Tag: Vidhanasabha election

  • ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?

    ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?

    ಮಂಗಳೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ (Belthangady Vidhanasabha Constituency) ರಾಜಕೀಯವಾಗಿ ವರ್ಣರಂಜಿತವಾದುದು. ಜಾಗತಿಕ ಮಟ್ಟದ ನಾಯಕಿಯಾಗಿದ್ದ ದಿವಂಗತ ಇಂದಿರಾ ಗಾಂಧಿ (Indira Gandhi) ಯವರಿಗೂ ಬೆಳ್ತಂಗಡಿಗೂ ನಿಕಟ ನಂಟಿದೆ. ಇದಕ್ಕೆ ಕಾರಣ ಇದು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಭಾಗವಾಗಿದ್ದಿದ್ದು.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಬೆಳ್ತಂಗಡಿ ಮಾತ್ರ 2009ರವರೆಗೂ ಚಿಕ್ಕಮಗಳೂರು ಸಂಸದೀಯ ಕ್ಷೇತ್ರದ ಅಂಗವಾಗಿದ್ದು, ಕ್ಷೇತ್ರ ಮರುವಿಂಗಡಣೆಯಾದ ಬಳಿಕ 2009ರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೇರಿತು. 1977ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ದೇಶದಲ್ಲಿ ಅಧಿಕಾರ ಕಳೆದುಕೊಂಡು ರಾಯ್‍ಬರೇಲಿಯಲ್ಲಿ ಇಂದಿರಾ ಗಾಂಧಿ ಸೋತರು. ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರ ಇಂದಿರಾರನ್ನು ಬಂಧಿಸಿತು. ಈ ವಿದ್ಯಮಾನದ ಬಳಿಕ ಇಂದಿರಾ ಗಾಂಧಿ ಮತ್ತೆ ಲೋಕಸಭೆ ಪ್ರವೇಶಿಸಲು ನಿರ್ಧರಿಸಿದರು. ಕಾಂಗ್ರೆಸ್ ಸಂಸದ ಡಿ.ಬಿ ಚಂದ್ರೇಗೌಡ (D B Chandregowda) ಚಿಕ್ಕಮಗಳೂರು ಸ್ಥಾನಕ್ಕೆ ರಾಜೀನಾಮೆ ನೀಡಿ ನಾಯಕಿ ಇಂದಿರಾ ಗಾಂಧಿಗೆ ಅನುವು ಮಾಡಿಕೊಟ್ಟರು. ಅದರಂತೆ 1978ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಕಣಕ್ಕಿಳಿದರು.

    ಜನತಾ ಪಾರ್ಟಿಯಿಂದ ವೀರೇಂದ್ರ ಪಾಟೀಲ್ (Veerendra Patil) ಎದುರಾಳಿಯಾದರು. ಚುನಾವಣಾ ಪ್ರಚಾರಕ್ಕೆ ಬಂದಿದ್ದ ಇಂದಿರಾ ಗಾಂಧಿ ಬೆಳ್ತಂಗಡಿ, ಉಜಿರೆಗಳಲ್ಲಿ ಸುತ್ತಾಡಿದ್ದರು. ಆಗ ಇಡೀ ದೇಶದ ಗಮನವನ್ನು ಬೆಳ್ತಂಗಡಿ ಸೇರಿದಂತೆ ಚಿಕ್ಕಮಗಳೂರು ಕ್ಷೇತ್ರ ಸೆಳೆದಿತ್ತು. ಇದೀಗ ಇದೇ ಕ್ಷೇತ್ರ ಕಾಂಗ್ರೆಸ್ ಗೆ ಹೈ ಟೆನ್ಷನ್ ಕ್ಷೇತ್ರವಾಗಿದೆ. ಪ್ರಸ್ತುತ ಕಾಂಗ್ರೆಸ್ ಮುಖಂಡರಾದ ವಸಂತ ಬಂಗೇರ ಮತ್ತು ಗಂಗಾಧರ ಗೌಡ ಇಬ್ಬರೂ ಬಿಜೆಪಿ (BJP), ಜೆಡಿಎಸ್ (JDS) ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಉಂಡವರು. ಗಂಗಾಧರ ಗೌಡ-ಬಂಗೇರ 5 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಬಂಗೇರರ ವಿರುದ್ಧ ಗಂಗಾಧರ ಗೌಡರ ಪುತ್ರ ರಂಜನ್ ಗೌಡ ಕೂಡ ಸ್ಪರ್ಧಿಸಿದ್ದರು. ಬಂಗೇರರು ಜೆಡಿಎಸ್‍ನಲ್ಲಿದ್ದಾಗ ಕಾಂಗ್ರೆಸ್‍ನಿಂದ ಹರೀಶ್ ಕುಮಾರ್ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಆಗ ಎದುರಾಳಿಯಾಗಿದ್ದ ಈ ಎಲ್ಲರೂ ಈಗ ಕಾಂಗ್ರೆಸ್‍ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದನ್ನೂ ಓದಿ: ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಫೈಟ್‍ನ ಲಾಭ ಪಡೆಯಲಿದೆಯೇ ಬಿಜೆಪಿ?

    ಕಳೆದ ಚುನಾವಣೆ ಸಂದರ್ಭ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವವರು ಯಾರು ಎಂಬ ಪ್ರಶ್ನೆ ಇತ್ತು. ಪೈಪೋಟಿಗೆ ಹಲವು ಮುಖಗಳಿದ್ದವು. ಈ ಬಾರಿ ಗೊಂದಲಗಳಿಲ್ಲ. ದೆಹಲಿವರೆಗೂ ವರ್ಚಸ್ಸು ವಿಸ್ತರಿಸಿಕೊಂಡು ಸ್ಥಾನ ಗಟ್ಟಿ ಮಾಡಿಕೊಂಡಿರುವ ಶಾಸಕ ಹರೀಶ್ ಪೂಂಜ (Harish Poonja) ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯುವುದು ಖಚಿತ. ಹಾಗೆಂದು ಪಕ್ಷದಲ್ಲಿ ಬೇರೆ ಆಕಾಂಕ್ಷಿಗಳಿಲ್ಲ ಎಂದಲ್ಲ, ಈ ಹಿಂದೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಆರ್.ಎಸ್.ಎಸ್ (RSS). ಹಿನ್ನೆಲೆಯುಳ್ಳ ಸಂಪತ್ ಬಿ.ಸುವರ್ಣ (Sampath B Suvarna) ಅವರು ತಾವೂ ಆಕಾಂಕ್ಷಿ ಎಂದು ಹೇಳಿದ್ದಾರೆ. ಉಳಿದಂತೆ ಉದ್ಯಮಿ ಬರೋಡ ಶಶಿಧರ್ ಶೆಟ್ಟಿ ಹೆಸರೂ ಕೇಳಿಬರುತ್ತಿದೆ.

    ಆದರೆ ಕಾಂಗ್ರೆಸ್‍ನಲ್ಲಿ ಕೆಪಿಸಿಸಿ ಕಾರ್ಯದರ್ಶಿ, ಯುವನಾಯಕ ರಕ್ಷಿತ್ ಶಿವರಾಂ (Rakshit Shivaram) ಗೆ ಬೆಳ್ತಂಗಡಿ ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಹೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡುವುದನ್ನು ಮಾಜಿ ಶಾಸಕ ವಸಂತ ಬಂಗೇರಾ (vasantha Bangera), ಗಂಗಾಧರ ಗೌಡ (Gangadhar Gowda) ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ದಾಖಲೆ ಬರೆದ ಸುಳ್ಯದ ಎಸ್ ಅಂಗಾರ

    ಜೆಡಿಎಸ್‍ (JDS) ನಲ್ಲಿ ಈವರೆಗೆ ಬೆಳ್ತಂಗಡಿ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಗತಿ ಚರ್ಚೆಗೆ ಬಂದಿಲ್ಲ. ಬಹುತೇಕ ನಾಯಕರು ಬಿಜೆಪಿ, ಕಾಂಗ್ರೆಸ್ ಪಾಳಯದಲ್ಲಿ ಸಮ್ಮಿಳಿತಗೊಂಡಿದ್ದಾರೆ. ಈ ಮಧ್ಯೆ ಎಸ್.ಡಿ.ಪಿ.ಐ. ಈಗಾಗಲೇ ಅಕ್ಬರ್ ಬೆಳ್ತಂಗಡಿಯನ್ನು ಅಭ್ಯರ್ಥಿಯೆಂದು ಘೋಷಿಸಿದೆ. ಹಾಗೆಯೇ ತುಳುನಾಡ ಪಕ್ಷದ ಅಭ್ಯರ್ಥಿಯಾಗಿ ಶೈಲೇಶ್ ಆರ್.ಜೆ (Shailesh R J). ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಪಕ್ಷಗಳಿಗೇನು ಕಮ್ಮಿ ಇಲ್ಲ ಎಂಬಂತೆ ಸರ್ವೋದಯ ಕರ್ನಾಟಕ ಪಕ್ಷವೂ ಆದಿತ್ಯ ನಾರಾಯಣ ಕಲ್ಲಾಜೆಯನ್ನು ಅಭ್ಯರ್ಥಿಯಾಗಿಸಿದೆ.

    ಹರೀಶ್ ಪೂಂಜ- ರಕ್ಷಿತ್ ಶಿವರಾಂ ನಡುವೆ ಹಲವು ಸಾಮ್ಯತೆಗಳಿವೆ. ಇಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನ ಯುವಕರು. ಹೈಕೋರ್ಟ್ ವಕೀಲರಾಗಿದ್ದ ಹರೀಶ್ ಪೂಂಜ 2018ರ ವಿಧಾನಸಭಾ ಚುನಾವಣೆಗಿಂತ ಕೆಲವರ್ಷ ಮೊದಲು ಕ್ಷೇತ್ರದಲ್ಲಿ ತಿರುಗಾಟ ಆರಂಭಿಸಿ ಜನಪ್ರಿಯರಾದವರು. ದೇವಸ್ಥಾನ ಬ್ರಹ್ಮಕಲಶೋತ್ಸವಗಳು, ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಹಲವು ಹೋರಾಟ ಸಂಘಟಿಸಿದ್ದರು. ರಕ್ಷಿತ್ ಶಿವರಾಂ ಕೂಡ ಹೈಕೋರ್ಟ್ ವಕೀಲ. ಮೂರ್ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಶಿಕ್ಷಣ, ಸಮಾಜ ಸೇವೆ, ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಮತ್ತಿತರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‍ನಿಂದ ಹಲವು ಹೋರಾಟಗಳನ್ನು ಸಂಘಟಿಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡುಬಿದಿರೆ ಕ್ಷೇತ್ರ?

    ಹರೀಶ್ ಪೂಂಜಾ ಬಂಟ ಸಮುದಾಯಕ್ಕೆ ಸೇರಿದ್ದರೆ, ರಕ್ಷಿತ್ ಶಿವರಾಂ ಬಿಲ್ಲವ ಸಮಾಜಯದ ಯುವಕ. ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಬಿಲ್ಲವ ಮತದಾರರಿದ್ದು ಕಾಂಗ್ರೆಸ್ ಗೆ ವರದಾನ ಆಗುತ್ತೆ ಅನ್ನೋ ಲೆಕ್ಕಾಚಾರ ಇದ್ರೂ ಬಿಲ್ಲವ ಮತದಾರರು ಹಿಂದುತ್ವ, ಬಿಜೆಪಿ, ಹರೀಶ್ ಪೂಂಜಾ ಅನ್ನುತ್ತಿರೋದು ಬಿಜೆಪಿಗೆ ಲಾಭ ಆಗುತ್ತೆ ಅನ್ನೋ ಲೆಕ್ಕಾಚಾರವೂ ಇದೆ. ಈ ಬಾರಿ ನಾರಾಯಣಗುರು ಪುಸ್ತಕ ವಿವಾದ ಸಡೆರಿದಂತೆ ಹಲವು ವಿಚಾರಗಳಲ್ಲಿ ಬಿಲ್ಲವರನ್ನು ಎದುರು ಹಾಕಿಕೊಂಡಿರುವ ಬಂಟ ಸಮುದಾಯದ ಹರೀಶ್ ಪೂಂಜಾಗೆ ಬಿಲ್ಲವರು ತಕ್ಕ ಉತ್ತರ ನೀಡ್ತಾರೆ ಅನ್ನೋ ಮಾತೂ ಕೇಳಿ ಬರ್ತಿದೆ. ಒಟ್ಟಿನಲ್ಲಿ ಈಗ ಇಬ್ಬರು ಯುವನಾಯಕರ ನಡುವೆ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.

  • ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ

    ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ

    ಬೆಂಗಳೂರು: ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ (Congress) ಗೆ ಮತ್ತೆ ಆತಂಕ ಎದುರಾಗಿದೆ.

    ಕಾಂಗ್ರೆಸ್‍ನ ಯುಗಾದಿ ಗಡುವು ಮುಗಿದರೂ ವಲಸಿಗರು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ಗೊಂದಲದಲ್ಲೇ ಟಿಕೆಟ್ (Election Ticket) ಫೈನಲ್ ಮಾಡಲು ಕೈ ಪಾಳಯ ಪರದಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ವಲಸೆ ಹೊರಡುವ ಶಾಸಕ, ಸಚಿವರನ್ನ ತಡೆಯೋರು ಯಾರು?

    ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲು ಇದೀಗ ಕಾಂಗ್ರೆಸ್ ಮುಂದಾಗಿದೆ. ವಲಸಿಗ ಸಚಿವರು ಸೇರಿದಂತೆ ಸಾಕಷ್ಟು ನಾಯಕರ ಆಗಮನದ ನೀರಿಕ್ಷೆ ಇದೆ. ಆದರೆ ಈ ವಿಚಾರದಲ್ಲಿ ನಾಯಕರು ಸರಿಯಾಗಿ ಕ್ಲಾರಿಟಿ ಕೊಟ್ಟಿಲ್ಲ. ಒಂದೆಡೆ ಅನ್ಯ ಪಕ್ಷದ ಬೇರೆ ನಾಯಕರು ಮುಖಂಡರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.

    ಇತ್ತ ನಿರೀಕ್ಷೆಯಿಟ್ಟಿದ್ದ ವಲಸಿಗರ ಸಚಿವರು, ಶಾಸಕರು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಕಾಯುವಂತೆಯೂ ಇಲ್ಲಾ, ಬರಲ್ಲ ಎಂದು ಮುಂದುವರಿವಂತೆಯೂ ಇಲ್ಲ. ಒಟ್ಟಿನಲ್ಲಿ ಪಕ್ಷದ ಬೆಳವಣಿಗೆ ರಾಜ್ಯದ ನಾಯಕರು ಆತಂಕದಿಂದ ದಿನ ದೂಡುವಂತೆ ಮಾಡಿದೆ ಎನ್ನಲಾಗಿದೆ.

  • ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಕ್ತಿ ನೋಡಿದ್ರೆ ಹೊಟ್ಟೆ ಉರಿಯಾಗುತ್ತೆ, ನಾನ್ಯಾಕೆ ಇಲ್ಲಿಗೆ ಬರ್ಬಾದು ಅನಿಸತ್ತೆ: ವಿಜಯೇಂದ್ರ

    ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಕ್ತಿ ನೋಡಿದ್ರೆ ಹೊಟ್ಟೆ ಉರಿಯಾಗುತ್ತೆ, ನಾನ್ಯಾಕೆ ಇಲ್ಲಿಗೆ ಬರ್ಬಾದು ಅನಿಸತ್ತೆ: ವಿಜಯೇಂದ್ರ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾದ ಬೃಹತ್ ಸಮಾವೇಶ ನಡೆಯಿತು. ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಗೆ ಬೈಕ್ ರ್‍ಯಾಲಿ ಮೂಲಕ ಕರೆತಂದ ಕಾರ್ಯಕರ್ತರು ಹೂ ಮಳೆಗೈದು ಅದ್ಧೂರಿ ಸ್ವಾಗತ ಕೋರಿದರು.

    ಸಮಾವೇಶ ಉದ್ಘಾಟಿಸಿದ ಬಿ.ವೈ ವಿಜಯೇಂದ್ರ ಗುಂಡ್ಲುಪೇಟೆ ಕಂಡರೆ ನನಗೆ ಹೊಟ್ಟೆ ಉರಿ ಆಗ್ತಿದೆ. ಗುಂಡ್ಲುಪೇಟೆಯಲ್ಲಿ ಬಿಜೆಪಿ (BJP) ಶಕ್ತಿ ನೋಡಿದ್ರೆ ನಾನ್ಯಾಕೆ ಅಲ್ಲಿ ಇಲ್ಲಿ ನಿಲ್ಲೋದಕ್ಕೆ ಒದ್ದಾಡ್ತಿದ್ದೇನೆ? ಇಲ್ಲಿಗೇಕೆ ಬರಬಾರ್ದು ಅನಿಸ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

    ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮೊದಲ ಫಲಿತಾಂಶ ಬರುವುದೇ ಗುಂಡ್ಲುಪೇಟೆಯಲ್ಲಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತ – ಯತೀಂದ್ರ ಸಿದ್ದರಾಮಯ್ಯ

  • ಆರ್ ಅಶೋಕ್‍ಗೆ ಸಕ್ಕರೆ ನಾಡಿನ ಉಸ್ತುವಾರಿ- ಸಾಮ್ರಾಟ್ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆ

    ಆರ್ ಅಶೋಕ್‍ಗೆ ಸಕ್ಕರೆ ನಾಡಿನ ಉಸ್ತುವಾರಿ- ಸಾಮ್ರಾಟ್ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆ

    ಬೆಂಗಳೂರು: ವಿಧಾನಸಭಾ ಚುನಾವಣೆ (Vidhanasabha Election) ಗೆ ಮೂರು ತಿಂಗಳಿರುವಾಗ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಸ್ಟ್ರಾಟೆಜಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಂಡ್ಯ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಚಿವ ಆರ್ ಅಶೋಕ್ (R Ashok) ಹೆಗಲಿಗೆ ವಹಿಸಲಾಗಿದೆ. ಹಳೇ ಮೈಸೂರು ಭಾಗದ ಕೇಂದ್ರ ಜಿಲ್ಲೆಯಾದ ಮಂಡ್ಯದ ಒಕ್ಕಲಿಗರ ಕೋಟೆಗಳನ್ನು ಗೆಲ್ಲಲು ಈ ಮೂಲಕ ಸಚಿವ ಆರ್ ಅಶೋಕ್‍ಗೆ ಬಿಗ್ ಟಾಸ್ಕ್ ಕೊಡಲಾಗಿದೆ. ಸಚಿವರಿಗೆ ಮಂಡ್ಯ ಟಾಸ್ಕ್ ನೀಡಿದ ದೆಹಲಿ ನಾಯಕರ ನಿರ್ಧಾರ ಅಚ್ಚರಿಗೂ ಕಾರಣವಾಗಿದೆ. ಆರ್ ಅಶೋಕ್ ಸಾಮರ್ಥ್ಯಕ್ಕೆ ಹೈಕಮಾಂಡ್ ನಿಂದ ಮಂಡ್ಯ (Mandya) ಅಗ್ನಿಪರೀಕ್ಷೆ ಗೆಲ್ಲಿಸಿಕೊಡುವ ಸವಾಲು ಕೊಡಲಾಗಿದೆ.

    ನಿನ್ನೆ ಸಿಎಂ ಬೊಮ್ಮಾಯಿ (Basavaraj Bommai) ಯಿಂದ ಈ ಮಹತ್ತರ ಬದಲಾವಣೆಯ ಆದೇಶ ಪ್ರಕಟವಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಅಶೋಕ್‍ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಲಾಗಿದೆ. ಸಚಿವ ಗೋಪಾಲಯ್ಯ ಬಳಿ ಇದ್ದ ಜಿಲ್ಲಾ ಜವಾಬ್ದಾರಿ ಅಶೋಕ್ ಗೆ ವರ್ಗಾವಣೆ ಮಾಡಲಾಗಿದೆ. ಒಕ್ಕಲಿಗರ ಕೋಟೆಗಳನ್ನು ಗೆಲ್ಲಲು ಬಿಜೆಪಿ (BJP) ಯ ಮುಂಚೂಣಿ, ಪ್ರಭಾವಿ ಒಕ್ಕಲಿಗ ನಾಯಕನಿಗೆ ಹೊಣೆ ಕೊಡುವ ಮೂಲಕ ಹೈಕಮಾಂಡ್ ಒಕ್ಕಲಿಗ ಪಾಲಿಟಿಕ್ಸ್‍ನ ದಾಳ ಉರುಳಿಸಿದೆ.

    ಕಳೆದ ವರ್ಷ ಜಿಲ್ಲಾ ಉಸ್ತುವಾರಿ ನೇಮಕ ವೇಳೆ ಮಂಡ್ಯ ಉಸ್ತುವಾರಿ ಬೇಡ ಅಂತ ಅಶೋಕ್ ಹೇಳಿದ್ರಂತೆ. ಕಾರಣ, ಬೆಂಗಳೂರು ಮೇಲೆ ಕಣ್ಣು ಹಾಕಿದ್ದರು ಅಶೋಕ್. ಆದರೆ ಯಾವ ಜಿಲ್ಲೆಯನ್ನೂ ಕೊಡದೇ ಅಶೋಕ್ ಗೆ ವರಿಷ್ಠರು ಶಾಕ್ ಕೊಟ್ಟಿದ್ದರು. ಇದರಿಂದ ಆರ್ ಅಶೋಕ್ ಗೆ ಆಗ ಮುಜುಗರವೂ ಆಗಿತ್ತು. ಆಗ ಮಂಡ್ಯ (mandya) ಬೇಡ ಅಂದಿದ್ದ ಹೈಕಮಾಂಡ್, ಈಗ ಅದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಿದೆ. ಮಂಡ್ಯದಲ್ಲಿ ಜೆಡಿಎಸ್ ಕೋಟೆಗಳನ್ನು ಭೇದಿಸುವ ಸವಾಲನ್ನು ಈಗ ಅಶೋಕ್ ಎದುರಿಸಲೇಬೇಕಾಗಿದೆ. ಅಶೋಕ್ ಅವರ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಗೆ ಹೈಕಮಾಂಡ್ ಬ್ರೇಕ್ ಈ ಮೂಲಕ ಬ್ರೇಕ್ ಹಾಕಿದೆ ಎನ್ನಲಾಗಿದೆ.

    ಈಗ ಸಚಿವ ಆರ್ ಅಶೋಕ್ ಗೆ ಜೆಡಿಎಸ್ ಭದ್ರಕೋಟೆಯಲ್ಲಿ ಹೆಚ್ಚು ಸೀಟು ಗೆಲ್ಲಿಸುವ ಸವಾಲೆದುರಾಗಿದೆ. ಜೊತೆಗೆ ಮಂಡ್ಯದಲ್ಲಿ ಆಪರೇಷನ್ ಕಮಲ ಸಕ್ಸಸ್ ಮಾಡುವ ಜವಾಬ್ದಾರಿಯೂ ಹೆಗಲಿಗೆ ಏರಿದೆ. ಕೈ-ತೆನೆ ಪಕ್ಷಗಳ ಪ್ರಭಾವಿಗಳನ್ನು ಪಕ್ಷಕ್ಕೆ ಕರೆತರುವ ಬಿಗ್ ಟಾಸ್ಕ್ ಅನ್ನು ಎಷ್ಟರ ಮಟ್ಟಿಗೆ ಅಶೋಕ್ ನಿಗಾವಹಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.

    ಪದ್ಮನಾಭನಗರ ಕ್ಷೇತ್ರದಲ್ಲೂ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡ್ಕೊಂಡ್ ಬರ್ತಿರೋ ಆರೋಪ ಆರ್ ಅಶೋಕ್ ಮೇಲಿದೆ. ಅತ್ತ ಮಂಡ್ಯದಲ್ಲೂ ಹೆಚ್ಚು ಸೀಟ್ ಗೆಲ್ಲಿಸಿ, ಸ್ವಕ್ಷೇತ್ರದಲ್ಲೂ ಭರ್ಜರಿ ಗೆಲುವು ಸಾಧಿಸುವ ಸವಾಲನ್ನು ಯಾವ ರೀತಿ ನಿಭಾಯಿಸುತ್ತಾರೋ ಅನ್ನುವ ಕುತೂಹಲವೂ ಮನೆ ಮಾಡಿದೆ. ಇದನ್ನೂ ಓದಿ: ಬಿಎಸ್‍ವೈ ಬರ್ತ್‍ಡೇಗೆ ಬರ್ತಾರಂತೆ ಮೋದಿ – ಭಾವನಾತ್ಮಕ ಯಾನ ತೆರೆದಿಡ್ತಾರಾ ರಾಜಾಹುಲಿ?

    ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿಗೆ ಬಂದರೆ ಪಕ್ಷದ ಬಲವೂ ಹೆಚ್ಚಾಗಲಿದೆ. ಹೀಗಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಮನವೊಲಿಸಿ ಪಕ್ಷಕ್ಕೆ ಕರೆತರುವ ಮಹತ್ತರ ಹೊಣೆಯನ್ನೂ ಆರ್.ಅಶೋಕ್ ಗೆ ವಹಿಸಲಾಗಿದೆಯಂತೆ. ಇದುವರೆಗೂ ಯಾವುದೇ ನಿರ್ಧಾರ ಕೈಗೊಳ್ಳದ ಸಂಸದೆ ಸುಮಲತಾ ಸಾಮ್ರಾಟನ ಎಂಟ್ರಿ ಬಳಿಕ ಬಿಜೆಪಿ ಸೇರುವ ನಿರ್ಧಾರ ಕೈಗೊಳ್ಳುತ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ಕೊಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕಿರಿಕ್ – ದಲಿತರ ಬಳಿಕ ಅಲ್ಪಸಂಖ್ಯಾತರಿಂದ ವಾರ್

    ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕಿರಿಕ್ – ದಲಿತರ ಬಳಿಕ ಅಲ್ಪಸಂಖ್ಯಾತರಿಂದ ವಾರ್

    ಕೋಲಾರ: ವಿಧಾನಸಭಾ ಕ್ಷೇತ್ರ (Kolar Vidhanasabha Constituency) ದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಘೋಷಣೆ ಬೆನ್ನಲ್ಲೆ ದಿನದಿಂದ ದಿನಕ್ಕೆ ಕೋಲಾರ ಕ್ಷೇತ್ರದ ರಾಜಕೀಯ ಚಿತ್ರವಣವೇ ಬದಲಾಗುತ್ತಿದೆ. ಯಾವ ಸಮುದಾಯ ನಮ್ಮ ಕಡೆ ಇರುತ್ತಾರೆ ಎಂದು ಸಿದ್ದರಾಮಯ್ಯ ನಂಬಿಕೊಂಡು ಬಂದಿದ್ದಾರೋ ಆ ಸಮುದಾಯವೇ ಈಗ ಕಾಂಗ್ರೇಸ್ ವಿರುದ್ಧ ತಿರುಗಿ ಬೀಳುತ್ತಿದೆ.

    ಸಿದ್ದರಾಮಯ್ಯ ಕೋಲಾರದ ಸ್ಪರ್ಧೆ ಹಿಂದೆ ಅವರದ್ದೇ ಆದ ಜಾತಿ ಲೆಕ್ಕಾಚಾರವಿತ್ತು. ಕಾರಣ ಕೋಲಾರದಲ್ಲಿ ಅಹಿಂದ ಮತಗಳು ಹೆಚ್ಚಾಗಿದ್ದು, ಅದರಲ್ಲಿ ಅರ್ಧ ಮತ ಸಿದ್ದು ಪರ ಚಲಾವಣೆಯಾದರೆ ಸಾಕು ಎಂಬ ಲೆಕ್ಕಾಚಾರ ಅವರಿಗಿತ್ತು. ಆದರೆ ಈಗ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿದೆ. ಮೊದಲು ಅವರದ್ದೇ ಸಮುದಾಯ ಜಿಲ್ಲಾ ಕುರುಬ ಸಂಘದಲ್ಲಿ ಭಿನ್ನಾಭಿಪ್ರಾಯ ಮೂಡಿ ಕುರುಬ ಸಂಘದ ಮುಖಂಡರೇ ಸಿದ್ದರಾಮಯ್ಯ ಕೋಲಾರಕ್ಕೆ ಬರಬಾರದು ಎಂದಿದ್ರು. ಆ ನಂತರ ದಲಿತ ಸಮುದಾಯದ ಕೆಲವು ದಲಿತ ಮುಖಂಡರು ಕರಪತ್ರಗಳನ್ನು ಹಂಚಿಕೆ ಮಾಡಿ ದಲಿತ ವಿರೋಧಿ ಸಿದ್ದರಾಮಯ್ಯರನ್ನು ಸೋಲಿಸಿ ದಲಿತ ನಾಯಕರಿಗೆ ಸಿಎಂ ಆಗುವ ಹಾದಿಯನ್ನು ಸುಗಮಗೊಳಿಸಿ ಎಂಬ ಕರಪತ್ರ ಹಂಚಿಕೆ ಮಾಡಿದರು.

    ಈ ಎಲ್ಲಾ ಬೆಳವಣಿಗೆಗಳ ಈ ಬೆನ್ನಲ್ಲೇ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ (Congress) ವಿರುದ್ಧ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಕಾಂಗ್ರೇಸ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಕೋಲಾರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಿಂದ ದೂರ ಉಳಿದ ಮುಖಂಡರು ಕಾಂಗ್ರೆಸ್ ಪಕ್ಷ ನಮಗೆ ಸ್ಥಾನ ಮಾನ ನೀಡದೆ ಹೋದರೆ ನಾವು ಬೇರೆಯ ನಿರ್ಧಾರಕ್ಕೆ ಚಿಂತಿಸುತ್ತೇವೆ ಎಂದಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಪ್ರಮುಖ ಹಿನ್ನಡೆ ಎಂದರೆ ತಪ್ಪಾಗೋದಿಲ್ಲ ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ. ಇದನ್ನೂ ಓದಿ: ಬಿಜೆಪಿಗೆ ಬೆಂಗಳೂರು ವರಿ; ಬೆಂಗಳೂರು ಬಾಸ್ ಯಾರು? ಪ್ರಧಾನಿ ನರೇಂದ್ರ ಮೋದಿಗೂ ತಳಮಳ

    ಪ್ರಜಾಧ್ವನಿ ಕಾರ್ಯಕ್ರಮದ ಹಿಂದಿನ ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar)ಮಾಲೂರಿನ ಲಕ್ಷ್ಮಿನಾರಾಯಣ್ ಅವರನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದೆ. ಇದರಿಂದ ಅಲ್ಪಸಂಖ್ಯಾತ ಮುಖಂಡ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮುಬಾರಕ್ ಪ್ರಜಾಧ್ವನಿ ಕಾರ್ಯಕ್ರಮದಿಂದ ದೂರ ಉಳಿದರು. ಇವರ ಜೊತೆಗೆ ಸುಮಾರು 12 ಜನ ನಗರಸಭೆ ಸದಸ್ಯರು ಹಾಗೂ ಕೆಲವು ಗ್ರಾಮಪಂಚಾಯತ್ ಮುಖಂಡರು ಸೇರಿ ಸಮುದಾಯದ ಹಲವು ಮುಖಂಡರು ಕಾರ್ಯಕ್ರಮದಿಂದ ದೂರ ಉಳಿದಿದರು.

    ಒಟ್ಟಿನಲ್ಲಿ ಅಹಿಂದ ಮತಗಳು ಹೆಚ್ಚಾಗಿವೆ ಅನ್ನೋ ಕಾರಣಕ್ಕೆ ಕೋಲಾರ ಕ್ಷೇತ್ರ ನಮಗೆ ಸೇಫ್ ಎಂದುಕೊಂಡು ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದ ಸಿದ್ದರಾಮಯ್ಯಗೆ ಈಗ ಅಹಿಂದ ಸಮುದಾಯವೇ ಉಲ್ಪಾ ಹೊಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಲೆಕ್ಕಾಚಾರಗಳು, ಸಮೀಕರಣಗಳೆಲ್ಲಾ ಉಲ್ಟಾ ಹೊಡೆಯುತ್ತಾ ಇಲ್ಲಾ, ಸ್ಪರ್ಧೆ ಮಾಡ್ತಾರಾ ಇಲ್ಲಾ ನಮಗ್ಯಾಕೆ ಈ ತಲೆನೋವು ಎಂದು ಯೂಟರ್ನ್ ಹೊಡೆಯುತ್ತಾರಾ ಅನ್ನೋದು ಸದ್ಯದ ಕುತೂಹಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಲಬುರಗಿಯಲ್ಲಿ ಜಂಪಿಂಗ್ ಪಾಲಿಟಿಕ್ಸ್ ಶುರು- ತೆನೆ ಇಳಿಸಿ ಕೈ ಹಿಡಿದ ರೇವು ನಾಯಕ್ ಬೆಳಮಗಿ

    ಕಲಬುರಗಿಯಲ್ಲಿ ಜಂಪಿಂಗ್ ಪಾಲಿಟಿಕ್ಸ್ ಶುರು- ತೆನೆ ಇಳಿಸಿ ಕೈ ಹಿಡಿದ ರೇವು ನಾಯಕ್ ಬೆಳಮಗಿ

    ಕಲಬುರಗಿ: 2023ರ ವಿಧಾನಸಭೆ ಚುನಾವಣೆ (Vidhanasabha Election 2023) ಹತ್ತಿರ ಆಗ್ತಿದ್ದಂಗೆ ಕಲಬುರಗಿಯಲ್ಲಿ ರಾಜಕೀಯ ಮೇಲಾಟಗಳು ಶುರುವಾಗಿವೆ. ರಾಜಕೀಯ ನಾಯಕರು, ಮುಖಂಡರು ತಮ್ಮ ರಾಜಕೀಯ ಭವಿಷ್ಯದ ಲೆಕ್ಕಾಚಾರ ಹಾಕಿಕೊಂಡು ಜಂಪಿಂಗ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ.

    ಬಿಎಸ್‍ವೈ (BS Yediyurappa) ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪಶುಸಂಗೋಪನೆ ಸಚಿವರಾಗಿದ್ದ ರೇವುನಾಯಕ್ ಬೆಳಮಗಿ, ಬಿಜೆಪಿ ಕೈಕೊಟ್ಟಿರೋದ್ರಿಂದ ಜೆಡಿಎಸ್ (JDS) ತೆನೆ ಹೊತ್ತಿದ್ದರು. ಇದೀಗ ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ ಅಂತಾ ಅರಿತು ರೇವು ನಾಯಕ್ ಬೆಳಮಗಿ (Revu Naik Belamgi) ಕಾಂಗ್ರೆಸ್ (Congress) ನತ್ತ ಮುಖ ಮಾಡಿ ಕೈವಶ ಆಗಿದ್ದಾರೆ. ಇದನ್ನೂ ಓದಿ: ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೆಜಿಎಫ್ ಗತ ವೈಭವ: ಹೆಚ್‌ಡಿಕೆ ಘೋಷಣೆ

    ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Eshwar Khandre), ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ನೇತೃತ್ವದಲ್ಲಿ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಮಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾತನಾಡಿದ ರೇವು ನಾಯಕ್ ಬೆಳಮಗಿ, ಟಿಕೆಟ್ ಸಿಗುವ ಭರವಸೆ ವ್ಯಕ್ತಪಡಿಸಿದ್ರು. ಜೆಡಿಎಸ್ ಮತ್ತು ಬಿಜೆಪಿಯ ಹಲವು ಮುಖಂಡರು ಕೈಗೆ ಜೈ ಎಂದಿದ್ದಾರೆ.

    ಚಿಂಚೋಳಿ ಕ್ಷೇತ್ರದ ಬಿಜೆಪಿ ಮುಖಂಡ ಬಾಬುರಾವ್ ಪಾಟೀಲ್ ಚಿಂಚೋಳಿ ಕಮಲ ಬಿಸಾಕಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅಲ್ಲದೆ ಎಎಮ್ ಐಎಮ್ ಪಕ್ಷದ ಮುಖಂಡ ಮೋದಿನ್ ಪಟೇಲ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಯಾವತ್ತು ಕೂಡ ಸತ್ಯ ಒಪ್ಪಿಕೊಳ್ಳಲ್ಲ : ಆರಗ ಜ್ಞಾನೇಂದ್ರ

    Live Tv
    [brid partner=56869869 player=32851 video=960834 autoplay=true]

  • ಚಿಲುಮೆ ಬಳಿಕ ಧಾರವಾಡದಲ್ಲೂ ವೋಟರ್ ಸ್ಕ್ಯಾಮ್- ಮತದಾರರ ಕ್ಷೇತ್ರ ವರ್ಗಾವಣೆ ಆರೋಪ

    ಚಿಲುಮೆ ಬಳಿಕ ಧಾರವಾಡದಲ್ಲೂ ವೋಟರ್ ಸ್ಕ್ಯಾಮ್- ಮತದಾರರ ಕ್ಷೇತ್ರ ವರ್ಗಾವಣೆ ಆರೋಪ

    ಧಾರವಾಡ: ಬೆಂಗಳೂರಿನಲ್ಲಿ ಕಾಂಗ್ರೆಸ್ (Congress) ನಾಯಕರು ಚಿಲುಮೆ ಸಂಸ್ಥೆಯ ಮೇಲೆ ಮತದಾರರ ಪಟ್ಟಿಯಲ್ಲಿ ಗೋಲ್‍ಮಾಲ್ ಮಾಡಿದ ಆರೋಪದ ಬೆನ್ನಲ್ಲೇ, ಧಾರವಾಡ ಜಿಲ್ಲೆಯಲ್ಲಿ ಕೂಡಾ ಇದೇ ರೀತಿ ಗೋಲ್‍ಮಾಲ್ ನಡೆದ ಆರೋಪ ಕೇಳಿ ಬಂದಿದೆ.

    ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಇರುವ ಅಲ್ಪಸಂಖ್ಯಾತ ಮತದಾರರನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಆರೋಪ ಮಾಡಿದ್ದು, ಪಾಲಿಕೆಯ ಹಲವು ವಾರ್ಡ್ ಗಳಲ್ಲಿ ಈ ರೀತಿಯ ಮತದಾರರ ಪಟ್ಟಿಯಿಂದ ಹೆಸರು ಗಾಯಬ್ ಮಾಡಲಾಗಿದೆ ಎಂದಿದ್ದಾರೆ. ಈ ಕ್ಷೇತ್ರದ ವಾರ್ಡ್ ನಂಬರ್ 14, 16 ಹಾಗೂ 22ರಲ್ಲಿ ಬೇರೆ ಕಡೆ ಮತದಾರರನ್ನ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಧಾರವಾಡ ನಗರದ ಪಿಜಿಯಲ್ಲಿ ಇರುವ ಬೇರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹಾಕುವ ಕೆಲಸ ನಡೆದಿದೆ ಆರೋಪಿಸ್ತಿದ್ದಾರೆ.

    ಮತ್ತೊಂದು ಕಡೆ ಈ ಮತದಾರರ ಪಟ್ಟಿ ಹಿಡಿದು ಮನೆಗೆ ಬರುವ ಕೆಲವರು, ಯಾರಿಗೆ ಮತ ಹಾಕ್ತಾರೆ ಎಂದು ಕೇಳ್ತಾರಂತೆ. ಅವರು ಕಾಂಗ್ರೆಸ್‍ಗೆ ಮತ ಹಾಕ್ತೇವೆ ಎಂದ್ರೆ ಆ ಮತದಾರನ್ನ ಪಟ್ಟಿಯಿಂದ ಡಿಲೀಟ್ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆರೋಪಿಸಿದ್ದಾರೆ. ‌ ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ

    ಪಾಲಿಕೆ ಚುನಾವಣೆಯಲ್ಲಿ ಇದೇ ರೀತಿ ಮಾಡಿ ಬಿಜೆಪಿ ಪಶ್ಚಿಮ ಕ್ಷೇತ್ರದ ನಾಲ್ಕು ವಾರ್ಡ್ ಗೆದ್ದಿದೆ, 80 ಬೂತ್‍ಗಳಲ್ಲಿ ಮತದಾರರನ್ನ ಡಿಲೀಟ್ ಮಾಡುವ ಕೆಲಸ ನಡೆದಿದೆ. ಇದರ ಹಿಂದೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್‌ (Aravind Bellad) ಕೈವಾಡ ಇದೆ ಎಂದು ಆರೋಪಿಸಲಾಗ್ತಿದೆ.

    ಒಟ್ಟಿನಲ್ಲಿ ಬೆಂಗಳೂರಿನ ನಂತರ ಅವಳಿ ನಗರವಾದ ಧಾರವಾಡದಲ್ಲೂ ಮತಪಟ್ಟಿ ಗೋಲ್ಮಾಲ್ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪಾಲಿಕೆ ಆಯುಕ್ತರು ಅಥವಾ ಚುನಾವಣಾ ಆಯೋಗವೇ ಸತ್ಯ ಹೇಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಚನ್ನಪಟ್ಟಣದಲ್ಲಿ HDK V/s CPY- ಕ್ರೆಡಿಟ್ ವಾರ್‌ನಿಂದ ಕಾಮಗಾರಿ ಕುಂಠಿತ

    ಚನ್ನಪಟ್ಟಣದಲ್ಲಿ HDK V/s CPY- ಕ್ರೆಡಿಟ್ ವಾರ್‌ನಿಂದ ಕಾಮಗಾರಿ ಕುಂಠಿತ

    ರಾಮನಗರ: ವಿಧಾನಸಭಾ ಚುನಾವಣೆ (Vidhanasabha Election) ಸಮೀಪ ಹಿನ್ನೆಲೆ ಗೊಂಬೆನಾಡು ಚನ್ನಪಟ್ಟಣದಲ್ಲಿ ಇದೀಗ ರಾಜಕೀಯ ಜಟಾಪಟಿ ಉಂಟಾಗಿದೆ. ಹಾಲಿ ಮತ್ತು ಮಾಜಿ ಶಾಸಕರ ಕ್ರೆಡಿಟ್ ವಾರ್ ನಿಂದಾಗಿ ಕ್ಷೇತ್ರದ ಬಹುತೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ರಸ್ತೆ ಕಾಮಗಾರಿ ಆರಂಭವಾಗದೇ ಸಾರ್ವಜನಿಕರು ಹೈರಾಣಾಗಿದ್ದು ಜನಪ್ರತಿನಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ.

    ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇವೆ. ಬೊಂಬೆನಗರಿ ಚನ್ನಪಟ್ಟಣದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ರಸ್ತೆ ಕಾಮಗಾರಿ ವಿಚಾರದಲ್ಲೂ ರಾಜಕೀಯ ಜಟಾಪಟಿ ಏರ್ಪಟ್ಟಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ನಡುವಿನ ಈ ಜಟಾಪಟಿಯಲ್ಲಿ ಹಲವು ಕಾಮಗಾರಿಗಳು ಆರಂಭವಾಗದೇ ನೆನೆಗುದಿಗೆ ಬಿದ್ದಿವೆ. ರಸ್ತೆ ತುಂಬೆಲ್ಲಾ ಗುಂಡಿಗಳು ರಾರಾಜಿಸುತ್ತಿದ್ದು, ವಾಹನ ಚಲಾಯಿಸಲು ಸವಾರರು ಹರಸಾಹಸ ಪಡ್ತಿದ್ದಾರೆ. ಗುಂಡಿ ರಸ್ತೆಗಳಿಗೆ ಬಿದ್ದು ಜನ ಗಾಯಕ್ಕೊಳಗಾಗ್ತಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದಿಂದ ಕಣ್ವ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬೆಲ್ಲ ಸಾಲು ಸಾಲು ಗುಂಡಿಗಳು ಬಿದ್ದಿವೆ. ಸಾಕಷ್ಟು ಜನ ಗುಂಡಿ ತಪ್ಪಿಸಲು ಹೋಗಿ ಆಯಾತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಹದಗೆಟ್ಟು ಐದು ವರ್ಷಗಳೇ ಕಳೆದಿವೆ. ಇದನ್ನೂ ಓದಿ: ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

    ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ ಅನುದಾನ ಸಹಾ ಬಿಡುಗಡೆಯಾಗಿದೆ. ಆದರೆ ಚನ್ನಪಟ್ಟಣ ತಾಲೂಕಿನಲ್ಲಿ ಪ್ರತಿಯೊಂದು ಕಾಮಗಾರಿ ವಿಚಾರವಾಗಿ ಮಾಜಿ ಸಿಎಂ ಎಚ್?.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟು ಕಾಮಗಾರಿಗಳು ನಡೆಯುತ್ತಿಲ್ಲ. ಇಬ್ಬರು ನಾಯಕರ ಜಟಾಪಟಿಯಿಂದಾಗಿ ಜನಸಾಮಾನ್ಯರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

    ಒಟ್ಟಾರೆ ರಾಜಕೀಯ ಮೇಲಾಟಕ್ಕೆ ಬೊಂಬೆನಾಡು ಚನ್ನಪಟ್ಟಣ ಬಡವಾಗ್ತಿದೆ. ನಾಯಕರ ಕ್ರೆಡಿಟ್ ವಾರ್ ಹಲವು ಕಾಮಗಾರಿಗೆ ವಿಘ್ನವನ್ನ ಉಂಟುಮಾಡಿದೆ. ಇದರಿಂದ ಜನಸಾಮಾನ್ಯರು ಮಾತ್ರ ನರಕಯಾತನೆ ಅನುಭಿಸುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ತಮ್ಮ ರಾಜಕೀಯ ಬದಿಗಿಟ್ಟು ಸಮಸ್ಯೆ ಸರಿಪಡಿಸುವತ್ತ ಗಮನಹರಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕ್ಷೇತ್ರ ಆಯ್ಕೆ ಬೆನ್ನಲ್ಲೇ ಹೆಚ್ಚಾಯ್ತು ಸಂಕಷ್ಟ- ಸಿದ್ದು ಸೋಲಿಸಲು ಸ್ವಪಕ್ಷ ಸೇರಿ ವಿಪಕ್ಷಗಳ ಪ್ಲಾನ್

    ಕ್ಷೇತ್ರ ಆಯ್ಕೆ ಬೆನ್ನಲ್ಲೇ ಹೆಚ್ಚಾಯ್ತು ಸಂಕಷ್ಟ- ಸಿದ್ದು ಸೋಲಿಸಲು ಸ್ವಪಕ್ಷ ಸೇರಿ ವಿಪಕ್ಷಗಳ ಪ್ಲಾನ್

    ಕೋಲಾರ: ಮುಂದಿನ ವಿಧಾನಸಭಾ ಚುನಾವಣೆ (Vidhanasabha Election) ಗೆ ಸಿದ್ದರಾಮಯ್ಯ ಕೋಲಾರ (Kolar) ಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ಈವರೆಗೂ ಖಚಿತ ಪಡಿಸಿಲ್ಲ. ಕ್ಷೇತ್ರದಲ್ಲಿ ನಾಡಿಮಿಡಿತ ಅರಿಯುವುದಕ್ಕೆ ಬಂದ ಸಿದ್ದರಾಮಯ್ಯ ಭೇಟಿ ಕೊಲಾರ ಕ್ಷೇತ್ರದಲ್ಲಿ ಸಂಚಲನ, ವಿರೋಧಿ ನಾಯಕರಿಗೆ ತಳಮಳ ಆರಂಭವಾಗಿದೆ.

    ಹೌದು, ರಾಜ್ಯದಲ್ಲಿ ಈಗ ಚುನಾವಣೆ ಹತ್ತಿರವಾಗುತ್ತಿದ್ದು ದಿನೇದಿನೇ ಚರ್ಚೆಗಳು ಗರಿಗೆದರುತ್ತಿವೆ. ಅದರಲ್ಲೂ ಚಿನ್ನದ ನಾಡು ಕೋಲಾರದ ಜಿಲ್ಲಾ ಕೇಂದ್ರ ಕೋಲಾರ ಈಗ ಸಾಕಷ್ಟು ಗಮನಸೆಳೆಯುತ್ತಿದೆ. ಕಾರಣ ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಾರೆ ಎನ್ನೋದು. ಸ್ಪರ್ದೆಯನ್ನು ಈವರೆಗೂ ಖಚಿತಪಡಿಸದ ಸಿದ್ದು ಸಂಪೂರ್ಣವಾಗಿ ತಳ್ಳಿಯೂ ಹಾಕಿಲ್ಲ. ನಿನ್ನೆ ಕೋಲಾರ (Kolar) ಕ್ಕೆ ಬಂದಾಗಲೂ ಸಹ ಸ್ಪರ್ದೆ ಖಚಿತ ಪಡಿಸಿಲ್ಲ. ಆದ್ರೆ ಈಗಾಗಲೆ ವಿರೋಧಿಗಳ ಪಾಳಯದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಪ್ರತಿಕ್ರಿಯೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಇಲ್ಲಿಗೆ ಬಂದರೆ ಸೋಲಿಸುತ್ತೇವೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ.

    ಕ್ಷೇತ್ರದಲ್ಲಿ ಈಗಾಗಲೆ ಎರಡು ಬಾರಿ ಪಕ್ಷೇತರ ಶಾಸಕರಾಗಿದ್ದ ವರ್ತೂರು ಪ್ರಕಾಶ್ (Varthur Prakash) ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಲು ಆರಂಭಿಸಿದ್ದಾರೆ. ತಮ್ಮದೇ ಕಾರ್ಯಕರ್ತರ ಪಡೆ ಹೊಂದಿರುವ ವರ್ತೂರು ಪ್ರಕಾಶ್‍ಗೆ ಈ ಬಾರಿ ಬಿಜೆಪಿ (BJP) ಕಾರ್ಯಕರ್ತರ ಸೇರ್ಪಡೆಯಾಗಲಿದೆ, ಹಾಗಾಗಿ ಹೊಸ ಹುರೂಪಿನಲ್ಲಿಯೇ ಓಡಾಡುತ್ತಿರುವ ವರ್ತೂರು ಸಮೂದಾಯಗಳ ಮತಗಳನ್ನು ಪಡೆಯಲು ಕಸರತ್ತು ಆರಂಭಿಸಿ ಆಗಿದೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ ಅಧಿಕೃತ ಘೋಷಣೆ

    ಕೋಲಾರ ಕಾಂಗ್ರೆಸ್‍ನಲ್ಲಿ ಎರಡು ಬಣಗಳಿರೋದು ಈಗಾಗಲೆ ಜಗಜ್ಜಾಹೀರು. ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕರಾದ ಮುನಿಯಪ್ಪ (Muniyappa) ಮತ್ತು ರಮೇಶ್ ಕುಮಾರ್ (Ramesh Kumar) ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಗುಂಪುಗಾರಿಕೆಯನ್ನ ಸರಿ ಮಾಡದಿದ್ದರೆ ಸಿದ್ದರಾಮಯ್ಯಗೆ ಮುಳುವಾಗುವ ಸಾಧ್ಯತೆ ಇದೆ.

    ಸದ್ಯ ಕೋಲಾರ ಕ್ಷೇತ್ರದಲ್ಲಿ ಮಿಂಚಿನ ಸಂಚಾರದಿಂದಾಗಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದಾರೆ. ಸ್ವಜಾತಿಯ ನಾಯಕನ ಪ್ರಬಲ ಪೈಪೋಟಿ, ಕಾಂಗ್ರೆಸ್‍ನ ಹಿರಿಯರಿಬ್ಬರ ಮುಸುಕಿನ ಗುದ್ದಾಟ ಸಿದ್ದುಗೆ ಗುದ್ದಾಗಿ ಪರಿಣಮಿಸಲಿದ್ದು, ಬಿಜೆಪಿ, ಜೆಡಿಎಸ್ ಭಯ ಕೂಡ ಕಾಡುತ್ತಿರೋದು ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]