Tag: vidhanasabha elections2020

  • ದೆಹಲಿ ಚುನಾವಣೆ- ಕೈಕೊಟ್ಟ ಇವಿಎಂ, ಪ್ರಮುಖರಿಂದ ಮತದಾನ

    ದೆಹಲಿ ಚುನಾವಣೆ- ಕೈಕೊಟ್ಟ ಇವಿಎಂ, ಪ್ರಮುಖರಿಂದ ಮತದಾನ

    ನವದೆಹಲಿ: ದೆಹಲಿ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ಆರಂಭವಾಗಿದ್ದು ಬೆಳಗ್ಗೆ 10 ಗಂಟೆಗೆ ಶೇ.4.33 ರಷ್ಟು ಮತದಾನ ದಾಖಲಾಗಿದೆ. ಯಮುನಾ ವಿಹಾರ್ದಸಿ 10 ಬ್ಲಾಕ್, ಸರ್ದಾರ್ ಪಟೇಲ್ ವಿದ್ಯಾಲಯ ಬೂತ್ ನಂಬರ್ 114 ರಲ್ಲಿ ಇವಿಎಂ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಚುನಾವಣಾ ಆಯೋಗದ ತಾಂತ್ರಿಕ ತಂಡದವರು ಪರಿಶೀಲನೆ ನಡೆಸುತ್ತಿದ್ದಾರೆ.

    ಸಿಎಂ ಅರವಿಂದ್ ಕೇಜ್ರಿವಾಲ್ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಚಾಂದನಿ ಚೌಕ್ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಿಂಬಾ, ಬಿಜೆಪಿ ನಾಯಕಿ ಮನೇಕಾ ಗಾಂಧಿ, ಸಂಸದ ಪರ್ವೇಶ್ ವರ್ಮಾ, ಸಂಸದೆ ಮೀನಾಕ್ಷಿ ಲೇಖಿ, ಬಾಲಿವುಡ್ ನಟಿ ತಾಪ್ಸಿ ಕುಟುಂಬದೊಂದಿಗೆ ತೆರಳಿ ಮತ ಚಲಾಯಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ ಚಲಾಯಿಸಿದ್ದಾರೆ. ದೆಹಲಿಯ ನಿರ್ಮಾಣ ಭವನದಲ್ಲಿರುವ ಮತಗಟ್ಟೆಯಲ್ಲಿ ಬೆಳಗ್ಗೆಯೇ ಮತ ಚಲಾಯಿಸಿದರು. ಬಳಿಕ ಮಾತನಾಡಿ, ದೆಹಲಿಯಲ್ಲಿ ಮೊದಲ ಬಾರಿ ಮತ ಚಲಾಯಿಸಿದ್ದು ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಗೆ ಮತ ಚಲಾಯಿಸಿದ್ದೇನೆ ಎಂದರು.

    ಇಂದು ಬೆಳಗ್ಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ನಾಳೆ ಚುನಾವಣೆಯ ಫಲಿತಾಂಶ ಫೆ.11 ರಂದು ಹೊರಬೀಳಲಿದೆ.