Tag: Vidisha srivastav

  • ಕನ್ನಡದ ನಟಿ ವಿದಿಶಾ ಶ್ರೀವಾಸ್ತವ ಪ್ರೆಗ್ನೆನ್ಸಿ ಫೋಟೋಶೂಟ್

    ಕನ್ನಡದ ನಟಿ ವಿದಿಶಾ ಶ್ರೀವಾಸ್ತವ ಪ್ರೆಗ್ನೆನ್ಸಿ ಫೋಟೋಶೂಟ್

    ನ್ನಡದ ಜನಪ್ರಿಯ ನಟಿ ಶಾನ್ವಿ ಶ್ರೀವಾಸ್ತವ (Shanvi Srivastav) ಸಹೋದರಿ, ನಟಿ ವಿದಿಶಾ (Vidisha) ಅವರು ಇದೀಗ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಕನ್ನಡದ ‘ವಿರಾಟ್’ (Viraat) ಸಿನಿಮಾದ ನಟಿ ವಿದಿಶಾ, ಬೇಬಿ ಬಂಪ್ ಲುಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬಾಲಿವುಡ್‌ ಚಿತ್ರಗಳ ಫ್ಲಾಪ್‌ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್‌ ರಿಲೀಸ್

    ವಿರಾಟ್, ನಲಿ ನಲಿಯುತ ಸಿನಿಮಾಗಳಲ್ಲಿ ನಟಿಸಿರುವ ವಿದಿಶಾ ಶ್ರೀವಾಸ್ತವ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿದಿಶಾ ತಾಯಿಯಾಗುತ್ತಿರುವ ವಿಚಾರವನ್ನ ವಿದಿಶಾ ಸಹೋದರಿ ಶಾನ್ವಿ ಶ್ರೀವಾಸ್ತವ ಅವರು ಕೆಲ ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಹಿಸುದ್ದಿ ಹಂಚಿಕೊಂಡಿದ್ದರು.

    2018ರಲ್ಲಿ ಸಾಯಕ್ ಎಂಬವರನ್ನು ನಟಿ ವಿದಿಶಾ ಬನಾರಸ್‌ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕೆಲ ವರ್ಷಗಳ ಡೇಟಿಂಗ್ ನಂತರ ಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಸಾಯಕ್- ವಿದಿಶಾ ಕಾಲಿಟ್ಟಿದ್ದರು. ನಟಿ ವಿದಿಶಾ ಇದೀಗ ಚೊಚ್ಚಲ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ (Pregnancy Photoshoot) ಮಾಡಿಸಿದ್ದಾರೆ.

    ನಟಿ ವಿದಿಶಾ ಇದೀಗ ತುಂಬು ಗರ್ಭಿಣಿಯಾಗಿದ್ದು, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣ- ಬಿಳಿ ಬಣ್ಣದ ಉಡುಗೆಯಲ್ಲಿ ಪತಿ ಜೊತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋಶೂಟ್‌ನಲ್ಲಿ ನಟಿಯ ಪ್ರೆಗ್ನೆನ್ಸಿಯ ಗ್ಲೋ ಎದ್ದು ಕಾಣುತ್ತಿದೆ. ವಿದಿಶಾ ಫೋಟೋಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿದಿಶಾ ಸುಸೂತ್ರವಾಗಿ ಹೆರಿಗೆ ಆಗಲಿ ಒಳ್ಳೆಯದಾಗಲಿ ಎಂದು ಫ್ಯಾನ್ಸ್ ಶುಭಕೋರಿದ್ದಾರೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ ವಿದಿಶಾ ಶ್ರೀವಾಸ್ತವ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ ವಿದಿಶಾ ಶ್ರೀವಾಸ್ತವ

    ನ್ನಡದ ವಿರಾಟ್ (Viraat), ನಲಿ ನಲಿಯುತ ಸಿನಿಮಾಗಳಲ್ಲಿ ನಟಿಸಿರುವ ವಿದಿಶಾ ಶ್ರೀವಾಸ್ತವ (Vidisha Srivastava) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿದಿಶಾ ತಾಯಿಯಾಗುತ್ತಿರುವ ವಿಚಾರವನ್ನ ವಿದಿಶಾ ಸಹೋದರಿ ಶಾನ್ವಿ ಶ್ರೀವಾಸ್ತವ (Shanvi Srivastava) ಸೋಷಿಯಲ್ ಮೀಡಿಯಾದಲ್ಲಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

    2018ರಲ್ಲಿ ಸಾಯಕ್ ಎಂಬುವವರನ್ನು ನಟಿ ವಿದಿಶಾ ಬನಾರಸ್‌ನಲ್ಲಿ (Banaras) ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕೆಲ ವರ್ಷಗಳ ಡೇಟಿಂಗ್ ನಂತರ ಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಸಾಯಕ್ (Sayak)- ವಿದಿಶಾ (Vidhisha) ಕಾಲಿಟ್ಟಿದ್ದರು. ಇದನ್ನೂ ಓದಿ:‘ಪುಷ್ಪ’ ಟೀಮ್‌ಗೆ ED ಶಾಕ್ ಕೊಟ್ಟ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ನಿರ್ಮಾಪಕ

    ನಟಿ ವಿದಿಶಾ ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ವಿದಿಶಾ ಸಹೋದರಿ ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾಸ್ತವ (Shanvi Srivastava) ಗುಡ್ ನ್ಯೂಸ್ ತಿಳಿಸಿದ್ದಾರೆ. ವಿದಿಶಾ ಜೊತೆಗಿನ ಫೋಟೋ ಹಂಚಿಕೊಂಡು ಶುಭಹಾರೈಸಿದ್ದಾರೆ. ಶಾನ್ವಿ ವಿಶ್ ಮಾಡ್ತಿದ್ದಂತೆ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ.

    ಶಾನ್ವಿ ಅವರು ಕನ್ನಡದ ಮಫ್ತಿ, ತಾರಕ್, ಚಂದ್ರಲೇಖ, ಗೀತಾ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿದಿಶಾ ಅವರು ಕನ್ನಡ ಸಿನಿಮಾ- ಹಿಂದಿ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ.

  • ಶಾನ್ವಿ ಶ್ರೀವಾಸ್ತವ್ ಸಹೋದರಿ ನಟಿ ವಿದಿಶಾ ಪತಿ ಯಾರು ಗೊತ್ತಾ?

    ಶಾನ್ವಿ ಶ್ರೀವಾಸ್ತವ್ ಸಹೋದರಿ ನಟಿ ವಿದಿಶಾ ಪತಿ ಯಾರು ಗೊತ್ತಾ?

    ಸ್ಯಾಂಡಲ್‌ವುಡ್‌ನ `ವಿರಾಟ್’ ಮತ್ತು `ನಲಿ ನಲಿಯುತ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ನಟಿ ವಿದಿಶಾ ಶ್ರೀವಾಸ್ತವ್‌ಗೆ ಈಗಾಗಲೇ ಮದುವೆಯಾಗಿದೆ. ಅವರ ಮದುವೆಯ ವಿಚಾರದ ಬಗ್ಗೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅಸಲಿ ವಿಚಾರವೇನು ಇಲ್ಲಿದೆ ಡಿಟೈಲ್ಸ್

    ಬ್ಯೂಟಿ ಜತೆ ಪ್ರತಿಭೆ ಇರುವ ವಿದಿಶಾ ಶ್ರೀವಾಸ್ತವ್‌ಗೆ ತಂಗಿ ಶಾನ್ವಿಗೆ ಸಿಕ್ಕಷ್ಟು ಜನಪ್ರಿಯತೆ ವಿದಿಶಾಗೆ ಸಿಕ್ಕಿಲ್ಲ. ಆದರೆ ಕನ್ನಡದ `ವಿರಾಟ್’ ಮತ್ತು `ನಲಿ ನಲಿಯುತ’ ಚಿತ್ರದ ಮೂಲಕ ಗಮನ ಸೆಳೆದ ನಟಿ ವಿದಿಶಾ ಇದೀಗ ಹಿಂದಿ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣ ಗಣನೆ

    ಸದ್ಯ ಶಾನ್ವಿ ಅಕ್ಕ ವಿದಿಶಾ ಯಾರು ಹೇಳದೇ ಮದುವೆ ಆದ್ರಾ ಎಂಬ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿದಿಶಾ ಶ್ರೀವಾಸ್ತವ್ ನಾಲ್ಕು ವರ್ಷಗಳ ಹಿಂದೆ ಸಾಯಕ್ ಎಂಬುವವರ ಜತೆ ಮದುವೆ ಆಗಿದ್ದಾರೆ.

    ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ವಿದಿಶಾಗೆ ಸ್ವಲ್ಪ ಬ್ರೇಕ್ ಬೇಕು ಎಂದು ಮುಂಬೈನ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಸಾಯಕ್ ಪರಿಚಯವಾಗಿ, ಸ್ನೇಹದಿಂದ ಪ್ರೀತಿಗೆ ತಿರುಗಿ 2018ರಲ್ಲಿ ಬನಾರಸ್‌ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. ಆದರೆ ಸಾಯಕ್ ಸರಳ ವ್ಯಕ್ತಿ ಆಗಿರೋದರಿಂದ ತಮ್ಮ ಬದುಕನ್ನ ವಯಕ್ತಿಕವಾಗಿ ಇಡಲು ಇಷ್ಟಪಟ್ಟಿದ್ದರು. ವಿದಿಶಾ ಮತ್ತು ಸಾಯಕ್ ಮದುವೆಯಾಗಿ ನಾಲ್ಕು ವರ್ಷಗಳು ಕಳೆದಿದ್ದು, ವಿದಿಶಾ ಶ್ರೀವಾಸ್ತವ್ ಮದುವೆ ವಿಚಾರವೇ ಸದ್ಯ ಸಖತ್ ಸದ್ದು ಮಾಡುತ್ತಿದೆ.