Tag: Vidhanasabha election

  • ವಿಧಾನಸಭೆ ಚುನಾವಣಾ ಅಖಾಡಕ್ಕೆ ಯೋಗಿ – ಮೊದಲ ಬಾರಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ

    ವಿಧಾನಸಭೆ ಚುನಾವಣಾ ಅಖಾಡಕ್ಕೆ ಯೋಗಿ – ಮೊದಲ ಬಾರಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಘೋರಖ್‍ಪುರ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.

    ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಹಿರಿಯ ನಾಯಕರು ಭಾಗಿಯಾಗಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ಗೋರಖನಾಥ್ ದೇವಸ್ಥಾನದಲ್ಲಿ ಪೂಜೆ ನಡೆಯಿತು.

    ಬಳಿಕ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅಮಿತಾ ಶಾ, ಉತ್ತರ ಪ್ರದೇಶದಲ್ಲಿ ಯೋಗಿ ಗ್ಯಾಂಗ್‍ಗಳನ್ನು ನಿರ್ನಾಮ ಮಾಡಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ನ್ಯಾಯದ ಆಡಳಿತ ನಡೆಯುತ್ತಿದೆ. ಅವರು ಕೊರೊನಾವನ್ನು ಪರಿಣಾಮಕಾರಿಯಾಗಿ ಎದುರಿಸಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಕೊವೀಡ್‍ನಿಂದ ಕೆಲಸ ಕಳೆದುಕೊಂಡವರಿಗೆ ಚುನಾವಣೆ ಆಸರೆ

    ಘೋರಖ್‍ಪುರ ಸಂಸದೀಯ ಕ್ಷೇತ್ರದಿಂದ ಐದು ಬಾರಿ ಸಂಸದರಿಗಾಗಿದ್ದ ಯೋಗಿ ಆದಿತ್ಯನಾಥ್ ಅವರನ್ನು ಕಳೆದ ಬಾರಿ ಮುಖ್ಯಮಂತ್ರಿಯಾಗಿ ಹೈಕಮಾಂಡ್ ಆಯ್ಕೆ ಮಾಡಿತ್ತು. ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಪರಿಷತ್ ಮೂಲಕ ಆಯ್ಕೆಯಾಗಿ ಅವರು ಅಧಿಕಾರ ನಡೆಸಿದ್ದರು.

  • ಬಿಜೆಪಿ ಸೇರಿದ ಉತ್ತರಾಖಂಡದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ಆರ್ಯ

    ಬಿಜೆಪಿ ಸೇರಿದ ಉತ್ತರಾಖಂಡದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ಆರ್ಯ

    ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಸಂಪುಟದಿಂದ ವಜಾಗೊಳಿಸಿದ್ರೆ, ಇನ್ನೊಂದೆಡೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ‘ಕೈ’ ಬಿಟ್ಟು ‘ಕಮಲ’ ಮುಡಿಯಲು ಮುಂದಾಗಿದ್ದಾರೆ.

    ನೈನಿತಾಲ್ ನ ಮಾಜಿ ಶಾಸಕಿ ಸರಿತಾ ಆರ್ಯ ಅವರು ಇಂದು ಬಿಜೆಪಿಗೆ ಸೇರಿದ್ದಾರೆ. ಡೆಹ್ರಾಡೂನ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಸರಿತಾ ಬಿಜೆಪಿ ಸೇರಿದ್ದಾರೆ. ಈ ವೇಳೆ ಪಕ್ಷದ ಅಧ್ಯಕ್ಷ ಮದನ್ ಕೌಶಿಕ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ- ಫೆ.20ರಂದು ಮತದಾನ

    ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸರಿತಾ ಅವರು ಉತ್ಸುಕರಾಗಿದ್ದರು. ಅಲ್ಲದೆ ನೈನಿತಾಲ್ ಕ್ಷೇತ್ರದಿಂದ ಟಿಕೆಟ್ ಪಡೆಯಬೇಕೆಂಬುದು ಅವರ ಮಹದಾಸೆಯಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದಿಂದ ಅವರನ್ನು ಕಣಕ್ಕಿಳಿಸುವುದು ಅನುಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಸರಿತಾ ಬೇಸರಗೊಂಡಿದ್ದು, ಇದೀಗ ಭಾರತೀಯ ಜನತಾ ಪಕ್ಷದತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಜನಸಾಮಾನ್ಯರ ಸಮಸ್ಯೆ ಬಿಜೆಪಿಗೆ ಅರ್ಥವಾಗಲ್ಲ: ಹರಕ್ ಸಿಂಗ್ ರಾವತ್ ಕಣ್ಣೀರು

    2017ರ ವಿಧಾನಸಭಾ ಚುನಾವಣೆಯಲ್ಲಿ ಸಂಜೀವ್ ಆರ್ಯ ಅವರು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಆದರೆ ಅವರು ಆ ಸಂದರ್ಭದಲ್ಲಿ ಸೋತಿದ್ದರು. ಸದ್ಯ ಸಂಜೀವ್ ಕಾಂಗ್ರೆಸ್‍ನಲ್ಲಿದ್ದಾರೆ.

  • ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ- ಫೆ.20ರಂದು ಮತದಾನ

    ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ- ಫೆ.20ರಂದು ಮತದಾನ

    ನವದೆಹಲಿ: ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಪಂಜಾಬ್ ಚುನಾವಣಾ ದಿನಾಂಕವನ್ನು ಮುಂದೂಡಲಾಗಿದೆ.

    ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾಗಿ ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ದಿನಾಂಕವನ್ನು 6 ದಿನ ಮುಂದಕ್ಕೆ ಹಾಕಿದೆ.

    ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಬೇಕಿತ್ತು. ಇದೀಗ ಈ ಚುನಾವಣೆಯನ್ನು ಆಯೋಗವು ಫೆ.20ಕ್ಕೆ ಮುಂದೂಡಿದೆ. ಹೀಗಾಗಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

    ಬರುವ ತಿಂಗಳು ಚುನಾವಣೆ ಇರುವ ಹಿನ್ನೆಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ಇಂದು ಬೆಳಗ್ಗೆ ಸಭೆ ಕರೆದಿದ್ದವು. ಈ ವೇಳೆ ಚುನಾವಣಾ ದಿನಾಂಕ ಮುಂದೂಡುವಂತೆ ಒಮ್ಮತದ ಅಭಿಪ್ರಾಯ ಪಡೆದು ಅದನ್ನು ಆಯೋಗದ ಮುಂದಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಚುನಾವಣಾ ದಿನಾಂಕವನ್ನು ಮುಂದಕ್ಕೆ ಹಾಕಿದ್ದು, ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.

    ಪಂಜಾಬ್ ನಲ್ಲಿ ಫೆ.16 ರಂದು ಗುರು ರವಿದಾಸ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಶೇ.32 ಮತದಾರರಿರುವ ಪರಿಶಿಷ್ಟ ಜಾತಿಯ ಸಮುದಾಯ ಈ ಜನ್ಮದಿನವನ್ನು ವಿಶೇಷ ಆಚರಿಸುತ್ತದೆ. ಇದಕ್ಕಾಗಿ ಅವರು ಫೆಬ್ರವರಿ 10ರಿಂದ 16 ವರೆಗೂ ಉತ್ತರಪ್ರದೇಶದ ವಾರಣಾಸಿಗೆ ತೆರಳುತ್ತಾರೆ. ಫೆಬ್ರವರಿ 14 ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿದ್ದು, ಈ ಅವಧಿಯಲ್ಲಿ ಪಂಜಾಬ್‍ನಲ್ಲಿ ಪರಿಶಿಷ್ಠ ಜಾತಿಯ ಜನರು ಅನುಪಸ್ಥಿತಿಯಲ್ಲಿರಲಿದ್ದಾರೆ. ದೊಡ್ಡ ಪ್ರಮಾಣದ ಮತದಾರರ ಅನುಪಸ್ಥಿತಿಯಲ್ಲಿ ಮತದಾನ ನಡೆಸುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿ ಚನ್ನಿ ಅವರು ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು.

  • ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ ಸಾಧ್ಯತೆ

    ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ ಸಾಧ್ಯತೆ

    ನವದೆಹಲಿ: ಫೆಬ್ರವರಿ 14ಕ್ಕೆ ನಿಗದಿಯಾಗಿರುವ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಮುಂದೂಡುವಂತೆ ಹಲವು ರಾಜಕೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿವೆ. ಈ ಸಂಬಂಧ ಮುಖ್ಯಮಂತ್ರಿ ಚರಣ್‍ಜಿತ್ ಎಸ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ವಿಸ್ತೃತ ಪತ್ರ ಬರೆದಿದ್ದಾರೆ.

    ಪಂಜಾಬ್ ನಲ್ಲಿ ಫೆ.16 ರಂದು ಗುರು ರವಿದಾಸ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. 32% ಮತದಾರರಿರುವ ಪರಿಶಿಷ್ಟ ಜಾತಿಯ ಸಮುದಾಯ ಈ ಜನ್ಮದಿನವನ್ನು ವಿಶೇಷ ಆಚರಿಸುತ್ತದೆ. ಇದಕ್ಕಾಗಿ ಅವರು ಫೆಬ್ರವರಿ 10ರಿಂದ 16 ವರೆಗೂ ಉತ್ತರಪ್ರದೇಶದ ವಾರಣಾಸಿಗೆ ತೆರಳುತ್ತಾರೆ.

    ಫೆಬ್ರವರಿ 14 ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿದ್ದು ಈ ಅವಧಿಯಲ್ಲಿ ಪಂಜಾಬ್‍ನಲ್ಲಿ ಪರಿಶಿಷ್ಠ ಜಾತಿಯ ಜನರು ಅನುಪಸ್ಥಿತಿಯಲ್ಲಿರಲಿದ್ದಾರೆ. ದೊಡ್ಡ ಪ್ರಮಾಣದ ಮತದಾರರ ಅನುಪಸ್ಥಿತಿಯಲ್ಲಿ ಮತದಾನ ನಡೆಸುವುದು ಸೂಕ್ತವಲ್ಲ ಎಂದು ತಮ್ಮ ಪತ್ರದಲ್ಲಿ ಚನ್ನಿ ಹೇಳಿದ್ದಾರೆ. ಈ ಹಿನ್ನಲೆ ಫೆಬ್ರವರಿ 14 ರಂದು ನಿಗದಿಯಾಗಿರುವ ಮತದಾನದ ದಿನಾಂಕವನ್ನು ಮುಂದೂಡಬೇಕು, ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಮತ ಕೂಡಾ ಇದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಚುನಾವಣೆ ಮುಂದೂಡಿಕೆ ಮನವಿ ಹಿನ್ನೆಲೆ ಇಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಲಿದ್ದು, ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಚುನಾವಣೆ ಮುಂದೂಡಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದು, ಮಧ್ಯಾಹ್ನದ ಬಳಿಕ ಅಧಿಕೃತ ಆದೇಶ ಹೊರ ಬರುವ ನಿರೀಕ್ಷೆಗಳಿದೆ. ಇದನ್ನೂ ಓದಿ: ಕಾಂಗ್ರೆಸ್‌ ಟಿಕೆಟ್‌ ನಿರಾಕರಣೆ- ಚನ್ನಿ ಸಹೋದರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

  • ಪ್ರಧಾನಿ ಮೋದಿಗೆ ಶಾಸಕ ಮುನಿರತ್ನ ಸ್ವಾಗತ

    ಪ್ರಧಾನಿ ಮೋದಿಗೆ ಶಾಸಕ ಮುನಿರತ್ನ ಸ್ವಾಗತ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾಸಕ ಮುನಿರತ್ನ ಸ್ವಾಗತ ಕೋರಿದರು.

    ಬಿಜೆಪಿ ಅಭ್ಯರ್ಥಿ ಮುರುಗನ್ ಮತ್ತು ಅರವಕುರಿಚಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಅಣ್ಣಾಮಲೈ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಮೋದಿ ಇಂದು ಆಗಮಿಸಿದ್ದರು. ಈ ವೇಳೆ ಧಾರಪುರಂನ ಹೆಲಿಪ್ಯಾಡ್‍ನಲ್ಲಿ ಆರ್‍ಆರ್ ನಗರ ಶಾಸಕ ಮುನಿರತ್ನ ಅವರು ಮೋದಿಗೆ ಪಕ್ಷದ ಶಾಲು ಹೊದಿಸಿ ಆದರದಿಂದ ಬರಮಾಡಿಕೊಂಡರು.

    ನಂತರ ತಮಿಳುನಾಡಿನ ಧಾರಾಪುರಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಮೋದಿ, ಸಿಎಂ ಪಳನಿಸ್ವಾಮಿ ತಾಯಿ ಕುರಿತು ಡಿಎಂಕೆಯ ಎ ರಾಜ ಹೇಳಿಕೆ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡ್ರು. ಅಲ್ಲದೆ 1989ರಲ್ಲೇ ಜಯಲಲಿತಾರನ್ನು ಡಿಎಂಕೆ ಅಪಮಾನಿಸಿತ್ತು ಎಂಬುದನ್ನು ನೆನಪಿಸಿದ್ರು.

    ಒಟ್ಟಿನಲ್ಲಿ ಪಂಚ ರಾಜ್ಯಗಳಲ್ಲಿ ಮತದಾರರ ಮನಗೆಲ್ಲಲು ಅಬ್ಬರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದಲ್ಲಿಯೂ ಪ್ರಚಾರ ನಡೆಸಿದ್ರು. ಪಾಲಕ್ಕಾಡ್‍ನಲ್ಲಿ ಭಾಷಣ ಮಾಡಿದ ಮೋದಿ, ಎಲ್‍ಡಿಎಫ್ ಮತ್ತು ಯುಡಿಎಫ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಆಪಾದಿಸಿದರು.

  • ದೆಹಲಿಯಲ್ಲಿ ಕಮಲವನ್ನೇ ಗುಡಿಸಿ ಹಾಕುತ್ತಾ ಕೈಯಲ್ಲಿರೋ ಪೊರಕೆ?

    ದೆಹಲಿಯಲ್ಲಿ ಕಮಲವನ್ನೇ ಗುಡಿಸಿ ಹಾಕುತ್ತಾ ಕೈಯಲ್ಲಿರೋ ಪೊರಕೆ?

    – 70 ಕ್ಷೇತ್ರಗಳಲ್ಲಿ ಇಂದು ಮತದಾನ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗದ್ದುಗಾಗಿ ನಡೆಯುತ್ತಿದ್ದ ಹೋರಾಟ ಅಂತಿಮ ಹಂತ ತಲುಪಿದೆ. ಇಂದು ದೆಹಲಿಯ ವಿಧಾನಸಭೆಗೆ ಮತದಾನ ಆರಂಭವಾಗಿದೆ.

    ಕಳೆದ ಹದಿನೈದು ದಿನಗಳಿಂದ ರಾಜಕೀಯ ಕೇಸರಾಟಕ್ಕೆ ವೇದಿಕೆಯಾಗಿದ್ದ ದೆಹಲಿ ಚುನಾವಣೆ ಅಂತಿಮ ಘಟ್ಟಕ್ಕೆ ಬಂದಿದೆ. ರಾಷ್ಟ್ರ ರಾಜಧಾನಿ 70 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳ 210, ಪ್ರಾದೇಶಿಕ ಪಕ್ಷಗಳ 90 ಹಾಗೂ 372 ಮಂದಿ ಇತರೆ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು 672 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

    ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದ್ದು, ಕೇಂದ್ರದ ಭದ್ರತಾ ಪಡೆಗಳನ್ನು ಒಳಗೊಂಡಂತೆ 90 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ದೆಹಲಿಯಲ್ಲಿ 80.55 ಲಕ್ಷ ಪುರುಷ, 66.35 ಮಹಿಳೆಯರು ಸೇರಿ ಒಟ್ಟು 1.46 ಕೋಟಿ ಮತದಾರರಿದ್ದಾರೆ. ಸುಲಭ ಮತದಾನಕ್ಕಾಗಿ 13,750 ಮತಗಟ್ಟೆಗನ್ನು ಸ್ಥಾಪನೆ ಮಾಡಿದ್ದು, ಮಹಿಳೆಯರಿಗೆ ವಿಶೇಷವಾಗಿ ಪಿಂಕ್ ಬೂತ್‍ಗಳು ಹಾಗೂ ದಿವ್ಯಾಂಗರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಾರಿಗೆ ಮತದಾರರಿಗೆ ಸುಲಭವಾಗುವ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ವೋಟರ್ ಸ್ಲೀಪ್ ಪಡೆಯುವ ವ್ಯವಸ್ಥೆ ಚುನಾವಣಾ ಆಯೋಗ ಮಾಡಿದೆ.

    ಕಾಸ್ಮೊಸಿಟಿಯ ಈ ಪೊಲಿಟಿಕ್ಸ್‍ನಲ್ಲಿ ಆಮ್ ಆದ್ಮಿ ಪಕ್ಷದ ಶೇ.25ರಷ್ಟು, ಬಿಜೆಪಿಯ ಶೇ.20ರಷ್ಟು, ಕಾಂಗ್ರೆಸ್ಸಿನ ಶೇ.15ರಷ್ಟು ಅಭ್ಯರ್ಥಿಗಳು ವಿರುದ್ಧ ಗಂಭೀರ ಅಪರಾಧಗಳಿವೆ. 50ಕ್ಕೂ ಹೆಚ್ಚು ಮಂದಿ ಕೊಟ್ಯಧಿಪತಿಗಳಿದ್ದಾರೆ.

    ಜಾರ್ಖಂಡ್ ಚುನಾವಣೆ ಬಳಿಕ ಸಿಎಎ ಆರ್ಥಿಕ ಸಂಕಷ್ಟದ ಕರಿ ನೆರಳಿನಲ್ಲಿ ನಡೆಯುತ್ತಿರುವ ಎರಡನೇ ಚುನಾವಣೆ ಇದಾಗಿದೆ. ಹೀಗಾಗಿ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದು, ಗೆಲುವು ಅನಿವಾರ್ಯವಾಗಿದೆ. ಇತ್ತ ದೆಹಲಿಯಲ್ಲಿ ಅಭಿವೃದ್ಧಿ ಮೂಲ ಮಂತ್ರ ಪಠಿಸುತ್ತಿರುವ ಕೇಜ್ರಿವಾಲ್ ನೇತೃತ್ವದ ಆಮ್ ಅದ್ಮಿ ಮತ್ತೊಮ್ಮೆ ಅಧಿಕಾರಕ್ಕೇರುವ ಉತ್ಸಾಹದಲ್ಲಿದೆ. ಕಾಂಗ್ರೆಸ್ ಮಾತ್ರ ಸ್ಪರ್ಧೆಗಷ್ಟೇ ಸೀಮಿತವಾಗಿದ್ದು, ಈ ಬಾರಿ ಅಕೌಂಟ್ ಓಪನ್ ಮಾಡುವ ಲೆಕ್ಕಚಾರದಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲ ಆಪ್ ಸುಲಭ ಸರ್ಕಾರ ನಡೆಸಲಿದೆ ಎಂದಿದ್ದು, ಇಂದು ಮತದಾನದ ಬಳಿಕ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

  • ಮಹಾರಾಷ್ಟ್ರ ಮತ ಎಣಿಕೆ:  5 ಸಾವಿರ ಲಡ್ಡುಗಳ ತಯಾರಿಸಿ ಸಂಭ್ರಮಾಚರಣೆಗೆ  ಬಿಜೆಪಿ ಸಿದ್ಧತೆ

    ಮಹಾರಾಷ್ಟ್ರ ಮತ ಎಣಿಕೆ: 5 ಸಾವಿರ ಲಡ್ಡುಗಳ ತಯಾರಿಸಿ ಸಂಭ್ರಮಾಚರಣೆಗೆ ಬಿಜೆಪಿ ಸಿದ್ಧತೆ

    – ಸಾಕಷ್ಟು ಹೂವಿನ ಮಾಲೆ, ಸೇರಿದಂತೆ ಎಲ್ಲ ರೀತಿಯ ಸಿದ್ಧತೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸದಲ್ಲಿರುವುದರಿಂದ ಬುಧವಾರವೇ ಅಲ್ಲಿನ ರಾಜ್ಯ ಬಿಜೆಪಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 5 ಸಾವಿರಕ್ಕೂ ಅಧಿಕ ಲಡ್ಡುಗಳು ಹಾಗೂ ಅನೇಕ ಹೂವಿನ ಮಾಲೆಗಳಿಗೆ ಆರ್ಡರ್ ನೀಡಿದೆ.

    ಅಲ್ಲದೆ ಚುನಾವಣಾ ಫಲಿತಾಂಶ ವೀಕ್ಷಣೆಗೆ ಮುಂಬೈನಲ್ಲಿರುವ ರಾಜ್ಯ ಬಿಜೆಪಿಯ ಕೇಂದ್ರ ಕಚೇರಿ ಬಳಿ ದೊಡ್ಡ ಸ್ಕ್ರೀನ್ ಅಳವಡಿಸಲಾಗಿದ್ದು, ಕಾರ್ಯಕರ್ತರು ಹಾಗೂ ಮುಖಂಡರು ಫಲಿತಾಂಶ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

    ಮತ ಎಣಿಕೆ ಒಂದು ಹಂತ ತಲುಪುವ ಹೊತ್ತಿಗೆ ಅಂದರೆ ಬೆಳಗ್ಗೆ 10 ಗಂಟೆಯ ನಂತರ ದಕ್ಷಿಣ ಮುಂಬೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಮತ ಎಣಿಕೆಯ ಫಲಿತಾಂಶಕ್ಕನುಗುಣವಾಗಿ ಮಧ್ಯಾಹ್ನದ ಹೊತ್ತಿಗೆ ಸಂಭ್ರಮಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ನಾವು ಅಧಿಕಾರಕ್ಕೇರುತ್ತೇವೆ ಎಂಬುದು ನಮಗೆ ತಿಳಿದಿದೆ. ಆದರೆ ಸಂಖ್ಯೆಗಳ ಬಗ್ಗೆ ಮಾತ್ರ ಕುತೂಹಲವಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

    ಬುಧವಾರ ಪ್ರಕಟವಾದ ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದನ್ನು ಸೂಚಿಸಿದ್ದವು. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಧಿಕಾರ ಹಿಡಿಯಲಿದೆ. ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 109-124, ಶಿವಸೇನೆ 57-40, ಕಾಂಗ್ರೆಸ್ 32-40, ಎನ್‍ಸಿಪಿ 40-50, ವಿಬಿಎ 0-2 ಮತ್ತು ಇತರರು 22-32 ಕ್ಷೇತ್ರಗಳಲ್ಲಿ ಗೆಲುವನ್ನು ದಾಖಲಿಸಬಹುದು ಇಂಡಿಯಾ ಟುಡೇ ಸಮೀಕ್ಷೆ ಹೇಳಿತ್ತು. ಇಂಡಿಯಾ ಟುಡೇ ಪ್ರಕಾರ ಹರ್ಯಾಣದಲ್ಲಿ ಬಿಜೆಪಿ 77, ಕಾಂಗ್ರೆಸ್ 11 ಮತ್ತು ಇತರರು 1 ಕ್ಷೇತ್ರದಲ್ಲಿ ಗೆಲುವು ದಾಖಲಿಸುವ ಸಾಧ್ಯತೆಗಳಿವೆ ಎಂದು ಹೇಳಾಗಿದೆ.

    2014ರಲ್ಲಿ ನಡೆದ ಚುನಾವಣೆ ವೇಳೆ ಬಿಜೆಪಿ ಮತ್ತು ಶಿವಸೇನೆ 185 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಸರ್ಕಾರ ರಚನೆ ಮಾಡಿದ್ದವು. ಕಾಂಗ್ರೆಸ್ 83 ಮತ್ತು ಪಕ್ಷೇತರ ಅಭ್ಯರ್ಥಿಗಳು 20 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರು. ಹರ್ಯಾಣದಲ್ಲಿ ನಡೆದ 2014ರ ಚುನಾವಣೆಯಲ್ಲಿ ಬಿಜೆಪಿ 47, ಕಾಂಗ್ರೆಸ್ 15 ಮತ್ತು ಇತರರು 28 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

    ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ಮತದಾನ ನಡೆದಿದ್ದು, ಶೇ.61.13ರಷ್ಟು ಮತದಾನವಾಗಿದೆ. ಫಲಿತಾಂಶದ ಹಿನ್ನೆಲೆ ಬುಧವಾರವೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉತ್ತರಾಖಂಡ್‍ನ ಕೇದಾರನಾಥಕ್ಕೆ ಭೇಟಿ ನೀಡಿ ಶಿವನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.

  • ಮೈತ್ರಿ ಸರ್ಕಾರದಲ್ಲಿ ಒಳಜಗಳ- ಬಿಜೆಪಿಯಿಂದ ಮಾಸ್ಟರ್ ಪ್ಲಾನ್

    ಮೈತ್ರಿ ಸರ್ಕಾರದಲ್ಲಿ ಒಳಜಗಳ- ಬಿಜೆಪಿಯಿಂದ ಮಾಸ್ಟರ್ ಪ್ಲಾನ್

    ನವದೆಹಲಿ: ರಾಜ್ಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದ್ದು, ಇದರಿಂದ ರಾಜ್ಯದಲ್ಲಿ ಮತ್ತೆ ಇತಿಹಾಸ ಮರುಕಳಿಸುತ್ತಾ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ.

    ಲೋಕಸಭೆ ಜೊತೆಗೆ ಮಧ್ಯಂತರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಎಲ್ಲದಕ್ಕೂ ಸಿದ್ಧವಾಗುವಂತೆ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಲೋಕಸಭೆ ಚುನಾವಣೆಯೊಳಗೆ ಒಳ ಜಗಳದಿಂದ ಮೈತ್ರಿ ಸರ್ಕಾರ ಕುಸಿದರೆ ಮತ್ತೆ ಚುನಾವಣೆ ಹೋಗಲು ಚಿಂತನೆ ನಡೆಸಲಾಗಿದೆ. ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ಲೋಕಸಭೆಗೆ ಅಖಾಡ ಸಿದ್ಧಪಡಿಸಿಕೊಳ್ಳಲಿರುವ ಬಿಜೆಪಿ ಮೈತ್ರಿ ಸರ್ಕಾರದ ವಿಫಲತೆ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಸಾಧ್ಯತೆಗಳಿವೆ.

    2006 ರಲ್ಲಿ ಅನುಕಂಪದ ಆಧಾರದ ಮೇಲೆ ಚುನಾವಣೆ ಎದುರಿಸಿ 110 ಸ್ಥಾನ ಗೆದಿದ್ದ ಬಿಜೆಪಿ, ಮೈತ್ರಿ ಸರ್ಕಾರದ ವಿರೋಧಿ ಅಲೆ ಲೋಕಸಭೆ ಮತ್ತು ವಿಧಾನ ಸಭೆಗೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದೆ. ಒಟ್ಟಿನಲ್ಲಿ 2006 ರಂತೆ ಇತಿಹಾಸ ರಿಪಿಟ್ ಮಾಡಲು ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗಿದೆ.

  • ದಲಿತರಿಗೂ ದೇವರ ಪೂಜೆಗೆ ಅವಕಾಶ – ಚುನಾವಣೆ ಹೊತ್ತಲ್ಲೇ ಸಿಎಂ ಹೊಸ ದಾಳ

    ದಲಿತರಿಗೂ ದೇವರ ಪೂಜೆಗೆ ಅವಕಾಶ – ಚುನಾವಣೆ ಹೊತ್ತಲ್ಲೇ ಸಿಎಂ ಹೊಸ ದಾಳ

    ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಿಎಂ ಸಿದ್ದರಾಮಯ್ಯ ಮತ್ತೊಂದು ದಲಿತ ದಾಳ ಉರುಳಿಸಿದ್ದಾರೆ.

    ಮುಜರಾಯಿ ಇಲಾಖೆಯ ಆಧೀನದಲ್ಲಿ ಬರುವ ಸರ್ಕಾರಿ ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕಕ್ಕೆ ಮುಂದಾಗಿದ್ದಾರೆ. ರಾಜ್ಯದ ಪ್ರಖ್ಯಾತ ದೇಗುಲಗಳಾದ ಕುಕ್ಕೆ, ಕೊಲ್ಲೂರು, ಕಟೀಲು ಸೇರಿದಂತೆ ಐದು ದೇವಸ್ಥಾನಗಳಲ್ಲಿ ಆಗಮ ಶಾಲೆ ತೆರೆಯಲಾಗುತ್ತಿದೆ.

    ಅಲ್ಲಿ ದಲಿತರು ಸೇರಿದಂತೆ ಸರ್ವರಿಗೂ ವೇದ, ಮಂತ್ರಗಳ ಪಾಠ ಮಾಡಲಾಗುತ್ತದೆ. ಹೀಗೆ ತರಬೇತಿ ಪಡೆದ ಅರ್ಚಕರನ್ನು ಮುಜರಾಯಿ ದೇಗುಲಗಳಲ್ಲಿ ಪೂಜೆ ನೇಮಿಸಲಾಗುತ್ತದೆ. ಆಗಮ ಶಾಲೆ ತೆರೆಯೋ ಬಗ್ಗೆ ಈಗಾಗಲೇ ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶಿಸಿದೆ.

    ಇದನ್ನೂ ಓದಿ: ಮೌಢ್ಯ ನಿಷೇಧ ಕಾಯ್ದೆಗೆ ಕ್ಯಾಬಿನೆಟ್ ಒಪ್ಪಿಗೆ: ಯಾವುದಕ್ಕೆ ನಿಷೇಧ?

    ಇತ್ತೀಚೆಗಷ್ಟೇ ಮೌಢ್ಯ ನಿಷೇಧ ಜಾರಿಗೆ ತಂದಿರುವ ಸಿದ್ದರಾಮಯ್ಯ ಸರ್ಕಾರ ಈಗ ದಲಿತ ಅರ್ಚಕರ ನೇಮಕ ಮತ್ತೊಂದು ಕ್ರಾಂತಿಕಾರಿ ನಿರ್ಧಾರವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

    ಇದನ್ನೂ ಓದಿ: ದಲಿತರಿಗೆ ಬಾವಿ ಮುಟ್ಟಲು, ಹೆಣ ಸುಡಲು ಅವಕಾಶ ಮಾಡಿಕೊಡಿ: ತೊಗಾಡಿಯಾ

  • ಬ್ರಾಹ್ಮಣರ ಉದ್ಧಾರಕ್ಕೆ ಸರ್ಕಾರದಿಂದ ಅನುದಾನ – ಶೀಘ್ರವೇ ಬರಲಿದ್ಯಂತೆ ಅಭಿವೃದ್ಧಿ ನಿಗಮ

    ಬ್ರಾಹ್ಮಣರ ಉದ್ಧಾರಕ್ಕೆ ಸರ್ಕಾರದಿಂದ ಅನುದಾನ – ಶೀಘ್ರವೇ ಬರಲಿದ್ಯಂತೆ ಅಭಿವೃದ್ಧಿ ನಿಗಮ

    ಬೆಂಗಳೂರು: ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಸರ್ಕಾರ ಮೇಲ್ಜಾತಿ ದಾಳ ಉರುಳಿಸಲು ಮುಂದಾಗಿದೆ. ಅಹಿಂದ ಸರ್ಕಾರವೆಂಬ ಹಣೆಪಟ್ಟಿ ಕಳಚಿ ಮೇಲ್ವರ್ಗದವರ ಮತಗಳನ್ನು ಸೆಳೆಯುವ ಸಲುವಾಗಿ ಹೊಸ ತಂತ್ರಕ್ಕೆ ಕೈ ಹಾಕಿದೆ. ಅದೇ ಬ್ರಾಹ್ಮಣ ಅಭಿವೃದ್ಧಿ ನಿಗಮದ ಸ್ಥಾಪನೆ.

    ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ, ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡಿ ಹಿಂದುಳಿದ ಬ್ರಾಹ್ಮಣರ ಅಭಿವೃದ್ಧಿಗೆ ನೆರವಾಗುವುದು ನಿಗಮದ ಉದ್ದೇಶ. ಈ ನಿಟ್ಟಿನಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ನಿಗಮ ಸ್ಥಾಪನೆ ಸಂಬಂಧ ಶೀಘ್ರವೇ ಸಿಎಂ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.

    ಇದನ್ನು ವೋಟ್ ಬ್ಯಾಂಕ್ ರಾಜಕೀಯ, ಚುನಾವಣಾ ಗಿಮಿಕ್ ಅಂತ ಬಿಜೆಪಿ ಹೇಳಿದೆ. ಎಲ್ಲಾ ಜಾತಿಯವರನ್ನು ಎಸ್‍ಸಿ, ಎಸ್‍ಟಿ ಮಾಡಿ, ಇಲ್ಲ ಹಿಂದುಳಿದ ವರ್ಗಕ್ಕೆ ಸೇರಿಸಿ. ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಸರ್ಕಾರಕ್ಕೆ ಲಿಂಗಾಯತರು, ಬ್ರಾಹ್ಮಣರು ನೆನಪಾಗುತ್ತಾರೆ ಅಂತ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: ಉತ್ತರ ಕರ್ನಾಟಕದತ್ತ ಕುಮಾರಸ್ವಾಮಿ ಚಿತ್ತ?