ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಆಯೋಜಿಸಿದ್ದ ಆರನೇ ಆವೃತ್ತಿಯ ವಿದ್ಯಾಪೀಠ (Vidhyapeetha) ಶೈಕ್ಷಣಿಕ ಮೇಳ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಶನಿವಾರದಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ವಿದ್ಯಾಪೀಠಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಕೊನೆಯ ದಿನವಾದ ಇಂದು 10 ಸಾವಿರಕ್ಕೂ ಹೆಚ್ಚು ಮಕ್ಕಳು, ಪೋಷಕರು ಆಗಮಿಸಿ ಶೈಕ್ಷಣಿಕ ಮೇಳದ ಪ್ರಯೋಜನವನ್ನು ಪಡೆದುಕೊಂಡರು.
ಒಟ್ಟು ಎರಡು ದಿನದಲ್ಲಿ 15ಸಾವಿರಕ್ಕೂ ಹೆಚ್ಚು ಮಂದಿ ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದರು. ಹ್ಯಾಂಡ್‍ರೈಟಿಂಗ್ ತಜ್ಞ ಡಾ.ರಫೀಉಲ್ಲಾ ಬೇಗ್ ಉಪನ್ಯಾಸ ಎಲ್ಲರ ಗಮನ ಸೆಳೆಯಿತು. ಕಾಮೆಡ್‍ಕೆ ಮತ್ತು ಸಿಇಟಿ ಕುರಿತ ವಿಶೇಷ ಉಪನ್ಯಾಸಕ್ಕೆ ಮಕ್ಕಳು ಫಿದಾ ಆದರು. ಮಹಿಳಾ ಕಾಲೇಜು ಪ್ರಾಂಶುಪಾಲ ರವಿ ಅವರು ಸಿಇಟಿ ಸೀಟು ಆಯ್ಕೆ, ಶುಲ್ಕ ಮತ್ತಿತರ ವಿಚಾರಗಳ ಬಗೆಗೆ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಕುಸಿದೇ ಬಿಡ್ತು 1,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ
ಹಲವು ಸ್ಪರ್ಧೆಗಳಲ್ಲಿ ಗೆದ್ದವರಿಗೆ ಗಿಫ್ಟ್ ನೀಡಲಾಯ್ತು. ಸಮಾರೋಪ ಕಾರ್ಯಕ್ರಮದಲ್ಲಿ ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದ ವಿದ್ಯಾಸಂಸ್ಥೆಗಳಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ (HR Ranganath) ಸ್ಮರಣಿಕೆ ನೀಡಿ ಗೌರವಿಸಿದರು. 15 ಅದೃಷ್ಟಶಾಲಿಗಳಿಗೆ ಸೈಕಲ್, ನಾಲ್ವರು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದರು.
ಬೆಂಗಳೂರು: ಪಬ್ಲಿಕ್ ಟಿವಿ ಆಯೋಜಿಸುತ್ತಿರುವ 5ನೇ ವರ್ಷದ ಮೆಗಾ ಶೈಕ್ಷಣಿಕ ಉತ್ಸವ ʼವಿದ್ಯಾಪೀಠʼಕ್ಕೆ ನಾಳೆ ಚಾಲನೆ ಸಿಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ವಿದ್ಯಾಪೀಠದಲ್ಲಿ ತಜ್ಞರ ಉಪನ್ಯಾಸ, ಸಂವಾದವನ್ನು ಸಹ ಆಯೋಜಿಸಲಾಗಿದೆ.
ಯಾರೆಲ್ಲ ಭಾಗವಹಿಸುತ್ತಾರೆ?
ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್, ಆರ್ಕಿಟೆಕ್ಚರ್, ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜ್‍ಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜ್‍ಗಳು, ಸಮೂಹ ಸಂವಹನ, ಎಂಬಿಎ ಇನ್‍ಸ್ಟಿಟ್ಯೂಷನ್, ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು.
ಯಾರೆಲ್ಲ ಆಗಮಿಸಬಹುದು?
ಕೌನ್ಸೆಲರ್‍ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.
ದಿನಾಂಕ: ಜೂನ್ 24, 25, 26
ಸ್ಥಳ: ಗೇಟ್ ನಂಬರ್ 4, ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ
ಯಾವ ದಿನ ಏನು ಕಾರ್ಯಕ್ರಮ? ಜೂನ್ 24
ಬೆಳಗ್ಗೆ 9:50ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್‌ಆರ್ ರಂಗನಾಥ್, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಡಾ.ವಿ.ಜಿ. ಜೋಸೆಫ್, ರೇವಾ ವಿಶ್ವವಿದ್ಯಾಲಯದ ಕುಲಪತಿ ಶ್ಯಾಮರಾಜು, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಿಕೆ ಮೋಹನ್ ಉಪಸ್ಥಿತರಿಲಿದ್ದಾರೆ.
ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ “ಮೌಲ್ಯ ಆಧಾರಿತ ಶಿಕ್ಷಣದ ಮೂಲಕ ವಿಶ್ವಾಸವನ್ನು ಬೆಳೆಸಿಕೊಳ್ಳಿ” ವಿಷಯದ ಬಗ್ಗೆ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ ನಿರ್ದೇಶಕ ಡಾ. ಗುರುರಾಜ ಕರಜಗಿ ಮಾತನಾಡಲಿದ್ದಾರೆ.
ಮಧ್ಯಾಹ್ನ 2 ರಿಂದ 4ರವರೆಗೆ ಐಎಎಸ್ ಅಭ್ಯರ್ಥಿಗಳಾದ ರಾಜೇಶ್ ಪೊನ್ನಪ್ಪ ಮತ್ತು ಅರುಣಾ ಸ್ಫೂರ್ತಿದಾಯಕ ಮಾತುಗಳನ್ನು ಆಡಲಿದ್ದಾರೆ. ಸಂಜೆ 5 ಗಂಟೆಯಿಂದ “ಭಾವನಾತ್ಮಕ ಬಂಧದ ಪ್ರಾಮುಖ್ಯತೆ ಮತ್ತು ಪೋಷಕತ್ವ”ದ ಬಗ್ಗೆ ಕ್ಲಿನಿಕಲ್ ಸೈಕಾಲಜಿಸ್ಟ್ ಹರ್ಷಿತಾ ನರೇಂದ್ರ ಮಾತನಾಡಲಿದ್ದಾರೆ.
ಜೂನ್ 25
ಬೆಳಗ್ಗೆ 10:30ರಿಂದ 11:30ರವರೆಗೆ “ಭಾರತ ಶಿಕ್ಷಣದ ತಾಣ – ಕರ್ನಾಟಕ ಅವಕಾಶಗಳ ಬೀಡು” ವಿಷಯದ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಭಾಷಣ ಮಾಡಲಿದ್ದಾರೆ.
ಬೆಳಗ್ಗೆ 11:30ರಿಂದ 12:30ರವರೆಗೆ “ಸಿಇಟಿ- ಕಾಮೆಡ್‌ಕೆ ಪರೀಕ್ಷೆಯಲ್ಲಿ ಆಯ್ಕೆ ಸರಿ ಇರಲಿ” ವಿಷಯದ ಬಗ್ಗೆ ರಮ್ಯಾ ಮತ್ತು ಡಾ. ಎಸ್ ಕುಮಾರ್ ಮಾತನಾಡಲಿದ್ದಾರೆ.
ಮಧ್ಯಾಹ್ನ 2:30ರಿಂದ ಸಂಜೆ 4 ಗಂಟೆಯವರೆಗೆ “ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಯುವಾ ಬ್ರಿಗೇಡ್ ಸಂಸ್ಥಾಪಕ, ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು ಪ್ಯಾನಲ್ ಡಿಸ್ಕಷನ್‌ನಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 4 ರಿಂದ 5 ಗಂಟೆಯವರೆಗೆ “ಪ್ಯಾಶನ್ ಆಧಾರಿತ ವೃತ್ತಿ Vs ಉದ್ದೇಶ ಆಧಾರಿತ ವೃತ್ತಿ” ವಿಷಯದ ಬಗ್ಗೆ ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್ ಮಾತನಾಡಲಿದ್ದಾರೆ.
ಜುಲೈ 26:
ಬೆಳಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ “ಸೂಪರ್ ಪವರ್ ಮೆಮೊರಿಯೊಂದಿಗೆ ನಿಮ್ಮ ವೃತ್ತಿ ಜೀವನವನ್ನು ವೇಗಗೊಳಿಸಿ” ವಿಷಯದ ಬಗ್ಗೆ ಕೈಬರಹ ಮತ್ತು ಜ್ಞಾಪಕ ಶಕ್ತಿ ತಜ್ಞ ಡಾ. ರಫಿ ಉಲ್ಲಾ ಬೇಗ್ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಮೆಡಿಕಲ್ ಶಿಕ್ಷಣ ನಿರ್ದೇಶಕಿ ಡಾ. ಸುಜತಾ ರಥೋಡ್ ನೀಟ್ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 2:30 ರಿಂದ ಸಂಜೆ 4 ಗಂಟೆಯವರೆಗೆ ಮುಂದಿನ ಶಿಕ್ಷಣದ ಕುರಿತಾಗಿ ಶಿಕ್ಷಣ ತಜ್ಞರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಸಂವಾದದಲ್ಲಿ ಗಾರ್ಡನ್ ಸಿಟಿ ಕಾಲೇಜಿನ ಕ್ರಿಸ್ಟೋ ಜೋಸೆಫ್, ಕೇಂಬ್ರಿಡ್ಜ್ ಐಟಿಯ ಅದ್ವಿತೀಯ ಯು ಕುಮಾರ್, ಮಾಹೆ ಬೆಂಗಳೂರಿನ ಡಾ. ವಿದ್ಯಾ ಶೆಟ್ಟಿ, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ರಾಜೀವ್ ಗೌಡ, ಎಐಎಂಎಸ್ ಸಂಸ್ಥೆಯ ಪ್ರಿಯಾನಂದ ರೆಡ್ಡಿ ಭಾಗವಹಿಸಲಿದ್ದಾರೆ.
– ಅರಮನೆ ಮೈದಾನದಲ್ಲಿ 3 ದಿನ ಎಜುಕೇಷನ್ ಫೆಸ್ಟ್ – ಪೋಷಕರೇ, ಮಕ್ಕಳೇ ಬನ್ನಿ ಪಾಲ್ಗೊಳ್ಳಿ
ಬೆಂಗಳೂರು: ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಯಾವ ಕಾಲೇಜಿನಲ್ಲಿ ಶುಲ್ಕ ಎಷ್ಟಿರುತ್ತದೆ? ಇತ್ಯಾದಿ ಗೊಂದಲ ಪೋಷಕರಿಗೆ ಇದ್ದೆ ಇರುತ್ತದೆ. ಈ ಗೊಂದಲ ನಿವಾರಣೆಗಾಗಿ ನಿಮ್ಮ ಪಬ್ಲಿಕ್ ಟಿವಿ ಬೃಹತ್ ಶೈಕ್ಷಣಿಕ ಮೇಳವನ್ನು ಆಯೋಜನೆ ಮಾಡಿದೆ.
‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷ ವಾಕ್ಯವನ್ನು ಹೊಂದಿರುವ ವಿದ್ಯಾಪೀಠ ಕಾರ್ಯಕ್ರಮ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಇಂದಿನಿಂದ ಆರಂಭವಾಗಲಿದೆ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮ ಶುಕ್ರವಾರದಿಂದ ಭಾನುವಾರದವರೆಗೆ ನಡೆಯಲಿದೆ.
ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿ ಪರ ಕೋರ್ಸ್ ಗಳ ಬಗ್ಗೆ ಒಂದೇ ಸೂರಿನಡಿ ಮಾಹಿತಿ ಸಿಗಲಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಲ್ಲದೇ, ಕಾಮರ್ಸ್, ಮ್ಯಾನೇಜ್‍ಮೆಂಟ್, ಅನಿಮೇಷನ್, ಮಾಧ್ಯಮ ಲೋಕಕ್ಕೆ ಬರುವ ವಿದ್ಯಾರ್ಥಿಗಳಿಗೂ ಮಾಹಿತಿ ಸಿಗುತ್ತೆ.
ಸಿಇಟಿ, ನೀಟ್ ಮತ್ತು ಔದ್ಯೋಗಿಕ ಕೋರ್ಸ್ ಗಳ ಬಗ್ಗೆ ಮಾಹಿತಿ ಸಿಗಲಿದ್ದು, 60ಕ್ಕೂ ಹೆಚ್ಚು ಪ್ರಖ್ಯಾತಿ ಪಡೆದಿರುವ ಕಾಲೇಜ್‍ಗಳು ಭಾಗವಹಿಸಲಿವೆ. ನುರಿತ ಶಿಕ್ಷಣ ತಜ್ಞರು, ಆರ್ಥಿಕ ಸಲಹೆಗಾರರು ಮಾಹಿತಿ ನೀಡಲಿದ್ದಾರೆ.
ಯಾರೆಲ್ಲ ಭಾಗವಹಿಸುತ್ತಾರೆ? – ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್ – ಆರ್ಕಿಟೆಕ್ಚರ್ – ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು – ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು – ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್ – ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು – ಸಮೂಹ ಸಂವಹನ – ಎಂಬಿಎ ಇನ್‍ಸ್ಟಿಟ್ಯೂಷನ್ – ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು
ಯಾರೆಲ್ಲ ಆಗಮಿಸಬಹುದು? – ಕೌನ್ಸೆಲರ್ ಗಳು – ಶಿಕ್ಷಣ ತಜ್ಞರು – ಹಣಕಾಸು ಸಲಹೆಗಾರರು – ಪೋಷಕರು – ಪಿಯುಸಿ ವಿದ್ಯಾರ್ಥಿಗಳು – ಪದವಿ ಓದುತ್ತಿರುವ ವಿದ್ಯರ್ಥಿಗಳು – ಉದ್ಯೋಗದಲ್ಲಿರುವ ಉದ್ಯೋಗಿಗಳು
ಸ್ಪರ್ಧೆಯ ಸಮಯ:
ಇಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಚರ್ಚಾ ಸ್ಪರ್ಧೆಯ ಮೊದಲ ಸುತ್ತು ನಡೆಯಲಿದೆ. ಶನಿವಾರ ಮಧ್ಯಾಹ್ನ 2 ರಿಂದ 3:30ರವರೆಗೆ ಪೇಟಿಂಗ್ ಸ್ಪರ್ಧೆ ನಡೆಯಲಿದೆ. ಈ ಅವಧಿಯಲ್ಲೇ ಕ್ವಿಜ್ ಲಿಖಿತ ಪರೀಕ್ಷೆ ಸಹ ನಡೆಯಲಿದೆ. ಶನಿವಾರವೇ ಚರ್ಚಾ ಸ್ಪರ್ಧೆಯ ಅಂತಿಮ ಸುತ್ತು ಮಧ್ಯಾಹ್ನ 3:30 ರಿಂದ 5 ಗಂಟೆಯವರೆಗೆ ನಡೆಯಲಿದೆ. ಭಾನುವಾರ ಮಧ್ಯಾಹ್ನ 2:30 ರಿಂದ 3:30ರವರೆಗೆ ಕ್ವಿಜ್ ಫೈನಲ್ ನಡೆಯಲಿದ್ದು, 3:30 ರಿಂದ 4:30ರವರೆಗೆ ಗಾಯನ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಗುತ್ತದೆ. ನೇಳೆ ಮತ್ತು ನಾಡಿದ್ದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ ಗಳನ್ನು ಪ್ರದರ್ಶನ ಮಾಡಲಿದ್ದಾರೆ.
ದಿನಾಂಕ : ಮೇ 10, 11, 12 ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು ಸಮಯ : ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ