Tag: Vidhanasoudha

  • ವಿಧಾನಸೌಧದಲ್ಲಿರೋ ಜಯಲಲಿತಾ ಸೀರೆ, ಚಪ್ಪಲಿ, ಚಿನ್ನಾಭರಣ ಹರಾಜಿಗೆ ಅಧಿಕಾರಿ ನೇಮಕ!

    ವಿಧಾನಸೌಧದಲ್ಲಿರೋ ಜಯಲಲಿತಾ ಸೀರೆ, ಚಪ್ಪಲಿ, ಚಿನ್ನಾಭರಣ ಹರಾಜಿಗೆ ಅಧಿಕಾರಿ ನೇಮಕ!

    ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ (Jayalalitha) ಗೆ ಸೇರಿದ್ದ ಲಕ್ಷ ಲಕ್ಷ ಬೆಲೆಬಾಳುವ ರೇಷ್ಮೆ ಸೀರೆ, ಜಯಲಲಿತಾ ಧರಿಸಿದ್ದ ಬಂಗಾರ ಡೈಮಂಡ್, ರಾಶಿ ರಾಶಿ ಚಪ್ಪಲಿಯನ್ನು ಶೀಘ್ರದಲ್ಲಿಯೇ ಹರಾಜಿಗೆ ಕೂಗುವ ಸಾಧ್ಯತೆ ಇದೆ.

    ತಮಿಳುನಾಡು ಮಾಜಿ ಸಿಎಂ. ಜಯಲಲಿತಾ ಅಕ್ರಮ ಆಸ್ತಿ (Property) ಗಳಿಕೆ ಅಂತಾ ದಾಳಿ ವೇಳೆ ವಶಪಡಿಸಿಕೊಂಡ ಆಸ್ತಿ ಸುಮಾರು 26 ವರ್ಷದಿಂದ ವಿಧಾನಸೌಧ (Vidhanasoudha) ದಲ್ಲಿಯೇ ಕೊಳೆಯುತ್ತಿದೆ. 11 ಸಾವಿರಕ್ಕೂ ಅಧಿಕ ರೇಷ್ಮೆ ಸೀರೆ, ಕೋಟಿಗಟ್ಟಲೇ ಮೌಲ್ಯದ ಅಭರಣ, 400ಕ್ಕೂ ಹೆಚ್ಚು ಚಪ್ಪಲಿಗಳು, 20 ಸೆಟ್ ಸೋಫಾ ವೆರೈಟಿ ವಾಚ್ ಬಂಗಾರದ ಡಾಬು ಸೇರಿದಂತೆ ಅನೇಕ ವಸ್ತುಗಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಜಯಲಲಿತಾ ಮೃತಪಟ್ಟ ಮೇಲೆ ವಾರಸುದಾರರು ಇಲ್ಲದ ಕಾರಣ ಈ ವಸ್ತುಗಳ ಹರಾಜು ಪ್ರಕ್ರಿಯೆ ಶುರುಮಾಡಬೇಕಾಗಿತ್ತು. ಆದರೆ ವಿಳಂಬವಾಗಿದ್ದು ಕೊನೆಗೂ ಕೋರ್ಟ್ ಚಾಟಿಯ ಬಳಿಕ ಈಗ ವಸ್ತುಗಳ ಹರಾಜಿಗೆ ರಾಜ್ಯಸರ್ಕಾರ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ರಣಬಿಸಿಲಿನ ಮಧ್ಯೆ ತಂಪೆರೆದ ವರುಣ- ಬೇಸಿಗೆ ಮಳೆಗೆ ಅಪಾರ ಬೆಳೆಗಳು ನಾಶ

    ಜಯಲಲಿತಾ ಆಸ್ತಿ ಹರಾಜಿನ ವಿಚಾರದಲ್ಲಿ ಕಾನೂನು ಹೋರಾಟ ನಡೆಸಿದ್ದ ನರಸಿಂಹಮೂರ್ತಿ ಸರ್ಕಾರದ ಆದೇಶದ ಬಗ್ಗೆ ಖುಷಿಪಟ್ಟು ಅದೆಷ್ಟೋ ಮೌಲ್ಯದ ಆಸ್ತಿ ಹಾಳಾಗಿದ್ಯೋ ಗೊತ್ತಿಲ್ಲ. ಆದರೆ ಇಷ್ಟು ವರ್ಷಗಳ ನಂತ್ರವಾದ್ರೂ ಬುದ್ಧಿ ಕಲಿತಿದ್ಯಯಲ್ಲ ಸರ್ಕಾರ ಅಂತಾ ಖುಷಿಪಟ್ರು. ಜಯಲಲಿತಾ ವಸ್ತುಗಳ ಲಿಸ್ಟ್ ಕೇಳಿದ್ರೇ ಎಂತವರಿಗೂ ತಲೆತಿರುಗೋದು ಪಕ್ಕ. ಅಂತದ್ರಲ್ಲಿ 26 ವರ್ಷಗಳಿಂದ ಈ ವಸ್ತುಗಳೆಲ್ಲ ಹಾಗೆ ಕೊಳೆಯುತ್ತಿದ್ದಾವೆ ಅನ್ನೋದು ಇನ್ನೂ ದುರಂತ.

  • ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ

    ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ

    – ಡಿಕೆಶಿ, ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು

    ಬೆಂಗಳೂರು: ಬಿಜೆಪಿ(BJP) ಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ. ನಾನು ಯಾವತ್ತಾದ್ರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ ಎಂದು ಸಚಿವ ವಿ. ಸೋಮಣ್ಣ (V Somanna) ಪ್ರಶ್ನಿಸಿದರು.

    ವಿಧಾನಸೌಧ (Vidhanasoudha) ದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಇವೆಲ್ಲ ಇರುತ್ತೆ. ಏನು ಹೇಳಬೇಕು, ಎಲ್ಲಿ ಹೇಳಬೇಕೋ ಹೇಳಿದ್ದೀನಿ. ಕವಲುದಾರಿಗಳು ಇರುತ್ತವೆ. ನಾನೇನು ಸನ್ಯಾಸಿ ಅಲ್ಲ. ಡಿಕೆಶಿ (DK Shivakumar), ಸಿದ್ದರಾಮಯ್ಯ (Siddaramaiah) ನಾವೆಲ್ಲ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರ ಕೆಲಸ ಅವರು ಮಾಡ್ತಾರೆ, ನನ್ನ ಕೆಲಸ ನಾನು ಮಾಡ್ತೀನಿ. ನನಗೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ ಎಂದರು.

    ನನ್ನ ಬೆಂಗಳೂರಿಗೆ ಮಾತ್ರ ಏಕೆ ಸೀಮಿತ ಮಾಡ್ತೀರಾ ಎಂದು ಇದೇ ವೇಳೆ ಪ್ರಶ್ನಿಸಿದ ಸೋಮಣ್ಣ, ನನಗೆ ಕೊಟ್ಟ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ಉಪಚುನಾವಣೆಗಳ ಜವಾಬ್ದಾರಿ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನು ಮೊದಲು ಕಾಂಗ್ರೆಸ್‍ನಲ್ಲೇ ಇದ್ದೆ, ಜನತಾಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಹೀಗೆಲ್ಲ ಆಗ್ತಿರುತ್ತವೆ. ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ..!? ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನ್ ಹೇಳಬೇಕು ಹೇಳಿದ್ದೀನಿ ಎಂದು ಗರಂ ಆದರು. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಮಾತನಾಡಲು ಮೋದಿಯವರಿಗೆ ಸಬ್ಜೆಕ್ಟ್ ಇಲ್ಲ: ಹೆಚ್‍ಡಿಕೆ

    ಅಭಿಮಾನಿಗಳು ಸಭೆ ಮಾಡಿದ್ರೆ ನಾನು ಮಾಡಬೇಡಿ ಅಂತ ಹೇಳೋಕೆ ಆಗುತ್ತಾ..? ರಾಜಕಾರಣ ಅಂದ್ರೆ ಬೆಂಗಳೂರಿಗೆ ಅಷ್ಟೆ ಸೀಮಿತ ಆಗಬೇಕಾ..? ಚುನಾವಣೆ ಬಂದಾಗ ನನ್ನ ಇಡೀ ರಾಜ್ಯಕ್ಕೆ ಕರೆಸ್ತಾರೆ. ಎಲ್ಲಾ ಕ್ಷೇತ್ರ ಗೆಲ್ಲಿಸಿಕೊಂಡೇ ಬಂದಿದ್ದೀನಿ. ಪಕ್ಷ ಏನು ಹೇಳುತ್ತೋ ನಾನು ಅದನ್ನು ಮಾಡ್ತೀನಿ. ರಾಜಕಾರಣ ಇದು ಖುಷಿ ಇದ್ಯೋ ಇಲ್ವೋ ಗೊತ್ತಿಲ್ಲ. ಅರ್ಹತೆ ಇರುವವರಿಗೆ ಕೆಲವು ಸಲ ಕವಲು ದಾರಿ ಆಗ್ತಾವೆ. 56 ವರ್ಷ ನಾನು ಬೆಂಗಳೂರಿಗೆ ಬಂದು. ಅನೇಕ ತೊಡಕುಗಳನ್ನೂ ನೋಡಿದ್ದೇವೆ. ಕೆಲಸ ಮಾಡೋವ್ರನ್ನ ಜನ ಗೌರವಿಸ್ತಾರೆ ಅಂದರೆ ಅದಕ್ಕೆ ಉದಾಹರಣೆ ಅಂದರೆ ಸೋಮಣ್ಣ ಎಂದರು.

    ಬೇರೆ ರಾಜಕಾರಣಿ ಮಕ್ಕಳು ರಾಜಕಾರಣದಲ್ಲಿ ಇರಬಹುದು. ಎಲ್ಲರಿಗೂ ಮಕ್ಕಳು, ಪ್ರೀತಿ ಅನ್ನೋದು ಇರುತ್ತೆ. ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕಲ್ವ. ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ. ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ, ನಾನು ಯಾರನ್ನ ಕೇಳಿಲ್ಲ. ನನಗೆ ಅಸಮಾಧಾನ ಇದೆ ಅಂತ ಎಲ್ಲಾದ್ರೂ ಹೇಳಿದ್ದೀನಾ..?. ರಾಜಕಾರಣಿಗಳಿಗೆ ಬದ್ಧತೆ ಇರಬೇಕು. ಕಾಂಗ್ರೆಸ್ ಗೆ ಬರ್ತಾರೆ ಅಂತ ಅವರ ಭಾವನೆಗಳಿವೆ. ಅದಕ್ಕೆ ನಾನು ಬೇಡ ಅನ್ನಲಾ..?. ಅವರಿಗೆಲ್ಲಾ ಒಳ್ಳೆಯದಾಗಲಿ ಎಂದು ಹೇಳಿದರು.

  • ಬಡವರ ಪರವಾಗಿ ನನ್ನ ಹೃದಯ ಮಿಡಿಯುತ್ತದೆ: ಬಸವರಾಜ ಬೊಮ್ಮಾಯಿ

    ಬಡವರ ಪರವಾಗಿ ನನ್ನ ಹೃದಯ ಮಿಡಿಯುತ್ತದೆ: ಬಸವರಾಜ ಬೊಮ್ಮಾಯಿ

    ಮೈಸೂರು: ಬಡವರ ಪರವಾಗಿ ನನ್ನ ಹೃದಯ ಮಿಡಿಯುತ್ತದೆ. ನನಗೆ ಬಡವರ ಕಷ್ಟ ಗೊತ್ತಿದೆ. ಬಡವರ ಕಲ್ಯಾಣಕ್ಕಾಗಿ ನಾನು ದುಡಿಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ಮೈಸೂರಿನಲ್ಲಿ ಸರ್ಕಾರದ ಫಲಾನುಭಾವಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ವಿಧಾನಸೌಧ (Vidhanasoudha) ದಲ್ಲಿ ಇಲ್ಲ. ನಮ್ಮ ಸರ್ಕಾರ ನಿಮ್ಮ ಮನೆಗಳಲ್ಲಿ ಇದೆ. ನಿಮ್ಮ ಬಳಿಗೆ ಬಂದು ಸರ್ಕಾರ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಬಡವರ ಪರ ಮಿಡಿಯುವ ಹೃದಯದ ನಾಯಕ. ಬಡವರ ಪರವಾಗಿ ಯಡಿಯೂರಪ್ಪ ಅವರು ಹತ್ತು ಹಲವು ಯೋಜನೆ ಜಾರಿಗೆ ತಂದರು. ನಾವು ಮಾಡಿರುವ ಒಳ್ಳೆಯ ಕೆಲಸಕ್ಕೆ ಜನರ ಬೆಂಬಲ ಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದರು. ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಕೊಂಡ ಮಾಜಿ ಸಚಿವ ಎ.ಮಂಜು

    ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರದಲ್ಲಿ ವಿಪಕ್ಷಗಳು ಬದ್ಧತೆ ತೋರಲಿಲ್ಲ. ಪ. ಜಾತಿ – ಪ. ಪಂಗಡವನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡರು. ಭಾಷಣದಿಂದ ದೀನ ದಲಿತರಿಗೆ ನ್ಯಾಯ ಸಿಗಲ್ಲ. ದೀನ ದಲಿತರು ಬೆಳೆಯಲಿಲ್ಲ. ಪರಿಶಿಷ್ಟ ಜಾತಿ, ಪಂಗಡವನ್ನು ಬರೀ ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಪಕ್ಷಗಳು ನೆನಪಿಸಿಕೊಳ್ಳುತ್ತಾರೆ. ನಾನು ಪ.ಜಾತಿ ಪ.ಪಂಗಡದ ಮೀಸಲಾತಿ ಹೆಚ್ಚಿಸಿದರೆ ಅದು ಆಗಲ್ಲ ಅಂತಾ ವಿಪಕ್ಷದವರು ಕೊಂಕು ಮಾತಾಡುತ್ತಾರೆ ಎಂದರು.

    ಎಲ್ಲಿ ನೋವಿದೆಯೋ ಅಲ್ಲಿಗೆ ಸರ್ಕಾರ ಧಾವಿಸಿದೆ. ಸರ್ಕಾರ (Governemnt) ನಿಮ್ಮ ಪರವಿದೆ. ನೀವು ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿದರೆ ಎಲ್ಲಾ ಕಾರ್ಯಕ್ರಮ ಮುಂದುವರಿಯುತ್ತವೆ. ಕೆಲವರು ಚುನಾವಣೆಗೆ ಮುಂಚೆ ಬೇಕಾಬಿಟ್ಟಿ ಭರವಸೆ ಕೊಡುತ್ತಾರೆ. ಚುನಾವಣೆಗಾಗಿ ಇವರು ಆಶ್ವಾಸನೆ ಕೊಡುತ್ತಿದ್ದಾರೆ. ಉಚಿತ ಅಕ್ಕಿ, ಉಚಿತ ವಿದ್ಯುತ್ ಹೀಗಾಗಲೆ ಹಲವು ಯೋಜನೆಗಳ ಮೂಲಕ ತಲುಪುತ್ತಿದೆ. ಮಾತಿನಲ್ಲಿ ಗ್ಯಾರಂಟಿ ಇಲ್ಲ. ಹೀಗಾಗಿ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಜನರನ್ನು ಯಾಮಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮಲ್ಲಿ ನೈತಿಕತೆ ಇದೆ. ಬಡವರ ಪರ ಕೆಲಸ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಬಡವರ ಬದುಕಿಗೆ ಹೊಸ ಮನ್ವಂತರ ತಂದಿದ್ದೇವೆ ಎಂದು ಹೇಳಿದರು.

  • ವಿಧಾನಸೌಧದ ಒಳಗೆ ಎಣ್ಣೆ ಬಾಟ್ಲಿ ತಂದ ಪೊಲೀಸ್ ಪೇದೆ- ಕೈ ಜಾರಿ ಬಿದ್ದು ಪೀಸ್, ಪೀಸ್

    ವಿಧಾನಸೌಧದ ಒಳಗೆ ಎಣ್ಣೆ ಬಾಟ್ಲಿ ತಂದ ಪೊಲೀಸ್ ಪೇದೆ- ಕೈ ಜಾರಿ ಬಿದ್ದು ಪೀಸ್, ಪೀಸ್

    ಬೆಂಗಳೂರು: ಪೊಲೀಸ್ ಪೇದೆಯೊಬ್ಬ ವಿಧಾನಸೌಧ (Vidhanasoudha) ದೊಳಗೆ ಎಣ್ಣೆ ಬಾಟ್ಲಿ ತಂದು ಫಜೀತಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.

    ಹೌದು. ಕೆಂಗಲ್ ಗೇಟ್ (Kengal Gate) ಬಳಿ ಪೊಲೀಸಪ್ಪನ ಎಣ್ಣೆ ಬಾಟ್ಲಿ ಪುರಾಣ ನಡೆದಿದೆ. ವಿಧಾನಸೌಧ ಒಳಗಡೆಯಿಂದ ಹೊರೆಗೆ ಹೋಗುತ್ತಿದ್ದ ಮಫ್ತಿಯಲ್ಲಿದ್ದ ಪೊಲೀಸ್ ಪೇದೆ, ಬ್ಯಾಗ್ ನಲ್ಲಿ ಮದ್ಯದ ಬಾಟ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ಹೊರಗೆ ಹೋಗುವಾಗ ಬಾಟ್ಲಿ ಕೈ ಜಾರಿ ಬಿದ್ದಿದೆ. ಪರಿಣಾಮ ಪೀಸ್ ಪೀಸ್ ಆಗಿದೆ. ಆತುರವಾಗಿ ಚೂರಾದ ಬಾಟ್ಲಿ ಪೀಸ್ ಎತ್ತಿಕೊಂಡು ಪೇದೆ ಅಲ್ಲಿಂದ ಹೋಗಿದ್ದಾರೆ.

    ಇತ್ತ ವಿಚಾರ ತಿಳಿಯುತ್ತಿದ್ದಂತೆಯೇ ಮಾಧ್ಯಮದವರು ಸ್ಥಳಕ್ಕೆ ತೆರಳಿದ್ದು, ಕ್ಯಾಮೆರಾ ಕಂಡ ಕೂಡಲೇ ಪೊಲೀಸ್ ಪೇದೆ ವಿಧಾನಸೌಧದಿಂದ ಪರಾರಿಯಾಗಿದ್ದಾರೆ. ಸದ್ಯ ವಿಧಾನಸೌಧ ಭದ್ರತೆ ಪೊಲೀಸರು, ಬಾಟ್ಲಿ ತಂದ ಪೊಲೀಸ್ ಪೇದೆ ಯಾರು ಅಂತ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಬೇಕು- ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

    ಹಾಗಾದ್ರೆ ವಿಧಾನಸೌಧಕ್ಕೆ ಮದ್ಯದ ಬಾಟ್ಲಿ ಬಂದಿದ್ದು ಹೇಗೆ?, ಭದ್ರತೆ ತಪ್ಪಿಸಿ ಮದ್ಯದ ಬಾಟ್ಲಿ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ?, ವಿಧಾನಸೌಧದ ಒಳಗಿಂದ ಮದ್ಯದ ಬಾಟ್ಲಿ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದರು..?, ಪೊಲೀಸರೇ ಹೀಗೆ ಮಾಡಿದ್ರೆ ವಿಧಾನಸೌಧಕ್ಕೆ ರಕ್ಷಣೆ ಹೇಗೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

  • ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತೆ: ಸಿದ್ದರಾಮಯ್ಯ

    ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತೆ: ಸಿದ್ದರಾಮಯ್ಯ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮೂಗಿನ ನೇರಕ್ಕೆ ಲಂಚ ನಡೆಯುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.

    ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಜಗದೀಶ್ ಬುಧವಾರ ವಿಧಾನಸೌಧದಲ್ಲಿ (Vidhanasoudha) ಅನಧಿಕೃತವಾಗಿ 10.50 ಲಕ್ಷ ರೂ. ಹಣವನ್ನು (Money) ಸಾಗಾಟ ಮಾಡುತ್ತಿದ್ದ ವಿಚಾರವಾಗಿ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ, ಅದರ ಅರ್ಥ ವಿಧಾನಸೌಧದಲ್ಲೇ ಲಂಚ ನಡೆಯುತ್ತದೆ. ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

    ಆತ ವಿಧಾನಸೌಧಕ್ಕೆ ಯಾರಿಗೆ ಹಣ ಕೊಡಲು ಬಂದಿದ್ದ? ಪಿಡಬ್ಲ್ಯುಡಿ ಸಚಿವ ಸಿಸಿ ಪಾಟೀಲ್‌ಗೆ ಹಣ ಕೊಡಲು ಬಂದಿರಬೇಕು, ಇಲ್ಲವೇ ಮುಖ್ಯಮಂತ್ರಿಗಳಿಗೆ ಕೊಡೋದಕ್ಕೆ ಬಂದಿರಬೇಕು ಅಲ್ವಾ? ಎಂದು ಟಾಂಗ್ ನೀಡಿದರು.

    ಬುಧವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಜಗದೀಶ್ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು. ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವರ ಬ್ಯಾಗ್‌ನಲ್ಲಿ 10.50 ಲಕ್ಷ ರೂ. ಪತ್ತೆಯಾಗಿತ್ತು. ಅವರ ಬಳಿ ಇಷ್ಟೊಂದು ದೊಡ್ಡ ಮೊತ್ತದ ಹಣದ ಕುರಿತಾಗಿ ಮಾಹಿತಿ ಕೇಳಿದಾಗ ಅವರು ಸರಿಯಾಗಿ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆ ಪೊಲೀಸರು ಜಗದೀಶ್‌ನನ್ನು ಹಾಗೂ ಹಣವನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ: ಸುಮಲತಾ

    ಅವರು ಯಾವ ವಿಚಾರಕ್ಕೆ ಹಣ ತಂದಿದ್ದರು? ಯಾರಿಗೆ ಹಣ ಸಾಗಿಸಲಾಗುತ್ತಿತ್ತು? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಜಗದೀಶ್ ಚೆಕ್ ಬೌನ್ಸ್ ಪ್ರಕರಕ್ಕೆ ಹಣ ಹಿಂತಿರುಗಿಸಲು ತಂದಿದ್ದಾಗಿ ಹೇಳಿಕೆ ನೀಡಿದ್ದಾರೆ.

    ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ಸಮೇತ 12 ಲಕ್ಷ ರೂ. ಕಟ್ಟಲು ಹೇಳಿತ್ತು. ತನ್ನ ಸಂಬಂಧಿಕರ ಬಳಿಯಿಂದ 10.50 ಲಕ್ಷ ಹಣವನ್ನು ತಂದಿದ್ದೆ. ವಿಧಾನಸೌಧದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕರೆದಿದ್ದರು. ಹೀಗಾಗಿ ತನ್ನ ಊರು ಮಂಡ್ಯಕ್ಕೆ ಹೋಗುವುದಕ್ಕೂ ಮುನ್ನ ವಿಧಾನಸೌಧಕ್ಕೆ ಬಂದಿದ್ದಾಗಿ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ನಡೆಯದೇ ಹೋಯ್ತಾ ವರುಣಾ ರಾಜಕೀಯ ಮಹಾಯುದ್ಧ – ವಿಜಯೇಂದ್ರ ವರುಣಾ ಪಥ ಬದಲು!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಸಿಲ್ಲದೆ ಏನೂ ನಡೆಯಲ್ಲ ಅನ್ನೋದು ವಿಧಾನಸೌಧದ ಪ್ರತಿ ಗೋಡೆಗೂ ಗೊತ್ತು: ಡಿಕೆಶಿ

    ಕಾಸಿಲ್ಲದೆ ಏನೂ ನಡೆಯಲ್ಲ ಅನ್ನೋದು ವಿಧಾನಸೌಧದ ಪ್ರತಿ ಗೋಡೆಗೂ ಗೊತ್ತು: ಡಿಕೆಶಿ

    ಬೆಂಗಳೂರು: ಕಾಸಿಲ್ಲದೆ ಯಾವುದೂ ನಡೆಯಲ್ಲ ಎಂಬುದು ವಿಧಾನಸೌಧದ ಪ್ರತಿಯೊಂದು ಗೋಡೆಗೂ ಗೊತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿಧಾನಸೌಧ (VidhanaSoudha) ದಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಫೈಲ್ ಮೂವ್ ಗೆ ಕಮಿಷನ್ ನೀಡಬೇಕು. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ದಯಾಮರಣ ಕೇಳಿದ್ದಾರೆ. ವಿರೋಧ ಪಕ್ಷಕ್ಕೆ ಎಲ್ಲ ಮಾಹಿತಿ ಬಂದಿದೆ. ನಾವು ಅದನ್ನ ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ ಎಂದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ ಪ್ರಕರಣ – ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿ 26 ಆರೋಪಿಗಳಿಗೆ ಜಾಮೀನು

    ಸತ್ಯ ಹೊರಗೆ ಬರಬೇಕು. ತನಿಖೆಯಾಗಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ. ರಾಜ್ಯಕ್ಕೆ ಭ್ರಷ್ಟಾಚಾರ ಕಳಂಕ ಬಂದಿದೆ. ಇನ್ನೂ 60 ದಿನ ಮಾತ್ರ ಈ ಸರ್ಕಾರ ಇರುತ್ತೆ. ಆಮೇಲೆ ಕಾಂಗ್ರೆಸ್ ಸರ್ಕಾರ (Congress Government) ಬರುತ್ತೆ. ದಾಖಲೆ ಕೊಡಿ ಅಂತಾರೆ ಇದು ದಾಖಲೆ ಅಲ್ವಾ..? ಯಡಿಯೂರಪ್ಪ ಆಪ್ತರ ಮನೆಯಲ್ಲಿ ಹಣ ಸಿಗಲಿಲ್ವಾ..? ದುಡ್ಡು ಜೇಬಿನಿಂದ ತೆಗೆದು ಕೊಡೊದಕ್ಕೆ ಸಾಕ್ಷಿ ಕೊಡೋಕೆ ಆಗುತ್ತಾ..? ಇನ್ನೇನೂ ಸಚಿವರ ರಾಜೀನಾಮೆ ಕೇಳುವುದು. ಕೆಲವೇ ಕೆಲವು ದಿನ ಅಷ್ಟೆ ಸರ್ಕಾರಕ್ಕೆ ಇದೆ ಎಂದು ಹೇಳಿದರು.

    40%-50% ಕಮಿಷನ್ ತಗೋತ್ತಿದ್ದಾರೆ. ಅನೇಕ ಘಟನೆಗಳು ಮಾಹಿತಿ ನಮಗೆ ಬರುತ್ತಿದೆ. ಜನರ ಧ್ವನಿ ಪ್ರಜೆಗಳ ಧ್ವನಿಯಾಗಿ ನಾವು ತೆಗೆದುಕೊಂಡು ಹೋಗ್ತೀವಿ. ಮಂತ್ರಿಗಳ ಮನೆಯಿಂದ ಫೋನ್ ಬಂತು ಅಂತ ಹಣ ಇದ್ದವನನ್ನು ಬಿಟ್ಟು ಕಳಿಸಿದ್ದಾರೆ. 40% ಕಮಿಷನ್ ಗೆ ಇದೇ ದುಡ್ಡು ದಾಖಲೆ ಅಲ್ವೇನ್ರಿ..?. ಜನ ಯಾವ ರೀತಿ ಸಾಯ್ತಿದ್ದಾರೆ ಎನ್ನೋದಕ್ಕೆ ಮಹದೇವಪುರ ಘಟನೆ ಸಾಕ್ಷಿ ಎಂದು ತಿಳಿಸಿದರು.

    ಸರ್ಕಾರ ಎಲ್ಲಿದೆ? ಇನ್ನು 60 ದಿನ ಮಾತ್ರ ಸರ್ಕಾರ ಇರುತ್ತೆ. ಮ್ಯಾನಿಫೆಸ್ಟೋ ಬಜೆಟ್ ಮಾಡಿ ಹೋಗ್ತಾರೆ ಅಷ್ಟೇ ಎಂದು ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತ- ಜ. 9ಕ್ಕೆ ಅಧಿಕೃತ ಘೋಷಣೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೆಪ್ಟೆಂಬರ್ 13 ರಿಂದ 10 ದಿನ ವಿಧಾನಮಂಡಲದ ಅಧಿವೇಶನ

    ಸೆಪ್ಟೆಂಬರ್ 13 ರಿಂದ 10 ದಿನ ವಿಧಾನಮಂಡಲದ ಅಧಿವೇಶನ

    ಬೆಂಗಳೂರು: ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 24ರವರೆಗೆ ವಿಧಾನಮಂಡಲದ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

    ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಂಪುಟ ಪುನಾರಚನೆ ಆಗಿದೆ. ಹೀಗಾಗಿ ಸಂಪುಟ ಉಪಸಮಿತಿಗಳ ಪುನರ್ ರಚನೆಗೆ ನಿರ್ಧರಿಸಲಾಗಿದೆ. ಮಾನಸಿಕ ಆರೋಗ್ಯ ಆರೈಕೆ ನಿಯಮ-2023ಕ್ಕೆ ಅನುಮೋದನೆ ನೀಡಲಾಗಿದೆ. 2020-21 ನೇ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ- ಕಾಲೇಜುಗಳ ಹದಿಹರೆಯದ ಹೆಣ್ಣುಮಕ್ಕಳಿಗೆ “ಶುಚಿ” ಕಾರ್ಯಕ್ರಮದಡಿ ಒಂದು ಮಗುವಿಗೆ ಹತ್ತು ಪ್ಯಾಡ್ ಗಳ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಸಂಪುಟ ಸಭೆಯ ನಿರ್ಧಾರಗಳು:
    * ರಾಜ್ಯದಲ್ಲಿನ 2,859 ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಉನ್ನತೀಕರಣಕ್ಕಾಗಿ 478.91 ಕೋಟಿ ರೂ ಮೊತ್ತ ಅನುದಾನ
    * ಕಲಬುರಗಿ ಜಿಲ್ಲೆ, ಆಳಂದ ತಾಲೂಕು ಮಿನಿ ವಿಧಾನಸೌಧ ಕಟ್ಟಡಕ್ಕೆ ಕಾಮಗಾರಿಯ ರೂ. 12.48 ಕೋಟಿ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
    * ಮಂಗಳೂರು ಮಹಾನಗರ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ರೂ. 73.73 ಕೋಟಿಗಳ ವಿಸ್ತ್ರತ ಯೋಜನಾ ವರದಿಗೆ ಅನುಮೋದನೆ
    * ಆಝಾದಿ ಅಮೃತ ಮಹೋತ್ಸವ ಹಿನ್ನೆಲೆ ಸಿಎಂ ಘೋಷಣೆ ಮಾಡಿದ ಕಾರ್ಯಕ್ರಮಗಳಿಗೆ ಅನುಮೋದನೆ. ಅಮೃತ ನಗರಿ ಕಾರ್ಯಕ್ರಮಕ್ಕೆ 75 ಕೋಟಿಗೆ ಅನುಮೋದನೆ ಇದನ್ನೂ ಓದಿ: ನಾಡಬಂದೂಕಿಗೆ ಸೈಕಲ್ ಬಾಲ್ಸ್ ಬಳಸಿ ಗುಂಡಿನ ದಾಳಿ- ವ್ಯಕ್ತಿ ಪ್ರಾಣಾಪಾಯದಿಂದ ಪಾರು

  • ಮಿನಿಸ್ಟರ್ ಎಂದರೆ ದೇವಲೋಕದಿಂದ ಇಳಿದು ಬಂದವರಾ : ಸುಧಾಕರ್ ವಿರುದ್ಧ ರೇಣುಕಾಚಾರ್ಯ ಕಿಡಿ

    ಮಿನಿಸ್ಟರ್ ಎಂದರೆ ದೇವಲೋಕದಿಂದ ಇಳಿದು ಬಂದವರಾ : ಸುಧಾಕರ್ ವಿರುದ್ಧ ರೇಣುಕಾಚಾರ್ಯ ಕಿಡಿ

    ಬೆಂಗಳೂರು: ಮಿನಿಸ್ಟರ್ ಎಂದರೆ ದೇವಲೋಕದಿಂದ ಇಳಿದು ಬಂದವರಾ? ಸಿಕ್ಕ ಅವಕಾಶವನ್ನು ಸದುಪಯೊಗಪಡಿಸಿಕೊಳ್ಳಿ. ದುರಹಂಕಾರ ಒಳ್ಳೆಯದಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಚಿವ ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಿನಿಸ್ಟರ್ ಎಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಇವರಿಂದಲೇ ಸರ್ಕಾರ ಬಂದಿದೆ ಎಂಬ ಭ್ರಮೆ ಬೇಡ. ಸಿಕ್ಕ ಅವಕಾಶವನ್ನು ಸದುಪಯೊಗಪಡಿಸಿಕೊಳ್ಳಿ. ದುರಹಂಕಾರ ಒಳ್ಳೆಯದಲ್ಲ. ನಡವಳಿಕೆ ಸರಿಪಡಿಸಿಕೊಳ್ಳಿ. ನಾವೇನು ಬಿಟ್ಟಿ ಬಂದಿದ್ದೀವಾ? ಜನ ಆರಿಸಿ ಕಳಿಸಿರುವ ನಮಗೆ ಅವಮಾನ ಮಾಡಬೇಡಿ. ಆಡಳಿತ ಪಕ್ಷದ ಶಾಸಕರಿಗೆ ಇವರು ಅವಮಾನ ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ವಿಧಾನಸೌಧದ ಆವರಣದಲ್ಲಿ ಧರಣಿ ಮಾಡುತ್ತೇವೆ ಎಂದು ರೇಣುಕಾಚಾರ್ಯರವರು ನೇರವಾಗಿ ಸಚಿವ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.

    ಸಚಿವ ಸುಧಾಕರ್ ನನ್ನ ಕೈಗೆ ಸಿಗುತ್ತಿಲ್ಲ. ಫೋನ್ ಮಾಡಿದರೆ ಅವರ ಪಿಎ ಹಾಗೂ ಪಿ.ಎಸ್‍ಗಳು ಕರೆ ಸ್ವೀಕರಿಸುವುದಿಲ್ಲ. ಕಾಂಗ್ರೆಸ್ ಜೆಡಿಎಸ್‍ನಿಂದ ಬಂದ ಎಲ್ಲ ಸಚಿವರು ಹೀಗೆ ಎಂದು ನಾನು ಹೇಳುತ್ತಿಲ್ಲ. ಕೆಲ ಸಚಿವರು ಕೈಗೆ ಸಿಗುತ್ತಿಲ್ಲ ಎಂದು ದೂರಿದರು.

    ನಾನು ಹೊನ್ನಾಳಿ ಕ್ಷೇತ್ರದ ಅಭಿವೃದ್ದಿಗಾಗಿ ಹತ್ತಾರು ಭಾರಿ ಭೇಟಿಯಾಗಿದ್ದೇನೆ. ಪತ್ರ ಬರೆದಿದ್ದೇನೆ, ಆದರೂ ಏನೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜೀ ಆಗುವ ಮಾತೇ ಇಲ್ಲ. ನಾನು ಧರಣಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿನ್ನೆ ಅವರ ಪಿಎಸ್ ಫೋನ್ ಮಾಡಿ ಕೆಲವು ಕೆಲಸ ಆಗಿದೆ ಎಂದು ಹೇಳಿದ್ದಾರೆ. ಆದರೂ ನಾನು ಕೆಲಸ ಆಗಿದ ಮಾತ್ರಕ್ಕೆ ಸುಮ್ಮನಿರುವುದಿಲ್ಲ. ಪಾಪ ಅನೇಕ ನಮ್ಮ ಶಾಸಕರು ಬಾಯಿ ಇಲ್ಲದ ಶಾಸಕರಿದ್ದಾರೆ. ಅವರ ಕೆಲಸಗಳೂ ಆಗಬೇಕು, ಐದಾರು ಸಚಿವರು ಕೈಗೆ ಸಿಗುತ್ತಿಲ್ಲ. ನಾನು ಮೂರು ಬಾರಿ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಆಯ್ಕೆ ಆಗಿದ್ದೇನೆ. ನಾವೇನು ಬಿಟ್ಟಿ ಬಿದ್ದಿದ್ದೀವಾ ಎಂದು ಕಿಡಿಕಾರಿದರು.

  • 20ಕ್ಕೂ ಅಧಿಕ ಶಾಸಕರಿಗೆ ಕೋವಿಡ್ ಸೋಂಕು-ಕೊರೊನಾ ನಡುವೆ ಅಧಿವೇಶನ ಆರಂಭ

    20ಕ್ಕೂ ಅಧಿಕ ಶಾಸಕರಿಗೆ ಕೋವಿಡ್ ಸೋಂಕು-ಕೊರೊನಾ ನಡುವೆ ಅಧಿವೇಶನ ಆರಂಭ

    ಬೆಂಗಳೂರು: ಕೊರೊನಾ ಆತಂಕದ ನಡುವೆ ಈ ಬಾರಿ ಅಧಿವೇಶನ ನಡೆದಿದೆ. ಅಧಿವೇಶನಕ್ಕೂ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗೋದನ್ನ ಕಡ್ಡಾಯ ಮಾಡಲಾಗಿತ್ತು. ಕೋವಿಡ್ ಪರೀಕ್ಷೆಗೆ ಒಳಗಾದ ಜನಪ್ರತಿನಿಧಿಗಳಲ್ಲಿ 20ಕ್ಕೂ ಅಧಿಕ ಶಾಸಕರಿಗೆ ಸೋಂಕು ತಗುಲಿರೋದು ಖಚಿತವಾಗಿದೆ. ಈ ಹಿನ್ನೆಲೆ ವಿಧಾನಸೌಧ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದ್ದು, ಅಧಿವೇಶನ ಆರಂಭಗೊಂಡಿದೆ.

    ಅಧಿವೇಶನಕ್ಕೆ ಕೇವಲ ಆರವತ್ತು ಶಾಸಕರು ಹಾಜರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿಜೆಪಿಯ 9, ಕಾಂಗ್ರೆಸ್‍ನ 9 ಮತ್ತು ಜೆಡಿಎಸ್ ಮೂವರು ಶಾಸಕರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ.

    ಕೊರೊನಾ ಸೋಂಕಿತ ಶಾಸಕರು:
    1. ಬಿಜೆಪಿ: ಡಿಸಿಎಂ ಅಶ್ವಥನಾರಾಯಣ್, ಸಚಿವರಾದ ಬಸವರಾಜ್ ಬೊಮ್ಮಾಯಿ, ಗೋಪಾಲಯ್ಯ, ಬೈರತಿ ಬಸವರಾಜ್, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಎಂ.ಪಿ.ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್

    2. ಕಾಂಗ್ರೆಸ್: ಎನ್.ಎ.ಹ್ಯಾರಿಸ್, ಎಚ್.ಪಿ.ಮಂಜುನಾಥ್, ಬಿ.ನಾರಾಯಣ ರಾವ್, ಡಿ.ಎಸ್ ಹುಲಗೇರಿ, ಬಸನಗೌಡ ದದ್ದಲ್, ಪ್ರಿಯಾಂಕ್ ಖರ್ಗೆ, ಕುಸುಮಾ ಶಿವಳ್ಳಿ, ಬಿ.ಕೆ.ಸಂಗಮೇಶ್ ಮತ್ತು ರಘು ಆಚಾರ್

    3. ಜೆಡಿಎಸ್: ವೆಂಕಟರಾವ್ ನಾಡಗೌಡ, ಡಿ.ಸಿ.ಗೌರಿಶಂಕರ್, ಕೆ.ಮಹದೇವ್

    ಕೊರೊನಾ ಹಿನ್ನೆಲೆ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದ್ರೆ ವಿಪಕ್ಷಗಳು ಅಧಿವೇಶನ ಮೊಟಕುಗೊಳಿಸಬಾರದು ಎಂದು ಆಗ್ರಹಿಸಿವೆ. ಸಿಎಂ ಯಡಿಯೂರಪ್ಪ ಬೆಳಗ್ಗೆ ಸದನ ಮೊಟಕುಗೊಳಿಸುವ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಕೊರೊನಾ ಜಾಸ್ತಿ ಆಗುತ್ತಿದೆ ನಿಜ, ಆದರೆ ಅದು ನಿಮ್ಮಿಂದ ಜಾಸ್ತಿ ಆಗುತ್ತಿದೆ ಎಂದು ಹೇಳಿದೆ. ನಾವು ಅಧಿವೇಶನ ಮೊಟಕುಗೊಳಿಸಲು ಒಪ್ಪುವುದಿಲ್ಲ. ಇನ್ನೂ ಮೂರು ವಾರಗಳ ಕಾಲ ಅಧಿವೇಶನ ವಿಸ್ತರಿಸಲು ನಮ್ಮ ಪ್ರಸ್ತಾಪವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಸುಮಾರು 30 ರಿಂದ 40 ಬಿಲ್ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ತಂದಿದ್ದಾರೆ. ಸದನ ಮೊಟಕುಗೊಳಿಸುವುದಾದರೇ ಅದನ್ನೇಲ್ಲಾ ವಾಪಸ್ ಪಡೆಯಲಿ ನೋಡೋಣ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಹೇಳುತ್ತೇನೆ ಎಂದರು.

  • ಶಕ್ತಿಸೌಧದಲ್ಲಿ ಇಲ್ಲ ಕೊರೊನಾ ಮುಂಜಾಗ್ರತಾ ಕ್ರಮ

    ಶಕ್ತಿಸೌಧದಲ್ಲಿ ಇಲ್ಲ ಕೊರೊನಾ ಮುಂಜಾಗ್ರತಾ ಕ್ರಮ

    ಬೆಂಗಳೂರು: ಮಾರಕ ಕೊರೊನಾ ವೈರಸ್ ದಿನೇ ದಿನೇ ಕರ್ನಾಟಕದಲ್ಲಿ ಹರಡುತ್ತಲೇ ಇದೆ. ಈಗಾಗಲೇ 10 ಪಾಸಿಟಿವ್ ಕೇಸ್ ಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇತ್ತ ಕೊರೊನಾ ತಡೆಗೆ ಸರ್ಕಾರ ಕೂಡಾ ಅನೇಕ ಕ್ರಮಗಳನ್ನ ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ. ಆದ್ರೆ ಈ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ಮೈಮರೆಯುತ್ತಿದೆ ಅಂತ ಅನ್ನಿಸುತ್ತಿದೆ. ರಾಜ್ಯಾದ್ಯಂತ ಕೊರೊನಾ ಬಗ್ಗೆ ಎಚ್ಚರವಹಿಸಿರೋ ಸರ್ಕಾರ ಶಕ್ತಿಸೌಧ ವಿಧಾನಸೌಧದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದನ್ನ ಮರೆತು ಹೋಗಿದೆ.

    ಈಗಾಗಲೇ ರಾಜ್ಯಾದ್ಯಂತ ಶಾಲಾ-ಕಾಲೇಜ್, ಬಾರ್, ಪಬ್, ಮಾಲ್ ಎಲ್ಲವನ್ನೂ ಬಂದ್ ಮಾಡಲಾಗಿದೆ. ಮದುವೆ, ಜಾತ್ರೆ ಎಲ್ಲದ್ದಕ್ಕೂ ಕಡಿವಾಣ ಹಾಕಿದೆ. ಜನ ಸಂದಣಿ ಸೇರುವ ಜಾಗದ ಮೇಲೆ ನಿಗಾವಹಿಸಲಾಗಿದೆ. ಆದರೆ ವಿಧಾನಸೌಧದಲ್ಲಿ ಮಾತ್ರ ಇನ್ನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ವಿಫಲವಾಗಿದೆ. ವಿಧಾನಸೌಧಕ್ಕೆ ನಿತ್ಯ ಸಾವಿರಾರು ಜನರು ಬರ್ತಾರೆ. ಸಿಬ್ಬಂದಿ ಕೆಲಸಕ್ಕೆ ಹಾಜರಾಗ್ತಾರೆ. ಆದ್ರೆ ಅವರಿಗೆಲ್ಲ ತಪಾಸಣೆ ಮಾಡೋ ಕೆಲಸ ಮಾತ್ರ ನಡೆಯುತ್ತಿಲ್ಲ. ಸದ್ಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ವೀಕ್ಷಣೆಗೆ ಬರೋ ಸಾರ್ವಜನಿಕರಿಗೆ ಕೊರೊನಾ ತಪಾಸಣೆ ಕೂಡಾ ಮಾಡುತ್ತಿಲ್ಲ. ಇದನ್ನೂ ಓದಿ: 162 ರಾಷ್ಟ್ರ, ಪ್ರಾಂತ್ಯಗಳಿಗೆ ಹರಡಿದ ಮಹಾಮಾರಿ ಕೊರೊನಾ – ಭಾರತದಲ್ಲಿ 114 ಮಂದಿಗೆ ಸೋಂಕು

    ವಿಧಾನಸಭೆ ಸಭಾಂಗಣದಲ್ಲಿ ಅಲ್ಪಸ್ವಲ್ಪ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಆದ್ರೆ ವಿಧಾನಸೌಧದ ಹೊರಗೆ ಮಾತ್ರ ಯಾವುದೇ ಕ್ರಮಗಳನ್ನ ಆರೋಗ್ಯ ಇಲಾಖೆ ತೆಗೆದುಕೊಂಡಿಲ್ಲ. ಹೊರಗಡೆಯಿಂದ ಬರುವವರನ್ನ ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ಮಾಡೋದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಈವರೆಗೂ ವಿಧಾನಸೌಧದ 4 ದಿಕ್ಕಿಗೂ ಥರ್ಮಲ್ ಸ್ಕ್ಯಾನರ್ ಅಳವಡಿಸುವ ಕೆಲಸ ಆಗಿಲ್ಲ. ಶಾಸಕರು ಓಡಾಡುವ ಬಾಗಿಲಲ್ಲೂ ಥರ್ಮಲ್ ಸ್ಕ್ಯಾನರ್ ಅಳವಡಿಕೆ ಮಾಡಿಲ್ಲ. ಹೀಗಾಗಿ ಕೊರೊನಾ ಪತ್ತೆ ಹೇಗೆ ಅನ್ನೊ ಪ್ರಶ್ನೆ ಕಾಡ್ತಿದೆ. ಇದನ್ನೂ ಓದಿ: ಕೊಲ್ಲೂರಮ್ಮನಿಗೆ ಮನೆಯಲ್ಲೇ ಪ್ರಾರ್ಥಿಸಿ- ದೇವಸ್ಥಾನಕ್ಕೆ ಬರಬೇಡಿ

    ಇದಲ್ಲದೆ ಹೊರಗಡೆಯಿಂದ ಬರುವವರಿಗೆ ಸ್ಯಾನಿಟರೈಸರ್ ಕೂಡಾ ವ್ಯವಸ್ಥೆ ಮಾಡಿಲ್ಲ. ಮಾಸ್ಕ್ ಗಳ ಸೌಲಭ್ಯಗಳನ್ನು ಒದಗಿಸಿಲ್ಲ. ಇದನ್ನ ನೋಡಿದ್ರೆ ಸರ್ಕಾರ ಕೊರೊನಾವನ್ನ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಅಂತ ಗೊತ್ತಾಗುತ್ತೆ. ಇನ್ನು ಸಚಿವರಾದ ಶ್ರೀರಾಮುಲು, ಡಾ.ಸುಧಾಕರ್ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ ಯಾರು ಆತಂಕ ಪಡಬೇಡಿ ಅಂತ ಹೇಳ್ತಾರೆ. ಆದ್ರೆ ಶಕ್ತಿಸೌಧದ ಶಾಸಕರಿಗೆ ಅಗತ್ಯ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ಎಡವಿದಂತೆ ಕಾಣಿಸುತ್ತಿದೆ. ಇದನ್ನೂ ಓದಿ: ಕಲಬುರಗಿ ವೈದ್ಯರಿಗೆ ಕೊರೊನಾ- ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ