Tag: Vidhya Peeta

  • ಪಬ್ಲಿಕ್‌ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ

    ಪಬ್ಲಿಕ್‌ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ

    – ತಾರೆಯರ ಕಲರವದೊಂದಿಗೆ ಮೆಗಾ ಎಕ್ಸ್‌ಪೋಗೆ ತೆರೆ
    – ಕೊನೆಯ ದಿನವು ಸಾವಿರಾರು ಸಂಖ್ಯೆಯಲ್ಲಿ ಎಕ್ಸ್‌ಪೋಗೆ ಹರಿದು ಬಂತು ವಿದ್ಯಾರ್ಥಿ ಸಮೂಹ

    ಬೆಂಗಳೂರು: ಪಬ್ಲಿಕ್ ಟಿವಿ (PublicTV) ಪ್ರಸ್ತುತಪಡಿಸಿದ ವಿದ್ಯಾಪೀಠ 7ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋಗೆ (Vidhya Peeta Education Expo) ಯಶಸ್ವಿ ತೆರೆ ಬಿದ್ದಿದೆ. ಎರಡನೇ ದಿನ ಕೂಡ ಉತ್ತಮ ಜನ ಬೆಂಬಲ ಸಿಕ್ಕಿದ್ದು, ಎರಡನೇ ದಿನ ಸ್ಟಾರ್ ಕಲರವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ.

    ಬೆಳಗ್ಗೆ 9 ಗಂಟೆಗೆ ಆರಂಭವಾದ ಎಕ್ಸ್‌ಪೋಗೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ಬರುವಿಕೆ ಆರಂಭವಾಯಿತು. ಸಮಯ ಕಳೆದು ಬಿಸಿಲು ಏರಿಕೆಯಾದರೂ, ಜನರ ಬರುವಿಕೆ ಮಾತ್ರ ಇಳಿಕೆ ಕಾಣಲೇ ಇಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಸ್ಟಾಲ್‌ಗಳಿಗೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಗಳನ್ನ ಪಡೆದುಕೊಂಡರು. ನಿನ್ನೆ ಮೊದಲ ದಿನ 4 ಸಾವಿರ, ಎರಡನೇ ದಿನ 6 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿ ಎಕ್ಸ್‌ಪೋ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು. ಅಷ್ಟೇ ಅಲ್ಲದೆ ಎಕ್ಸ್‌ಪೋದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಆಯೋಜಿಸಿದ್ದ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿ ರಂಜಿಸಿದರು. ಇದೇ ವೇಳೆ ಎಕ್ಸ್‌ಪೋ ಆಯೋಜನೆ ಸಂಬಂಧ ಪೋಷಕರು ಮಾತನಾಡಿ ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಎಜುಕೇಶನ್ ಎಕ್ಸ್‌ಪೋದಲ್ಲಿ ಹರ್ಷಿಕಾ ಪೂಣಚ್ಚ

    ಎಕ್ಸ್‌ಪೋ ಕೊನೆಯ ದಿನದ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಪ್ರದೀಪ್ ದೊಡ್ಡಯ್ಯ ಭಾಗಿಯಾಗಿದ್ದು ವಿಶೇಷವಾಗಿತ್ತು. ಎಕ್ಸ್‌ಪೋದ ಲಕ್ಕಿ ಡಿಪ್ ವಿನ್ನರ್‌ಗಳಿಗೆ ಈ ಇಬ್ಬರು ಕಲಾವಿದರು ಗಿಫ್ಟ್ ನೀಡಿ ಶುಭ ಕೋರಿದರು. ಬಳಿಕ ನಟಿ ಹರ್ಷಿಕಾ ಪೂಣಚ್ಚ ಮಾತ‌ನಾಡಿ, ಪಬ್ಲಿಕ್ ಟಿವಿ ಅದ್ಬುತ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ನಮ್ಮ ವಿದ್ಯಾಭ್ಯಾಸದ ಸಂದರ್ಭಗಳಲ್ಲಿ ಈ ರೀತಿಯ ಅವಕಾಶಗಳು ಇರಲಿಲ್ಲ. ಈಗ ಇಂತಹ ಸದಾವಕಾಶವನ್ನ ವಿದ್ಯಾರ್ಥಿಗಳು ಬಳಸಿಕೊಂಡು, ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು.

    ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪಬ್ಲಿಕ್ ಟಿವಿ ಸಿಓಓ ಹರೀಶ್ ಕುಮಾರ್ ಅವರು ಕೂಡ ಸಂತಸ ವ್ಯಕ್ತಪಡಿಸಿದರು. ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಅದ್ಬುತವಾದಂತಹ ರೆಸ್ಪಾನ್ಸ್ ವ್ಯಕ್ತವಾಗಿದೆ‌. ಪೋಷಕರು ಮತ್ತು ವಿದ್ಯಾರ್ಥಿಗಳು ನಾನಾ ಭಾಗಗಳಿಂದ ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು. ಇದನ್ನೂ ಓದಿ: ಇಂದು ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಕೊನೆಯ ದಿನ – ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

  • ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ: ಹೆಚ್‌.ಆರ್.ರಂಗನಾಥ್‌

    ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ: ಹೆಚ್‌.ಆರ್.ರಂಗನಾಥ್‌

     – ಮಕ್ಕಳು ಭವಿಷ್ಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ

    ಬೆಂಗಳೂರು: ಎಲ್ಲರಿಗೂ ಎಐ (ಕೃತಕ ಬುದ್ಧಿಮತ್ತೆ), ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ. ಮಕ್ಕಳು ಭವಿಷ್ಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಎಂದು ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್.‌ ರಂಗನಾಥ್‌ (HR Ranganath) ಸಲಹೆ ನೀಡಿದರು.

    Ad6 ಸಹಯೋಗದಲ್ಲಿ ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ (Public TV) ಆಯೋಜಿಸಿರುವ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‌’ವಿದ್ಯಾಪೀಠ’ (Vidhaya Peeta Education Expo) 6ನೇ ಆವೃತ್ತಿ ಉದ್ಘಾಟನಾ ಸಮಾರಂಭದಲ್ಲಿ ಹೆಚ್‌.ಆರ್‌. ರಂಗನಾಥ್‌ ಅವರು ಮಾತನಾಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ಚಾಲನೆ

    ಕೃತಕ ಬುದ್ಧಿಮತ್ತೆ ಹೊರಹೊಮ್ಮುವಿಕೆ ಸಂದರ್ಭದಲ್ಲಿ ಶಿಕ್ಷಣದ ಮಾರ್ಗ ಮತ್ತು ಆಯ್ಕೆಗಳು ಮುಂದೆ ಸಾಗಿದಂತೆ ಜಟಿಲವಾಗುತ್ತಿದೆ. ಶಿಕ್ಷಣ ಕ್ಷೇತ್ರ ಮತ್ತು ಉದ್ಯೋಗ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯಿಂದ ಅನುಕೂಲ ಹಾಗೂ ಅನಾನುಕೂಲ ಎರಡೂ ಇದೆ. ಹೀಗಾಗಿ ಮಕ್ಕಳು ಭವಿಷ್ಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಎಲ್ಲರಿಗೂ ಎಐ (ಕೃತಕ ಬುದ್ಧಿಮತ್ತೆ ಕ್ಷೇತ್ರ), ಎಲ್ಲರಿಗೂ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಎನ್ನುವ ಆಲೋಚನೆ ಬೇಡ. ಸಿವಿಲ್‌, ಮೆಕ್ಯಾನಿಕಲ್‌ ಸೇರಿದಂತೆ ನಾಗರಿಕ ಸೇವಾ ಉದ್ಯೋಗಗಳು ಈ ಸಮಾಜಕ್ಕೆ ಮುಖ್ಯ. ಈ ಕ್ಷೇತ್ರಗಳಿಗೆ ಸಾವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ

    ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌ ಒಳ್ಳೆಯದು ಅಥವಾ ಕೆಟ್ಟದ್ದು ಅಂತ ನಾನು ವಿಮರ್ಶೆ ಮಾಡುತ್ತಿಲ್ಲ. ಮರ ಮತ್ತು ಬಳ್ಳಿ ಎಂಬಂತೆ ಒಂದಕ್ಕೊಂದು ಸಂಬಂಧ ಇರುತ್ತದೆ. ಮಕ್ಕಳು ಆಯ್ಕೆಗಳನ್ನು ಎಚ್ಚರಿಕೆಯಿಂದ ಮಾಡಿಕೊಳ್ಳಿ ಎಂದು ತಿಳಿಸಿದರು.

    ಈ ಬಾರಿಯ ವಿದ್ಯಾಪೀಠ ಕಳೆದ ಬಾರಿಗಿಂತ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸಂಸ್ಥೆಗಳು ಹೆಚ್ಚಾಗಿ ಭಾಗವಹಿಸಿವೆ. ಎಲ್ಲರಿಗೂ ಶುಭವಾಗಲಿ ಎಂದು ಶೈಕ್ಷಣಿಕ ಮೇಳಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

  • ಪಬ್ಲಿಕ್ ಟಿವಿ ಸಹಯೋಗದಲ್ಲಿ ವಿದ್ಯಾಪೀಠ ಎಜುಕೇಷನ್ ಫೆಸ್ಟ್ – ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

    ಪಬ್ಲಿಕ್ ಟಿವಿ ಸಹಯೋಗದಲ್ಲಿ ವಿದ್ಯಾಪೀಠ ಎಜುಕೇಷನ್ ಫೆಸ್ಟ್ – ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

    ಬೆಂಗಳೂರು: ನಿಮ್ಮ ಹೆಮ್ಮೆಯ ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ “ವಿದ್ಯಾಪೀಠ” ಎಜುಕೇಶನ್ ಫೆಸ್ಟ್‍ಗೆ ಇಂದು ಚಾಲನೆ ಸಿಕ್ಕಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಭವಿಷ್ಯದ ಕನಸು ಹೊತ್ತ ವಿದ್ಯಾರ್ಥಿಗಳು ವಿದ್ಯಾಪೀಠದಲ್ಲಿ ಬಂದು ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ನಲವತ್ತಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು, ವಿವಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಗೈಡ್ ಮಾಡಿದ್ರು.

    ಇದೇ ವೇಳೆ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‍ಆರ್ ರಂಗನಾಥ್, ನಮ್ಮ ಕಾಲದಲ್ಲಿ ಒಳ್ಳೆಯ ಮಾರ್ಗದಶನ ನೀಡಿರೋ ಇರಲಿಲ್ಲ. ಹಾಗಂತ ನಂಗೆ ಇಂದು ನಾನು ಕಲಿತ ವಿದ್ಯೆ, ಕೋರ್ಸ್ ಕೆಟ್ಟದಾಗಿದೆ ಅಂತಾ ಅರ್ಥವಲ್ಲ. ನನಗೆ ಒಳ್ಳೆಯದೇ ಆಗಿದೆ. ನಿಮಗೆ ಇವತ್ತು ಬೇಕಾದಷ್ಟು ಅವಕಾಶಗಳೂ ಇವೆ. ಮಾರ್ಗದರ್ಶಕರೂ ಇದ್ದಾರೆ. ಮೆಡಿಕಲ್, ಇಂಜಿನಿಯರಿಂಗ್ ಮಾತ್ರವಲ್ಲದೇ 100 ಕ್ಕೂ ಅಧಿಕ ಕೋರ್ಸ್‍ಗಳಿವೆ. ಕಂನ್ಸಿಲಿಂಗ್‍ಗಾಗಿ ಕಾಲೇಜಿನಿಂದ ಹಲವಾರು ಮಂದಿ ಬಂದಿದ್ದಾರೆ. ಅವರ ಜೊತೆ ಮತಾಡಿ ನಿಮ್ಮ ಗೊಂದಲಗಳನ್ನ ಬಗೆಹರಿಸಿಕೊಳ್ಳಿ ಅಂದ್ರು.

    ಇದೇ ವೇಳೆ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ್ ಮಾತನಾಡಿ, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಉತ್ತಮ ನಾಗರಿಕರಾಗಿ ದೇಶ ಕಟ್ಟೋ ಕೆಲಸದಲ್ಲಿ ಮುಂಚೂಣಿಯಲ್ಲಿರಬೇಕು ಅನ್ನೋ ಕನಸು ಎಲ್ಲಾ ತಂದೆ ತಾಯಂದಿರದ್ದಾಗಿದೆ. ಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. 21 ನೇ ಈ ಶತಮಾನದಲ್ಲಿ ವಿಶ್ವ ನಡೆಯತ್ತಿರೋದು ಪ್ರತಿಭೆಯ ಆಧಾರದ ಮೇಲೆ. ಇದರ ಜೊತೆಗೆ ಕೌಶಲ್ಯತೆ, ತಿಳುವಳಿಕೆ ಬೆಳೆಸಿಕೊಂದ್ರೆ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದ್ರು.

    ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಿರುವ ಕಾರ್ಯಕ್ರಮವೇ ನಿಮ್ಮ ಪಬ್ಲಿಕ್ ಟಿವಿಯ ಹೆಮ್ಮೆಯ ಕಾರ್ಯಕ್ರಮ ವಿದ್ಯಾಪೀಠ. ಪಬ್ಲಿಕ್ ಟಿವಿ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದೆ. ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿರೋ ಈ ಫೇಸ್ಟ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲೂ ಮಾಹಿತಿಗಳ ಭಂಡಾರವನ್ನೇ ನಿಮ್ಮ ಮುಂದೆ ಹೊತ್ತು ತರಲಿದೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಇಂದು ಮತ್ತು ನಾಳೆ ಈ ಮೆಗಾ ಎಜುಕೇಶನ್ ಈವೆಂಟ್ ನಡೆಯಲಿದೆ. ಉನ್ನತ ವ್ಯಾಸಂಗದ ಆಸೆ ಹೊತ್ತ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಭವಿಷ್ಯದ ಹಾದಿಯನ್ನು ತೋರಿಸುವ ಕಾರ್ಯಕ್ರಮ ಇದಾಗಿದೆ.

    ಕಾರ್ಯಕ್ರಮದ ಪಟ್ಟಿ ಇಂತಿದೆ:
    * 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗಿ.
    * 20ಕ್ಕೂ ಹೆಚ್ಚು ಕೋರ್ಸ್‍ಗಳ ಬಗ್ಗೆ ಮಾಹಿತಿ.
    * 10 ಮಂದಿ ನುರಿತ ಶಿಕ್ಷಣ ತಜ್ಞರಿಂದ ವಿಚಾರ ಸಂಕಿರಣ.
    * ಸಿಇಟಿ, ಕಾಮೆಡ್ ಕೆ, ನೀಟ್ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ.
    * ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೂ ಮಾರ್ಗದರ್ಶನ.

    ಕಾರ್ಯಕ್ರಮ ನಡೆಯುವ ವಿಳಾಸ: ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಕ್ರೀಡಾಂಗಣ, ಮಲ್ಲೇಶ್ವರಂ 6ನೇ ಕ್ರಾಸ್, ಕೆಸಿ ಜನರಲ್ ಆಸ್ಪತ್ರೆ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆ ಎದುರು, ಮಲ್ಲೇಶ್ವರಂ,ಬೆಂಗಳೂರು.

    ವೀದ್ಯಾಪೀಠ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮವನ್ನ ಸದುಪಯೋಗಪಡಿಸಿಕೊಳ್ಳಲ್ಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ. ವಿದ್ಯಾಪೀಠಕ್ಕೆ ಬರೋ ವಿದ್ಯಾರ್ಥಿಗಳಿಗೆ ಅಕ್ಷಯ ತೃತೀಯದಂದು ಬಂಪರ್ ಬಹುಮಾನದ ಅವಕಾಶವಿದೆ. ವಿದ್ಯಾಪೀಠದಲ್ಲಿ ಭಾಗವಹಿಸೋ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಇರಲಿದೆ. ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗೋ ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ಸಿಗಲಿದೆ. ಕಾರ್ಯಕ್ರಮಕ್ಕೆ ಆಗಮದ ವೇಳೆ ರಿಜಿಸ್ಟ್ರೇಷನ್ ಬಳಿ ವಿದ್ಯಾರ್ಥಿಗಳು ತಮ್ಮ ಹೆಸರು, ಫೋನ್ ನಂಬರ್ ನಮೂದಿಸಬೇಕು. ಪ್ರತಿ ಗಂಟೆಗೊಮ್ಮೆ ಲಕ್ಕಿಡಿಪ್ ತೆಗದಯಲಿದ್ದು ಆಯ್ಕೆಯಾದವರಿಗೆ ಬಂಪರ್ ಬಹುಮಾನ ಸಿಗಲಿದೆ. ಬನ್ನಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ. ಮಾಹಿತಿ ಜೊತೆ ಬಹುಮಾನ ಗೆಲ್ಲಿ.