ಬೆಂಗಳೂರು: ರನ್ಯಾ ರಾವ್ ಗೋಲ್ಡ್ ಕೇಸ್‌ನಲ್ಲಿ ಸಚಿವರು ಭಾಗಿಯಾಗಿದ್ದಾರೆ, ವಿಧಾನಸಭೆಯಲ್ಲಿ ಹೆಸರು ಪ್ರಸ್ತಾಪಿಸುವುದಾಗಿ ಹೇಳಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basanagouda Patil Yatnal) ಕಾಂಗ್ರೆಸ್ ಸಚಿವರು ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ತಾಕತ್ತಿದ್ದರೆ ಹೆಸರು ಹೇಳಲಿ. ಯತ್ನಾಳ್ ಹೊರಗಡೆ ಮಾತನಾಡುವುದು ಬೇಡ. ಅಧಿವೇಶನದಲ್ಲಿ ಹೆಸರು ಬಹಿರಂಗಪಡಿಸಲಿ. ಯರ‍್ಯಾರು ಕೇಂದ್ರ ಸಚಿವರು ಇದ್ದಾರೆ, ಅವರ ಪಾರ್ಟಿಯವರು ಯಾರಿದ್ದಾರೆ, ನಮ್ಮ ಪಾರ್ಟಿಯವರು ಯಾರಿದ್ದಾರೆ ಹೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮೂಲಕ ಮನವಿ ಮಾಡ್ತೀನಿ, ತಂದೆ-ತಾಯಿ ಬಿಟ್ಟು ಹೋದ್ರೆ ಆಸ್ತಿ ಸಿಗಲ್ಲ: ಶರಣ ಪ್ರಕಾಶ್ ಪಾಟೀಲ್
ಇದೇ ವೇಳೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಯತ್ನಾಳ್ ಬಳಿ ಮಾಹಿತಿ ಇದ್ದರೆ ಬಹಿರಂಗ ಮಾಡಲಿ ಯಾರದ್ದೂ ಅಡ್ಡಿ ಇಲ್ಲ. ಬೇಗ ಹೆಸರು ಹೇಳಿದರೆ ತನಿಖೆಗೆ ಸುಲಭ ಆಗಲಿದೆ ಎಂದು ತಿರುಗೇಟು ಕೊಟ್ಟರು.
ಇನ್ನೂ ಸಚಿವ ಸಂತೋಷ್ ಲಾಡ್ ಮಾತನಾಡಿ, ಯತ್ನಾಳ್ ಸಚಿವರ ಹೆಸರನ್ನು ಬಹಿರಂಗಪಡಿಸಲಿ. ಒಳ್ಳೇದು ಯಾಕೆ ಅವರು ಹೇಳಬಾರದು? ಸಂಪೂರ್ಣವಾಗಿ ಯಾರಿದ್ದಾರೆ ಎನ್ನುವುದನ್ನು ಹೇಳಲಿ. ತನಿಖೆಗೂ ಅನುಕೂಲ ಆಗುತ್ತದೆ. ಅವರು ಹೇಳಿರುವುದು ಸತ್ಯಾನಾ ಎನ್ನುವುದು ಜನರಿಗೆ ಗೊತ್ತಾಗುತ್ತದೆ. ಸತ್ಯವಿದ್ದರೆ ಹೊರಬರಲಿ ಎಂದು ಟಕ್ಕರ್ ಕೊಟ್ಟರು.ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಸರ್ಕಾರ ಮುಸ್ಲಿಮರ ಆಸ್ತಿ ಕಬಳಿಕೆ ಮಾಡುವ ಹುನ್ನಾರ: ಓವೈಸಿ ಆಕ್ರೋಶ

















