ನೀನು ಯಾರು ನನ್ನಪ್ಪ ಯಾರು ಗೊತ್ತಾ ಎಂದು ವಿದ್ವತ್ ಪ್ರಶ್ನಿಸಿದ್ದರು. ಅಲ್ಲದೇ ವಿದ್ವತ್ ಹಾಗೂ ಸ್ನೇಹಿತರು ಏಕಾಏಕಿ ಅರುಣ್ ಬಾಬು ಮೇಲೆ ಹಲ್ಲೆ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ಕೂಡ ನಿಂದನೆ ಮತ್ತು ಜೀವ ಬೆದರಿಕೆ ಆರೋಪ ಮಾಡಲಾಗಿದೆ.

    ಉದ್ಯಮಿ ಲೋಕಿ ಅಲಿಯಾಸ್ ಲೋಕನಾಥನ್ ಪುತ್ರ ವಿದ್ವತ್, ಅತಿಯಾಗಿ ಕುಡಿದಿದ್ದರಿಂದ ಸ್ವತಃ ಬಿದ್ದು ಮುಖಕ್ಕೆ ಗಾಯವಾಗಿದೆ ಎಂದು ಅರುಣ್ ಬಾಬು ದೂರು ನೀಡಿದ್ದರು. ಆದ್ರೆ ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ವೈದ್ಯಕೀಯ ತಪಾಸಣೆ ನಡೆಸಿರೋ ವೈದ್ಯರು, ವಿದ್ವತ್ ಮದ್ಯ ಸೇವನೆ ಮಾಡಿಲ್ಲ ಎಂದು ಹೇಳಿದ್ದರು.

    ಸದ್ಯ ಪ್ರಕರಣ ಸಂಬಂಧಿಸಿದಂತೆ ಎ1 ಆರೋಪಿ ಮಹಮ್ಮದ್ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದು, ಈತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಎಲ್ಲಿದ್ದ ನಲಪಾಡ್?: ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಸಂಬಂಧ ಕೇಸ್ ದಾಖಲಾಗುತ್ತಿದ್ದಂತೆ ನಲಪಾಡ್ ಎಸ್ಕೇಪ್ ಆಗಿದ್ದು, ಕಬ್ಬನ್‍ಪಾರ್ಕ್ ಠಾಣೆ ಕೂಗಳತೆಯಲ್ಲೇ ಅಡಗಿಕೊಂಡಿದ್ದನು. ಯುಬಿ ಸಿಟಿ ಪಕ್ಕದಲ್ಲಿರುವ ಐಷಾರಾಮಿ 7 ಸ್ಟಾರ್ ಹೋಟೆಲ್‍ನ ರೂಂ ನಂಬರ್ 882 ನಲ್ಲಿ ಯಾವುದೇ ಭಯವಿಲ್ಲದೇ ಪಾರ್ಟಿಯೊಂದಲ್ಲಿ ಪಾಲ್ಗೊಂಡಿದ್ದನು. ಇದೀಗ ಅಪ್ಪ ಮಾಧ್ಯಮದ ಮುಂದೆ ಮಾತನಾಡಿದ ಕೇವಲ ಒಂದು ಗಂಟೆಯಲ್ಲಿಯೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿರೋ ನಲಪಾಡ್ ವಿರುದ್ಧ ಸೆಕ್ಷನ್ 307 ಅಡಿ (ಕೊಲೆ ಯತ್ನ) ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂದು ಆರೋಪಿ ನಲಪಾಡ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.