Tag: Vidhanasabha election

  • ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ಅರುಣಾಚಲಪ್ರದೇಶ, ಬಿಜೆಪಿಗೆ ಐತಿಹಾಸಿಕ ದಿನ: ಪೆಮಾ ಖಂಡು

    ಇಟಾನಗರ: ಅರುಣಾಚಲ ಪ್ರದೇಶಕ್ಕೆ, ಅದರಲ್ಲೂ ಬಿಜೆಪಿಗೆ (BJP) ಇಂದು ಐತಿಹಾಸಿಕ ದಿನ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ ಎಂದು ಸಿಎಂ ಪೆಮಾ (Pema Khandu) ಖಂಡು ಹೇಳಿದ್ದಾರೆ.

    ಅರುಣಾಚಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೊಸ ದಾಖಲೆ ನಿರ್ಮಿಸಿದೆ.  2019 ರಲ್ಲಿ ನಾವು 41 ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿ ನಾವು 46 ಸ್ಥಾನಗಳನ್ನು ಗೆದ್ದಿದ್ದೇವೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದೇವೆ ಎಂದು ತಿಳಿಸಿದರು.

    ಜೂನ್ 4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಈ ವೇಳೆ ಗೆಲ್ಲುವ ಎಲ್ಲಾ ಅಭ್ಯರ್ಥಿಗಳು ಇಟಾನಗರಕ್ಕೆ ಆಗಮಿಸುತ್ತಾರೆ. ದೆಹಲಿಯ ಹಿರಿಯ ನಾಯಕರು ಕೂಡ ಬರಬಹುದು. ಪಕ್ಷದ ಔಪಚಾರಿಕತೆಯ ನಂತರ ನಾವು ಹೊಸ ಸರ್ಕಾರ ರಚಿಸಲು ನಮ್ಮ ಹಕ್ಕು ಮಂಡಿಸುತ್ತೇವೆ ಎಂದರು.

    ಒಟ್ಟಿನಲ್ಲಿ ರಾಜ್ಯದ ಎರಡೂ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ನಮಗೆ ಖಚಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಇಟಿ ಫಲಿತಾಂಶ ದಿಢೀರ್‌ ಪ್ರಕಟ: ಸ್ಪಷ್ಟನೆ ನೀಡಿದ ಕೆಇಎ

    ಬಿಜೆಪಿಯು ಅರುಣಾಚಲ ಪ್ರದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, 60 ಸದಸ್ಯರ ವಿಧಾನಸಭೆಯಲ್ಲಿ 46 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಬಹುಮತವನ್ನು ಪಡೆದುಕೊಂಡಿತು. ಏಪ್ರಿಲ್ 19 ರಂದು ಈಶಾನ್ಯ ರಾಜ್ಯದಲ್ಲಿ ಚುನಾವಣೆ ನಡೆದ 50 ಸ್ಥಾನಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಉಳಿದ 10 ಸ್ಥಾನಗಳನ್ನು ಬಿಜೆಪಿಯು  ಅವಿರೋಧವಾಗಿ ಗೆದ್ದಿದೆ. 50 ಸ್ಥಾನಗಳ ಪೈಕಿ ಬಿಜೆಪಿ 36 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ.

  • ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ: ರಾಜೂ ಗೌಡ

    ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ: ರಾಜೂ ಗೌಡ

    ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡ ಬಿರುಸುಗೊಂಡಿದೆ. ಕೈ- ಕಮಲ ಅಭ್ಯರ್ಥಿಗಳಿಂದ ಭರ್ಜರಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಅಂತೆಯೇ ಬಿಜೆಪಿ ಅಭ್ಯರ್ಥಿ ರಾಜೂ ಗೌಡ ಅವರು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿ ಮತಯಾಚನೆ ಮಾಡಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ, ತಂದೆಯೂ ಇಲ್ಲ. ನನ್ನ ಪಾಲಿಗೆ ಕಾರ್ಯಕರ್ತರೇ ತಂದೆ-ತಾಯಂದಿರು, ನೀವೇ ಆಶೀರ್ವಾದ ಮಾಡಬೇಕು. ಎಲ್ಲರೂ ಆಶೀರ್ವಾದ ಮಾಡಬೇಕೆಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

    ನನ್ನ ತಾಯಿಯನ್ನ ಕಳೆದುಕೊಂಡಾಗ ನಾನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಾಯಿಯನ್ನ ಕಳೆದುಕೊಂಡಾಗಲೂ ಕೆಲಸ ನಿಲ್ಲಿಸಿಲ್ಲ. ಕೊರೋನಾ ಸಂದರ್ಭದಲ್ಲಿ ನಿಮ್ಮನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು!

    ರಾಜಾ ವೆಂಕಟಪ್ಪ ನಿಧನದಿಂದ ತೆರವಾಗಿದ್ದ ಸುರುಪುರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಮೇ. 7 ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ರಾಜೂ ಗೌಡ ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕರಿಗೆ ಟಿಕೆಟ್‌ ಕೊಟ್ಟಿದೆ.

  • ಹೆಗಡೆ ಮುಂದೆ ಅಸಮಾಧಾನ ಹೊರಹಾಕಿದ ಶಾಸಕಿ ರೂಪಾಲಿ ನಾಯ್ಕ!

    ಕಾರವಾರ : ನಾನು ಸೋತಿದ್ದಕ್ಕೆ ನೋವಾಗಲಿಲ್ಲ, ಅನಂತಕುಮಾರ್ ಹೆಗಡೆ (Anant Kumar Hegde) ಪ್ರಚಾರಕ್ಕೆ ಬಾರದೇ ಇರುವುದಕ್ಕೆ ನೋವಾಗಿದೆ ಎಂದು ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ (Rupali Naik) ಅವರು ಸಂಸದರ ವಿರುದ್ಧ ‌ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

    ಇಂದು ಕಾರವಾರದ ಬಿಜೆಪಿ (BJP) ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ವೇಳೆ ಒಂದು ಬಾರಿ ಸಂಸದರು ಬಂದು ಹೋಗಿದ್ರೆ ಕಾರವಾರದಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಈ ಮಾತನ್ನ ನಾನು ಹೇಳುತ್ತಿಲ್ಲ ಇಡೀ ಕಾರವಾರದ ಜನ ಹೇಳುತ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಹಿಂದೆ ಅವರದ್ದೇ ಆದ ಕಾರ್ಯಕರ್ತರ ಪಡೆ ಇದೆ ಎಂದರು.

    ವಿಧಾನಸಭಾ ಚುನಾವಣೆಯ (Vidhana Sabha Election) ಸಂದರ್ಭದಲ್ಲಿ ಸಂಸದರು ಪ್ರಚಾರಕ್ಕೆ ಬರದಿದ್ದರಿಂದ ನಮಗೆ ಹಿನ್ನಡೆ ಆಯ್ತು. ಈಗಲಾದರೂ ನಮ್ಮ ಪಕ್ಷದ ಕಚೇರಿ ಬಂದು ಕಾರ್ಯಕರ್ತರ ಸಭೆಗೆ ಕರೆದಿದ್ದಕ್ಕೆ ಅಭಿನಂದನೆ ಎಂದರು. ಇದನ್ನೂ ಓದಿ: ದೇಶದ ನೀತಿ, ನಿಯತ್ತನ್ನ‌ ಕುಲಗೆಡಿಸಿದ್ದೇ ಕಾಂಗ್ರೆಸ್ – ನಾನು ಇರೋವರೆಗೆ ಅವ್ರಿಗೆ ನೆಮ್ಮದಿ ಕೊಡಲ್ಲ: ಅನಂತಕುಮಾರ್

    ಅನಂತಕುಮಾರ್ ಹೆಗಡೆ ಸಕ್ರಿಯರಾಗಿದ್ದಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಆದರೆ ಈಗ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಆಕಾಂಕ್ಷಿ ಅಲ್ಲ. ನಾನು ಯಾವತ್ತೂ ಅನಂತ ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ. ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿರುವುದು ಖುಷಿ ಆಗಿದೆ ಎಂದರು.

  • ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ: ಪ್ರದೀಪ್ ಈಶ್ವರ್ ವಿಶ್ವಾಸ

    ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ: ಪ್ರದೀಪ್ ಈಶ್ವರ್ ವಿಶ್ವಾಸ

    ಹೈದರಾಬಾದ್: ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ.

    ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಶಾಸಕರು ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ನಮ್ಮ ಕರ್ನಾಟಕದ ಗ್ಯಾರಂಟಿ ಸಕ್ಸಸ್ ಆಗಿದೆ ಇಲ್ಲಿ ಇನ್ಸ್ ಪೇರಷನ್ ಆಗಿ ತಗೊಂಡಿದ್ದಾರೆ. ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ. ಗ್ಯಾರಂಟಿಗಳನ್ನ ಟೀಕೆ ಮಾಡ್ತಾ ಇರೋದು ಕೆಸಿಆರ್ ಮತ್ತೆ ಅವರ ಬಂಧು ಪ್ರಭಾಕರ್ ರೆಡ್ಡಿ (Prabhakar Reddy) ಅಷ್ಟೇ ಬೇರೆ ಯಾರು ಮಾಡ್ತಿಲ್ಲ ಎಂದು ಶಾಸಕರು ವಾಗ್ದಾಳಿ ನಡೆಸಿದರು.

    10 ವರ್ಷದಲ್ಲಿ ಬಿಆರ್‍ಎಸ್ ಪಕ್ಷದ ದುರಾಡಳಿತವನ್ನ ಜನ ನೋಡಿದ್ದಾರೆ. 70ಕ್ಕೂ ಹೆಚ್ಚು ಕಾಂಗ್ರೆಸ್ (Congress) ಸೀಟ್ ತೆಲಂಗಾಣದಲ್ಲಿ ಗೆಲ್ಲುತ್ತವೆ. ಈ ಹಿಂದೆ ವೈಎಸ್ ರಾಜ್ ಶೇಖರ್ ರೆಡ್ಡಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಅದು ನಮ್ಮ ಕೈ ಹಿಡಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ – ಫೈಟ್‌ ನೀಡುತ್ತಿದೆ ಕಾಂಗ್ರೆಸ್‌

    ಇದೇ ವೇಳೆ ಕಡಿಮೆ ಸೀಟ್ ಬಂದರೆ ಆಪರೇಷನ್ ಹಸ್ತ ಜೋರಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಚಿಕ್ಕವನು ಇನ್ನೂ ಅದರ ಬಗ್ಗೆ ಗೊತ್ತಿಲ್ಲ. ರೈತ ಬಂಧು ಫೇಲ್ಯೂರ್ ಆಗಿದೆ. 8 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದು ಬಿಎಆರ್ ಎಸ್ ಸೋಲೋಕೆ ಕಾರಣ ಎಂದು ತಿಳಿಸಿದರು.

  • ಬಿಜೆಪಿ ಸರ್ಕಾರವಿರೋ ಮಧ್ಯಪ್ರದೇಶದಲ್ಲಿ ಈ ಬಾರಿಗೆ ಗೆಲುವು ಯಾರಿಗೆ?

    ಬಿಜೆಪಿ ಸರ್ಕಾರವಿರೋ ಮಧ್ಯಪ್ರದೇಶದಲ್ಲಿ ಈ ಬಾರಿಗೆ ಗೆಲುವು ಯಾರಿಗೆ?

    ಭೋಪಾಲ್: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಭಾರೀ ಕುತೂಹಲ ಹುಟ್ಟಿಸಿದೆ. ಮಧ್ಯಪ್ರದೇಶದಲ್ಲಿ (Madhyapradesh Election Result) ಸದ್ಯ ಬಿಜೆಪಿ (BJP) ಸರ್ಕಾರವಿದ್ದು, ಬಹುತೇಕ ಸಮೀಕ್ಷೆಗಳು ನೆಕ್ ಟು ನೆಕ್ ಫೈಟ್ ಇದೆ ಎಂದಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

    ನವೆಂಬರ್ 17ರಂದು ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶ ಚುನಾವಣಾ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ಮತದಾನ ಅಂದ್ರೆ 77.1%ರಷ್ಟು ವೋಟಿಂಗ್ ನಮೂದಾಗಿತ್ತು. ಕಳೆದ ಬಾರಿ ಇಲ್ಲಿ ಗರಿಷ್ಠ ಸೀಟ್ ಗೆದ್ದು ಬಿಎಸ್‍ಪಿ ಶಾಸಕರ ನೆರವಿನಿಂದ ಇಲ್ಲಿ ಕಮಲ್‍ನಾಥ್ (Kamalnath) ಸರ್ಕಾರ ಮಾಡಿದ್ರು. ಆದರೆ ಬಿಜೆಪಿ ಆಪರೇಷನ್ ಕಮಲ ನಡೆಸಿದ ಕಾರಣ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮತ್ತೆ ಸಿಎಂ ಆದ್ರು. ಇಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ (Congress-BJP) ನಡ್ವೆ ಟಫ್ ಫೈಟ್ ನಡೆದಿದೆ.

    ಅಧಿಕಾರ ಉಳಿಸಿಕೊಳ್ಳೋ ಸಲುವಾಗಿ ಬಿಜೆಪಿ ಸೀಟ್ ಹಂಚಿಕೆಯಲ್ಲಿ ಹೊಸ ತಂತ್ರ ಅನುಸರಿಸಿತ್ತು. ಕೇಂದ್ರ ಸಚಿವರು ಸೇರಿ ಏಳು ಮಂದಿಗೆ ಟಿಕೆಟ್ ಹಂಚಿತ್ತು. ಸಿಎಂ ಶಿವರಾಜ್‍ಸಿಂಗ್ ಚೌಹಾಣ್‍ರನ್ನು ಹೈಕಮಾಂಡ್ ಒಂದರ್ಥದಲ್ಲಿ ಹೆಚ್ಚು ಕಡಿಮೆ ಕಡೆಗಣಿಸಿತ್ತು. ಆದರೆ ಕಾಂಗ್ರೆಸ್ ಮಾತ್ರ ಮತ್ತೆ ಕಮಲ್‍ನಾಥ್ ನಾಯಕತ್ವದಲ್ಲೇ ಚುನಾವಣೆ ಎದುರಿಸಿತ್ತು. ಇದನ್ನೂ ಓದಿ: ಕೈ ಗ್ಯಾರಂಟಿಯೋ – ಮೋದಿ ಜನಪ್ರಿಯತೆಯೋ; ಇಂದು 4 ರಾಜ್ಯಗಳ ಚುನಾವಣಾ ಫಲಿತಾಂಶ – ಯಾರಿಗೆ ಎಲ್ಲಿ ಸಿಗುತ್ತೆ ಅಧಿಕಾರದ ಚುಕ್ಕಾಣಿ?

  • ರಾಜಸ್ಥಾನಕ್ಕೆ ಕಿಂಗ್ ಮೇಕರ್ ಆಗ್ತಾರಾ ಡಿಕೆ ಶಿವಕುಮಾರ್?

    ರಾಜಸ್ಥಾನಕ್ಕೆ ಕಿಂಗ್ ಮೇಕರ್ ಆಗ್ತಾರಾ ಡಿಕೆ ಶಿವಕುಮಾರ್?

    ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಗುಜರಾತ್ ಕಾಂಗ್ರೆಸ್ (Gujrt Congress) ಪಾಲಿಗೆ ಅಂದು ಡಿಕೆ ಶಿವಕುಮಾರ್ (DK Shivakumar) ಅವರೇ ಟ್ರಬಲ್ ಶೂಟರ್ ಆಗಿದ್ದರು. ಈಗ ರಾಜಸ್ಥಾನ ಕಾಂಗ್ರೆಸ್ ಪಾಲಿಗೆ ಡಿಕೆಶಿ ಮತ್ತೆ ಕಿಂಗ್ ಮೇಕರ್ ಆಗ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಅಂದು ಪಕ್ಷಕ್ಕಾಗಿ ರಿಸ್ಕ್ ತೆಗೆದುಕೊಂಡಿದ್ದ ಡಿಕೆಶಿ ಇಂದು ಪಕ್ಷಕ್ಕಾಗಿ ರಿಸ್ಕ್ ತೆಗೆದುಕೊಳ್ತಾರಾ..? ಅಂದು ರಾಜ್ಯಸಭೆ ಚುನಾವಣೆ ಗೆಲ್ಲುವ ಲೆಕ್ಕಾಚಾರ, ಇಂದು ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಲೆಕ್ಕಾಚಾರ. ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು – ಇದು ಟುಡೇಸ್‌ ಚಾಣಕ್ಯ ಭವಿಷ್ಯ

    ರಾಜಸ್ಥಾನದಲ್ಲಿ (Rajasthan) ಆಡಳಿತ ರೂಢ ಪಕ್ಷವಾಗಿ ಕಾಂಗ್ರೆಸ್ ಈಗ ಅಧಿಕಾರದಲ್ಲಿ ಇದೆ. ಆದರೆ ಚುನಾವಣಾ ಫಲಿತಾಂಶ ಅತಂತ್ರ ಅಥವಾ ಬೇರೆ ಯಾವುದೇ ಗೊಂದಲದ ಫಲಿತಾಂಶಕ್ಕೆ ಕಾರಣವಾದರೆ ಶಾಸಕರ ಶಿಫ್ಟ್ ಸಹಾ ನಡೆಯಬಹುದು ಎನ್ನಲಾಗುತ್ತಿದೆ. ಅಂತಹ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸೇಫ್ ಎನ್ನಲಾಗ್ತಿದೆ. ಇದನ್ನೂ ಓದಿ: ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ

    ಅಂದು ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಇದ್ರೂ ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಮಣೆ ಹಾಕಿತ್ತು. ಈಗಲೂ ಅಂಥದ್ದೇ ಪರಿಸ್ಥಿತಿ ಬಂದ್ರೆ ಡಿಕೆಶಿ ಸಹಾಯ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದು ಕಾಂಗ್ರೆಸ್ ಹೈಕಮಾಂಡ್ ನೆರವಿಗೆ ಬಂದ ಡಿಕೆಶಿ ಐಟಿ ದಾಳಿ ಎದುರಿಸುವಂತಾಗಿತ್ತು. ಇಂದು ಐಟಿ, ಇಡಿ, ಸಿಬಿಐ ಸಂಕಷ್ಟ ಎದುರಿಸುತ್ತಿರುವ ಡಿಕೆಶಿ ಅನಿವಾರ್ಯವಾದ್ರೆ ರಾಜಸ್ಥಾನ ಕಾಂಗ್ರೆಸ್ ನೆರವಿಗೆ ಬರ್ತಾರಾ..? ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದೆ ಎನ್ನುತ್ತಿರುವ ಡಿಕೆಶಿ ಅದೇ ಪಕ್ಷಕ್ಕಾಗಿ ಇನ್ನೊಮ್ಮೆ ರಿಸ್ಕ್ ತೆಗೆದುಕೊಳ್ತಾರಾ ಅನ್ನೋದೆ ಸದ್ಯದ ಕುತೂಹಲವಾಗಿದೆ.

  • Telangana Polls: ಮತಗಟ್ಟೆಯಲ್ಲಿ ಕೈ, ಬಿಜೆಪಿ, ಬಿಆರ್‌ಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

    Telangana Polls: ಮತಗಟ್ಟೆಯಲ್ಲಿ ಕೈ, ಬಿಜೆಪಿ, ಬಿಆರ್‌ಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

    ಹೈದರಾಬಾದ್: ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ (Telangana Vidhanasabha Election) ಇಂದು ಮತದಾನ ನಡೆಯುತ್ತಿದೆ. ಈ ನಡುವೆ ಮತಗಟ್ಟೆಯೊಂದರಲ್ಲಿ ಮೂರು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

    ಜನಗಾಂವ್‍ನ ಮತಗಟ್ಟೆಯಲ್ಲಿ ಕಾಂಗ್ರೆಸ್ (Congress), ಬಿಜೆಪಿ (BJP) ಹಾಗೂ ಬಿಆರ್ ಎಸ್ ಕಾರ್ಯಕರ್ತರ  (BRS Activist) ನಡುವೆ ಮಾರಾಮಾರಿ ನಡೆದಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದಂತೆಯೇ ಮತಗಟ್ಟೆಯಲ್ಲಿದ್ದ ಪೊಲೀಸರು ಕೂಡಲೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

    ವೀಡಿಯೊದಲ್ಲಿ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಜನಾಂವ್‍ನ ಮತಗಟ್ಟೆಯ (Jangaon Polling Booth)  ಹೊರಗೆ ಪರಸ್ಪರ ತಳ್ಳಿಕೊಳ್ಳುತ್ತಿರುವುದನ್ನು ಕಾಣಬಹುದು. ಆದರೆ ಕಾರ್ಯಕರ್ತರ ನಡುವಿನ ಗಲಾಟೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ

    ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ಮಿಜೋರಾಂಗಳಲ್ಲಿ ನ.7 ರಿಂದ ನವೆಂಬರ್ 25ರ ಒಳಗೆ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಮೂಲಕ ಪಂಚರಾಜ್ಯ ಚುನಾವಣೆಗೆ ತೆರೆ ಬೀಳಲಿದೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

  • MLC ಸ್ಥಾನಕ್ಕೆ ಆರ್. ಶಂಕರ್ ಬುಧವಾರ ರಾಜೀನಾಮೆ..?

    MLC ಸ್ಥಾನಕ್ಕೆ ಆರ್. ಶಂಕರ್ ಬುಧವಾರ ರಾಜೀನಾಮೆ..?

    ಹಾವೇರಿ: ವಿಧಾನ ಪರಿಷತ್ ಸದಸ್ಯತ್ವ (MLC) ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಜಿ ಸಚಿವ ಆರ್.ಶಂಕರ್ (R Shankar) ನಿರ್ಧರಿಸಿದ್ದಾರೆ.

    ರಾಣೆಬೆನ್ನೂರು ಬಿಜೆಪಿ ಟಿಕೆಟ್ ಹಾಲಿ ಶಾಸಕ ಅರುಣ್ ಕುಮಾರ್‌ಗೆ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಬುಧವಾರ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

    ಅತ್ತ ಕಾಂಗ್ರೆಸ್ ಟಿಕೆಟ್‍ಗೂ ಪ್ರಯತ್ನ ಪಟ್ಟು ನಿರಾಸೆಯಾಗಿದೆ. ಇತ್ತ ಬಿಜೆಪಿ ಟಿಕೆಟ್ ಕೂಡಾ ಮಿಸ್ ಆಗಿದೆ. ಹೀಗಾಗಿ ಶಂಕರ್ ಬೇಸರಗೊಂಡಿದ್ದಾರೆ ಎಂದು ಅವರು ಆಪ್ತ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್‌

    ಆರ್ ಶಂಕರ್ ಅವರು ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಅದೀಕೃತವಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ. ನಾಳೆ ಬೆಂಗಳೂರಿನಿಂದ ರಾಣೇಬೆನ್ನೂರಿಗೆ ವಾಪಸ್ ಆಗಲಿದ್ದಾರೆ.

  • ಶಾಸಕ ಟಿ.ಡಿ ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್- ರೊಚ್ಚಿಗೆದ್ದ ಹಳ್ಳಿಗರು

    ಶಾಸಕ ಟಿ.ಡಿ ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್- ರೊಚ್ಚಿಗೆದ್ದ ಹಳ್ಳಿಗರು

    ಚಿಕ್ಕಮಗಳೂರು: ವಿಧಾನಸಭಾ ಚುನಾವಣಾ (Vidhanasabha Election) ದಿನಾಂಕ ಈಗಾಗಲೇ ಘೊಷಣೆಯಾಗಿದೆ. ಇದಕ್ಕೂ ಮೊದಲು ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯಲು ಗಿಫ್ಟ್ ಗಳನ್ನು ಹಂಚಿದ್ದಾರೆ. ಆದರೆ ಇದೀಗ ಶೃಂಗೇರಿ ಶಾಸಕ (Sringeri MLA)ರೊಬ್ಬರು ಕೊಟ್ಟ ಗಿಫ್ಟ್ ನಿಂದ ಎಡವಟ್ಟಾಗಿದ್ದು, ಹಳ್ಳಿ ಮಂದಿ ರೊಚ್ಚಿಗೆದ್ದಿದ್ದಾರೆ.

    ಹೌದು. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ (T.D Rajegowda) ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಂಚಿದ್ದರು. ಅಂತೆಯೇ ಕೊಪ್ಪ ತಾಲೂಕಿನ ಶಾನುವಳ್ಳಿಯ ದೇವರಾಜ್ ಎಂಬವರ ಮನೆಯಲ್ಲಿ ಶಾಸಕರು ಕೊಟ್ಟ ಕುಕ್ಕರ್ ನಲ್ಲಿ ತರಕಾರಿ ಬೇಯಿಸಲು ಇಟ್ಟಿದ್ದಾರೆ. ಆದರೆ ಅದು ಬ್ಲಾಸ್ಟ್ ಆಗಿದೆ. ತಾಯಿ-ಮಗು ಹೊರಗಡೆ ಇದ್ದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

    ಶಾಸಕರು ಕೊಟ್ಟ ಕುಕ್ಕರ್ ಬ್ಲಾಸ್ಟ್ ಆಗಿರುವುದು ಸುದ್ದಿಯಾಗುತ್ತಿದ್ದಂತೆಯೇ ಹಳ್ಳಿ ಮಂದಿ ರೊಚ್ಚಿಗೆದ್ದಿದ್ದಾರೆ. ಕಳಪೆ ಕುಕ್ಕರ್ ನೀಡಿ ಕಾಂಗ್ರೆಸ್ ಜನರ ಜೀವಕ್ಕೆ ಅಪಾಯ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 450 ರೂ. ಕುಕ್ಕರ್ ಗೆ 1,399 ಲೇಬಲ್ ಅಂಟಿಸಿ ಕಾಂಗ್ರೆಸ್ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಡಿಜೆ ಸೌಂಡ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆ ಗುಂಡು ಹಾರಿಸಿದ ನೆರೆಮನೆಯಾತ