Tag: vidhansoudha

  • ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

    ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

    ಬೆಂಗಳೂರು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆ.ಗೋವಿಂದರಾಜ್‌ (K Govindraj ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದರಿಂದ ಸಿದ್ದರಾಮಯ್ಯನವರು (CM Siddaramaiah) ಕಾಲ್ತುಳಿತ ಪ್ರಕರಣದಲ್ಲಿ ಹೊಣೆಗಾರರು ಎಂದು ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಹೇಳಿದ್ದಾರೆ.

    ವಿಧಾನಸೌಧದಲ್ಲಿ (Vidhana Soudha) ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಅವಕಾಶ ನೀಡಿದರೆ ಬಂದೋಬಸ್ತ್‌ಗೆ ಸಮಸ್ಯೆಯಾಗುತ್ತದೆ ಎಂದು ವಿಧಾನಸೌಧದ ಡಿಸಿಪಿ ಕರಿಬಸವನಗೌಡ ಅವರು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ(DPAR) ಕಾರ್ಯದರ್ಶಿ ಸತ್ಯವತಿ ಅವರಿಗೆ ಬರೆದ ಪತ್ರ ಬಹಿರಂಗವಾದ ಬೆನ್ನಲ್ಲೇ ಸುನಿಲ್‌ ಕುಮಾರ್‌ ಅವರು ಎಕ್ಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ನಿಮ್ಮ ಸಯಾಮಿಯಂತೆ ಸದಾ ಅಂಟಿಕೊಂಡೇ ಇರುತ್ತಿದ್ದ ಕೆ.ಗೋವಿಂದರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಿದ್ದೇಕೆ?

    ಗೋವಿಂದರಾಜ್ ಕೊಟ್ಟ ಸಲಹೆ ಆಧರಿಸಿ ಈ ಕಾರ್ಯಕ್ರಮ ನಡೆದಿದೆ ಎಂದಾದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂಬ ಭಯಕ್ಕಾ? ನಿಮ್ಮ ಪಕ್ಕದಲ್ಲೇ ಕುಳಿತು ಈ ನರಹತ್ಯೆಯ ಚಿತ್ರಕತೆ ಬರೆದರೆಂಬ ಕಾರಣಕ್ಕಾ?  ಇದನ್ನೂ ಓದಿ: ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

    ಸಾಲು ಸಾಲು ಹೆಣಗಳು ಬಿದ್ದ ಮೇಲೂ ಮಸಾಲೆ ದೋಸೆ ಮೆಲ್ಲುವುದಕ್ಕೆ ಕರೆದೊಯ್ದರು ಎಂಬ ಕಾರಣಕ್ಕೋ? ಅಥವಾ ಇದೆಲ್ಲವನ್ನು ಮೀರಿದ ಉನ್ನತ ಸಲಹೆಗಾಗಿಯೋ?

    ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಸನ್ಮಾನ ಕಾರ್ಯಕ್ರಮ ಬೇಡ, ವಿಜಯೋತ್ಸವವೂ ಬೇಡ ಎಂದು ಡಿಪಿಎಆರ್ ಕಾರ್ಯದರ್ಶಿಗೆ ಪೊಲೀಸರು ಪತ್ರ ಬರೆದಿದ್ದರು. ಆದರೂ ಈ ದುರಂತಕ್ಕೆ ಅವರನ್ನು ಹೊಣೆಗಾರರಾಗಿಸಿ ಅಮಾನತು ಮಾಡುವಾಗ ಕಾರಣಗಳ ಸರಮಾಲೆಯನ್ನೇ ಕೊಟ್ಟಿರಿ. ಆದರೆ ಗೋವಿಂದರಾಜ್ ವಿಚಾರದಲ್ಲಿ ಮಾತ್ರ ಏಕೆ ಮಗುಮ್ಮಾದ ಆದೇಶ ಹೊರಡಿಸಿದಿರಿ?

     

    ಅಷ್ಟಕ್ಕೂ ಗೋವಿಂದರಾಜ್ ಎಸಗಿದ ತಪ್ಪೇನು ಎಂಬುದು ಜನರ ಮುಂದೆ ಅನಾವರಣವಾಗಬೇಕಲ್ಲವೇ ? ಅದನ್ನು ಸಾಧ್ಯಂತವಾಗಿ ವಿವರಿಸುವುದು ನಿಮ್ಮ ಕರ್ತವ್ಯವಲ್ಲವೇ ?

    ಗೋವಿಂದ ರಾಜ್ ಗೇಟ್ ಪಾಸ್‌ಗೆ ಸಕಾರಣ ನೀಡಿದರೆ ಈ ಸಾವಿನ ಮೆರವಣಿಗೆಯ ಸತ್ಯ ಹೊರ ಬೀಳುತ್ತದೆ ಎಂದು ನೀವು ಗಾಢ ಮೌನಕ್ಕೆ ಜಾರಿದ್ದೀರಾ? ವಿಪಕ್ಷ, ಮಾಧ್ಯಮದ ಪ್ರಶ್ನೆಗೆ ಎಲ್ಲಿ ಸಾಕ್ಷಿ ಕೊಡು ಎಂದು ಮುಗಿ ಬೀಳುತ್ತಿದ್ದ ನೀವು ಈಗ ಇಡಿ ರಾಜ್ಯವೇ ಕಾರಣ ಕೇಳುತ್ತಿದ್ದರೂ ಬಾಯಿ ಬಿಗಿದು ಕುಳಿತಿದ್ದೇಕೆ ?

    11 ಜನರ ಸಾವಿನ ಸಂಚು ಬಯಲಾಗುತ್ತದೆ ಎಂಬ ಭಯವೇ ? ಎಷ್ಟೇ ಬಚ್ಚಿಟ್ಟರೂ ಕಾಡುವ ಆತ್ಮಸಾಕ್ಷಿಗೆ ವಂಚನೆ ಮಾಡಲು ಸಾಧ್ಯವೇ? ಈ ಹಿಂದೆ ನಿಮ್ಮ ಅಧೀನದಲ್ಲೇ ಬರುವ ಹಣಕಾಸು ಇಲಾಖೆಯ ಮೂಲಕ ಆದ ವಾಲ್ಮೀಕಿ ನಿಗಮದ ಅವ್ಯವಹಾರ ಸಂಬಂಧ ಯಾರನ್ನೋ ಬಲಿಪಶು ಮಾಡಿದಿರಿ. ಈಗ ನಿಮ್ಮದೇ ಅಧೀನದಲ್ಲಿ ಬರುವ ಡಿಪಿಎಆರ್ ಇಲಾಖೆ ಮೂಲಕ ಆದ ತಪ್ಪಿಗೆ ಇನ್ಯಾರನ್ನೋ ಬಲಿಪಶು ಮಾಡುತ್ತೀರಾ?

  • ಪಲಾವ್ ತಿಂದು ಏರ್ ಕಂಡೀಷನ್ ಹಾಕಿ ಧರಣಿ ಮಾಡೋದಲ್ಲ: ವಿಶ್ವನಾಥ್

    ಪಲಾವ್ ತಿಂದು ಏರ್ ಕಂಡೀಷನ್ ಹಾಕಿ ಧರಣಿ ಮಾಡೋದಲ್ಲ: ವಿಶ್ವನಾಥ್

    ಬೆಂಗಳೂರು: ಪಲಾವ್ ತಿಂದು ಬಂದು ಏರ್ ಕಂಡೀಷನ್ ನಡುವೆ ಧರಣಿ ಮಾಡುವುದಲ್ಲ. ಬದಲಿಗೆ ಮಹಾತ್ಮ ಗಾಂಧಿ ತರ ಬೀದಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರಣಿ, ಚರ್ಚೆಗೆ ಅವಕಾಶ ಇದೆ. ಸಿದ್ದರಾಮಯ್ಯ ಅವರು ನಾಡಿನ ಸಿಎಂ ಆಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರೂ ವಿವೇಕಕ್ಕೆ ಬೆಲೆ ಕೊಡಬೇಕು. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿಸಿದ್ದಾರೆ. ಇದು ಉತ್ತಮ ಬೀಡು ಆಗಿದೆ. ಇದಕ್ಕೆ ಬೆಲೆಕೊಡಿ ಎಂದು ಮನವಿ ಮಾಡಿದರು.

    ಜೆ.ಪಿ ನಡ್ಡಾ, ಈಶ್ವರಪ್ಪ ಅವರಿಗೆ ತರಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿ ಹಾರಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದು ಕಾಂಗ್ರೆಸ್‍ನವರು, ಈಶ್ವರಪ್ಪ ಅವರಲ್ಲ. ಇವರು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ – ಸರ್ಕಾರಕ್ಕೆ ಸೂಲಿಬೆಲೆ ಪ್ರಶ್ನೆ

    ಸಂಸತ್ ಅಧಿವೇಶನ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್‍ನವರು ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ವಿಧಾನ ಸೌಧದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಹತ್ತು ದಿನ ನಡೆಯಬೇಕಿದ್ದ ಕಲಾಪ ಇದುವರೆಗೆ ನಡೆದಿದ್ದು ಕೇವಲ ಎರಡು ದಿನ ನಡೆದಿದೆ. 5 ದಿನ ಕಾಂಗ್ರೆಸ್ ಧರಣಿ ಮಾಡಿದೆ. ಇದರಿಂದಾಗಿ ಉಳಿದ ದಿನಗಳಲ್ಲಿ ನಡೆಯಬೇಕಿದ್ದ ಕಲಾಪ ಮುಂದೂಡಲೇಬೇಕಾದ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ. ಇದನ್ನೂ ಓದಿ: ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್‍ಡಿಪಿಐ

  • ಇಂದಿನಿಂದ 3 ದಿನ ವಿಧಾನಸಭೆ ಅಧಿವೇಶನ

    ಇಂದಿನಿಂದ 3 ದಿನ ವಿಧಾನಸಭೆ ಅಧಿವೇಶನ

    ಬೆಂಗಳೂರು: ಬಿಜೆಪಿ ಸರ್ಕಾರದ ಎರಡನೇಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಮಾಡುವ ಮೂಲಕ ಆರಂಭದಲ್ಲೇ ಬಿಜೆಪಿ ಸರ್ಕಾರ ವಿವಾದಕ್ಕೆ ಗುರಿಯಾಗಿದೆ. ಕೇವಲ ಮೂರು ದಿನ ನಡೆಯುವ ಅಧಿವೇಶನದಲ್ಲಿ ಬೊಕ್ಕಸ ಖಾಲಿ, ನೆರೆ ಪರಿಹಾರ ಕಾರ್ಯಗಳ ಕುರಿತು ಆಡಳಿತ ಮತ್ತು ವಿಪಕ್ಷಗಳ ನಡುವೆ ಚರ್ಚೆ ತಾರಕಕ್ಕೇರುವ ಸಾಧ್ಯತೆಗಳಿವೆ. ಜೊತೆಗೆ ರೈತರ ಭಾರೀ ಪ್ರತಿಭಟನೆಯೂ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದೆ.
    .
    ನೆರೆ ಹಿನ್ನೆಲೆಯಲ್ಲಿ ಬೆಳಗಾವಿ ಬದಲು ಬೆಂಗಳೂರಿನಲ್ಲೇ ಅಧಿವೇಶನ ನಡೆಯುತ್ತಿದೆ. ಮೂರು ದಿನಗಳ ಅಧಿವೇಶನದಲ್ಲಿ ಹಲವು ವಿಷಯಗಳು ಬಿಸಿ ಬಿಸಿ ಚರ್ಚೆ, ಆರೋಪ-ಪ್ರತಿ ಆರೋಪಗಳಿಗೆ ವೇದಿಕೆ ಒದಗಿಸಲಿವೆ. ಇದೇ ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಮಾಡೋ ವಿವಾದಾತ್ಮಕ ನಿರ್ಧಾರವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಇಂದಿನಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಮಾಧ್ಯಮಗಳ ನೇರ ಪ್ರಸಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಬಿಜೆಪಿ ಸರ್ಕಾರದ ಈ ಅನಗತ್ಯ ನಿರ್ಧಾರ ಪ್ರತಿಪಕ್ಷಗಳು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

    ಈ ಚಳಿಗಾಲದ ಅಧಿವೇಶನದಲ್ಲಿ ಬೊಕ್ಕಸ ಖಾಲಿ, ನೆರೆ ಪರಿಹಾರ ಕಾರ್ಯ, ಕೇಂದ್ರದ ಅಲ್ಪ ಪರಿಹಾರ ವಿಚಾರಗಳೇ ಹೈಲೈಟ್. ಬೊಕ್ಕಸ ಖಾಲಿ, ನೆರೆ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸನ್ನದ್ಧವಾಗಿವೆ. ಪ್ರತಿಪಕ್ಷಗಳ ಠಕ್ಕರ್ ಗೆ ಪ್ರತಿಯಾಗಿ ಠಕ್ಕರ್ ಕೊಡಲು ಬಿಜೆಪಿಯೂ ತಕ್ಕ ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಅಂಕಿ-ಅಂಶಗಳ ಮೂಲಕ ಉತ್ತರ ಕೊಡಲು ಬಿಜೆಪಿ ಮುಂದಾಗಿದೆ.

    ಕಾಂಗ್ರೆಸ್ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ನೇಮಕರಾಗಿದ್ದಾರೆ. ಇದು ಸದನದಲ್ಲಿ ಕಾಂಗ್ರೆಸ್ ಗೆ ಇನ್ನಷ್ಟು ಬಲ ತುಂಬಲಿದ್ದು, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ವಾಕ್ಸಮರ ಸಾಕಷ್ಟು ಕುತೂಹಲ ಹುಟ್ಟಿಸಲಿದೆ. ಇನ್ನುಳಿದಂತೆ ಮೊದಲ ದಿನವೇ ಲೇಖಾನುದಾನಕ್ಕೆ ಸರ್ಕಾರ ಸದನದಲ್ಲಿ ಅನುಮೋದನೆ ಪಡೆದುಕೊಳ್ಳಲಿದೆ. ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಮೈತ್ರಿ ಅವಧಿಯ ಬಜೆಟ್ ಅನ್ನೇ ಉಳಿದ ಅವಧಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ನೆರೆಪೀಡಿತ ಜಿಲ್ಲೆಗಳಿಗೆ ಕೆಲವೊಂದು ಹೊಸ ಪರಿಹಾರ ಕಾರ್ಯಕ್ರಮಗಳನ್ನೂ ಸೇರಿಸಿ ಲೇಖಾನುದಾನಕ್ಕೆ ಒಪ್ಪಿಗೆ ತೆಗೆದುಕೊಳ್ಳಲಾಗುತ್ತದೆ.

  • ಟೈಮ್ ಪಾಸ್ ಮಾಡೋರನ್ನು ತೆಗೆದು ಹಾಕಿ ಅಂದಿದ್ದ ಸಿಎಂ ಕಚೇರಿಯಲ್ಲೇ ಇದ್ದಾರೆ 500 ಸಿಬ್ಬಂದಿ!

    ಟೈಮ್ ಪಾಸ್ ಮಾಡೋರನ್ನು ತೆಗೆದು ಹಾಕಿ ಅಂದಿದ್ದ ಸಿಎಂ ಕಚೇರಿಯಲ್ಲೇ ಇದ್ದಾರೆ 500 ಸಿಬ್ಬಂದಿ!

    – ತಿಂಗಳಿಗೆ ಸಂಬಳ ನೀಡಲು 1 ಕೋಟಿ ಬೇಕಂತೆ

    ಬೆಂಗಳೂರು: ಟೈಮ್ ಪಾಸ್ ಮಾಡೋ ಹಲವು ನೌಕರರು ವಿದಾನಸೌಧದಲ್ಲಿ ಇದ್ದಾರೆ. ಅವರನ್ನು ತೆಗೆದು ಹಾಕಿ ಕಷ್ಟದಲ್ಲಿದ್ದವರಿಗೆ ಕೆಲಸ ನೀಡಿ ಅಂತ ಅಧಿಕಾರಿಗಳಿಗೆ ತಾಕೀತು ಮಾಡಿದ್ದ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಕಚೇರಿಯಲ್ಲಿಯೇ ಇದೀಗ ಅವರ ಕಚೇರಿಯಲ್ಲೇ 500ಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇಷ್ಟು ಮಾತ್ರವಲ್ಲದೇ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಅಂತಾನೂ ಹೇಳಿದ್ದರು. ಆದ್ರೆ ಇದೀಗ ಈ ನೌಕರರ ಸಂಬಳಕ್ಕಾಗಿ ತಿಂಗಳಿಗೆ 1 ಕೋಟಿ ಬೇಕಂತೆ. ಸಿಎಂ ದುಂದು ವೆಚ್ಚಕ್ಕೆ ಕಡಿವಾಣ ಹಾಕೋ ಬದಲು ತಮ್ಮ ಕಚೇರಿಯಲ್ಲಿ ದುಂದು ವೆಚ್ಚ ಮಾಡುತ್ತಿರೋದು ವಿಪರ್ಯಾಸವಾಗಿದೆ. ಒಟ್ಟಿನಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ನೌಕರರ ಹೊಂದಿರೋ ಖ್ಯಾತಿಗೆ ಸಿಎಂ ಕುಮಾರಸ್ವಾಮಿ ಸಾಹೇಬ್ರು ಭಾಗಿಯಾಗಿದ್ದಾರೆ.

    ಸಿಎಂ ಕಚೇರಿಯಲ್ಲಿದ್ದಾರೆ 500 ಸಿಬ್ಬಂದಿ..!
    * ಅಪರ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ 6 ಜನ ಗುತ್ತಿಗೆ ಸಿಬ್ಬಂದಿ
    * ಜಂಟಿ ಕಾರ್ಯದರ್ಶಿ ಕಚೇರಿಯಲ್ಲಿ 22 ಜನ ಸಿಬ್ಬಂದಿ
    * ಆಡಳಿತ ಶಾಖೆಯಲ್ಲಿ 14 ಜನ ಗುತ್ತಿಗೆ ನೌಕರರು
    * ರವಾನೆ ಶಾಖೆಯಲ್ಲಿ 13 ಜನ ಗುತ್ತಿಗೆ ನೌಕರರು
    * ಮಾಧ್ಯಮ ಕಾರ್ಯದರ್ಶಿ ಕಚೇರಿಯಲ್ಲಿ 11 ಜನ ಗುತ್ತಿಗೆ ನೌಕರರು
    * ವಿಶೇಷ ಕರ್ತವ್ಯ ಅಧಿಕಾರಿ ಕಚೇರಿಯಲ್ಲಿ 10 ಜನ ಗುತ್ತಿಗೆ ನೌಕರರು
    * ಸಹಾಯಕರಾಗಿ 90ಕ್ಕೂ ಹೆಚ್ಚು ಜನ ಗುತ್ತಿಗೆ ಕೆಲಸಗಾರರು ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರಿನಲ್ಲಿ ಇಂದಿನಿಂದ ಸಿನಿಮೋತ್ಸವ – 240ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ

    ಬೆಂಗಳೂರು: ನಗರದಲ್ಲಿ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ಸಿಗಲಿದೆ. ಸಂಜೆ ಆರು ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟನೆಗೊಳ್ಳುವ ಈ ಕಾರ್ಯಕ್ರಮದಲ್ಲಿ ದೇಶವಿದೇಶಗಳ ಹಲವಾರು ಗಣ್ಯರು ಸಾಕ್ಷಿಯಾಗಲಿದ್ದಾರೆ.

    ಫೆಬ್ರವರಿ 3 ರಿಂದ ಫೆಬ್ರವರಿ 8ರ ವರೆಗೆ ಬೆಂಗಳೂರಿನ ಹಲವೆಡೆ ವಿವಿಧ ಸ್ಕ್ರೀನ್‍ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಬಂಗಾಲಿ ನಿರ್ದೇಶಕ ಬುದ್ಧದೇವ ದಾಸ್‍ಗುಪ್ತಾ, ಈಜಿಪ್ಟ್ ನ ಖ್ಯಾತ ನಿರ್ದೇಶಕಿ ಹಲಾ ಖಲೀಲ್, ನಟ ಪುನೀತ್ ರಾಜ್‍ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

    ಕನ್ನಡದ ನಟ ರಮೇಶ್ ಅರವಿಂದ್ ಹಾಗೂ ಬಹುಭಾಷಾ ನಟಿ ಸುಹಾಸಿನಿ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಈ ಬಾರಿ 60 ದೇಶಗಳ ಒಟ್ಟೂ 240 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಕನ್ನಡದ 40 ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಿವೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 9ರಂದು ಸಂಜೆ ಮೈಸೂರು ಅರಮನೆ ಮುಂದೆ ಜರುಗಲಿದೆ.