Tag: vidhanasabha

  • ಕುಡುಕರು ನಮ್ಮ ಎಣ್ಣೆ ನಮ್ಮ ಹಕ್ಕು ಅಂತಿದ್ದಾರೆ: ಆರ್.‌ ಅಶೋಕ್‌

    ಕುಡುಕರು ನಮ್ಮ ಎಣ್ಣೆ ನಮ್ಮ ಹಕ್ಕು ಅಂತಿದ್ದಾರೆ: ಆರ್.‌ ಅಶೋಕ್‌

    ಬೆಂಗಳೂರು: ಕುಡುಕರು ನಮ್ಮ ಎಣ್ಣೆ ನಮ್ಮ ಹಕ್ಕು ಅಂತಿದ್ದಾರೆ ಎಂದು ಹೇಳುವ ಮೂಲಕ ವಿರೋಧಪಕ್ಷದ ನಾಯಕ ಆರ್.‌ ಅಶೋಕ್‌ (R Ashok) ಟಾಂಗ್‌ ನೀಡಿದ್ದಾರೆ.

    ವಿಧಾನಸಭೆಯಲ್ಲಿ (Vidhanasabha) ಇಂದು ಬಜೆಟ್‌ (Budget) ಮೇಲಿನ ಚರ್ಚೆಯ ವೇಳೆ ಮಾತನಾಡುತ್ತಾ, ಮದ್ಯದ ಮೇಲಿನ ದರ ಏರಿಕೆಗೆ ಮದ್ಯಪ್ರಿಯರು ಸಿಟ್ಟಾಗಿದ್ದಾರೆ. ಕುಡುಕರು ಪ್ರತಿಭಟನೆ ಮಾಡಿದ್ದೇ ನಾನು ನೋಡಿರಲಿಲ್ಲ. ಆದರೆ ಕುಡುಕರು ಕೂಡ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

    ನಮ್ಮ ಎಣ್ಣೆ ದುಡ್ಡು ಎಲ್ಲಿ ಹೋಗ್ತಿದೆ ಎಂದು ಕೇಳುತ್ತಿದ್ದಾರೆ. ಈ ವೇಳೆ ಅದನ್ನು ಅನುಭವಿಸಿ ಕೇಳಿದರೆ ಅರ್ಥ ಆಗುತ್ತದೆ. ನೀವು ಅದನ್ನು ಅನುಭವಿಸಿರಲ್ಲ. ಆದರೆ ಯತ್ನಾಳ್ ಗೆ ಅನುಭವ ಇರಬಹುದು ಎಂದ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು. ಆಗ ನನಗೆ ಯಾಕಪ್ಪ ಹೇಳ್ತೀಯಾ ಎಂದು ನಕ್ಕು ಬಸನಗೌಡ ಪಾಟೀಲ್ ಯತ್ನಾಳ್ ಕುಳಿತರು. ಇದನ್ನೂ ಓದಿ: ಕಿಕ್‍ ಪ್ರಿಯರಿಗೆ ಶಾಕ್- ಅಬಕಾರಿಗೆ ಬಿಗ್‌ ಟಾರ್ಗೆಟ್‌: ಹಿಂದಿನ ಬಜೆಟ್‌ನಲ್ಲಿ ಗುರಿ ಎಷ್ಟಿತ್ತು?

    ಈ ಬಾರಿಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ (Excise Department) ಬರೋಬ್ಬರಿ 38,525 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ. ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ 36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಿದ್ದರು. ಈ ಬಜೆಟ್‌ಗೆ ಹೋಲಿಸಿದರೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ ತೆರಿಗೆ ಸಂಗ್ರಹ ಗುರಿ 2,525 ಕೋಟಿ ರೂ. ಏರಿಕೆಯಾಗಿದೆ.

    ಬಜೆಟ್‌ನಲ್ಲಿ ಏನಿತ್ತು?: ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML ಹಾಗೂ ಬಿಯರ್‌ನ ಸ್ಲಾಬ್‌ಗಳನ್ನು ಪರಿಷ್ಕರಿಸಲಾಗುವುದು. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ ದೇವನಹಳ್ಳಿಗೆ ಮೆಟ್ರೋ ರೈಲು!

    ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿಯನ್ನು ನಿಗದಿಪಡಿಸಲಾಗುವುದು ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ.

  • ಹಿಂದೂ ಧಾರ್ಮಿಕ ಸಂಸ್ಥೆಗಳು & ಧರ್ಮದಾಯ ದತ್ತಿಗಳ ವಿಧೇಯಕ ಅಂಗೀಕಾರ

    ಹಿಂದೂ ಧಾರ್ಮಿಕ ಸಂಸ್ಥೆಗಳು & ಧರ್ಮದಾಯ ದತ್ತಿಗಳ ವಿಧೇಯಕ ಅಂಗೀಕಾರ

    ಬೆಂಗಳೂರು: ಮುಜರಾಯಿ ಇಲಾಖೆಗೆ (Muzrai Department) ದೇವಸ್ಥಾನಗಳು ಸಲ್ಲಿಕೆ ಮಾಡುವ ಆದಾಯ ಮೊತ್ತದಲ್ಲಿ ಏರಿಕೆ ಮತ್ತು ಇನ್ನಿತರೆ ತಿದ್ದುಪಡಿ ಇರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕ-2024 ಅನ್ನು ವಿಧಾನಸಭೆಯಲ್ಲಿ ಇಂದು ಅಂಗೀಕಾರ ಮಾಡಲಾಗಿದೆ.

    ಮುಜರಾಯಿ ಇಲಾಖೆಗೆ ದೇವಸ್ಥಾನಗಳು ಕೊಡುತ್ತಿದ್ದ ಆದಾಯದ ಹಣವನ್ನು ದ್ವಿಗುಣಗೊಳಿಸಲಾಗಿದೆ. ಇನ್ಮುಂದೆ 10 ಲಕ್ಷದಿಂದ 1 ಕೋಟಿ ಆದಾಯದ ದೇವಸ್ಥಾನಗಳು ಆದಾಯದ 5% ರಷ್ಟು ಹಣ ಇಲಾಖೆಗೆ ಸಲ್ಲಿಸಬೇಕು. ಇನ್ನು 1 ಕೋಟಿಗೂ‌ ಆದಾಯ ಮೀರಿದ ದೇವಸ್ಥಾನಗಳು ಆದಾಯದ 10% ರಷ್ಟು ಹಣ ಸಲ್ಲಿಕೆ ಮಾಡಬೇಕು. ಇದರ ಜೊತೆಗೆ ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ಇನ್ಶೂರೆನ್ಸ್ ಸೌಕರ್ಯ ಒದಗಿಸಲು ವಿಧೇಯಕದಲ್ಲಿ ಅವಕಾಶ ಕೊಡಲಾಗಿದೆ.

    ದೇವಸ್ಥಾನಗಳ ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ 5 ಲಕ್ಷ ಪರಿಹಾರ ಕೊಡಲಾಗುತ್ತದೆ. ಈ ಮುಂಚೆ ಮೃತಪಟ್ಟವರಿಗೆ ಕೇವಲ 35 ಸಾವಿರ ರೂ. ಕೊಡಲಾಗ್ತಿತ್ತು. ಜೊತೆಗೆ ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂ.ನಿಂದ 5೦ ಸಾವಿರ ರೂ. ವರೆಗೆ ಸ್ಕಾಲರ್ಶಿಪ್ ಕೊಡಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.

    ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಸಾಮಾನ್ಯ ಸದಸ್ಯರಲ್ಲಿ ಒಬ್ಬರು ವಾಸ್ತು ಶಿಲ್ಪ, ಶಿಲ್ಪಶಾಸ್ತ್ರ ಕೌಶಲ್ಯ ಇರುವ ವಿಶ್ವಕರ್ಮ ಸಮುದಾಯದ ಒಬ್ಬರ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಕೊಲ್ಲೂರು ದೇಗುಲದ ಪಕ್ಕದಲ್ಲೇ ಹೈವೇ ಪ್ರಶ್ನಿಸಿ PIL- ಯಥಾಸ್ಥಿತಿಗೆ ಹೈಕೋರ್ಟ್ ಆದೇಶ

  • ವಿಧಾನಸಭೆಯಲ್ಲಿ ಕನ್ನಡ ವಿಧೇಯಕ ಅಂಗೀಕಾರ- ಏನೆಲ್ಲಾ ಅಂಶಗಳಿವೆ?

    ವಿಧಾನಸಭೆಯಲ್ಲಿ ಕನ್ನಡ ವಿಧೇಯಕ ಅಂಗೀಕಾರ- ಏನೆಲ್ಲಾ ಅಂಶಗಳಿವೆ?

    ಬೆಂಗಳೂರು: ನಾಮಫಲಕಗಳಲ್ಲಿ 60 ಪರ್ಸೆಂಟ್ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಮಹತ್ವದ ಕನ್ನಡ ಭಾಷಾ (Kannada Language) ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ (Vidhanasabha) ಅಂಗೀಕರಿಸಲಾಗಿದೆ.

    ಮೇಲ್ಮನೆಯಲ್ಲಿ ಮಂಡನೆ ಆಗಿ ಅಲ್ಲಿಯೂ ಅನುಮೋದನೆ ಸಿಕ್ಕಿ, ರಾಜ್ಯಪಾಲರು ಅಂಕಿತ ಹಾಕಿದ್ರೆ ಇದು ಕಾಯ್ದೆಯಾಗಿ ಬದಲಾಗಲಿದೆ.

    ವಿಧೇಯಕದಲ್ಲಿ ಏನೆಲ್ಲಾ ಅಂಶಗಳಿವೆ?: ಕಚೇರಿ, ಉದ್ದಿಮೆ, ವಿವಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ. ಅಧಿಕಾರಿಗಳ ಹೆಸರು, ಪದನಾಮ ಕನ್ನಡದಲ್ಲಿರಬೇಕು. ರಾಜ್ಯ ಸರ್ಕಾರದ ಇಲಾಖೆ, ಉದ್ಯಮ ಅಥವಾ ಸ್ವಾಯತ್ತ ಸಂಸ್ಥೆ, ಸಹಕಾರ ಮತ್ತು ಸಾರ್ವಜನಿಕ ಉದ್ಯಮ, ಶೈಕ್ಷಣಿಕ ಸಂಸ್ಥೆ, ಬ್ಯಾಂಕ್, ಇತರೆ ಹಣಕಾಸು ಸಂಸ್ಥೆ, ಖಾಸಗಿ ಕೈಗಾರಿಕೆ, ವಿವಿಗಳಿಗೂ ಇದು ಅನ್ವಯವಾಗಲಿದೆ. ರಸ್ತೆ, ಬಡಾವಣೆ ಹೆಸರು ಕನ್ನಡದಲ್ಲಿಯೇ ಇರಬೇಕು. ಇದನ್ನೂ ಓದಿ: ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ

    ಟೆಂಡರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರದಲ್ಲಿ ಕನ್ನಡ ಕಡ್ಡಾಯ (ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ). ಕರಪತ್ರ, ಬ್ಯಾನರ್, ಫ್ಲೆಕ್ಸ್, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿ, ನೋಟಿಸ್‍ಗಳು ಕನ್ನಡದಲ್ಲಿರಬೇಕು. ಇದು ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ, ಅನುದಾನರಹಿತ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನ್ವಯವಾಗಲಿದೆ.

    ಯೋಜನೆ, ಅನುದಾನ, ರಿಯಾಯ್ತಿಯ ನಾಮಫಲಕ, ಜಾಹೀರಾತು, ರಸೀದಿ, ಬಿಲ್, ನೋಟಿಸ್ ಕನ್ನಡದಲ್ಲಿರಬೇಕು. ಸರ್ಕಾರ ಅಥವಾ ಸಂಬಂಧಿತ ಸಂಸ್ಥೆ ಅಥವಾ ಸ್ಥಳೀಯ ಪ್ರಾಧಿಕಾರಗಳಿಗೆ ಅನ್ವಯವಾಗಲಿದೆ. ವಾಣಿಜ್ಯ, ಕೈಗಾರಿಕೆ, ಅಂಗಡಿ, ಆಸ್ಪತ್ರೆ, ಹೋಟೆಲ್, ಲ್ಯಾಬ್ ನಾಮಫಲಕಗಳಲ್ಲಿ 60% ಕನ್ನಡ ಬಳಕೆ ಕಡ್ಡಾಯವಾಗಲಿದೆ. ಫಲಕಗಳ ಮೇಲ್ಭಾಗದಲ್ಲಿ ಕನ್ನಡ ಇರಬೇಕು.. ಕೆಳಗಿನ ಭಾಗ ಬೇರೆ ಭಾಷೆಯಲ್ಲಿ ಇರಬಹುದು.

  • ಸದನದಲ್ಲಿ ಭದ್ರತಾ ಲೋಪ – ಬಜೆಟ್ ಮಂಡನೆ ವೇಳೆ ಶಾಸಕರ ಸೀಟ್‍ನಲ್ಲಿ ಕುಳಿತ ಖಾಸಗಿ ವ್ಯಕ್ತಿ

    ಸದನದಲ್ಲಿ ಭದ್ರತಾ ಲೋಪ – ಬಜೆಟ್ ಮಂಡನೆ ವೇಳೆ ಶಾಸಕರ ಸೀಟ್‍ನಲ್ಲಿ ಕುಳಿತ ಖಾಸಗಿ ವ್ಯಕ್ತಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಬಹುನಿರೀಕ್ಷಿತ ಬಜೆಟ್ (Karnataka Budget 2023) ಮಂಡನೆಯ ವೇಳೆ ಭದ್ರತಾ ಲೋಪ ಎದುರಾದ ಘಟನೆ ನಡೆದಿದೆ.

    ಹೌದು. ಸಿಎಂ ಅವರು ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಶಾಸಕರ ಸೀಟ್‍ನಲ್ಲಿ ಕುಳಿತುಕೊಂಡಿದ್ದರು. ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದ ಸಂದರ್ಭದಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಅವರಿಗೆ ಮೀಸಲಾಗಿರುವ ಆಸನದಲ್ಲಿ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಕುಳಿತಿದ್ದರು. ಕರೆಮ್ಮ ಬಂದ ಬಳಿಕ ವ್ಯಕ್ತಿ ಎದ್ದು ಹೋಗಿದ್ದಾನೆ.

    ಈ ಸಂಬಂಧ ಗುರುಮಿಠಕಲ್ ಶಾಸಕ ಶರಣ ಗೌಡ ಕಂದಕೂರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾರೋ ಒಬ್ಬ ಖಾಸಗಿ ವ್ಯಕ್ತಿ ಬಂದು ಸದನದ ಆಸನದಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ನಾನು ಪಕ್ಕದಲ್ಲಿದ್ದ ಜಿಟಿ ದೇವೇಗೌಡ ಅವರ ಬಳಿ ಕೇಳಿದೆ. ಅವರು ಯಾರೋ ಗೊತ್ತಿಲ್ಲ ಅಂದ್ರು. ಆಗ ನಾನು ಆ ವ್ಯಕ್ತಿಯನ್ನು ಕೇಳಿದಾಗ ಮೊಳಕಾಲ್ಮೂರು ಎಂಎಲ್‍ಎ ಅಂದಿದ್ದಾರೆ. ಅವರು ಸುಮಾರು 15 ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ರು. ಇದೊಂದು ಭದ್ರತಾ ಲೋಪ ಎಂದರೆ ತಪ್ಪಾಗಲಾರದು ಎಂದರು.

    ಶಾಸಕರಲ್ಲದೇ ಇರುವವರು  ಹೀಗೆ ಬಂದು ಕುಳಿತುಕೊಳ್ಳುತ್ತಾರೆ ಎಂದರೆ ನಿಜಕ್ಕೂ ಶಾಕ್ ಆಯಿತು. ಸದನದ ಒಳಗಡೆ ಯಾರನ್ನೂ ಒಳಗಡೆ ಬಿಡಲ್ಲ. ಅಂಥದ್ದರಲ್ಲಿ ಈ ವ್ಯಕ್ತಿ ಒಳಗೆ ಬರುತ್ತಾರೆ ಅಂದರೆ ನಿಜಕ್ಕೂ ಅಚ್ಚರಿಯೇ ಸರಿ. ವ್ಯಕ್ತಿ 15 ನಿಮಿಷ ಕುಳಿತುಕೊಂಡಿದ್ದಲ್ಲದೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಬಳಿ ತೆರಳಿ ಹ್ಯಾಂಡ್ ಶೇಕ್ ಕೂಡ ಮಾಡಿದ್ದಾರೆ. ಆದರೆ ಡಿಸಿಎಂ ಅವರು ಬಜೆಟ್ ಬ್ಯುಸಿಯಲ್ಲಿ ಇದ್ದ ಕಾರಣ ವ್ಯಕ್ತಿ ಕಡೆ ಹೆಚ್ಚಿನ ಗಮನ ಕೊಡಲಿಲ್ಲ ಎಂದರು.

    ಒಟ್ಟಿನಲ್ಲಿ ಈ ರೀತಿಯಾಗಿ ಖಾಸಗಿ ವ್ಯಕ್ತಿ ಸದನದ ಒಳಗಡೆ ಬಂದಿದ್ದು, ಸದನ ಹಾಗೂ ಶಾಸಕರಿಗೂ ಅಗೌರವ ತೋರಿದಂತಾಗಿದೆ. ಅಲ್ಲದೆ ಹೀಗೆ ಒಳಗಡೆ ಬಂದು ಯಾರಿಗಾದರೂ ಏನಾದರೂ ಅನಾಹುತ ಆದರೆ ಯರು ಜವಾಬ್ದಾರಿ ಎಂದು ಶಾಸಕರು ಪ್ರಶ್ನಿಸಿದರು.

    ಸದ್ಯ ಈ ಸಂಬಂಧ ಸ್ಪೀಕರಿಗೆ ಶರಣ ಗೌಡ ಕಂದಕೂರು ದೂರು ನೀಡಿದ್ದು, ವ್ಯಕ್ತಿಯನ್ನು ವಿಧಾನಸೌಧ ಠಾಣೆಯ ಪೊಲೀಸರು (Vidhanasoudha Police Station) ವಶಕ್ಕೆ ಪಡೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಡಿಯೂರಪ್ಪಗೆ ಚಪ್ಪಾಳೆ ಮೂಲಕ ಅಭಿನಂದಿಸಿದ ಶಾಸಕರು

    ಯಡಿಯೂರಪ್ಪಗೆ ಚಪ್ಪಾಳೆ ಮೂಲಕ ಅಭಿನಂದಿಸಿದ ಶಾಸಕರು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ

    ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ

    ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲು ಆಮ್ ಅದ್ಮಿ (AAP) ಪಕ್ಷ ಹಣ ಪಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗ ಸುದ್ದಿಗೋಷ್ಠಿ ನಡೆಸಿರುವ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ (Sambit Patra) ರಹಸ್ಯ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ವಿರೋಧಿ ಬಗ್ಗೆ ಮಾತನಾಡುತ್ತಿತ್ತು, ಆದರೆ ಇಂದು ಇಡೀ ಪಕ್ಷ ಸುಲಿಗೆಯಲ್ಲಿ ತೊಡಗಿದೆ, ಅದು ಜಗ್ಗಜಾಹೀರುಗೊಂಡಿದೆ. ಆಪ್ ಕೇವಲ ಕಾರ್ಪೊರೇಷನ್ (Corporation) ಟಿಕೆಟ್‍ಗಳನ್ನು ಮಾರಾಟ ಮಾಡಿಲ್ಲ, ಅವರು ವಿಧಾನಸಭೆ ಟಿಕೆಟ್‍ಗಳನ್ನು ಸಹ ಮಾರಾಟ ಮಾಡಿದ್ದಾರೆ ಎಂದು ವೀಡಿಯೋ ಮೂಲಕ ತಿಳಿಯುತ್ತದೆ ಎಂದು ಆರೋಪಿಸಿದರು.

    ಬಿಜೆಪಿ ಬಿಡುಗಡೆ ಮಾಡಿದ ರಹಸ್ಯ ವೀಡಿಯೋದಲ್ಲಿ ಏನೂ ಇಲ್ಲ, ಈ ಹಿಂದೆಯೂ ಬಿಜೆಪಿ ಹಲವು ಬಾರಿ ಇಂತಹ ಕುಟುಕು ವೀಡಿಯೋಗಳನ್ನು ತೋರಿಸಿದೆ, ಅದನ್ನು ತನಿಖೆ ಮಾಡಿದರೆ ಏನೂ ಸಿಗುವುದಿಲ್ಲ ಎಂದು ಸಿಎಂ ಅರವಿಂದ ಕೇಜ್ರಿವಾಲ್ (Aravind Kejriwal) ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಕೂತು ಫಿಫಾ ವಿಶ್ವಕಪ್‌ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್‌ ಫ್ಯಾನ್ಸ್‌

    ಈ ಹಿಂದೆ ಹೊಸ ಮಧ್ಯ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ (BJP) ಮನೀಶ್ ಸಿಸೋಡಿಯಾ (Manish Sisodia) ಇದ್ದ ವೀಡಿಯೋ ಬಿಡುಗಡೆ ಮಾಡಿತ್ತು, ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ತಿಹಾರ್ ಜೈಲಿನಲ್ಲಿ ಆಪ್ ನಾಯಕ ಸತ್ಯಂದ್ರ ಜೈನ್ (sathyender Jain) ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವೀಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಈಗ ಪಾಲಿಕೆ ಚುನಾವಣೆಗೆ ಹಣ ಪಡೆಯುವ ಬಿಡುಗಡೆ ಮಾಡಿದೆ.

    ಡಿಸೆಂಬರ್ 4 ರಂದು ಎಂಸಿಡಿ ಚುನಾವಣೆ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ, ರಾಜ್ಯದಲ್ಲಿರುವ ಆಡಳಿತರೂಢ ಪಕ್ಷ ಆಪ್ ತಳ ಮಟ್ಟವನ್ನು ಗಟ್ಟಿಗೊಳಿಕೊಳ್ಳಲು ತೀವ್ರ ಹಣಾಹಣಿ ನಡೆಸುತ್ತಿವೆ. ದೆಹಲಿಯ ಮಹಾನಗರ ಪಾಲಿಕೆಯ 250 ವಾರ್ಡ್‍ಗಳಿಗೆ 1,349 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ

    ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ

    ಬೆಂಗಳೂರು: ಇಂದಿನ ಕಲಾಪದಲ್ಲಿ ಪಿಎಸ್‍ಐ (PSI) ಅಕ್ರಮ ನೇಮಕಾತಿಯ ಚರ್ಚೆಗೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ಹಾಗೂ ವಾಕ್ಸಮರವೇ ನಡೆದು ಹೋಯಿತು. ಈ ವೇಳೆ ಸಚಿವ ಮಾಧುಸ್ವಾಮಿ, ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ ಎಂದು ಗರಂ ಆದರು.

    ಇತ್ತೀಚೆಗೆ ನಡೆದ ಘಟನೆ ಬಗ್ಗೆ ಚರ್ಚೆ ಮಾಡಬೇಕು ಅಂತ ನಿಯಮ ಹೇಳುತ್ತೆ. ಪಿಎಸ್‍ಐ ಪ್ರಕರಣ ನಡೆದು ಏಳು ತಿಂಗಳಾಗಿದೆ. ಈ ವಿಷಯದ ಚರ್ಚೆಗೆ ನನ್ನ ತಕರಾರಿದೆ ಅಂತ ಮಧುಸ್ವಾಮಿ (Madhuswamy) ಹೇಳಿದರು. ಈ ವೇಳೆ ಕಾಂಗ್ರೆಸ್ (Congress) ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿರುದ್ಧ ಸಚಿವರು ಸಿಟ್ಟಾದರು. ನಮಗೆ ಮಾತಾಡಲು ಬಿಡಿ, ಸರ್ಕಾರ ನಡೆಸ್ತಿರೋರು ನಾವು. ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ ಅಂತ ಗರಂ ಆದರು. ಆಗ ಕಾಂಗ್ರೆಸ್ ಸದಸ್ಯರು, ಕತ್ತೆ ಕಾಯೋಕೇ ಇರೋದು ಇನ್ನೇನಕ್ಕೆ ಇದ್ದೀರಿ ಅಂತ ಮಾಧುಸ್ವಾಮಿಗೆ ತಿರುಗೇಟು ಕೊಟ್ಟರು. ಪರಿಣಾಮ ಸದನದಲ್ಲಿ ಮತ್ತೆ ಕೋಲಾಹಲ ಎದ್ದಿದೆ.

    ನಿಯಮ 60 ರ ಬದಲು ಬೇರೆ ನಿಯಮದಲ್ಲಿ ಚರ್ಚೆ ಮಾಡಿ. ನಾವೂ ಚರ್ಚೆಗೆ ಸಿದ್ಧ, ಯಾರ್ಯಾರ ಕಾಲದಲ್ಲಿ ಏನೇನು ಅಕ್ರಮ ಆಗಿದೆ ಅಂತ ಹೇಳ್ತೀವಿ. ಪ್ರಕರಣ ತನಿಖೆಗೆ ಕೊಟ್ಟವರು ನಾವು, ಎಡಿಜಿಪಿ (ADGP) ಬಂಧಿಸಿದ್ದು ನಾವು, ನಾವೂ ಚರ್ಚೆಗೆ ಸಿದ್ಧ, ಬೇರೆ ನಿಯಮದಲ್ಲಿ ಚರ್ಚಿಸೋಣ ಎಂದು ಮಧುಸ್ವಾಮಿ ಹೇಳಿದರು. ಮಾಧುಸ್ವಾಮಿಯ ಸ್ಪಷ್ಟನೆಗೆ ಸಿದ್ದರಾಮಯ್ಯ (Siddaramaiah) ಸಿಟ್ಟಾಗಿದ್ದು, ಇದೊಂದು ರಾಜಕೀಯ ಭಾಷಣ ಅಂತ ಆರೋಪಿಸಿದರು. ರಾಜಕೀಯ ಭಾಷಣ ನಮಗೂ ಬರುತ್ತೆ ಅಂದ್ರು. ಈ ವೇಳೆ ಮಧ್ಯಪ್ರವೇಶಿಸಿ ಆಕ್ಷೇಪಿಸಿದ ಸಚಿವ ಅಶ್ವಥ್ ನಾರಾಯಣ (Ashwath Narayan) ಗೆ, ನೀವು ಸಂಬಂಧಿಸಿದ ಸಚಿವರಲ್ಲ, ಮಾಧುಸ್ವಾಮಿ ಮಾತಾಡಿದ್ದಾರೆ ನೀವು ಕುಳಿತುಕೊಳ್ಳಿ ಅಂತ ಸಿದ್ದರಾಮಯ್ಯ ಕಿಡಿಕಾರಿದರು. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು

    ಡಿಕೆ ರವಿ (D K Ravi), ಗಣಪತಿ (Ganapathi) ಕೇಸ್ ಕೋರ್ಟ್ ನಲ್ಲಿ ಇದ್ಸಾಗ, ಇಲ್ಲಿ ಚರ್ಚೆ ಆಗಿಲ್ವಾ..?, ಹಿಂದೆ ನಮ್ಮ ಸರ್ಕಾರ ಇದ್ದಾಗ ನೀವು ಇಲ್ಲಿ ಚರ್ಚೆ ಮಾಡಿಲ್ವಾ..?, ಪ್ರಭು ಚೌಹಾನ್ (Prabhu Chauhan) ಅವ್ರು ಸಿಎಂ ಗೆ ಪತ್ರ ಬರೆದಿಲ್ವಾ..?. ಹೀಗಾಗಿ ಇದರ ಚರ್ಚೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಆಗ ಮಾಧುಸ್ವಾಮಿ, ಪ್ರಕರಣದ ಚರ್ಚೆಯೇ ಬೇಡ ಅಂತ ಸರ್ಕಾರ ಹೇಳ್ತಿಲ್ಲ. ಈ ನಿಯಮ ಬೇಡ, ಬೇರೆ ನಿಯಮದಲ್ಲಿ ಚರ್ಚೆ ಮಾಡೋಣ. ಪಿಎಸ್‍ಐ ನೇಮಕಾತಿಯ ಹಾಗೆ ಆಗಿರುವ ಬೇರೆ ಪ್ರಕರಣಗಳ ಬಗ್ಗೆಯೂ ಚರ್ಚೆ ಆಗಬೇಕು ಅಂತ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಆಗ್ರಹ, ಎಲ್ಲ ತನಿಖೆ ಆಗಲಿ, ,2006 ರಿಂದಲೇ ತನಿಖೆ ಮಾಡಿ ಅಂತ ಆಗ್ರಹಿಸಿದರು. ತನಿಖಾ ಆಯೋಗ ರಚಿಸಿ ತನಿಖೆ ಮಾಡಿ ಅಂತ ಸಿದ್ದರಾಮಯ್ಯ ಆಗ್ರಹಿಸಿದರು.

    ಈ ವೇಳೆ ಮಧ್ಯಪ್ರವೇಶಸಿದ ಸ್ಪೀಕರ್, ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಚರ್ಚೆ ನಿಯಮ 60 ರಡಿ ಕೊಡಲ್ಲ. ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಕೊಡುತ್ತೇನೆ. ಸದ್ಯ ಅತಿವೃಷ್ಟಿ ಚರ್ಚೆ ನಡೀತಿದೆ, ಅತಿವೃಷ್ಟಿ ಚರ್ಚೆ ಬಳಿಕ ಪಿಎಸ್‍ಐ ನೇಮಕಾತಿ ಪ್ರಕರಣದ ಚರ್ಚೆಗೆ ಅವಕಾಶ ಕೊಡುತ್ತೇನೆ. ಸ್ಪೀಕರ್ ರೂಲಿಂಗ್ ಗೆ ಕಾಂಗ್ರೆಸ್ ಸದಸ್ಯರು ಒಪ್ಪಿಕೊಂಡರು. ಇದನ್ನೂ ಓದಿ: ಬೆಟ್ಟ ಕುರುಬ ಸೇರಿದಂತೆ ಒಟ್ಟು 12 ಜಾತಿಗಳು ಎಸ್‌ಟಿ ವರ್ಗಕ್ಕೆ ಸೇರ್ಪಡೆ: ಮೋದಿಗೆ ಬಿಎಸ್‌ವೈ ಅಭಿನಂದನೆ

    Live Tv
    [brid partner=56869869 player=32851 video=960834 autoplay=true]

  • 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ

    2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ

    ಬೆಂಗಳೂರು: 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ (Electric Bus) ಮಾಡುವ ಗುರಿ ಇದೆ ಎಂದು ಸಚಿವ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.

    ಇಂದಿನ ವಿಧಾನಸಭಾ ಕಲಾಪದಲ್ಲಿ ಈಕೋ ಸಿಸ್ಟಮ್ ತರಲು ಸಮಿತಿ ಮಾಡಲಾಗಿತ್ತು. ಎಲೆಕ್ಟ್ರಿಕ್ ಬಸ್ ಬಳಕೆ ಕಡಿಮೆಯಾಗ್ತಿದೆ ಅಂತಾ ಶಾಸಕ ತನ್ವೀರ್ ಸೇಠ್ (Tanveer Sait) ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಾಮುಲು (Sri Ramulu), ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ (Smart City) ಅಡಿ 90ಎಲೆಕ್ಟ್ರಿಕ್ ಬಸ್ ಕಾಂಟ್ರಾಕ್ಟ್ ಗೆ ಪಡೆಯಲಾಗಿದೆ. ಇದು 12ವರ್ಷ ಕಾಂಟ್ರಾಕ್ಟ್ ಇರಲಿದೆ. ನಮ್ಮಿಂದ ಕೇವಲ ಕಂಡಕ್ಟರ್ ಮಾತ್ರ ಇರುತ್ತಾರೆ ಎಂದರು.

    ಡ್ರೈವರ್, ಬಸ್ ಮೇಂಟೆನೆನ್ಸ್ ಎಲ್ಲವೂ ಅವರದ್ದಾಗಿದೆ. ಕೇಂದ್ರ ಸರ್ಕಾರದ ಫಿನ್-2 ಮೂಲಕ 300 ಬಸ್ ಖರೀದಿ ಮಾಡಿದ್ದೇವೆ. ಇದರಲ್ಲಿ 75 ಬಸ್ ಮಾತ್ರ ಬಂದಿವೆ. ಉಳಿದ ಬಸ್ ಬಂದ ಬಳಿಕ ಅವನ್ನೂ ಬಳಕೆ ಮಾಡಿಕೊಳ್ಳುತ್ತೇವೆ. ಅದೇ ರೀತಿ 921 ಎಲೆಕ್ಟ್ರಿಕ್ ಬಸ್ ಸಿಇಎಸ್‍ಎಲ್ (CESL) ಮೂಲಕ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ

    ಎಲೆಕ್ಟ್ರಿಕ್ ಬಸ್ ಸಂಚಾರವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕೆಲಸ ಆಗಲಿದೆ. ಡೀಸಲ್ ಬೆಲೆ ಹೆಚ್ಚಳವಾಗಿದ್ರಿಂದ ನಮಗೆ ನಷ್ಟವಾಗಿದೆ, ಎಲೆಕ್ಟ್ರಿಕ್ ಬಸ್ ಗಳಿಂದ ಮುಂದೆ ಲಾಭದಾಯಕ ಆಗಬಹುದು ಎಂದು ಶ್ರೀರಾಮುಲು ಅಭಿಪ್ರಾಯ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ- ಅಶೋಕ್ ಕಾಲೆಳೆದ ಸಿದ್ದರಾಮಯ್ಯ

    ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ- ಅಶೋಕ್ ಕಾಲೆಳೆದ ಸಿದ್ದರಾಮಯ್ಯ

    ಬೆಂಗಳೂರು: ನಿನ್ನೆಯಿಂದ ವಿಧಾನಸಭಾ ಕಲಾಪ  (Vidhanasabha Session) ಆರಂಭವಾಗಿದ್ದು, ರಾಜ್ಯದ ಆಗುಹೋಗುಗಳ ಬಗ್ಗೆ ಗಂಭೀರ ಚರ್ಚೆಯ ನಡುವೆ ಕೆಲವೊಮ್ಮೆ ಸ್ವಾರಸ್ಯಕರ ಹಾಗೂ ಹಾಸ್ಯದ ಮಾತುಗಳು ಕೂಡ ನಡೆಯುತ್ತವೆ. ಇಂದಿನ ಕಲಾಪದಲ್ಲಿ ಕಬಡ್ಡಿ ಆಟದ ಬಗ್ಗೆ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು.

    ಅತಿವೃಷ್ಠಿ ಬಗ್ಗೆ ಸಿದ್ದರಾಮಯ್ಯ (Siddaramaiah) ಮಾತನಾಡುವ ವೇಳೆ ಸಚಿವ ಆರ್.ಅಶೋಕ್ (R Ashok) ಅವರು ಪದೇ ಪದೇ ಮಧ್ಯಪ್ರವೇಶ ಮಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು, ಯಾಕಪ್ಪಾ ಅಶೋಕ್, ಎದ್ದು ನಿಂತು ವ್ಯಾಯಾಮ ಮಾಡ್ತಾ ಇದ್ದೀಯಾ ಸುಮ್ನೆ ಕುಂತ್ಕೋ ಎಂದು ಹೇಳಿದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತು.

    ಸಿದ್ದರಾಮಯ್ಯ ಈ ರೀತಿ ಹೇಳುತ್ತಿದ್ದಂತೆಯೇ ಅಶೋಕ್ ಅವರು ನಾನು ತುಂಬಾ ಸ್ಟ್ರಾಂಗ್ ಇದ್ದೀನಿ ಸರ್ ಎಂದರು. ಹೌದಪ್ಪಾ ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ, ನಾನು ಹೈಸ್ಕೂಲ್ ನಲ್ಲಿ ಕಬಡ್ಡಿ ಆಡ್ತಿದ್ದೆ ಈಗ ಇಲ್ಲ. ಈಗ ಯಾವ ಆಟನೂ ಆಡೋದಕ್ಕೆ ಆಗ್ತಿಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಂತೆಯೇ ಎಲ್ಲರೂ ನಕ್ಕರು. ಇದನ್ನೂ ಓದಿ: ಪುಂಡು ಪೋಕರಿಯಂತೆ ಮಾತಾಡಿದ್ರೆ ಗೌರವ ಉಳಿಯಲ್ಲ- ಸಿಟಿ ರವಿ ವಿರುದ್ಧ ದಿನೇಶ್ ಕಿಡಿ

    ಇದೇ ವೇಳೆ ಸಿದ್ದರಾಮಯ್ಯ ಅವರು, ಎರಡು ದಿನಗಳಲ್ಲಿ ಮಳೆಹಾನಿ ಪರಿಹಾರ ಕೊಡ್ತೀವಿ ಎಂದು ಹೇಳಿದ್ರಿ. ಆದರೆ ಇನ್ನೂ ಪರಿಹಾರ ಕೊಟ್ಟಿಲ್ಲ, ಪರಿಹಾರ ಕೊಡಿ ಎಂದು ಆಗ್ರಹಿಸಿದರು. ಆಗ ಅಶೋಕ್ ಅವರು, ಬೇರೆ ರಾಜ್ಯಕ್ಕಿಂತಲೂ ಪರಿಹಾರ ಕೊಡುವುದರಲ್ಲಿ ಮುಂದೆ ಇದ್ದೇವೆ. ಇನ್ನೆರಡು ದಿನಗಳಲ್ಲಿ 116 ಕೋಟಿ ಮಳೆ ಹಾನಿ ಪರಿಹಾರ ಬಿಡುಗಡೆ ಆಗಲಿದೆ ಎಂದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಮಳೆ ಕಂಟಿನ್ಯೂ ಆಗಿ ಬರುತ್ತಿದೆ. ಸರ್ವೇ ಮಾಡಲು ಆಗ್ತಿಲ್ಲ, ಹಲವು ಬಾರಿ ಆರೇಳು ತಿಂಗಳು ಕಳೆದರೂ ಪರಿಹಾರ ಕೊಟ್ಟಿರಲಿಲ್ಲ. ಒಂದು ವಾರದಲ್ಲಿ ಮಳೆಹಾನಿ ಪರಿಹಾರ ಕೊಡ್ತೀವಿ ಎಂದು ಘೋಷಣೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಹೆಗ್ಗಣಗಳನ್ನು ಸ್ಪೀಕರ್ ಕಳ್ಸಿದ್ದಾರೆ ಅಂತಾ ಹೇಳ್ಬೇಡಿ: ಸಿದ್ದರಾಮಯ್ಯ ಕಾಲೆಳೆದ ಸ್ಪೀಕರ್!

    ಹೆಗ್ಗಣಗಳನ್ನು ಸ್ಪೀಕರ್ ಕಳ್ಸಿದ್ದಾರೆ ಅಂತಾ ಹೇಳ್ಬೇಡಿ: ಸಿದ್ದರಾಮಯ್ಯ ಕಾಲೆಳೆದ ಸ್ಪೀಕರ್!

    ಬೆಂಗಳೂರು: ವಿಧಾನಸಭೆ ಮೊಗಸಾಲೆಯಲ್ಲಿ ಇವತ್ತು ಸ್ವಾರಸ್ಯಕರ ಚರ್ಚೆ ನಡೆಯಿತು. ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಆಹೋರಾತ್ರಿ ಧರಣಿ ನಡೆಸುತ್ತಿದೆ. ಈ ವೇಳೆ ಯೋಗ ಕ್ಷೇಮ ವಿಚಾರಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದರಾಮಯ್ಯ ಬಳಿ ಬಂದ್ರು. ಮೊಗಸಾಲೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ರು. ಆ ವೇಳೆ ಸಿದ್ದರಾಮಯ್ಯ ಹಾರಿಸಿದ ಹಾಸ್ಯ ಚಟಾಕಿ ಎಲ್ಲರ ಗಮನ ಸೆಳೆಯಿತು.

    ಅಂದಹಾಗೆ ಆಹೋರಾತ್ರಿ ಧರಣಿ ಮಾಡ್ತಿರುವಾಗ ನಿಮಗೆ ಏನಾದ್ರೂ ಅಗತ್ಯ ಇದೆಯಾ ಹೇಳಿ ಅಂತಾ ಸ್ಪೀಕರ್ ಕೇಳ್ತಾರೆ. ಆಗ ಸಿದ್ದರಾಮಯ್ಯ ರಿಯಾಕ್ಟ್ ಮಾಡಿ ಈ ಹಿಂದೆ ನಾವು ಧರಣಿ ಮಾಡಿದಾಗ ವಿಧಾನಸಭೆಯಲ್ಲಿ ಹೆಗ್ಗಣಗಳು ಇದ್ವು, ಈಗ ಏನ್ ಕಥೆಯೋ ಅಂತಾ ನಗು ನಗುತ್ತಾ ಹೇಳ್ತಾರೆ. ತಕ್ಷಣವೇ ಸ್ಯಾನಿಟೈಸ್ ಮಾಡಿಸಿದಾಗ ಹೆಗ್ಗಣಗಳು ಹೋಗಿವೆ, ಇಲ್ಲ ಸರ್, ಇಲಿಗಳು ಇರಬಹುದು ಅಂತಾ ಎಂದ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಹೇಳ್ತಾರೆ. ಆಗ ಸ್ಪೀಕರ್ ಮಧ್ಯಪ್ರವೇಶ ಮಾಡಿ ಹೆಗ್ಗಣಗಳು ಬಂದ್ರೆ ಸ್ಪೀಕರ್ ಅವರೇ ಬಿಟ್ಟಿದ್ದಾರೆ ಅಂತೇಳ್ಬೇಡಿ ಎಂದು ಸಿದ್ದರಾಮಯ್ಯ ಕಾಲೆಳೆದ್ರು. ಆಗ ಮೊಗಸಾಲೆಯಲ್ಲಿ ಇದ್ದ ಶಾಸಕರೆಲ್ಲರೂ ನಗೆಗಡಲಲ್ಲಿ ತೇಲಿದ್ರು. ಇದನ್ನೂ ಓದಿ: ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ: ಹೆಚ್‍ಡಿಕೆ

    ಸಿದ್ದರಾಮಯ್ಯ ಸ್ಪೀಕರ್ ಮಧ್ಯೆ ಸ್ವಾರಸ್ಯಕರ ಮಾತುಕತೆ:
    ಸ್ಪೀಕರ್: ನಿಮಗೆ ಏನಾದರೂ ಅಗತ್ಯ ಇದ್ದರೆ ಹೇಳಿ
    ಸಿದ್ದರಾಮಯ್ಯ: ಏನಿಲ್ಲ, ವಿಧಾನಸಭೆಯಲ್ಲಿ ಕಳೆದ ಬಾರಿ ಮಲಗಿದ್ದಾಗ ಹೆಗ್ಗಣಗಳು ಕಾಟ ಕೊಟ್ಟಿದ್ದವು
    ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ: ಈಗ ಹೆಗ್ಗಣಗಳಿಲ್ಲ ಸಾರ್, ಸ್ಯಾನಿಟೈಸ್ ಮಾಡಿದ್ದೇವೆ, ಎಲ್ಲೋ ಸಣ್ಣ ಪುಟ್ಟ ಇಲಿಗಳು ಇರಬಹುದು
    ಸ್ಪೀಕರ್: ಇವತ್ತೂ ಏನಾದ್ರೂ ಹೆಗ್ಗಣ ಬಂದ್ರೆ ಸ್ಪೀಕರ್ ಅವರೇ ಬಿಟ್ಟಿದ್ದು ಅಂತ ಮಾತ್ರ ಹೇಳಬೇಡಿ (ನಗೆಗಡಲಲ್ಲಿ ತೇಲಿದ ಶಾಸಕರು) ಇದನ್ನೂ ಓದಿ: ಶುಕ್ರವಾರವಾದರೂ ಹಿಜಬ್ ಧರಿಸಲು ಅನುಮತಿ ನೀಡಿ: ವಿನೋದ್ ಕುಲಕರ್ಣಿ