Tag: VidhyaMandira

  • ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ನಮ್ಮ ಬಲವನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು: ಹೆಚ್.ಆರ್ ರಂಗನಾಥ್

    ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ನಮ್ಮ ಬಲವನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು: ಹೆಚ್.ಆರ್ ರಂಗನಾಥ್

    – ಪಬ್ಲಿಕ್ ಟಿವಿಯ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳು, ಪೋಷಕರ ದಂಡು

    ಬೆಂಗಳೂರು: ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಮಾರ್ಗವಾಗಿ ವಿದ್ಯಾಮಂದಿರ (Vidhyamandira) ಶೈಕ್ಷಣಿಕ ಎಕ್ಸ್‌ಪೋ (Education Expo )ಆಯೋಜಿಸಲಾಗಿದೆ. ವಿದೇಶಗಳಿಗೆ ಶಿಕ್ಷಣಕ್ಕಾಗಿ ತೆರಳುವ ಯೋಚನೆಯಲ್ಲಿರುವ ನಮ್ಮ ವಿದ್ಯಾರ್ಥಿಗಳಿಗೆ ನಮ್ಮಲ್ಲಿಯೇ ಅಂತಹ ಶಿಕ್ಷಣ ಸಿಗಬೇಕು ಎಂದು `ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರು ಆಶಯ ವ್ಯಕ್ತಪಡಿಸಿದರು.

    ಮಲ್ಲೇಶ್ವರಂನಲ್ಲಿ Ad6 ಸಹಯೋಗದಲ್ಲಿ ಆಯೋಜಿಸಿರುವ ವಿದ್ಯಾಮಂದಿರ ಶೈಕ್ಷಣಿಕ ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಇಲ್ಲಿ ಡಿಗ್ರಿ ಮಾಡಿ ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಮಾಡಬೇಕು ಎಂಬ ಆಲೋಚನೆ ಯುವಜನತೆಗೆ ಬಂದಿದೆ. ಕೆನಡಾ ಶಿಕ್ಷಣ ಸಂಸ್ಥೆಗಳು ನಡೆಯುತ್ತಿರುವುದು ಭಾರತೀಯ ಹಣದಿಂದ. ಕಳೆದ ಸಲ 2.5 ಲಕ್ಷ ಮಕ್ಕಳು ಶಿಕ್ಷಣಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ನಮ್ಮ ಬಲವೇ ಅಲ್ಲಿಗೆ ಹರಿದು ಹೋದಂತೆ ಕಾಣುತ್ತದೆ. ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನ ಇನ್ನೂ ಬಲಗೊಳಿಸಬೇಕು. ಆಗ ನಾವು ಇಲ್ಲಿಯೇ ನಮ್ಮ ಬಲವನ್ನು ಉಳಿಸಿಕೊಳ್ಳಬಹುದು. ಆದರೆ ಅಲ್ಲಿಗೇ ಹೋಗಬೇಕು, ಅಲ್ಲಿಯೇ ಇರಬೇಕು ಎನ್ನುವವರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ವಿದ್ಯುಕ್ತ ಚಾಲನೆ – 35 ಕ್ಕೂ ಅಧಿಕ ಸಂಸ್ಥೆಗಳು ಭಾಗಿ

    ನಮ್ಮ ಮಕ್ಕಳಿಗೆ ಸರಿಯಾದ ಮಾಹಿತಿ ಸಿಗಲಿ. ಈ ಮೇಳ ಮಕ್ಕಳಿಗೆ ಉಪಯೋಗವಾಗಲಿ ಎಂದು ಅವರು ಈ ವೇಳೆ ಶುಭ ಹಾರೈಸಿದರು.

    ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಿ.ಕೆ ಮೋಹನ್ ಅವರು ಮಾತನಾಡಿ, ಬೆಳಕು ಕಾರ್ಯಕ್ರಮದ ಮೂಲಕ ಅನೇಕರ ಬಾಳಿಗೆ ಬೆಳಕು ಕೊಟ್ಟಿರುವ `ಪಬ್ಲಿಕ್ ಟಿವಿ’ ಶಿಕ್ಷಣದ ಮಾಹಿತಿ ಮೂಲಕವೂ ಬೆಳಕು ಹರಡುತ್ತಿದೆ ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರ ಭಾರತದಲ್ಲಿ ಮತ್ತು ಬೆಂಗಳೂರಿನಲ್ಲಿ ಯಾವುದೇ ವಿದೇಶದ ಯುನಿವರ್ಸಿಟಿಗಿಂತ ಹಿಂದೆ ಉಳಿದಿಲ್ಲ. ಈಗ ಈ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿದ್ದೇವೆ ಎಂದರು.

    ಆರ್‍ಆರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಅವರು ಮಾತನಾಡಿ, ನಮ್ಮ ಶಿಕ್ಷಣದ ಬಗ್ಗೆ, ಶಿಕ್ಷಣ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ಉತ್ತಮವಾದ ವೇದಿಕೆ ಇದಾಗಿದೆ. ಬೆಂಗಳೂರು ಶಿಕ್ಷಣಕ್ಕೆ ಉತ್ತಮ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

    ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜಿಸಿರುವ ಪಬ್ಲಿಕ್ ಟಿವಿ ವಿದ್ಯಾಮಂದಿರ ಶಿಕ್ಷಣ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಆಗಮಿಸುತ್ತಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಮೇಳವು ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆ ವರೆಗೆ ಇರಲಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ವಿದ್ಯುಕ್ತ ಚಾಲನೆ – 35 ಕ್ಕೂ ಅಧಿಕ ಸಂಸ್ಥೆಗಳು ಭಾಗಿ

    ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ವಿದ್ಯುಕ್ತ ಚಾಲನೆ – 35 ಕ್ಕೂ ಅಧಿಕ ಸಂಸ್ಥೆಗಳು ಭಾಗಿ

    – ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್

    ಬೆಂಗಳೂರು: ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ Ad6 ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ `ಪಬ್ಲಿಕ್ ಟಿವಿ ಎಕ್ಸ್‌ ಪೋ ವಿದ್ಯಾಮಂದಿರ’ (Vidhyamandira) ಶೈಕ್ಷಣಿಕ ಮೇಳಕ್ಕೆ `ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರು ಚಾಲನೆ ನೀಡಿದರು.

    ಶನಿವಾರ ಬೆಳಗ್ಗೆ 10:30 ಗಂಟೆಗೆ ಕೇಂಬ್ರಿಡ್ಜ್ ಸಂಸ್ಥೆಯ ಮುಖ್ಯಸ್ಥ ಡಿ.ಕೆ.ಮೋಹನ್ ಅವರು ವಿದ್ಯಾಮಂದಿರ ಮೇಳದ ಟೇಪ್ ಕಟ್ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಕೊಟ್ಟರು. ಈ ವೇಳೆ ಆರ್‍ಆರ್ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಹೆಚ್.ಆರ್ ಅವರು ಸಾಥ್ ನೀಡಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

    35ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಂಡಿವೆ. ಇಂದು & ನಾಳೆ (ಅ.7 ಮತ್ತು 8) ನಡೆಯಲಿರುವ ಈ ಮೇಳದಲ್ಲಿ, ಡಿಗ್ರಿ ಮುಗಿದ ನಂತರ ಮುಂದೆ ಯಾವ ಕೋರ್ಸ್ ಮಾಡಬೇಕು ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಇಲ್ಲಿ ಉತ್ತರ ದೊರೆಯಲಿದೆ. ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವೂ ಇಲ್ಲಿ ಪರಿಹಾರವಾಗಲಿದೆ. ವಿದ್ಯಾರ್ಥಿಗಳ ಹಲವಾರು ಗೊಂದಲಗಳಿಗೆ ನಿಮ್ಮ ಪಬ್ಲಿಕ್ ಟಿವಿಯ ವಿದ್ಯಾಮಂದಿರದಲ್ಲಿ ಉತ್ತರ ಸಿಗಲಿದೆ.

    Ad6 ಸಹಯೋಗದಲ್ಲಿ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಎರಡನೇ ಅವೃತ್ತಿಯ `ವಿದ್ಯಾಮಂದಿರ’ ಶೈಕ್ಷಣಿಕ ಮೇಳ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಈಗಾಗಲೇ ಆರಂಭಗೊಂಡಿರುವ ಕಾರ್ಯಕ್ರಮ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ನಾಳೆ ಸಹ ಮುಂದುವರೆಯಲಿದ್ದು, ಬೆ.9:30 ರಿಂದ ಸಂಜೆ 6ರ ವರೆಗೆ ಇರಲಿದೆ.

    ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‍ಗಳು, ದಾಖಲಾತಿ, ವಿದ್ಯಾರ್ಥಿವೇತನದ ಬಗ್ಗೆ ನಿಮಗೆ ಇಲ್ಲಿ ಸಮಗ್ರ ಮಾಹಿತಿ ಒದಗಿಸಲಿವೆ. ಸಂವಾದ ಕಾರ್ಯಕ್ರಮಗಳು ಸಹ ಇಲ್ಲಿ ಇರಲಿವೆ. ಮೇಳಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ.

    ಸ್ಪರ್ಧೆಯಲ್ಲಿ ಭಾಗವಹಿಸಿ ಲ್ಯಾಪ್‍ಟಾಪ್, ಮೊಬೈಲ್ ಗೆಲ್ಲಿ
    ಈ ಮೇಳದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಸರ್‍ಪ್ರೈಸ್ ಗಿಫ್ಟ್ ಸಹ ಸಿಗಲಿದೆ. ಇದನ್ನೂ ಓದಿ: ಪ್ರಾಣಿ ಕಡಿತಕ್ಕೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡಿ: ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    –  ಶನಿವಾರ, ಭಾನುವಾರ ನಡೆಯಲಿದೆ ಕಾರ್ಯಕ್ರಮ
    – ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಚಿತ ಪ್ರವೇಶ

    ಬೆಂಗಳೂರು: ಡಿಗ್ರಿ ಮುಗಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ (Post Graduation) ಓದುವುದು ಈಗಿನ ಹೊಸ ಟ್ರೆಂಡ್‌. ಸ್ನಾತಕೋತ್ತರ ಪದವಿಗೆ ಸೇರುವ ಸಂದರ್ಭದಲ್ಲಿ ಯಾವ ಕಾಲೇಜಿನಲ್ಲಿ (College) ಯಾವ ಕೋರ್ಸ್‌ ಇದೆ? ಶುಲ್ಕ ಎಷ್ಟಿದೆ? ಹಾಸ್ಟೆಲ್‌ ಸೌಲಭ್ಯ ಹೇಗೆ? ಇತ್ಯಾದಿ ಪ್ರಶ್ನೆಗಳು ಮಕ್ಕಳಿಗೆ ಮತ್ತು ಪೋಷಕರಿಗೆ ಬರುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ನೀವು ಪಬ್ಲಿಕ್‌ ಟಿವಿ (PUBLiC TV) ಆಯೋಜಿಸುತ್ತಿರುವ ವಿದ್ಯಾಮಂದಿರಕ್ಕೆ (VidhyaMandira) ಆಗಮಿಸಿ ಸುಲಭವಾಗಿ ಉತ್ತರವನ್ನು ಪಡೆಯಬಹುದು.

    ಪ್ರಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ Ad6 ಸಹಯೋಗದಲ್ಲಿ ಶನಿವಾರ ಮತ್ತು ಭಾನುವಾರ ಎರಡನೇ ಅವೃತ್ತಿಯ ʼವಿದ್ಯಾಮಂದಿರʼ ಶೈಕ್ಷಣಿಕ ಮೇಳ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಬೆಳಗ್ಗೆ 9:30 ರಿಂದ ಆರಂಭಗೊಂಡು ಸಂಜೆ 6 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಇರುವ ಗೊಂದಲಗಳಿಗೆ ಈ ವೇದಿಕೆ ಉತ್ತರ ನೀಡಲಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!

    ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಶೈಕ್ಷಣಿಕ ಮೇಳದಲ್ಲಿ ರಾಜ್ಯದ ನಾನಾ ಭಾಗಗಳ 36+ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಭಾಗಿಯಾಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶ ಇದೆ.

    ಲ್ಯಾಪ್‌ಟಾಪ್‌, ಮೊಬೈಲ್‌ ಬಹುಮಾನ ಗೆಲ್ಲಿ:
    ಈ ಮೇಳದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಸರ್‌ಪ್ರೈಸ್‌ ಗಿಫ್ಟ್‌ ಸಹ ಸಿಗಲಿದೆ.

    ವಿದ್ಯಾಮಂದಿರದ ಪ್ಲಾಟಿನಂ ಪ್ರಾಯೋಜಕರು
    ರೇವಾ ಯುನಿವರ್ಸಿಟಿ, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ರಾಮಯ್ಯ ಯುನಿವರ್ಸಿಟಿ, ನಾಗಾರ್ಜುನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್ ಗ್ರೂಪ್ ಆಫ್ ಪಾಯಿಂಟ್ ಇನ್‌ಸ್ಟಿಟ್ಯೂಷನ್ಸ್‌, ಸಿಎಂಆರ್‌ ಯುನಿವರ್ಸಿಟಿ, ಆರ್‌ವಿ ಯುನಿವರ್ಸಿಟಿ, ಏಮ್ಸ್ ಇನ್‌ಸ್ಟಿಟ್ಯೂಷನ್ಸ್‌, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ಯುನಿವರ್ಸಿಟಿ, SEA ಸಮೂಹ ಸಂಸ್ಥೆಗಳು,

    ಸಿಲ್ವರ್ ಪ್ರಾಯೋಜಕರು
    ರಾಮಯ್ಯ ಆಫೀಸರ್ಸ್‌ ಐಎಎಸ್‌ ಅಕಾಡೆಮಿ, ಆಕ್ಸ್‌ಫರ್ಡ್‌ ಎಜುಕೇಶನ್‌ ಇನ್‌ಸ್ಟಿಟ್ಯೂಷನ್ಸ್‌, ಪಿಇಎಸ್‌ ವಿಶ್ವವಿದ್ಯಾಲಯ, ರಾಜರಾಜೇಶ್ವರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌, ಶ್ರೀನಿವಾಸ ವಿಶ್ವವಿದ್ಯಾನಿಲಯ, ಯೂನಿವರ್ಸಿಟಿ ಹಬ್, ಹರ್ಷಾ ಇನ್‌ಸ್ಟಿಟ್ಯೂಷನ್ಸ್‌, ಸೌಂದರ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌, ಪ್ರೆಸಿಡೆನ್ಸಿ ಯೂನಿವರ್ಸಿಟಿ

    ವಿಶೇಷ ಪೆವಿಲಿಯನ್: ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್,
    ಕ್ರಿಯೇಟಿವ್‌ ಸ್ಟಾಲ್‌ : ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌,
    ಗಿಫ್ಟ್‌ ಪ್ರಾಯೋಜಕರು : ಜೀನಿ ಮಿಲ್ಲೆಟ್‌
    ಪಾನೀಯ ಪ್ರಾಯೋಜಕರು: ನಂದಿನಿ, ಬಾಯರ್ಸ್‌ ಕಾಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]