Tag: vidhanaparishad

  • ಉಮಾಶ್ರೀ ಸೇರಿದಂತೆ ಮೂವರು ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

    ಉಮಾಶ್ರೀ ಸೇರಿದಂತೆ ಮೂವರು ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

    ಬೆಂಗಳೂರು: ನಟಿ, ಮಾಜಿ ಸಚಿವೆ ಉಮಾಶ್ರೀ (Umashree) ಸೇರಿದಂತೆ ಮೂವರು ವಿಧಾನಪರಿಷತ್ (Vidhanaparishad) ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ.

    ಮಾಜಿ ಸಚಿವೆ ಉಮಾಶ್ರೀ, ಎಂ.ಆರ್.ಸೀತಾರಾಂ (MR Seetharam) ಹಾಗೂ ಸುಧಾಮ್‍ದಾಸ್ (Sudhamdas) ಪರಿಷತ್ ಅವರನ್ನು ಕಾಂಗ್ರೆಸ್ (Congress) ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಿದೆ. ಈ ಕುರಿತು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಮೂಲಕ ಕಾಂಗ್ರೆಸ್‍ನಿಂದ ಮೂವರು ಮೇಲ್ಮನೆಗೆ ಪ್ರವೇಶ ಪಡೆದಿದ್ದಾರೆ.

    ಮೂವರ ನಾಮನಿರ್ದೇಶನದ ಬೆನ್ನಲ್ಲೇ ಅಸಮಾಧಾನದ ಹೊಗೆ ಎದ್ದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತ ಸುಧಾಮ್ ದಾಸ್ ನೇಮಕಕ್ಕೆ ಹಿರಿಯ ಸಚಿವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

    ವಿಧಾನ ಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನಕ್ಕೆ ಆಕ್ಷೇಪಿಸಿ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ದೂರು ನೀಡಿದ್ದರು. ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು. ಈ ಎಲ್ಲದರ ನಡುವೆ ಇಂದು ರಾಜ್ಯಪಾಲರು ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರಿಷತ್‍ನಲ್ಲಿ ಕೆ.ಟಿ ಶ್ರೀಕಂಠೇಗೌಡ ಅತ್ಯುತ್ತಮ ಶಾಸಕ

    ಪರಿಷತ್‍ನಲ್ಲಿ ಕೆ.ಟಿ ಶ್ರೀಕಂಠೇಗೌಡ ಅತ್ಯುತ್ತಮ ಶಾಸಕ

    ಬೆಂಗಳೂರು: ವಿಧಾನಪರಿಷತ್‍ನ (Vidhanaparishad) 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಮಾಜಿ ಶಾಸಕ ಕೆಟಿ ಶ್ರೀಕಂಠೇಗೌಡ (KT Srikantegowda) ಆಯ್ಕೆಯಾಗಿದ್ದಾರೆ.

    ಮೂರು ಬಾರಿ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಗೌಡರ ಪರಿಷತ್ ನ ಸದಸ್ಯ ಅವಧಿ ಇತ್ತೀಚೆಗೆ ಅಂತ್ಯಗೊಂಡಿತ್ತು. ಉತ್ತಮ ಸಂಸದೀಯಪಟುವಾಗಿದ್ದ ಅವರು, ದಕ್ಷಿಣ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಜಾತ್ಯಾತೀತ ಜನಾತದಳದ ಹಿರಿಯ ನಾಯಕಾಗಿದ್ದ ಗೌಡರು ವಾಗ್ಮಿಯಾಗಿದ್ದರು.

    ಪರಿಷತ್‍ನಲ್ಲಿ ಪ್ರತಿಪಕ್ಷದ ಉಪನಾಯಕ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪರಿಷತ್‍ನಲ್ಲಿ ಅವರ ನಡವಳಿಕೆ, ಸಾಧನೆ, ಭಾಗವಹಿಸುವಿಕೆ, ಜನಪರಕಾಳಜಿಯನ್ನು ಪರಿಗಣಿಸಿ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಂಗಳವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀಕಂಠೇಗೌಡರಿಗೆ 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನ ಪರಿಷತ್ ಮಾಜಿ ಸಭಾಪತಿ ಕಾರಿನ ಮೇಲೆ ಕಲ್ಲು ತೂರಾಟದ ಆರೋಪ- ಪ್ರಕರಣ ದಾಖಲು

    ವಿಧಾನ ಪರಿಷತ್ ಮಾಜಿ ಸಭಾಪತಿ ಕಾರಿನ ಮೇಲೆ ಕಲ್ಲು ತೂರಾಟದ ಆರೋಪ- ಪ್ರಕರಣ ದಾಖಲು

    ಯಾದಗಿರಿ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆಂದು ಹೋಗಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ಒಬ್ಬರ ಮೇಲೆ ಬಿಜೆಪಿ ಕಾರ್ಯಕರ್ತ (BJP Activists) ರಿಂದ ದಾಳಿಯಾಗಿರುವ ಆರೋಪ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕೇಳಿ ಬಂದಿದೆ.

    ವಿಧಾನ ಪರಿಷತ್ ಮಾಜಿ ಸಭಾಪತಿ ಡೆವಿಡ್ ಸಿಮನ್ (David Simeon) ವಾಹನ ಮೇಲೆ ದಾಳಿ ನಡೆದಿದ್ದು, ಕಾರಿನ ಗಾಜು ಪುಡಿ ಪುಡಿಯಾಗಿದೆ. ಸುರಪುರದ ಡೊಣ್ಣಿಗೇರೆ ಬಡಾವಣೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ (Congress Candidate) ರಾಜಾ ವೆಂಕಟಪ್ಪ ನಾಯಕ ಪರ ಡೆವಿಡ್ ಸಿಮನ್ ಪ್ರಚಾರಕ್ಕೆ ತೆರಳಿದ್ರು. ಈ ವೇಳೆ ಎಂಟತ್ತು ಜನರಿದ್ದ ಬಿಜೆಪಿ ಕಾರ್ಯಕರ್ತರ ಗುಂಪಿನಿಂದ ಏಕಾಏಕೀ ದಾಳಿ ಮಾಡಿ ಹಲ್ಲೆ ಮಾಡಿದೆ ಎನ್ನಲಾಗಿದ್ದು, ಈ ಸಂಬಂಧ ಸುರಪುರ ಪೊಲೀಸ್ ಠಾಣೆ (Surapura Police Station) ಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಹಿಂದೆಯೂ ಇದೇ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟದಿಂದಾಗಿ 15ಕ್ಕೂ ಹೆಚ್ಚು ವಾಹನಗಳು ಜಖಂ ಆಗಿ, ನಾಲ್ಕೈದು ಕಾರ್ಯಕರ್ತರಿಗೆ ಗಾಯಗಳಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಕಲ್ಲು ತೂರಾಟದ ದಾಳಿ ನಡಿದಿರೋದ್ರಿಂದ ಸುರಪುರ ಕ್ಷೇತ್ರದ ಜನ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಕೆ.ಆರ್.ನಗರದಲ್ಲಿ ಸಾ.ರಾ.ಮಹೇಶ್ ಪುತ್ರನ ಕಾರಿಗೆ ಕಲ್ಲೇಟು- ಬೆಂಗ್ಳೂರಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

     

  • 1 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿವೆ, ಹೇಳಲು ನನಗೆ ನಾಚಿಕೆಯಾಗ್ತಿದೆ: ಹೊರಟ್ಟಿ

    1 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿವೆ, ಹೇಳಲು ನನಗೆ ನಾಚಿಕೆಯಾಗ್ತಿದೆ: ಹೊರಟ್ಟಿ

    ಬೆಳಗಾವಿ: 1 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿದ್ದು, ಈ ಬಗ್ಗೆ ಹೇಳಲು ನನಗೆ ನಾಚಿಕೆಯಾಗುತ್ತಿದೆ ಎಂದು ಗೆಲುವಿನ ಬಳಿಕ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

    ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7,070 ಮತಗಳನ್ನು ನಾನು ಪಡೆದುಕೊಂಡಿದ್ದೇನೆ. 9 ಸಾವಿರ ಮತಗಳು ಬರುತ್ತೆ ಅಂತಾ ಅಂದುಕೊಂಡಿದ್ದೆ. ಆದರೆ ಇನ್ನೂ 2 ಸಾವಿರ ಮತಗಳು ಕಡಿಮೆ ಬಂದಿವೆ. 1 ಸಾವಿರಕ್ಕೂ ಹೆಚ್ಚಿನ ಮತಗಳು ಅಸಿಂಧು ಆಗಿವೆ. ಈ ಬಗ್ಗೆ ಹೇಳಲು ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ

    ದೇಶದಲ್ಲೇ ಯಾರೂ 8 ಬಾರಿ ಗೆದ್ದಿಲ್ಲ: ದಾಖಲೆಯ ಗೆಲುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭಾರತ ದೇಶದಲ್ಲೇ ಯಾರು ಸಹ 8 ಭಾರಿ ಗೆದ್ದಿಲ್ಲ. ಆದರೆ ನಾನು ಗೆದ್ದಿದ್ದೇನೆ, ನಾನು ದಾಖಲೆ ಮಾಡಿದ್ದೇನೆ. ರಾಜ್ಯದಲ್ಲಿ ಎರಡು ಸದನದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ್ದೇನೆ. ಚುನಾವಣೆ ವೇಳೆ ನನ್ನ ಮೇಲೆ ಆರೋಪಗಳು ಕೇಳಿಬಂದಿವೆ. ಆದರೆ ನಾನು ಯಾವಾಗಲೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

    ಸಚಿವ ಮತ್ತು ಸಭಾಪತಿ ವಿಚಾರಕ್ಕೆ, ನಾನು ಇನ್ನು ನಿರ್ಧಾರ ಮಾಡಿಲ್ಲ. ಶಿಕ್ಷಕರ ಸಮಸ್ಯೆಗಳು ಇದ್ದೆ ಇರುತ್ತವೆ. ಅವುಗಳನ್ನ ಸರಿಪಡಿಸುತ್ತಾ ಬಂದಿರುವೆ. ನಮ್ಮ ಅಭಿಲಾಷೆಗಳನ್ನ ದೇವರು ಈಡೇರಿಸಬೇಕು. ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು. ಅಥಿತಿ ಉಪನ್ಯಾಸಕರದ್ದು ಜಟಿಲವಾದ ಸಮಸ್ಯೆ ಆಗಿದ್ದು, ನೇಮಕಾತಿ ಮಾಡಿಕೊಂಡರೆ ಈ ಸಮಸ್ಯೆ ಬರೋದಿಲ್ಲ ಎಂದು ಹೇಳಿದ್ದಾರೆ.

  • ವಿಶ್ವನಾಥ್ ತಾಳ್ಮೆಯಿಂದ ಇದ್ದರೆ ಮುಂದೆ ಒಳ್ಳೆಯ ಭವಿಷ್ಯವಿದೆ: ನಾಗೇಶ್

    ವಿಶ್ವನಾಥ್ ತಾಳ್ಮೆಯಿಂದ ಇದ್ದರೆ ಮುಂದೆ ಒಳ್ಳೆಯ ಭವಿಷ್ಯವಿದೆ: ನಾಗೇಶ್

    ಕೋಲಾರ: ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿಶ್ವನಾಥ್ ಅವರನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿರುವುದು ಬೇಸರ ತಂದಿದೆ. ಆದರೆ ಅವರು ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.

    ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂದ ಅಧಿಕಾರಿಗಲ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಮಯ ರಾಜಕೀಯದಲ್ಲಿ ಏರುಪೇರುಗಳು ಆಗುತ್ತವೆ. ಅದು ಒಬ್ಬರ ನಿರ್ಧಾರ ಅಲ್ಲ. ಮುಖ್ಯಮಂತ್ರಿಗಳಿಗೂ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಲು ಒಲವಿತ್ತು, ಆದ್ರೆ ಹೈ ಕಮಾಂಡ್ ಕೈ ಬಿಟ್ಟಿರುವುದು ಬೇಸರ ತಂದಿದೆ ಎಂದರು.

    ಕಾರಣಾಂತರಗಳಿಂದ ವಿಶ್ವನಾಥ್ ಅವರ ಹೆಸರನ್ನ ಕೈ ಬಿಡಲಾಗಿದೆ. ಅವರು ಒಂದು ಪಕ್ಷದ ಅಧ್ಯಕ್ಷರಾಗಿದ್ದವರು, ಅವರ ಆಗಮನ ಬಿಜೆಪಿಗೆ ಆನೆ ಬಲ ಬಂದಂತಾಗಿತ್ತು. ಆದರೆ ಸ್ವಲ್ಪ ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದರು.

    ಪಕ್ಷಕ್ಕೆ ದುಡಿದವರನ್ನ ಬಿಟ್ಟು, ಮೂಲ ಬಿಜೆಪಿಗರಿಗೆ ಇಬ್ಬರಿಗೆ ಟಿಕೆಟ್ ನೀಡುವ ಮೂಲಕ ಕಾಂಪ್ರಮೈಸಿಂಗ್ ಫಾರ್ಮುಲಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಬಳಿ ಮಾತನಾಡಿ ಮನವೊಲಿಸಲು ಪ್ರಯತ್ನ ಮಾಡುವೆ ಎಂದು ನಾಗೇಶ್ ತಿಳಿಸಿದರು.

    ಬುಧವಾರ ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಈ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

  • ಸ್ವೀಟ್ ಕೊಡಲು ಹೋಗಿದ್ದ ಎಂ.ಸಿ ವೇಣುಗೋಪಾಲ್ ಮೇಲೆ ಗುಂಡೂರಾವ್ ಗರಂ

    ಸ್ವೀಟ್ ಕೊಡಲು ಹೋಗಿದ್ದ ಎಂ.ಸಿ ವೇಣುಗೋಪಾಲ್ ಮೇಲೆ ಗುಂಡೂರಾವ್ ಗರಂ

    ಬೆಂಗಳೂರು: ಕೂಸು ಹುಟ್ಟುವ ಮೊದಲೇ ಕುಲಾವಿ ಏಕೆ ಅಂತ ಸ್ವೀಟ್ ಕೊಡಲು ಹೋದವ ಎಂ.ಸಿ ವೇಣುಗೋಪಾಲ್ ಮೇಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿಟ್ಟಾಗಿದ್ದಾರೆ.

    ವಿಧಾನಪರಿಷತ್ ನಾಮನಿರ್ದೇಶನ ಆಗುವ ಖುಷಿಯಲ್ಲಿ ವೇಣುಗೋಪಾಲ್ ಅವರು ಗುಂಡೂರಾವ್ ಅವರಿಗೆ ಸ್ವೀಟ್ ನೀಡಲು ಹೋಗಿದ್ದ ಸಂದರ್ಭದಲ್ಲಿ ಅವರು ಗರಂ ಆಗಿದ್ದಾರೆ. ಹೀಗಾಗಿ ಸ್ವೀಟ್ ಕೊಟ್ಟು ಸಂಭ್ರಮಿಸಲು ಹೋದ ವೇಣುಗೋಪಾಲ್ ಅವರಿಗೆ ನಿರಾಶೆ ಕಾದಿದೆ.


    ವಿಧಾನ ಪರಿಷತ್‍ಗೆ ನಾಮನಿರ್ದೇಶನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸುಳಿವು ನೀಡಿತ್ತು. ಆಕಾಂಕ್ಷಿ ಆಗಿರುವ ಎಂ.ಸಿ ವೇಣುಗೋಪಾಲ್ ಹೆಸರು ಅಂತಿಮ ಅನ್ನೋ ಸುದ್ದಿ ಕೇಳಿಬಂದಿತ್ತು. ಇದೇ ಖುಷಿಯಲ್ಲಿ ಎಂ.ಸಿ.ವೇಣುಗೋಪಾಲ್ ಅವರು ಗುಂಡೂರಾವ್ ಅವರಿಗೆ ಸಿಹಿ ನೀಡಲು ಹೋಗಿದ್ದರು. ಈ ವೇಳೆ ಗುಂಡೂರಾವ್ ಸಿಡಿಮಿಡಿಗೊಂಡಿದ್ದಾರಂತೆ.

    ಈಗಲೇ ನೀವು ಸ್ವೀಟ್ ಕೊಟ್ಕೊಂಡು ಓಡಾಡಿ. ಅಮೇಲೆ ಹೆಚ್ಚು ಕಮ್ಮಿ ಆದ್ರೆ ಏನ್ಮಾಡ್ತೀರಿ. ಈಗಾಗಲೇ ಪಕ್ಷದೊಳಗೆ ಸಾಕಷ್ಟು ಅಸಮಾಧಾನಗಳು ಇವೆ. ಇದು ಇನ್ನಷ್ಟು ಹೆಚ್ಚಾಗಬೇಕಾ? ಎಐಸಿಸಿಯಿಂದ ಹೆಸರು ಅಂತಿಮ ಆಗುವ ತನಕ ಸುಮ್ಮನೆ ಇರಿ. ಸ್ವೀಟ್ ಹಂಚಬೇಡಿ ಅಂತ ಸಿಟ್ಟಿನಿಂದಲೇ ಗುಂಡೂರಾವ್ ಅವರು ವೇಣುಗೋಪಾಲ್‍ಗೆ ಸಲಹೆ ನಿಡಿದ್ದಾರೆ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಎಂ.ಸಿ.ವೇಣುಗೋಪಾಲ್ ಅವರು ಡಿಸಿಎಂ ಜಿ.ಪರಮೇಶ್ವರ್ ಅವರ ಪರಮಾಪ್ತರಾಗಿದ್ದು, 2013ರಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

     

  • ಅನರ್ಹರು, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಯತ್ನ- ವಿವಾದಕ್ಕೀಡಾದ್ರು ಡಿ.ಹೆಚ್ ಶಂಕರಮೂರ್ತಿ

    ಅನರ್ಹರು, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಯತ್ನ- ವಿವಾದಕ್ಕೀಡಾದ್ರು ಡಿ.ಹೆಚ್ ಶಂಕರಮೂರ್ತಿ

    ಕಲಬುರಗಿ: ವಿಧಾನಪರಿಷತ್ ಸಭಾಪತಿ ಹುದ್ದೆಯಿಂದ ನಿರ್ಗಮಿಸುವ ಹಂತದಲ್ಲಿ ಡಿ.ಹೆಚ್ ಶಂಕರ ಮೂರ್ತಿ ವಿವಾದವೊಂದರಲ್ಲಿ ಸಿಲುಕಿದ್ದಾರೆ.

    ಭ್ರಷ್ಟಾಚಾರ ಮತ್ತು ನಕಲಿ ಅಂಕಪಟ್ಟಿ ನೀಡಿರೋ ಅನರ್ಹರ ರಕ್ಷಣೆಗೆ ನಿಂತ ಕಳಂಕ ಎದುರಿಸುತ್ತಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಸುಭೋದ್ ಯಾದವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದಾಗ, ಇಲಾಖೆಯಲ್ಲಿ ಹುದ್ದೆ ಪಡೆಯಲು ನಕಲಿ ಅಂಕಪಟ್ಟಿ ಸಲ್ಲಿಸಿದ್ದ 66 ಮಂದಿ ಆಹಾರ ಸುರಕ್ಷತಾ ಅಧಿಕಾರಿಗಳನ್ನ ಅನರ್ಹಗೊಳಿಸಿದ್ದರು.

    ಲಂಚ ಪಡೆಯುತ್ತಿದ್ದ 6 ಮಂದಿಯನ್ನು ಅಮಾನತು ಮಾಡಿದ್ದರು. ಇವರ ಪರವಾಗಿ ಶಂಕರಮೂರ್ತಿ ಲಾಬಿ ನಡೆಸಿದ್ದಾರೆ. 2017ರಲ್ಲಿ ಈ ಅಧಿಕಾರಿಗಳ ಪುನಃ ನೇಮಕಾತಿ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಭಾಪತಿ ಡಿ.ಎಚ್ ಶಂಕರಮೂರ್ತಿ ಪತ್ರ ಬರೆದಿದ್ದರು. ಆದ್ರೆ ಇದನ್ನು ಇಲಾಖೆ ಪರಿಗಣಿಸಿರಲಿಲ್ಲ.

    ಹೀಗಾಗಿ ಇದೀಗ ಸಭಾಪತಿ ಡಿ.ಎಚ್ ಶಂಕರಮೂರ್ತಿ, ನೂತನ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೆ 66 ಅನರ್ಹ ಎಫ್‍ಎಸ್‍ಓಗಳನ್ನು ಪುನಃ ಅದೇ ಹುದ್ದೆಗಳಿಗೆ ನೇಮಿಸುವಂತೆ ಪತ್ರ ಬರೆದಿದ್ದಾರೆ. ಸಭಾಪತಿ ಒತ್ತಡಕ್ಕೆ ಮಣಿದು ಆರೋಗ್ಯ ಸಚಿವರು ಅನರ್ಹರಿಗೆ ಮಣೆ ಹಾಕ್ತಾರಾ? ಎಂಬುದನ್ನು ಕಾದು ನೋಡ್ಬೇಕು.