Tag: Vidisha

  • ದುಬೈನಲ್ಲಿ ಏರ್‌ಪೋರ್ಟ್ ಅಧಿಕಾರಿಯಾಗಿದ್ದ ಮಂಗಳೂರು ಯುವತಿ ಅಪಘಾತದಲ್ಲಿ ಸಾವು

    ದುಬೈನಲ್ಲಿ ಏರ್‌ಪೋರ್ಟ್ ಅಧಿಕಾರಿಯಾಗಿದ್ದ ಮಂಗಳೂರು ಯುವತಿ ಅಪಘಾತದಲ್ಲಿ ಸಾವು

    ಮಂಗಳೂರು: ದುಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಉಳ್ಳಾಲ ಮೂಲದ ಯುವತಿ ಸಾವನ್ನಪ್ಪಿದ್ದಾರೆ.

    ಉಳ್ಳಾಲ ತಾಲೂಕಿನ ಕೋಟೆಕಾರ್ ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ವಿಧಿವಶರಾದ ದುರ್ದೈವಿ. ಇವರು ಮಂಗಳೂರು ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ ಬಿಜೆಪಿ ಮುಖಂಡೆ ರಾಜೀವಿ ಹಾಗೂ ವಿಠಲ ಕುಲಾಲ್ ದಂಪತಿಯ ಏಕೈಕ ಪುತ್ರಿ. ಇದನ್ನೂ ಓದಿ: ಲೋ ಬಿಪಿಯಿಂದ ಪತ್ನಿ ಸಾವೆಂದ ದರ್ಶನ್-‌ ಪತಿಯಿಂದ್ಲೇ ಕೊಲೆ ಅಂತಾ ಪೋಷಕರ ಆರೋಪ

    ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದ್ದರು. ಬಳಿಕ 2019 ರಿಂದ ದುಬೈಗೆ ತೆರಳಿ ಅಲ್ಲಿನ ಏರ್‌ಪೋರ್ಟ್ ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

    ಪ್ರತಿದಿನ ಕಂಪನಿಯ ಕ್ಯಾಬ್ ನಲ್ಲೇ ಸಂಚರಿಸುತ್ತಿದ್ದ ವಿದಿಶಾ ಕ್ಯಾಬ್ ತಪ್ಪಿದ ಹಿನ್ನೆಲೆಯಲ್ಲಿ ತನ್ನ ಕಾರಿನಲ್ಲೇ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ .ಗಂಭೀರವಾಗಿ ಗಾಯಗೊಂಡ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  • ಬಾಲಕಿಯ ರಕ್ಷಿಸುವುದನ್ನು ನೋಡಲು ಹೋಗಿ 30 ಮಂದಿ ಅದೇ ಬಾವಿಗೆ ಬಿದ್ರು!

    ಬಾಲಕಿಯ ರಕ್ಷಿಸುವುದನ್ನು ನೋಡಲು ಹೋಗಿ 30 ಮಂದಿ ಅದೇ ಬಾವಿಗೆ ಬಿದ್ರು!

    – ನಾಲ್ವರು ದಾರುಣ ಸಾವು
    – ಭರದಿಂದ ಸಾಗಿದೆ ರಕ್ಷಣಾ ಕಾರ್ಯ

    ಭೋಪಾಲ್: ಆಟವಾಡುತ್ತಾ ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಮಾಡುವುದನ್ನು ನೋಡಲು ಹೋಗಿ 30 ಮಂದಿ ಅದೇ ಬಾವಿಗೆ ಬಿದ್ದು, ಅದರಲ್ಲಿ 4 ಮಂದಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಗುರುವಾರ ಸಂಜೆ ವಿದಿಶಾ ಜಿಲ್ಲೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗಂಜ್ ಬಸೋಡಾದಲ್ಲಿ ಈ ಘಟನೆ ನಡೆದಿದೆ. 50 ಅಡಿ ಆಳವಿರುವ ಬಾವಿಯಲ್ಲಿ 20 ಅಡಿಯಷ್ಟು ನೀರು ತುಂಬಿತ್ತು.

    ಘಟನೆಯಲ್ಲಿ ಬಾವಿಗೆ ಬಿದ್ದ 30 ಮಂದಿಯಲ್ಲಿ 15 ಮಂದಿಯನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ. ಹಾಗೆಯೇ ನಾಲ್ವರ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಇನ್ನೂ 13 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳೀಗೆ ಮಾಹಿತಿ ನೀಡಿದ್ದಾರೆ.

    ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿದಿಶಾ ಗಾರ್ಡಿಯನ್ ಮಿನಿಸ್ಟರ್ ಗುರುವಾರ ರಾತ್ರಿಯೇ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇಂದು ಕೂಡ ರಕ್ಷಣಾ ಕಾರ್ಯ ಮುಂದುವರಿದ್ದು, ಒಟ್ಟು 19 ಮಂದಿಯನ್ನು ರಕ್ಷಿಸಲಾಗಿದೆ. ಇಂದು ಮೂವರ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆಯಲಾಗಿದೆ. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಕೂಡ ಸ್ಥಳದಲ್ಲಿ ಬೀಡುಬಿಟ್ಟಿವೆ.

    ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಬಾಲಕಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಇತ್ತ ಬಾವಿ ಹತ್ತಿರ ಸ್ಥಳೀಯರು ನೋಡುತ್ತಾ ನಿಂತಿದ್ದರು. ಇದೇ ವೇಳೆ ಮಣ್ಣು ಕುಸಿದು ನಿಂತಿದ್ದವರು ಕೂಡ ಬಾವಿಗೆ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇತ್ತ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಶಿವರಾಜ್ ದಿಂಗ್ ಚೌಹಾಣ್ ತಿಳಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ಆಗಾಗ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

  • ಕೆಲಸ ಹೋಯ್ತು ಮಾವನ ಮನೆಗೆ ಬಂದ- ಎರಡೇ ತಿಂಗಳಲ್ಲಿ ಪತ್ನಿ ತಂಗಿ ಜೊತೆ ಜೂಟ್

    ಕೆಲಸ ಹೋಯ್ತು ಮಾವನ ಮನೆಗೆ ಬಂದ- ಎರಡೇ ತಿಂಗಳಲ್ಲಿ ಪತ್ನಿ ತಂಗಿ ಜೊತೆ ಜೂಟ್

    – ಲಾಕ್‍ಡೌನ್‍ನಲ್ಲಿ ಮಾವನ ಮನೆಯಲ್ಲಿ ಠಿಕಾಣಿ

    ಭೋಪಾಲ್: ಲಾಕ್‍ಡೌನ್ ನಲ್ಲಿ ಕೆಲಸ ಕಳೆದುಕೊಂಡಿದ್ದ ವ್ಯಕ್ತಿ ಮಾವನ ಮನೆ ಸೇರಿಕೊಂಡಿದ್ದನು. ಎರಡು ತಿಂಗಳು ಅಲ್ಲಿಯೇ ಠಿಕಾಣಿ ಹೂಡಿ ಪತ್ನಿಯ ಅಪ್ರಾಪ್ತ ತಂಗಿಯನ್ನ ಓಡಿಸಿಕೊಂಡು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯ ಪಮರಿಯಾ ಗ್ರಾಮದಲ್ಲಿ ನಡೆದಿದೆ.

    ಐದು ವರ್ಷಗಳ ಹಿಂದೆ ಗೌತಮ್ ನಗರದ ಬ್ರಿಜೇಶ್ ಜೊತೆ ರಿಂಕಿ ಮದುವೆ ಆಗಿತ್ತು. ಲಾಕ್‍ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಬ್ರಿಜೇಶ್ ಪತ್ನಿ ಜೊತೆ ಮಾವನ ಮನೆ ಸೇರಿದ್ದನು. ಆರ್ಥಿಕ ಸಂಕಷ್ಟ ಹಿನ್ನೆಲೆ ರಿಂಕಿ ಸಹ ತವರು ಮನೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು.

    ಕೆಲಸವಿಲ್ಲದೇ ಖಾಲಿ ಕುಳಿತಿದ್ದ ಬ್ರಿಜೇಶ್ ಕಣ್ಣು ಪತ್ನಿಯ ತಂಗಿ ಮೇಲೆ ಬಿದ್ದಿದೆ. ಅಪ್ರಾಪ್ತೆಯಾಗಿದ್ದ ಪತ್ನಿ ತಂಗಿಯನ್ನ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ಈ ಬಗ್ಗೆ ಅತ್ತೆ ಅನುಮಾನ ವ್ಯಕ್ತಪಡಿಸಿದಾಗ ಆಕೆ ನನ್ನ ಸೋದರಿ ಸಮಾನ ಎಂದು ಡೈಲಾಗ್ ಹೊಡೆದಿದ್ದಾನೆ. ಇತ್ತ ರಿಂಕಿ ಸಹ ಪತಿಗೆ ತಂಗಿಯಿಂದ ದೂರವಿರುವಂತೆ ಹೇಳಿದಾಗ ಬೆದರಿಸಿ ಥಳಿಸಿದ್ದಾನೆ.

    ಜುಲೈನಲ್ಲಿ ವಾಪಸ್ ಗೌತಮ್ ನಗರಕ್ಕೆ ಬಂದ ಪತ್ನಿ ಜೊತೆಯಲ್ಲಿಯೇ ಇದ್ದನು. ಏಳು ದಿನಗಳ ಹಿಂದೆ ಮತ್ತೆ ಮಾವನ ಮನೆಗೆ ತೆರಳಿ ಪತ್ನಿ ತಂಗಿಯನ್ನ ಬೈಕ್ ಮೇಲೆ ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ. ಅಳಿಯನ ವಿರುದ್ಧ ನಟೇರನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂರು ದಿನದ ಬಳಿಕ ಓಡಿ ಹೋಗಿದ್ದ ಜೋಡಿಯನ್ನ ಕರೆದುಕೊಂಡು ಬಂದಿದ್ದಾರೆ. ನಂತ್ರ ರಾಜಿ ಪಂಚಾಯ್ತಿ ಮೂಲಕ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಇತ್ತ ಶುಕ್ರವಾರ ರಿಂಕಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.