Tag: Vidhaya Peeta Education Expo

  • ಪಬ್ಲಿಕ್‌ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ

    ಪಬ್ಲಿಕ್‌ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ

    – ತಾರೆಯರ ಕಲರವದೊಂದಿಗೆ ಮೆಗಾ ಎಕ್ಸ್‌ಪೋಗೆ ತೆರೆ
    – ಕೊನೆಯ ದಿನವು ಸಾವಿರಾರು ಸಂಖ್ಯೆಯಲ್ಲಿ ಎಕ್ಸ್‌ಪೋಗೆ ಹರಿದು ಬಂತು ವಿದ್ಯಾರ್ಥಿ ಸಮೂಹ

    ಬೆಂಗಳೂರು: ಪಬ್ಲಿಕ್ ಟಿವಿ (PublicTV) ಪ್ರಸ್ತುತಪಡಿಸಿದ ವಿದ್ಯಾಪೀಠ 7ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋಗೆ (Vidhya Peeta Education Expo) ಯಶಸ್ವಿ ತೆರೆ ಬಿದ್ದಿದೆ. ಎರಡನೇ ದಿನ ಕೂಡ ಉತ್ತಮ ಜನ ಬೆಂಬಲ ಸಿಕ್ಕಿದ್ದು, ಎರಡನೇ ದಿನ ಸ್ಟಾರ್ ಕಲರವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ.

    ಬೆಳಗ್ಗೆ 9 ಗಂಟೆಗೆ ಆರಂಭವಾದ ಎಕ್ಸ್‌ಪೋಗೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ಬರುವಿಕೆ ಆರಂಭವಾಯಿತು. ಸಮಯ ಕಳೆದು ಬಿಸಿಲು ಏರಿಕೆಯಾದರೂ, ಜನರ ಬರುವಿಕೆ ಮಾತ್ರ ಇಳಿಕೆ ಕಾಣಲೇ ಇಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಸ್ಟಾಲ್‌ಗಳಿಗೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಗಳನ್ನ ಪಡೆದುಕೊಂಡರು. ನಿನ್ನೆ ಮೊದಲ ದಿನ 4 ಸಾವಿರ, ಎರಡನೇ ದಿನ 6 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿ ಎಕ್ಸ್‌ಪೋ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು. ಅಷ್ಟೇ ಅಲ್ಲದೆ ಎಕ್ಸ್‌ಪೋದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಆಯೋಜಿಸಿದ್ದ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿ ರಂಜಿಸಿದರು. ಇದೇ ವೇಳೆ ಎಕ್ಸ್‌ಪೋ ಆಯೋಜನೆ ಸಂಬಂಧ ಪೋಷಕರು ಮಾತನಾಡಿ ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಎಜುಕೇಶನ್ ಎಕ್ಸ್‌ಪೋದಲ್ಲಿ ಹರ್ಷಿಕಾ ಪೂಣಚ್ಚ

    ಎಕ್ಸ್‌ಪೋ ಕೊನೆಯ ದಿನದ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಪ್ರದೀಪ್ ದೊಡ್ಡಯ್ಯ ಭಾಗಿಯಾಗಿದ್ದು ವಿಶೇಷವಾಗಿತ್ತು. ಎಕ್ಸ್‌ಪೋದ ಲಕ್ಕಿ ಡಿಪ್ ವಿನ್ನರ್‌ಗಳಿಗೆ ಈ ಇಬ್ಬರು ಕಲಾವಿದರು ಗಿಫ್ಟ್ ನೀಡಿ ಶುಭ ಕೋರಿದರು. ಬಳಿಕ ನಟಿ ಹರ್ಷಿಕಾ ಪೂಣಚ್ಚ ಮಾತ‌ನಾಡಿ, ಪಬ್ಲಿಕ್ ಟಿವಿ ಅದ್ಬುತ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ನಮ್ಮ ವಿದ್ಯಾಭ್ಯಾಸದ ಸಂದರ್ಭಗಳಲ್ಲಿ ಈ ರೀತಿಯ ಅವಕಾಶಗಳು ಇರಲಿಲ್ಲ. ಈಗ ಇಂತಹ ಸದಾವಕಾಶವನ್ನ ವಿದ್ಯಾರ್ಥಿಗಳು ಬಳಸಿಕೊಂಡು, ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು.

    ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪಬ್ಲಿಕ್ ಟಿವಿ ಸಿಓಓ ಹರೀಶ್ ಕುಮಾರ್ ಅವರು ಕೂಡ ಸಂತಸ ವ್ಯಕ್ತಪಡಿಸಿದರು. ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಅದ್ಬುತವಾದಂತಹ ರೆಸ್ಪಾನ್ಸ್ ವ್ಯಕ್ತವಾಗಿದೆ‌. ಪೋಷಕರು ಮತ್ತು ವಿದ್ಯಾರ್ಥಿಗಳು ನಾನಾ ಭಾಗಗಳಿಂದ ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು. ಇದನ್ನೂ ಓದಿ: ಇಂದು ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಕೊನೆಯ ದಿನ – ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

  • Public TV Expo: ಕಂಪ್ಯೂಟರ್‌ ಬಂದ್ಮೇಲೆ ಉದ್ಯೋಗ ಸೃಷ್ಟಿ ಜಾಸ್ತಿಯಾಗಿದೆ – ಡಿ.ಕೆ ಮೋಹನ್‌

    Public TV Expo: ಕಂಪ್ಯೂಟರ್‌ ಬಂದ್ಮೇಲೆ ಉದ್ಯೋಗ ಸೃಷ್ಟಿ ಜಾಸ್ತಿಯಾಗಿದೆ – ಡಿ.ಕೆ ಮೋಹನ್‌

    – ದೇಶ ಬೆಳೆಯಬೇಕಾದ್ರೆ ವಿದ್ಯೆ, ವೈದ್ಯ, ವ್ಯವಸಾಯ ಮುಖ್ಯ
    – ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ.ಶ್ಯಾಮರಾಜು ಕಿವಿಮಾತು

    ಬೆಂಗಳೂರು: ಕಂಪ್ಯೂಟರ್‌ ಬಂದಾಗ ಎಲ್ಲರೂ ನಿರುದ್ಯೋಗ (Unemployment) ಸಮಸ್ಯೆ ಹೆಚ್ಚಾಗುತ್ತೆ. ಮನುಷ್ಯ ಮಾಡುವ ಕೆಲಸವನ್ನು ಕಂಪ್ಯೂಟರ್‌ಗಳೇ ಮಾಡಿಬಿಡುತ್ತವೆ ಅಂತಾ ಜನ ಆತಂಕಪಟ್ಟಿದರು. ಆದ್ರೆ ಕಂಪ್ಯೂಟರ್‌ ಬಂದಮೇಲೆಯೇ ಉದ್ಯೋಗಸೃಷ್ಟಿ ಜಾಸ್ತಿಯಾಗಿದೆ ಎಂದು ಕೇಬ್ರಿಂಡ್ಜ್‌ ಗ್ರೂಪ್‌ ಅಧ್ಯಕ್ಷ ಡಿ.ಕೆ ಮೋಹನ್‌ (DK Mohan) ತಿಳಿಸಿದರು.

    Ad6 ಸಹಯೋಗದಲ್ಲಿ ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ (Public TV) ಆಯೋಜಿಸಿರುವ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‌’ವಿದ್ಯಾಪೀಠ’ (Vidhaya Peeta Education Expo) 6ನೇ ಆವೃತ್ತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ಯಾವುದೇ ವಿದ್ಯಾರ್ಥಿ ವೈಯಕ್ತಿಕವಾಗಿ 105 ವಿದ್ಯಾಸಂಸ್ಥೆಗಳಿಗೆ ಹೋಗಿ ಹೊಸ ಹೊಸ ಕೋರ್ಸ್‌ಗಳಿವೆ ಅಂತಾ ನೋಡೋದಕ್ಕೆ ಸಾಧ್ಯವಾಗಲ್ಲ. ಆದ್ರೆ ಇಲ್ಲಿ ಒಂದೇ ಸೂರಿನಡಿ ನೋಡುವಂತೆ ಮಾಡಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆದು ನಿಮ್ಮಿಷ್ಟದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕೋರ್ಸ್‌ ಇಷ್ಟವಾಗುತ್ತೆ. ಪೋಷಕರು ಸಹ ತಮ್ಮ ಮಕ್ಕಳ ಆಸಕ್ತಿ, ಶಕ್ತಿ ನೋಡಿ, ಆಲೋಚಿಸಿ ಅವರಿಗೆ ಇಷ್ಟವಾಗುವ ಕೋರ್ಸ್‌ಗಳನ್ನ ಕೊಡಿಸಬೇಕು. ಆಗ ಮಾತ್ರ ವಿದ್ಯಾರ್ಥಿ ಸಂತೋಷದಿಂದ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

    ನಾವು ಓದುತ್ತಿದ್ದಾಗ ಇಂತಹ ಅವಕಾಶಗಳು, ಕೋರ್ಸ್‌ ಆಯ್ಕೆಗಳು ಇರಲಿಲ್ಲ. ಈಗ ನಿಮ್ಮ ಪ್ರತಿಭೆ ತೋರಿಸಲು ಎಲ್ಲ ಅವಕಾಶಗಳು ಇವೆ. ಯಾವ ಕೋರ್ಸ್‌ಗಳು ಮೇಲು ಕೀಳೆಂಬುದಿಲ್ಲ. ಎಲ್ಲವೂ ಸಮಾನ. ಕಂಪ್ಯೂಟರ್‌ ಬಂದ್ಮೇಲೆ ನಿರುದ್ಯೋಗ ಸಮಸ್ಯೆ ಉಂಟಾಗುತ್ತೆ ಅಂತಾ ಹೇಳ್ತಿದ್ರು. ಆದ್ರೆ ಉದ್ಯೋಗ ಸೃಷ್ಟಿ ಜಾಸ್ತಿಯಾಗ್ತಿದೆ. ವಿಶ್ವದಾದ್ಯಂತ ತಾಂತ್ರಿಕತೆ ಬೆಳೆಯುತ್ತಿದ್ದು, ಅವಕಾಶಗಳೂ ಸೃಷ್ಟಿಯಾಗುತ್ತಿವೆ. ನೀವು ಬಯಸಿದ ವೃತ್ತಿ ಬೇಕು ಅಂದ್ರೆ ಕೌಶಲ ರೂಢಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತೆ ಎಂದು ತಿಳಿವಳಿಕೆ ನೀಡಿದರು.

    ನಂತರ ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ.ಶ್ಯಾಮರಾಜು (P Shyama Raju) ಮಾತನಾಡಿ, ಯಾವುದೇ ದೇಶ ಬೆಳೆಯಬೇಕಾದ್ರೆ ವಿದ್ಯೆ, ವೈದ್ಯ, ವ್ಯವಸಾಯ ತುಂಬಾ ಮುಖ್ಯ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿದ್ರೆ ವಿಶ್ವಮಟ್ಟದಲ್ಲಿ ಒಪ್ಪುತ್ತದೆ ಎಂದರು.

    105 ವಿದ್ಯಾಸಂಸ್ಥೆಗಳು ಒಂದೇ ಸೂರಿನಡಿ ಭಾಗವಹಿಸಿವೆ ಅಂದ್ರೆ ಅದು ರಂಗನಾಥ್‌ ಅವರಿಂದ ಮಾತ್ರ ಸಾಧ್ಯ. ಇಂತಹ ವೇದಿಕೆ ನಿಮಗೆ ಎಲ್ಲೂ ಸಿಗಲ್ಲ, ಎಲ್ಲರೂ ಉಪಯೋಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.