Tag: Vidhana Sowda

  • ಅವರೆ ಬೇರೆ ನಾವೇ ಬೇರೆ ಅಂತ ಹೊಸ ವರಸೆ ತಗೆದ ಶಾಸಕಿಯರು

    ಅವರೆ ಬೇರೆ ನಾವೇ ಬೇರೆ ಅಂತ ಹೊಸ ವರಸೆ ತಗೆದ ಶಾಸಕಿಯರು

    ಬೆಂಗಳೂರು: ಅವರೆಲ್ಲಾ ಸದನದ ಒಳಗೆ ಬೇರೆ ಬೇರೆ ಆದರೆ ಸದನದ ಹೊರಗೆ ಒಟ್ಟೊಟ್ಟಿಗೆ ಇದ್ದವರು. ಆದರೆ ಈಗ ಆ ಶಾಸಕರ ಮನಸ್ಸು ಮುರಿದು ಪರಸ್ಪರ ಒಬ್ಬರನೊಬ್ಬರು ನೋಡದಷ್ಟು ಅಸಮಾಧಾನ ಶುರುವಾದಂತಿದೆ.

    ಇದು ಮಹಿಳಾ ಶಾಸಕಿಯರ ಅಸಮಾಧಾನದ ಸ್ಟೋರಿ. ವಿಪಕ್ಷದಲ್ಲಿ ಕೂರುವ ಮಹಿಳಾ ಶಾಸಕಿಯರೇ ಬೇರೆ, ಆಡಳಿತ ಪಕ್ಷದಲ್ಲಿ ಕೂರುವ ಮಹಿಳಾ ಶಾಸಕಿಯರೇ ಬೇರೆ. ಆದ್ದರಿಂದ ಬೇರೆ ಬೇರೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಿ ಎಂದು ಕಾಂಗ್ರೆಸ್ ಮಹಿಳಾ ಶಾಸಕಿಯರು ವಿಧಾನಸಭಾ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

    ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡು ಕಡೆಯಲ್ಲಿ ಶಾಸಕರ ವಿಶ್ರಾಂತಿಗೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಲಾಂಜ್ ಪ್ರತ್ಯೇಕವಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡು ಕಡೆ ಮಹಿಳಾ ಶಾಸಕಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯೂ ಇದೆ. ಆದರೆ ವಿಧಾನಸಭೆಯ ಮಹಿಳಾ ಶಾಸಕಿಯರ ವಿಶ್ರಾಂತಿ ಕೊಠಡಿ ಆಡಳಿತ ಪಕ್ಷದ ಲಾಂಜ್ ಕಡೆಗಿದೆ. ಆದರೆ ಕಾಂಗ್ರೆಸ್‍ನಲ್ಲಿ ಆಂಗ್ಲೋ ಇಂಡಿಯನ್ ಶಾಸಕಿಯೂ ಸೇರಿ ಒಟ್ಟು 7 ಜನ ಮಹಿಳಾ ಶಾಸಕಿಯರಿದ್ದಾರೆ. ಬಿಜೆಪಿಯಲ್ಲಿ 3 ಜನ ಮಹಿಳಾ ಶಾಸಕಿಯರಿದ್ದಾರೆ. ಜೆಡಿಎಸ್‍ನ ಅನಿತಾ ಕುಮಾರಸ್ವಾಮಿ ಸೇರಿ ಒಟ್ಟು 11 ಜನ ಮಹಿಳಾ ಶಾಸಕಿಯರಿದ್ದಾರೆ.

    ಕಾರ್ಯದರ್ಶಿಗೆ ಮನವಿ ಮಾಡಿರುವ ಶಾಸಕಿಯರಾದ ಕನಿ ಫಾತೀಮ, ಅಂಜಲಿ ನಿಂಬಾಳ್ಕರ್ ಹಾಗೂ ಕುಸುಮ ಶಿವಳ್ಳಿ ಆಡಳಿತ ಪಕ್ಷದ ಮಹಿಳಾ ಶಾಸಕಿಯರೇ ಬೇರೆ, ವಿಪಕ್ಷದ ಮಹಿಳಾ ಶಾಸಕಿಯರೇ ಬೇರೆ ನಮಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಕೊಡಿ ಎಂದಿದ್ದಾರೆ. ವಿಪಕ್ಷದ ಲಾಂಜ್ ಬಳಿಯೇ ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಿ, ಅವರು ಆಡಳಿತ ಪಕ್ಷದ ಕಡೆ ಇರಲಿ, ನಾವು ವಿಪಕ್ಷದ ಕಡೆ ಇರುತ್ತೇವೆ. ಆದಷ್ಟು ಬೇಗ ಬೇರೆ ವ್ಯವಸ್ಥೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.

    ವಿಧಾನಸೌಧ ನಿರ್ಮಾಣವಾದಾಗಿನಿಂದ ಒಟ್ಟೊಟ್ಟಿಗೆ ಇರುತ್ತಿದ್ದ ಮಹಿಳಾ ಶಾಸಕಿಯರಿಗೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಒಟ್ಟೊಟ್ಟಿಗೆ ವಿಶ್ರಾಂತಿ ಕೊಠಡಿಯಲ್ಲಿ ಕೂರಲಾರದಷ್ಟು ಮನಸ್ಸು ಕೆಟ್ಟಿದೆಯ ಎನ್ನುವ ಕುತೂಹಲ ಎಲ್ಲರಿಗೂ ಮೂಡಿದೆ.

  • ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಇಂದಿಗೆ ಅಂತ್ಯ

    ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಇಂದಿಗೆ ಅಂತ್ಯ

    ಚಿಕ್ಕಬಳ್ಳಾಪುರ: ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಇಂದಿಗೆ ಅಂತ್ಯಗೊಳ್ಳಲಿದೆ. ಅತೃಪ್ತ ಶಾಸಕರು ಸಾಲುಸಾಲು ರಾಜೀನಾಮೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸಿಎಂ ತಮ್ಮ ಪಕ್ಷದ ಶಾಸಕರಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲು ಹೇಳಿದ್ದರು. ಹಾಗಾಗಿ ಶಾಸಕರು ರೆಸಾರ್ಟ್ ನಲ್ಲಿ ತಂಗಿದ್ದರು.

    ಜೆಡಿಎಸ್ ಶಾಸಕರು ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ತಂಗಿದ್ದರು. ಜೆಡಿಎಸ್ ಶಾಸಕರು ಇಂದು ಬೆಳಗ್ಗೆ 11 ಗಂಟೆಗೆ ರೆಸಾರ್ಟ್ ನಿಂದ ನೇರವಾಗಿ ವಿಧಾನಸೌಧ ಕಲಾಪಕ್ಕೆ ತೆರಳಲಿದ್ದಾರೆ.

    ಕಲಾಪಕ್ಕೆ ಶಾಸಕರನ್ನು ಕರೆದೊಯ್ಯಲು ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಶಾಸಕರು ಬೆಳಗ್ಗಿನ ತಿಂಡಿ ಮುಗಿಸಿ ತಮ್ಮ ಲಗೇಜ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ. ಸುಮಾರು 11 ಗಂಟೆಗೆ 26 ಶಾಸಕರು ವಿಧಾನಸೌಧದತ್ತ ಪ್ರಯಾಣ ಬೆಳೆಸಲಿದ್ದಾರೆ.

    ರೆಸಾರ್ಟಿನಲ್ಲಿದ್ದ ಜೆಡಿಎಸ್ ಶಾಸಕರು ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಇದ್ದರು. ಅಲ್ಲದೆ ವಿಶೇಷ ಯೋಗ ಟೀಚರ್ ಮೂಲಕ ಯೋಗ ಹಾಗೂ ವಾಕಿಂಗ್ ಮಾಡಿ ವಿಶ್ರಾಂತಿ ಪಡೆದಿದ್ದರು.

    ಜೆಡಿಎಸ್ ಶಾಸಕರಾದ ಬಂಡೆಪ್ಪ ಕಾಶಂಪೂರ್, ನಾಡಗೌಡ, ಟಿ.ಎ.ಶರವಣ, ಸೇರಿದಂತೆ ಬಹುತೇಕ ಶಾಸಕರು ಯೋಗಾಭ್ಯಾಸ ಮಾಡಿದ್ದಾರೆ. ಶಾಸಕರು ತಂಗಿದ್ದ ರೆಸಾರ್ಟಿಗೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು.

  • ಶಾಸಕರ ಭವನದ ಮಹಡಿ ಮೇಲಿನಿಂದ ಬಿದ್ದು ನಿರ್ವಾಹಕ ಸಾವು

    ಶಾಸಕರ ಭವನದ ಮಹಡಿ ಮೇಲಿನಿಂದ ಬಿದ್ದು ನಿರ್ವಾಹಕ ಸಾವು

    ಬೆಂಗಳೂರು: ಶಾಸಕರ ಭವನದ ಮೇಲಿನಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    44 ವರ್ಷದ ಶಿವಶಂಕರ್ ಮೃತಪಟ್ಟ ವ್ಯಕ್ತಿ. ಶಿವಶಂಕರ್ ಕೆಎಸ್‍ಆರ್ ಟಿಸಿಯಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಒಒಡಿ ಆಧಾರದ ಮೇಲೆ ಶಾಸಕರ ಭವನದಲ್ಲಿ ಕೆಲಸ ಮಾಡಿಕೊಂಡಿದರು.

    ಭಾನುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಶಿವಶಂಕರ್ ಶಾಸಕರ ಭವನದ ಮೂರನೇ ಮಹಡಿಗೆ ಹೋಗುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಶಿವಶಂಕರ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.